ರಫ್ತುದಾರರ ಸಮಾವೇಶಕ್ಕೆ ಚಾಲನೆ

Thursday, September 23rd, 2021
Exporters

ಮಂಗಳೂರು :  ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹಾಗೂ ಜಿಲ್ಲಾ ಕೈಗಾರಿಕಾ ಸಂಸ್ಥೆ ವತಿಯಿಂದ 75ನೇ ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಣಿಜ್ಯ ಸಪ್ತಾಹ ರಫ್ತುದಾರರ ಸಮಾವೇಶಕ್ಕೆ ನಗರದ ಓಷಿಯನ್ ಪರ್ಲ್ ಹೋಟೆಲ್‍ನಲ್ಲಿ ಜಿಲ್ಲಾಧಿಕಾರಿ ಡಾ. ರಾಜೇಂದ್ರ.ಕೆ.ವಿ ಅವರು ಸೆ.23ರ ಗುರುವಾರ ಚಾಲನೆ ನೀಡಿದರು. ಬೆಂಗಳೂರು ವಿ.ಟಿ.ಪಿ.ಸಿ ಯ ವ್ಯವಸ್ಥಾಪಕ ನಿರ್ದೇಶಕ ಸತೀಶ್.ಎಸ್.ಆರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಸೀಮಾ ಸುಂಕದ ಆಯುಕ್ತ ಇಮಾಮುದ್ದೀನ್ ಅಹಮ್ಮದ್, ಎಂ.ಆರ್.ಪಿಲ್.ಎಲ್‍ನ ಗ್ರೂಪ್ ಜನರಲ್ ವಿಭಾಗದ ಯೋಗೀಶ್ ನಾಯಕ್, ಲೀಡ್ ಬ್ಯಾಂಕ್‍ನ […]

ಶ್ರಾದ್ಧವನ್ನು ಮಾಡುವುದರ ಮಹತ್ವ !

Thursday, September 23rd, 2021
Sradha

ಮಂಗಳೂರು  : ‘ಶ್ರಾದ್ಧ’ ಎಂದು ಹೇಳಿದೊಡನೆ ಇಂದಿನ ವಿಜ್ಞಾನಯುಗದ ಯುವಪೀಳಿಗೆಯ ಮನಸ್ಸಿನಲ್ಲಿ ‘ಅಶಾಸ್ತ್ರೀಯ ಮತ್ತು ಅವಾಸ್ತವ ಕರ್ಮಕಾಂಡದ ಆಡಂಬರ’ ಎಂಬ ತಪ್ಪುಕಲ್ಪನೆಯು ಮೂಡುತ್ತದೆ. ಧರ್ಮಶಿಕ್ಷಣದ ಅಭಾವ, ಅಧ್ಯಾತ್ಮವನ್ನು ಅರ್ಥಮಾಡಿಕೊಳ್ಳುವಲ್ಲಿನ ಅನಾಸಕ್ತಿ, ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವ, ಹಿಂದೂ ವಿರೋಧಿ ಸಂಘಟನೆಗಳಿಂದ ಹಿಂದೂ ಧರ್ಮದ ರೂಢಿ-ಪರಂಪರೆಗಳ ಮೇಲೆ ಸತತವಾಗಿ ಆಗುತ್ತಿರುವ ದ್ವೇಷಪೂರ್ವಕ ಟೀಕೆ ಇತ್ಯಾದಿಗಳಿಂದ ಈ ಪರಿಣಾಮವಾಗಿದೆ. ಶ್ರಾದ್ಧದ ವಿಷಯದಲ್ಲಿ ಮುಂದಿನ ವಿಚಾರಸರಣಿಯು ಸಮಾಜದಲ್ಲಿ ಕಂಡುಬರುತ್ತದೆ. ಪೂಜೆ ಅರ್ಚನೆ, ಶ್ರಾದ್ಧಪಕ್ಷ ಮುಂತಾದವುಗಳ ಮೇಲೆ ವಿಶ್ವಾಸವನ್ನಿಡದ ಅಥವಾ ಸಮಾಜಕಾರ್ಯವೇ ಸರ್ವ ಶ್ರೇಷ್ಠವಾಗಿದೆ […]

ರಾಷ್ಟ್ರೀಯ ಸಂತ ಕವಿ ಕನಕ ಸಂಶೋಧನ ಕೆಂದ್ರಕ್ಕೆ ಧನಂಜಯ ಕುಂಬ್ಳೆ ಸಹಿತ ಐವರ ನೇಮಕ

Thursday, September 23rd, 2021
Dhananjaya Kumble

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ಎಸ್ ವಿ ಪಿ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಸೇರಿದಂತೆ ಐದು ಮಂದಿಯನ್ನು ಕರ್ನಾಟಕ ಸರಕಾರದ ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಕಾರ್ಯಾನುಷ್ಠಾನ ಮಂಡಳಿಗೆ ನಾಮನಿರ್ದೇಶಿತ ಸದಸ್ಯರನ್ನಾಗಿ ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಕುರಿತು ಆದೇಶ ಹೊರಡಿಸಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ವೆಂಕಟೇಶಪ್ಪ, ರಾಷ್ಟ್ರೀಯ ಸಂತಕವಿ ಕನಕದಾಸರ ಅಧ್ಯಯನ ಮತ್ತು ಸಂಶೋಧನಾ […]

ಹಿಂದೂ ಜನಜಾಗೃತಿ ಸಮಿತಿಯಿಂದ ‘ಮಾನ್ಯವರ್’ ಬ್ರಾಂಡ್‌ಗೆ ಎಚ್ಚರಿಕೆ

Wednesday, September 22nd, 2021
KanyaMan

ಮಂಗಳೂರು  : ಹಿಂದೂ ಧರ್ಮದಲ್ಲಿ ‘ವಿವಾಹ ಸಂಸ್ಕಾರ’ವನ್ನು ಒಂದು ಮಹತ್ವದ ಸಂಸ್ಕಾರವೆಂದು ಪರಿಗಣಿಸಲಾಗಿದೆ. ಅಲ್ಲದೆ ವಿವಾಹದ ವಿಧಿಯಲ್ಲಿ ‘ಕನ್ಯಾದಾನ’ವು ಒಂದು ಮಹತ್ವದ ಧಾರ್ಮಿಕ ವಿಧಿಯಾಗಿದ್ದು ಕನ್ಯಾದಾನವನ್ನು ಸರ್ವಶ್ರೇಷ್ಠ ದಾನವೆಂದು ಪರಿಗಣಿಸಲಾಗಿದೆ. ಹೀಗಿದ್ದರೂ ಇತ್ತೀಚೆಗೆ ‘ವೇದಾಂತ ಫ್ಯಾಷನ್ಸ್ ಲಿಮಿಟೆಡ್’ ಕಂಪನಿಯು ‘ಮಾನ್ಯವರ’ ಈ ಪ್ರಸಿದ್ಧ ಬಟ್ಟೆ ಬ್ರಾಂಡ್‌ನ ಒಂದು ಜಾಹೀರಾತನ್ನು ಪ್ರಸಾರ ಮಾಡಿದೆ, ಅದರಲ್ಲಿ ‘ಕನ್ಯಾದಾನ’ ಎನ್ನುವುದು ಹೇಗೆ ತಪ್ಪು, ಅದೇ ರೀತಿ ‘ದಾನ ಮಾಡಲು ಕನ್ಯೆಯೇನು ವಸ್ತುವೇ’ ಎಂದು ಪ್ರಶ್ನಿಸುತ್ತಾ ‘ಈಗ ಕನ್ಯಾದಾನವಲ್ಲ, ಬದಲಾಗಿ ಕನ್ಯಾಮಾನ್’ ಹೀಗೆ […]

ನಾರಾವಿ ಬಸದಿಗೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಭೇಟಿ

Wednesday, September 22nd, 2021
Veerendra Hegde

ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬುಧವಾರ ನಾರಾವಿಯಲ್ಲಿರುವ ಭಗವಾನ್ ಶ್ರೀ ಧರ್ಮನಾಥ ಸ್ವಾಮಿಗೆ ಬಸದಿಗೆ ಹೋಗಿ ದೇವರ ದರ್ಶನ ಮಾಡಿದರು. ಬಳಿಕ ಬಸದಿಯಲ್ಲಿ ಚಾತುರ್ಮಾಸ್ಯ ವ್ರತಾಚರಣೆಯಲ್ಲಿರುವ ಆರ್ಯಿಕಾ ಚಿಂತನಮತಿ ಮಾತಾಜಿ ಮತ್ತು ಕ್ಷಲ್ಲಿಕ ಸುಶ್ರೇಯಾಮತಿ ಮಾತಾಜಿ ಅವರ ದರ್ಶನ ಮಾಡಿ ಆಶೀರ್ವಾದ ಪಡೆದರು. ಚಾತುರ್ಮಾಸ್ಯ ಸಮಿತಿಯ ಎನ್. ಪ್ರೇಮ್ ಕುಮಾರ್, ಹೊಸ್ಮಾರು, ಶಿಶುಪಾಲ ಜೈನ್, ಪ್ರಕಾಶ್ ಕುಮಾರ್, ಶಶಿಕಾಂತ ಜೈನ್, ಸನ್ಮತ್ ಕುಮಾರ್, ನಾಗಕುಮಾರ ಶೆಟ್ಟಿ, ಜಯವರ್ಮ ಬುನ್ನು, ಅಶೋಕ ಕುಮಾರ್, ಒರಿಮಾರು, ರಾಜೇಂದ್ರ […]

ಅನ್ಯಕೋಮಿನ ಪುರುಷರೊಂದಿಗೆ ಮಹಿಳೆ, ಲಾಡ್ಜ್ ಗೆ ನುಗ್ಗಿ ಹಲ್ಲೆ

Tuesday, September 21st, 2021
Putturu Lodge

ಪುತ್ತೂರು : ಅನ್ಯಕೋಮಿನ ಪುರುಷರೊಂದಿಗೆ ಮಹಿಳೆಯೊಬ್ಬರು ಲಾಡ್ಜ್ನಲ್ಲಿ ತಂಗಿರುವ ಮಾಹಿತಿ ಪಡೆದ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಲಾಡ್ಜ್ ಮೇಲೆ ದಾಳಿ ನಡೆಸಿ ಮಹಿಳೆ ಹಾಗೂ ಆಕೆಯ ಜೊತೆಗಿದ್ದವರ ಮೇಲೆ ಹಲ್ಲೆ ಎಸಗಿರುವುದಾಗಿ ಇಲ್ಲಿನ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಅನ್ಯಕೋಮಿನ ಪುರುಷರ ಜೊತೆ ಲಾಡ್ಜ್ನಲ್ಲಿ ತಂಗಿದ್ದ ಮಹಿಳೆ ಮೇಲೆ ಹಲ್ಲೆಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಲಾಡ್ಜ್ನಲ್ಲಿ ಕಳೆದ ಎರಡು ದಿನಗಳಿಂದ ಬೆಂಗಳೂರು ಮೂಲದ ಮಹಿಳೆ ತಂಗಿದ್ದರು. ಸೆಪ್ಟಂಬರ್ 17 ರಂದು ಬೆಂಗಳೂರಿನಿಂದ ಪುತ್ತೂರಿಗೆ ಬಂದಿದ್ದು, ಸೆಪ್ಟಂಬರ್ 18 […]

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13,88,823 ರೂ. ಮೌಲ್ಯದ ಅಕ್ರಮ ಚಿನ್ನ ವಶ

Tuesday, September 21st, 2021
Gold

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಂಗಳವಾರ ಕಸ್ಟಮ್ಸ್ ಅಧಿಕಾರಿಗಳು 293 ಗ್ರಾಂ ತೂಕದ 24 ಕ್ಯಾರೆಟ್‌ನ ಅಕ್ರಮ ಚಿನ್ನ ಸಾಗಾಟ ಪ್ರಕರಣ ಪತ್ತೆಹಚ್ಚಿದ್ದಾರೆ. ದುಬೈಯಿಂದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದ ಮೂಲಕ ಆಗಮಿಸಿದ ಕಾಸರಗೋಡಿನ ಪ್ರಯಾಣಿಕನೋರ್ವವನ್ನು ವಶಕ್ಕೆ ಪಡೆದ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಆತನಿಂದ 13,88,823 ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡಿರುವುದಾಗಿ ತಿಳಿಸಿದ್ದಾರೆ. ಪ್ರಯಾಣಿಕ ಕಪ್ಪು ಬಣ್ಣದ ಬಟ್ಟೆಯೊಳಗೆ ಕಂದು ಕೆಂಪು ಮತ್ತು ಗುಲಾಬಿ ಬಣ್ಣದ ಬ್ಲಾಂಕೆಟ್‌ನೊಳಗಿಟ್ಟು ಅಕ್ರಮವಾಗಿ ಇದನ್ನು […]

ಜಗತ್ತಿನಲ್ಲಿ ಇಸ್ಲಾಂನ ಆಡಳಿತ ತರಲಿಕ್ಕಾಗಿಯೇ ‘ಹಲಾಲ್’ ಆರ್ಥಿಕತೆಯ ರಚನೆ !

Monday, September 20th, 2021
Ramesh Sindhe

ಮಂಗಳೂರು  : ‘ಹಲಾಲ್ ಸರ್ಟಿಫಿಕೆಶನ್'(ಪ್ರಮಾಣಪತ್ರ) ಮೂಲಕ ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ನಿಯಂತ್ರಿಸಲಾಗುತ್ತಿದೆ. ಕಳೆದ 50 ವರ್ಷಗಳಲ್ಲಿ, ಇಸ್ಲಾಮಿಕ್ ದೇಶಗಳು 10 ಟ್ರಿಲಿಯನ್ ಅಮೇರಿಕಾ ಡಾಲರ್‌ನ ಆರ್ಥಿಕತೆಯನ್ನು ನಿರ್ಮಿಸಿವೆ. ಅದು ಭಾರತದ ಆರ್ಥಿಕತೆಯ ಮೂರು ಪಟ್ಟಿನಷ್ಟಿದೆ. ಇಸ್ಲಾಮಿಕ್ ಪ್ರಾಬಲ್ಯ ಮತ್ತು ಭಯೋತ್ಪಾದನೆಯನ್ನು ನಿರ್ಮಿಸಲು ಹಲಾಲ್‌ನ ಹಣವನ್ನು ಬಳಸಲಾಗುತ್ತಿದೆ, ಎಂದು ಜಗತ್ತಿನಾದ್ಯಂತದ ಅನೇಕ ಗುಪ್ತಚರ ಸಂಸ್ಥೆಗಳಿಂದ ಮಾಹಿತಿಯಿದೆ. ಹಲಾಲ್ ಇದು ‘ಮದರ ಆಫ್ ಜಿಹಾದ್’ ಆಗಿದೆ. ‘ಗ್ರಾಂಟ್ ಮುಕ್ತೀ ಆಫ್ ಬೊಸನಿಯಾ’ದ ಮೌಲಾನಾ ಮುಸ್ತಫಾ ಇವರು ಐ.ಎಸ್.ಐ.ಎಸ್. ಹಾಗೂ ತಾಲಿಬಾನ್ […]

ಮಾನಸಿಕ ಕಾಯಿಲೆ ಯಿಂದ ನೇಣಿಗೆ ಶರಣಾದ ಉಪನ್ಯಾಸಕಿ

Monday, September 20th, 2021
mamatha

ಕಾರ್ಕಳ : ಎಸ್ ವಿಟಿ ಪಿಯು ಕಾಲೇಜಿನ ಉಪನ್ಯಾಸಕಿಯೊಬ್ಬರು ಮಾನಸಿಕ ಕಾಯಿಲೆ ಯಿಂದ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.20ರಂದು ಬೆಳಗ್ಗೆ ಪೆರ್ವಾಜೆ ಎಂಬಲ್ಲಿ ನಡೆದಿದೆ. ಮೃತರನ್ನು ಕಾರ್ಕಳದ ಎಸ್ ವಿಟಿ ಪಿಯು ಕಾಲೇಜಿನ ಉಪನ್ಯಾಸಕಿ ಮಮತಾ (41) ಎಂದು ಗುರುತಿಸಲಾಗಿದೆ. ಕಳೆದ 2 ತಿಂಗಳಿನಿಂದ ವಿಪರೀತ ಮಧುಮೇಹ ಹಾಗೂ ಮಾನಸಿಕ ಕಾಯಿಲೆ ಬಳಲುತ್ತಿದ್ದ ಇವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಾನಸಿಕ ಒತ್ತಡದಲ್ಲಿ ಸರಿಯಾಗಿ ಔಷಧಿ ತೆಗೆದು ಕೊಳ್ಳದ ಇವರು, ಕೆಲವು ದಿನದಿಂದ ಕಾಲೇಜಿಗೂ ಸರಿಯಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದೆ. ಮೃತರ […]

ಸಿಇಟಿ: ಮೊದಲ 10ರಲ್ಲಿ 6 ರ‍್ಯಾಂಕ್ ಪಡೆದ ಮಂಗಳೂರಿನ ಎಕ್ಸ್ ಫರ್ಟ್ ವಿದ್ಯಾರ್ಥಿಗಳು

Monday, September 20th, 2021
expert

ಮಂಗಳೂರು : 2021ನೇ ಸಾಲಿನ ಸಿಇಟಿ ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 6 ರ‍್ಯಾಂಕ್‌ಗಳನ್ನು ಮಂಗಳೂರಿನ ಎಕ್ಸ್ ಫರ್ಟ್  ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ. ಕಾಲೇಜಿನ ವಿದ್ಯಾರ್ಥಿ ರೀತಮ್ ಬಿ. ಅವರು ಕೃಷಿಯಲ್ಲಿ 2ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 3ನೇ ರ‍್ಯಾಂಕ್, ಬಿ ಫಾರ್ಮಾದಲ್ಲಿ 10 ಹಾಗೂ ಇಂಜಿನಿಯರಿಂಗ್ ನಲ್ಲಿ 13ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ತೇಜಸ್ ಕೃಷಿಯಲ್ಲಿ 4, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 24, ಇಂಜಿನಿಯರಿಂಗ್ ನಲ್ಲಿ […]