ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆ, ಸ್ಥಳೀಯರಲ್ಲಿ ಆತಂಕ

Friday, March 12th, 2021
Monkey death

ಬೆಳ್ತಂಗಡಿ : ಕಾಯರ್ತೋಡಿ ಸಮೀಪವಿರುವ ಸೀಟ್ ರಕ್ಷಿತಾರಣ್ಯದಲ್ಲಿ ಇಂದು ಬೆಳಗ್ಗೆ ರಸ್ತೆಬದಿ 5 ಮಂಗಗಳ ಕಳೇಬರಗಳು ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಮುಂಡಾಜೆ ಗ್ರಾಮದಲ್ಲಿ ನಡೆದ  ಘಟನೆಯ  ಕುರಿತು ಸ್ಥಳೀಯರು ಅರಣ್ಯ ಇಲಾಖೆ, ಆರೋಗ್ಯ ಇಲಾಖೆ ಹಾಗೂ ಪಂಚಾಯತ್ ಗೆ ದೂರು ನೀಡಿದ್ದು, ಘಟನಾ ಸ್ಥಳಕ್ಕೆ ಇಲಾಖಾ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇಲಿಪಾಷಾಣ ಸೇವಿಸಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೃತ್ಯು

Friday, March 12th, 2021
Yashashwini

ಮಂಗಳೂರು  : ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿನಿಯೊಬ್ಬಳು ಇಲಿಪಾಷಾಣ ಸೇವಿಸಿ ಮೃತಪಟ್ಟ ಘಟನೆ ದೇವಚಳ್ಳ ಗ್ರಾಮದ ಮಾವಿನಕಟ್ಟೆಯಿಂದ ವರದಿಯಾಗಿದೆ. ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿಯನ್ನು ಮಂಗಳೂರಿನ ಆಸ್ಪತ್ರೆ ಗೆ ಕರೆತರಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಳೆನ್ನಲಾಗಿದೆ. ಎಲಿಮಲೆ ಸರಕಾರಿ ಪ್ರೌಢಶಾಲೆಯಲ್ಲಿ 8ನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ದೇವಚಳ್ಳ ಗ್ರಾಮದ ಮಾವಿನಕಟ್ಟೆ ಈಶ್ವರ ಎಂಬವರ ಪುತ್ರಿ ಯಶಸ್ವಿನಿ (13 ) ಎಂಬಾಕೆ ಮೃತ ವಿದ್ಯಾರ್ಥಿನಿ. ಈಕೆ ವಾರದ ಹಿಂದೆ ಅಂಗಡಿಯೊಂದರಿಂದ ಇಲಿಪಾಷಾಣ ಖರೀದಿಸಿ, ಸೇವಿಸಿ ಶಾಲೆಗೆ ತೆರಳಿದ್ದಳೆನ್ನಲಾಗಿದೆ. ಶಾಲೆಯಲ್ಲಿ ಈಕೆ ಅಸ್ವಸ್ಥಗೊಂಡಾಗ […]

ಉರ್ವ ಶಿರಡಿ ಸಾಯಿ ಬಾಬಾ ಮಂದಿರದಬಳಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಚಿನ್ನಾಭರಣ, ನಗದು ದರೋಡೆ

Friday, March 12th, 2021
Robbery

ಮಂಗಳೂರು : ಉರ್ವ ಶಿರಡಿ ಸಾಯಿ ಬಾಬಾ ಮಂದಿರದ ದ್ವಾರದ ಮುಂಭಾಗ ದಲ್ಲಿ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಅದರೊಳಗಿದ್ದ ಸುಮಾರು ಒಂದು ಲಕ್ಷ ರೂ. ಮೌಲ್ಯದ ಚಿನ್ನಾಭರಣ ದೋಚಿದ ಘಟನೆ ಗುರುವಾರ ಮಧ್ಯಾಹ್ನದ ಸುಮಾರಿಗೆ ನಡೆದಿದೆ. ಭಕ್ತರೋರ್ವರು ಇಲ್ಲಿನ ಶಿರಡಿ ಸಾಯಿ ಬಾಬಾ ಮಂದಿರದ ದ್ವಾರದ ಮುಂಭಾಗ ಕಾರು ನಿಲ್ಲಿಸಿ ಮಂದಿರಕ್ಕೆ ತೆರಲಿದ್ದ ವೇಳೆ ದುಷ್ಕರ್ಮಿಗಳ ತಂಡ ಕಾರಿನ‌ ಕಿಟಕಿಯ ಗಾಜು ಹೊಡೆದು ಕಾರಿನಲ್ಲಿದ್ದ ಪಾಸ್ ಪೋರ್ಟ್, ಅಧಾರ್ ಕಾರ್ಡ್ ಎಟಿಎಮ್ ಕಾರ್ಡ್ಹಾಗೂ ಸುಮಾರು ಒಂದು ಲಕ್ಷ ರೂ. ಬೆಲೆ ಬಾಳುವ ಚಿನ್ನವನ್ನು ಕಳವು […]

