ಬಜೆಟ್ ಅತ್ಯಂತ ನಿರಾಶಾದಾಯಕ – ಮಂಜುನಾಥ ಭಂಡಾರಿ

Friday, March 4th, 2022
Manjunatha Bhandary

ಮಂಗಳೂರು  : ಈ ವರ್ಷದ ರಾಜ್ಯ ಬಜೆಟ್ ಅತ್ಯಂತ ನಿರಾಶಾದಾಯಕವಾಗಿದೆ. ಗ್ರಾಮ ಪಂಚಾಯತಿಗೆ ಕೊಡುವಂತಹ ಅನುದಾನ ಹಾಗೂ ಗ್ರಾಮ ಪಂಚಾಯತಿ ಸದಸ್ಯರ ಗೌರವಧನ ಮತ್ತು ಇತರ ಭತ್ಯೆಗಳನ್ನು ಹೆಚ್ಚಿಸಬೇಕೆಂದು ಚುನಾಯಿತ ಪ್ರತಿನಿಧಿಗಳಾದ ನಾವು ಸರಕಾರದ ಮುಂದಿಟ್ಟ ಬೇಡಿಕೆಯನ್ನು ನಿರ್ಲಕ್ಷಿಸಿದ್ದಕ್ಕೆ ಅತ್ಯಂತ ಬೇಸರವಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಮಾರ್ಗಸೂಚಿಯಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಯಾವುದೇ ಮಹತ್ವದ ಘೋಷಣೆಯಾಗಿಲ್ಲ ಹಾಗೂ ಈಗಾಗಲೇ ಇದ್ದ ಸರಕಾರಿ ಕಾಲೇಜುಗಳನ್ನು ನಡೆಸಲು ಸಾಧ್ಯವಾಗದ ಸರಕಾರ ಹಳೆಯ ಸರಕಾರಿ ಇಂಜಿನಿಯರಿಂಗ್ ಕಾಲೇಜುಗಳ ಹೆಸರನ್ನು ಕರ್ನಾಟಕ […]

ತುಳುನಾಡಿಗೆ ಮಾರಕವಾದ ಅವೈಜ್ಙಾನಿಕ ಬಜೆಟ್‌

Friday, March 4th, 2022
shailesh RJ

ಬೆಳ್ತಂಗಡಿ : ತುಳುನಾಡಿನ ಜೀವನಾಡಿಗೆ ಮಾರಕವಾದ ಅವೈಜ್ಙಾನಿಕ ಎತ್ತಿನಹೊಳೆ ಯೋಜನೆಗೆ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ 3000 ಕೋಟಿ ರೂಪಾಯಿ ಮೀಸಲಿರಿಸಿದ್ದು ಖಂಡನೀಯ. ಈ ಮೂಲಕ ತುಳುನಾಡನ್ನು ಬರಡು ಭೂಮಿಯಾಗಿಸುವ ವ್ಯವಸ್ಥಿತ ಷಡ್ಯಂತ್ರವನ್ನು ಮುಂದುವರಿಸಿದ್ದು ತುಳುವರಿಗೆ ಎಚ್ಚರಿಕೆ ಗಂಟೆಯಾಗಿದೆ. ತುಳುವರ ಎತ್ತಿನಹೊಳೆ ಯೋಜನೆ ವಿರೋಧಿ ಹೋರಾಟದಲ್ಲಿ ನುಸುಳಿ ನಾಟಕವಾಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಸಂಸದರು ಮತ್ತು ಶಾಸಕರು ಈ ಕೂಡಲೇ ತಮ್ಮ ಶಾಸಕ/ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿ ತಮ್ಮ ಬದ್ಧತೆಯನ್ನು ನಾಡಿನ ಜನಕ್ಕೆ ತೋರಿಸಬೇಕು. ನಿರಂತರವಾಗಿ ತುಳುನಾಡಿನ ನೆಲ, […]

ಮಾರ್ಚ್12 ರಂದು ಜಪ್ಪು ಮಹಾಕಾಳಿಪಡ್ಪು `ಮಹಾಕಾಳಿ ನೇಮೋತ್ಸವ’

Friday, March 4th, 2022
Mahakali

ಮಂಗಳೂರು : ಜಪ್ಪು ಗ್ರಾಮದ ಮಹಾಕಾಳಿ ಪಡ್ಡುವಿನ ಮಹಾಕಾಳಿ ನೇಮೋತ್ಸವವು ಮಾರ್ಚ 12 ರ ಶನಿವಾರ ಸಂಜೆ ಭಂಡಾರ ಬಂದು ರಾತ್ರಿ 7 ರಿಂದ ನಡೆಯಲಿರುವುದು. ತಾ:11-03-2022ನೇ ಶುಕ್ರವಾರ ಸಂಜೆ ಗಂಟೆ 7-15ಕ್ಕೆ ಪೂಜೆ ಕಳೆದ ಮಹಾಕಾಳಿಯ ಫೋಟೋ ದೇವಸ್ಥಾನದಿಂದ ಮೆರವಣಿಗೆಯಲ್ಲಿ ಉತ್ಸವ ನಡೆಯುವ ಜಾಗಕ್ಕೆ ಹೊರಡುವುದು. ಗಂಟೆ 7-30ಕ್ಕೆ ಪ್ರಸಾದ ಹಾರಿಸುವುದು, ತದನಂತರ ಸ್ಥಳ ಶುದ್ದೀಕರಣ, ಗಣಹೋಮ, ಬ್ರಹ್ಮರ ಗುಂಡ ಶುದ್ದೀಕರಣ ಇತ್ಯಾದಿ ನಡೆಯಲಿದೆ. ತಾ. 12-03-2022ನೇ ಶನಿವಾರ ಸಂಜೆ ಗಂಟೆ 5-00ಕ್ಕೆ ಸರಿಯಾಗಿ ದೇವಸ್ಥಾನದಿಂದ ಭಂಡಾರ […]

ಅಮೃತ ಕೌಶಲ್ಯ ತರಬೇತಿ’ಯಡಿ 36 ಸಾವಿರಕ್ಕೂ ಹೆಚ್ಚು ಯುವಕರಿಗೆ ಉದ್ಯೋಗ: ಡಾ. ಅಶ್ವತ್ಥನಾರಾಯಣ

Thursday, March 3rd, 2022
Amruta Kushlya

ಮಂಗಳೂರು : ಯುವಜನರಿಗೆ ಉಜ್ವಲ ಉದ್ಯೋಗಾವಕಾಶಗಳನ್ನು ದೊರಕಿಸಿ ಕೊಡಲಿರುವ `ಅಂತಾರಾಷ್ಟ್ರೀಯ ವಲಸೆ ಕೇಂದ್ರ’ ದ ಮಂಗಳೂರು ಪ್ರಾದೇಶಿಕ ಕಚೇರಿಯನ್ನು  ಕೌಶಲ್ಯಾಭಿವೃದ್ಧಿ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಮಾ.3ರ ಗುರುವಾರ ಎ.ಜೆ. ಇನಿಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಕಾಲೇಜಿನಲ್ಲಿ  ವರ್ಚುಯಲ್ ರೂಪದಲ್ಲಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಆವರಣದಲ್ಲಿ ರಾಜ್ಯ ಕೌಶಲ್ಯಾಭಿವೃದ್ಧಿ ನಿಗಮದ ವತಿಯಿಂದ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಮೇಕ್ ಇಂಡಿಯಾ ಕೇಪಬಲ್’ ಕಾರ್ಯಕ್ರಮದಡಿ ಇಂಗ್ಲೀಷ್ ಲ್ಯಾಬ್ ಕೇಂದ್ರವನ್ನೂ ಲೋಕಾರ್ಪಣೆ […]

ಗ್ರಾಹಕರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರವೆಂಬ ಅಸ್ತ್ರ: ಕೆ ಜಿ ಕುಲಕರ್ಣಿ

Thursday, March 3rd, 2022
Kulkarni

ಮಂಗಳೂರು: ಗ್ರಾಹಕರು ತಮಗೇನಾದರೂ ಮೋಸವಾದರೆ ಅವರ ರಕ್ಷಣೆಗೆ ಕಾನೂನು ಮಾಪನಶಾಸ್ತ್ರ ಕಾಯ್ದೆಯಿದೆ. ಈ ಕಾನೂನಿನಡಿ ದೂರು ದಾಖಲಿಸಿ, ಗ್ರಾಹಕರ ವೇದಿಕೆಯಡಿ ಪರಿಹಾರ ಪಡೆಯಬಹುದಾಗಿದೆ, ಎಂದು ದಕ್ಚಿಣ ಕನ್ನಡದ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕ ಕೆ ಜಿ ಕುಲಕರ್ಣಿ ಹೇಳಿದರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ವಾಣಿಜ್ಯ ಸಂಘ ಮತ್ತು ಗ್ರಾಹಕ ವೇದಿಕೆಗಳು ಡಾ. ಶಿವರಾಮ ಕಾರಂತ ಸಭಾಭವನದಲ್ಲಿ ಗುರುವಾರ, ʼಲೀಗಲ್ ಮೆಟ್ರಾಲಜಿ ಆಂಡ್ ಇಟ್ಸ್ ಅಪ್ಲಿಕೇಶನ್ಸ್ʼ ಎಂಬ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಗ್ರಾಹಕರ ಹಿತರಕ್ಷಣೆಗಾಗಿ ಇರುವ […]

ಉಕ್ರೇನ್ ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಮಂಗಳೂರಿಗೆ ವಾಪಸ್

Thursday, March 3rd, 2022
Anusha

ಮಂಗಳೂರು : ಉಕ್ರೇನ್ ನಲ್ಲಿ ಎಂಬಿಬಿಎಸ್ ವಿದ್ಯಾಭ್ಯಾಸ ಮಾಡುತ್ತಿದ್ದ ವೈದ್ಯ ವಿದ್ಯಾರ್ಥಿನಿ ಅನುಷಾ ಭಟ್ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿದ್ದಾರೆ.  ಮಂಗಳೂರು ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದ ಮಗಳನ್ನು ಹೆತ್ತವರು ಮತ್ತು ಶಾಸಕ, ಸಂಸದರು ಬರಮಾಡಿಕೊಂಡರು. ಗುರುವಾರ  ಮಧ್ಯಾಹ್ನ 1 ಗಂಟೆ ಸುಮಾರಿಗೆ ಅನುಷಾ ಮಂಗಳೂರು ವಿಮಾನ ನಿಲ್ದಾಣ ತಲುಪಿದರು. ಹೆತ್ತವರು, ಸಂಬಂಧಿಕರು ಅವರನ್ನು ಬರಮಾಡಿಕೊಂಡರು. ಈ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಮೊದಲಾದವರು ಅನುಷಾ ಅವರನ್ನು ಸ್ವಾಗತಿಸಿದರು. ಅನುಷಾ […]

ಅಪಾರ್ಟ್ ಮೆಂಟ್ ನಲ್ಲಿ ವೇಶ್ಯಾವಾಟಿಕೆ ದಂಧೆ, ನಾಲ್ವರು ಯುವತಿಯರ ರಕ್ಷಣೆ

Wednesday, March 2nd, 2022
Nishmitha-Anupama

ಮಂಗಳೂರು :  ಬೆಂದೂರ್ ವೆಲ್ ನ ಅಪಾರ್ಟ್ ಮೆಂಟ್ ವೊಂದರ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿರುವುದರ  ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ಮೂವರು ಪಿಂಪ್ ಗಳನ್ನು ವಶಕ್ಕೆ ಪಡೆದುಕೊಂಡು ನಾಲ್ವರು ಯುವತಿಯರನ್ನು ರಕ್ಷಿಸಿದ್ದಾರೆ. ಕದ್ರಿ ಪೋಲಿಸ್ ಠಾಣಾ ವ್ಯಾಪ್ತಿಯ ಬೆಂದೂರ್ ವೆಲ್ 3 ನೇ ಕ್ರಾಸ್ ರಸ್ತೆಯಲ್ಲಿರುವ ಪೀಬಿ ರೆಸಿಡೆನ್ಸಿ ಎಂಬ ಅಪಾರ್ಟ್ ಮೆಂಟ್ ನ 2 ನೇ ಮಹಡಿಯ ಫ್ಲಾಟ್ ವೊಂದರಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದರೆಂಬ ಬಗ್ಗೆ ಖಚಿತ […]

ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಸಿಲುಕಿಕೊಂಡಿರುವ ಮಂಗಳೂರು ವಿದ್ಯಾರ್ಥಿನಿ ಬಳಿ ಪಾಸ್ ಪೋರ್ಟ್ ಇಲ್ಲ

Wednesday, March 2nd, 2022
Anaina Anna

ಮಂಗಳೂರು : ಉಕ್ರೇನ್ ನ ಖಾರ್ಕಿವ್ ನಗರದಲ್ಲಿ ಸಿಲುಕಿಕೊಂಡಿರುವ ಮಂಗಳೂರು ಮೂಲದ ವಿದ್ಯಾರ್ಥಿನಿ ಅನೈನಾ ಅನ್ನಾ ಪಾಸ್ ಪೋರ್ಟ್ ಇಲ್ಲದೆ ಸಂಕಷ್ಟಕ್ಕೊಳಗಾಗಿದ್ದಾರೆ. ಮಂಗಳೂರಿನ ದೇರೆಬೈಲು ಮೂಲದ ಅನೈನಾ ಅವರ ಪಾಸ್ ಪೋರ್ಟ್ ಏಜೆಂಟರ ಬಳಿ ಇದ್ದು, ಅವರಿಗೆ ಕರೆ ಮಾಡಿದರೆ ಅವರು ಇರುವಲ್ಲಿಗೆ ತೆರಳಿ ಪಾಸ್ ಪೋರ್ಟ್ ಪಡೆದುಕೊಳ್ಳುವಂತೆ ಹೇಳಿದ್ದಾರೆ. ಆದರೆ ಅವರಿರುವ ಸ್ಥಳದಲ್ಲಿ ದಾಳಿ ನಡೆಯುತ್ತಿರುವುದರಿಂದ ಹೋಗಲು ಸಾಧ್ಯವಾಗುತ್ತಿಲ್ಲ ಎಂದು  ಕುಟುಂಬದ ಮೂಲಗಳು ಹೇಳಿವೆ. ಅನೈನಾ ಪೋಲೆಂಡ್ ಗೆ ರೈಲು ಮುಖಾಂತರ  ಪ್ರಯಾಣ ಬೆಳೆಸಿರುವುದರಿಂದ ಪಾಸ್ […]

ಚುಟುಕು ಸಾಹಿತ್ಯದ ಸಾಮರ್ಥ್ಯ ದೊಡ್ಡದು’ – ಧರ್ಮದರ್ಶಿ ಹರಿಕೃಷ್ಣ ಪುನರೂರು

Wednesday, March 2nd, 2022
chutuku

ಬಂಟ್ವಾಳ : ‘ಕಿರಿದರೊಳ್ ಪಿರಿದರ್ಥ ಕೊಡುವ ಚುಟುಕು ಬರೆಯುವುದು ಸುಲಭದ ವಿಷಯವಲ್ಲ. ಧಾವಂತದ ಸಮಾಜಕ್ಕೆ ಕೆಲವೇ ಕ್ಷಣಗಳಲ್ಲಿ ಓದಲು ಅನುಕೂಲ ಆಗುವ ಚುಟುಕುಗಳ ಸಾಮರ್ಥ್ಯ ವಿಶಿಷ್ಟವಾದದ್ದು.ಕೃತಿಗಳನ್ನು ಕೊಂಡು ಓದುವ ಔದಾರ್ಯ ಹೆಚ್ಚಾಗಬೇಕು.’ ಎಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು. ಅವರು ಮಂಗಳವಾರ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ.ಟ್ರಸ್ಟ್ ಇವರ ಸಹಯೋಗದಲ್ಲಿ ನಡೆದ ಹಿರಿಯ ಸಾಹಿತಿ ಇರಾ ನೇಮು ಪೂಜಾರಿಯವರ ‘ಚುಟುಕು ಕಣಜ’ […]

ಬಾಲಕಿಗೆ ಲೈಂಗಿಕ ಕಿರುಕುಳ ವ್ಯಕ್ತಿಯ ಬಂಧನ

Wednesday, March 2nd, 2022
pawan-Shetty

ಮಂಗಳೂರು : ಕೋಟೆಕಾರ್ ಸಮೀಪದ ಮಾಡೂರಿನ ಪವನ್ ಶೆಟ್ಟಿ (33) ಎಂಬಾತನನ್ನು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇರೆಗೆ ಮಹಿಳಾ ಠಾಣೆಯ ಪೊಲೀಸರು ಬಂಧಿಸಿದ್ದಾರೆ.‌ ಆರೋಪಿಯು ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ್ದ ಬಗ್ಗೆ ‌ಫೆ.22ರಂದು ಪ್ರಕರಣ ದಾಖಲಾಗಿತ್ತು. ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳವಾರ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನವಾಗಿದೆ.