ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಿಂದ ಸನ್ಮಾನ

Tuesday, November 9th, 2021
Harekala Hajabba

ಮಂಗಳೂರು :  ನವದೆಹಲಿಯಲ್ಲಿ ರಾಷ್ಟ್ರಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿ, ಇಂದು ಬೆಳಿಗ್ಗೆ ಮಂಗಳೂರಿಗೆ ಆಗಮಿಸಿದ  ಅಕ್ಷರ ಸಂತ ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬ ಅವರನ್ನು ನಗರದ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿ ನ.9ರ ಮಂಗಳವಾರ ಬೆಳಿಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಅವರು ಆತ್ಮೀಯವಾಗಿ ಸ್ವಾಗತಿಸಿ, ಸನ್ಮಾನಿಸಿದರು. ಅಧಿಕಾರಿಗಳು ಉಪಸ್ಥಿತರಿದ್ದರು.

10 ರಿಂದ ಮನೆ ಮನೆಗೆ ಲಸಿಕಾಮಿತ್ರ: ನೂತನ ಲಸಿಕಾ ಅಭಿಯಾನ

Monday, November 8th, 2021
Vacination

ಮಂಗಳೂರು : ಈಗಾಗಲೇ ಪ್ರಥಮ ಡೋಸ್ ಪಡೆದು, ಎರಡನೇ ಡೋಸ್‌ಗೆ ಬಾಕಿ ಉಳಿದಿರುವ ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಕೋವಿಡ್ ಲಸಿಕೆ ನೀಡುವ ಮನೆಮನೆಗೆ ಲಸಿಕಾ ಮಿತ್ರ ವಿನೂತನ ಅಭಿಯಾನಕ್ಕೆ ಇದೇ ನವೆಂಬರ್  10 ರಂದು ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್ ತಿಳಿಸಿದರು. ಅವರು ಮಂಗಳೂರು ಮಹಾನಗರ ಪಾಲಿಕೆಯ ಕೋವಿಡ್ ವಾರ್ ರೂಂನಲ್ಲಿ ನ.8ರ ಸೋಮವಾರ ಸಂಜೆ ಹಮ್ಮಿಕೊಳ್ಳಲಾಗಿದ್ದ ಮನೆ ಮನೆಗೆ ಲಸಿಕಾ ಅಭಿಯಾನದ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ […]

ಪತ್ರಕರ್ತರ ಅಗತ್ಯಗಳಿಗೆ ಮಾಧ್ಯಮ ಅಕಾಡೆಮಿ ಸ್ಪಂದಿಸುವಂತಾಗಲಿ: ಎನ್. ಶಶಿಕುಮಾರ್

Monday, November 8th, 2021
Madhyama Academy

ಮಂಗಳೂರು : ಕರ್ನಾಟಕ ಮಾಧ್ಯಮ ಅಕಾಡೆಮಿ ದ.ಕ. ಜಿಲ್ಲೆ ಸೇರಿದಂತೆ ಎಲ್ಲಾ ಪತ್ರಕರ್ತರ ಸಮಸ್ಯೆ, ಅಗತ್ಯಗಳನ್ನು ಅರಿತುಕೊಂಡು ಅವುಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ ಎಂದು ಮಂಗಳೂರು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅಶಯ ವ್ಯಕ್ತಪಡಿಸಿದ್ದಾರೆ. ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಪ್ರೆಸ್‌ಕ್ಲಬ್ ಹಾಗೂ ಪತ್ರಿಕಾ ಭವನ ಟ್ರಸ್ಟ್ ವತಿಯಿಂದ ಕರ್ನಾಟಕ ಮಾಧ್ಯಮ ಅಧ್ಯಕ್ಷ ಸದಾಶಿವ ಶೆಣೈ ಅವರಿಗೆ ನಗರದ ಪ್ರೆಸ್‌ಕ್ಲಬ್‌ನಲ್ಲಿ ಸನ್ಮಾನ ನೆರವೇರಿಸಿ ಅವರು ಮಾತನಾಡಿದರು. ಸರಕಾರ ಮತ್ತು ಸಮಾಜದ ನಡುವಿನ ಕೊಂಡಿಯಾಗಿ ಕಾರ್ಯ […]

ಕೋಳಿ ಬೇಟೆಗೆ ಬಂದು ಬಾವಿಗೆ ಬಿದ್ದ ಚಿರತೆ

Monday, November 8th, 2021
chita

ಸುಬ್ರಹ್ಮಣ್ಯ : ಕೋಳಿಯ ಬೇಟೆಯಲ್ಲಿದ್ದ ಚಿರತೆಯೊಂದು ಬಾವಿಗೆ ಬಿದ್ದ ಘಟನೆ ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಮರ್ಕಜೆಯಲ್ಲಿ  ನಡೆದಿದೆ. ಅರಣ್ಯ ಇಲಾಖೆ ಸಿಬ್ಬಂದಿ ಯಶಸ್ವಿ ಕಾರ್ಯಾಚರಣೆ ನಡೆಸಿ ಚಿರತೆಯನ್ನು ರಕ್ಷಿಸಿದ್ದಾರೆ. ಚಿರತೆ ಕಮರ್ಕಜೆ ನಿವಾಸಿ ರಾಮಯ್ಯ ಗೌಡ ಎಂಬುವರ ಮನೆಯ ಮುಂಭಾಗದ ಬಾವಿಗೆ ಬಿದ್ದಿತ್ತು. ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಈ ಕುರಿತು ಮಾಹಿತಿ ತಿಳಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ ಸೂಕ್ತ ಭದ್ರತೆಯೊಂದಿಗೆ ನಿನ್ನೆ ಸಂಜೆ ವೇಳೆ ರಕ್ಷಣಾ ಕಾರ್ಯವನ್ನು ಆರಂಭಿಸಿದ್ದರು. ಬಾವಿಯ ಕಟ್ಟೆ ಸಮೀಪ ಬೋನ್ ಇಟ್ಟು […]

ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ರೌಡಿಶೀಟರ್

Monday, November 8th, 2021
ಬಾಲಕಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ ಎಸಗಿದ ರೌಡಿಶೀಟರ್

ಮಂಗಳೂರು : ಬಾಲಕಿಗೆ ಪ್ರಜ್ಞೆ ತಪ್ಪಿಸಿ ಅತ್ಯಾಚಾವೆಸಗಿರುವ ಆರೋಪದ ಮೇಲೆ ರೌಡಿಶೀಟರ್ನನ್ನು ನಗರದ ಪಾಂಡೇಶ್ವರ ಮಹಿಳಾ ಪೊಲೀಸರು ಪೋಕ್ಸೋ ಪ್ರಕರಣದಡಿ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಳೆಯ ರೌಡಿಶೀಟರ್ ನವೀನ್ ಸಿಕ್ವೇರ (34) ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿ ನವೀನ್ ಸಿಕ್ವೇರ ಸಂತ್ರಸ್ತ ಬಾಲಕಿಯ ಸಹೋದರನೊಂದಿಗೆ ಗೆಳೆತನವಿತ್ತು. ಈ ಹಿನ್ನೆಲೆ ಆರೋಪಿ ಬಾಲಕಿಯ ಮನೆಗೆ ಕೆಲವೊಮ್ಮೆ ಬಂದು ಹೋಗುತ್ತಿದ್ದ. ಇತ್ತೀಚೆಗೆ ಆರೋಪಿ ಬಾಲಕಿಯ ಮನೆಗೆ ಯಾರೂ ಇಲ್ಲದ ಸಂದರ್ಭ ಬಂದಿದ್ದು, ಈ ಸಂದರ್ಭ ಜ್ಯೂಸ್‌ನಲ್ಲಿ ಅಮಲು ಪದಾರ್ಥ […]

ವಿಭಜನೆಯಿಲ್ಲದ ಭಜನೆಯ ಕಂಠಗಳು ಎಲ್ಲೆಡೆ ಮೊಳಗಲಿ : ಶ್ರೀ ಮೋಹನದಾಸ ಪರಮಸಿಂಹ ಸ್ವಾಮೀಜಿ

Sunday, November 7th, 2021
Bhajane

ಮಂಗಳೂರು : ಭಜನೆ ಎಂದರೆ ಕೇವಲ ಹಾಡುವುದೆಂದಷ್ಟೇ ಅರ್ಥವಲ್ಲ. ಭಕ್ತಿ, ಜಪ, ನೆನವರಿಕೆ ಮಾಡುತ್ತಾ ಭಗವಂತನಿಗೆ ಹತ್ತಿರವಾಗುವುದು. ಆಧ್ಯಾತ್ಮಕ ಪ್ರಭಾವಲಯವನ್ನು ವೃದ್ಧಿಸಿಕೊಳ್ಳುವುದೇ ಆಗಿದೆ. ಇಂದು ಕೊರೋನದಂತಹ ಕಷ್ಟ ಕಾಲದಲ್ಲಿ ನಮ್ಮ ಪೀಳಿಗೆ ಸನಾತನೀಯವಾದ ಧರ್ಮದ ಸಾರವನ್ನು ಮರೆತಿವೆ. ಅವರನ್ನು ಪುನಃ ಧಾರ್ಮಿಕ ಹಳಿಗೆ ತಂದು ಈ ರಾಷ್ಟ್ರವನ್ನು ಪ್ರೀತಿಸುವ ಪ್ರಜೆಗಳನ್ನಾಗಿಸುವ ಕಾರ್ಯ ನಡೆಯಬೇಕಿದೆ. ಅಲ್ಲಲ್ಲಿ ಅಲ್ಲಲ್ಲಿ ಇಂತಹಾ ಜನಜಾಗೃತಿಯ ಕಾರ್ಯ ಆಗಬೇಕು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಇಂತಹ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬರುತ್ತಿದ್ದು, ಜನಮನವನ್ನು ತಲುಪಿದೆ. […]

ಐಸ್ ಕ್ರೀಮ್ ನ ಸಂಸ್ಥಾಪಕ ಪ್ರಭಾಕರ್ ಕಾಮತ್ ಇನ್ನಿಲ್ಲ

Saturday, November 6th, 2021
Prabhakara Kamath

ಮಂಗಳೂರು: ನಗರದ ಪ್ರಖ್ಯಾತ ಐಡಿಯಲ್ ಐಸ್ ಕ್ರೀಮ್ ನ ಸಂಸ್ಥಾಪಕ ಶಿಬರೂರು ಪ್ರಭಾಕರ್ ಕಾಮತ್ ಅವರು ಶನಿವಾರ ಬೆಳಗ್ಗೆ 3.30ಕ್ಕೆ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರಿಗೆ 79 ವರ್ಷ ವಯಸ್ಸಾಗಿತ್ತು. ಅವರಿಗೆ ಐಡಿಯಲ್ ಐಸ್‌ ಕ್ರೀಂನ ಮಾಲಕ ಮುಕುಂದ ಕಾಮತ್ ಸೇರಿದಂತೆ ಒಂದು ಗಂಡು ಎರಡು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. ‘ಪಬ್ಬ ಮಾಮ್’ ಎಂದೇ ಪ್ರಖ್ಯಾತರಾಗಿದ್ದ ಪ್ರಭಾಕರ್ ಕಾಮತ್ ಅವರು 1975ರಲ್ಲಿ ಮಂಗಳೂರಿನಲ್ಲಿ ಮೊದಲ ಐಡಿಯಲ್ ಐಸ್ ಕ್ರೀಮ್ ಮಳಿಗೆ ಆರಂಭಿಸಿದ್ದರು. ಸ್ವತಃ ಐಸ್ ಕ್ರೀಮ್ ತಯಾರಿ […]

ಕ್ಯಾಶ್ಯೂ ಫ್ಯಾಕ್ಟರಿ ಗೋಡೆ ಕುಸಿದು, ವ್ಯಕ್ತಿ ಸಾವು

Friday, November 5th, 2021
wall Colapse

ಸುಳ್ಯ: ಕ್ಯಾಶ್ಯೂ ಫ್ಯಾಕ್ಟರಿಯೊಂದರ ಗೋಡೆ ಮಗುಚಿ ಬಿದ್ದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಶುಕ್ರವಾರ ಸುಳ್ಯದ ಗಾಂಧಿನಗರ ಎಂಬಲ್ಲಿ ನಡೆದಿದೆ. ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯ ಹಳೆ ಕಟ್ಟಡದ ಗೋಡೆ ಕುಸಿದು ಬಿದ್ದ ಪರಿಣಾಮ, ಅಬ್ದುಲ್ ಖಾದರ್ ಎಂಬ ವ್ಯಾಪಾರಿ ಮೃತಪಟ್ಟಿದ್ದಾರೆ. ಇವರು ಕಳೆದ ಹಲವು ವರ್ಷಗಳಿಂದ ಸುಳ್ಯದ ಎಪಿಎಂಸಿ ಬಳಿ ಗುಜರಿ ವಸ್ತುಗಳ ವ್ಯಾಪಾರ ಹಾಗೂ ಹಳೆ ಕಟ್ಟಡಗಳ ಕಬ್ಬಿಣ ಸಾಮಗ್ರಿಗಳನ್ನು ಖರೀದಿಸಿ ಮಾರಾಟ ಮಾಡುತ್ತಿದ್ದರು. ಕಳೆದ ವರ್ಷ ಮಲ್ನಾಡು ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ವ್ಯವಹಾರ ಸ್ಥಗಿತಗೊಂಡಿತ್ತು. ಹೀಗಾಗಿ, […]

ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನಿಗೆ ಹಲ್ಲೆ, ಮಕ್ಕಳ ಕಲ್ಯಾಣ ಇಲಾಖೆಗೆ ದೂರು

Friday, November 5th, 2021
Arecanut Thief

ಸುಳ್ಯ :  ಅಡಿಕೆ ಕದ್ದಿದ್ದಾನೆ ಎಂದು ಆರೋಪಿಸಿ ಬಾಲಕನಿಗೆ ಹಲ್ಲೆ ನಡೆಸುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಗುತ್ತಿಗಾರಿನ ಸಮೀಪದ ಪುರ್ಲುಮಕ್ಕಿಯಲ್ಲಿ ಕಳೆದ ವಾರ  ನಡೆದ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಹಲ್ಲೆಗೊಳಗಾದ ಬಾಲಕ ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ್ದು ಹಲ್ಲೆ ನಡೆಸಿದ 10 ಮಂದಿಯ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. ಗುತ್ತಿಗಾರಿನ 16 ವರ್ಷದ ಬಾಲಕನಿಗೆ ಅಡಿಕೆ ಕದ್ದ ಆರೋಪದಲ್ಲಿ ಮಾರಣಾಂತಿಕ ಹಲ್ಲೆ ಮಾಡಲಾಗಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿತ್ತು. […]

ದೀಪಾವಳಿ ಪಟಾಕಿ ಸಿಡಿಸಿ ಬರುತ್ತಿದ್ದ ವ್ಯಕ್ತಿಯನ್ನು ಕೊಂದ ತಂದೆ ಮಗ

Friday, November 5th, 2021
Vinayaka Kamath

ಮಂಗಳೂರು: ದೀಪಾವಳಿ ಹಬ್ದ ಪಟಾಕಿ ಸಿಡಿಸಿ ಮನೆಗೆ ಬರುತ್ತಿದ್ದ ವೇಳೆ ಜಗಳ ನಡೆದಿದ್ದು, ಈ ವೇಳೆಗೆ  ಚೂರಿಯಿಂದ ಇರಿದು ವ್ಯಕ್ತಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಂಗಳೂರಿನ ಕಾರ್ ಸ್ಟ್ರೀಟ್ನಲ್ಲಿ ನಡೆದಿದೆ. ಘಟನೆ ಸಂಬಂಧ ಆರೋಪಿಗಳನ್ನು ಬಂದರು ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಕಾರ್ ಸ್ಟ್ರೀಟ್ ನಿವಾಸಿ ವಿನಾಯಕ ಕಾಮತ್ ಕೊಲೆಯಾದ ವ್ಯಕ್ತಿ. ಇವನನ್ನು ಕೃಷ್ಣಾನಂದ ಕಿಣಿ ಮತ್ತು ಅವರ ಮಗ ಅವಿನಾಶ ಕಿಣಿ ಹತ್ಯೆ ಮಾಡಿದ್ದಾರೆ ಎಂದು ವಿನಾಯಕ ಕಾಮತ್ ಪತ್ನಿ ಆರೋಪಿಸಿ ದೂರು ನೀಡಿದ್ದರು. […]