ಆ್ಯಕ್ಷನ್​ ಪ್ರಿನ್ಸ್​ ಧ್ರುವಾ ಸರ್ಜಾಗೆ ಕಂಕಣ ಭಾಗ್ಯ: ಬಾಲ್ಯದ ಸ್ನೇಹಿತೆಯೊಂದಿಗೆ ಹಸೆಮಣೆ ಏರಲು ಸರ್ಜಾ ರೆಡಿ..!

Friday, November 16th, 2018
dhruva-sarja

ಬೆಂಗಳೂರು: ಆ್ಯಕ್ಷನ್ ಪ್ರಿನ್ಸ್ ಧ್ರುವಾ ಸರ್ಜಾಗೆ ಕಂಕಣ ಭಾಗ್ಯ ಕೂಡಿಬಂದಿದೆ. ತಮ್ಮ ಬಾಲ್ಯದ ಸ್ನೇಹಿತೆಯೊಂದಿಗೆ ಹಸೆಮಣೆ ಏರಲು ಸರ್ಜಾ ರೆಡಿಯಾಗಿದ್ದಾರೆ. ತಮ್ಮ ಬಾಲ್ಯದ ಗೆಳತಿ ಪ್ರೇರಣಾ ಅವರೊಂದಿಗೆ ಧ್ರುವಾ ಸರ್ಜಾ ಡಿಸೆಂಬರ್ 10ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಈ ಹಿಂದೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ತಾವು ಲವ್ ಮ್ಯಾರೇಜ್ ಆಗುವುದಾಗಿ ಸುಳಿವು ಬಿಟ್ಟುಕೊಟ್ಟಿದ್ದರು. ಅದರಂತೆ ಬನಶಂಕರಿಯ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಸ್ನೇಹಿತೆ ಪ್ರೇರಣಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಸದ್ಯದಲ್ಲೇ ಸ್ಯಾಂಡಲ್ವುಡ್ನಲ್ಲಿ ಮತ್ತೊಂದು ಮದುವೆಗೆ […]

ಅಯ್ಯಪ್ಪನ ದರ್ಶನಕ್ಕೆ ಸಜ್ಜಾದ ತೃಪ್ತಿ ದೇಸಾಯಿ: ಕೊಚ್ಚಿನ್​ ಏರ್​ಪೋರ್ಟ್​ನಲ್ಲಿ ಬಿಜೆಪಿ ಪ್ರತಿಭಟನೆ

Friday, November 16th, 2018
Tripti-desai

ಕೊಚ್ಚಿನ್: ಅಯ್ಯಪ್ಪನ ದೇಗುಲಕ್ಕೆ ಮಹಿಳೆಯರ ಪ್ರವೇಶ ಸಂಬಂಧ ಭುಗಿಲೆದ್ದಿರುವ ವಿವಾದ ಶಮನವಾಗುವ ಲಕ್ಷಣಗಳು ಕಾಣಿಸುತ್ತಿಲ್ಲ. ಮಹಿಳೆಯರ ಪ್ರವೇಶಕ್ಕೆ ಭಾರಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೆ ಸಾಮಾಜಿಕ ಹೋರಾಟಗಾರ್ತಿ ತೃಪ್ತಿ ದೇಸಾಯಿ ದೇಗುಲ ಪ್ರವೇಶಕ್ಕೆ ಸಿದ್ಧರಾಗಿದ್ದಾರೆ. ದೇಗುಲ ಪ್ರವೇಶಿಸಿಯೇ ತೀರುತ್ತೇನೆ ಎಂದು ಪಣತೊಟ್ಟಿರುವ ಅವರು ಭಾರಿ ಭದ್ರತೆಯೊಂದಿಗೆ ನಿನ್ನೆ ಕೊಚ್ಚಿನ್ ವಿಮಾನನಿಲ್ದಾಣಕ್ಕೆ ಆಗಮಿಸಿದರು. ಅಲ್ಲದೆ, ಅಯ್ಯಪ್ಪನ ಭಕ್ತರು ಅವರಿಗೆ ಪ್ರತಿರೋಧವೊಡ್ಡಿದ ಘಟನೆಯೂ ನಡೆಯಿತು. ವಿಮಾನನಿಲ್ದಾಣದ ಬಳಿಯೇ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ವ್ಯಕ್ತಪಡಿಸಿದರು. ಪೊಲೀಸ್ ವಾಹನದಲ್ಲಿ ಅಥವಾ ಸರ್ಕಾರಿ ವಾಹನದಲ್ಲಿ ತೃಪ್ತಿ […]

