ಡಿ.11 : ಕನ್ನಡ ಸಾಹಿತ್ಯ ಪರಿಷತ್ ನೂತನ ಜಿಲ್ಲಾಧ್ಯಕ್ಷ ಡಾ.ಎಂ.ಪಿ.ಶ್ರೀನಾಥ್ ಪದಗ್ರಹಣ

Thursday, December 9th, 2021
chutuku

ಮಂಗಳೂರು : ಇತ್ತೀಚೆಗೆ ನಡೆದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ಭಾರೀ ಅಂತರದಿಂದ ಗೆಲುವು ಸಾಧಿಸಿರುವ ಲೇಖಕ ಸಂಘಟಕ ಉಪನ್ಯಾಸಕ ಡಾ.ಎಂ.ಪಿ ಶ್ರೀನಾಥ್ ಅವರ ಪದಗ್ರಹಣ ಕಾರ್ಯಕ್ರಮವು ಡಿಸೆಂಬರ್ 11ನೇ ತಾರೀಕು ಶನಿವಾರ ಸಂಜೆ 4 ಗಂಟೆಗೆ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾನೂನು ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ ಎಂದು ಪದಗ್ರಹಣ ಸಮಿತಿಯ ಗಣೇಶ್ ಹೆಬ್ಬಾರ್ ಅವರು ಬುಧವಾರ ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ […]

ಪತ್ನಿ ಮಕ್ಕಳು ಮತಾಂತರವಾಗುವ ಆತಂಕದಿಂದ ಅವರನ್ನು ಕೊಂದು ನೇಣಿಗೆ ಶರಣಾದ ಡ್ರೈವರ್

Wednesday, December 8th, 2021
morgansgate-suicide

ಮಂಗಳೂರು : ಪತ್ನಿ ಮಕ್ಕಳು  ಮತಾಂತರವಾಗುವ ಆತಂಕದಿಂದ  ಅವರಿಗೆ  ಫ್ರೈಡ್ ರೈಸ್ ನಲ್ಲಿ ವಿಷ ಹಾಕಿ ತಿನ್ನಿಸಿ ಪತಿಯೂ ಆತ್ಮ ಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನ ಮೊರ್ಗನ್ಸ್ ಗೇಟ್ ಗೇಟ್ ನಲ್ಲಿ ಬುಧವಾರ ನಡೆದಿದೆ. ನಾಗೇಶ್ ಶೇರಿಗುಪ್ಪಿ (30),ಆತನ ಪತ್ನಿ ವಿಜಯಲಕ್ಷ್ಮಿ( 26), ಸಪ್ನ (8) ಮತ್ತು ಸಮರ್ಥ್ (4) ಸಾವಿಗೀಡಾದವರು. ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರಾಗಿದ್ದ ಕುಟುಂಬ ಕಳೆದ ೮ ವರ್ಷಗಳಿಂದ ಮಂಗಳೂರಿನಲ್ಲಿ ನೆಲೆಸಿತ್ತು. ನಾಗೇಶ್ ಶೇರಿಗುಪ್ಪ ಬರೆದ  ಡೆತ್ ನೋಟ್ ನಲ್ಲಿ ನೂರ್ […]

ನಳಿನ್ ಕುಮಾರ್ ಕಟೀಲ್ ಮೊದಲು ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು, ಅವರು ಮತ್ತೆ ಮರಳಿ ಕಾಂಗ್ರೆಸ್​ ಪಕ್ಷಕ್ಕೆ ಬರಲಿ

Tuesday, December 7th, 2021
Khader

ಮಂಗಳೂರು : ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದು ಕರೆ ನೀಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮೊದಲು‌ ಕಾಂಗ್ರೆಸ್ ಕಾರ್ಯಕರ್ತರಾಗಿದ್ದರು. ಮತ್ತೆ ಅವರು ಕಾಂಗ್ರೆಸ್ಗೆ ಬರಲಿ ಎಂದು ಮಾಜಿ ಸಚಿವ ಯು ಟಿ ಖಾದರ್ ಅಹ್ವಾನ ನೀಡಿದ್ದಾರೆ ಖಾದರ್ ಮತ್ತು ರಮಾನಾಥ ರೈ ಹೊರತುಪಡಿಸಿ ಉಳಿದ ಕಾಂಗ್ರೆಸ್ ಕಾರ್ಯಕರ್ತರನ್ನು ಬಿಜೆಪಿಗೆ ಸೇರಿಸಿ ಎಂದು ಕರೆ ನೀಡಿದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಳಿನ್ ಕುಮಾರ್ ಕಟೀಲ್ ಅವರು ಮೊದಲು ಕಾಂಗ್ರೆಸ್ […]

ದೇವರ ದರ್ಶನ‌ ಪಡೆದು, ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವಕ

Tuesday, December 7th, 2021
saligrama

ಉಡುಪಿ : ಸರಿಯಾದ ಕೆಲಸವಿಲ್ಲದೆ ಮಾನಸಿಕವಾಗಿ ನೊಂದುಕೊಂಡು ಕುಗ್ಗಿ ಹೋಗಿದ್ದ ಯುವಕನೊಬ್ಬ ದೇವಸ್ಥಾನವೊಂದರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಉಡುಪಿ ಜಿಲ್ಲೆಯ ಪಾಂಡೇಶ್ವರದ ಯಡಬೆಟ್ಟು ನಿವಾಸಿ ಸುನೀಲ್ ಮೊಗವೀರ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಉಡುಪಿ ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮಂಗಳವಾರ  ಸಾಲಿಗ್ರಾಮದ ಗುರುನರಸಿಂಹ ದೇವಸ್ಥಾನದಲ್ಲಿ ದರ್ಶನ‌ ಪಡೆದ ಬಳಿಕ ಈತ, ಅಲ್ಲಿನ ದೇವಸ್ಥಾನದ ಕೆರೆಗೆ ಹಾಕಲಾಗಿದ್ದ ಕಬ್ಬಿಣದ ಬೇಲಿಯನ್ನು ದಾಟಿ ಹಾರಿದ್ದಾನೆ. ಸ್ಥಳೀಯರು ಕೂಡಲೇ ನೆರವಿಗೆ ಧಾವಿಸಿದರೂ ಆತನನ್ನು ಉಳಿಸಿಕೊಳ್ಳಲು […]

ಜನರು ತೋರಿಸಿದ  ಪ್ರೀತಿ,ವಿಶ್ವಾಸಕ್ಕೆ ನಾನು ಸದಾ ಖುಣಿ- ಹರೇಕಳ ಹಾಜಬ್ಬ

Tuesday, December 7th, 2021
Harekala-Hajabba

ಕಡಬ : ಜನರು ತೋರಿಸಿದ  ಪ್ರೀತಿ,ವಿಶ್ವಾಸಕ್ಕೆ ನಾನು ಸದಾ  ಖುಣಿಯಾಗಿದ್ದೇನೆ ಎಂದು  ಪದ್ಮಶ್ರೀ ವಿಜೇತ ಹರೇಕಳ ಹಾಜಬ್ಬ ತಿಳಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘ ,ಕಡಬ ತಾಲೂಕು ಪತ್ರಕರ್ತ ಸಂಘ ,ಎಸ್.ಡಿ. ಎಂ.ಸಿ.ದ.ಕ.ಜಿ.ಪಂ. ಕಿರಿಯ ಪ್ರಾಥಮಿಕ ಶಾಲೆ ಪಿಜಕ್ಕಳ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದ ಲ್ಲಿಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಶಿಕ್ಷಣ ಸಂತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ ಮತ್ತು ಸಂವಾದ ಕಾರ್ಯಕ್ರಮ , ಪಿಜಕಳ ಶಾಲೆಯ ಮಕ್ಕಳಿಗೆ ಕುದುರೆಮುಖ ಕಬ್ಬಿಣ ಹಾಗೂ ಅದಿರು […]

ಕಲ್ಲೇಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಿಂದ ವಿಧಾನ ಪರಿಷತ್ ಚುನಾವಣಾ ಪ್ರಚಾರ

Monday, December 6th, 2021
BJP-MLC

ಪುತ್ತೂರು : ಭಾರತೀಯ ಜನತಾ ಪಾರ್ಟಿ ಪುತ್ತೂರು ನಗರ ಮಂಡಲ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಇಲ್ಲಿನ ಕಲ್ಲೇಗ ಭಾರತ್ ಮಾತಾ ಸಮುದಾಯ ಭವನದಲ್ಲಿ ಜರುಗಿತು. ಸಭೆಯಲ್ಲಿ ದಿಕ್ಸೂಚಿ ಭಾಷಣ ಮಾಡಿದ ಸಂಸದ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, “ಕೋಟ ಶ್ರೀನಿವಾಸ ಪೂಜಾರಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಿದವರು. ಧಾರ್ಮಿಕ ದತ್ತಿ ಇಲಾಖೆಗೆ ಕೋಟ ಮಂತ್ರಿಯಾದಾಗ ಹಳ್ಳಿ ಹಳ್ಳಿಯ ಸಣ್ಣಪುಟ್ಟ ದೇವಸ್ಥಾನಗಳಿಗೂ ಅನುದಾನ ನೀಡಿದರು. ಸಾಮೂಹಿಕ ವಿವಾಹ […]

ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್ ನಿಧನ

Monday, December 6th, 2021
Ram bhat

ಮಂಗಳೂರು: ಪುತ್ತೂರಿನ ಮಾಜಿ ಶಾಸಕ ಉರಿಮಜಲು ರಾಮ್ ಭಟ್(92) ಸೋಮವಾರ ನಿಧನರಾಗಿದ್ದಾರೆ. ಬಿಜೆಪಿ ಭೀಷ್ಮ ಎಂದು ಜನಜನಿತರಾಗಿದ್ದ ಅವರು. ಏಳು ಬಾರಿ‌ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಎರಡು ಬಾರಿ ಶಾಸಕರಾಗಿದ್ದರು. ವಯೋಸಹಜ ಅನಾರೋಗ್ಯಕ್ಕೆ ತುತ್ತಾಗಿ ರಾಮ್ ಭಟ್ ಅವರನ್ನು ಕೆಲ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲಿಸಿದ್ದರೂ ಮತ್ತೆ ಮನೆಗೆ ಕರೆ ತರಲಾಗಿತ್ತು. ಇಂದು ಮನೆಯಲ್ಲೇ ವಿಧಿವಶರಾಗಿದ್ದಾರೆ. ರಾಮ್ ಭಟ್ ಜನಸಂಘದ ಪ್ರಭಾವಿ ನಾಯಕರಾಗಿ, ಬಿಜೆಪಿಯ ಮುಂಚೂಣಿ ನಾಯಕರಾಗಿದ್ದರು.

ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ ಚುನಾವಣಾ ಪೂರ್ವ ಸಿದ್ಧತಾ ಸಭೆ

Monday, December 6th, 2021
Manjunath Bhandary

ಮಂಗಳೂರು  : ವಿಧಾನ ಪರಿಷತ್ತಿಗೆ ದ.ಕ. ಸ್ಥಳೀಯ ಪ್ರಾಧಿಕಾರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಅವರ ಗೆಲುವಿಗೆ ಸಂಬಂಧಿಸಿ ಚುನಾವಣಾ ಪೂರ್ವ ಸಿದ್ಧತಾ ಸಭೆ ಸೋಮವಾರ ನಗರದ ಓಶಿಯನ್ ಪರ್ಲ್ ಹೊಟೇಲ್ ಸಭಾಂಗಣದಲ್ಲಿ ಜರಗಿತು. ಡಿ. 4 ರಂದು ನಡೆದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಎಲ್ಲಾ 13 ವಿಧಾನ ಸಭಾಕ್ಷೇತ್ರಗಳ ಎರಡೆರಡು ಬ್ಲಾಕ್‌ಗಳ ಅಧ್ಯಕ್ಷರು ಮತ್ತು ಪಕ್ಷದ ವೀಕ್ಷಕರ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಸೋಮವಾರದ ಈ ಸಭೆ ಜರಗಿದ್ದು, ಎಲ್ಲಾ 13 […]

ಧರ್ಮಸ್ಥಳ ವಸತಿ ಛತ್ರದ ನಿವೃತ್ತ ಪ್ರಬಂಧಕ ಸುರೇಂದ್ರ ಬಲ್ಲಾಳ್ ನಿಧನ

Monday, December 6th, 2021
Surendra Ballal

ಉಜಿರೆ: ಧರ್ಮಸ್ಥಳ ಗ್ರಾಮದ ನಿವಾಸಿ ಸುರೇಂದ್ರ ಬಲ್ಲಾಳ್ (66) ಸೋಮವಾರ ಹೃದಯಾಘಾತದಿಂದ ನಿಧನರಾದರು. ಅವರು ಕಬಡ್ಡಿ ಆಟಗಾರರಾಗಿದ್ದು ಹಲವಾರು ಪಂದ್ಯಗಳಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ್ದರು. ಧರ್ಮಸ್ಥಳದಲ್ಲಿ ದೇವಸ್ಥಾನದ ವಸತಿ ಛತ್ರದಲ್ಲಿ ಪ್ರಬಂಧಕರಾಗಿ ಅವರು ಮೂವತ್ತು ವರ್ಷ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ಅವರಿಗೆ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ.

ಕಾಲೇಜು ವಿದ್ಯಾರ್ಥಿಗಳಿಂದ ಪೊಲೀಸರಿಗೆ ಇಂಟರ್ ಲಾಕ್ ಹಾಗೂ ಕಲ್ಲಿನಿಂದ ಹಲ್ಲೆ, 9 ಮಂದಿ ಆರೋಪಿಗಳ ಬಂಧನ

Friday, December 3rd, 2021
Gujjarakere Attack

ಮಂಗಳೂರು: ಯೆನೆಪೋಯ ಕಾಲೇಜಿನ ವಿದ್ಯಾರ್ಥಿಗಳ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದ್ದು  ರಕ್ಷಣೆಗೆ ಧಾವಿಸಿದ ಪೊಲೀಸ್ ಸಿಬ್ಬಂದಿ ಮೇಲೆಯೂ ಹಲ್ಲೆ  ಮಡಿದ ಘಟನೆ ನಡೆದಿದೆ. ಈ ಪ್ರಕರಣಗಳಲ್ಲಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದಿತ್ಯ, ಕೆನ್ ಜಾನ್ಸನ್, ಮುಹಮ್ಮದ್, ಅಬ್ದುಲ್ ಶಾಹಿದ್, ವಿಮಲ್, ಫಹಾದ್, ಅಬು ತಹರ್, ಮುಹಮ್ಮದ್ ನಾಸಿಫ್, ಆದರ್ಶ ಎಂದು ಗುರುತಿಸಲಾಗಿದ್ದು, ಒಟ್ಟು 16 ಮಂದಿ ವಿರುದ್ದ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಹಾಗೂ ಐದು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. […]