ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿದ ಪಾಲಿಕೆ

Tuesday, August 7th, 2018
Tree lifted

ಮಂಗಳೂರು : ಪರಿಸರವಾದಿಗಳು, ಮಂಗಳೂರು ಎನ್ ಇ ಸಿ ಎಫ್ ಪರಿಸರವಾದಿಗಳ ಸಂಘಟನೆ ಕಾರ್ಯಕರ್ತರಿಂದ  ತೀವ್ರ ವಿರೋಧವಾದ ಹಿನ್ನಲೆಯಲ್ಲಿ ಲೇಡಿಹಿಲ್ ನ ರಸ್ತೆ ತಿರುವಿನಲ್ಲಿದ್ದ ಬೃಹತ್ ಮರವೊಂದನ್ನು ಬುಡ ಸಮೇತ ಬೇರೆಡೆಗೆ ಸ್ಥಳಾಂತರಿಸಿ ನೆಡಲಾಗಿದೆ. ವಾಹನ ಸಂಚಾರಕ್ಕೆ ಅಡ್ಡಿಯಾಗುತಿದ್ದ ಹಿನ್ನೆಲೆಯಲ್ಲಿ ‘ಪೆಲ್ಟೋಫೋರಂ’ ಜಾತಿಯ ಆ ಮರವನ್ನು ಕಡಿಯಲು ಮಂಗಳೂರು ಮಹಾನಗರ ಪಾಲಿಕೆ ನಿರ್ಧರಿಸಿತ್ತು. ಮಂಗಳೂರು ಮಾಹಾನಗರ ಪಾಲಿಕೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಕ್ರೇನ್ ಮೂಲಕ ಸಮೀಪದಲ್ಲೇ ಇದ್ದ ಖಾಲಿ ಜಾಗಕ್ಕೆ ಸ್ಥಳಾತಂರಿಸಲಾಯಿತು.

ಗದಗ ಜಿಲ್ಲೆ ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧಿಕಾರ ಸ್ವೀಕಾರ

Tuesday, August 7th, 2018
Gadag Dc

ಗದಗ : ಹುಬ್ಬಳ್ಳಿ ಧಾರವಾಡ ಬಿ.ಆರ್.ಟಿ.ಎಸ್. ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಆಯ.ಎ.ಎಸ್ ಅಧಿಕಾರಿ ಎಂ.ಜಿ.ಹಿರೇಮಠ ಅವರು ಮಂಗಳವಾರದಂದು ಗದಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ವರ್ಗಾವಣೆಗೊಂಡ ಜಿಲ್ಲಾಧಿಕಾರಿ ಮನೋಜ್ ಜೈನ್, ಗದಗ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ ಚವ್ಹಾಣ ಅವರು ನೂತನ ಜಿಲ್ಲಾಧಿಕಾರಿಗಳಿಗೆ ಹೂಗುಚ್ಛ ನೀಡಿ ಶುಭ ಕೋರಿದರು. ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪ ವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ ಚವ್ಹಾಣ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿದರ್ೇಶಕ ರುದ್ರೇಶ ಎಸ್.ಎನ್. ಹಾಗೂ ಗದಗ-ಬೆಟಗೇರಿ ನಗರಸಭೆ […]

ಹೆಗ್ಗಡೆಯವರ ಆಶೀರ್ವಾದ ಪಡೆದ ಶ್ರೀನಿವಾಸ ನಾಯಕ್ ಇಂದಾಜೆ

Tuesday, August 7th, 2018
Srinivas indaje

ಉಜಿರೆ:  ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀನಿವಾಸ ನಾಯಕ್ ಇಂದಾಜೆ ಸೋಮವಾರ ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಅವರನ್ನು ಅಭಿನಂದಿಸಿದ ಹೆಗ್ಗಡೆಯವರು ಅಧ್ಯಕ್ಷರಾಗಿ ಸೇವೆ ಸಲ್ಲಿಸುವಲ್ಲಿ ಸರ್ವ ರೀತಿಯ ಯಶಸ್ಸನ್ನು ಹಾರೈಸಿದರು.

ಮಂಗಳೂರು– ಕಾಸರಗೋಡು ಸರ್ಕಾರಿ ಬಸ್‌ ಸಂಚಾರ ಬಂದ್

Tuesday, August 7th, 2018
ksrtc

ಮಂಗಳೂರು : ರಾಷ್ಟ್ರೀಯ ಸಾರಿಗೆ ನೌಕರರ ಒಕ್ಕೂಟ ಕರೆ ನೀಡಿರುವ ಮುಷ್ಕರದಿಂದಾಗಿ ಮಂಗಳೂರು– ಕಾಸರಗೋಡು ನಡುವಿನ ಸರ್ಕಾರಿ ಬಸ್‌ ಸಂಚಾರ ಸಂಪೂರ್ಣ ಸ್ಥಗಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಮಂಗಳೂರು ಘಟಕದಿಂದ ಕೇರಳದ ಕಾಸರಗೋಡು ಜಿಲ್ಲೆಯ ವಿವಿಧೆಡೆಗೆ ಪ್ರತಿನಿತ್ಯ 35 ಬಸ್‌ಗಳು ಸಂಚರಿಸುತ್ತವೆ. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮದ 35 ಬಸ್‌ಗಳು ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿವೆ. ಈ ಎಲ್ಲ ಬಸ್‌ಗಳ ಸಂಚಾರ ಮಂಗಳವಾರ ಬೆಳಿಗ್ಗೆಯಿಂದ ಸ್ಥಗಿತವಾಗಿದೆ. ಪುತ್ತೂರು, ಸುಳ್ಯದಿಂದಲೂ ಕೇರಳದ ವಿವಿಧೆಡೆಗೆ ಸಂಚರಿಸುವ ಬಸ್‌ಗಳ ಸಂಚಾರವೂ […]

ಹುಬ್ಬಳ್ಳಿ : ಇಂದಿರಾ ಕ್ಯಾಂಟೀನ್ ಇನ್ನೂ ಉದ್ಘಾಟನೆ ಆಗಿಲ್ಲ

Tuesday, August 7th, 2018
Hubli indira canteen

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ ಇಂದಿರಾ ಕ್ಯಾಂಟಿನ್. ಹು-ಧಾ ಅವಳಿ ನಗರದಲ್ಲಿಯೂ ಕೂಡ ಇಂದಿರಾ ಕ್ಯಾಂಟಿನ್ ತಲೆ ಎತ್ತಿದ್ದವು. ಉದ್ಘಾಟನೆಯಾಗಬೇಕು ಎನ್ನುವಷ್ಟರಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಯಿತು.‌ ಈಗಸಮ್ಮಿಶ್ರ ಸರ್ಕಾರವಿದ್ದು, ಸರ್ಕಾರ ರಚನೆಯಾಗಿ 2 ತಿಂಗಳು ಮುಗಿದರೂ ಇಂದಿರಾ ಕ್ಯಾಂಟಿನ್ ಗೆ ಇನ್ನೂ ಉದ್ಘಾಟನೆ ಭಾಗ್ಯ ಬಂದಿಲ್ಲ. ಬಡವರು, ಕೂಲಿ ಕಾರ್ಮಿಕರಿಗೆ ಕಡಿಮೆ ದರದಲ್ಲಿ ಊಟ ಮತ್ತು ಉಪಹಾರ ನೀಡಬೇಕಿದ್ದ ಕ್ಯಾಂಟಿನನ್ನು ಜಿಲ್ಲಾ ಉಸ್ತುವಾರಿ ಸಚಿವರಿಂದಲೇ ಇಂದಿರಾ ಕ್ಯಾಂಟಿನ್ ಉದ್ಘಾಟನೆ ಮಾಡಿಸಬೇಕು ಎಂಬ ಮಾತು ಕೇಳಿ […]

ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದ ಸಚಿವೆ ಜಯಮಾಲಾ

Tuesday, August 7th, 2018
Anganavadi Kendra

ಮಂಗಳೂರು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಡಾ. ಜಯಮಾಲಾ ಅವರು ಮಂಗಳೂರು ನಗರದಲ್ಲಿನ ಎರಡು ಅಂಗನವಾಡಿ ಕೇಂದ್ರಗಳಿಗೆ ದಿಢೀರ್ ಭೇಟಿ ನೀಡಿದರು. ನಗರದ ಬಿಜೈ ಕಾಪಿಕಾಡ್ ಹಾಗೂ ಶಕ್ತಿನಗರ ಪದವು ಅಂಗನವಾಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿದ ಸಚಿವೆ, ಈ ಸಂದರ್ಭದಲ್ಲಿ ಅಂಗನವಾಡಿ ಕಾರ್ಯಕರ್ತೆಯರೊಂದಿಗೆ, ಬಿಸಿಯೂಟ ಕಾರ್ಯಕರ್ತೆಯರೊಂದಿಗೆ ಸಮಾಲೋಚನೆ ನಡೆಸಿದರು. ಬಿಜೈ ಅಂಗನವಾಡಿಯಲ್ಲಿ ಮಕ್ಕಳಿಗೆ ವಿತರಿಸಲಾಗುತ್ತಿದ್ದ ಊಟವನ್ನು ಸಚಿವೆ ಡಾ. ಜಯಮಾಲಾ ಅವರು ಪರಿಶೀಲನೆ ನಡೆಸಿದರು. ಊಟ ಬಡಿಸುತ್ತಿದ್ದ […]

ಗುರುಪುರ ಹೊಸ ಸೇತುವೆ ನಿರ್ಮಾಣಕ್ಕೆ ಕೇಂದ್ರದಿಂದ 37.88 ಕೋಟಿ ರೂ. ಮಂಜೂರು

Monday, August 6th, 2018
Gurupura-Bridge

ಮಂಗಳೂರು : ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ರಾಷ್ಟ್ರೀಯ ಹೆದ್ದಾರಿ 169 ಫಲ್ಗುಣಿ ನದಿಗೆ ಗುರುಪುರದಲ್ಲಿ ಹೊಸ ಸೇತುವೆ ನಿರ್ಮಾಣ ಯೋಜನೆಗೆ37.88 ಕೋಟಿ ರೂ. ಮಂಜೂರು ಮಾಡಿದೆ. ಸಂಸದ ನಳಿನ್‌ಕುಮಾರ್ ಕಟೀಲ್ ಅವರ ಮನವಿ ಮೇರೆಗೆ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಯೋಜನೆಗೆ ಶಿಫಾರಸು ಮಾಡಿದ್ದರು. ರಾಜ್ಯ ಸರ್ಕಾರ ಕಳುಹಿಸಿದ 38.07 ಕೋಟಿ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಪರಿಶೀಲಿಸಿದ ಕೇಂದ್ರ ಸಚಿವಾಲಯ ಅಂತಿಮವಾಗಿ 37.88 ಕೋಟಿ ರೂ.ಮೊತ್ತಕ್ಕೆ […]

ಗ್ರಾಮಗಳಲ್ಲಿ ಸರಕಾರಿ ಸೌಲಭ್ಯಗಳ ಸೇವಾ ಕೇಂದ್ರ ಸ್ಥಾಪನೆಗೆ ಆಸಕ್ತರಿಂದ ಅರ್ಜಿ ಆಹ್ವಾನ

Monday, August 6th, 2018
sevakendra

ಮಂಗಳೂರು : ರಾಷ್ಟ್ರೀಯ ಇ-ಆಡಳಿತ ಹಾಗೂ ಇಡಿಸಿಎಸ್ ನಿರ್ದೇಶನಾಲಯದ ನಿರ್ದೇಶನದಂತೆ ಇ-ಜಿಲ್ಲಾ ಯೋಜನೆಯ ಸೇವಾ ಸಿಂಧು ಅಂತರ್ಜಾಲ ತಾಣವನ್ನು ಅಭಿವೃದ್ಧಿಪಡಿಸಿದ್ದು, ಇದರಲ್ಲಿ ವಿವಿಧ ಇಲಾಖೆಗಳ 346 ಸೇವೆಗಳನ್ನು ಅಂತರ್ಜಾಲ ತಾಣದಲ್ಲಿ ಸಂಯೋಜಿಸಲು ಗುರುತಿಸಲಾಗಿದೆ. ಪ್ರಾರಂಭಿಕ ಹಂತದಲ್ಲಿ ಕಂದಾಯ ನಾಗರಿಕ ಸೇವೆಗಳಾದ ಜಾತಿ ಪ್ರಮಾಣಪತ್ರ, ಆದಾಯ ಪ್ರಮಾಣ ಪತ್ರ, ಓ.ಬಿ.ಸಿ. ಪ್ರಮಾಣ ಪತ್ರ, ಭೂಹಿಡುವಳಿ ದೃಢೀಕರಣ ಪತ್ರ, ಪಿಂಚಣಿ ಪ್ರಮಾಣ ಪತ್ರ, ವಂಶವೃಕ್ಷ ಪ್ರಮಾಣ ಪತ್ರ ಹಾಗೂ ವ್ಯವಸಾಯಗಾರರ ಕುಟುಂಬ ಪ್ರಮಾಣ ಪತ್ರ ಸೇರಿದಂತೆ 29 ಸೇವೆಗಳು ಹಾಗೂ […]

