ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಹಾಗೂ ವೈಭವದ ಬ್ರಹ್ಮರಥೋತ್ಸವ

Tuesday, December 19th, 2023
Kukke Subrahmanya

ಸುಳ್ಯ : ದಕ್ಷಿಣ ಭಾರತದ ಇತಿಹಾಸ ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಚಂಪಾ ಷಷ್ಠಿ ವೈಭವ ಹಾಗೂ ಬ್ರಹ್ಮರಥೋತ್ಸವವು ಸೋಮವಾರ ವಿಜೃಂಭಣೆಯಿಂದ ನೆರವೇರಿತು. ನಾಡಿನೆಲ್ಲೆಡೆಯಿಂದ ಭಕ್ತ ಸಾಗರವೇ ಕುಕ್ಕೆಗೆ ಆಗಮಿಸಿ, ಬ್ರಹ್ಮರಥೋತ್ಸವ ಕಣ್ಣುಂಬಿಕೊಂಡರು. ಜೊತೆಗೆ ಕುಕ್ಕೆಯ ಶ್ರೀ ಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು. ಇತಿಹಾಸ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲೂ, ಐದು ದಿನಗಳ ಪರ್ಯಂತ ಷಷ್ಠಿ ಮಹೋತ್ಸವ ವೈಭವದಿಂದ ನೆರವೇರಿದೆ. ಕೊನೆಯ ದಿನವಾದ ಸೋಮವಾರ ಚಂಪಾಷಷ್ಠಿ ಮಹೋತ್ಸವಕ್ಕೆ ಬೆಳಗ್ಗೆ 7.30ರ ಧನುಲಗ್ನ ಮುಹೂರ್ತದಲ್ಲಿ ಅದ್ಧೂರಿ […]

ಬಸ್ ಮತ್ತು ಬೈಕ್ ಡಿಕ್ಕಿ : ಬೈಕ್‌ ಸವಾರ ಮೃತ್ಯು

Saturday, December 16th, 2023
Aspak

ವಿಟ್ಲ : ಕಬಕ ಸಮೀಪದ ಮಿತ್ತೂರು ಎಂಬಲ್ಲಿ ಬಸ್ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಬಿ.ಸಿ.ರೋಡ್ ಕೈಕಂಬ ನಿವಾಸಿ ಅಹಮ್ಮದ್ ಆಶಿಕ್ ಅಕ್ಮಲ್ (18) ಎಂದು ಗುರುತಿಸಲಾಗಿದೆ.ಬೈಕ್ ಬಸ್ಸಿನಡಿಗೆ ಎಸೆಯಟ್ಟಿದ್ದು, ಸಂಪೂರ್ಣ ಜಖಂಗೊಂಡಿದೆ. ಕಬಕ ಕಡೆಯಿಂದ ಬಿ.ಸಿ ರೋಡ್ ಗೆ ತೆರಳುತ್ತಿದ್ದಾಗ ಎದುರಿನಿದ ಬಂದ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬಸ್ ರಸ್ತೆ ಬಿಟ್ಟು ಬದಿಯ ಕಣಿವೆಗೆ ಜಾರಿ ನಿಂತಿದೆ ಎನ್ನಲಾಗಿದೆ. ಆಶಿಕ್ ಕಬಕದಲ್ಲಿ ಹಳೆಯ […]

