ಸಸ್ಪೆನ್ಸ್-ಥಿಲ್ಲರ್‌, ಆ್ಯಕ್ಷನ್ ಎಂಟರ್ಟೈನ್ಮಂಟ್ ಸಿನಿಮಾ ಕ್ಲಾಂತಾ ಫೆ.2 ಕ್ಕೆ ತೆರೆಗೆ

Wednesday, January 31st, 2024
klantha

ಮಂಗಳೂರು : ಕ್ಲಾಂತಾ ಕನ್ನಡ ಸಿನಿಮಾ ಚಿತ್ರೀಕರಣವು ಬಹುತೇಕ ಕರಾವಳಿಯ ಸುತ್ತಮುತ್ತ ನಡೆದಿದ್ದು, ನಮ್ಮ ಮಣ್ಣಿನ ಮಹಿಮೆ, ಆಚಾರ, ವಿಚಾರ,ಸಂಸ್ಕೃತಿಯನ್ನು ಸಾರುವುದರ ಜೊತೆಗೆ ಎಲ್ಲರಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಚಿತ್ರದಲ್ಲಿ ತುಳುನಾಡಿನ ಕೊರಗಜ್ಜ ದೈವದ ಪವಾಡದ ಬಗ್ಗೆ ಹೇಳಲಾಗಿದೆ. ಈ ಸಿನಿಮಾ ಕರಾವಳಿ ಜಿಲ್ಲೆಯಾದ್ಯಂತ ಫೆಬ್ರವರಿ 2 ರಂದು ತೆರೆಕಾಣಲಿದೆ ಎಂದು ಸಿನಿಮಾದ ನಿರ್ದೇಶಕ ವೈಭವ್ ಪ್ರಶಾಂತ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಸಿನಿಮಾ ರೋಚಕವಾಗಿ, ಟ್ವಿಸ್ಟ್‌ಗಳ ಮೂಲಕ ಸಾಗಿ, ಪ್ರೇಕ್ಷಕರಿಗೆ ಕುತೂಹಲ ಮೂಡಿಸುತ್ತದೆ . ಈ ಸಿನಿಮಾದಲ್ಲಿ ಇಂದಿನ ಯುವ […]

ಮಂಗಳೂರು ಮೆಸ್ಕಾಂ ಇಂಜಿನಿಯರ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ

Wednesday, January 31st, 2024
Shanthakumar

ಮಂಗಳೂರು: ಮೆಸ್ಕಾಂ ಇಂಜಿನಿಯರ್ ಶಾಂತಕುಮಾರ್ ಅವರ ಮನೆ ಹಾಗೂ ಕಚೇರಿ ಮೇಲೆ ಆದಾಯ ಮೀರಿ ಆಸ್ತಿ ಗಳಿಸಿರುವ ಆರೋಪದಡಿ ಬುಧವಾರ ಬೆಳಿಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ಅತ್ತಾವರ ವಿಭಾಗದ ಮೆಸ್ಕಾಂ ಇಇ ಆಗಿ ಕಾರ್ಯನಿರ್ವಹಿಸುತ್ತಿರುವ ಶಾಂತಕುಮಾರ್ ಅವರ ಬೆಂಗಳೂರಿನ ನಿವಾಸದ ಮೇಲೂ ದಾಳಿ ನಡೆಸಿರುವ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷ ಸತೀಶ್ ಕುಂಪಲ ಪದಗ್ರಹಣ

Tuesday, January 30th, 2024
sathish Kumpala

ಮಂಗಳೂರು: ರಾಜ್ಯದ ಯಾವುದೇ ಮೂಲೆಗೆ ಹೋದರು ಮತದಾರರು ಉತ್ಸುಕರಾಗಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಜಯಗಳಿಸುವುದು ನಿಶ್ಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನುಡಿದಿದ್ದಾರೆ. ಅಡ್ಯಾರ್ ಗಾರ್ಡನ್ ನಲ್ಲಿ ಇಂದು ನಡೆದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿಯ ನೂತನ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿ ಎಂಟು ತಿಂಗಳ ಹಿಂದೆ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಕಾಂಗ್ರೆಸ್‌ಗೆ ದೇಶದಲ್ಲಿ ಅಧಿಕಾರಕ್ಕೆ ಬರ್ತೇವೆ ಎಂಬ ಭ್ರಮೆ ಹುಟ್ಟಿಕೊಂಡಿದೆ. ಆದರೆ ದೇಶದಲ್ಲಿ ಮತ್ತು ಕರ್ನಾಟಕ ರಾಜ್ಯದಲ್ಲಿ […]

ಸಾಕ್ಷ್ಯಾಧಾರ ಕೊರತೆ : ತಾಯಿ ಮತ್ತು ಅಪ್ರಾಪ್ತ ಬಾಲಕಿ ಅತ್ಯಾಚಾರದ ಆರೋಪಿ ಬಿಡುಗಡೆ

Tuesday, January 30th, 2024
Ullal-Rape

ಮಂಗಳೂರು : ಉಳ್ಳಾಲದಲ್ಲಿ ಠಾಣೆಯಲ್ಲಿ ತಾಯಿ ಹಾಗೂ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿಯನ್ನು ಸಾಕ್ಷ್ಯಾಧಾರ ಕೊರತೆಯ ಕಾರಣದಿಂದ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಬಿಡುಗಡೆಗೊಳಿಸಿದೆ. 2021ರಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅಬೂಬಕ್ಕರ್ ಸಿದ್ದಿಕ್ ಯಾನೆ ಸಿದ್ದಿಕ್ ಉಳ್ಳಾಲ್ ಎಂಬವವನನ್ನು ಆರೋಪ ಮುಕ್ತಗೊಳಿಸಿ ಮಂಗಳೂರಿನ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶ ನೀಡಿದೆ . ಆರೋಪಿಯು ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಆಕೆಯ ಮಗಳು ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ […]

ಜಾತ್ರೆಗಳಲ್ಲಿ ಜೂಜಿನ ಕೋಳಿ ಅಂಕವನ್ನು ನಡೆಸಲು ಅವಕಾಶವಿಲ್ಲ

Tuesday, January 30th, 2024
cb-ryshyanth

ಮಂಗಳೂರು : ಕಾನೂನುಬಾಹಿರ ಜೂಜಿನ ಕೋಳಿ ಅಂಕವನ್ನು ನಡೆಸಲು ಪೊಲೀಸ್ ಠಾಣೆಗಳಲ್ಲಿ ಅನುಮತಿ ನೀಡಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ದ.ಕ. ಎಸ್ ಪಿ ಸಿಬಿ ರಿಷ್ಯಂತ್ ತಿಳಿಸಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಸಾರ್ವಜನಿಕರು ಕೋಳಿ ಅಂಕ ನಡೆಸಲು ಅನುಮತಿಗಾಗಿ ಪೊಲೀಸ್ ಠಾಣೆಗಳಿಗೆ ಮನವಿ ಸಲ್ಲಿಸಬಾರದು, ಕೋಳಿ ಅಂಕ ನಡೆಸಲು ಕಾನೂನಿನಲ್ಲಿ ಯಾವುದೇ ಅವಕಾಶವಿರುವುದಿಲ್ಲ ಎಂದರು. ಕಾನೂನುಬಾಹಿರ ಅಕ್ರಮ ಚಟುವಟಿಕೆಗಳನ್ನು ನಡೆಸುವುದು ಕಂಡುಬಂದಲ್ಲಿ, ಅವರ ವಿರುದ್ಧ ಸೂಕ್ತ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಕೋಳಿ […]

