ಡೆಂಗ್ಯೂ ನಿಮೂ೯ಲನೆಗೆ ಮಂಗಳೂರು ಮಹಾನಗರಪಾಲಿಕೆಯ ಪ್ರತಿ 60 ವಾಡಿ೯ಗೆ ಒಬ್ಬರು ಸ್ಪ್ರೇಯರ್ಸ್ ರವರು : ಮೇಯರ್

Tuesday, July 16th, 2024
MCC-Dengue

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಡೆಂಗ್ಯೂ ಬಾದಿಸದಂತೆ ಎಚ್ಚರಿಕೆ ವಹಿಸಬೇಕಾಗಿರುವುದನ್ನು ಗಮನಿಸಿ ಮೇಯರ್ ಸುಧೀರ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಪಾಲಿಕೆಯ ಸಮಿತಿ ಸಭಾಂಗಣದಲ್ಲಿ ಡೆಂಗ್ಯೂ ನಿಮೂ೯ಲನೆ ಸಮಿತಿಯ ಸಭೆ ಜರಗಿತು. ಸಭೆಯಲ್ಲಿ ಮಾತನಾಡಿದ ಮೇಯರ್ ರವರು ಡೆಂಗ್ಯೂಯನ್ನು ತಡೆಗಟ್ಟಲು ಮೊತ್ತ ಮೊದಲನೇಯದಾಗಿ ಸೊಳ್ಳೆ ಉತ್ಪತ್ತಿಯಾಗುವುದನ್ನು ತಡೆಯಬೇಕು. ಪಾಲಿಕೆಯ ಎಂ.ಪಿ.ಡಬ್ಲ್ಯೂ ಕಾಯ೯ಕತ೯ರು ಮನೆ ಮನೆ ಭೇಟಿ ನೀಡಿ ಮನೆಯ ಸುತ್ತ ಮುತ್ತಲುನಲ್ಲಿರುವ ತ್ಯಾಜ್ಯ ಮತ್ತು ಯಾವುದೇ ಬಿಸಾಡುವಂತಹ ವಸ್ತುಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸಬೇಕು ಎನ್ನುವ ಮಾಹಿತಿಯನ್ನು ಒದಗಿಸಿದರು. ಇದನ್ನು ಪಾಲಿಕೆ […]

ವೀರ ವೆಂಕಟೇಶ ದೇವರ ಚಾತುರ್ಮಾಸ ಪ್ರಾರಂಭ

Tuesday, July 16th, 2024
veera Venkatesha

ಮಂಗಳೂರು : ಇತಿಹಾಸ ಪ್ರಸಿದ್ಧ ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರಧಾನ ಆರಾಧ್ಯ ದೇವರಾದ ಶ್ರೀ ವೀರ ವೆಂಕಟೇಶ ದೇವರ ಹಾಗೂ ಪರಿವಾರ ದೇವರುಗಳ ಚಾತುರ್ಮಾಸ ಆಚರಣೆಗೆ ವಿಧ್ಯುಕ್ತವಾಗಿ ಇಂದು ವೈದಿಕ ವಿಧಿವಿಧಾನದೊಂದಿಗೆ ಪ್ರಾರಂಭಗೊಂಡಿತು . ಪ್ರಾತಃ ಕಾಲ ಸಮಸ್ತ ಸಮಾಜಬಾಂಧವ ರೊಂದಿಗೆ ಶ್ರೀ ದೇವಳದ ಆಡಳಿತ ಮಂಡಳಿ ಹಾಗೂ ವಿದ್ವತ್ ವೈದಿಕರು ಶ್ರೀ ದೇವರ ಸನ್ನಿಧಾನದಲ್ಲಿ ಮಹಾಪ್ರಾರ್ಥನೆ ನಡೆಸಿ ಬಳಿಕ ಶ್ರೀ ದೇವರಿಗೆ ಪಂಚಾಮೃತ , ಗಂಗಾಭಿಷೇಕ ,ಪುಳಕಾಭಿಷೇಕ , ಪವಮಾನಾಭಿಷೇಕ ಹಾಗೂ ಶತ […]

ಹೂವಿನಹಡಗಲಿ:ಅನಾರೋಗ್ಯ ಪೀಡಿತ ಅನಾಥೆ ವೃದ್ಧೆಗೆ ಉಪಚರಿಸಿ ಸೇವೆ ಮಾಡಿದ-ಸಮಾಜ ಸೇವಕಿ ರೈತ ಮುಖಂಡರಾದ ಯಶೋಧ

