ಬಡ ರೋಗಿಗಳ ಜೀವ ರಕ್ಷಕನಾದ ಶಿರಡಿಸಾಯಿ ಬಾಬಾ: ವೈದ್ಯಕೀಯ ಕಾಲೇಜುಗಳಿಗೆ 71 ಕೋಟಿ ರೂ ದಾನ!

Thursday, June 21st, 2018
shiridi-sai-ram

ಮಹಾರಾಷ್ಟ್ರ: ಬಡವರ ಬಂಧು ನೊಂದವರ ಆಶಾಕಿರಣವಾಗಿದ್ದ ಹಾಗೂ ಬೇಡಿದ್ದನ್ನು ನೀಡುವ ಕರುಣಾಮಯಿ ದೇವರು ಎಂದೇ ಪ್ರಸಿದ್ಧವಾಗಿರುವ ಸಾಯಿಬಾಬಾ ಇದೀಗ ಸಾಕ್ಷಾತ್‌ ದೇವರಾಗಿದ್ದಾರೆ. ಹೌದು ಇಷ್ಟೆಲ್ಲ ಪೀಠಿಕೆ ಹಾಕುತ್ತಿರುವುದು ಶಿರಡಿಸಾಯಿ ಬಾಬಾ ಟ್ರಸ್ಸ್‌ ಬಗ್ಗೆ… ಶಿರಡಿಸಾಯಿ ಬಾಬಾ ಟ್ರಸ್ಟ್‌ ಗ್ರಾಮೀಣ ಬಡ ರೋಗಿಗಳ ಪಾಲಿಗೆ ಇದೀಗ ಆಶಾಕಿರಣವಾಗಿದೆ. ಗ್ರಾಮೀಣ ರೋಗಿಗಳನ್ನು ಗಮನದಲ್ಲಿಟ್ಟುಕೊಂಡು ಮಹಾರಾಷ್ಟ್ರ ಸರ್ಕಾರ ನಡೆಸುತ್ತಿರುವ ಮೆಡಿಕಲ್‌ ಕಾಲೇಜುಗಳನ್ನ ಆಧುನೀಕರಣ ಹಾಗೂ ಮೇಲ್ದರ್ಜೆಗೇರಿಸಲು ಆರ್ಥಿಕ ಸಹಾಯ ನೀಡಿದೆ. ಇದಕ್ಕಾಗಿ ಟ್ರಸ್ಟ್‌ ಒಂದಲ್ಲ ಎರಡಲ್ಲ ಬರೋಬ್ಬರಿ 71 ಕೋಟಿ ರೂಪಾಯಿ […]

ನನ್ನ ಬಳಿಯೂ ಕೆಲವರ ಡೈರಿಗಳಿವೆ..ಯಾರು ಯಾರಿಗೆ ಏನೇನು ಬರೆದಿದ್ದಾರೆ ಅನ್ನೋದು ಗೊತ್ತಿದೆ: ಡಿ.ಕೆ.ಶಿವಕುಮಾರ್

Wednesday, June 20th, 2018
d-k-shivkumar

ಬೆಂಗಳೂರು:‌ ನನ್ನ ಬಳಿಯೂ ಕೆಲವರ ಡೈರಿಗಳಿವೆ. ಯಾರು ಯಾರಿಗೆ ಏನೇನು ಬರೆದಿದ್ದಾರೆ ಅನ್ನೋದು ಗೊತ್ತಿದೆ. ಕೊನೆಯಲ್ಲಿ ಏನೂ ಆಗಲ್ಲವೆಂದಾಗ ಅದನ್ನ ಬಹಿರಂಗ ಮಾಡುತ್ತೇನೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಎಚ್ಚರಿಕೆ ನೀಡಿದರು. ವಿಧಾನಸೌಧದಲ್ಲಿ ಮಾತನಾಡಿದ ಅವರು, ಐಟಿ ನೋಟಿಸ್ ಜಾರಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸುತ್ತಾ, ನನ್ನನ್ನ ಹೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆಶಿ ಯಾವುದಕ್ಕೂ ಹೆದರುವುದಿಲ್ಲ. ನಾನು ಕಾನೂನಿಗೆ ಬೆಲೆ ಕೊಡುವವನು. ಪ್ರಕರಣ ಈಗ ಕೋರ್ಟ್‌ನಲ್ಲಿ ಇರೋದ್ರಿಂದ ಈಗ ಏನು ಹೇಳೋದಿಲ್ಲ. ಇಲ್ಲವಾಗಿದ್ದರೆ ನಾನೇನು ಅನ್ನೋದನ್ನ ತೋರಿಸುತ್ತಿದ್ದೆ. […]

ಧೋನಿ ಪತ್ನಿ ಸಾಕ್ಷಿ ಅವರಿಗೆ ಜೀವ ಬೆದರಿಕೆ..ಗನ್‌ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಕೆ!

