ಈಜುಕೊಳದಲ್ಲಿ ಉಸಿರು ಬಿಗಿ ಹಿಡಿದು, ಪಲ್ಟಿ ಹೊಡೆದು ವಿಶ್ವ ದಾಖಲೆ

Wednesday, October 16th, 2024
Hadriyan

ಮಂಗಳೂರು: ಈಜುಕೊಳದ ಒಳಗೆ ಉಸಿರು ಬಿಗಿ ಹಿಡಿದು 37 ಸೆಕೆಂಡ್ಸ್‌ಗಳಲ್ಲಿ 26 ಸೋಮರ್‌ಸಾಲ್ಟ್ಸ್‌(ಪಲ್ಟಿ) ಮೂಲಕ ನೊಬೆಲ್‌ ವಿಶ್ವ ದಾಖಲೆ ನಿರ್ಮಿಸಿರುವ ಮಂಗಳೂರಿನ 13ರ ಹರೆಯದ ಬಾಲಕ ಹ್ಯಾಡ್ರಿಯನ್‌ ವೇಗಸ್‌ನನ್ನು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಸನ್ಮಾನಿಸಿ ಈ ಅಪರೂಪದ ಪ್ರತಿಭೆಯನ್ನು ಪ್ರೋತ್ಸಾಹಿಸಿದ್ದಾರೆ. ಮಂಗಳೂರಿನ ಕಾರ್ಮೆಲ್‌ ಸಿಬಿಎಸ್‌ಸಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಹ್ಯಾಡ್ರಿಯನ್‌ ವೇಗಸ್‌ ಮಂಗಳೂರಿನ ಎಮ್ಮೆಕೆರೆ ಅಂತಾರಾಷ್ಟ್ರೀಯ ಈಜುಕೊಳದಲ್ಲಿ ಈ ಸಾಧನೆಯನ್ನು ಮಾಡಿ ಗಮನಸೆಳೆದಿದ್ದಾನೆ. 15 ವರ್ಷದೊಳಗಿನ ವಯೋಮಾನದಲ್ಲಿ ನೀರೊಳಗಿನ ಪಲ್ಟಿ […]

ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ : ಸ್ವಾಮಿ ವಿವೇಕಚೈತನ್ಯಾನಂದಜಿ

Wednesday, October 16th, 2024
Viveka Chaitanya

ಮಂಗಳೂರು : “ಸ್ವಾಮಿ ವಿವೇಕಾನಂದರು ಭವ್ಯ ವ್ಯಕ್ತಿತ್ವದ ಮಾದರಿ. ಅವರ ವ್ಯಕ್ತಿತ್ವವು ಅಸಾಧಾರಣ ಧೈರ್ಯ, ಜ್ಞಾನ ಮತ್ತು ಸಹಾನುಭೂತಿ ಮಿಶ್ರಿತವಾಗಿತ್ತು. ಅವರು ತಮ್ಮ ಜೀವನವನ್ನು ಮಾನವೀಯತೆ ಮತ್ತು ಸಾಮಾಜಿಕ ಉನ್ನತಿಗೆ ಸಮರ್ಪಿಸಿದರು. 1893 ರ ಚಿಕಾಗೋ ಧರ್ಮಸಮ್ಮೇಳನದಲ್ಲಿ ಅವರು ಮಾಡಿದ ಪ್ರಭಾವಶಾಲಿ ಭಾಷಣವು ಅವರ ಬುದ್ಧಿವಂತಿಕೆಯ ಮತ್ತು ಆತ್ಮಶಕ್ತಿಯ ಸಮ್ಮಿಲನವನ್ನು ಸಿದ್ಧಪಡಿಸಿತು. ವಿವೇಕಾನಂದರು ಯುವಕರಲ್ಲಿ ಶ್ರದ್ಧೆ, ಆತ್ಮವಿಶ್ವಾಸ ಮತ್ತು ಶಕ್ತಿ ತುಂಬಿದವರು. ಅವರ ಪ್ರಸಿದ್ಧ ಪಥೋಪದೇಶ, ‘ಉತ್ತಿಷ್ಠತ, ಜಾಗೃತಃ’, ಯುವಕರಿಗೆ ಶ್ರೇಷ್ಠತೆಯ ಮಾರ್ಗದರ್ಶನ ನೀಡಿದವು. ಅವರ ದಿವ್ಯ […]