Tuesday, July 16th, 2024
yashodha

ವಿಜಯನಗರ : ಹೂವಿನಹಡಗಲಿ ಪಟ್ಟಣದಲ್ಲಿ. ಅನಾರೋಗ್ಯದಿಂದ ನರಳುತ್ತಿರುವ ವಯೋ ವೃದ್ಧೆಯ ಸೇವೆಯನ್ನು ಮಾಡಿ. ಅವಳನ್ನು ಖುದ್ದು ಉಪಚರಿಸಿ ಸಾರ್ವ ಜನಿಕ ಆಸ್ಪತ್ರೆೆಗೆ ಚಿಕಿತ್ಸೆಗೆ ದಾಖಲಿಸುವ ಮೂಲಕ, ಸಮಾಜ ಸೇವಕಿ ಹಾಗೂ ರೈತ ಮುಖಂಡರಾದ ಯಶೋಧರವರು ಮಾನವೀಯತೆ ಮೆರೆದಿರುವ ಬಲು ಅಪರೂಪದ ಸನ್ನಿವೇಶ ಜರುಗಿದೆ. ಪಟ್ಟಣದ ಶ್ರೀರಾಮಲಿಂಗೇಶ್ವರ ದೇವಸ್ಥಾನದ ಹತ್ತಿರ ವಾಸವಿರುವ, ದಲಿತ ಸಮುದಾಯದ 80 ವರ್ಷದ ವಯೋ ವೃದ್ಧೆ ಪಾರಮ್ಮಳು. ಬಹು ದಿನಗಳಿಂದ ವಯೋಸಹಜ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಅನಾಥೆಯಾಗಿರುವ ಆಕೆ ಚಿಕಿತ್ಸೆ ಕಾಣದೇ ನರಳುತ್ತಿದ್ದಳು. ಹಲವು ವರ್ಷಗಳ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಜುಲೈ 16ರಂದು ಶಾಲೆ- ಪಿಯು ಕಾಲೇಜುಗಳಿಗೆ ರಜೆ ಘೋಷಣೆ

Monday, July 15th, 2024
Red Alert

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಜುಲೈ 16ರಂದು ರೆಡ್ ಅಲರ್ಟ್ ಘೋಷಣೆಯಾಗಿದೆ. ಈ ಹಿನ್ನಲೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ನಾಳೆ ಕೂಡ ಶಾಲಾ-ಕಾಲೇಜುಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ. ನಾಳೆ ಅಂಗನವಾಡಿ, ಪ್ರಾಥಮಿಕ, ಪ್ರೌಢ ಹಾಗೂ ಪಿಯು ಕಾಲೇಜು ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಆದೇಶ ನೀಡಿದ್ದಾರೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿಗಾ […]

ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್ಮೆಂಟ್ 19 VTU ಶ್ರೇಣಿಗಳನ್ನು ಪಡೆದುಕೊಂಡಿದೆ

Monday, July 15th, 2024
Sahyadri

ಮಂಗಳೂರು : ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯವು (ವಿಟಿಯು) 2023-24ನೇ ಶೈಕ್ಷಣಿಕ ವರ್ಷಕ್ಕೆ ಇತ್ತೀಚೆಗೆ ಬಿಡುಗಡೆ ಮಾಡಿದ ರ್ಯಾಂಕ್ ಪಟ್ಟಿಯಲ್ಲಿ ಮಂಗಳೂರಿನ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ ಮತ್ತು ಮ್ಯಾನೇಜ್‌ಮೆಂಟ್ (ಎಸ್‌ಸಿಇಎಂ) ವಿದ್ಯಾರ್ಥಿಗಳು 19 ರ್ಯಾಂಕ್ ಗಳನ್ನು ಪಡೆದಿದ್ದಾರೆ. ರಾಜ್ಯ ಮಟ್ಟದಲ್ಲಿ ಕಾಲೇಜು ಪಡೆದ ಗರಿಷ್ಠ ಸಂಖ್ಯೆಯ ಶ್ರೇಣಿಯೆಂದರೆ ಸಹ್ಯಾದ್ರಿ ಕಾಲೇಜ್ ಆಫ್ ಇಂಜಿನಿಯರಿಂಗ್ & ಮ್ಯಾನೇಜ್‌ಮೆಂಟ್, ಮಂಗಳೂರು. ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ (ಡೇಟಾ ಸೈನ್ಸ್) ನ ಶ್ರೀವಿದ್ಯಾ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ […]

