ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ ರನ್ನು ಸ್ವಾಗತಿಸಿದ ಮಂಗಳೂರಿನ ಶಾಸಕರು

Friday, October 19th, 2018
yedyurappa

ಮಂಗಳೂರು: ಮಾಜಿ ಮುಖ್ಯಮಂತ್ರಿ , ಬಿ ಜೆ ಪಿ ರಾಜ್ಯಾಧ್ಯಕ್ಷ ಬಿ ಯಸ್ .ಯೆಡಿಯೂರಪ್ಪ ರವರನ್ನು ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ಡಿ ವೇದವ್ಯಾಸ್ ಕಾಮತ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಹಾಗೂ ಪುತ್ತೂರು ಶಾಸಕ ಸಂಜೀವ್ ಮಟ್ಟಂದುರ್ , ನಿತಿನ್ ಕುಮಾರ್ , ಕ್ಯಾಪ್ಟ್ . ಬೃಜೇಶ್ ಚೌಟ , ಸ್ಥಳೀಯ ಮನಪಾ ಸದಸ್ಯ ದಿವಾಕರ್ ಪಾಂಡೇಶ್ವರ್ , ಮುಖಂಡರಾದ ವಸಂತ್ ಜೆ ಪೂಜಾರಿ ಉಪಸ್ಥಿತರಿದ್ದರು.

ಮಂಗಳೂರು ದಸರಾ ವೈಭವದ ಶೋಭಾಯಾತ್ರೆಗೆ ಭರ್ಜರಿ ತಯಾರಿ

Thursday, October 18th, 2018
kudroli

ಮಂಗಳೂರು: ಶ್ರೀ ಕ್ಷೇತ್ರ ಕುದ್ರೋಳಿಯ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವ ಅ.19 ರಂದು ಸಂಪನ್ನಗೊಳ್ಳಲಿದ್ದು, ಈ ಸಂದರ್ಭ ವೈಭವದ ಶೋಭಾಯಾತ್ರೆ ನಡೆಯಲಿದೆ. ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ನಾಡಿನ ನಾನಾ ಭಾಗದಿಂದ ಲಕ್ಷಾಂತರ ಮಂದಿ ಆಗಮಿಸುವ ನಿರೀಕ್ಷೆ ಇದೆ. ಈ ಸಂದರ್ಭ ರಾತ್ರಿಯಿಡೀ ನಡೆಯುವ ಶೋಭಾಯಾತ್ರೆ ಸುಗಮವಾಗಿ ನಡೆಯಲು‌ ಅನುಕೂಲವಾಗುವಂತೆ ಈಗಾಗಲೇ ಟ್ಯಾಬ್ಲೋ ಸಂಘಟಕರು, ಪೊಲೀಸ್ ಅಧಿಕಾರಿಗಳು ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಎರಡು ಸುತ್ತಿನ ಸಭೆ ನಡೆಸಿದ್ದು, ಮೆರವಣಿಗೆಯ ರೂಪುರೇಷೆಗಳನ್ನು‌, ನಿಬಂಧನೆಗಳನ್ನು ಈಗಾಗಲೇ ತಿಳಿಸಲಾಗಿದೆ ಎಂದು […]

25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ: ದಿನೇಶ್ ಸುವರ್ಣ ರಾಯಿ

Thursday, October 18th, 2018
kudla

ಮಂಗಳೂರು: ಮಂಗಳೂರು ದಸರಾದ ವೈಭವದ ಶೋಭಾಯಾತ್ರೆಯು ಅ.19ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಗರದ ಬಳ್ಳಾಲ್ಬಾಗ್ ವೃತ್ತದ ಬಳಿ ಹಾಕಿರುವ ವೇದಿಕೆಯಲ್ಲಿ ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲ ಸಂಸ್ಥೆ ಹುಲಿವೇಷ ಕುಣಿತವನ್ನು ಆಯೋಜಿಸಿದೆ. ಈ ಸಂದರ್ಭದಲ್ಲಿ 25 ಅರ್ಹ ಅನಾರೋಗ್ಯ ಪೀಡಿತರಿಗೆ 15 ಲಕ್ಷದವರೆಗೆ ನಗದು ಹಸ್ತಾಂತರಿಸಲಿದ್ದೇವೆ ಎಂದು ಫ್ರೆಂಡ್ಸ್ ಬಳ್ಳಾಲ್ ಬಾಗ್, ಬಿರುವೆರ್ ಕುಡ್ಲದ ವಕ್ತಾರ ದಿನೇಶ್ ಸುವರ್ಣ ರಾಯಿ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಅಲ್ಲದೆ ಫ್ರೆಂಡ್ಸ್ ಬಳ್ಳಾಲ್ಬಾಗ್, ಬಿರುವೆರ್ ಕುಡ್ಲದ 4ನೇ ವರ್ಷದ ಅಂಗವಾಗಿ ಮಂಗಳೂರು […]