ನೆಲ್ಲಿತೀರ್ಥ ಗುಹಾಲಯದಲ್ಲಿ ಅಕ್ಟೊಬರ್ 17 ರಂದು ಗುಹಾ ಪ್ರವೇಶ ಆರಂಭ

Wednesday, October 16th, 2024
Nellitirtha

ಮಂಗಳೂರು : ಕರ್ನಾಟಕದ ಅತಿದೊಡ್ಡ ಗುಹಾ ದೇವಾಲಯಗಳಲ್ಲಿ ಒಂದಾಗಿರುವ ಶ್ರೀ ಕ್ಷೇತ್ರ ನೆಲ್ಲಿತೀರ್ಥ ಸೋಮನಾಥೇಶ್ವರ ಗುಹಾಲಯದಲ್ಲಿ ಅಕ್ಟೊಬರ್ 17 ನಡೆಯುವ ಗುಹಾ ಪ್ರವೇಶದ ಬಗ್ಗೆ ಧರ್ಮದರ್ಶಿ ಹರಿಕೃಷ್ಣ ಪುನರೂರು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವರಣೆ ನೀಡಿದರು. ಪ್ರತಿ ವರ್ಷ ತುಲಾ ಸಂಕ್ರಮಣದ ಶುಭ ದಿನದಿಂದ ‘ಮೇಷ ಸಂಕ್ರಮಣ’ದವರೆಗೆ ನೆಲ್ಲಿತೀರ್ಥ ಗುಹೆಗೆ ಪ್ರವೇಶಿಸಲು ಮತ್ತು ‘ತೀರ್ಥ ಸ್ನಾನ’ ಮಾಡಲು ಜನರಿಗೆ ಅವಕಾಶವಿದೆ. ಈ ವರ್ಷದ, ಸಮಾರಂಭವು 2024 ರ ಅಕ್ಟೋಬರ್ 17 ರಿಂದ ಪ್ರಾರಂಭವಾಗುತ್ತದೆ ಎಂದು ಹರಿಕೃಷ್ಣ ಪುನರೂರು […]

ಮಂಗಳೂರು : ಖಾಸಗಿ ಬಸ್ ಕಂಡಕ್ಟರ್ ಮೇಲೆ ಕಲ್ಲು ಎತ್ತಿಹಾಕಿ ಕೊಲೆ, ದುಷ್ಕರ್ಮಿಗಳಿಗೆ ಶೋಧ

Tuesday, October 15th, 2024
Rajesh-conductor

ಮಂಗಳೂರು : ಖಾಸಗಿ ಬಸ್ ಕಂಡಕ್ಟರ್ ಒಬ್ಬರನ್ನು ದುಷ್ಕರ್ಮಿಗಳು ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರುವ ಘಟನೆ ಸ್ಟೇಟ್‌ಬ್ಯಾಂಕ್ ಬಳಿ ಇರುವ ಇಂದಿರಾ ಕ್ಯಾಂಟೀನ್ ಪರಿಸರದಲ್ಲಿ ನಡೆದಿದೆ. ಮಂಗಳೂರು-ವಿಟ್ಲ ನಡುವೆ ಸಂಚರಿಸುವ ಖಾಸಗಿ ಬಸ್‌ನಲ್ಲಿ ನಿರ್ವಾಹಕರಾಗಿದ್ದ ರಾಜೇಶ್ (30) ಮೃತಪಟ್ಟವರು. ಸ್ಟೇಟ್‌ಬ್ಯಾಂಕ್, ಲೇಡಿಗೊಶನ್ ಗಾಂಜಾ, ದರೋಡೆ, ಪಿಕ್ ಪಾಕೆಟ್ ಗೆ ಹೆಸರುವಾಸಿಯಾಗಿದ್ದು ಲೂಟಿ ಮಾಡುವ ಸಂದರ್ಭ ಪ್ರತಿರೋಧ ಒಡ್ಡಿರುವುದಕ್ಕೆ ದುಷ್ಕರ್ಮಿಗಳು ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ರಾಜೇಶ್ ಸಂಬಂಧಿಕರು ಯಾರೆಂದು ಸಹೋದ್ಯೋಗಿಗಳಿಗೆ ತಿಳಿದಿಲ್ಲ. ಪ್ರತಿ […]

