ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ: ಮಂಜುನಾಥ್ ಗೌಡ

Saturday, August 18th, 2018
shivmogga

ಶಿವಮೊಗ್ಗ: ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷವನ್ನು ಕಟ್ಟುವುದು ಕಷ್ಟಕರವಾಗಿದ್ದರೂ ಕೂಡ ಕಟ್ಟೆ ತೀರುತ್ತೇವೆ ಎಂದು ಜೆಡಿಎಸ್ನ ನೂತನ ಜಿಲ್ಲಾಧ್ಯಕ್ಷ ಡಾ.ಆರ್.ಎಂ. ಮಂಜುನಾಥ್ ಗೌಡ ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಇಲ್ಲಿ ಜೆಡಿಎಸ್ಗೆ ಉತ್ತಮ ಭವಿಷ್ಯವಿದೆ. ಈ ಹಿಂದೆ ಪಕ್ಷವನ್ನು ಬಿಟ್ಟು ಹೋದವರನ್ನು ಮತ್ತೆ ಕರೆತಂದು ಪಕ್ಷ ಕಟ್ಟುತ್ತೇವೆ ಎಂಬ ಭರವಸೆ ವ್ಯಕ್ತಪಡಿಸಿದರು. ಜೆ.ಹೆಚ್. ಪಟೇಲರ ಕಾಲದಲ್ಲಿ ಜನತಾ ಪಕ್ಷ ನಗರ ಸಭೆ ಹಾಗೂ ಜಿ.ಪಂ.ಗಳಲ್ಲಿ ಉತ್ತಮ ಸಾಧನೆ ಮಾಡಿದ್ದು, ಈಗಲೂ ಕೂಡ ಜಿ.ಪಂ. ಹಾಗೂ ಮಹಾನಗರ ಪಾಲಿಕೆ ಜೆಡಿಎಸ್ […]

ಬಿಬಿಎಂಪಿಯಿಂದ ಕೊಡಗು-ಕೇರಳಕ್ಕೆ ಮೂರುವರೆ ಕೋಟಿ ರೂ. ಸಹಾಯಧನ

Saturday, August 18th, 2018
bengaluru

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಕೊಡಗು ಹಾಗೂ ಕೇರಳಕ್ಕೆ ಅಗತ್ಯ ವಸ್ತುಗಳು, ಶೆಡ್ ನಿರ್ಮಾಣ ಸೇರಿದಂತೆ ಹಣದ ರೂಪದಲ್ಲಿ ಸಹಾಯ ಮಾಡಲು ಮುಂದಾಗಿದೆ. ಬಿಬಿಎಂಪಿ ವತಿಯಿಂದ 2 ಕೋಟಿ ಪರಿಹಾರ ನಿಧಿ, ಹಾಗೂ ಪಾಲಿಕೆ ಸದಸ್ಯರ ಒಂದು‌ ತಿಂಗಳ ಗೌರವಧನ, ನೌಕರರ ಒಂದು ದಿನದ ವೇತನ ನೀಡಲು ತೀರ್ಮಾನಿಸಿದ್ದು ಒಟ್ಟು ಮೂರುವರೇ ಕೋಟಿ ರುಪಾಯಿ ನೀಡಲು ಬಿಬಿಎಂಪಿ ಮುಂದಾಗಿದೆ. ಇದರಲ್ಲಿ ಕೇರಳಕ್ಕೆ ಒಂದು ಕೋಟಿ, ಕೊಡಗಿಗೆ ಎರಡೂವರೆ ಕೋಟಿ ನೀಡಲು ತೀರ್ಮಾನಿಸಲಾಗಿದೆ. ಇನ್ನು ಪಾಲಿಕೆ ಕೇಂದ್ರ […]

ಅಭಿಮಾನಿಗಾಗಿ ಭದ್ರಾವತಿಗೆ ಬಂದಿದ್ದರು ವಾಜಪೇಯಿ..!

Friday, August 17th, 2018
badravathi

ಬೆಂಗಳೂರು: ಅಟಲ್ ಬಿಹಾರಿ ವಾಜಪೇಯಿ ಅವರಿಗೂ ಕರ್ನಾಟಕಕ್ಕೂ ಅಳಿಯದ ನಂಟಿದೆ. ಅವರು ತಮ್ಮ ಕಷ್ಟದ ದಿನಗಳಲ್ಲಿ ಕರ್ನಾಟಕಕ್ಕೆ ಬಂದಿದ್ದರು. ಇಲ್ಲಿಂದಲೇ ಸ್ಫೂರ್ಥಿ ಪಡೆದು ಮುನ್ನುಗ್ಗಿದ್ದರು. ಅದು 1984ರ ಸಮಯ ಕಾಂಗ್ರೆಸ್ ಪಕ್ಷ ಹಿಂದೆಂದೂ ಕಾಣದಂತ ವಿಜಯವನ್ನು ಲೋಕಸಭೆ ಚುನಾವಣೆಯಲ್ಲಿ ಕಂಡಿತ್ತು. ಅದಕ್ಕೆ ಕಾರಣವೂ ಇತ್ತು. ಅದಾಗ ತಾನೇ ಇಂದಿರಾ ಗಾಂಧಿ ಹತ್ಯೆಯಾಗಿತ್ತು. ದೇಶದೆಲ್ಲೆಡೆ ಕಾಂಗ್ರೆಸ್ ಹವಾ ಎದ್ದಿತ್ತು, ಆ ಹವಾಕ್ಕೆ ಬಿಜೆಪಿಯ ಮುಖ್ಯ ಮುಖ ಎನಿಸಿಕೊಂಡಿದ್ದ ವಾಜಪೇಯಿ ಅವರೂ ಸಹ ಸೋತುಬಿಟ್ಟಿದ್ದರು. ಬಿಜೆಪಿಗೆ ಅದು ಭಾರಿ ಹಿನ್ನಡೆ. […]

ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ನಿಧನಕ್ಕೆ ಸಂಸದ ಶಿವಕುಮಾರ ಉದಾಸಿ ತೀವೃ ಸಂತಾಪ

Friday, August 17th, 2018
shivkumar

ಗದಗ: 1924ರಲ್ಲಿ ಕೃಷ್ಣದೇವಿ ಹಾಗೂ ಕೃಷ್ಣ ಬಿಹಾರಿ ವಾಜಪೇಯಿ ರವರ ಮಗನಾಗಿ ಮದ್ಯಪ್ರದೇಶದ ಗ್ವಾಲಿಯಾರ ಹತ್ತಿರದ ಶಿಂದೇಕೀ ಚವ್ಹಾಣ ಎಂಬ ಗ್ರಾಮದಲ್ಲಿ ಜನಿಸಿದರು. 1939ರಲ್ಲಿರಾಷ್ಟ್ರೀಯ ಸ್ವಯಂ ಸಂಘಕ್ಕೆ ಸೇರ್ಪಡೆಯಾದರು. 1942 ರಲ್ಲಿ ಕ್ವಿಟ್ ಇಂಡಿಯಾ ಚಳುವಳಿ(ಬ್ರಿಟಿಷರೇ ಭಾರತ ಬಿಟ್ಟು ತೊಲಗಿ)ಯಲ್ಲಿ ಭಾಗಿಯಾದರು. ಸುಮಾರು 50 ವರ್ಷಗಳ ಸ್ವಚ್ಛ ರಾಜಕೀಯ ಕನಸು ಕಂಡ ಅಜಾತ ಶತೃ ಅದ್ಭುತ ವಾಗ್ಮೀ ಶ್ರೀ ಅಟಲ್ ಬಿಹಾರಿ ವಾಜಪೇಯಿ ರವರು ಬಹುದಿನದ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಇಂದು ನಿಧನರಾಗಿದ್ದು. ಅತೀವ ದು:ಖದ ವಿಷಯವೆಂದು ಹಾವೇರಿ […]

‘ಕೈಗಾರಿಕಾ ಕ್ಲಸ್ಟರ್’ ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ: ಹೆಚ್​.ಡಿ. ಕುಮಾರಸ್ವಾಮಿ

Wednesday, August 15th, 2018
kumarswamy

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ‘ಕೈಗಾರಿಕಾ ಕ್ಲಸ್ಟರ್’ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು. 72ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆ ನಗರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗಹಿಸಿ ಮಾತನಾಡಿದ ಅವರು, ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳಿಗೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವುದರ ಜೊತೆಗೆ ಸ್ಥಳೀಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು. ಅತ್ಯಂತ ಪ್ರತಿಷ್ಠಿತ ‘ಬೆಂಗಳೂರು ಟೆಕ್ ಸಮಿಟ್’ ಈ ವರ್ಷ ನವೆಂಬರ್ 29 ರಿಂದ ಮೂರು ದಿನಗಳ ಕಾಲ […]

ಮೊಬೈಲ್​ ಅವಾಂತರ.. ಫ್ಲೈ ಓವರ್​ನಿಂದ ಕೆಳಗಿಳಿಯುವಾಗ ಬಿದ್ದ ಯುವತಿ!

Tuesday, August 14th, 2018
fell-down

ಬೆಂಗಳೂರು: ಮೊಬೈಲ್ನಲ್ಲಿ ಮಾತನಾಡಿಕೊಂಡು ಬರುವಾಗ ಯುವತಿಯೋರ್ವಳು ಆಯತಪ್ಪಿ ಮೇಖ್ರಿ ವೃತ್ತದ ಮೇಲುಸೇತುವೆ ಬಳಿ ಬಿದ್ದಿರುವ ಘಟನೆ ನಡೆದಿದೆ. ಘಟನೆಯಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಯುವತಿ ಅದೃಷ್ಟವಶಾತ್ ಪಾರಾಗಿದ್ದಾಳೆ. ಪುಣೆ‌ ಮೂಲದ ಆಯೇಷಾ ಮೊಬೈಲ್ನಲ್ಲಿ ಮಾತನಾಡುತ್ತಾ ಕೆಳಗೆ ಬಿದ್ದ ಯುವತಿ. ಈಕೆ ಇಂದು ಬೆಳಗ್ಗೆ ಜಯಮಹಲ್ ರಸ್ತೆಯಿಂದ ಮೇಖ್ರಿ ಸರ್ಕಲ್ ಕಡೆಗೆ ನಡೆದುಕೊಂಡು ಬರುತ್ತಿದ್ದಳು.‌ ಈ ವೇಳೆ ಮೊಬೈಲ್ನಲ್ಲಿ ಮಾತನಾಡುತ್ತ ಮೇಲುಸೇತುವೆ ಕೆಳಗಿಳಿಯುವಾಗ ಆಯತಪ್ಪಿ ಬಿದ್ದಿದ್ದಾರೆ. 10 ಅಡಿಯಿಂದ ಎತ್ತರದಿಂದ ಬಿದ್ದಿದ್ದರಿಂದ ಮುಖಕ್ಕೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆಗಾಗಿ ಎಂ.ಎಸ್ ಆಸ್ಪತ್ರೆಗೆ […]

ಮಹಾನಗರ ಪಾಲಿಕೆ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿದ ಈಶ್ವರಪ್ಪ

Tuesday, August 14th, 2018
ishwarappa

ಶಿವಮೊಗ್ಗ: ಮಹಾನಗರ ಪಾಲಿಕೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ಶಾಸಕ ಕೆ.ಎಸ್. ಈಶ್ವರಪ್ಪ ಬಿಡುಗಡೆ ಮಾಡಿದರು. ನಗರದ ಬಿಜೆಪಿ ಕಚೇರಿಯಲ್ಲಿ ಪಟ್ಟಿ ಬಿಡುಗಡೆ ಮಾಡಿದ ಶಾಸಕ ಕೆ.ಎಸ್. ಈಶ್ವರಪ್ಪ 35 ವಾರ್ಡ್ಗಳಿಗೆ ಬಿಜೆಪಿ ಅಭ್ಯರ್ಥಿಗಳ ಘೋಷಣೆ ಮಾಡಿದರು. ಆಗಸ್ಟ್ 31 ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಲ್ಲೂ ಅಸಮಾಧಾನ ವ್ಯಕ್ತವಾಗಿದ್ದು, ಜಿಲ್ಲಾಧ್ಯಕ್ಷ ಎಸ್.ರುದ್ರೇಗೌಡ ಗೈರಾಗಿದ್ದರು.

ಜಪಾನಿನಲ್ಲಿ ಹಿಂದೂ ದೇವರಗಳ ಆರಾಧಿಸಲಾಗುತ್ತದೆ: ಜಪಾನ್ ರಾಯಭಾರಿ ಕಿತಗುವ

Monday, August 13th, 2018
japanese

ಬೆಂಗಳೂರು: ಜಪಾನಿನ ನಗರವೊಂದಕ್ಕೆ ಹಿಂದೂ ದೇವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂದು ನಿಮಗೆ ಗೊತ್ತೇ? ಜಪಾನಿನ ಸಂಸ್ಕತಿ ಮತ್ತು ಸಮಾಜದ ಮೇಲೆ ಭಾರತದ ಪ್ರಭಾವ ಅತ್ಯಂತಗಾಢವಾಗಿದೆ ಎಂದು ಜಪಾನಿನ ರಾಯಭಾರಿ ಶ್ರೀ ಟಕಯುಕಿ ಕಿತಗವ ಬೆಂಗಳೂರಿನಲ್ಲಿ ಹೇಳಿದರು. ಶ್ರೀ ಕಿತಗುವ ಪ್ರತಿಷ್ಠಿತ ದಯಾನಂದ್ ಸಾಗರ್ ಶಿಕ್ಷಣ ಸಂಸ್ಥೆಯ `ಗ್ರಾಜುಯೇಷನ್ ಡೇ 2018′ ಮುಖ್ಯ ಅತಿಥಿಯಾಗಿಭಾಗವಹಿಸಿದ್ದರು. ಶ್ರೀ ಕಿತಗುವ ಜಪಾನ್ ದೇಶದ ಸಂಸ್ಕøತಿಯ ಮೇಲೆ ಭಾರತದ ಪ್ರಭಾವ ಕುರಿತು ಕನ್ನಡದಲ್ಲಿಯೇ ಮಾತನಾಡಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. “ಜಪಾನ್ ಮತ್ತು ಭಾರತ […]

ಸೈಕಲ್ ಸವಾರಿಯಿಂದ ದೈಹಿಕ ಸದೃಢತೆ ಸಾಧ್ಯ: ಶ್ರೀಕಾಂತ ದೇಶಪಾಂಡೆ

Monday, August 13th, 2018
shrikanth

ಹುಬ್ಬಳ್ಳಿ: ಪ್ರತಿನಿತ್ಯ ಕನಿಷ್ಠ 5 ಕೀ.ಮೀ. ಸೈಕಲ್ ಸವಾರಿ ಮಾಡುವುದರಿಂದ ಮನುಷ್ಯನ ದೇಹಕ್ಕೆ ಸೂಕ್ತ ವ್ಯಾಯಾಮ ಲಭಿಸಿ ದೈಹಿಕ ಸದೃಢತೆ ಕಾಪಾಡಿಕೊಳ್ಳಬಹುದು ಎಂದು ಮಲೇಶಿಯಾದ ಉಕ್ಕಿನ ಮನುಷ್ಯನೆಂದೇ ಖ್ಯಾತಿ ಪಡೆದ ಅಂತಾರಾಷ್ಟ್ರೀಯ ಕ್ರೀಡಾಪಟು ಶ್ರೀಕಾಂತ ದೇಶಪಾಂಡೆ ಹೇಳಿದರು. ಅವರು ರವಿವಾರ ಸಂಜೆ ಗೋಕುಲ ರಸ್ತೆಯಲ್ಲಿ ಉತ್ತರ ಕನರ್ಾಟಕದ ಮೊದಲ ವಿದೇಶಿ ಸೈಕಲ್ ಗಳ “ಅಮೇಜಿಂಗ್ ಬೈಕ್ಸ್ ” ಮಳಿಗೆಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಮಳಿಗೆ ಉದ್ಘಾಟಿಸಿ ಮಾತನಾಡಿದ ಸ್ವರ್ಣ ಸಮೂಹ ಸಂಸ್ಥೆಗಳ ಮ್ಯಾನೇಜಿಂಗ್ ಡೈರೆಕ್ಟರ್ ವಿ.ಎಸ್.ವಿ. […]

ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಹಾಸನ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ: ಎಚ್. ಡಿ. ದೇವೇಗೌಡ

Monday, August 13th, 2018
prajwal-revanna

ಹಾಸನ: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಜ್ವಲ್ ರೇವಣ್ಣನನ್ನು ಹಾಸನ ಲೋಕಸಭಾ ಅಭ್ಯರ್ಥಿಯಾಗಿ ಕಣಕ್ಕಿಳಿಸುತ್ತೇವೆ ಎಂದು ಮಾಜಿ ಪ್ರಧಾನಿ ದೇವೇಗೌಡ ಹೇಳಿದ್ದಾರೆ. ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ವಿಚಾರ ತಿಳಿಸಿದರು. ಇನ್ನು ಸ್ಥಳೀಯ ಸಂಸ್ಥೆ ಚುನಾವಣೆಗೆ ಸಂಬಂಧಿಸಿದಂತೆ ನಾನೇ ನಾಲ್ಕೈದು ದಿನ ಹಾಸನದಲ್ಲಿದ್ದು ಕಾರ್ಯಕರ್ತರ ಸಭೆ ಮಾಡುತ್ತೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ನೊಂದಿಗೆ ಮೈತ್ರಿ ಇಲ್ಲ. ಕಾಂಗ್ರೆಸ್ನೊಂದಿಗೆ ಮೈತ್ರಿಗೆ ಅಪಾಯವಾಗದಂತೆ ಸ್ಥಳೀಯ ಸಂಸ್ಥೆ ಚುನಾವಣೆ ಎದುರಿಸುತ್ತೇವೆ. ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ತೊಂದರೆಯಾಗದ ರೀತಿ ಸ್ಥಳೀಯ ಸಂಸ್ಥೆ ಚುನಾವಣೆ […]