ಸಚಿವ ಸ್ಥಾನ ನೀಡಿದರೆ ಪ್ರಮಾಣಿಕವಾಗಿ ನಿರ್ವಹಿಸುತ್ತೇನೆ: ಅನಿತಾ ಕುಮಾರಸ್ವಾಮಿ

Thursday, November 15th, 2018
Anitha-kumarswamy

ಬೆಂಗಳೂರು: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಶಾಸಕರಾಗಿ ಇಂದು ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಸ್ಪೀಕರ್ ರಮೇಶ್ ಕುಮಾರ್ ಕಚೇರಿಯಲ್ಲಿ ತಮ್ಮ ಬೆಂಬಲಿಗರ ಜತೆಗೂಡಿ ಸರಿಯಾಗಿ 3.30ಕ್ಕೆ ಪ್ರಮಾಣ ವಚನ ಸ್ವೀಕರಿಸಿದರು. ಭಗವಂತ ಹಾಗೂ ಸತ್ಯ ನಿಷ್ಠೆ ಹೆಸರಲ್ಲಿ ಅನಿತಾ ಕುಮಾರಸ್ವಾಮಿ ರಾಮನಗರ ಶಾಸಕರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಮೇಶ್ ಕುಮಾರ್ ಪ್ರಮಾಣ ವಚನ ಬೋಧಿಸಿದರು.‌ ಪ್ರಮಾಣವಚನ ಸ್ವೀಕರಿಸಿದ ಬಳಿಕ‌ ಮಾತನಾಡಿದ ಅನಿತಾ ಕುಮಾರಸ್ವಾಮಿ, ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ.‌ ಒಂದು ವೇಳೆ ಸಚಿವ ಸ್ಥಾನ […]

ನನಗೆ ವೈಯಕ್ತಿಕವಾಗಿ ಮೀ ಟೂದಂತಹ ಅನುಭವಗಳಾಗಿಲ್ಲ: ಶುಭಾ ಪುಂಜಾ

Thursday, November 15th, 2018
shubha-punja

ಹುಬ್ಬಳ್ಳಿ: ಕನ್ನಡ ಚಿತ್ರರಂಗದಲ್ಲಿ ಕಳೆದ 12 ವರ್ಷಗಳಿಂದ ನಾನು ಇದ್ದೇನೆ. ನನಗೆ ವೈಯಕ್ತಿಕವಾಗಿ ಮೀ ಟೂದಂತಹ ಅನುಭವಗಳಾಗಿಲ್ಲ ಎಂದು ನಟಿ ಶುಭಾ ಪುಂಜಾ ಹೇಳಿಕೆ ನೀಡಿದ್ದಾರೆ. ನಗರದಲ್ಲಿಂದು ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಮೀಟೂ ಬಗ್ಗೆ ಇರುವ ಆರೋಪ ಪ್ರತ್ಯಾರೋಪವನ್ನು ಚಲನಚಿತ್ರ ವಾಣಿಜ್ಯ ಮಂಡಳಿಯೇ ಬಗೆಹರಿಸುತ್ತದೆ. ಕನ್ನಡ ಫಿಲ್ಮ್ ಇಂಡಸ್ಟ್ರಿಯಲ್ಲಿ ನಾನು 10-12 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. ನಿರ್ದೇಶಕರು, ನಿರ್ಮಾಪಕರು ಹಾಗೂ ಅಭಿಮಾನಿಗಳಿಂದ ಪ್ರೀತಿ, ಗೌರವ ಸಿಕ್ಕಿದೆ. ಹೀಗಾಗಿ ಕನ್ನಡ ಇಂಡಸ್ಟ್ರಿಯಲ್ಲಿ ನನಗೆ ಯಾವುದೇ […]

ಆನ್​ಲೈನ್​ನಲ್ಲಿ ದುಬಾರಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿ ಬಂಧನ

Thursday, November 15th, 2018
online

ಬೆಂಗಳೂರು: ಆನ್ಲೈನ್ನಲ್ಲಿ ದುಬಾರಿ ಕ್ಯಾಮರಾಗಳನ್ನು ಬಾಡಿಗೆಗೆ ಪಡೆದು ವಂಚಿಸುತ್ತಿದ್ದ ಆರೋಪಿಯನ್ನ ಸಂಜಯನಗರ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಮೂಲದ ಮಹೇಶ್ ಬಂಧಿತ ಆರೋಪಿ. ಬೆಂಗಳೂರಿನ ಉತ್ತರ ವಿಭಾಗವನ್ನು ಟಾರ್ಗೆಟ್‌ ಮಾಡಿಕೊಂಡು ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಸಂಜಯ್ ನಗರ ವ್ಯಾಪ್ತಿಯಲ್ಲಿ ಹೆಚ್ಚಾಗಿ ಆನ್ಲೈನ್ನಲ್ಲಿ ಹೆಚ್ಚಿನ ಬಾಡಿಗೆಯ ಆಮಿಷ ನೀಡಿ ಒಮ್ಮೆಗೆ ಮೂರ್ನಾಲ್ಕು ಕ್ಯಾಮೆರಾಗಳನ್ನು ಬಾಡಿಗೆಗೆ ಪಡೆಯುತ್ತಿದ್ದ. ಇತ್ತೀಚೆಗೆ ಮಹಾಲಕ್ಷ್ಮಿ ಲೇಔಟ್ನ ಮಹೇಶ್ ಎಂಬುವವರಿಂದ ಕಳೆದ ಸೆಪ್ಟೆಂಬರ್ನಲ್ಲಿ ಆರು ಲಕ್ಷ ಬೆಲೆ ಬಾಳುವ ನಿಕಾನ್, ಹಾಗೂ ಕ್ಯಾನನ್ ಕ್ಯಾಮರಾಗಳನ್ನು ಪಡೆದಿದ್ದ ನಂತರ […]

‘ಜಲಧಾರೆ’ ಯೋಜನೆ ಕುರಿತು ಸಿಎಂ ಅಧ್ಯಕ್ಷತೆಯಲ್ಲಿ ಸಭೆ

Thursday, November 15th, 2018
kumarswamy

ಬೆಂಗಳೂರು: ಮೇಲ್ಮೈ ಜಲಮೂಲಗಳಿಂದ ನೀರನ್ನು ಶುದ್ಧೀಕರಿಸಿ ಗ್ರಾಮೀಣ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ‘ಜಲಧಾರೆ’ ಯೋಜನೆ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಈ ಯೋಜನೆ ಕುರಿತು ಚರ್ಚಿಸಲಾಯಿತು. ಈ ಯೋಜನೆಯನ್ನು ಮಾರ್ಪಡಿಸಿ, ಬೆಂಗಳೂರನ್ನು ಹೊರತುಪಡಿಸಿ, ಉಳಿದ ನಗರ ಪ್ರದೇಶಗಳನ್ನು ಸೇರ್ಪಡೆಗೊಳಿಸುವುದು ಸೂಕ್ತ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಹಾಗೂ ನಗರಾಭಿವೃದ್ಧಿ ಇಲಾಖೆಯವರು ಯೋಜನೆಯ ರೂಪುರೇಷೆ, ಅನುಷ್ಠಾನ ಹಾಗೂ ನಿರ್ವಹಣೆ ಕುರಿತು ಚರ್ಚಿಸಿ, ಪ್ರಸ್ತಾವನೆ […]

ಜನಾರ್ದನ ರೆಡ್ಡಿ ಪ್ರಕರಣದಲ್ಲಿ ಯಾವುದೇ ಹಸ್ತಕ್ಷೇಪ ಇಲ್ಲ: ಕುಮಾರಸ್ವಾಮಿ

Wednesday, November 14th, 2018
kumarswamy

ಬೆಂಗಳೂರು: ಈ ವಿಚಾರದಲ್ಲಿ ಸರ್ಕಾರದ ಯಾವುದೇ ಹಸ್ತಕ್ಷೇಪ ಇಲ್ಲ. ಅವರ ಆಪ್ತರೊಬ್ಬರು 18 ಕೋಟಿಯನ್ನು ತಿರುಪತಿ ಹುಂಡಿಗೆ ಹಾಕಿದ್ದೇವೆ ಎಂದಿದ್ದಾರೆ. ಇದು ವ್ಯಂಗ್ಯವೋ ಸತ್ಯವೋ ನನಗೆ ತಿಳಿಯುತ್ತಿಲ್ಲ. ಇದರ ಬಗ್ಗೆ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಗಮನಿಸಬೇಕು. ನಾನಾಗಲಿ ನಮ್ಮ ಸರ್ಕಾರದ ಸಚಿವರಾಗಲಿ ಈ ವಿಚಾರದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದರು. ಪತ್ರಕರ್ತ ಸಂತೋಷ ತಮ್ಮಯ್ಯ ಬಂಧನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಇದು ಅಧಿಕಾರಿಗಳ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ಕೈಗೊಂಡ ಕ್ರಮವಾಗಿದ್ದು, ಮಾಹಿತಿ ಪಡೆದು ಈ ಬಗ್ಗೆ ಮಾತಾನಾಡುತ್ತೇನೆ […]

ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪ: ಪತ್ರಕರ್ತ ಸಂತೋಷ್ ಗೆ ಜಾಮೀನು

