ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

Saturday, August 21st, 2010
ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ:

ಮಂಗಳೂರು : ದಿವಂಗತ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರ ಹುಟ್ಟು ಹಬ್ಬ ಆಚರಣೆ ಶುಕ್ರವಾರ ಮಂಗಳೂರಿನ ಕಾಂಗ್ರೆಸ್ ಕಛೇರಿಯಲ್ಲಿ ನಡೆಯಿತು. ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ರಮಾನಾಥ ರೈ 21ನೇ ಶತಮಾನದಲ್ಲಿ ಭಾರತವನ್ನು ಅಭಿವೃದ್ದಿಯ ಪಥಕ್ಕೆ ಕೊಂಡುಹೋಗಬೇಕೆಂದು ಕನಸು ಕಂಡವರು ರಾಜಿವ್ ಗಾಂಧಿ , ಇವರು ಆಕಸ್ಮಿಕ ಸನ್ನಿವೇಷದಿಂದ ರಾಜಕೀಯಕ್ಕೆ ಪ್ರವೇಶ ಮಾಡಿದರು, ಸಾಕ್ಷಾರತಾ ಆಂದೋಲನಕ್ಕೆ ಕಾರಣ ರಾಜೀವ್ ಗಾಂಧಿಯವರಾಗಿದ್ದಾರೆ. ಮೀಸಲಾತಿಯ ಮೂಲಕ ಪಂಚಾಯತ್ ರಾಜ್ ವ್ಯವಸ್ಥೆಯನ್ನು ತಂದವರು ರಾಜೀವ್ ಗಾಂಧಿಯವರಾಗಿದ್ದು […]

ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

Friday, August 20th, 2010
ಸಮತಾ ಬಳಗದಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆ.

ಮಂಗಳೂರು: ಸಮತಾ (ರಿ) ಮಹಿಳಾ ಬಳಗದ, ಬಿಜೈ ಮಂಗಳೂರು (ದ.ಕ.) ಇದರ ವತಿಯಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯು ಇಂದು ಸಂಜೆ ಮಂಗಳೂರಿನ ಶ್ರೀ ಸುಬ್ರಹ್ಮಣ್ಯ ಸಭಾ ಭವನದಲ್ಲಿ ನಡೆಯಿತು. ಸಮತಾ ಮಹಿಳಾ ಬಳಗವು ಈ ವರ್ಷ ವಿಂಶತಿ ಉತ್ಸವವನ್ನು ಆಚರಿಸುತ್ತಿದ್ದು, ತಲಾ 7 ವರ್ಷಗಳಿಂದ ಸಾರ್ವಜನಿಕ ವರಮಹಾಲಕ್ಷೀ ಪೂಜೆಯನ್ನು ಆಚರಿಸುತ್ತಾ ಬಂದಿದ್ದು, ಸುಮಾರು 400 ಮಹಿಳೆಯರು ಇದರ ಸದಸ್ಯರಾಗಿದ್ದಾರೆ. ಈ ಸಂಘವು ಹಲವಾರು ವರ್ಷಗಳಿಂದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದು ಇಂದು ವರಮಹಾಲಕ್ಷೀ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಿತು. […]