ವಿಜಯ ಕೋಟ್ಯಾನ್ ಪಡು, ಬೊಳ್ಳಜಿರ ಬಿ.ಅಯ್ಯಪ್ಪ ಅವರಿಗೆ ಪ.ಗೋ ಪ್ರಶಸ್ತಿ

Tuesday, December 29th, 2020
vijayaKotian - BAyyappa

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ 2019ನೇ ಸಾಲಿನ ಪ.ಗೋ. ಗ್ರಾಮೀಣ ವರದಿಗಾರಿಕೆ ಪ್ರಶಸ್ತಿಗೆ ವಿಜಯ ಕರ್ನಾಟಕ ಪತ್ರಿಕೆ ಮಂಗಳೂರಿನ ಹಿರಿಯ ವರದಿಗಾರ ವಿಜಯ ಕೋಟ್ಯಾನ್ ಪಡು ಮತ್ತು ಕೊಡಗಿನ ಕಾವೇರಿ ಟೈಮ್ಸ್ ಪತ್ರಿಕೆಯ ಹಿರಿಯ ವರದಿಗಾರ ಬೊಳ್ಳಜಿರ ಬಿ.ಅಯ್ಯಪ್ಪ ಆಯ್ಕೆಯಾಗಿದ್ದಾರೆ. ಪತ್ರಕರ್ತರಾದ ವಿಜಯ ಕೋಟ್ಯಾನ್ ಪಡು ಅವರ 2019ರ ನವೆಂಬರ್ 25ರಂದು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ಕೊನೆಗೂ ಸಾವನ್ನೇ ಗೆದ್ದು ಬಂದ ವಿದ್ಯಾರ್ಥಿನಿ ವರದಿ ಮತ್ತು ಪತ್ರಕರ್ತ […]

ಮಾಜಿ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿಕ ಮೋರ್ಲ ವಿಶ್ವನಾಥ ಶೆಟ್ಟಿ ನಿಧನ

Tuesday, December 29th, 2020
Morla Vishwanatha Shetty

ಮಂಗಳೂರು : ಮಾಜಿ ನರಿಂಗಾನ ಗ್ರಾಮ ಪಂಚಾಯತ್ ಸದಸ್ಯ, ಪ್ರಗತಿಪರ ಕೃಷಿಕ ಮೋರ್ಲ ವಿಶ್ವನಾಥ ಶೆಟ್ಟಿ ಅಲ್ಪಕಾಲದ ಅಸೌಖ್ಯದ ನಂತರ ಮಂಗಳವಾರ ಬೆಳಿಗ್ಗೆ ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು. ಬೆನ್ನು ಮೂಳೆಯ ಸಮಸ್ಯೆಯಿಂದ  (ನರ ಸಂಬಂದಿ ಕಾಯಿಲೆ) ಕಳೆದ ಎರಡು ತಿಂಗಳುಗಳಿಂದ  ಚಿಕಿತ್ಸೆ ಪಡೆಯುತ್ತಿದ್ದರು. ವಿಟ್ಲ ಸಮೀಪದ ಕಲಿಂಜೆ ಕಂಪದ ಬೈಲು ಬಂಟಪ್ಪ ಶೆಟ್ಟಿ ಮತ್ತು ಭಾಗೀರಥಿ ದಂಪತಿಗಳ ಎಂಟು ಮಕ್ಕಳಲ್ಲಿ ಮೂರನೆಯವರಾಗಿ ಜನಿಸಿದ ವಿಶ್ವನಾಥ ಶೆಟ್ಟಿ ನರಿಂಗಾನ ಗ್ರಾಮದ ಮೋರ್ಲ ಎಂಬಲ್ಲಿ ತನ್ನ ಅಜ್ಜನ […]

ಧರ್ಮಸ್ಥಳದ ವತಿಯಿಂದ ಶಾಲೆಗಳಿಗೆ ಬೆಂಚು, ಡೆಸ್ಕ್ ವಿತರಣೆ

Tuesday, December 29th, 2020
Dharmasthala Bench

ಉಜಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 10,200 ವಿದ್ಯಾರ್ಥಿಗಳಿಗೆ ಉಪಯೋಗವಾಗುವಂತೆ ಒಂದು ಕೋಟಿ ಎಪ್ಪತ್ತೆಂಟು ಲಕ್ಷದ ಐವತ್ತು ಸಾವಿರ ರೂ. ವೆಚ್ಚದಲ್ಲಿ ವಿದ್ಯಾರ್ಥಿಗಳಿಗೆ ಬೆಂಚು ಮತ್ತು ಡೆಸ್ಕ್ ಗಳನ್ನು ವಿತರಿಸಲಾಗುವುದು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದರು. ಅವರು ಸೋಮವಾರ ಧರ್ಮಸ್ಥಳದಲ್ಲಿ ಬಾಗಲಕೋಟೆ, ರಾಯಚೂರು, ಕೊಪ್ಪಳ, ಗದಗ, ಬಳ್ಳಾರಿ ಹೊಸಪೇಟೆ ಜಿಲ್ಲೆಗಳ 287 ಶಾಲೆಗಳಿಗೆ 255೦ ಬೆಂಚು ಮತ್ತು ಡೆಸ್ಕ್ ಗಳನ್ನು ಹಸ್ತಾಂತರಿಸಿ ಮಾತನಾಡಿದರು. ಕಳೆದ ಹತ್ತು ವರ್ಷಗಳಲ್ಲಿ 29 ಜಿಲ್ಲೆಗಳ 9213 ಶಾಲೆಗಳಿಗೆ […]

ಬಂಟ್ವಾಳ : ಕಳೆನಾಶಕ ಸೇವಿಸಿ ಗ್ರಾಪಂ ಅಭ್ಯರ್ಥಿ ಸಾವು

Monday, December 28th, 2020
Jayantha Prabhu

ಮಂಗಳೂರು:  ಕಳೆನಾಶಕವನ್ನು ಸೇವಿಸಿ ಗ್ರಾಪಂ ಸದಸ್ಯ ಹಾಗೂ ಹಾಲಿ ಅಭ್ಯರ್ಥಿಯೊಬ್ಬರು ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕಾವಳಮುಡೂರು ಗ್ರಾಮದಲ್ಲಿ ನಡೆದಿದೆ. ಕಾವಳಮುಡೂರು ಗ್ರಾಮದ ಅರ್ಗತ್ಯಾರು ನಿವಾಸಿ ಜಯಂತ ಪ್ರಭು (58) ಮೃತ ವ್ಯಕ್ತಿ. ಡಿ. 21ರಂದು ರಾತ್ರಿ 11 ಗಂಟೆಯ ವೇಳೆ ಬಾಯಿ ಹುಣ್ಣಿಗೆಂದು ತೆಗೆದುಕೊಳ್ಳುತ್ತಿದ್ದ ಔಷಧದ ಬದಲಾಗಿ ಖಾಲಿಯಾಗಿದ್ದ ಔಷಧ ಬಾಟಲಿಯಲ್ಲಿ ಶೇಖರಿಸಿಟ್ಟಿದ್ದ ಟ್ರೈಕಾಟ್ ಎಂಬ ಹುಲ್ಲಿಗೆ ಸಿಂಪಡಣೆ ಮಾಡುವ ಕಳೆನಾಶಕ ಸೇವಿಸಿದ್ದರು. ಮರುದಿನ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿದ್ದರಲ್ಲದೆ ಮತಗಟ್ಟೆಯಲ್ಲೂ ಒಂದಷ್ಟು ಹೊತ್ತು ಕಳೆದು […]

ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಕೆ.ಪ್ರಕಾಶ್ ಶೆಟ್ಟಿ ಜನ್ಮದಿನದ ಅಂಗವಾಗಿ ಅಶಕ್ತರಿಗೆ ಒಂದು ಕೋಟಿ ರೂ. ಸಹಾಯಧನ ವಿತರಣೆ

Monday, December 28th, 2020
prakash shetty

ಮಂಗಳೂರು :ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿ ಸೇರಿದಂತೆ 500ಕ್ಕೂ ಅಧಿಕ ಅಶಕ್ತರಿಗೆ ಒಂದು ಕೋಟಿ ರೂ ಅಧಿಕ ಆರ್ಥಿಕ ಸಹಾಯಧನ ವಿತರಣಾ ಕಾರ್ಯಕ್ರಮ ಬಂಗ್ರಕೂಳೂರಿನ ಗೋಲ್ಡ್ ಪಿಂಚ್ ಮೈದಾನ ದಲ್ಲಿಂದು ನಡೆಯಿತು. ಎಂ.ಆರ್.ಜಿ ಗ್ರೂಪ್ ಸಂಸ್ಥಾಪಕ ಕೆ.ಪ್ರಕಾಶ್ ಶೆಟ್ಟಿ ಯವರ ಜನ್ಮದಿನದ ಅಂಗವಾಗಿ ಕಳೆದ ವರ್ಷ ಹಮ್ಮಿಕೊಂಡ ಪ್ರಕಾಶಾಭಿನಂದನಾ ಕಾರ್ಯಕ್ರಮದಲ್ಲಿ ಮಾತು ನೀಡಿದಂತೆ  ಈ ವರ್ಷ ಅಶಕ್ತರಿಗೆ ಸಹಾಯಧನ ವಿತರಣೆ  ಮಾಡಲಾಯಿತು. ಬದುಕಿನಲ್ಲಿ ಎದುರಾಗುವ ಕಷ್ಟಗಳಿಗೆ ಹೆದರದೆ ಧೈರ್ಯವಾಗಿ ಎದುರಿಸಬೇಕಾಗಿದೆ‌. ನಾನು ಕಷ್ಟದ ಹಾದಿಯಲ್ಲಿಯೇ ಬೆಳೆದು ಬಂದವನು. ಕಷ್ಟದ ಅನುಭವ ನನಗಿದೆ. ಒಬ್ಬರು ಇನ್ನೊಬ್ಬರಿಗೆ ಪರಸ್ಪರ […]

ನಗರದ ವಿವಿಧ ಸ್ಥಳಗಳಲ್ಲಿ ನೋ ಪಾರ್ಕಿಂಗ್ ವಲಯ ಘೋಷಣೆ

Monday, December 28th, 2020
Noparking

ಮಂಗಳೂರು : ಮಂಗಳೂರು ನಗರದಲ್ಲಿ ಸುಗಮ ಸಂಚಾರಕ್ಕೆ ತೊಂದರೆಯಾಗದಂತೆ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನಗಳ ಅನಧಿಕೃತ ಪಾರ್ಕಿಂಗ್‍ಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೋಟಾರು ವಾಹನ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಾವಳಿಗಳು 1989 ರ ನಿಯಮ 221ರ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ವಿವಿಧ ಸ್ಥಳಗಳನ್ನು ನೋ ಪಾರ್ಕಿಂಗ್ ವಲಯಗಳೆಂದು ಅಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್ ಹಾಗೂ ಪೋಲಿಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಆದೇಶಿಸಿರುತ್ತಾರೆ. ನೋ-ಪಾಕಿರ್ಂಗ್ ವಲಯಗಳು ಇಂತಿವೆ:- ಸಂಚಾರ ಪೂರ್ವ ಠಾಣೆ: ಡಾ. ಬಿ. […]

15 ಅಡಿ ಆಳದಲ್ಲಿರುವ ಮನೆ ಮೇಲೆ ಬಿದ್ದ ಪಿಕ್ ಅಪ್ ವಾಹನ, ಆರು ಮಂದಿಗೆ ಗಾಯ

Monday, December 28th, 2020
pickup

ಮಂಗಳೂರು :  ಪಿಕ್ ಅಪ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಸುಮಾರು 15 ಅಡಿ ಆಳದಲ್ಲಿರುವ ಮನೆ ಮೇಲೆ ಬಿದ್ದು ಮನೆಯಲ್ಲಿದ್ದ ಮೂವರು ಗಾಯಗೊಂಡಿರುವ ಘಟನೆ ನಗರದ ಮರೋಳಿಯಲ್ಲಿ ನಡೆದಿದೆ. ವಾಹನದಲ್ಲಿದ್ದ ಮೂವರು ಕಾರ್ಮಿಕರಿಗೂ ಗಾಯಗಳಾಗಿವೆ. ಚಂದ್ರಯ್ಯ ಆಚಾರ್ಯ ಎಂಬುವರ ಮನೆಯ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಅದೃಷ್ಟವಶಾತ್ ಮನೆಯವವರಿಗೆ ಯಾವುದೇ ಪ್ರಾಣಾಪಾಯವಾಗಿಲ್ಲ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಪಘಾತದಲ್ಲಿ ಪಿಕ್ ಅಪ್ ವಾಹನ ಹಾಗೂ ಮನೆಗೆ ಹಾನಿಯಾಗಿದೆ. ಮರೋಳಿಯಲ್ಲಿರುವ ಭಾರತ್ ಪ್ರಿಂಟರ್ ಬಳಿಯ ಚಂದ್ರಯ್ಯ ಆಚಾರ್ಯರ ಮನೆ […]

ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಅವಕಾಶವಿಲ್ಲ

Sunday, December 27th, 2020
Jagadeesha

ಉಡುಪಿ : ಸಾರ್ವಜನಿಕವಾಗಿ  ಹೊಸ ವರ್ಷದಂದು ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಯಾವುದೇ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶವಿಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆದೇಶದ ಪ್ರಕಾರ ಹೊಸ ವರ್ಷದ ಆಚರಣೆಯ ಸಮಯದಲ್ಲಿ ಕೂಡ ಎಲ್ಲಾ ರೀತಿಯ ಕೊರೊನಾ ನಿಯಮಗಳನ್ನು ಪಾಲಿಸಲು ಸಾರ್ವಜನಿಕರಿಗೆ ಸೂಚಿಸಲಾಗಿದೆ. ಸರ್ಕಾರ ಹೊರಡಿಸಿದ ವಿಶೇಷ ಮಾರ್ಗಸೂಚಿಗಳು ಡಿಸೆಂಬರ್ 30 ರಿಂದ ಜನವರಿ 2 ರವರೆಗೆ ನಾಲ್ಕು ದಿನಗಳವರೆಗೆ ಅನ್ವಯಿಸುತ್ತವೆ ಎಂದು ಅವರು ಹೇಳಿದ್ದಾರೆ. ಹೊಸ ವರ್ಷದಂದು ಯಾವುದೇ ಪಬ್, ರೆಸ್ಟೋರೆಂಟ್, ಹೋಟೆಲ್, ಕೆಫೆಗಳು […]

ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ ಧರ್ಮಪಾಲ್ ಪಿ ನಿಧನ

Sunday, December 27th, 2020
Dharmapala

ಉಡುಪಿ : ಮೊಗವೀರ ಕೋಪರೇಟಿವ್ ಬ್ಯಾಂಕಿನ ಉಪ ಕಾರ್ಯಧ್ಯಕ್ಷ, ಉದ್ಯಮಿ  ಧರ್ಮಪಾಲ್ ಪಿ (74) ಇವರು ಡಿ. 27 ರಂದು ಮುಂಜಾನೆ ಹೃದಯಘಾತದಿಂದಾಗಿ ಪಡುಬಿದ್ರೆಯ ಕಡಿಪಟ್ನ ಸ್ವಗೃಹದಲ್ಲಿ ನಿಧನ ಹೊಂದಿದರು. ಇವರು ಒರ್ವ ಪುತ್ರ ಹಾಗೂ ಒರ್ವ ಪುತ್ರಿ ಹಾಗೂ ಅಪಾರ ಬಂಧುಗಳನ್ನು ಅಗಲ್ಲಿದ್ದಾರೆ. ಮೂಲತಃ ಪಡುಬಿದ್ರೆ ಕಾಡಿಪಟ್ನದವರಾದ ಇವರು ಕಾಡಿಪಟ್ಣ ಮೊಗವೀರ ಸಭಾದ ಅಧ್ಯಕ್ಷರ , ಮೊಗವೀರ ಯುವಕ ಸಂಘ ಮುಂಬಯಿ ಇದರ  ಉಪಾಧ್ಯಕ್ಷರಾಗಿದ್ದರು. ಮೊಗವೀರ ಬ್ಯಾಂಕಿನ ಕಾರ್ಯಧ್ಯಕ್ಷ ಸದಾನಂದ ಕೋಟ್ಯಾನ್ ಇವರ ನಿಕಟವರ್ತಿಯಾಗಿದ್ದ ಧರ್ಮಪಾಲ್ ಪಿ  […]

ವಿದ್ಯುತ್ ಕಂಬದಲ್ಲಿ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶ, ಸಾವು

Sunday, December 27th, 2020
Padmanabha

ಮಂಗಳೂರು: ಖಾಸಗಿ ಸಂಸ್ಥೆಯೊಂದರ  ಉದ್ಯೋಗಿ  ವಿದ್ಯುತ್ ಕಂಬದಲ್ಲಿ ಬಿಎಸ್ಎನ್ಎಲ್ ಇಂಟರ್ನೆಟ್ ಕೇಬಲ್ ಅಳವಡಿಸುವ ವೇಳೆ ವಿದ್ಯುತ್ ಸ್ಪರ್ಶದಿಂದ  ಓರ್ವ ವ್ಯಕ್ತಿ  ಮೃತಪಟ್ಟಿರುವ ದುರ್ಘಟನೆ ಪುತ್ತೂರು ಕೋರ್ಟ್ ರೋಡಿನ ಮಾರ್ಕೆಟ್ ಬಳಿ ನಡೆದಿದೆ. ಅರ್ಲಪದವಿನ ಬೆಟ್ಟಂಪಾಡಿ ನಿವಾಸಿ ಪದ್ಮನಾಭ ಮೃತಪಟ್ಟ ದುರ್ದೈವಿ. ಪುತ್ತೂರು ಮೀನು‌ ಮಾರುಕಟ್ಟೆಯ ಬಳಿ ಇಂಟರ್ನೆಟ್ ಕೇಬಲ್ ಅಳವಡಿಸುವ ಕಾರ್ಯ‌ ನಡೆಸಲಾಗುತ್ತಿತ್ತು. ಈ ವೇಳೆ ವಿದ್ಯುತ್ ಪ್ರವಹಿಸಿ ಬೆಟ್ಟಂಪಾಡಿ ನಿವಾಸಿ  ಪದ್ಮನಾಭ ಮೃತಪಟ್ಟಿದ್ದಾರೆ. ಅವರು  ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿದ್ದರು. ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ […]