ಕಾಟಾಚಾರಕ್ಕೆ ಆಹಾರ ಕಿಟ್ ವಿತರಿಸಬಾರದು ; ಅಶಕ್ತ ಬ್ಯಾರಿ ಕಲಾವಿದರ ಕಿಟ್ ವಿತರಣೆ ಯಲ್ಲಿ- ಶಾಂತಿಗೋಡು

Friday, April 17th, 2020
Byari

ಮಂಗಳೂರು  : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಸಿ.ಟಿ.ರವಿಯವರ ಮಾರ್ಗದರ್ಶನ ದಂತೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 100 ಅರ್ಹ ಕವಿ, ಸಾಹಿತಿ ಹಾಗೂ ಕಲಾವಿದರ ಕುಟುಂಬಕ್ಕೆ ರೂ.1300.00 ಮೌಲ್ಯದ ಅಗತ್ಯ ಆಹಾರ ಸಾಮಗ್ರಿಗಳ ಕಿಟ್ಟು ಗಳನ್ನು ಕರ್ನಾಟಕ ಸರಕಾರದ ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಸಚಿವರು ಮತ್ತು ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಕೋಟ ಶ್ರೀನಿವಾಸ ಪೂಜಾರಿಯವರು ಸಾಂಕೇತಿಕವಾಗಿ ವಿತರಿಸಿದರು. ಈ ಸಂದರ್ಭದಲ್ಲಿ ಸಚಿವರು ಮಾತನಾಡುತ್ತ ಕೊರೋನಾ ಸಮಸ್ಯೆಯಿಂದ ಉಂಟಾದ ಲಾಕ್ ಡೌನ್ […]

ಸುರತ್ಕಲ್ ನಲ್ಲಿ ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ‌ ಆರೋಗ್ಯ ಇಲಾಖೆ

Thursday, April 16th, 2020
Raghavendra-clinic

ಮಂಗಳೂರು : ನೋಂದಣಿಗೊಳ್ಳದೆ ಸುರತ್ಕಲ್ ಪೇಟೆಯಲ್ಲಿ ಕಾರ್ಯಾಚರಿಸುತ್ತಿದ್ದ ಖಾಸಗೀ ವೈದ್ಯರ ಕ್ಲಿನಿಕ್ ಮೇಲೆ‌‌ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳು, ಕ್ಲಿನಿಕ್ ಗೆ ಗುರುವಾರ  ಬೀಗ ಜಡಿದಿದ್ದಾರೆ. ಸುರತ್ಕಲ್ ನಲ್ಲಿ ಡಾ. ದಿನಕರ ರಾವ್ ಎಂಬವರಿಗೆ ಸೇರಿದ  ಶ್ರೀ ರಾಘವೇಂದ್ರ ಕ್ಲಿನಿಕ್ ಇದರ ನೋಂದಣಿ 2017ರಲ್ಲಿಯೇ ಮುಕ್ತಾಯವಾಗಿದ್ದು, ನಂತರ ನವೀಕರಣಗೊಳ್ಳದೆ ಕ್ಲಿನಿಕ್ ಕಾರ್ಯಾಚರಿಸುತ್ತಿತ್ತು. ಜಿಲ್ಲಾ ಆರೋಗ್ಯ ಮತ್ತು‌ ಕುಟುಂಬ ಕಲ್ಯಾಣಾಧಿಕಾರಿಯವರ ನಿರ್ದೇಶನದ ಮೇರೆಗೆ ಇಲಾಖೆಯ ಅಧಿಕಾರಿ ಡಾ.ಸಿಖಂದರ್ ಪಾಶಾ ಅವರು ಕ್ಲಿನಿಕ್ ಗೆ ದಾಳಿ ಮಾಡಿ, ಕ್ಲಿನಿಕನ್ನು ಮುಂದಿನ‌ ಆದೇಶದವರೆಗೆ […]

2000 ರೂ. ಮೊತ್ತ ಖಾತೆಗಳಿಗೆ ಜಮಾ ಮಾಡುತ್ತಾರೆಂದು ಲೈನ್ ನಲ್ಲಿ ನಿಂತ ಕಾರ್ಮಿಕರು

Wednesday, April 15th, 2020
Kulooru

ಮಂಗಳೂರು:  ಸುಮಾರು 600-700 ಕ್ಕೂ ಹೆಚ್ಚು ಕಾರ್ಮಿಕರು ಲಾಕ್‌ಡೌನ್ ನಿಯಮ ಉಲ್ಲಂಘನೆ  ಮಾಡಿ ಕೂಳೂರಿನ ಅಂಗಡಿ ಯೊಂದರಲ್ಲಿ  ಜಮಾಯಿಸಿದ್ದರು. ಇಲ್ಲಿ ಬ್ಯಾಂಕ್ ಖಾತೆ ವಿವರಗಳನ್ನು ಸಲ್ಲಿಸಿದ ನಂತರ 2000 ರೂ. ಮೊತ್ತವನ್ನು ಅವರ ಖಾತೆಗಳಿಗೆ ಜಮಾ ಮಾಡಲಾಗುವುದು ಎಂದು ಒಬ್ಬ ವ್ಯಕ್ತಿ ಹೇಳಿದ್ದಾರೆ. ಇನ್ನೊಬ್ಬ ವ್ಯಕ್ತಿ ಡಿಸಿ ಕಚೇರಿಯ ಸೂಚನೆಯಂತೆ  ಇಲ್ಲಿ ನಿಂತಿದ್ದೇವೆ ಎಂದಿದ್ದಾನೆ. ಏಪ್ರಿಲ್ 15 ರಂದು ಬೆಳಿಗ್ಗೆ 11 ರಿಂದ ಮಧ್ಯಾಹ್ನ 3.30 ರ ನಡುವೆ ಕುಲೂರ್‌ನಲ್ಲಿರುವ ಶ್ರೀ ದೇವಿ ಪ್ರಸಾದ್ ಅಂಗಡಿಯಲ್ಲಿ ಈ ಘಟನೆ ನಡೆದಿದೆ. […]

ಪಾಂಡೇಶ್ವರ ನ್ಯೂ ರೋಡ್ ಪರಿಶಿಷ್ಟರ ಕೊಲೊನಿಯಲ್ಲಿ ಬಿ. ಆರ್ ಅಂಬೇಡ್ಕರ್ ಜನ್ಮದಿನಾಚರಣೆ

Tuesday, April 14th, 2020
DSS

ಮಂಗಳೂರು : ಪಾಂಡೇಶ್ವರ ನ್ಯೂ ರೋಡ್ ನಲ್ಲಿರುವ ಪರಿಶಿಷ್ಟರ ಕೊಲೊನಿಯಲ್ಲಿ ಸಂವಿದಾನ ಶಿಲ್ಪಿ ಬಿ. ಆರ್ ಅಂಬೇಡ್ಕರ್ ಅವರ 129 ನೇ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ದಸಂಸ (ಅಂಬೇಡ್ಕರ್ ವಾದ)  ಜಿಲ್ಲಾ ಪ್ರಧಾನ ಸಂಚಾಲಕರಾದ ಜಗದೀಶ್ ಪಾಂಡೇಶ್ವರ ಅವರು ಅಂಬೇಡ್ಕರ್ ಭಾವ ಚಿತ್ರಕ್ಕೆ ಹೂ ಮಾಲೆ ಹಾಕಿ ಗೌರವ ಸಮರ್ಪಿಸಿದರು

ಕೋರೋನಾ ಪ್ರಕರಣಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ

Monday, April 13th, 2020
Corona case

ಮಂಗಳೂರು : ಕೋರೋನಾ ಪ್ರಕರಣಗಳಲ್ಲಿ ಬೆಂಗಳೂರು, ‌ಮೈಸೂರು ನಂತರ 3 ನೇ ಸ್ಥಾನದಲ್ಲಿದ್ದ ದಕ್ಷಿಣ ಕನ್ನಡ ಜಿಲ್ಲೆಯು ಇದೀಗ 6ನೇ ಸ್ಥಾನಕ್ಕಿಳಿದಿದೆ. ಜಿಲ್ಲೆಯ ಮಟ್ಟಿಗೆ ಇದು ಸಮಾಧಾನಕರ ಸಂಗತಿ. ಆದರೂ, ಇನ್ನೂ ಬಹಳಷ್ಟು ಜಾಗರೂಕರಾಗಿರಬೇಕಿದೆ.  ಜಿಲ್ಲೆಯಲ್ಲಿ 12 ಪ್ರಕರಣಗಳಲ್ಲಿ 8 ಮಂದಿ ಗುಣಮುಖರಾಗಿದ್ದಾರೆ. ಕೊರೋನ ವೈರಸ್ ರೋಗಕ್ಕೆ ಸಂಬಂಧಿಸಿ ಸೋಮವಾರ ಪ್ರಯೋಗಾಲಯದಿಂದ ಸ್ವೀಕರಿಸಲಾದ 26 ಮಂದಿಯ ವರದಿಯು ನೆಗೆಟಿವ್ ಆಗಿದೆ. ಇನ್ನೂ 24 ಮಂದಿಯ ವರದಿಗಾಗಿ ಕಾಯಲಾಗುತ್ತಿದೆ. ಜ್ವರದ ಹಿನ್ನೆಲೆಯಲ್ಲಿ 7 ಮಂದಿಯ ಮೇಲೆ ನಿಗಾ ಇಡಲಾಗಿದೆ. […]

ಕೊರೊನಾ 19- ವಿದ್ಯಾರ್ಥಿಯೊಬ್ಬ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ತಂದ !

Sunday, April 12th, 2020
suit case

ಮಂಗಳೂರು: ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ವಿದ್ಯಾರ್ಥಿಯೊಬ್ಬ ಗೆಳೆಯ ನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ತನ್ನ ರೂಮಿಗೆ ತಂದ ಘಟನೆ ಭಾನುವಾರ ನಡೆದಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ  ನಗರದ ಆರ್ಯಸಮಾಜ ರಸ್ತೆಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ  ವಾಸ್ತವ್ಯ ಇರುವವರು ಹೊರತುಪಡಿಸಿ ಇತರರಿಗೆ ಪ್ರವೇಶ ನಿರಾಕರಿಸಲಾಗಿತ್ತು. ವಿದ್ಯಾರ್ಥಿ ಮಾತ್ರ ತನ್ನ ಗೆಳೆಯನನ್ನು ರೂಮಿಗೆ ಕರೆತರುತ್ತೇನೆ ಎಂದು ಚಾಲೆಂಜ್ ಮಾಡಿದ್ದ. ಅಪಾರ್ಟ್ ಮೆಂಟ್ ನವರು ಬಿಡದೆ ಇದ್ದರು ಯುವಕ ರವಿವಾರ ಬೆಳಗ್ಗೆ ತನ್ನ ಗೆಳೆಯನನ್ನು ಸೂಟ್ ಕೇಸಿನಲ್ಲಿ ತುಂಬಿಸಿ ರೂಮಿಗೆ ಕೊಂಡೊಯ್ಯುವ ಪ್ರಯತ್ನ […]

ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ: ಸಚಿವ ಕೋಟಾ

Friday, April 3rd, 2020
ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ: ಸಚಿವ ಕೋಟಾ

ಮಂಗಳೂರು  : ನ್ಯಾಯ ಬೆಲೆ ಅಂಗಡಿಗಳಲ್ಲಿ ಪಡಿತರ ಕಾರ್ಡುದಾರರಿಗೆ ವಿತರಣೆ ಮಾಡಲು ದಕ್ಷಿಣ ಕನ್ನಡ ಜಿಲ್ಲೆಗೆ 20 ಸಾವಿರ ಕ್ವಿಂಟಾಲ್ ಕುಚ್ಚಲಕ್ಕಿ ಬಿಡುಗಡೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ. ಪಡಿತರದಲ್ಲಿ ಕುಚ್ಚಲಕ್ಕಿ ನೀಡಬೇಕೆಂದು ವ್ಯಾಪಕ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಸರಕಾರ ಇದಕ್ಕೆ ಒಪ್ಪಿಗೆ ನೀಡಿದೆ. ಇದೀಗ ಲಭ್ಯವಿರುವ 20000 ಕ್ವಿಂಟಾಲ್ ಕುಚ್ಚಲಕ್ಕಿ ಜಿಲ್ಲೆಗೆ ಬಿಡುಗಡೆ ಮಾಡಲಾಗಿದೆ. ಮುಂದಿನ ತಿಂಗಳಲ್ಲಿ ಪೂರ್ಣ ಪ್ರಮಾಣದಲ್ಲಿ ಕುಚ್ಚಲಕ್ಕಿ ಜಿಲ್ಲೆಗೆ ಬಿಡುಗಡೆಯಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ. 61302 […]

ಮಂಗಳೂರು : ಕೊರೋನಾ ಅಪ್ ಡೇಟ್ ನೀಡದ ಜಿಲ್ಲಾಡಳಿತ

Friday, April 3rd, 2020
corona

ಮಂಗಳೂರು  : ಕೋವಿಡ್‌- 19 ದೃಢಪಟ್ಟು ನಗರದ ವೆನ್ಲಾಕ್ ಜಿಲ್ಲಾಸ್ಪತ್ರೆ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಯಾವುದೇ ರೀತಿಯ ಮಾಹಿತಿ ನೀಡುತ್ತಿಲ್ಲ. ಜಿಲ್ಲಾಡಳಿತದಿಂದ ಬಿಡುಗಡೆಗೊಳ್ಳುವ ಹೆಲ್ತ್‌ ಬುಲೆಟಿನ್‌ನಲ್ಲಿ ಒಂದು ಬಾರಿಯಷ್ಟೇ ಸೋಂಕಿತರ ಆರೋಗ್ಯ ಸುಧಾರಿಸುತ್ತಿದೆ ಎಂದು ಮಾಹಿತಿ ನೀಡಲಾಗಿತ್ತು. ಈ ನಡುವೆ, ಕೋವಿಡ್‌- 19 ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 10 ತಿಂಗಳ ಶಿಶುವಿನ ಆರೋಗ್ಯ ಸುಧಾರಿಸುತ್ತಿರುವುದಾಗಿ ಮಗುವಿನ ಸಂಬಂಧಿಕರು ಹೇಳಿಕೊಂಡಿದ್ದಾರೆ. ಉಸಿರಾಟದ […]

ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ

Wednesday, April 1st, 2020
corona

ನಮ್ಮ ನಾಡಿಗೆ ಕೊರೋನಾ ಬಂದೈತೀ ಅಣ್ಣಾ ಎಚ್ಚರಗೊಳ್ಳಣ್ಣ ಭಯ – ಭೀತಿ ಯಾಕಣ್ಣ ಸ್ವಚ್ಛತೆಯಾ ಕಾಪಾಡಣ್ಣ . ಮಾಸ್ಕನು ಮುಖಕ್ಕೆ ಧರಿಸು ಒಳಗಿನ ಅಹಂ ನೀ ಸರಿಸು , ಸ್ವಚ್ಛತೆಯ ನೀ ಸ್ಮರಿಸು ಬಳಿ ಸುಳಿಯಲ್ಲಾ ಯಾವ ವೈರಸ್ಸು . ಅಕ್ಕ ಪಕ್ಕದವರಿಗೆ ತಿಳಿಸು ಈ ನಾಡನು ನೀ ಉಳಿಸು ವಿದೇಶದಲ್ಲಿ ಹೆಚ್ಚು ಹರಡೈತೀ ಸಾವಿನ ಸಂಖ್ಯಿ ಮುಗಿಲು ಮುಟೈತೀ, ಯಾಮಾರಿದರ ನಿನ್ನ ಬಳಿಗೂ ಬರುತೈತೀ ಸಾವಿನ ಭಯ ತರುತೈತೀ ನಿನ್ನ ಸ್ವಯಂ ಸ್ವಚ್ಛತೆಯೇ ಇದಕ್ಕ ಮದ್ದು […]

ಉಡುಪಿ ಜಿಲ್ಲೆಯಲ್ಲಿ ಮತ್ತೆ ಎರಡು ಕೋವಿಡ್ 19 ಪಾಸಿಟಿವ್ ಪ್ರಕರಣ ಪತ್ತೆ

Sunday, March 29th, 2020
covid udupi

ಉಡುಪಿ: ಜಿಲ್ಲೆಯಲ್ಲಿ ಮೊದಲ ಕೋವಿಡ್ 19 ವೈರಸ್ ಪಾಸಿಟಿವ್ ಪ್ರಕರಣ ಪತ್ತೆಯಾದ ನಾಲ್ಕು ದಿನಗಳ ಬಳಿಕ ಇಂದು ಮತ್ತೆ ಎರಡು ಮಂದಿಯಲ್ಲಿ ಈ ಸೋಂಕು ಪಾಸಿಟಿವ್ ವರದಿ ಬಂದಿದೆ. ದಕ್ಷಿಣ ಕನ್ನಡದಲ್ಲಿ ಕೋವಿಡ್ 19 ಸೋಂಕು ಪೀಡಿತರ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ಉಡುಪಿಯಲ್ಲಿ ಮಾತ್ರ ಈ ಮಾಹಾಮಾರಿ ನಿಯಂತ್ರಣದಲ್ಲಿತ್ತು. ಆದರೆ ಇಂದು ಮತ್ತೆ ಎರಡು ಪ್ರಕರಣಗಳು ಪತ್ತೆಯಾಗಿರುವುದು ಸಹಜವಾಗಿಯೇ ಜಿಲ್ಲೆಯ ಜನರ ಆತಂಕವನ್ನು ಹೆಚ್ಚು ಮಾಡಿದೆ. ಒಟ್ಟು ತಪಾಸಣೆ 1,992 ಮಂದಿ. 14+28 ದಿನಗಳ ಮನೆ ನಿಗಾ ಪೂರೈಸಿದವರು  1,055. […]