ಅಕ್ರಮ ಮರಳು ಅಡ್ಡೆ ಮೇಲೆ ದಾಳಿ: 11ಲಕ್ಷ ರೂ. ಮೌಲ್ಯದ ಸೊತ್ತು ವಶ

Wednesday, October 17th, 2018
tempo

ಮಂಗಳೂರು: ಅಕ್ರಮ ಮರಳು ಅಡ್ಡೆ ಮೇಲೆ ದಾಳಿ ನಡೆಸಿದ ಪೊಲೀಸರು, ಟಿಪ್ಪರ್, 2 ನಾಡ ದೋಣಿಗಳ ಸಹಿತ 11,72,500 ರೂ. ಮೌಲ್ಯದ ಸೊತ್ತುಗಳನ್ನು ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಅಜಿಲಮೊಗರು ಎಂಬಲ್ಲಿ ವಶಪಡಿಸಿಕೊಂಡಿದ್ದರೆ. ಪೊಲೀಸರು ದಾಳಿ ನಡೆಸಿದಾಗ ಮರುಳುಗಾರಿಕೆಗೆಯಲ್ಲಿ ತೊಡಗಿದ್ದವರು ಪರಾರಿಯಾಗಿದ್ದು, ಅಲ್ಲಿದ್ದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ವಸ್ತುಗಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಮುಂದಿನ ಕ್ರಮಕ್ಕಾಗಿ ಹಸ್ತಾಂತರಿಸಲಾಗಿದೆ. ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕ ಸೋನವಣೆ ಹೃಷಿಕೇಶ್ ಭಗವಾನ್, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್, ಬಂಟ್ವಾಳ […]

ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿ ಬಂಧನ

Wednesday, October 17th, 2018
arrest

ಮಂಗಳೂರು: ವಿವಿಧ ಪ್ರಕರಣಗಳಲ್ಲಿ ಆರೋಪಿತನಾಗಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ದಕ್ಷಿಣ ಕನ್ನಡ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಗ್ರಾಮಾಂತರ ಠಾಣೆ ಸಹಿತ ಹಲವು ಠಾಣಾ ವ್ಯಾಪ್ತಿಗಳಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ತಾಲೂಕಿನ ತೋಡಾರು ಗ್ರಾಮದ ಮಿಜಾರು ಹಿದಾಯತುಲ್ಲಾ ನಗರ ನಿವಾಸಿ ಮಹಮ್ಮದ್ ಫೈಝಲ್ ಅಲಿಯಾಸ್ ತೋಡಾರ್ ಫೈಝಲ್ ಅಲಿಯಾಸ್ ಕ್ಯಾಬರೆ ಫೈಝಲ್ (28) ಪೊಲೀಸರಿಗೆ ಬೇಕಾಗಿದ್ದು ಆತ ತಲೆಮರೆಸಿಕೊಂಡಿದ್ದ. ಆದರೆ, ಆರೋಪಿಯನ್ನು ಮಂಗಳೂರು ರೌಡಿ ನಿಗ್ರಹದಳದ ಪೊಲೀಸರು ಇದೀಗ ಬಂಧಿಸಿದ್ದಾರೆ. ಮಂಗಳೂರು ಗ್ರಾಮರಂತರ ಪೊಲೀಸ್ ಠರಣೆ ಸಹಿತ ವಿವಿಧ […]

ಯುವ ನಾಯಕ ಮಿಥುನ್ ರೈಗೆ ಲೋಕಸಭಾ ಟಿಕೇಟು ಬಹುತೇಕ ಖಚಿತ

Tuesday, October 16th, 2018
Mithun-Rai

ಮಂಗಳೂರು  : ಲೋಕಸಭಾ ಕ್ಷೇತ್ರವವನ್ನು ಸತತ ಎರಡು ಬಾರಿ ಕಳೆದುಕೊಂಡಿರುವ ಕಾಂಗ್ರೆಸ್,  ನಳಿನ್ ಕುಮಾರ್ ಕಟೀಲ್  ವಿರುದ್ಧ ಇರುವ ಆಡಳಿತ ವಿರೊಧಿ ಅಲೆಯನ್ನು ಸಮರ್ಥವಾಗಿ ಮಿಥುನ್ ರೈ ಎದುರಿಸಬಲ್ಲರು ಎಂಬುದನ್ನು ಕಾಂಗ್ರೆಸ್  ನಾಯಕರು ಲೆಕ್ಕಾಚಾರ ಹಾಕಿ ಈ ಬಾರಿ ಯುವ ನಾಯಕನಿಗೆ ಲೋಕಸಭಾ ಟಿಕೇಟು ನೀಡಲು ನಿರ್ಧರಿಸಿದ್ದಾರೆ. ಅದಕ್ಕಾಗಿಯೇ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮಂಗಳೂರು ಲೋಕಸಭಾ ಸ್ಥಾನವನ್ನು ಹೇಗಾದರೂ ಮಾಡಿ  ಪಡೆಯಬೇಕೆಂಬ ನಿರ್ಣಯ ಮಾಡಿರುವುದು ಬಹಳ ಕುತೂಹಲ ಮೂಡಿಸಿದೆ . ಈ ಬಗ್ಗೆ ಪ್ರತಿಕ್ರಿಯಿಸಿದ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ […]

ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ವೈವಿದ್ಯ ಕಾವ್ಯ ವೈಭವ

Tuesday, October 16th, 2018
kalika

ಮಂಜೇಶ್ವರ:- ಸಮೂಹ ಮಾಧ್ಯಮಗಳಿಂದಾಗಿ ಸಾಹಿತ್ಯದಲ್ಲಿ ಯುವ ಜನತೆಗೆ ಆಸಕ್ತಿ ಹೆಚ್ಚಾಗಿದೆ. ವಾಟ್ಸಾಪ್ ಫೇಸ್‌ಬುಕ್‌ಗಳು ಸಾಹಿತ್ಯ ಸಂವಹನಕ್ಕೆ ವೇದಿಕೆಯಾಗಿ ಬರಹಗಳ ಸಾಗರವಾಗಿದೆ. ಇದು ಉತ್ತಮ ಬೆಳವಣೆಗೆಯಾಗಿದೆ, ಎಂದು ಗಡಿನಾಡ ಚುಟುಕು ಸಾಹಿತಿ, ಮಂಜೇಶ್ವರ ಸಿರಿಗನ್ನಡ ವೇದಿಕೆ ಅಧ್ಯಕ್ಷರಾದ ಹರೀಶ್ ಸುಲಾಯ ಒಡ್ಡಂಬೆಟ್ಟು ನುಡಿದರು. ಅವರು ಬಂಗ್ರಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನದಲ್ಲಿ ಶರನ್ನವರಾತ್ರೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ವಿಶ್ವಕರ್ಮ ಸಾಹಿತ್ಯ ದರ್ಶನ ಕಾಸರಗೋಡು ವತಿಯಿಂದ ನಡೆದ ವೈವಿದ್ಯ ಕಾವ್ಯ ವೈಭವ ಹೆಸರಾಂತ ಕವಿಗಳ ಕವಿಗೋಷ್ಠಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. […]

ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರಿಗೆ ಡಾಕ್ಟರೇಟ್

Tuesday, October 16th, 2018
Balakrishna

ಕಾಸರಗೋಡು: ಇಲ್ಲಿನ ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಾಲಕೃಷ್ಣ ಬಿ.ಎಂ. ಹೊಸಂಗಡಿ ಅವರು ಡಾ. ರಾಧಾಕೃಷ್ಣ ಎನ್. ಬೆಳ್ಳೂರು ಅವರ ಮಾರ್ಗದರ್ಶನದಲ್ಲಿ ಕಣ್ಣೂರು ವಿಶ್ವವಿದ್ಯಾನಿಲಯಕ್ಕೆ ಸಮರ್ಪಿಸಿದ ‘ದ್ರಾವಿಡ ನವ್ಯ ಕಾವ್ಯ’ ಎಂಬ ಮಹಾಪ್ರಬಂಧವು ಡಾಕ್ಟರ್ ಆಫ್ ಫಿಲಾಸಫಿ ಪದವಿಗೆ ಅರ್ಹವಾಗಿದೆ ಎಂದು ಕಣ್ಣೂರು ವಿಶ್ವವಿದ್ಯಾನಿಲಯದ ಅಧಿಸೂಚನೆ ತಿಳಿಸಿದೆ. ಹೊಸಂಗಡಿ ಅವರು ದ್ರಾವಿಡ ನವ್ಯ ಕಾವ್ಯ ಸಂಶೋಧನೆಯ ಸಂದರ್ಭದಲ್ಲೇ ಲಂಡನ್ ವಿಶ್ವವಿದ್ಯಾನಲಿಯದ ಟಿಎಸ್ ಎಲಿಯಟ್ ಇಂಟರ್‌ನ್ಯಾಷನಲ್ ಸಮ್ಮರ್ ಸ್ಕೂಲ್ […]

