ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಆರು ಹುದ್ದೆಗಳಿಗೆ ನೇರ ನೇಮಕಾತಿ

Wednesday, September 13th, 2023
Sainik

ಮಂಗಳೂರು : ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯಲ್ಲಿ ಖಾಲಿ ಇರುವ ಉಪನಿರ್ದೇಶಕರ ಆರು ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಭೂಸೇನೆಯಲ್ಲಿ ಮೇಜರ್/ಲೆಫ್ಟಿನೆಂಟ್ ಕರ್ನಲ್ ಹಾಗೂ ನೌಕಾಸೇನೆ, ವಾಯುಸೇನೆ ತತ್ಸಮಾನ ರ್ಯಾಂಕಿಂಗ್‍ಗಳಿಂದ ನಿವೃತ್ತಿ ಹೊಂದಿದ ಅಧಿಕಾರಿಗಳು, 2024 ಜನವರಿ 1ರಂದು 52 ವರ್ಷ ಮೀರಿರದವರು ಹಾಗೂ ಪದವೀಧರರಾಗಿದ್ದು, 10ನೇ ತರಗತಿಯಲ್ಲಿ ಕನ್ನಡ ಭಾμÉಯನ್ನು ಕಡ್ಡಾಯವಾಗಿ ವ್ಯಾಸಂಗ ಮಾಡಿ ತೇರ್ಗಡೆಯಾದವರು ಅಭ್ಯರ್ಥಿಗಳು ಉಪನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಮಂಗಳೂರು ಈ ಕಚೇರಿಯಿಂದ ಅರ್ಜಿ […]

ನಿಫಾ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಲ್ಲಿ ಮುನ್ನೆಚ್ಚರಿಕೆ

Wednesday, September 13th, 2023
ನಿಫಾ ಸೋಂಕು ಹರಡದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಲ್ಲಿ ಮುನ್ನೆಚ್ಚರಿಕೆ

ಕಾಸರಗೋಡು : ಹಕ್ಕಿಗಳು ಕಚ್ಚಿದ ಅಥವಾ ನೆಲದ ಮೇಲೆ ಬಿದ್ದ ಹಣ್ಣುಗಳನ್ನು ಬಳಸಬೇಡಿ. ಹಣ್ಣುಗಳನ್ನು ಚೆನ್ನಾಗಿ ತೊಳೆದ ನಂತರವೇ ತಿನ್ನಿ. ತೆರೆದ ಪಾತ್ರೆಗಳಲ್ಲಿ ಸಂಗ್ರಹಿಸಲಾದ ಶೀತಲ ಪಾನೀಯಗಳನ್ನು ತಪ್ಪಿಸಿ. ನಿಫಾ ಬಗ್ಗೆ ಸುಳ್ಳು ಸುದ್ದಿ ಮತ್ತು ಅಪಪ್ರಚಾರ ಗಳ ಬಗ್ಗೆ ಗಮನ ಹರಿಸಬೇಕು. ಸರಕಾರ, ಆರೋಗ್ಯ ಇಲಾಖೆಯ ಆದೇಶ ಗಳನ್ನು ಪಾಲಿಸಬೇಕು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ. ರಾಮದಾಸ್ ಮಾಹಿತಿ ನೀಡಿದ್ದಾರೆ. ಕೋಝಿಕ್ಕೋಡ್ ಜಿಲ್ಲೆಯಲ್ಲಿ ನಿಫಾ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಕಾಸರಗೋಡು ಜಿಲ್ಲೆಯಲ್ಲೂ ವಿಶೇಷ ನಿಗಾವಹಿಸಬೇಕು ಯಾವುದೇ […]

ಚೈತ್ರಾ ಕುಂದಾಪರ ಮತ್ತು 6 ಮಂದಿ 10 ದಿನಗಳ ಕಾಲ ಪೊಲೀಸರ ವಶಕ್ಕೆ

Wednesday, September 13th, 2023
ಚೈತ್ರಾ ಕುಂದಾಪರ ಮತ್ತು 6 ಮಂದಿ 10 ದಿನಗಳ ಕಾಲ ಪೊಲೀಸರ ವಶಕ್ಕೆ

ಉಡುಪಿ : ಎಂಎಲ್ ಎ ಟಿಕೆಟ್ ಕೊಡಿಸುವುದಾಗಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಂದ 5 ಕೋಟಿ ಹಣ ಪಡೆದು ವಂಚನೆ ಮಾಡಿದ್ದಾರೆಂದು ಚೈತ್ರಾ ಕುಂದಾಪರ ಸೇರಿದಂತೆ 6 ಮಂದಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಉಡುಪಿಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳನ್ನು ನ್ಯಾಯಾಧೀಶರು 10 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿಸಿದ್ದಾರೆ. 5 ಕೋಟಿ ರೂಪಾಯಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರಾಗಿರುವ ಚೈತ್ರಾ ಕುಂದಾಪುರ ಹಾಗೂ ಇತರರನ್ನು ಬೆಂಗಳೂರಿನಲ್ಲಿ 1ನೇ ಎಸಿಎಂಎಂ ಕೋರ್ಟ್​ ನಲ್ಲಿ ಹಾಜರುಪಡಿಸಲಾಗಿತ್ತು. […]

ವಿಟ್ಲ : ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ, ಓರ್ವ ಗಂಭೀರ

Wednesday, September 13th, 2023
poision

ವಿಟ್ಲ : ಇಲ್ಲಿನ ಕುದ್ದುಪದವು ನಿವಾಸಿ ಸಹೋದರರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ವಿಟ್ಲದಲ್ಲಿ ನಡೆದಿದೆ. ಮೈರ ಮೂಲದ ಕುದ್ದುಪದವು ನಿವಾಸಿ ಪವನ್ ಹಾಗೂ ಪೃಥ್ವಿರಾಜ್ ವಿಷ ಸೇವನೆ ಮಾಡಿದ ಸಹೋದರರು ಎಂದು ತಿಳಿದು ಬಂದಿದೆ. ಅಸ್ವಸ್ಥರನ್ನು ವಿಟ್ಲ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಅವರಲ್ಲಿ ಓರ್ವ ಗಂಭೀರವಾಗಿದ್ದು, ಆತನನ್ನು ಮಂಗಳೂರು ಆಸ್ಪತ್ರೆಗೆ ಹಾಗೂ ಇನ್ನೋರ್ವನನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ. ಸಹೋದರರ ತಂದೆ ಮೃತಪಟ್ಟಿದ್ದು, ತಾಯಿ ಮೈರದಲ್ಲಿ ವಾಸವಾಗಿದ್ದಾರೆ. ಇವರಿಬ್ಬರು ಅಜ್ಜಿ ಮನೆಯಲ್ಲಿ […]

ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ – ವಿವೇಕ್ ಆಳ್ವ

Tuesday, September 12th, 2023
Vivek-Alva

ಮಂಗಳೂರು : “ನಾವು ನಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದನ್ನು ಇಂದಿನ ಯುವ ಸಮಾಜ ಅರಿತುಕೊಳ್ಳಬೇಕಾಗಿದೆ. ಯುವಕರೆಂದರೆ ಒಂದಷ್ಟು ಜನಾಂಗ ಅಥವಾ ವ್ಯಕ್ತಿಗಳಲ್ಲ. ಪ್ರತಿಯೊಂದು ವ್ಯಕ್ತಿ, ಸಂಸ್ಥೆ ಮತ್ತು ವಿಷಯಗಳಿಂದ ನಾವು ಸ್ಪೂರ್ತಿಗೊಳ್ಳಬೇಕು. ಸಮಾಜದ ಪ್ರಸಿದ್ಧ ವ್ಯಕ್ತಿಗಳಿಂದ ನಾವು ಸ್ಫೂರ್ತಿಗೊಳ್ಳಬೇಕು. ಸ್ಪೂರ್ತಿ ಬದುಕಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರುತ್ತದೆ” ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಡಳಿತ ವಿಶ್ವಸ್ಥರಾದ ವಿವೇಕ್ ಆಳ್ವ ಅಭಿಪ್ರಾಯಪಟ್ಟರು ಮಂಗಳೂರು ರಾಮಕೃಷ್ಣ ಮಿಷನ್ ಆಯೋಜಿಸಿದ ಸ್ಪೂರ್ತಿ ಎಂಬ ಒಂದು ದಿನದ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು […]