ಮಂಗಳೂರು ಶಾರದಾ ಮಹೋತ್ಸವ ಸಮಾಪನ

Tuesday, October 15th, 2024
Venkataramana-Sharadhe

ಮಂಗಳೂರು : ಮಂಗಳೂರು ಶ್ರೀ ವೆಂಕಟರಮಣ ದೇವಾಲಯ ಆಚಾರ್ಯ ಮಠ ವಠಾರದ 102ನೇ ಶ್ರೀ ಶಾರದಾ ಮಹೋತ್ಸವ ಕಾರ್ಯಕ್ರಮ ಆಕ್ಟೋಬರ್ 8ರಿಂದ ಆರಂಭಗೊಂಡು 14 ರಂದು ಅತ್ಯಂತ ವೈಭವಯುತವಾಗಿ ನಡೆಯಿತು. 2 ವರ್ಷದ ಹಿಂದೆಯಷ್ಟೇ ನೂರನೇ ವರ್ಷದ ಶಾರದಾ ಮಹೋತ್ಸವವನ್ನು ಶ್ರೀ ಶಾರದಾ ಮಹೋತ್ಸವ ಸಮಿತಿ ಅತ್ಯಂತ ವೈಭವಪೂರ್ಣವಾಗಿ ನಡೆಸಿತ್ತು. ಅದೇ ರೀತಿ ಸಂಭ್ರಮದಿಂದ ಈ ಮಹೋತ್ಸವನ್ನು ಶ್ರಧ್ಧ ಭಕ್ತಿಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಮಂಗಳೂರು ನಗರ ಹಾಗೂ ಪರವೂರಿನ ಭಕ್ತಾದಿಗಳು ತನುಮನ ಸಹಾಯ ನೀಡಿ ಕಾರ್ಯಕ್ರಮವನ್ನು ಅತ್ಯಂತ […]

ಒಕ್ಕೂಟ ರಚನೆಗೆ ನಿರ್ಧಾರ, ಜಿಲ್ಲಾ ಶಾಮಿಯಾನ ಮಾಲೀಕರ ಸಂಘ ಜಂಟಿ ಸಮಾಲೋಚನಾ ಸಭೆ

Tuesday, October 15th, 2024
District-shamiyana

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಶಾಮಿಯಾನ ಮಾಲೀಕರ ಸಂಘದ ನೇತೃತ್ವದಲ್ಲಿ ಜಿಲ್ಲಾ ಕ್ಯಾಟರಿಂಗ್, ಧ್ವನಿ, ಬೆಳಕು ಹಾಗೂ ಪ್ಲವರ್ ಡೆಕೋರೇಶನ್ ಮಾಲೀಕರ ಸಂಘಗಳ ಜಂಟಿ ಸಮಾಲೋಚನಾ ಸಭೆ ಶಾಮಿಯಾನ ಮಾಲೀಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಕೆ. ವಿಟ್ಲ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದು, ಒಕ್ಕೂಟ ರಚನೆಗೆ ನಿರ್ಧರಿಸಲಾಯಿತು. ಏಕರೂಪಿ ದರ ಪಟ್ಟಿ ಪಾಲನೆ, ಬಿಲ್ ವಸೂಲಾತಿ ಮೊದಲಾದ ಸಮಸ್ಯೆಗಳನ್ನು ಸರಿಪಡಿಸಲು ಒಗ್ಗಟ್ಟಿನಲ್ಲಿ ಸಮನ್ವಯತೆಯಿಂದ ಗ್ರಾಹಕರಿಗೆ ನ್ಯಾಯಯುತ ಸೇವೆ ನೀಡಲು ಒಕ್ಕೂಟ ರಚನೆಯಿಂದ […]