ಶಿವನ ವಾಸಸ್ಥಾನ ರುದ್ರಭೂಮಿಯಲ್ಲಿ ಶಿವರಾತ್ರಿ ಆಚರಿಸಿದ ಭಕ್ತರು

Thursday, March 11th, 2021
Rudra Bhoomi

ಮಂಗಳೂರು  : ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ ಸಮಿತಿ ಹಾಗೂ ಹಿಂದೂ ರುಧ್ರಭೂಮಿ ಅಭಿವೃದ್ಧಿ ಸಮಿತಿ ಮಹಾಶಿವರಾತ್ರಿಯ ಅಂಗವಾಗಿ ಆಯೋಜಿಸಿದ್ದ ಭಜನಾ ಕಾರ್ಯಕ್ರಮ ಅರ್ಥಪೂರ್ಣವಾಗಿ ಮೂಡಿಬಂತು. ಸಾಮಾನ್ಯವಾಗಿ ರುದ್ರಭೂಮಿಯೆಂದರೆ ಭಯಪಟ್ಟುಕೊಳ್ಳುತ್ತಾರೆ. ಮಹಿಳೆಯರಂತೂ ಇತ್ತ ಕಾಲಿಡುವುದೇ ಅಪರೂಪ. ಆದರೆ, ಇಲ್ಲಿ ಯಾವುದೇ ಭಯವಿಲ್ಲದೇ ಮಧ್ಯರಾತ್ರಿಯವರೆಗೂ ಗುಂಪುಗುಂಪಾಗಿ ಜನಜಮಾಯಿಸಿ, ದೇವ ಸಂಕೀರ್ತನೆಯಲ್ಲಿ ಪಾಲ್ಗೊಂಡುಬೃಹತ್ ಶಿವನ ಪ್ರತಿಮೆಯ ಬಳಿ ಕರ್ಪೂರ ಹಚ್ಚಿ ಪ್ರಾರ್ಥನೆ ಸಲ್ಲಿಸಿದರು. ಸಜಿಪನಡು ಗ್ರಾಮದ ಕಂಚಿನಡ್ಕಪದವಿನಲ್ಲಿರುವ ರುದ್ರಭೂಮಿ ದೇವಭೂಮಿಯಲ್ಲಿ ಹಿಂದೂ ರುಧ್ರಭೂಮಿ […]

ಜಿಲ್ಲಾ ಪಂಚಾಯತ್ ಸದಸ್ಯೆ ಮಮತಾ ಗಟ್ಟಿ ಅವರಿಗೆ ಮಾತೃ ವಿಯೋಗ

Thursday, March 11th, 2021
Sharadha Gatty

ಮಂಗಳೂರು : ಜಿಲ್ಲಾ ಪಂಚಾಯತ್ ಸದಸ್ಯೆ ಹಾಗೂ ಕಾಂಗ್ರೆಸ್ ನಾಯಕಿ ಶ್ರೀಮತಿ ಮಮತಾ ಗಟ್ಟಿಯವರ ಮಾತೃಶ್ರೀ ಶಾರದಾ ಎಸ್. ಗಟ್ಟಿ (75) ಯವರು ಗುರುವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದ ಬಳಿಕ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಾಮಜಿಕ ಹೋರಾಟಗಾರ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತ ಧರ್ಮಕ್ಕಿ ಸಂಜೀವ ಗಟ್ಟಿಯವರ ಧರ್ಮ ಪತ್ನಿ ಯಾದ ಅವರು ಎರಡು ಹೆಣ್ಣು ಬಬಿತಾ, ಮಮತಗಟ್ಟಿ ಹಾಗೂ  ಸತೀಶ್, ರಾಜೇಶ್ ಎರಡು ಗಂಡು ಮಕ್ಕಳನ್ನು ಅಗಲಿದ್ದಾರೆ.

