ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಟಿ ಉತ್ಸವ

Monday, December 5th, 2016
Kukke-rathothsava

ಮಂಗಳೂರು: ಸಂಭ್ರಮ ಸಡಗರದಿಂದ ನಡೆದ ಕುಕ್ಕೆ ಸುಬ್ರಹ್ಮಣ್ಯದ ಚಂಪಾ ಷಷ್ಟಿ ಉತ್ಸವಕ್ಕೆ ಸಾವಿರಾರು ಭಕ್ತಾದಿಗಳು ಸಾಕ್ಷಿಯಾದರು. ಬೆಳಗ್ಗೆ 6.55 ರ ಮುಹೂರ್ತದಲ್ಲಿ ಸುಬ್ರಹ್ಮಣ್ಯ ದೇವರು ಬ್ರಹ್ಮ ರಥದಲ್ಲಿ ಹಾಗೂ ಉಮಾಮಹೇಶ್ವರ ದೇವರು ಪಂಚಮಿ ರಥದಲ್ಲಿ ಆರೂಢರಾದರು. ವಿಶೇಷ ಪೂಜೆ ನಡೆದ ಬಳಿಕ ಭಕ್ತಾದಿಗಳು ರಥವನ್ನು ಎಳೆಯುವುದರ ಮುಖಾಂತರ ದೇವರ ಕೃಪೆಗೆ ಪಾತ್ರರಾದರು.

ಸಾರ್ವಜನಿಕ ಉಪಯೋಗಕ್ಕಾಗಿ ಉಚಿತ: ಹಸಿದವರಿಗೆ ಉಚಿತವಾಗಿ ಆಹಾರ ನೀಡುತ್ತಿರುವ ಅಂಗಡಿ ಮಾಲೀಕ

Monday, December 5th, 2016
Poor-food

ಮಂಗಳೂರು: ತಾವಾಯಿತು, ತಮ್ಮ ಕೆಲಸವಾಯಿತು ಅನ್ನುವ ನಗರದ ಮಂದಿಯ ಮಧ್ಯೆ ಇಲ್ಲಿನ ವ್ಯಕ್ತಿಯೋರ್ವ ವಿಶೇಷವಾಗಿ ಗುರತಿಸಿಕೊಳ್ಳುತ್ತಾರೆ. ಇವರ ಸೇವೆಯೂ ಕೂಡ ಅಷ್ಟೇ ವಿಶಿಷ್ಟವಾಗಿದೆ. ಹಾಗಾದ್ರೆ ಆ ವ್ಯಕ್ತಿ ಯಾರು, ಅವರ ಸೇವೆ ಏನು ಎನ್ನುವುದರ ಡಿಟೇಲ್ಸ್‌ ಇಲ್ಲಿದೆ… ಹೌದು.. ಅಂಗಡಿಯೊಂದರ ಮಾಲೀಕನೋರ್ವ ‘ಸಾರ್ವಜನಿಕ ಉಪಯೋಗಕ್ಕಾಗಿ ಉಚಿತ’ ಎಂದು ಬರೆದ ಫ್ರಿಡ್ಜ್‌‌ವೊಂದನ್ನು ತಮ್ಮ ಶಾಪ್‌ ಮುಂದೆ ನಿಲ್ಲಿಸಿದ್ದಾರೆ. 24 ಗಂಟೆ ಚಾಲನೆಯಲ್ಲಿರುವ ಈ ಫ್ರಿಡ್ಜ್‌‌ನಲ್ಲಿ ಇಡಲಾಗುವ ಎಲ್ಲ ಸಾಮಗ್ರಿಗಳನ್ನು ಸಾರ್ವಜನಿಕರು ಉಚಿತವಾಗಿಯೇ ಬಳಸಬಹುದು. ನಗರದ ಜ್ಯೋತಿ ಬಳಿಯ ಕೈರನ್ನಾರ್ […]

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್ ಆಯ್ಕೆ

Saturday, December 3rd, 2016
Suresh-ballal

ಮಂಗಳೂರು: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಬಲ್ಲಾಳ್ ನೇಮಕಗೊಂಡಿದ್ದಾರೆ. ಸುರೇಶ್ ಬಲ್ಲಾಳ್ ಪ್ರಸಕ್ತ ಕೆಪಿಸಿಸಿ ಸದಸ್ಯರಾಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿದ್ದರು. ಈ ಹಿಂದೆ ಮಂಗಳೂರು ವಿಶ್ವ ವಿದ್ಯಾನಿಲಯದ ಸಿಂಡಿಕೇಟ್, ಸೆನೆಟ್ ಹಾಗೂ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೇ ಸುರೇಶ್ ಬಲ್ಲಾಳ್ ಈ ಹಿಂದೆಯೂ ಮುಡಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಕಳಪೆ ಕಾಮಗಾರಿಯಿಂದ ಕಿಂಡಿ ಅಣೆಕಟ್ಟು ಒಂದೇ ದಿನದಲ್ಲಿ ಕುಸಿತ

Saturday, December 3rd, 2016
Sulya

ಸುಳ್ಯ: ತಾಲೂಕಿನ ಉಬರಡ್ಕ ಗ್ರಾಮದ ದೊಡ್ಡಡ್ಕ ಎಂಬಲ್ಲಿ ಕಂದಡ್ಕ ಹೊಳೆಗೆ ಸುಮಾರು 47 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟು ನೀರು ಸಂಗ್ರಹವಾದ ಒಂದೇ ದಿನದಲ್ಲಿ ಕುಸಿತಗೊಂಡಿದೆ. ಕಳಪೆ ಕಾಮಗಾರಿಯೇ ಇದಕ್ಕೆ ಕಾರಣ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ವತಿಯಿಂದ 2012-13ನೇ ಆರ್ಥಿಕ ವರ್ಷದಲ್ಲಿ 47 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ನಡೆಸಲಾಗಿತ್ತು. ಅಲ್ಲದೆ ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 35 ಲಕ್ಷ ರೂ. ಮಂಜೂರು ಮಾಡಲಾಗಿದೆ. ಒಂದು ವರ್ಷದ ಹಿಂದೆ […]

ಚಿಟ್‌‌ ಫಂಡ್ ಪ್ರಕರಣ: ಕೋಟ್ಯಂತರ ರೂಪಾಯಿ ವಂಚಿಸಿದ ವ್ಯಕ್ತಿ ಪೊಲೀಸ್ ವಶಕ್ಕೆ

Saturday, December 3rd, 2016
Purandara

ಮಂಗಳೂರು: ಚಿಟ್‌‌ ಫಂಡ್ ಮೂಲಕ ಕೋಟ್ಯಂತರ ರೂಪಾಯಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ವಿಟ್ಲ ಠಾಣಾ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ವಿಟ್ಲ ಕಸಬ ಗ್ರಾಮದ ಸೇರಾಜೆ ನಿವಾಸಿ ಪುರಂದರ (26) ಎಂಬಾತನೇ ವಂಚನೆ ಪ್ರಕರಣದಲ್ಲಿ ಪೊಲೀಸರ ವಶವಾದ ವ್ಯಕ್ತಿ. ವಿಟ್ಲದ ಬೊಬ್ಬೆಕೇರಿಯಲ್ಲಿ ಊಟದ ಹೊಟೇಲ್ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದ ಪುರಂದರ್ ಈ ಚಿಟ್‌ ಫಂಡ್‌ ಪ್ರಾರಂಭಿಸಿದ್ದರು. ಚಿಟ್‌ ಫಂಡ್‌ನಲ್ಲಿ 35 ಜನರು ಸೇರಿಕೊಂಡು ಕಳೆದ ಐದು ವರ್ಷದಿಂದ ನಡೆಸುತ್ತ ಬಂದಿದ್ದರು. ಆದರೆ ಸದ್ಯ ಈ ಚೀಟ್‌ ಫಂಡ್‌ನಿಂದ […]

ಜಿಎಸ್‌ಟಿ ಅನುಷ್ಠಾನದಿಂದ ಕರ್ನಾಟಕ ರಾಜ್ಯದ ಆದಾಯ ಹೆಚ್ಚಳ: ಮಧುಕರ್‌ ಹಿರೇಗಂಗೆ

Saturday, December 3rd, 2016
GST

ಮಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದ ಕರ್ನಾಟಕ ರಾಜ್ಯದ ಆದಾಯದಲ್ಲಿ ಸುಮಾರು 11,000 ಕೋ.ರೂ. ಹೆಚ್ಚಳವಾಗುವ ಸಾಧ್ಯತೆಗಳಿವೆ ಎಂದು ಇನ್‌ಸ್ಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಆಕೌಂಟೆಂಟ್‌ ಆಫ್‌ ಇಂಡಿಯಾದ (ಐಸಿಎಐ) ಪರೋಕ್ಷ ತೆರಿಗೆಗಳ ಸಮಿತಿಯ ಅಧ್ಯಕ್ಷ ಮಧುಕರ್‌ ಹಿರೇಗಂಗೆ ಅವರು ಹೇಳಿದರು. ಪರೋಕ್ಷ ತೆರಿಗೆಗಳ ಸಮಿತಿಯು ಐಸಿಎಐಯ ದಕ್ಷಿಣ ಭಾರತ ವಲಯದ ಮಂಗಳೂರು ಶಾಖೆಯ ಸಹಯೋಗದೊಂದಿಗೆ ಜಿಎಸ್‌ಟಿ ಕುರಿತು ನಗರದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಷ್ಟ್ರೀಯ ಸಮಾವೇಶದ ಉದ್ಘಾಟನ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಎಸ್‌ಟಿಯಿಂದ […]

ಸಮುದ್ರದ ಅಂಚಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡುವ ಬಗ್ಗೆ ಸಭೆ

Friday, December 2nd, 2016
Ramanathha rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ, ಉಡುಪಿ ಜಿಲ್ಲೆ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಸಮುದ್ರದ ಅಂಚಿನಲ್ಲಿ ವಾಸವಾಗಿರುವ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿ ವಾಸಿಸಲು ಹಾಗೂ ಇತರ ಉದ್ದೇಶಗಳಿಗೆ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ರಾಜ್ಯ ಅರಣ್ಯ ಮತ್ತು ಪರಿಸರ ಖಾತೆ ಸಚಿವ ಬಿ. ರಮಾನಾಥ ರೈ ಅಧ್ಯಕ್ಷತೆಯಲ್ಲಿ ಬೆಳಗಾವಿಯ ಸುವರ್ಣಸೌಧದಲ್ಲಿ ಸಭೆ ನಡೆಸಲಾಯಿತು. ಸಮುದ್ರದ ಅಂಚಿನಲ್ಲಿ ವಾಸಿಸುತ್ತಿರುವ ಕುಟುಂಬಧಿಗಳಿಗೆ ಮನೆ ನಿರ್ಮಾಣ ಮಾಡಿಕೊಳ್ಳಲು ಸಿ.ಆರ್‌.ಝಡ್‌. ನಿಯಮಗಳ ಬಗ್ಗೆ ಚರ್ಚಿಸಲಾಯಿತು. ಪ್ರಸ್ತುತ ಕೆಲವು ಸಮಸ್ಯೆಗಳಿವೆ. ಕಂದಾಯ ಸಚಿವ […]

ಎಚ್‌ಐವಿ, ಏಡ್ಸ್‌ ಕುರಿತಂತೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಿ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು: ಮೀನಾಕ್ಷಿ ಶಾಂತಿಗೋಡು

Friday, December 2nd, 2016
world-aids-day

ಮಂಗಳೂರು: ಎಚ್‌ಐವಿ, ಏಡ್ಸ್‌ ಕುರಿತಂತೆ ಜನಸಾಮಾನ್ಯರಿಗೆ ತಿಳಿವಳಿಕೆ ನೀಡಿ ಅವರಲ್ಲಿರುವ ಕೆಲವೊಂದು ತಪ್ಪು ಕಲ್ಪನೆಗಳನ್ನು ಹೋಗಲಾಡಿಸಬೇಕು. ಇದರ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಕೆಲವು ಸಂಘ-ಸಂಸ್ಥೆಗಳು ಮಾಡುಧಿತ್ತಿರುವುದು ಶ್ಲಾಘನೀಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಇಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿದ ವಿಶ್ವ ಏಡ್ಸ್‌ ದಿನ-2016 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಎಚ್‌ಐವಿ ಪೀಡಿತರನ್ನು ಸಮಾಜಧಿದಿಂದ ದೂರವಿಡದೆ ಮುಖ್ಯ ವಾಹಿನಿಗೆ ತರುವ ಕೆಲಸವನ್ನು ಪ್ರತಿಧಿಯೊಬ್ಬರೂ ಮಾಡಬೇಕು. ಏಡ್ಸ್‌ಗೆ ಕಾರಣಧಿಧಿವಾಗುವ […]

ಮುಂಬೈಯಿಂದ ಕಾಸರಗೋಡಿಗೆ ತರಲಾಗುತ್ತಿದ್ದ ದಾಖಲೆ ರಹಿತ 20 ಲಕ್ಷ ರೂ ಹಳೆ ನೋಟುಗಳ ವಶ

Friday, December 2nd, 2016
indian money

ಮಂಗಳೂರು: ಮುಂಬೈಯಿಂದ ಕಾಸರಗೋಡಿಗೆ ತರಲಾಗುತ್ತಿದ್ದ ದಾಖಲೆ ರಹಿತ 20 ಲಕ್ಷ ರೂ. ಹಳೆ ನೋಟುಗಳನ್ನು ಹೊಸಂಗಡಿ ವಾಮಂಜೂರು ಚೆಕ್ ಪೋಸ್ಟ್ ಬಳಿ ಅಬಕಾರಿ ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಕಾಸರಗೋಡು ನಿವಾಸಿ ಗಫೂರ್ ಎಂಬಾತನಿಂದ ಈ ಹಣವನ್ನು ವಶಕ್ಕೆ ಪಡೆಯಲಾಗಿದೆ. ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ವೇಳೆ ಕಾರ್ಯಾಚರಣೆ ನಡೆಸಿ ಹಣ ವಶಕ್ಕೆ ಪಡೆಯಲಾಯಿತು.

ಎಪಿಡಿ ಪ್ರತಿಷ್ಠಾನದ ಸ್ಮಾರ್ಟ್‌ ಸ್ವಚ್ಛ ಮಂಗಳೂರು ಅಭಿಯಾನಕ್ಕಾಗಿ ಯಂಗ್ ಸೋಶಿಯಲ್ ಇನೋವೆಟರ್ಸ್‌ ಕಾನ್ ಕ್ಲೇವ್‌‌‌‌ನಲ್ಲಿ ಪ್ರಶಸ್ತಿ ಪ್ರದಾನ

Friday, December 2nd, 2016
APD-foundation

ಮಂಗಳೂರು: ಯುನ್-ಹೆಬಿಟೇಟ್ ಮತ್ತು ನರೊತ್ತಮ್ ಸೆಕ್ಸರಿಯ ಪ್ರತಿಷ್ಠಾನ ಪ್ರತಿಷ್ಠಾಪಿಸಿದ ಪ್ರತಿಷ್ಠಿತ ಇಂಡಿಯಾ ಯೂತ್ ಫಂಡ್ ಪ್ರಶಸ್ತಿಯನ್ನು ನಗರದ ಲಾಭರಹಿತ ಸಂಸ್ಥೆ ಆಂಟಿ ಪೊಲ್ಯುಷನ್ ಡ್ರೈವ್ ಪ್ರತಿಷ್ಠಾನ ಪಡೆದುಕೊಂಡಿದೆ. ಎಪಿಡಿ ಪ್ರತಿಷ್ಠಾನದ ಸ್ಮಾರ್ಟ್‌ ಸ್ವಚ್ಛ ಮಂಗಳೂರು ಅಭಿಯಾನಕ್ಕಾಗಿ ನೀಡಲಾದ ಪ್ರಶಸ್ತಿಯನ್ನು ಇತ್ತೀಚೆಗೆ ಮುಂಬೈಯಲ್ಲಿ ನಡೆದ ಯಂಗ್ ಸೋಶಿಯಲ್ ಇನೋವೆಟರ್ಸ್‌ ಕಾನ್ ಕ್ಲೇವ್‌‌‌‌ನಲ್ಲಿ ಪ್ರದಾನ ಮಾಡಲಾಯಿತು. ನರೊತ್ತಮ್ ಸೆಕ್ಸರಿಯ ಪ್ರತಿಷ್ಠಾನದ ನಿರ್ದೇಶಕ ಪದ್ಮಿನಿ ಸೊಮಾನಿ ಅವರಿಂದ ಎಡಿಪಿ ಫೌಂಡೇಶನ್ ಸ್ಥಾಪಕ ಅಬ್ದುಲ್ಲಾ ಎ. ರೆಹಮಾನ್ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿಯು ಗರಿಷ್ಠ […]