Wednesday, November 14th, 2018
journalist

ಕೊಡಗು: ಪ್ರವಾದಿ ಮೊಹಮ್ಮದ್ ಮತ್ತು ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಆರೋಪದ ಮೇಲೆ ಬಂಧಿತರಾಗಿದ್ದ ಪತ್ರಕರ್ತ ಸಂತೋಷ್ ತಮ್ಮಯ್ಯ ಅವರಿಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ವಿರಾಜಪೇಟೆ ತಾಲೂಕಿನ ಪೊನ್ನಂಪೇಟೆ ಕೋರ್ಟ್ನ ನ್ಯಾಯಾಧೀಶ ಮೋಹನ್ ಗೌಡ ಅವರು ಅರ್ಧಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಿದ ಬಳಿಕ ಸಂತೋಷ್ಗೆ ಷರತ್ತುಬದ್ಧ ಜಾಮೀನು ನೀಡಿದರು. 50 ಸಾವಿರ ರೂ ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೌಲ್ಯದ ಇನ್ನಿಬ್ಬರ ಬಾಂಡ್ ಪಡೆದು ಸಂತೋಷ್ರನ್ನು ಬಿಡುಗಡೆಗೊಳಿಸಲು ಆದೇಶ ನೀಡಿದರು. ಸುಪ್ರೀಂ ಕೋರ್ಟ್ನಲ್ಲಿ […]

ಬಂಧಿಸಲು ಹೋದಾಗ ಹಲ್ಲೆಗೆ ಯತ್ನ: ಪೊಲೀಸರಿಂದ ಫೈರಿಂಗ್​..!

Wednesday, November 14th, 2018
arrested

ಬೆಂಗಳೂರು: ಕುಖ್ಯಾತ ಕಳ್ಳ ದಿನೇಶ್ ದೋರಾ ಎಂಬಾತನ ಮೇಲೆ ನಿನ್ನೆ ತಡರಾತ್ರಿ 12ರ ವೇಳೆಗೆ ಬಾಣಸವಾಡಿ ಪೊಲೀಸರು ಗುಂಡು ಹಾರಿಸಿದ್ದಾರೆ. ಆರೋಪಿ ದಿನೇಶ್ ದೋರಾ ಇಂದಿರಾನಗರ, ಡಿಜೆಹಳ್ಳಿ ,ಹೆಣ್ಣೂರು, ಜೆಸಿನಗರ, ಬಸವೇಶ್ವರ ನಗರ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿ ಸೇರಿದಂತೆ 12 ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಲೆಮರೆಸಿಕೊಂಡಿದ್ದ ಈತ ಕೆ.ಜಿ. ಹಳ್ಳಿಯ ಹೆಚ್ಬಿಆರ್ ಲೇಔಟ್ನಲ್ಲಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆ ಆರೋಪಿಯನ್ನ ಬಂಧಿಸಲು ಬಾಣಸವಾಡಿ ಪೊಲೀಸರು […]

ಕೊಡಗಿಗೆ ತಮಿಳುನಾಡು ಪರಿಹಾರ ಕೊಡಬೇಕು: ಎಸ್.ಎಲ್.ಭೈರಪ್ಪ

Wednesday, November 14th, 2018
kodagu

ಮೈಸೂರು: ಪ್ರವಾಹದಿಂದ ತತ್ತರಿಸಿರುವ ಕೊಡಗಿಗೆ ತಮಿಳುನಾಡು ಸರ್ಕಾರ ಕೂಡ ಪರಿಹಾರ ಕೊಡಬೇಕು ಎಂದು ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಎಲ್.ಭೈರಪ್ಪ ಪ್ರತಿಪಾದಿಸಿದ್ದಾರೆ. ಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಬಿಎಂಶ್ರೀ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡಗಿನಿಂದ ಕಾವೇರಿ ನೀರು ಹೋಗಲಿಲ್ಲವೆಂದರೆ, ತಮಿಳುನಾಡು ಸರ್ಕಾರ ಕಾವೇರಿ ನೀರು ಬಂದಿಲ್ಲವೆಂದು ಸುಪ್ರೀಂಕೋರ್ಟ್ ಮೊರೆಹೋಗುತ್ತದೆ. ಸದ್ಯ ಕೊಡುಗಿನಲ್ಲಿ ಭೀಕರ ಪ್ರವಾಹವಾಗಿದ್ದು, ಇಲ್ಲಿಂದ ನೀರು ಪಡೆಯಲು ಹಠಕ್ಕೆ ಬೀಳುವ ತಮಿಳುನಾಡಿಗೆ ಕೊಡುಗಿನ ಮೇಲೆ ಮಾನವೀಯತೆ ಬಂದಿದಿಯಾ? ಎಂದು […]