ಹುಬ್ಬಳ್ಳಿ : ನೃಪತುಂಗ ಬೆಟ್ಟದ ಬಳಿ ಯುವಕನಿಗೆ ಇರಿತ

Monday, August 6th, 2018
Nrupatunga hill

ಹುಬ್ಬಳ್ಳಿ : ನಗರದ ನೃಪತುಂಗ ಬೆಟ್ಟದ ಬಳಿಯ ವೆಂಕಟೇಶ್ವರ ಕಾಲನಿಯಲ್ಲಿ ಹಾಡಹಗಲೇ ಯುವಕನಿಗೆ ದುಷ್ಕರ್ಮಿಗಳು ಚೂರಿಯಿಂದ ಇರಿದು ಪರಾರಿಯಾಗಿರುವ ಘಟನೆ ಸೋಮವಾರ ನಡೆದಿದೆ.‌ ಸತೀಶ್ ದಲಬಂಜನ್ (32) ಎಂಬಾತ ಇರಿತಕೊಳ್ಳಗಾದ ವ್ಯಕ್ತಿ. ಯುವಕರ ಗುಂಪೊಂದು ಗಲಾಟೆ ಮಾಡುತ್ತ ಸತೀಶ್ಗೆ ಚಾಕುವಿನಿಂದ ಇರಿದಿದ್ದಾರೆ. ಇರಿತದ ತೀರ್ವತೆಯ ಪರಿಣಾಮ ಆತನ ಹೊಟ್ಟೆ ಹಾಗೂ ಕೈಗೆಲ್ಲ ಗಾಯಗಳಾಗವೆ. ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮುಖೇಶ ಕುಮಾರ್ ಚೌಧರಿ ಮತ್ತು ಆತನ ಸಹಚರರು ಚಾಕು ಇರಿದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ […]

ಬೆಳ್ತಂಗಡಿ ಕೆಎಸ್ಆರ್ ಟಿಸಿ ಬಸ್ಸಿಗೆ ಕಾರು ಡಿಕ್ಕಿ ಇಬ್ಬರು ಸ್ಥಳದಲ್ಲೇ ಸಾವು

Monday, August 6th, 2018
Belthangady Accident

ಮಂಗಳೂರು : ಬೆಳ್ತಂಗಡಿ ತಾಲೂಕಿನ ಕೌಕ್ರಾಡಿ ಬಳಿ ಬೆಂಗಳೂರು ಕಡೆ ತೆರಳುತ್ತಿದ್ದ ಕೆಎಸ್ಆರ್ ಟಿಸಿ ಬಸ್ಸಿಗೆ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಯಿಂದ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಕಾರಿನಲ್ಲಿದ್ದ ಧರ್ಮಸ್ಥಳ ನಿವಾಸಿಗಳಾದ ದಿನೇಶ್(32) ಹಾಗೂ ಸಂದೇಶ್(30) ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಈ ಇಬ್ಬರು ತೀವ್ರವಾಗಿ ಗಾಯಗೊಂಡು ನರಳಾಡುತ್ತಿದ್ದರು. ಅವರನ್ನು ಸ್ಥಳೀಯ ಯುವಕರು ಹರಸಾಹಸಪಟ್ಟು ಕಾರಿಂದ ಹೊರತೆಗೆದು ಆಸ್ಪತ್ರೆಗೆ ಸಾಗಿಸುತ್ತಿದ್ದರು. ಈ ವೇಳೆ ಮಾರ್ಗಮಧ್ಯೆ ದಿನೇಶ್ ಮತ್ತು ಸಂದೇಶ ಅಸುನೀಗಿದ್ದಾರೆ. […]