ಸೂಟರ್ ಪೇಟೆ : ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನ

Thursday, March 11th, 2021
Suterpete

ಮಂಗಳೂರು : ಅತೀ ಪುರಾತನ ಬಬ್ಬುಸ್ವಾಮಿ ಕ್ಷೇತ್ರಗಳಲ್ಲಿ ಒಂದಾಗಿರುವ ಸೂಟರ್ ಪೇಟೆಯ ಶ್ರೀ ಕೋರ್ದಬ್ಬು ದೇವಸ್ಥಾನದಲ್ಲಿ ಮಾರ್ಚ್-6ರಿಂದ 9ರವರೆಗೆ ನಡೆದ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿ ಸಿಂಗಾರದ ನೇಮೋತ್ಸವ ಸಂಪನ್ನಗೊಂಡಿದೆ. ವಿಶಿಷ್ಠ ರೀತಿಯ ಭೂತಾರಾಧನೆಯ ಪರಂಪರೆಯನ್ನು ಉಳಿಸಿಕೊಂಡು ಬಂದಿರುವ ಶ್ರೀ ಕ್ಷೇತ್ರದ ನೇಮೋತ್ಸವಕ್ಕೆ ಊರ ಪರಊರಿನ ಸರ್ವಧರ್ಮದ ಸಾವಿರಾರು ಭಕ್ತರು ಆಗಮಿಸಿ ಶ್ರೀ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿದರು . ನೇಮೋತ್ಸವದ ಮೊದಲು ಮಾರ್ಚ್ -5ರಂದು ಧರ್ಮದರ್ಶಿ ಶ್ರೀ ಭಾಸ್ಕರ್ […]

ತಂದೆಯ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕ ಮೃತ್ಯು

Thursday, March 11th, 2021
Marshid

ಬೆಳ್ತಂಗಡಿ : ತನ್ನ ತಂದೆಯೇ ಚಲಾಯಿಸುತ್ತಿದ್ದ ಲಾರಿಯ ಚಕ್ರದಡಿ ಸಿಲುಕಿ ಎಂಟು ವರ್ಷದ ಬಾಲಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ಬುಧವಾರ ಸಂಜೆ ಮೂಡುಬಿದಿರೆಯಲ್ಲಿ ನಡೆದಿದೆ. ಉಜಿರೆ ಅತ್ತಾಜೆ‌ ನಿವಾಸಿ ಇಬ್ರಾಹಿಂ ಇಬ್ಬಿ ಅವರ ಪುತ್ರ, ಉಜಿರೆ ಹಳೆಪೇಟೆ ಬದ್ರುಲ್ ಹುದಾ ಮದರಸದ‌ ಮೂರನೇ ತರಗತಿ ವಿದ್ಯಾರ್ಥಿ ಮುರ್ಷಿದ್ (8) ಮೃತಪಟ್ಟ ಬಾಲಕ. ಉಜಿರೆ ಅತ್ತಾಜೆ ಇಬ್ರಾಹಿಂ ಮತ್ತು ರಹಿಮತ್ ದಂಪತಿಯ ಇಬ್ಬರು ಮಕ್ಕಳಲ್ಲಿ‌ ಮುರ್ಷಿದ್ ಮೊದಲನೆಯವನಾಗಿದ್ದ. ತಂದೆ ಮೂಡುಬಿದಿರೆಯ ಕಲ್ಲಿನ‌ಕೋರೆಗೆ ಹೋಗುವಾಗ ಬಾಲಕನೂ ಜತೆಗೆ ತೆರಳಿದ್ದನೆಂದು ಹೇಳಲಾಗಿದೆ. ತಂದೆಯೇ ಚಾಲಕನಾಗಿ ಲಾರಿ […]

ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದವರಿಗೆ ಡಿಕ್ಕಿ ಹೊಡೆದ ಪಿಕಪ್ ವಾಹನ, ಓರ್ವ ಮೃತ್ಯು

Thursday, March 11th, 2021
Marshid

ಸುಳ್ಯ : ರಸ್ತೆ ಪಕ್ಕದಲ್ಲಿ ಬಸ್ಸಿಗೆ ಕಾಯುತ್ತಿದ್ದ ನಾಲ್ವರಿಗೆ ಢಿಕ್ಕಿಯಾದ ಪಿಕಪ್ ವಾಹನ ಓರ್ವ ಯುವಕ ನನ್ನು ಬಲಿಪಡೆದು ಇತರ ಮೂವರನ್ನು ಗಂಭೀರ ಗೊಳಿಸಿದ ಘಟನೆ ಪೆರಾಜೆ ಎಂಬಲ್ಲಿ ಬುಧವಾರ ರಾತ್ರಿ ಸುಮಾರು 10.30ಕ್ಕೆ ನಡೆದಿದೆ. ಪಿಕಪ್ ವಾಹನವೊಂದು ವೇಗ ನಿಯಂತ್ರಣಕ್ಕೆಂದು ಹಾಕಲಾಗಿದ್ದ ಬ್ಯಾರಿಕೇಡ್ ಗೆ ಢಿಕ್ಕಿಯಾಗಿ ಬಳಿಕ ನಾಲ್ವರಿಗೆ ಡಿಕ್ಕಿ ಹೊಡೆದಿದೆ. ಮೃತ ಯುವಕನನ್ನು ದುಗ್ಗಲಡ್ಕ ನಿವಾಸಿ ಮುರ್ಷಿದ್ ಎಂದು ಗುರುತಿಸಲಾಗಿದೆ. ಮುರ್ಷಿದ್, ರಫೀಕ್, ಸತೀಶ್ ಹಾಗೂ ಉಮ್ಮರ್ ಎಂಬವರು ಪೆರಾಜೆ ಕಲ್ಲುಚರ್ಪೆ ಬಳಿ ಬಸ್ ಗಾಗಿ ಕಾಯುತ್ತಿದ್ದ ಸಂದರ್ಭ ಪಿಕಪ್ ವಾಹನವೊಂದು ಚಾಲಕನ ನಿಯಂತ್ರಣ […]

ಪ್ರಶಸ್ತಿ ವಿಜೇತೆ ಪರಿಸರ ಪ್ರೇಮಿ, ಸಮಾಜ ಸೇವಕಿ : ಆರ್. ಜೆ ರಶ್ಮಿ ಉಳ್ಳಾಲ್

Wednesday, March 10th, 2021
Rashmi Ullal

ಮಂಗಳೂರು  : ತುಳುನಾಡಿನ ಕರಾವಳಿ ಪ್ರದೇಶವು ಇಂದು ಸ್ವಚ್ಚತೆಯನ್ನು ಕಾಪಾಡುದರೊಂದಿಗೆ ತನ್ನ ಪರಿಸರವನ್ನು ಹಸಿರಾಗಿರಿಸಿ ಶುದ್ದ ಗಾಳಿಯನ್ನು ಪರಿಸರಕ್ಕೆ ನೀಡುತ್ತಿದ್ದು ಅದಕ್ಕೆ ಕೇವಲ ಸರಕಾರ, ನಗರ ಪಾಲಿಕೆ ಮಾತ್ರವಲ್ಲದೆ ಇತರ ಅನೇಕರ ಕೊಡುಗೆಯಿದೆ. ಇಂತವರಲ್ಲಿ ತನ್ನ ಪರಿಸರದಲ್ಲಿ ಹಸಿರನ್ನೇ ತನ್ನ ಹುಸಿರಾಗಿಸಿಕೊಂಡ ಇತ್ತೀಚೆಗೆ ಕೇವಲ ಒಂದು ವಾರದ ಅಂತರದಲ್ಲಿ ಎರಡು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡ ತುಳುನಾಡಿನ ಹೆಮ್ಮೆಯ ಪುತ್ರಿ ಆರ್. ಜೆ. ರಶ್ಮಿ ಉಳ್ಳಾಲ್ ಪ್ರಮುಖರು. ರಶ್ಮಿ ಉಳ್ಳಾಲ್ ಅವರು ಬ್ಯಾಂಕ್ ಸಿಬ್ಬಂದಿ ಆಗಿದ್ದ ಯು. ಎ. ಪ್ರೇಮನಾಥ್ […]

ಕುಂಪಲ ಆಶ್ರಯ ಕಾಲೋನಿಯ ಮನೆಯಲ್ಲಿ ಮಾಡೆಲ್ ಶವ ಪತ್ತೆ, ಮೂವರ ಮೇಲೆ ಅನುಮಾನ !

Wednesday, March 10th, 2021
Preksha

ಉಳ್ಳಾಲ : ಮಾಡೆಲಿಂಗ್ ಯುವತಿ, ಪೋಟೋ ಶೂಟ್ ನಲ್ಲಿ ಭಾಗವಹಿಸಲು  ಬೆಂಗಳೂರಿಗೆ ತೆರಳಲು ಸಿದ್ದತೆ ಮಾಡಿಕೊಂಡಿದ್ದವಳು ಕುಂಪಲದ ಆಶ್ರಯ ಕಾಲೋನಿಯ ಮನೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಮೃತ ಯುವತಿಯನ್ನು ಆಶ್ರಯ ಕಾಲನಿ ನಿವಾಸಿ ಎಚ್ಪಿ ಗ್ಯಾಸ್ ಏಜನ್ಸಿಯಲ್ಲಿ ಕಾರ್ಮಿಕರಾಗಿರುವ ಚಿತ್ತಪ್ರಸಾದ್ ಮತ್ತು ಸ್ಥಳೀಯ ಅಂಗನವಾಡಿ ಕಾರ್ಯಕರ್ತೆ ವನಿತಾ ದಂಪತಿಯ ಕಿರಿಯ ಪುತ್ರಿ ಪ್ರೇಕ್ಷಾ (17)  ಎಂದು ಗುರುತಿಸಲಾಗಿದೆ. ಮಂಗಳೂರು ನಂತೂರು ಬಳಿಯ ನಿಟ್ಟೆ ಪಿಯುಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದ ಈಕೆ ಇಂದು ರಜೆ ಪಡೆದುಕೊಂಡು ಮನೆಯಲ್ಲೇ […]