ಡ್ರೋನ್‌ ಪ್ರತಾಪ್‌ ಸೋತಿದ್ದಕ್ಕೆ ಅರ್ಧ ಗಡ್ಡ, ಮೀಸೆ ಬೋಳಿಸಿದ ಯುವಕ

Tuesday, January 30th, 2024
drone

ಕಡಬ : ಬಿಗ್‌ ಬಾಸ್‌ ಸೀಸನ್‌ 10ರಲ್ಲಿ ಡ್ರೋನ್‌ ಪ್ರತಾಪ್‌ ಗೆಲ್ಲುವುದಾಗಿ ಚಾಲೆಂಜ್ ಹಾಲಿದ್ದ ಯುವಕನೋರ್ವ ಸೋತಮೇಲೆ ಅರ್ಧ ಗಡ್ಡ, ಮೀಸೆ ತೆಗೆದ ವಿಡಿಯೋ ವೈರಲ್‌ ಆಗಿದೆ. ಕಡಬ ತಾಲೂಕಿನ ಬಂಟ್ರ ಗ್ರಾಮದ ಪಾಲೆತ್ತಡ್ಕ ನಿವಾಸಿ ಝೈನುಲ್‌ ಆಬಿದ್‌ ಬಿಗ್‌ ಬಾಸ್‌ನಲ್ಲಿ ಡ್ರೋನ್‌ ಪ್ರತಾಪ್‌ ಗೆದ್ದುಬರುತ್ತಾರೆ; ಸೋತರೆ ಅರ್ಧ ಗಡ್ಡ, ಮೀಸೆ ತೆಗೆಯುವೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚಾಲೆಂಜ್‌ ಹಾಕಿದ್ದರು. ಅಲ್ಲದೆ ಹಸಿ ಮೆಣಸಿನಕಾಯಿ ತಿನ್ನುವುದಾಗಿ ಮತ್ತೂಂದು ವೀಡಿಯೋ ಹರಿಯಬಿಟ್ಟಿದ್ದರು. ಇದೀಗ ಕಾರ್ತಿಕ್‌ ವಿನ್ನರ್‌ ಆಗಿದ್ದು, ಪ್ರತಾಪ್‌ […]

ಟಿಪ್ಪರ್ ಡಿಕ್ಕಿ ಹೊಡೆದು ಶಾಲಾ ಶಿಕ್ಷಕಿ ಮೃತ್ಯು, ಮಗು ಬಚಾವ್

Monday, January 29th, 2024
Anitha

ಪುತ್ತೂರು : ಟಿಪ್ಪರ್ ಹಾಗೂ ದ್ವಿಚಕ್ರ ವಾಹನದ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿಯೊಬ್ಬರು ಸಾವನಪ್ಪಿದ ಘಟನೆ ಪುತ್ತೂರಿನ ಪೋಲ್ಯದಲ್ಲಿ ಸೋಮವಾರ ನಡೆದಿದೆ. ಮೃತರನ್ನು ಬಂಟ್ವಾಳ ತಾಲೂಕು ಇಡ್ಕಿದು ಗ್ರಾಮದ ಮಿತ್ತೂರು ಮದಕ ಸುರೇಶ್ ಕುಲಾಲ್‌ ಪತ್ನಿ ಅನಿತಾ(35) ಎಂದು ಗುರುತಿಸಲಾಗಿದೆ. ವಿಸ್ಡಮ್ ಇಂಗ್ಲಿಷ್ ಮೀಡಿಯಂ ಶಾಲಾ ಶಿಕ್ಷಕಿಯಾಗಿರುವ ಅನಿತಾ ಕೆಲ ದಿನಗಳ ಹಿಂದೆ ಮನೆಯಲ್ಲಿ ಬಿದ್ದು ಗಾಯಗೊಂಡಿದ್ದರು. ಇಂದು ಬೆಳಿಗ್ಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಚಿಕಿತ್ಸೆ ಪಡೆದು ಬೈಕ್‌ನಲ್ಲಿ ಹಿಂತಿರುಗುವ […]

ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮನಾಥ ಹೆಗ್ಡೆ ಸಂತಾಪ ಸೂಚಕ ಸಭೆ

Monday, January 29th, 2024
Ramanatha-Hegde

ಮಂಗಳೂರು : ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದ ಪಳ್ಳಿ ರಮನಾಥ ಹೆಗ್ಡೆ ಅವರ ನಿಧನಕ್ಕೆ ದೇವಸ್ಥಾನದ ವತಿಯಿಂದ ಸಂತಾಪ ಸೂಚಕ ಸಭೆಯು ಸೋಮವಾರ ಕ್ಷೇತ್ರದ ಕಲಾಮಂಟಪದಲ್ಲಿ ನಡೆಯಿತು. ಧಾರ್ಮಿಕ, ಸಾಮಾಜಿಕ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಪಳ್ಳಿ ರಮನಾಥ ಹೆಗ್ಡೆ ಅವರು, ಮಂಗಳಾದೇವಿ ದೇವಸ್ಥಾನದಲ್ಲಿ ಕಳೆದ 31ವರ್ಷಗಳಿಂದ ಆಡಳಿತ ಮೊಕ್ತೇಸರರಾಗಿ ಸೇವೆ ಸಲ್ಲಿಸಿದ್ದರು. ನಗರದ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಸ್ಥಾಪಕ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಸ್ಥಳೀಯ ಕಾರ್ಪೋರೇಟರ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಮತ್ತು […]

ಬೆಂಕಿ ನಂದಿಸಲು ಕಾಡಿಗೆ ಹೋದ ವೃದ್ಧ ದಂಪತಿ ದುರ್ಮರಣ

Monday, January 29th, 2024
Bantwal-elder-couple

ಮಂಗಳೂರು: ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ವೃದ್ಧ ದಂಪತಿ ಗಳಿಬ್ಬರು ಬೆಂಕಿಹಾರಿಸಲು ಹೋಗಿ ಜೀವವನ್ನೇ ಕಳೆದುಕೊಂಡ ಘಟನೆ ತುಂಡು ಪದವು ಎಂಬಲ್ಲಿ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಅಮ್ಟಾಡಿ‌ ಬಳಿಯ ತುಂಡು ಪದವು ಎಂಬಲ್ಲಿ ಈ ಘಟನೆ ನಡೆದಿದ್ದು ಮೃತ ದಂಪತಿಯನ್ನು ಗಿಲ್ಬರ್ಟ್ ಕಾರ್ಲೋ(78) ಪತ್ನಿ ಕ್ರಿಸ್ಟಿನಾ ಕಾರ್ಲೋ(70) ಎಂದು ಗುರುತಿಸಲಾಗಿದೆ. ಮನೆ ಪಕ್ಕದ ಕಸಕ್ಕೆ ಹಾಕಿದ್ದ ಬೆಂಕಿ ಕಾಡಿಗೆ ವ್ಯಾಪಿಸುತ್ತದೆ ಎಂದು ತಿಳಿದು ಬೆಂಕಿಯನ್ನು ನಂದಿಸಲು ಯತ್ನಿಸಿದ್ದ ವೃದ್ಧ ದಂಪತಿ ಸಜೀವದಹನವಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ […]

ಸ್ಫೋಟಕ ತಯಾರಿಸುತ್ತಿದ್ದ ಮೂವರು ಕಾರ್ಮಿಕರು ದುರ್ಮರಣ, ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ಭೇಟಿ

Monday, January 29th, 2024
venuru-blast

ಮಂಗಳೂರು: ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ಗ್ರಾಮದ ಕಟ್ಯಾರು ಎಂಬಲ್ಲಿ ತೊಡದ ಮದ್ಯೆ ಸ್ಫೋಟಕ ತಯಾರಿಸುತ್ತಿದ್ದಾಗ ಉಂಟಾದ ಅವಘಡದಲ್ಲಿ ಮೂವರು ಕಾರ್ಮಿಕರು ದಾರುಣವಾಗಿ ಸಾವನ್ನಪ್ಪಿ, ಆರು ಮಂದಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಬಶೀರ್ ಎಂಬವರ ಜಾಗದಲ್ಲಿ ಘಟನೆ ನಡೆದಿದ್ದು, ಕೇರಳ ನಿವಾಸಿಗಳಾದ ಸ್ವಾಮಿ (55) ಹಾಗೂ ವರ್ಗಿಸ್ (68), ಹಾಸನದ ಅರಸೀಕೆರೆ ನಿವಾಸಿ ಚೇತನ್ (25) ಮೃತಪಟ್ಟಿದ್ದು, ದೇಹ ಸಂಪೂರ್ಣ ಛಿದ್ರಛಿದ್ರವಾಗಿದೆ. ಘಟನೆಯಲ್ಲಿ 6 ಮಂದಿ ಕಾರ್ಮಿಕರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುಗಳನ್ನು ದಿನೇಶ್, ಕಿರಣ್, ಕುಮಾರ್, ಕಲ್ಲೇಶ್, […]