Wednesday, June 20th, 2018
MS-dhoni

ರಾಂಚಿ: ಟೀಂ ಇಂಡಿಯಾ ಕ್ರಿಕೆಟ್‌ನ ಹಿರಿಯ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಪತ್ನಿ ಅವರಿಗೆ ಜೀವ ಬೆದರಿಕೆ ಇರುವ ಕಾರಣ ಗನ್‌ ಲೈಸನ್ಸ್‌ಗಾಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. 2010ರಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್‌‌ ಧೋನಿ ಗನ್‌ ಲೈಸನ್ಸ್‌ ಪಡೆದುಕೊಂಡಿದ್ದರು. ಈಗ ಸಾಕ್ಷಿ ಸಿಂಗ್‌ ಧೋನಿ ಪಿಸ್ತೂಲ್‌ ಅಥವಾ 3.2 ರಿವಾಲ್ವರ್‌‌ ಪಡೆದುಕೊಳ್ಳಲು ಅರ್ಜಿ ಸಲ್ಲಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಬಹುತೇಕವಾಗಿ ಅವರು ಮನೆಯಲ್ಲಿ ಏಕಾಂಗಿಯಾಗಿರುವ ಕಾರಣ ಜತೆಗೆ […]

ಜಮ್ಮು-ಕಾಶ್ಮೀರದಲ್ಲಿ ಮುರಿದು ಬಿದ್ದ ಬಿಜೆಪಿ-ಪಿಡಿಪಿ ಮೈತ್ರಿ

Tuesday, June 19th, 2018
jammu-kashmir

ಶ್ರೀನಗರ: ಜಮ್ಮು-ಕಾಶ್ಮೀರದ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ಮುರಿದು ಬಿದ್ದಿದೆ. ಸಮ್ಮಿಶ್ರ ಸರ್ಕಾರದಿಂದ ಬಿಜೆಪಿ ಹೊರ ಬಂದಿದೆ. 2014ರಲ್ಲಿ ನಡೆದ ಜಮ್ಮು-ಕಾಶ್ಮೀರದ ಚುನಾವಣೆಯಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಸುಮಾರು ಎರಡು ತಿಂಗಳ ಕಾಲ ಸರ್ಕಾರ ರಚನೆ ಕಸರತ್ತು ನಡೆಸಿದ ಬಳಿಕ, ತಮ್ಮ-ತಮ್ಮ ಸಿದ್ಧಾಂತಗಳನ್ನು ಬದಿಗೊತ್ತಿ ಬಿಜೆಪಿ ಮತ್ತು ಪಿಡಿಪಿ ಮೈತ್ರಿ ಸರ್ಕಾರ ರಚಿಸಿದ್ದವು. ಪಿಡಿಪಿ ಮುಖ್ಯಮಂತ್ರಿ ಸ್ಥಾನ ಹಾಗೂ ಬಿಜೆಪಿ ಉಪಮುಖ್ಯಮಂತ್ರಿ ಹುದ್ದೆಯನ್ನು ಹಂಚಿಕೊಂಡಿದ್ದವು. ಆದರೆ, ಇಂದು ಏಕಾಏಕಿ ಜಮ್ಮು-ಕಾಶ್ಮೀರದ ಮೈತ್ರಿ ಸರ್ಕಾರದಿಂದ ಕೇಂದ್ರದ ಆಡಳಿತಾರೂಢ […]

ಕಾಂಗ್ರೆಸ್‌‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಇಂದು 48ನೇ ಹುಟ್ಟುಹಬ್ಬದ ಸಂಭ್ರಮ!

Tuesday, June 19th, 2018
rahul-gandhi

ನವದೆಹಲಿ: ಕಾಂಗ್ರೆಸ್‌‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಇವತ್ತು 48ನೇ ವಸಂತಕ್ಕೆ ಕಾಂಗ್ರೆಸ್‌‌ನ ಯುವರಾಜ ಕಾಲಿಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಶುಭಾಶಯ ಕೋರಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಹುಲ್‌ ಗಾಂಧಿ ಅವರಿಗೆ ಇದು ಮೊದಲ ಜನ್ಮದಿನದ ಸಂಭ್ರಮವಾಗಿದೆ. ಪ್ರಧಾನಿ ಮೋದಿ, ರಾಜಕಾರಣಿಗಳು ಮತ್ತು ಕಾಂಗ್ರೆಸ್‌ನ ನಾಯಕರು ರಾಗಾ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. ‘ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಗೆ ಜನ್ಮದಿನದ ಶುಭಾಶಯಗಳು. ದೀರ್ಘಾಯಸ್ಸು ಮತ್ತು ಆರೋಗ್ಯಕ್ಕಾಗಿ ನಾನು […]

2018ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದ ಚೆನ್ನೈ ಸೂಪರ್‌ಕಿಂಗ್ಸ್‌..!

Monday, May 28th, 2018
chennai-super-kings

ಮುಂಬೈ: ಶೇನ್‌ ವಾಟ್ಸನ್‌ ಸಿಡಿಲಬ್ಬರದ ಶತಕದ(117) ನೆರವಿನಿಂದ ಚೆನ್ನೈ ಸೂಪರ್‌ಕಿಂಗ್ಸ್‌ ತಂಡ ಸನ್‌ರೈಸರ್ಸ್‌ ವಿರುದ್ಧ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ 2018 ರ ಐಪಿಎಲ್‌ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. 179 ರನ್‌ಗಳ ಟಾರ್ಗೆಟ್‌ ಪಡೆದ ಚೆನ್ನೈ ನಿಧಾನಗತಿ ಆರಂಭ ಪಡೆಯಿತಲ್ಲದೆ ಆರಂಭಿಕ ಪ್ಲೆಸಿಸ್‌(10) ವಿಕೆಟ್‌ ಕಳೆದುಕೊಂಡು ಆಘಾತಕ್ಕೊಳಗಾಯಿತು. ಆದರೆ 5 ಓವರ್‌ನಿಂದ ತಮ್ಮ ನೈಜ ಆಟಕ್ಕೆ ಮರಳಿದ ವಾಟ್ಸನ್‌ ಸಿಡಿಲಬ್ಬರದ ಶತಕ(117) ಸಿಡಿಸಿದರು. ಎರಡನೇ ವಿಕೆಟ್‌ ಜೊತೆಯಾಟದಲ್ಲಿ ಸುರೇಶ್‌ ರೈನಾ ಜೊತೆ 117 ರನ್‌ಗಳ ಜೊತೆಯಾಟ […]

ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿದ್ದರೂ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ : ಅಮಿತ್ ಶಾ

Monday, May 21st, 2018
Amith sha

ನವದೆಹಲಿ : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನಾದೇಶ ಕಾಂಗ್ರೆಸ್‌ಗೆ ವಿರುದ್ಧವಾಗಿತ್ತು. ಅದಕ್ಕಾಗಿಯೇ ಜೆಡಿಎಸ್ ನೊಂದಿಗೆ ಆತುರವಾಗಿ ಮೈತ್ರಿ ಮಾಡುಲು ಒಪ್ಪಿಕೊಂಡಿದೆ ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹೇಳಿದರು. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಲನ್ನು ಗೆಲುವೆಂದು ಬಿಂಬಿಸಲು ಕಾಂಗ್ರೆಸ್‌ ಹೊಸ ದಾರಿಯನ್ನು ಈ ರೀತಿಯಾಗಿ ಕಂಡುಕೊಂಡಿದೆ ಎಂದು ಹೇಳಿದರು. ಹೆಚ್ಚಿನ ಎಲ್ಲ ಸಚಿವರು ಸೋತ ಹೊರತಾಗಿಯೂ ತಾವು ಸಂಭ್ರಮಿಸುತ್ತಿರುವುದು ಯಾಕೆ ಎಂಬುದನ್ನು ಕಾಂಗ್ರೆಸ್‌ನವರು ರಾಜ್ಯದ ಜನತೆಗೆ ವಿವರಿಸಲಿ ಎಂದು ಶಾ ಹೇಳಿದರು. ‘ಕೇವಲ […]

ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ… ಆ ಧೈರ್ಯ ಯಾರಿಗೂ ಇಲ್ಲ: ಎಚ್. ವಿಶ್ವನಾಥ್

Friday, May 18th, 2018
H-vishwanath;

ಹೈದರಾಬಾದ್: ರಾಜ್ಯ ಸರ್ಕಾರ ರಚನೆ ಕಸರತ್ತಿನ ಹಿನ್ನೆಲೆಯಲ್ಲಿ ಬಹುಮತ ಸಾಬೀತಿಗೆ ರಾಜಕೀಯ ಪಕ್ಷಗಳಿಗೆ ಸುಪ್ರೀಂಕೋರ್ಟ್ ನಾಳೆ ದಿನಾಂಕ ನಿಗದಿಪಡಿಸಿದೆ. ಈ ನಡುವೆ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯಲು ಪ್ರಯತ್ನ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಆದರೆ ನನ್ನನ್ನು ಯಾರೂ ಈ ನಿಟ್ಟಿನಲ್ಲಿ ಸಂಪರ್ಕ ಮಾಡಿಲ್ಲ. ಆ ಧೈರ್ಯ ಯಾರಿಗೂ ಇಲ್ಲ ಎಂದು ಹಿರಿಯ ಕಾಂಗ್ರೆಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ತಮ್ಮ ತಂದೆಯವರನ್ನು ಖರೀದಿ ಮಾಡುವ ಪ್ರಯತ್ನ ಸಫಲವಾಗುವುದಿಲ್ಲ ಎಂದು ಶಾಸಕ ವಿಶ್ವನಾಥ್ ಅವರ ಪುತ್ರ ಹಾಕಿರುವ […]

ಸುಪ್ರೀಂ ಕೋರ್ಟ್‌ನಿಂದ ಕೇಂದ್ರ ಸರ್ಕಾರಕ್ಕೆ ಮಹತ್ವದ ನಿರ್ದೇಶನ!

Friday, April 20th, 2018
davood

ನವದೆಹಲಿ: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಸ್ತಿ ಜಪ್ತಿ ಮಾಡಿಕೊಳ್ಳವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ದಾವೂದ್‌‌ ತನ್ನ ‘ಅಪರಾಧಿ ಕೃತ್ಯಗಳಿಂದ ಸಂಪಾದಿಸಿರುವ ಆಸ್ತಿ’ಯನ್ನು ಜಾರಿ ನಿರ್ದೇಶನಾಲಯ ಮತ್ತಿತರ ಸಂಸ್ಥೆಗಳು ವಶ ಪಡೆಸಿಕೊಳ್ಳವುದನ್ನು ಪ್ರಶ್ನಿಸಿ, ತಾಯಿ ಅಮಿನಾಬೀ ಕಸ್ಕರ್‌ ಮತ್ತು ಸಹೋದರಿ ಆಸೀನಾ ಪರ್ಕರ್‌ ಅರ್ಜಿ ಸಲ್ಲಿಸಿದ್ದರು. ಆದರೆ, ಈ ಅರ್ಜಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಆರ್‌.ಕೆ. ಅಗರ್ವಾಲ್‌ ನೇತೃತ್ವದ ನ್ಯಾಯಪೀಠ, ಪಾತಕಿಗೆ ಸೇರಿದ ಮುಂಬೈಯ ಆಸ್ತಿ ಜಪ್ತಿ ಮಾಡುವಂತೆ ಕೇಂದ್ರಕ್ಕೆ ನಿರ್ದೇಶಿಸಿದೆ. 1993ರ ಮುಂಬೈ […]

ಗಂಡನ ವಿರುದ್ಧ ಪತ್ನಿಯ ದೂರು: ಕ್ರಿಕೆಟರ್‌ ಶಮಿಗೆ ಸಮನ್ಸ್‌ ಜಾರಿ ಮಾಡಿದ ಪೊಲೀಸ್‌!

Tuesday, April 17th, 2018
mohammed-shami

ಕೋಲ್ಕತ್ತಾ: ಟೀಂ ಇಂಡಿಯಾ ಕ್ರಿಕೆಟರ್ ಮೊಹಮ್ಮದ್ ಶಮಿ ಆತನ ಪತ್ನಿ ಹಸಿನ್ ಜಹಾನ್‍ರ ನಡುವೆ ಉಂಟಾಗಿರುವ ಕೌಟುಂಬಿಕ ಬಿಕ್ಕಟ್ಟು ಎಲ್ಲರಿಗೂ ಗೊತ್ತಿರುವುದೇ. ಶಮಿ ತನ್ನ ಗರ್ಲ್‌ಫ್ರೆಂಡ್ಸ್ ಜತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಷ್ಟೇ ಅಲ್ಲದೆ, ತನಗೆ ಪ್ರತಿನಿತ್ಯ ಚಿತ್ರಹಿಂಸೆ ನೀಡಿದ್ದಾರೆ ಎಂದು ಕೋಲ್ಕತ್ತಾ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕೋಲ್ಕತ್ತಾ ಪೊಲೀಸರು ಮೊಹಮ್ಮದ್‌ ಶಮಿಗೆ ಸಮನ್ಸ್‌‌ ಜಾರಿ ಮಾಡಿದ್ದು, ನಾಳೆ 2ಗಂಟೆಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದ್ದಾರೆ. ಇದರ ಮಧ್ಯೆ ಗಂಡನ ವಿರುದ್ಧ ಪತ್ನಿ ಜಹಾನ್‌ ಫಿಕ್ಸಿಂಗ್‌ […]