ಆಳ್ವಾಸ್ ವಿರಾಸತ್ ನಲ್ಲಿ ಗಾನ ವೈಭವ, ಬಿದಿರೆ ನಾಡಲ್ಲಿ ‘ಬಿನ್ನಿ’ ಬಕ್ತಮೀಸ್ ದಿಲ್ ಜೋಶ್

Friday, December 15th, 2023
Alvas Virasath

ಮೂಡಬಿದಿರೆ : ಪಡುವಣದಲ್ಲಿ ನೇಸರ ಹೊಂಗಿರಣ ಬೀರಿ ಬೈ ಬೈ ಹೇಳುತ್ತಿದ್ದರೆ, ಇತ್ತ ಮೂಡಣ ದಿಕ್ಕಿನ ಬಿದಿರೆಯ ನಾಡಲ್ಲಿ, ಶಿಕ್ಷಣ- ಸಾಂಸ್ಕೃತಿಕ ಕಾಶಿಯ ಬೀಡಲ್ಲಿ ನಾದ ನಿನಾದ ‘ಗಾನ ವೈಭವ’ ಮೊಳಗಿತು. ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ, ಬೆಂಗಾಲಿ, ಗುಜರಾತಿ ಮತ್ತು ಮರಾಠಿ ಸೇರಿದಂತೆ 19ಕ್ಕೂ ಅಧಿಕ ಭಾಷೆಗಳಲ್ಲಿ 3500 ಹಾಡುಗಳನ್ನು ಹಾಡಿದ ಖ್ಯಾತ ಹಿನ್ನೆಲೆ ಗಾಯಕ ಬಿನ್ನಿ ದಯಾಲ್ ಅವರ ಬಾಲಿವುಡ್, ಪಂಜಾಬ್, ತಮಿಳು ಸೇರಿದಂತೆ ಉತ್ತರ, ದಕ್ಷಿಣ, ಪೂರ್ವ, ಪಶ್ಚಿಮದ ಸ್ವರ ಮಾಧುರ್ಯಕ್ಕೆ […]

ಯುವತಿಯರನ್ನು ಬಳಸಿಕೊಂಡು ಮನೆಯೊಂದರಲ್ಲಿ ವೇಶ್ಯಾವಾಟಿಕೆ, ಐವರ ಬಂಧನ

Friday, December 15th, 2023
ಯುವತಿಯರನ್ನು ಬಳಸಿಕೊಂಡು ಮನೆಯೊಂದರಲ್ಲಿ ವೇಶ್ಯಾವಾಟಿಕೆ, ಐವರ ಬಂಧನ

ಕಾರ್ಕಳ : ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಕಳ ನಗರ ಪೊಲೀಸರು ಗುರುವಾರ ದಾಳಿ ನಡೆಸಿ ಓರ್ವ ಮಹಿಳೆಯನ್ನು ರಕ್ಷಿಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಕಾರ್ಕಳ ತಾಲೂಕಿನ ಕಸಬಾ ಗ್ರಾಮದ ಪಟ್ಲ ದಾನಿಯಾ ಪಿರೇರಾ ಎಂಬವರ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸಲಾಗುತ್ತಿತ್ತು ಎಂಬ ದೂರಿನ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಇಲ್ಲಿ ಮಹಿಳೆಯರನ್ನು ಹಾಗೂ ಯುವತಿಯರನ್ನು ಬಳಸಿಕೊಂಡು ಅನೈತಿಕ ದಂಧೆ ವ್ಯವಹಾರ ನಡೆಸುತ್ತಿದ್ದ ಕಾರ್ಕಳದ ಗೋವರ್ಧನ, ಎಣ್ಣೆಹೊಳೆ ಶಿವಕೃಪಾ ನಿವಾಸಿ ಉಪೇಂದ್ರ ಯಾನೆ […]

ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು

Thursday, December 14th, 2023
ಆಳ್ವಾಸ್ ವಿರಾಸತ್ ಗೆ ಅದ್ದೂರಿಯ ಚಾಲನೆ: ದೀಪ ಬೆಳಗಿದ ರಾಜ್ಯಪಾಲರು

ಮೂಡುಬಿದಿರೆ: ಮೂಡುಬಿದಿರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ 29ನೇ ಆಳ್ವಾಸ್ ವಿರಾಸತ್ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್‌ಚಂದ್‌ ಗೆಹ್ಲೋಟ್ ಚಾಲನೆ ನೀಡಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ದೇಶ, ಧರ್ಮ, ಸಂಸ್ಕೃತಿಗಳನ್ನು ಎತ್ತಿ ಹಿಡಿಯುವ ಕಾರ್ಯ ಮಾಡುತ್ತಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹಲೋತ್ ಶ್ಲಾಘಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ, 29ನೇ ವಿರಾಸತ್ ಅನ್ನು ಗುರುವಾರ ಸಂಜೆ ಆಳ್ವಾಸ್ ಕಾಲೇಜಿನ ಶ್ರೀಮತಿ ವನಜಾಕ್ಷಿ ಕೆ. ಶ್ರೀಪತಿ ಭಟ್ ಬಯಲು ರಂಗಮAದಿರದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. […]

