ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಪರಮೇಶ್ವರ್‌

Saturday, August 27th, 2016
kollur chandika homa

ಕೊಲ್ಲೂರು: ರಾಜ್ಯ ಗೃಹಸಚಿವ ಡಾ| ಜಿ. ಪರಮೇಶ್ವರ್‌ ಅವರು ಪತ್ನಿ ಕನ್ನಿಕಾ ಸಮೇತರಾಗಿ ಶುಕ್ರವಾರ ಬೆಳಗ್ಗೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಆಗಮಿಸಿ ಶ್ರೀದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ಚಂಡಿಕಾ ಹೋಮದಲ್ಲಿ ಪಾಲ್ಗೊಂಡರು. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ, ಕೊಲ್ಲೂರು ಗ್ರಾ.ಪಂ. ಅಧ್ಯಕ್ಷ ವಿಶ್ವನಾಥ ಅಡಿಗ, ತಾ.ಪಂ. ಸದಸ್ಯೆ ಗ್ರೀಷ್ಮಾ ಭಿಡೆ, ತಾ.ಪಂ. ಮಾಜಿ ಸದಸ್ಯ ರಮೇಶ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

ಗೋ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಕಾನೂನು ತಂದರೆ ಒಳಿತು: ಪರಮೇಶ್ವರ್

Saturday, August 27th, 2016
Parameshwar

ಮಂಗಳೂರು: ಗೋ ರಕ್ಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವೇ ಕಾನೂನು ತಂದರೆ ಒಳಿತು ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದು ಮಂಗಳೂರು ಪೊಲೀಸ್ ಕಚೇರಿಯಲ್ಲಿ ಪೊಲೀಸ್ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೋ ರಕ್ಷಣೆಯ ಹೆಸರಿನಲ್ಲಿ ದೇಶದೆಲ್ಲೆಡೆ ಹಲ್ಲೆ, ಕೊಲೆ ನಡೆಯುತ್ತಿವೆ. ಪ್ರಧಾನಿ ಮೋದಿಯವರು ಗೋ ರಕ್ಷಕರ ಹೆಸರಿನಲ್ಲಿ ದಾಂಧಲೆ ನಡೆಸುವವರ ದಾಖಲೆ ಸಂಗ್ರಹಿಸುವಂತೆ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ ಬಳಿಕವೂ ಕರಾವಳಿಯಲ್ಲಿ ಗೋ ರಕ್ಷಣೆಯ ಹೆಸರಿನಲ್ಲಿ ಕೊಲೆ […]

ಮಾಜಿ ಸಂಸದೆ ರಮ್ಯಾಗೆ ಮೊಟ್ಟೆ ಎಸೆದು ಪ್ರತಿಭಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ: ಪರಮೇಶ್ವರ್

Saturday, August 27th, 2016
Gparameshwar

ಮಂಗಳೂರು: ಮಾಜಿ ಸಂಸದೆ ರಮ್ಯಾಗೆ ಮೊಟ್ಟೆ ಎಸೆದು ಪ್ರತಿಭಟಿಸಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಬೆಂಗಳೂರಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆಯುತ್ತಿರುವ ಮಂಗಳೂರಿನಲ್ಲಿ ಇಂತಹ ಘಟನೆ ನಡೆಯಬಾರದಿತ್ತು ಎಂದು ಗೃಹ ಸಚಿವ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ. ಇಂದು ನಗರದ ಸರ್ಕಿಟ್‌‌ ಹೌಸ್‌‌ನಲ್ಲಿ ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಗಳೂರು ಕುರಿತ ಹೇಳಿಕೆಗೆ ಪ್ರತ್ಯೇಕ ವ್ಯಾಖ್ಯಾನದ ಅಗತ್ಯವಿಲ್ಲ ಎಂದರು. ಪೊಲೀಸರ ಬಡ್ತಿಯನ್ನು ಉದ್ದೇಶಪೂರ್ವಕವಾಗಿ ಉಳಿಸಿಕೊಂಡಿಲ್ಲ. ಬಡ್ತಿ ಸೂಕ್ತ ರೀತಿಯಲ್ಲಿ ನಡೆಯುತ್ತಿದೆ. 2005ರ ಎಸ್ಐ ಕೇಡರ್‌ನವರ ಬಗ್ಗೆ ಪರಿಶೀಲನೆ ನಡೆಯುತ್ತಿದೆ ಎಂದರು. ಜನಾರ್ದನ ಪೂಜಾರಿಗೆ […]