ಮಂಗಳೂರು ದಸರಾದಲ್ಲಿ ಗಮನಸೆಳೆದ ಪಿಲಿ ಅಜನೆ

Tuesday, October 15th, 2024
Pili-Ajane

ಮಂಗಳೂರು : ಮಂಗಳೂರು ದಸರಾ ಸಂಭ್ರಮಾಚರಣೆ ಪ್ರಯುಕ್ತ ತುಳುನಾಡ ಸಾಂಪ್ರದಾಯಿಕ ಕಲೆಯ ಗತ್ತಿನ ಪ್ರದರ್ಶನ ‘ಪಿಲಿ ಅಜನೆ’ ಕಾರ್ಯಕ್ರಮವು ಪ್ರಮೋದ್ ಕರ್ಕೇರ ನೇತೃತ್ವದಲ್ಲಿ, ರವಿರಾಜ್ ಚೌಟ ಸಹಭಾಗಿತ್ವದಲ್ಲಿ ಮಂಗಳೂರಿನ MG ರಸ್ತೆಯಲ್ಲಿರುವ ಹೊಟೇಲ್ ದೀಪಾ ಕಂಫರ್ಟ್ಸ್ ನ ಹತ್ತಿರ ನಡೆಯಿತು. ಎಬಿವಿಪಿ ಪ್ರಮುಖ, ಮಂಗಳೂರಿನ ನಾರಾಯಣ ಗುರು ಕಾಲೇಜಿನ ಉಪನ್ಯಾಸಕರಾದ ಕೇಶವ ಬಂಗೇರಾ ಅವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ […]

ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು

Sunday, October 13th, 2024
vivekananda-pu-girls

ಪುತ್ತೂರು : ವಿದ್ಯಾಭಾರತಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟವು ಸರಸ್ವತಿ ವಿದ್ಯಾಮಂದಿರ, ಹರ್ದಾ,ಮಧ್ಯಪ್ರದೇಶ ಇಲ್ಲಿ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಬಾಲಕಿಯರ ತಂಡವು ಈ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತದೆ. ಅಕ್ಟೋಬರ್‌ 15ರಿಂದ 19ರ ವರೆಗೆ ನಡೆಯಲಿರುವ ಈ ಪಂದ್ಯಾಟದಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯರಾದ ಪ್ರಣತಿ, ಕಾರ್ತಿಕಾ,ಧನುಶ್ರೀ,ತ್ರಿಶಾ ಹಾಗೂ ಪ್ರಥಮ ಪಿಯುಸಿ ವಿದ್ಯಾರ್ಥಿನಿಯರಾದ ಆದ್ಯಾ ಬಿ.ಆರ್‌, ವರ್ಷಾ.ಕೆ, ಯಜ್ಞಾ,ವೀಕ್ಷಾ ಪಿ,ಶ್ರಾವ್ಯ.ಯು, ತ್ರಿಶಾಲಿ ಕೆ.ಆರ್‌,ರಕ್ಷಾ ಎ.ಎಲ್, ಗ್ರೀಷ್ಮಾ ಎಸ್.ಎ ಭಾಗವಹಿಸುವರು. ಇವರಿಗೆ ಕಾಲೇಜಿನ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕ ಹಾಗೂ ಉಪನ್ಯಾಸಕೇತರ […]

ರಾಘವೇಂದ್ರ ಅವರಿಗೆ ಪಿಎಚ್‌ಡಿ ಪ್ರಶಸ್ತಿ ಪ್ರದಾನ

Saturday, October 12th, 2024
Raghavendra

ಮಂಗಳೂರುಃ ‘ಉದ್ಯಮಶೀಲತೆ ಅಭಿವೃದ್ಧಿಯಲ್ಲಿ ಶಿಕ್ಷಣದ ಪಾತ್ರಃ ಒಂದು ಅಧ್ಯಯನ “ಎಂಬ ಪ್ರೌಢ ಪ್ರಬಂಧಕ್ಕಾಗಿ ವಾಣಿಜ್ಯ ವಿಭಾಗದ ಸಂಶೋಧಕ ರಾಘವೇಂದ್ರ ಅವರಿಗೆ ಮಂಗಳೂರು ವಿಶ್ವವಿದ್ಯಾಲಯ ಡಾಕ್ಟರೇಟ್ ಆಫ್ ಫಿಲಾಸಫಿ (ಪಿಎಚ್‌ಡಿ) ಪದವಿ ನೀಡಿದೆ. ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ನಿವೃತ್ತ ಸಹ ಪ್ರಾಧ್ಯಾಪಕ ಉದಯಕುಮಾರ್ ಎಂ.ಎ, ಸಂಶೋಧಕರಿಗೆ ಯಶಸ್ವಿಯಾಗಿ ಮಾರ್ಗದರ್ಶನ ನೀಡಿದ್ದಾರೆ

ಪಕ್ಷಕ್ಕಾಗಿ ಪ್ರಾಣ ತ್ಯಾಗ ಮಾಡಿದ ಕಾರ್ಯಕರ್ತನಿಗೆ ಡಾ.ಭರತ್ ಶೆಟ್ಟಿ ನೆರವಿನಿಂದ ಬಿಜೆಪಿ ಮಂಡಲ ಯುವ ಮೋರ್ಚಾದಿಂದ ಸೂರು ಭಾಗ್ಯ

Monday, October 7th, 2024
Sooru-Bagya

ಅರ್ಕುಳ : ಪಕ್ಷಕ್ಕಾಗಿ ತನ್ನಪ್ರಾಣವನ್ನೇ ತ್ಯಾಗ ಮಾಡಿದ ಕಾರ್ಯಕರ್ತನ ಕುಟುಂಬಕ್ಕೆ ಆಸರೆಯಾದ ಶಾಸಕರಾದ ಡಾ. ಭರತ್ ಶೆಟ್ಟಿ ವೈ ಹಾಗೂ ಉತ್ತರ ಮಂಡಲ ಬಿಜೆಪಿ ಯುವ ಮೋರ್ಚ ತಂಡವು ಆ ಕಾರ್ಯಕರ್ತ ತನ್ನ ತ೦ದೆ ತಾಯಿಗೆ ಮನೆಯೊಂದನ್ನು ನಿರ್ಮಿಸಿ ಕೊಡಬೇಕೆಂಬ ಕನಸನ್ನು ಈಡೇರಿಸಿ ಧನ್ಯರಾಗಿದ್ದಾರೆ. ರವಿವಾರ ಮನೆ ಹಸ್ತಾಂತರ ಕಾರ್ಯಕ್ರಮದಲ್ಲಿ ಆ ಕಾರ್ಯಕರ್ತನ ಪೋಷಕರ ಕಣ್ಣಾಲಿಗಳು ತುಂಬಿ ಒಂದು ಕಣ್ಣೀರ ಹನಿಯ ಮೂಲಕ ಕೃತಜ್ಞತೆಯ ಭಾವ ಹೊರಬ೦ದಿತು. 2004ರಲ್ಲಿ ಚುನಾವಣೆಯ ಸಂದರ್ಭ ಅರ್ಕುಳದ ವಳಚ್ಚಿಲ್ ಗ್ರಾಮದ ಬಿಜೆಪಿ […]