ಹೊರ ರಾಜ್ಯಗಳಲ್ಲಿ ತಮ್ಮ ನಾಡಿನ ಸಂಸ್ಕೃತಿಯ ಪ್ರಸರಣದಲ್ಲಿ ದಕ್ಷಿಣ ಕನ್ನಡಿಗರ ಸೇವೆ ಅನನ್ಯವಾದುದು: ಕಲ್ಕೂರ

Tuesday, October 16th, 2018
kalkur

ಮಂಗಳೂರು: ಉದ್ಯೋಗಾಂಕ್ಷಿಗಳಾಗಿ ದೂರದ ತಮಿಳುನಾಡಿನ ಮದ್ರಾಸ್ ಪ್ರಾಂತ್ಯ ಸಹಿತ ಅನೇಕ ಕಡೆಗಳಲ್ಲಿ ನೆಲೆಸಿ ಉದ್ಯಮಗಳನ್ನು ಸ್ಥಾಪಿಸಿ ಪರಿಶ್ರಮದಿಂದ ಉದ್ಯಮಪತಿಗಳಾಗಿ ಬೆಳೆದಿರುವುದಲ್ಲದೆ, ಇದರಜೊತೆಗೆ ಸಾಮಾಜಿಕ ಸೇವಾ ವ್ಯವಸ್ಥೆಯಲ್ಲೂತಮ್ಮನ್ನುತಾವು ತೊಡಗಿಸಿಕೊಳ್ಳುವಲ್ಲಿ ಅವಿಭಜಿತದಕ್ಷಿಣಕನ್ನಡಿಗರು ನಿಸ್ಸೀಮರು ಎಂದುಕಲ್ಕೂರ ಪ್ರತಿಷ್ಠಾನದಅಧ್ಯಕ್ಷಎಸ್. ಪ್ರದೀಪಕುಮಾರಕಲ್ಕೂರ ನುಡಿದರು. ಕಳೆದ ಐದಾರು ತಲೆಮಾರುಗಳಿಂದ ತಮಿಳು ನಾಡಿನ ಮದ್ರಾಸ್ ಪ್ರಾಂತ್ಯದಲ್ಲಿ ನೆಲೆಸಿ ಸಾಂಸ್ಕೃತಿಕ ಸಂಘಟನೆಗಳನ್ನು ಕಟ್ಟಿ ಬೆಳೆಸಿ, ಚೆನ್ನೈಕನ್ನಡ ಸಂಘ, ಎಸ್.ಕೆ.ಡಿ.ಬಿ. ಎಸೋಸಿಯೇಶನ್ ಸಂಸ್ಥೆಗಳ ಮೂಲಕ ಕನ್ನಡಕಂಪನ್ನುತುಳುನಾಡಿನ ಸಂಸ್ಕೃತಿಯನ್ನು ಹೊರರಾಜ್ಯದಲ್ಲಿ ಪಸರಿಸಿರುವುದಲ್ಲದೆ ಶೈಕ್ಷಣಿಕ ಕ್ಷೇತ್ರದಲ್ಲೂ ಮಹತ್ಸಾಧನೆಯನ್ನು ಮಾಡಿದ ಕೀರ್ತಿ ದಕ್ಷಿಣ ಕನ್ನಡಿಗರಿಗೆ […]

ಕಸಾಯಿಖಾನೆ ವಿವಾದ: ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್​ಮೆಂಟ್ ಸಚಿವರಿಗೆ ಪತ್ರ ಬರೆದ ಯು ಟಿ ಖಾದರ್

Tuesday, October 16th, 2018
u-t-kadher

ಮಂಗಳೂರು: ಸ್ಮಾರ್ಟ್ ಸಿಟಿ ಅನುದಾನದಲ್ಲಿ ಕಸಾಯಿಖಾನೆಯ ಸ್ವಚ್ಛತ ಮತ್ತು ಅಭಿವೃದ್ಧಿಗೆ ಹೋಲಿಸುವ ಸಂಬಂಧ ನೀಡಿರುವ ಸಲಹೆ ವಿವಾದಕ್ಕೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಅರ್ಬನ್ ಡೆವಲಪ್ಮೆಂಟ್ ಸಚಿವರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು ಟಿ ಖಾದರ್ ತಿಳಿಸಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರದ ಸ್ವಚ್ಛತೆ ಅಭಿವೃದ್ಧಿಗೆ ಉತ್ತಮವಾದ ಆಹಾರ ಜನರಿಗೆ ಸಿಗಬೇಕೆಂದು ಈ ಪ್ರಪೋಸಲ್ ಅನ್ನು ಸ್ಮಾರ್ಟ್ ಸಿಟಿ ಸಮಿತಿಯ ಮುಂದೆ ಇಟ್ಟಿದ್ದೆ. ಆದರೆ ಈ ಬಗ್ಗೆ ಚುನಾಯಿತ […]