ವಿಶ್ವ ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆ

Saturday, August 27th, 2016
Golthamajalu

ಬಂಟ್ವಾಳ: ಬಾಳ್ತಲ ವಲಯದ ಗೋಳ್ತಮಜಲು ಗ್ರಾಮದ ನೆಟ್ಲ ಹಾಗೂ ಬೊಮ್ಮನಕೋಡಿ ಅಂ. ಕೇಂದ್ರಗಳ ಮತ್ತು ಸ್ತ್ರೀಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ನಿಟಿಲಾಪುರ ಶಿವಶಕ್ತಿ ಬ್ರದರ‍್ಸ್ ಕಟ್ಟಡದಲ್ಲಿ ನಡೆದ ವಿಶ್ವ ಸ್ತನ್ಯಪಾನ ಮತ್ತು ಪೌಷ್ಠಿಕ ಆಹಾರ ಸಪ್ತಾಹ ದಿನಾಚರಣೆಯು ತಾ.ಪಂ. ಸದಸ್ಯ ಮಹಾಬಲ ಆಳ್ವ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ವೈದ್ಯಾಧಿಕಾರಿ ಡಾ| ವಿಶ್ವೇಶ್ವರ ವಿ.ಕೆ, ಗ್ರಾ.ಪಂ. ಸದಸ್ಯರಾದ ಗುರುವಪ್ಪ ಗೌಡ, ಗಿರೀಶ, ಪೂರ್ಣಿಮ ರಾವ್, ಸುಚಿತ್ರಾ ಗಟ್ಟಿ, ಸಮನ್ವಯ ಸಮಿತಿ ಸದಸ್ಯರಾದ ಪೂವಪ್ಪ ಗೌಡ,ನವೀನ್ ಗಟ್ಟಿ, […]

ಗಣೇಶ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆಯಾಗಬೇಕು: ಭೂಷಣ್ ಬೊರಸೆ

Saturday, August 27th, 2016
BantwalBorase

ಬಂಟ್ವಾಳ: ಗಣೇಶ ಹಬ್ಬ ಸಂಭ್ರಮದಿಂದ ಶಾಂತಿಯುತವಾಗಿ ಆಚರಣೆಯಾಗಬೇಕು, ಈ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ನೀಡುವ ಸೂಚನೆಗಳನ್ನು ಸಂಘಟಕರು ಪಾಲಿಸಿ ಸಹಕರಿಸಬೇಕು ಎಂದು ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಬೊರಸೆ ಹೇಳಿದ್ದಾರೆ. ಮುಂಬರುವ ಗಣೇಶ ಚೌತಿ ಹಬ್ಬದ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಶುಕ್ರವಾರ ನಡೆದ ಬಂಟ್ವಾಳ ವೃತ್ತ ವ್ಯಾಪ್ತಿಯ ಗಣೇಶೋತ್ಸವ ಸಮಿತಿಗಳ ಮುಖ್ಯಸ್ಥರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು. ಹಬ್ಬದ ಪೆಂಡಾಲ್ ಗಳನ್ನು ಅನಾಹುತಗಳು ನಡೆಯದಂತೆ ಸಾಕಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಬೇಕು, ವಿದ್ಯುತ್ ಸಂಪರ್ಕ ವ್ಯವಸ್ಥೆಯಲ್ಲಿ ಯಾವುದೇ ಲೋಪವಾಗದಂತೆ ಸಂಬಂಧಪಟ್ಟವರಿಗೆ […]

ಸಮುದ್ರದಲ್ಲಿ 2 ದೋಣಿಗಳು ಅಪಘಾತಕ್ಕೀಡಾಗಿ 12 ಮಂದಿ ಗಾಯ: ಲಕ್ಷಾಂತರ ರೂ.ಗಳ ನಷ್ಟ

Friday, August 26th, 2016
12-injured

ಕಾಸರಗೋಡು: ಕೀಯೂರು ಅಳಿವೆಬಾಗಿಲಿನಲ್ಲಿ ಇಂದು ಬೆಳಿಗ್ಗೆ ಎರಡು ದೋಣಿಗಳು ಅಪಘಾತಕ್ಕೀಡಾಗಿ 12 ಮಂದಿ ಗಾಯಗೊಂಡಿದ್ದಾರೆ. ದೋಣಿಗಳು ವ್ಯಾಪಕ ಹಾನಿಗೊಂಡಿದ್ದು, ಇಂಜಿನ್, ಬಲೆಗಳು ಪೂರ್ಣವಾಗಿ ನಾಶಗೊಂಡಿದೆ. ಸುಮಾರು 12 ಲಕ್ಷ ರೂ.ಗಳ ನಷ್ಟ ಅಂದಾಜಿಸಲಾಗಿದೆ. ಅಪಘಾತದಲ್ಲಿ ಕೀಯೂರು ನಿಲಾಸಿಗಳಾದ ಉಮೇಶನ್ (35), ಅಬ್ದುಲ್ ಖಾದರ್ (31), ರಂಜಿತ್ (43), ವಿಜೇಶ್ (30), ಅಶೋಕನ್ 36), ಲಾಲು (30), ಸಾಯಿಬಾಬು (42), ಚಂದ್ರನ್ (40), ಶಶಿ (40), ಸಾಬಿತ್ (೩೫), ಬಿನು (35), ಕಾಸರಗೋಡು ಕಸಬ ಕಡಪ್ಪುರದ ಬಾಲನ್ (49) ಎಂಬಿವರು ಗಾಯಗೊಂಡಿದ್ದಾರೆ. […]

ನಾನು ಮಂಗಳೂರುನ್ನ ನರಕ ಎಂದಿಲ್ಲ: ರಮ್ಯಾ

Friday, August 26th, 2016
Ramya

ಮಂಗಳೂರು: ‘ನಾನು ಮಂಗಳೂರುನ್ನ ನರಕ ಎಂದಿಲ್ಲ’ ಎಂದು ಮಾಜಿ ಸಂಸದೆ-ಚಿತ್ರನಟಿ ರಮ್ಯಾ ತಮ್ಮದೇ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ತನ್ನನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮಂಗಳೂರಿನ ಕುರಿತಾಗಿ ಅಂತಹ ಯಾವುದೇ ಕೆಟ್ಟ ಪದವನ್ನು ಬಳಸಿಲ್ಲ. ಟಿವಿ ವಾಹಿನಿಯೊಂದು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ನರಕ ಅನ್ನುವುದು ಸರಿಯಲ್ಲ. ಅದರಲ್ಲೂ ನನ್ನ ಪ್ರೀತಿಯ ಊರಾದ ಮಂಗಳೂರನ್ನು ಯಾಕೆ ನರಕ ಎಂದು ಕರೆಯಲಿ?’ ನಾನು ಇಂದಿಗೂ ಎಂದೆಂದಿಗೂ ಮಂಗಳೂರನ್ನು ಪ್ರೀತಿಸುತ್ತೇನೆ. ಯಾಕೆಂದರೆ ನನ್ನ […]

ಸ್ತ್ರೀಲೋಲರನ್ನು ಶ್ರೀಕೃಷ್ಣ ಎಂದು ಕರೆಯುತ್ತಿರುವುದು ವಿಷಾದಕರ: ಶಕುಂತಲಾ ಟಿ. ಶೆಟ್ಟಿ

Friday, August 26th, 2016
Shakunthala-shetty

ಮಂಗಳೂರು: `ಸ್ತ್ರೀಲೋಲರನ್ನು ಶ್ರೀಕೃಷ್ಣ’ ಎಂದು ಕರೆಯುತ್ತಿರುವುದು ವಿಷಾದಕರ ಎಂದು ಕರ್ನಾಟಕ ಸರ್ಕಾರದ ಸಂಸದೀಯ ಕಾರ್ಯದರ್ಶಿ ಹಾಗೂ ಶಾಸಕಿ ಶಕುಂತಲಾ ಟಿ. ಶೆಟ್ಟಿ ಹೇಳಿದ್ದಾರೆ. ದ.ಕ. ಜಿಲ್ಲಾಡಳಿತ, ದ.ಕ. ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಇಂದು ನಗರದ ಪುರಭವನದಲ್ಲಿ ಶ್ರೀಕೃಷ್ಣ ಜಯಂತಿ ಆಚರಣೆ ಕಾರ್ಯಕ್ರಮ ಉದ್ಘಾಟಿಸಿದ ಅವರು, ಶ್ರೀಕೃಷ್ಣ ಹೆಣ್ಣುಮಕ್ಕಳ ರಕ್ಷಕ. ಅವನು ಸ್ತ್ರೀಯನ್ನು ಮಾತೃ ಸ್ವರೂಪವಾಗಿ ನೋಡಿದವನು. ಹೆಣ್ಣು ಎಂದರೆ ಪವಿತ್ರ ಎಂದು ಸಮಾಜಕ್ಕೆ ಸಂದೇಶ ಕೊಟ್ಟವನು. ಆದರೆ ಸ್ತ್ರೀಲೋಲರನ್ನು ಶ್ರೀ […]

ಕದ್ರಿ ದೇವಸ್ಥಾನದ ಪ್ರಾಂಗಣದಲ್ಲಿ ಕಲ್ಕೂರ ಪ್ರತಿಷ್ಠಾನದ “ಶ್ರೀ ಕೃಷ್ಣ ವೇಷ ಸ್ಪರ್ಧೆ’

Friday, August 26th, 2016
Shree-Krishna

ಮಂಗಳೂರು : ಕಲ್ಕೂರ ಪ್ರತಿಷ್ಠಾನದ ವತಿಯಿಂದ ಆಯೋಜಿಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀ ಕೃಷ್ಣ ವೇಷ ಸ್ಪರ್ಧೆ’ ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಪ್ರಾಂಗಣದಲ್ಲಿ ಬುಧವಾರ ನಡೆಯಿತು. ಬೆಳಗ್ಗಿನಿಂದ ಸಂಜೆ ವರೆಗೆ ಒಟ್ಟು 8 ವೇದಿಕೆಗಳಲ್ಲಿ 27 ವಿಭಾಗಗಳ ಸ್ಪರ್ಧೆ ಜರಗಿದವು. ರಾಷ್ಟ್ರ ಮಟ್ಟದ ಮಕ್ಕಳ ಉತ್ಸವವನ್ನು ಎ.ಜೆ. ಸಮೂಹ ಸಂಸ್ಥೆಯ ಅಧ್ಯಕ್ಷ ಎ.ಜೆ. ಶೆಟ್ಟಿ ಉದ್ಘಾಟಿಸಿ, ಶುಭ ಕೋರಿದರು. ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಧಿಸ್ಥಾನದ ವೇ| ಮೂ| ಲಕ್ಷ್ಮಿನಾರಾಯಣ ಆಸ್ರಣ್ಣ ಆಶೀರ್ವಚನ ನೀಡಿದರು. ಕದ್ರಿ […]

ರಮ್ಯಾ ಮಂಗಳೂರಿಗೆ ಬರುತ್ತಿದ್ದಂತೆ ರಮ್ಯಾರ ಕಾರಿಗೆ ಮೊಟ್ಟೆ ಎಸೆತ

Friday, August 26th, 2016
Ramya

ಮಂಗಳೂರು: ಪಾಕಿಸ್ತಾನದ ಜನರ ಪರ ಹೇಳಿಕೆ ನೀಡಿ ವಿವಾದಕ್ಕೀಡಾಗಿರುವ ಮಾಜಿ ಸಂಸದೆ, ಚಿತ್ರನಟಿ ರಮ್ಯಾ ಮಂಗಳೂರಿಗೆ ಬರುತ್ತಿದ್ದಂತೆ ಬಜ್ಪೆ ವಿಮಾನ ನಿಲ್ದಾಣದಲ್ಲಿ ಪ್ರತಿಭಟನೆ ಮಾಡಿದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರು,ರಮ್ಯಾರ ಕಾರಿಗೆ ಮೊಟ್ಟೆ ಎಸೆದಿದ್ದಾರೆ. ರಮ್ಯಾ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರ ಮೇಲೆ ಲಘು ಲಾಠಿ ಪ್ರಹಾರ ಮಾಡಿದ ಪೊಲೀಸರು, ಹಲವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕದ್ರಿಯಲ್ಲಿ ಆಯೋಜಿಸಲಾಗಿರುವ ಶ್ರೀಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ಪ್ರಯುಕ್ತ ಅವರು ಆಗಮಿಸಿದ್ದರು. ಪ್ರತಿಭಟನೆ ನಡೆಯುವ ಮುನ್ಸೂಚನೆ ಇದ್ದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಬಿಗಿ […]