ಪಿಲಿಕುಳ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ 9 ವರ್ಷ ಪ್ರಾಯದ ಹುಲಿ ಸಾವು

Tuesday, January 4th, 2022
Tiger oliver

ಮಂಗಳೂರು: ಆರೋಗ್ಯವಂತ ಹಾಗೂ ಸದೃಢವಾಗಿದ್ದ 9 ವರ್ಷ ಪ್ರಾಯದ ಹುಲಿಯೊಂದು ಮಂಗಳವಾರ ಮುಂಜಾನೆ ಪಿಲಿಕುಳದ ಡಾ.ಶಿವರಾಮ ಕಾರಂತ ಜೈವಿಕ ಉದ್ಯಾನವನದಲ್ಲಿ ಮೃತಪಟ್ಟಿದೆ. ಮುಂಜಾನೆವರೆಗೂ ಚುರುಕಾಗಿಯೇ ಇದ್ದು ಒಮ್ಮಿಂದೊಮ್ಮೆಲೇ ಕುಸಿದು ಬಿದ್ದಿದೆ. ಜೀವ ಉಳಿಸಲು ಮೃಗಾಲಯದ ವೈದ್ಯಾಧಿಕಾರಿಗಳು ಮಾಡಿದ ಪ್ರಯತ್ನ ಫಲಪ್ರದವಾಗಲಿಲ್ಲ.   ಈ ಹುಲಿಯ ಹೆಸರು ಒಲಿವರ್‌. ಇದು ವಿಕ್ರಂ ಹಾಗೂ ಶಾಂಭವಿ ಹುಲಿ ಜೋಡಿಗೆ ಜನಿಸಿದ್ದ ಎರಡು ಮರಿಗಳಲ್ಲೊಂದು. ಇದರ ಪ್ರಾಯ 9 ವರ್ಷ ಆಗಿತ್ತು. ಮೃತಪಟ್ಟ ಹುಲಿಯ ಅಂಗಾಂಗಗಳ ಮಾದರಿಯನ್ನು ಬೆಂಗಳೂರಿನ ಪ್ರಾಣಿ ಆರೋಗ್ಯ […]

ಕಾಂಗ್ರೆಸ್ ಗೂಂಡಾ ವರ್ತನೆ : ಸಚಿವ ಅಶೋಕ್ ಖಂಡನೆ

Monday, January 3rd, 2022
R Ashoka

ಬೆಂಗಳೂರು  : ರಾಮನಗರ ಜಿಲ್ಲೆಯಲ್ಲಿ ಸರ್ಕಾರ ಆಯೋಜಿಸಿದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರು ತೋರಿದ ವರ್ತನೆ ಅವರಿಗೆ ಗೌರವ ತರುವಂತದ್ದಲ್ಲ. ಮಾನ್ಯ ಮುಖ್ಯಮಂತ್ರಿಗಳು ಇರುವ ವೇದಿಕೆಯಲ್ಲಿಯೇ ಅಗೌರವದಿಂದ ನಡೆದುಕೊಂಡಿದ್ದಾರೆ. ದೇವರಾಜ್ ಅರಸು ಕಾಲದಿಂದಲೂ ಕಾಂಗ್ರೆಸ್ ನಲ್ಲಿ ಗೂಂಡಾ ಸಂಸ್ಕೃತಿ ಇದೆ. ಈ ಘಟನೆಯಿಂದ ಕಾಂಗ್ರೆಸ್ ನಿಜವಾದ ಬಣ್ಣ ಬಯಲಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ರಾಜ್ಯಾದ್ಯಂತ ಇದೇ ರೀತಿಯಲ್ಲಿ ವ್ಯವಹರಿಸುತ್ತದೆ. ಈ ರೀತಿಯ ತೋಳ್ಬಲಕ್ಕೆ ಮುಂದಾದರೆ ಸಾರ್ವಜನಿಕರೇ ತಕ್ಕಶಾಸ್ತಿ ಮಾಡುತ್ತಾರೆ.  ಈ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದಿದ್ದಾರೆ.

ಕೋವಿಡ್ ತೊಲಗಿಸಲು ಪಣ ತೋಡೋಣ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

Monday, January 3rd, 2022
cm Bommai

ಬೆಂಗಳೂರು : 2022ನ್ನು ಆರೋಗ್ಯಭರಿತ ಹಾಗೂ ಕೋವಿಡ್ ಮುಕ್ತ ವರ್ಷವನ್ನಾಗಿ ಮಾಡಲು ಸಂಕಲ್ಪ ತೋಡೋಣ. ಕೋವಿಡ್ ವಿರುದ್ದ ಒಟ್ಟಾಗಿ ಸಮರವನ್ನು ಸಾರಿ ತೊಲಗಿಸಲು ಪಣ ತೋಡೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕರೆ ನೀಡಿದರು. ಅವರು ಇಂದು ಅವರು ಇಂದು ಭೈರವೇಶ್ವರನಗರದ ಬಿಬಿಎಂಪಿ ಪ್ರೌಢಶಾಲೆ ಹಾಗೂ ಪದವಿಪೂರ್ವ ಸ್ನಾತಕೋತ್ತರ ಕಾಲೇಜಿನಲ್ಲಿ 15-18 ವರ್ಷದೊಳಗಿನ ಶಾಲಾ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು. ಬಿ.ಎಸ್.ಯಡಿಯೂರಪ್ಪ ಅವರ ನಾಯಕತ್ವದಲ್ಲಿ ಕರ್ನಾಟಕದಲ್ಲಿ ಅತ್ಯಂತ ಯಶಸ್ವಿಯಾಗಿ ಕೋವಿಡ್ ನ್ನು […]

ಕಾರ್ಯಕ್ರಮದ ವೇದಿಕೆಯಲ್ಲಿ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟ

Monday, January 3rd, 2022
Ramanagar

ರಾಮನಗರ: ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಎದುರೇ ಸಚಿವ ಸಿ.ಎನ್. ಅಶ್ವತ್ಥನಾರಾಯಣ ಹಾಗೂ ಸಂಸದ‌ ಡಿ.ಕೆ.‌ ಸುರೇಶ್ ಹೊಡೆದಾಟಕ್ಕೆ ಮುಂದಾದ‌ ಘಟನೆ ರಾಮನಗರದಲ್ಲಿ ನಡೆಯಿತು. ರಾಮನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಮುಂಭಾಗ ಸೋಮವಾರ ನಡೆದ ಪ್ರತಿಮೆಗಳ ಅನಾವರಣ ಹಾಗೂ ವಿವಿಧ ಕಾಮಗಾರಿಗಳಿಗೆ ಚಾಲನೆ ವೇಳೆ ವೇದಿಕೆಯಲ್ಲಿ ಅಶ್ವತ್ಥನಾರಾಯಣರ ಮಾತಿನಿಂದ ಕೆರಳಿದ‌ ಸುರೇಶ್ ಅವರತ್ತ ನುಗ್ಗಿದರು. ಅತ್ತ ಅಶ್ವತ್ಥನಾರಾಯಣ ಸಹ‌ ಕೆರಳಿದರು. ನಂತರ ಇಬ್ಬರು‌ ಕೈ ಕೈ ಮಿಲಾಯಿಸಲು ಮುಂದಾದರು. ವಿಧಾನ‌ ಪರಿಷತ್ ಸದಸ್ಯ ಎಸ್. ರವಿ ಮೈಕ್ ನಲ್ಲಿ‌ […]

ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ ನನ್ನಲಿದೆ: ಸಿಎಂ ಬಸವರಾಜ ಬೊಮ್ಮಾಯಿ

Tuesday, December 28th, 2021
Hubballi

ಹುಬ್ಬಳ್ಳಿ : ವರ್ಷದ 365 ದಿನಗಳು ಅವಿಶ್ರಮಿತವಾಗಿ ದಣಿವರಿಯದೇ ಕೆಲಸ ಮಾಡುವ ಶಕ್ತಿ, ಸ್ಪೂರ್ತಿ ನನ್ನಲ್ಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿಗಳು ಕೆಲಸಮಯ ವಿಶ್ರಮಿಸಬೇಕೆನ್ನುವ ಎಂ.ಪಿ.ಕುಮಾರಸ್ವಾಮಿಯವರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ನಾನು ದಣಿವರಿಯದೇ ಕೆಲಸ ಮಾಡುವ ಶಕ್ತಿ ಹೊಂದಿದ್ದೇನೆ. ದಿನದಲ್ಲಿ ಕನಿಷ್ಟ 15 ತಾಸು ಕೆಲಸ ಮಾಡುವ ಸಂಕಲ್ಪ ಮಾಡಿದ್ದೇನೆ. 2023ರ ಚುನಾವಣೆಯಲ್ಲಿ ಮತ್ತೊಮ್ಮೆ ಭಾರತೀಯ ಜನತಾ ಪಕ್ಷವನ್ನು ಅಧಿಕಾರಕ್ಕೆ ತರುವುದು ನನ್ನ ಗುರಿ […]

ದೇಶದಲ್ಲಿ ಮತ್ತೊಂದು ಅವಗಢ : ಕೋಡಿಮಠದ ಸ್ವಾಮೀಜಿ ಭವಿಷ್ಯ

Friday, December 24th, 2021
Kodimatha

ರಾಣೆಬೆನ್ನೂರ: ಸಂಕ್ರಾತಿಯೊಳಗೆ ಮತ್ತೊಂದು ರಾಜಕೀಯ ಅವಘಡ ಸಂಭವಿಸುವ ಲಕ್ಷಣವಿದೆ. ಇದರಿಂದ ಜಗತ್ತು ತಲ್ಲಣಗೊಳ್ಳಲಿದೆ ಎಂದು ಹಾರನಹಳ್ಳಿ ಕೋಡಿಮಠದ ಡಾ. ಶಿವಾನಂದ ಶಿವಯೋಗೀಂದ್ರ ಸ್ವಾಮೀಜಿ ಭವಿಷ್ಯ ನುಡಿದರು. ನಗರಕ್ಕೆ ಶುಕ್ರವಾರ ಖಾಸಗಿ ಕಾರ್ಯಕ್ರಮವೊಂದರ ನಿಮಿತ್ತ ಆಗಮಿಸಿದ ಅವರು ಮಾಧ್ಯಮದರೊಂದಿಗೆ ಮಾತನಾಡಿ, ನಾನು ಈ ಹಿಂದೆಯೇ ದೊಡ್ಡಮಟ್ಟದ ಅವಘಡ ಸಂಭವಿಸುವ ಕುರಿತು ಹೇಳಿದ್ದೆ. ಅದರಂತೆ ಭಾರತೀಯ ಸೇನೆಯ ಮುಖ್ಯಸ್ಥರ ಹೆಲಿಕಾಪ್ಟರ್ ದುರಂತ ಪ್ರಕರಣ ನಡೆದು ಹೋಯಿತು. ಮೊನ್ನೆ ನಡೆದ ಭಾರತೀಯ ಸೇನೆಯ ಮುಖ್ಯಸ್ಥರ ಅವಘಡದಂತೆ  ಮತ್ತೆ ಅಂಥದ್ದೇ ದುರಂತ ಸಂಭವಿಸುವ […]

ವಿಪಕ್ಷಗಳ ಗದ್ದಲದ ನಡುವೆಯೇ ಮತಾಂತರ ತಡೆ ವಿಧೇಯಕ ಅಂಗೀಕಾರ

Thursday, December 23rd, 2021
Conversion-bill

ಬೆಳಗಾವಿ : ಎರಡು ದಿನಗಳ ವಾದ-ವಿವಾದಗಳ ಬಳಿಕ ಇಂದು ಸುದೀರ್ಘವಾಗಿ ನಡೆದ ಚರ್ಚೆಯಲ್ಲಿ  ಮತಾಂತರ ತಡೆ ವಿಧೇಯಕ ಅಂಗೀಕಾರ ಆಗಿದೆ. 2016ರಲ್ಲಿ ಕಾನೂನು ಆಯೋಗ ಸಿದ್ಧಪಡಿಸಿದ್ದ ಮತಾಂತರ ನಿಷೇಧ ವಿಧೇಯಕದ ಕರಡು ಪ್ರತಿಗೆ ಅಂದಿನ ಕಾನೂನು ಸಚಿವ ಟಿ.ಬಿ. ಜಯಚಂದ್ರ ಒಪ್ಪಿಗೆ ನೀಡಿದ್ದನ್ನು ಬಿಜೆಪಿ ಪ್ರದರ್ಶಿಸಿತು. ಅಷ್ಟೇ ಅಲ್ಲ, ಆ ಪ್ರತಿಗೆ ಅಂದಿನ ಸಿಎಂ ಸಿದ್ದರಾಮಯ್ಯ ಕರಡು ಪ್ರತಿ ಒಪ್ಪಿ ಕ್ಯಾಬಿನೆಟ್ಗೆ ಕಡತ ಮಂಡಿಸುವಂತೆ ಸಹಿ ಮಾಡಿದ್ದರ ಬಗ್ಗೆ ಸಚಿವ ಮಾಧುಸ್ವಾಮಿ ಹೇಳುತ್ತಿದ್ದಂತೆ, ಇದಕ್ಕೆ ಉತ್ತರಿಸಲು ವಿಪಕ್ಷ ನಾಯಕ ಸಿದ್ದರಾಮಯ್ಯ ಕಕ್ಕಾಬಿಕ್ಕಿಯಾದ […]

ಚಿಲುಮೆ ಮಠದ ಪೀಠಾಧಿಪತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ : ಸಾವಿನ ಬಗ್ಗೆ ಅನುವಾನ

Tuesday, December 21st, 2021
chilume Sree

ರಾಮನಗರ : ಚಿಲುಮೆ ಮಠದ ಪೀಠಾಧಿಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದರ ಬಗ್ಗೆ ಅವರ ಭಕ್ತರ ವಲಯದಲ್ಲಿ ಅನುಮಾನ ವ್ಯಕ್ತವಾಗಿದೆ. ಆತ್ಮಹತ್ಯೆ ಮಾಡಿಕೊಂಡ 58 ವರ್ಷದ ಬಸವಲಿಂಗ ಸ್ವಾಮಿಗಳು ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಸೋಲೂರು ಹೋಬಳಿಯ ಚಿಲುಮೆ ಮಠದ ಗೋಡೆಗೆ ಅಳವಡಿಸಿದ್ದ ಕಬ್ಬಿಣದ ಗ್ರಿಲ್ ಗೆ ನೇಣು ಬಿಗಿದುಕೊಂಡು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಿವಣ್ಣ ಎಂಬುವರು ಮಠದಲ್ಲಿ ಇದ್ದ ದನ ಕರುಗಳನ್ನ ಕಟ್ಟಿ ಹಾಕಲು ಬಂದಿದ್ದರು. ಈ ವೇಳೆ ಸ್ವಾಮಿಜಿ ಯವರನ್ನು ಕರೆದಾಗ ಬರದೇ ಇದ್ದಾಗ, […]

ಕರ್ನಾಟಕ ವಿಧಾನ ಪರಿಷತ್ ಚುನಾವಣೆ : ಗೆದ್ದವರ ವಿವರ ಇಲ್ಲಿದೆ

Tuesday, December 14th, 2021
MLC-election

ಬೆಂಗಳೂರು : ಕರ್ನಾಟಕ ವಿಧಾನ ಪರಿಷತ್ತಿನ 25 ಸ್ಥಾನಗಳಿಗೆ ಡಿಸೆಂಬರ್ 10 ರಂದು ನಡೆದ ಚುನಾವಣೆಯ ಫಲಿತಾಂಶ  ಇಂದು ಪ್ರಕಟವಾಗಲಿದೆ. 75 ಸದಸ್ಯರ ಮೇಲ್ಮನೆಯಲ್ಲಿ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಪಡೆದುಕೊಳ್ಳಲು ಈ ಚುನಾವಣೆಯಲ್ಲಿ ಅವಕಾಶವಿದೆ. 2023ರ ಕರ್ನಾಟಕ ವಿಧಾನಸಭಾ  ಹಿನ್ನೆಲೆಯಲ್ಲಿ ಈ ಚುನಾವಣೆ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್  ಎರಡಕ್ಕೂ ಚುನಾವಣೆಗಳು ಮಹತ್ವದ್ದಾಗಿವೆ. ಫಲಿತಾಂಶ ಪ್ರಕಟವಾದ ಬಳಿಕ ವಿಧಾನಪರಿಷತ್ ರಚನೆಯಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಮೇಲ್ಮನೆಯಲ್ಲಿ 32 ಸ್ಥಾನಗಳನ್ನು ಹೊಂದಿರುವ ಬಿಜೆಪಿ, 12 ಸದಸ್ಯರನ್ನು ಹೊಂದಿರುವ ಜೆಡಿಎಸ್ […]

ಜನರಿಗೆ ‘ಕೈ’ ಕೊಡುವುದರಲ್ಲಿ ಕಾಂಗ್ರೆಸ್ ಸಿದ್ಧಹಸ್ತ : ಸಿಎಂ

Tuesday, December 7th, 2021
cm Bommai

ಗದಗ : ಕಾಂಗ್ರೆಸ್ ಪಕ್ಷದ ಚಿಹ್ನೆ ‘ಹಸ್ತ’ವಾಗಿದ್ದು, ಜನರಿಗೆ ಕೈಕೊಡುವ ಕೆಲಸದಲ್ಲಿ ಅವರು ಸಿದ್ಧಹಸ್ತರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದರು. ಗದಗ ಜಿಲ್ಲೆಯಲ್ಲಿ ಭಾಜಪದ ವತಿಯಿಂದ ಆಯೋಜಿಸಿದ್ದ ಚುನಾವಣಾ ಸಮಾವೇಶದಲ್ಲಿ ಅವರು ಮಾತನಾಡುತ್ತಿದ್ದರು. 7 ಕೆಜಿ ಅಕ್ಕಿ ನೀಡುವುದಾಗಿ ಘೋಷಿಸಿ ಕೆಲವೇ ದಿನಗಳ ನಂತರ ಅದನ್ನು 4 ಕೆಜಿಗೆ ಇಳಿಸಿದರು. 5 ವರ್ಷದ ಅವಧಿಯಲ್ಲಿ 3 ವರ್ಷ 4ಕೆಜಿ ಅಕ್ಕಿ ಮಾತ್ರ ನೀಡಿದ್ದಾರೆ. ಚುನಾವಣೆಗೆ ಒಂದು ವರ್ಷವಿದ್ದಾಗ ಪುನ: 7 ಕೆಜಿಗೆ ಏರಿಸಿದರು. ಕಾಂಗ್ರೆಸ್ ಸರ್ಕಾರ […]