ಉದ್ಯೋಗಕ್ಕೆ ಸೇರಿದ ಎರಡೇ ತಿಂಗಳಲ್ಲಿ ಪುತ್ತೂರಿನ ಯುವ ವಿಜ್ಞಾನಿ ಆತ್ಮಹತ್ಯೆ

Thursday, December 14th, 2023
bharth

ಪುತ್ತೂರು: ಯುವ ವಿಜ್ಞಾನಿ ಯೋರ್ವರು ಎರಡು ತಿಂಗಳ ಹಿಂದೆಯಷ್ಟೇ ಉದ್ಯೋಗಕ್ಕೆ ಸೇರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕಲ್ಲರ್ಪೆ ಎಂಬಲ್ಲಿ ಗುರುವಾರ ನಡೆದಿದೆ. ಮೃತ ಯುವಕನನ್ನು ಕಲ್ಲರ್ಪೆ ನಿವಾಸಿ ಭರತ್ (24) ಎಂದು ಗುರುತಿಸಲಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಅವರು ಹೈದರಾಬಾದ್ ನ ಡಿಆರ್ ಡಿಒ ಎಂಬ ಸಂಸ್ಥೆಯಲ್ಲಿ ವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿದ್ದರು. ಕಳೆದ ಒಂದು ವಾರದ ಹಿಂದೆ ಊರಿಗೆ ಆಗಮಿಸಿದ್ದರು. ಸಂಸ್ಥೆಗೆ ರಾಜೀನಾಮೆ ಪತ್ರ ನೀಡಿದ್ದರೂ ರಾಜೀನಾಮೆ ಸ್ವೀಕಾರ […]

ಶಾಲೆ ಎದುರು ಬಿಯರ್ ಬಾಟಲಿ, ಪ್ರಶ್ನಿಸಿದ ಯುವಕನನ್ನು ಹತ್ಯೆಗೈದ ಕುಡುಕರು

Thursday, December 14th, 2023
Beer-Bottol

ಉಳ್ಳಾಲ : ಕುಡುಕರಿಬ್ಬರು ಸೇರಿ ಯುವಕನೊಬ್ಬನ್ನು ಮಾರಕಾಸ್ತ್ರದಿಂದ ಇರಿದು ಹತ್ಯೆಗೈದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಕೊಲ್ಯ ಸಾರಸ್ವತ ಕಾಲನಿಯ ಶಾಲೆಯೊಂದರ ಬಳಿ ಬುಧವಾರ ರಾತ್ರಿ ನಡೆದಿದೆ. ಹತ್ಯೆಗೀಡಾದ ಯುವಕನನ್ನು ಕೊಲ್ಯ ಸಾರಸ್ವತ ಕಾಲನಿ ನಿವಾಸಿ ವರುಣ್ ಗಟ್ಟಿ(28) ಎಂದು ಗುರುತಿಸಲಾಗಿದೆ. ಮೃತ ಯುವಕ ಶಾಲೆ ಎದುರು ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದನ್ನು ಪ್ರಶ್ನಿಸಿದ್ದಕ್ಕೆ ಕೊಲೆಗೈಯ್ಯಲಾಗಿದೆ ಎಂದು ಹೇಳಲಾಗಿದೆ. ಶಾಲೆಯ ಮುಂಭಾಗದ ಕಟ್ಟೆಯೊಂದರಲ್ಲಿ ಕುಳಿತು ಸೂರಜ್ ಮತ್ತು ರವಿರಾಜ್ ಬಿಯರ್ ಕುಡಿದು ಬಾಟಲಿಯನ್ನು ರಸ್ತೆಗೆ ಎಸೆದಿದ್ದರೆನ್ನಲಾಗಿದೆ. […]

ಕಾಪುವಿನ ಉದ್ಯಾವರ ಸೇತುವೆ ಮೇಲಿಂದ ಹಾರಿದ ಖಾಸಗಿ ಎಲೆಕ್ಟ್ರಾನಿಕ್ ಸಂಸ್ಥೆ ಉದ್ಯೋಗಿ

Wednesday, December 13th, 2023
udyavara-bridge

ಉಡುಪಿ: ಕಾಪುವಿನ ಉದ್ಯಾವರ ಸೇತುವೆ ಮೇಲಿಂದ ವ್ಯಕ್ತಿಯೊಬ್ಬರು ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸೇತುವೆ ಪಕ್ಕದಲ್ಲಿ ಸ್ಕೂಟಿ, ಚಪ್ಪಲಿ ದೊರೆತ ಹಿನ್ನೆಲೆ ಹುಡುಕಾಟ ಮುಂದುವರಿಸಲಾಗಿದೆ. ಕಾಪು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ಮುಂದುವರಿದಿದೆ. ನದಿಗೆ ಹಾರಿದ ವ್ಯಕ್ತಿ ಉಡುಪಿಯ ಎಲೆಕ್ಟ್ರಾನಿಕ್ ಸಂಸ್ಥೆಯ ಉದ್ಯೋಗಿ ಎಂದು ತಿಳಿದು ಬಂದಿದೆ.

ರಂಗಕರ್ಮಿ, ಸಮಾಜ ಸೇವಕ ಲೀಲಾಧರ ಶೆಟ್ಟಿ ಹಾಗೂ ಪತ್ನಿ ಆತ್ಮಹತ್ಯೆ

Wednesday, December 13th, 2023
Kaupu-Leeladhara-Shetty

ಉಡುಪಿ : ರಂಗಕರ್ಮಿ, ಸಮಾಜ ಸೇವಕ ಧಾರ್ಮಿಕ ಮುಂದಾಳು ಕಾಪು ಲೀಲಾಧರ ಶೆಟ್ಟಿ ಹಾಗೂ ಅವರ ಪತ್ನಿ ವಸುಂದರಾ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಾಪುವಿನಲ್ಲಿರುವ ಅವರ ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ್ದು, ದಂಪತಿ ಸಮಾಜ ಸೇವೆ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಬಹಳ ಸಕ್ರೀಯರಾಗಿದ್ದರು. ಲೀಲಾಧರ ಶೆಟ್ಟಿಯವರು ರಂಗಕರ್ಮಿಯಾಗಿದ್ದು, ರಂಗತರಂಗ ನಾಟಕ ತಂಡದವನ್ನು ಬೆಳೆಸಿದ್ದರು. ಒಂದು ಬಾರಿ ಕಾಪು ಕ್ಷೇತ್ರದಿಂದ ವಿಧಾನಸಭಾ ಚುನಾವಣೆಗೆ ಸಹ ಸ್ಪರ್ಧಿಸಿದ್ದರು. ದಂಪತಿ ಕೌಟುಂಬಿಕ ಕಾರಣಗಳಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. […]

ಮಂಗಳಾ ಈಜು ಕೊಳದಲ್ಲಿ ಮುಳುಗಿ ವ್ಯಕ್ತಿ ಸಾವು

Tuesday, December 12th, 2023
Abhishek

ಮಂಗಳೂರು : ಮಂಗಳಾ ಈಜು ಕೊಳದಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಘಟನೆ ಬರ್ಕೆ ಠಾಣಾ ವ್ಯಾಪ್ತಿಯ ಮಂಗಳ ಈಜು ಕೊಳದಲ್ಲಿ ಸಂಜೆ ನಡೆದಿದೆ. ಮೃತ ವ್ಯಕ್ತಿಯನ್ನು ಹರಿಯಾಣ ಮೂಲದ ಅಭಿಷೇಕ್ ಆನಂದ್ (30)ಎಂದು ಗುರುತಿಸಲಾಗಿದೆ. ಈಜುಕೊಳದಲ್ಲಿ ಪಬ್ಲಿಕ್ ಬ್ಯಾಚ್ ನಲ್ಲಿ 30 ರಿಂದ 40 ಜನರು ಈಜುತ್ತಿದ್ದರು ಎನ್ನಲಾಗಿದೆ.. ಆರು ಜನ ಲೈಫ್ ಗಾರ್ಡ್ನಲ್ಲಿ ಹಾಕಿಕೊಂಡಿದ್ದರು. ಆದರೆ ಅಭಿಷೇಕ್‌ ಈಜುವ ವೇಳೆ ಯಾವುದೇ ಕೂಗು ಹಾಕದೇ , ಮೇಲೆ ಕೆಳಗೆ ಬರದೇ ಇದ್ದಾಗ […]