ಒಂದೇ ಸ್ಥಳದಲ್ಲಿ 18 ಗುಳಿಗ ದೈವಗಳ ಅಬ್ಬರದ ನರ್ತನ, ತುಳುನಾಡಿನ ಇತಿಹಾಸದಲ್ಲೇ ಮೊದಲು

Monday, February 5th, 2024
Barkaje-guliga

ಮಂಗಳೂರು: ಒಂದೇ ಬಾರಿ 18 ಗುಳಿಗ ದೈವದ ಗಗ್ಗರ ಸೇವೆ ವೇಣೂರು ಸಮೀಪದ ಬರ್ಕಜೆ ನವ ಗುಳಿಗ ಕ್ಷೇತ್ರದಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದ ಬರ್ಕಜೆ ಎಂಬಲ್ಲಿ ಈ ಬಾರಿ 18 ಗುಳಿಗನ ಅಬ್ಬರದ ನರ್ತನ ಸೇವೆಗೆ ಭಕ್ತರು ಸಾಕ್ಷಿಯಾದರು. ಬರ್ಕಜೆ ದುರ್ಗಾಪರಮೇಶ್ವರಿ ಮತ್ತು ನವ ಗುಳಿಗ ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಒಂಬತ್ತು ಗುಳಿಗ ದೈವದ ನರ್ತನ ಸೇವೆ ನಡೆಯುತ್ತಿತ್ತು.‌ ಆದರೆ ಈ ಬಾರಿ ಸಂಪ್ರದಾಯದಂತೆ ಒಂಬತ್ತು ಹಾಗೂ ಸೇವೆಯಾಗಿ […]

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೊಳಲು ನುಡಿಸಿ ಸೇವೆ ಸಲ್ಲಿಸಿದ ವಿದೇಶಿ ಪ್ರಜೆ

Monday, February 5th, 2024
Flute-Mathew

ಉಡುಪಿ: ಶ್ರೀ ಕೃಷ್ಣ ಮಠದಲ್ಲಿ ವಿದೇಶಿ ಮೂಲದ ವ್ಯಕ್ತಿಯೊಬ್ಬರು ರಾತ್ರಿ ಶ್ರೀಕೃಷ್ಣನ ಶಯನೋತ್ಸವದ ವೇಳೆ ಕೊಳಲು ನುಡಿಸಿ ಸೇವೆ ಸಲ್ಲಿಸುವ ಮೂಲಕ ಗಮನ ಸೆಳೆದಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ರಾತ್ರಿ ಪಲ್ಲಕ್ಕಿಯಲ್ಲಿ ಕೃಷ್ಣನನ್ನಿಟ್ಟು ಕೊಳಲು ನುಡಿಸುತ್ತಾ ಕೊನೆಯ ಪ್ರದಕ್ಷಿಣೆ ಹಾಕಿ ನಂತರ ಯತಿಗಳು ಕೃಷ್ಣನನ್ನು ಶಯನೋತ್ಸವಕ್ಕೆ ಕೊಂಡೊಯ್ಯುವ ವೇಳೆ ಕೊಳಲು ನುಡಿಸಿ ಗಮನ ಸೆಳೆದಿದ್ದಾರೆ. ಮ್ಯಾಥ್ಯೂ ಎಂಬ ಹೆಸರಿನ ಈ ವ್ಯಕ್ತಿ ಸದ್ಯ ತನ್ನ ಹೆಸರನ್ನು ಮಾಧವ ಎಂದು ಬದಲಾಯಿಸಿಕೊಂಡಿದ್ದಾರೆ. ಇವರು ಬೆಳ್ತಂಗಡಿಯ ಹರಿದಾಸ ಡೋಗ್ರ ಎಂಬುವರ ಬಳಿ […]

ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

Monday, February 5th, 2024
UT-Khader-Panolibailu

ಮಂಗಳೂರು: ವಿಧಾನಸಭಾ ಸಭಾಧ್ಯಕ್ಷರಾದ ಯು.ಟಿ ಖಾದರ್ ಪಣೋಲಿಬೈಲು ಕಲ್ಲುರ್ಟಿ ದೈವಸ್ಥಾನದಲ್ಲಿ ಹರಕೆ ಕೋಲ ನೆರವೇರಿಸಿದ್ದಾರೆ. ಸ್ಥಳೀಯ ಮುಖಂಡರೊಂದಿಗೆ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದ ಖಾದರ್, ಸಂಪ್ರದಾಯ ಬದ್ಧವಾಗಿ ಕೋಲ ನೆರವೇರಿಸಿ ಕಲ್ಲುರ್ಟಿ-ಕಲ್ಕುಡ ದೈವಗಳ ಆಶೀರ್ವಾದ ಪಡೆದಿದ್ದಾರೆ. ಯು.ಟಿ ಖಾದರ್ ಅವರೊಂದಿಗೆ ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜಾವ ಮತ್ತಿತ್ತರು ಭಾಗಿಯಾಗಿದ್ದರು.

ವಿದೇಶಗಳಲ್ಲಿ ಮೆಕಾನಿಕಲ್, ಇಲೆಕ್ಟ್ರಿಕಲ್, ಮೆಕಾಟ್ರೋನಿಕ್ಸ್ ಉದ್ಯೋಗಾವಕಾಶ, ಅರ್ಜಿ ಆಹ್ವಾನ

Thursday, February 1st, 2024
Abroad Job

ಮಂಗಳೂರು : ಹಂಗೇರಿ ಯೂರೋಪ್ ದೇಶಗಳಲ್ಲಿ ಮೆಕಾನಿಕಲ್, ಇಲೆಕ್ಟ್ರಿಕಲ್, ಮೆಕಾಟ್ರೋನಿಕ್ಸ್ ಇಂಜಿನಿಯರಿಂಗ್ ಅಭ್ಯಥಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಮಾಸಿಕ ವೇತನ ರೂ. 1.50 ಲಕ್ಷದವರೆಗೆ ಇದ್ದು, ಹೆಚ್ಚುವರಿಯಾಗಿ ಫರ್ಫಾಮೆನ್ಸ್ ಲಿಂಕ್ ಇನ್ಸೆಂಟಿವ್ (PLI), ವಾರ್ಷಿಕ ಬೋನಸ್, ಸೇವಾ ಬೋನಸ್, ಕೆಫೆಟೇರಿಯಾ ಭತ್ಯೆಗಳನ್ನು ನೀಡಲಾಗುತ್ತದೆ. ಇಂಗ್ಲಿಷ್ ಭಾಷೆ ಕಡ್ಡಾಯವಾಗಿ ತಿಳಿದಿರಬೇಕು. ಅಭ್ಯರ್ಥಿಗಳನ್ನು ಆನ್‍ಲೈನ್ ಸಂದರ್ಶನ ಹಾಗೂ ಪ್ರಾಯೋಗಿಕ ಕೌಶಲ್ಯ ಪರೀಕ್ಷೆಗಳ ಮೂಲಕ ಆಯ್ಕೆ ಮಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಬಯೋಡಾಟಾವನ್ನು ಇಮೇಲ್ hr.imck@gmail.com ಗೆ ಕಳುಹಿಸಿ ಕೊಡಬಹುದು. ಹೆಚ್ಚಿನ […]

ವಿಕಸಿತ ಭಾರತಕ್ಕೆ ಮುನ್ನುಡಿ ಬರೆದ ಬಜೆಟ್ : ಕ್ಯಾಪ್ಟನ್ ಬ್ರಿಜೇಶ್ ಚೌಟ

Thursday, February 1st, 2024
Brijesh-chowta

ಮಂಗಳೂರು : ಸನ್ಮಾನ್ಯ ನರೇಂದ್ರ ಮೋದಿಯವರ ವಿಕಸಿತ ಭಾರತದ ಪರಿಕಲ್ಪನೆಯನ್ನು ಮುಂದಿಟ್ಟುಕೊಂಡು 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿಸುವ ನಿಟ್ಟಿನಲ್ಲಿ ವಿತ್ತ ಮಂತ್ರಿಗಳಾದ ಶ್ರೀಮತಿ ನಿರ್ಮಲಾ ಸೀತಾರಮನ್‌ರವರು ಮಂಡಿಸಿದ ದೂರದೃಷ್ಟಿಯ, ಪ್ರಗತಿಶೀಲ ಮತ್ತು ವಿತ್ತೀಯ ಶಿಸ್ತಿನ ಮಧ್ಯಂತರ ಬಜೆಟ್ 2024ನ್ನು ಅತ್ಯಂತ ಸಂತೋಷದಿಂದ ಸ್ವಾಗತಿಸುತ್ತೇನೆ ಎಂದು ಬಿಜೆಪಿಯ ರಾಜ್ಯ ಕಾರ್ಯದರ್ಶಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ . ವಿಕಸಿತ ಭಾರತದ 4 ಸ್ತಂಭಗಳಾದ ಯುವಜನತೆ, ಬಡವರು, ಮಹಿಳೆಯರು ಮತ್ತು ರೈತರನ್ನು ಸಶಕ್ತಗೊಳಿಸುವ ಮೂಲಕ 2047ರ […]

ಮಧ್ಯಂತರ ಬಜೆಟ್ ದೇಶದ ಭರವಸೆಯ ಬಜೆಟ್ : ಶಾಸಕ ವೇದವ್ಯಾಸ್ ಕಾಮತ್

Thursday, February 1st, 2024
Vedavyas-kamath

ಮಂಗಳೂರು : ದೇಶ ಚುನಾವಣೆಯ ಹೊಸ್ತಿಲಲ್ಲಿದ್ದರೂ ಯಾವುದೇ ಓಲೈಕೆಯ ಘೋಷಣೆಗಳಿಲ್ಲದ ಭವ್ಯ ಭಾರತದ ಭವಿಷ್ಯದ ದೃಷ್ಟಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಕೇಂದ್ರದ ಮಧ್ಯಂತರ ಬಜೆಟ್ ಭಾರತವೀಗ ಸ್ವಾವಲಂಬಿ ಹಾಗೂ ಹೊಸ ದಿಕ್ಕಿನತ್ತ ಸಾಗುತ್ತಿರುವುದರ ಸಂಕೇತ ಎಂದು ಶಾಸಕ ವೇದವ್ಯಾಸ್ ಕಾಮತ್ ಅವರು ಹೇಳಿದರು. ಇದು ದೇಶದ ಭರವಸೆಯ ಬಜೆಟ್ ಆಗಿದ್ದು ಬಿಜೆಪಿ ಸರ್ಕಾರದ ಮುಖ್ಯ ಗುರಿಯೇ ದೇಶದ ಮೂಲಭೂತ ಸೌಕರ್ಯದ ಅಭಿವೃದ್ಧಿ. ಆ ನಿಟ್ಟಿನಲ್ಲಿ ಕೇಂದ್ರದ ಮೋದಿ ಸರ್ಕಾರವು ದೇಶವನ್ನು ಕೊಂಡೊಯ್ಯುತ್ತಿದೆ. ಪಿಎಂ […]

ಹಾಲಿನ ಡೈರಿಗಳ ಸಂಖ್ಯೆಯನ್ನು ಹೆಚ್ಚಿಸಲು ಮಧ್ಯಂತರ ಬಜೆಟ್ ನಲ್ಲಿ ಆದ್ಯತೆ

Thursday, February 1st, 2024
nirmala-seetharaman

ನವದೆಹಲಿ : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ 2024-25ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ್ದು, ದೇಶದಲ್ಲಿ ಹಾಲು ಮತ್ತು ಡೈರಿ ಉತ್ಪಾದನೆಯನ್ನು ಹೆಚ್ಚಿಸುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಭಾರತ ವಿಶ್ವದಲ್ಲೇ ಅತಿ ಹೆಚ್ಚು ಹಾಲು ಉತ್ಪಾದಿಸುವ ರಾಷ್ಟ್ರವಾಗಿದೆ. ಆದರೆ ಕಡಿಮೆ ಉತ್ಪಾದಕತೆ ಹೊಂದಿದೆ. ಹೀಗಾಗಿ ಡೈರಿಗಳ ಸಂಖ್ಯೆಯನ್ನು ಹೆಚ್ಚಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹಣಕಾಸು ಸಚಿವೆ ಹೇಳಿದ್ದಾರೆ. 2022-23ರಲ್ಲಿ ಭಾರತದ ಹಾಲಿನ ಉತ್ಪಾದನೆಯು 230.58 ಮಿಲಿಯನ್ ಟನ್‌ಗಳಿಗೆ ಅಂದರೆ ಶೇ. 4 ರಷ್ಟು ಏರಿಕೆಯಾಗಿದೆ. […]

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಅಧಿಕಾರಾವಧಿ ವಿಸ್ತರಣೆ

Thursday, February 1st, 2024
Jayaprakash-Hegde

ಉಡುಪಿ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮತ್ತು ಇತರ ಐವರು ಸದಸ್ಯರ ಅಧಿಕಾರಾವಧಿಯನ್ನು ಫೆಬ್ರವರಿ 1 ರಿಂದ ಫೆಬ್ರವರಿ 29 ರವರೆಗೆ ಮತ್ತೊಂದು ತಿಂಗಳು ವಿಸ್ತರಿಸಿ ಸರ್ಕಾರ ಆದೇಶ ಹೊರಡಿಸಿದೆ. ಹೆಗ್ಗಡೆಯವರ ಅಧಿಕಾರಾವಧಿಯು ನವೆಂಬರ್‌ನಲ್ಲಿ ಕೊನೆಗೊಂಡಿತು ಮತ್ತು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವು ಜನವರಿ 1 ರವರೆಗೆ ಅದನ್ನು ವಿಸ್ತರಿಸಿತು. ಸಿದ್ದರಾಮಯ್ಯ ಸರ್ಕಾರವು ಜಾತಿ ಗಣತಿ ವರದಿ ಸ್ವೀಕರಿಸುವುದಾಗಿ ಹೇಳಿತ್ತು, ಆದರೆ ಅದನ್ನು ವೀರಶೈವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳು […]

ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ಗಳಿಗೆ ವರ್ಗಾವಣೆ

Wednesday, January 31st, 2024
acp-Mahesh-Kumar

ಮಂಗಳೂರು :  ದ.ಕ. ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಇನ್‌ಸ್ಪೆಕ್ಟರ್‌ಗಳಿಗೆ ವರ್ಗಾವಣೆಯಾಗಿದೆ.  ಮಂಗಳೂರು ನಗರ ಕೇಂದ್ರ ಉಪವಿಭಾಗದ ಎಸಿಪಿಯಾಗಿದ್ದ ಮಹೇಶ್ ಕುಮಾರ್‌ ಅವರನ್ನು ಮೈಸೂರಿಗೆ ವರ್ಗ ಮಾಡಲಾಗಿದೆ. ಲೋಕಾಯುಕ್ತಕ್ಕೆ ವರ್ಗಾವಣೆ ಆದೇಶದಲ್ಲಿದ್ದ ಬಂಟ್ವಾಳ ಎಎಸ್ಪಿ ಪ್ರತಾಪ್ ಸಿಂಗ್ ತೋರಾಟ್‌ಗೆ ಮಹೇಶ್ ಕುಮಾರ್‌ರಿಂದ ತೆರವಾದ ಮಂಗಳೂರು ಎಸಿಪಿ ಹುದ್ದೆಗೆ ವರ್ಗಾವಣೆಯಾಗಿದೆ.  ಸುಳ್ಯ ವೃತ್ತದ ಮೋಹನ್ ಕೊಟ್ಟಾರಿ ಅವರನ್ನು ಡಿಸಿಆರ್‌ಇ ಮಂಗಳೂರಿಗೆ, ಮಂಗಳೂರು ಪಶ್ಚಿಮ ಸಂಚಾರ ಠಾಣೆಯಿಂದ ಕೃಷ್ಣಾನಂದ ಜಿ.ನಾಯಕ್ ಅವರನ್ನು ದಕ್ಷಿಣ ಸಂಚಾರ ಠಾಣೆಗೆ, ಸಿಐಡಿಗೆ ವರ್ಗಾವಣೆ […]

ಕಾಪು ಲೈಟ್‌ಹೌಸ್ ಸಮೀಪ ಸಮುದ್ರ ಮಧ್ಯದಲ್ಲಿ ದರೋಡೆ, ಮೀನುಬಾಕ್ಸ್ ಗಳನ್ನು ದರೋಡೆ ಮಾಡಿದ ಕಳ್ಳರು

Wednesday, January 31st, 2024
kaup

ಪಡುಬಿದ್ರಿ: ಮಂಗಳೂರು ಬಂದರಿನಿಂದ ಮೀನುಗಾರಿಕೆಗೆ ಬಂದು, ಮೀನುಗಾರಿಕೆ ಮುಗಿಸಿ ವಾಪಸಾಗುತ್ತಿದ್ದ ವೇಳೆ ಕಾಪು ಲೈಟ್‌ಹೌಸ್ ಬಳಿ ಸಮುದ್ರ ಮಧ್ಯೆ ಲಕ್ಷಾಂತರ ರೂ. ಮೌಲ್ಯದ ಮೀನು ಹಾಗೂ ಮೀನುಗಾರರ ಬಳಿಯಿದ್ದ ನಾಲ್ಕು ಮೊಬೈಲ್ ಸಹಿತ ಸೊತ್ತುಗಳನ್ನು ದರೋಡೆ ಮಾಡಿರುವ ಘಟನೆ ಕಾಪು ಲೈಟ್‌ಹೌಸ್ ಸಮೀಪದಲ್ಲಿ ಮಂಗಳವಾರ ನಡೆದಿದೆ. ಆಂಧ್ರ ಪ್ರದೇಶದ ಮೀನುಗಾರರಾದ ಪರ್ವತಯ್ಯ, ಕೊಂಡಯ್ಯ, ರಘು ರಾಮಯ್ಯ, ಶಿವರಾಜ್, ಕೆ.ಶೀನು, ಏಳುಮಲೆ, ಚಿನ್ನೋಡು, ರಾಜು ಎಂಬುವರು ಜ. 27ರಂದು ಮಹಮ್ಮದ್ ಮುಸ್ತಫ್ ಬಾಷಾರ ಟ್ರಾಲ್ ಬೋಟ್‌ನಲ್ಲಿ ಮಂಗಳೂರು ಬಂದರಿನಿಂದ […]