ಒಂದೂವರೆ ತಿಂಗಳ ಹೆಣ್ಣು ಮಗು ವನ್ನು ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ತಾಯಿ

Tuesday, September 12th, 2023
infant killed

ಕಾಸರಗೋಡು : ಹೆಣ್ಣು ಮಗು ವನ್ನು ತಾಯಿಯೊಬ್ಬಳು ಕೆಸರು ನೀರಿನಲ್ಲಿ ಮುಳುಗಿಸಿ ಹತ್ಯೆಗೈದ ದಾರುಣ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಉಪ್ಪಳ ಪಚ್ಲಂಪಾರೆ ಯಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಸುಮಂಗಲಿ – ಸತ್ಯನಾರಾಯಣ ದಂಪತಿ ಯ ಒಂದೂವರೆ ತಿಂಗಳ ಮಗು ಮೃತ ಪಟ್ಟವಳು. ತಾಯಿ ಮತ್ತು ಮಗು ನಾಪತ್ತೆ ಯಾದುದರಿಂದ ಮನೆ ಯವರು ಶೋಧ ನಡೆಸಿದಾಗ ತಾಯಿ ಯನ್ನು ಮನೆಯ ಅಲ್ಪ ದೂರದಿಂದ ಪತ್ತೆ ಹಚ್ಚಲಾಗಿದ್ದು, ಮಗು ನಾಪತ್ತೆಯಾಗಿತ್ತು. ವಿಚಾರಿಸಿದಾಗ ಮಗುವನ್ನು ಸಮೀಪದ ಬಯಲಿನಲ್ಲಿ ಕೆಸರು ನೀರಿನಲ್ಲಿ […]

ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

Tuesday, September 12th, 2023
ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ, ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ

ವಿಟ್ಲ : ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಹಾಗೂ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಪ್ರೀತಿ ಕೆ.ಪಿ. ರವರು ಎಂಡೋಸಲ್ಫಾನ್ ಪೀಡಿತೆಯ ಮೇಲೆ ಅತ್ಯಾಚಾರ ವೆಸಗಿದ ಆರೋಪಿಗೆ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮದ ರಾಜೇಶ್ ರೈ (33 ) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. 2015ರ ಅ.1ರಂದು ತನ್ನದೇ ಊರಿನ 19 ವರ್ಷ ಪ್ರಾಯದ ಎಂಡೋಸಲ್ಫಾನ್ ಪೀಡಿತೆಯನ್ನು ಆರೋಪಿ ರಾಜೇಶ್ ಅತ್ಯಾಚಾರವೆಸಗಿದ್ದನೆಂದು ಆರೋಪಿಸಿ ಪ್ರಕರಣ […]

ಪತ್ನಿ ಮನೆಗೆ ಹೋಗಿ ನೇಣು ಹಾಕಿಕೊಂಡ ಪತಿ

Tuesday, September 12th, 2023
Ravindra

ಉಳ್ಳಾಲ : ಪತ್ನಿ ಮನೆಯಲ್ಲಿ ಉಳ್ಳಾಲ ತಾಲೂಕು ಕೊಂಡಾಣ ಮಿತ್ರನಗರ ನಿವಾಸಿ ರವೀಂದ್ರ (35) ಎಂಬವರು ಆತ್ಮಹತ್ಯೆಗೈದ ಘಟನೆ ನಡೆದಿದೆ. ರವೀಂದ್ರ ಅವರು ಭಾನುವಾರ ಬಂಟ್ವಾಳ ತಾಲೂಕಿನ ಕಳ್ಳಿಗೆ ಗ್ರಾಮದ ಪಚ್ಚಿನಡ್ಕದ ಪತ್ನಿಯ ಮನೆಗೆ ತೆರಳಿದ್ದು ಮದ್ಯಾಹ್ನ 12 ಗಂಟೆಗೆ ತನ್ನ ಪತ್ನಿ ಮತ್ತು ಗಂಡು ಮಗುವನ್ನು ಸಂಬಂಧಿಕರ ಶುಭ ಕಾರ್ಯಕ್ಕೆ ಬಿಟ್ಟು ಮತ್ತೆ ಪತ್ನಿಯ ಮನೆಗೆ ವಾಪಸ್ಸಾಗಿದ್ದರು. ಸಂಜೆ ಪತ್ನಿ ಮೊಬೈಲ್ ಕರೆ ಮಾಡಿದಾಗ ರವೀಂದ್ರ ಅವರು ಕರೆ ಸ್ವೀಕರಿಸಿಲ್ಲ. ಗಾಬರಿಗೊಂಡ ಪತ್ನಿ ನೆರೆಮನೆಯವರಲ್ಲಿ ವಿಚಾರಿಸಿದ್ದಾರೆ‌. […]

ಪಣಂಬೂರು ಬೀಚ್ ಬಳಿ 90 ಲಕ್ಷ ರೂಪಾಯಿ ಮೌಲ್ಯದ ಅಂಬರ್ ಗ್ರೀಸ್ ವಶ

Monday, September 11th, 2023
Ambergris

ಮಂಗಳೂರು : ಮಂಗಳೂರು ನಗರ ಅಪರಾಧ ವಿಭಾಗದ ಪೊಲೀಸರು ಪಣಂಬೂರು ಬೀಚ್ ಬಳಿ ಇಂದು ದಾಳಿ ನಡೆಸಿ ಅಂಬರ್ ಗ್ರೀಸ್ (ತಿಮಿಂಗಿಲ ವಾಂತಿ) ಹೊಂದಿದ್ದ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂಬರ್ ಗ್ರೀಸ್ ಅಪರೂಪದ ವನ್ಯಜೀವಿ ಉತ್ಪನ್ನವಾಗಿದ್ದು ಅದು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಮೌಲ್ಯಯುತವಾಗಿದೆ. ಮೂವರ ವಶದಿಂದ 90 ಲಕ್ಷ ರೂಪಾಯಿ ಮೌಲ್ಯದ 900 ಗ್ರಾಂ ಅಂಬರ್ ಗ್ರೀಸ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ಉಡುಪಿ ಜಿಲ್ಲೆ ಸಾಲಿಗ್ರಾಮ ಗ್ರಾಮದ ಜಯಕರ (39) , ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ನ […]

ಅರಣ್ಯ ರಕ್ಷಣೆ ಯಿಂದ ದೇಶದ ರಕ್ಷಣೆ ;ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆಗಾರಿಕೆ -ಅನುಪಮ ಅಗರ್ವಾಲ್

Monday, September 11th, 2023
Forest-Martyr-Memorial

ಮಂಗಳೂರು : ಅರಣ್ಯ ರಕ್ಷಣೆ ಯ ಮೂಲಕ ನಮ್ಮ ರಕ್ಷಣೆ ದೇಶದ ರಕ್ಷಣೆ ಮಾಡುತ್ತಿರುವ ಅರಣ್ಯ ರಕ್ಷಕರಿಗೆ ಹೆಚ್ಚಿನ ಗೌರವ ದೊರೆಯ ಬೇಕಾಗಿದೆ ಅರಣ್ಯ ಸಂಪತ್ತಿನ ಸಂರಕ್ಷಣೆ ನಮ್ಮ ಜವಾಬ್ದಾರಿ ಯಾಗಿದೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ ಅಗರ್ವಾಲ್ ತಿಳಿಸಿದ್ದಾರೆ. ಅವರು ಇಂದು ನಗರದ ಪಡೀಲ್ ನಲ್ಲಿರುವ ಅರಣ್ಯ ಭವನದಲ್ಲಿ ಅರಣ್ಯ ಹುತಾತ್ಮಸ್ಮಾರಕ ಕ್ಕೆ ಗೌರವ ಸಲ್ಲಿಸಿ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಖಾಕಿ ಸಮವಸ್ತ್ರಧಾರಣೆಯಿಂದ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡುವ ಮೂಲಕ […]