ಡೆಂಗ್ಯೂ ನಿಯಂತ್ರಣ: ಸೊಳ್ಳೆ ಉತ್ಪತ್ತಿ ಸ್ಥಳಗಳ ಫೋಟೋ ವಾಟ್ಸಾಪ್ ಮೂಲಕ ಅಧಿಕಾರಿಗಳಿಗೆ ಕಳುಹಿಸಿ

Monday, July 15th, 2024
Dengue Insect

ಮಂಗಳೂರು : ಜಿಲ್ಲೆಯ ವಿವಿದೆಡೆ ಡೆಂಗ್ಯೂ ರೋಗ ಕಂಡುಬಂದಿರುವ ಹಿನ್ನೆಲೆಯಲ್ಲಿ ಡೆಂಗ್ಯೂ ರೋಗಕ್ಕೆ ಕಾರಣವಾದ ಅಂಶಗಳನ್ನು ನಿಯಂತ್ರಿಸಲು ಜಿಲ್ಲಾಡಳಿತ ತೀವ್ರ ಪ್ರಯತ್ನಪಡುತ್ತಿದೆ. ಮನೆಯ ಸುತ್ತಮುತ್ತ ಹಾಗೂ ಇತರೆ ಸಾರ್ವಜನಿಕ ಪ್ರದೇಶಗಳಲ್ಲಿರುವ ನೀರಿನ ತೊಟ್ಟಿಗಳು, ಡ್ರಮ್‍ಗಳು, ಬ್ಯಾರಲ್‍ಗಳು, ಹೂವಿನಕುಂಡ, ಹಳೆ ಟಯರ್‍ಗಳು, ಎಳೆನೀರು ಚಿಪ್ಪು ಮತ್ತಿತರ ವಸ್ತುಗಳಲ್ಲಿ ಅಥವಾ ಖಾಲಿ ಜಾಗಗಳಲ್ಲಿ ನೀರು ನಿಂತು ಸಂಗ್ರಹವಾದರೆ ಸೊಳ್ಳೆಗಳ ಲಾರ್ವಾಗಳು ಉತ್ಪತ್ತಿಯಾಗುತ್ತವೆ. ಲಾರ್ವಾ ನಾಶದಿಂದಷ್ಟೇ ಡೆಂಗ್ಯೂ ನಿಯಂತ್ರಣ ಸಾಧ್ಯ. ಡೆಂಗ್ಯೂ ನಿಯಂತ್ರಣಕ್ಕಾಗಿ ಮನೆಯ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ. ಜಿಲ್ಲೆಯ […]

ತುಳು ಅಧಿಕೃತ ಭಾಷೆ : ಶಾಸಕರುಗಳಿಗೆ ತುಳು ಅಕಾಡೆಮಿ ಅಧ್ಯಕ್ಷರ ಒತ್ತಾಯ

Monday, July 15th, 2024
Tulu-Language

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸುವ ನಿಟ್ಟಿನಲ್ಲಿ ಕರಾವಳಿಯ ಶಾಸಕರು ಪ್ರಸಕ್ತ ವಿಧಾನ ಮಂಡಲದ ಅಧಿವೇಶನದಲ್ಲಿ ವಿಚಾರ ಪ್ರಸಾಪ ಮಾಡಬೇಕೆಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರು ಮನವಿ ಮಾಡಿದ್ದಾರೆ. ತುಳು ಭಾಷೆಯನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಘೋಷಿಸಬೇಕೆಂದು ತುಳು ಭಾಷಿಕರ ಬೇಡಿಕೆಗೆ ಕಳೆದ ಅಧಿವೇಶನದಲ್ಲಿ ಸರಕಾರ ಪೂರಕವಾಗಿ ಸ್ಪಂದಿಸಿರುತ್ತದೆ. ಕಳೆದ ವಿಧಾನಸೌಧ ಅಧಿವೇಶನದಲ್ಲಿ ಈ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಚರ್ಚೆಯ ವೇಳೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಯಾಗಿ ಹೊಂದಿರುವ ಹೊರ […]

ಫ್ಯೂಸ್ ಹಾಕಲು ತೆರಳಿದ ಯುವಕ ವಿದ್ಯುತ್ ಆಘಾತಕ್ಕೆ ಬಲಿ

Monday, July 15th, 2024
Harish

ಉಪ್ಪಿನಂಗಡಿ : ಮನೆಯಲ್ಲಿ ವಿದ್ಯುತ್ ಇಲ್ಲವೆಂದು ವಿದ್ಯುತ್ ಪರಿವರ್ತಕದ ಬಳಿ ಫ್ಯೂಸ್ ಹಾಕಲು ತೆರಳಿದ ಯುವಕನೋರ್ವ ವಿದ್ಯುತ್ ಆಘಾತಕ್ಕೆ ಬಲಿಯಾದ ಘಟನೆ ಜು.15ರಂದು ಇಳಂತಿಲ ಗ್ರಾಮದ ಗೋಳಿತ್ತಡಿ ಎಂಬಲ್ಲಿ ನಡೆದಿದೆ. ಹರೀಶ (32) ಮೃತ ಯುವಕ. ಅಡಿಕೆ ಸುಲಿಯುವ ಕೆಲಸ ಮಾಡುತ್ತಿದ್ದ ಈತ ಉತ್ತಮ ಕಬಡ್ಡಿ ಆಟಗಾರನೂ ಆಗಿದ್ದು, ತನ್ನ ಮನೆಗೆ ವಿದ್ಯುತ್ ಬರುತ್ತಿಲ್ಲವೆಂದು ವಿದ್ಯುತ್ ಪ್ರವಹಿಸಿ ಈತ ಮೃತಪಟ್ಟಿದ್ದಾರೆ.

ಮನೆಯಲ್ಲಿ ಬೆಂಕಿ ಅವಘಡ ಬಾರ್ ಉದ್ಯಮಿ ಮೃತ್ಯು, ನಾಲ್ವರಿಗೆ ಗಂಭೀರ ಗಾಯ

Monday, July 15th, 2024
Ramananda-shetty

ಉಡುಪಿ: ಅಂಬಲಪಾಡಿಯ ಗಾಂಧಿನಗರದ ಅಗ್ನಿ ಅವಘಡದಲ್ಲಿ ಮನೆಯೊಂದು ಸಂಪೂರ್ಣ ಸುಟ್ಟು ಹೋಗಿದ್ದು ಮನೆ ಮಾಲಿಕ ಬಾರ್ ಉದ್ಯಮಿ ಮೃತಪಟ್ಟ ಘಟನೆ ಸೋಮವಾರ ಬೆಳಗಿನ ಜಾವ ನಡೆದಿದೆ. ಅಂಬಲಪಾಡಿಯ ಬಾರ್ ಉದ್ಯಮಿ ರಮಾನಂದ ಶೆಟ್ಟಿ ಮೃತ ಪಟ್ಟವರು. ಅವರ ಪತ್ನಿ ಅಶ್ವಿನಿ ಶೆಟ್ಟಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಅವಘಡಕ್ಕೆ ಕಾರಣ ಎಂದು ಶಂಕಿಸಲಾಗಿದೆ. ಮನೆಮಂದಿ ಮಲಗಿದ್ದ ವೇಳೆ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು ಇದರ ಪರಿಣಾಮ ಇನ್ವರ್ಟರ್ ಸೇರಿದಂತೆ ಹಲವಾರು […]

ಭಾರೀ ಮಳೆ – ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆ

Monday, July 15th, 2024
kUMARADHARA

ಮಂಗಳೂರು: ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಪಶ್ಚಿಮ ಘಟ್ಟ ಪ್ರದೇಶ, ಕುಮಾರಪರ್ವತ ಸೇರಿದಂತೆ ಸುಬ್ರಹ್ಮಣ್ಯ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಬಾರಿಯ ಮಳೆಗೆ ಎರಡನೇ ಸಲ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ. ಕುಮಾರಧಾರ ಕಿಂಡಿ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದ್ದು, ಕುಮಾರಧಾರ ನದಿಗೆ ಇಳಿಯದಂತೆ ಭಕ್ತಾದಿಗಳಿಗೆ ಸೂಚಿಸಲಾಗಿದೆ. ನಿರಂತರ ಸುರಿಯುತ್ತಿರುವ ಮಳೆಗೆ ಕುಮಾರಧಾರ ತುಂಬಿ ಹರಿಯುತ್ತಿದೆ. ಅಲ್ಲದೇ ಕುಮಾರಧಾರ ಉಪನದಿ ದರ್ಪಣ ತೀರ್ಥ […]