ರಫೀಕ್ ಅಹ್ಮದ್ ಸಂಶಯಾಸ್ಪದ ಸಾವು – ಉನ್ನತ ಮಟ್ಟದ ತನಿಖೆಗೆ ತುರವೇ ಒತ್ತಾಯ

Wednesday, November 13th, 2019
rafeeq

ಮಂಗಳೂರು  : ಕೊಳ್ತಿಗೆ ಗ್ರಾಮದ ಪಂಬಾರು ಸಮೀಪದ ಪಾರ್ಚೋಲು ಎಂಬಲ್ಲಿ ನವೆಂಬರ್ 10 ಭಾನುವಾರ ಮಧ್ಯಾಹ್ನ ಮರ ಕಡಿಯುತ್ತಿದ್ದ ಮರದ ಕೊಂಬೆಯೊಂದು ಮೈಮೇಲೆ ಬಿದ್ದು, ಮರ ಕಡಿಯಲು ಹೋಗಿದ್ದ ಕಾರ್ಮಿಕರೊಬ್ಬರು ಮೃತಪಟ್ಟರೆನ್ನಲಾದ ನಿಗೂಢ ಘಟನೆ ಸಂಬಂಧಿಸಿ ಬೆಳ್ಳಾರೆ ಠಾಣೆಯಲ್ಲಿ ಸಂಶಯಾಸ್ಪದ ಸಾವಿನ ಪ್ರಕರಣ ದಾಖಲಾಗಿದ್ದು, ಅಲ್ಲದೇ ಅಕ್ರಮವಾಗಿ ಮರ ಕಡಿದ ಪ್ರಕರಣ ಬೆಳಕಿಗೆ ಬಂದ ಹಿನ್ನಲೆಯಲ್ಲಿ ಪುತ್ತೂರು ಅರಣ್ಯಾಧಿಕಾರಿಗಳ ಕಛೇರಿಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಂತೆ ನಾಲ್ವರ ವಿರುದ್ಧ ಪ್ರಕರಣ ಪ್ರತ್ಯೇಕವಾಗಿ ದಾಖಲಾಗಿದ್ದು, ಈ ಸಾವಿನ ಬಗ್ಗೆ ಸಾರ್ವಜನಿಕರು ಹಲವಾರು ರೀತಿಯ […]

ಬಾಲಿವುಡ್ ಶೈಲಿಯಲ್ಲಿ ಮೂಡಿ ಬಂದ ತುಳು ಚಿತ್ರ “ಜಬರದಸ್ತ್ ಶಂಕರ”

Wednesday, November 13th, 2019
Jabardast-shankara

ಮಂಗಳೂರು  :  ದೇವದಾಸ ಕಾಪಿಕಾಡ್ ಸಾಹಿತ್ಯ ರಚಿಸಿ ನಿರ್ದೇಶನ ಮಾಡಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ಮಾಮೂಲು ಶೈಲಿಗಿಂತ ವಿಭಿನ್ನವಾಗಿದ್ದು, ತಾಂತ್ರಿಕವಾಗಿ ಕೂಡ ಉತ್ತಮವಾಗಿ ಮೂಡಿಬಂದಿದೆ. ಸಾಮಾನ್ಯವಾಗಿ ತುಳು ಸಿನಿಮಾವೆಂದರೆ ಹಾಸ್ಯ ಪ್ರಧಾನ ಆಗಿರುತ್ತದೆ. “ಜಬರದಸ್ತ್ ಶಂಕರ”ದಲ್ಲಿ ಸಹಜವಾಗಿ ದೇವದಾಸ ಕಾಪಿಕಾಡ್, ಸಾಯಿ ಕೃಷ್ಣ ಮತ್ತಿತರರ ಹಾಸ್ಯ ಇದ್ದೇ ಇದೆ. ತುಳು ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಹೆಚ್ಚಿನ ಫೈಟ್ ದೃಶ್ಯಗಳಿದ್ದು, ಫೈಟ್ ಕಂಪೋಸಿಶನ್ ತುಳು ಚಿತ್ರರಂಗದ ಮಟ್ಟಿಗೆ ಉತ್ತಮವಾಗಿ ಮೂಡಿ ಬಂದಿದೆ. ಜಲನಿಧಿ ಫಿಲ್ಮ್ಸ್ […]

ನಾಳೆ ಮಂಗಳೂರು ಮಹಾನಗರ ಪಾಲಿಕೆ ಚುನಾವಣಾ ಮತ ಎಣಿಕೆ

Wednesday, November 13th, 2019
MCC

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಗೆ ನ.12ರಂದು ನಡೆದ ಚುನಾವಣೆಯ ಮತ ಎಣಿಕೆ ನಾಳೆ ನ.14ರಂದು ನಗರದ ರೊಸಾರಿಯೊ ಶಿಕ್ಷಣ ಸಂಸ್ಥೆಯಲ್ಲಿ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಣಿಕೆ ಕೇಂದ್ರದ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ಸಿಆರ್‌ಪಿಸಿ ಅನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಮಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ. ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ. ಚುನಾವಣೆಯಲ್ಲಿ ಸ್ಪರ್ಧಿಸಿದ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಪಕ್ಷಗಳ ಅಭಿಮಾನಿಗಳು, ಕಾರ್ಯಕರ್ತರು ಹೆಚ್ಚಿನಸಂಖ್ಯೆಯಲ್ಲಿ ಮತ ಎಣಿಕೆ ಕೇಂದ್ರದ ಸುತ್ತ […]

ಕಾವೇರಿ ನದಿಗೆ ಮಹಾ ಆರತಿ : ಅವೈಜ್ಞಾನಿಕ ಯೋಜನೆಗಳಿಂದ ಪ್ರಕೃತಿಯಲ್ಲಿ ಆತಂಕಕಾರಿ ಬೆಳವಣಿಗೆ; ಶ್ರೀಸದಾಶಿವ ಸ್ವಾಮೀಜಿ ಆತಂಕ

Wednesday, November 13th, 2019
Madikeri

ಮಡಿಕೇರಿ : ನವಪೀಳಿಗೆಗೆ ಪರಿಸರ ಸಂರಕ್ಷಣೆಯ ಪ್ರಜ್ಞೆ ಮೂಡಿಸುವ ಕೆಲಸವಾಗಬೇಕಿದೆ ಎಂದು ಅರೆಮಾದನಹಳ್ಳಿಯ ಶ್ರೀ ಶಿವ ಸುಜ್ಞಾನತೀರ್ಥ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಾವೇರಿ ಮಹಾ ಆರತಿ ಬಳಗ, ಕಾವೇರಿ ರಿವರ್ ಸೇವಾ ಟ್ರಸ್ಟ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಂಯುಕ್ತಾಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ಕಾವೇರಿ ನದಿಗೆ ನಡೆದ 100ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದ ಅವರು, ಪ್ರಕೃತಿಯ ಆರಾಧನೆ ನಿರಂತರವಾಗಿ ನಡೆಯಬೇಕು. ನದಿ, ಜಲಮೂಲಗಳನ್ನು ಸ್ವೇಚ್ಚಾಚಾರಕ್ಕೆ […]

ಅಯೋಧ್ಯೆ ತೀರ್ಪು : ಮುಸ್ಲಿಮರೊಂದಿಗೆ ಸಂಭ್ರಮ ಆಚರಿಸಿದ ಶಾಸಕ ಎಸ್.​​ಎ ರಾಮ್​ದಾಸ್

Wednesday, November 13th, 2019
Mysuru

ಮೈಸೂರು : ಐತಿಹಾಸಿಕ ಅಯೋಧ್ಯೆ ತೀರ್ಪು ಪ್ರಕಟ ಹಿನ್ನೆಲೆ ಬಿಜೆಪಿ ಶಾಸಕ ಎಸ್.ಎ. ರಾಮದಾಸ್ ಮುಸ್ಲಿಂ ಬಾಂಧವರೊಂದಿಗೆ ಸಂಭ್ರಮಾಚರಣೆ ಮಾಡಿದ್ದಾರೆ. ರಾಮದಾಸ್ ಕಚೇರಿ ಮುಂಭಾಗದಲ್ಲಿ ಶ್ರೀರಾಮನ ಫೋಟೋ ಇಟ್ಟು ಪೂಜೆ ಮಾಡಿ ಮುಸ್ಲಿಂ ಬಾಂಧವರೊಂದಿಗೆ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ಈ ವೇಳೆ ಮಾತನಾಡಿದ ಶಾಸಕ ರಾಮ್ದಾಸ್ ಸುಮಾರು 450 ವರ್ಷಗಳಷ್ಟು ಹಳೆಯ ವಿವಾದಕ್ಕೆ ಸುಪ್ರೀಂಕೋರ್ಟ್ನಿಂದ ಐತಿಹಾಸಿಕ ತೀರ್ಪು ಬಂದಿದೆ. ಭಾರತ ದೇಶದಲ್ಲಿ ಇತಿಹಾಸ ಬರೆಯುವಂತಹ ತೀರ್ಪನ್ನು ಕೋರ್ಟ್ ಕೊಟ್ಟಿದೆ. ಲಾಲ್ ಕೃಷ್ಣ ಅಡ್ವಾಣಿ ಅವರ ಹುಟ್ಟು […]

ಕುಕ್ಕರಹಳ್ಳಿ ಪೆಲಿಕಾನ್ ಪಕ್ಷಿ ಗಳ ಸರಣಿ ಸಾವು : ಪಕ್ಷಿ ಪ್ರೀಯರಲ್ಲಿ ಆತಂಕ

Wednesday, November 13th, 2019
Kukkara-Halli

ಮೈಸೂರು : ಕುಕ್ಕರಹಳ್ಳಿ ಕೆರೆಯಲ್ಲಿ ನಿನ್ನೆ ಸಂಜೆ ಇನ್ನೊಂದು ಪೆಲಿಕಾನ್ ಪಕ್ಷಿ ಮೃತಪಟ್ಟಿದ್ದು ಬೆಳಕಿಗೆ ಬಂದಿದೆ. ಪಕ್ಷಿಗಳ ಈ ರೀತಿಯ ಸರಣಿ ಸಾವು ಪಕ್ಷಿ ಪ್ರಿಯರಲ್ಲಿ ಆತಂಕ ಸೃಷ್ಟಿಸಿದೆ.ನಿನ್ನೆ ಸಂಜೆ ಕುಕ್ಕರಳ್ಳಿ ಕೆರೆ ನೀರಲ್ಲಿ ಸ್ಪಾಟ್ ಬಿಲ್ಡ್ ಪೆಲಿಕಾನ್ ಪಕ್ಷಿಯ ಮೃತದೇಹ ತೇಲುತ್ತಿರುವುದು ವಿಹಾರಿಗಳ ಗಮನಕ್ಕೆ ಬಂದಿದೆ . ಕೂಡಲೇ ಈ ವಿಚಾರವನ್ನು ಅರಣ್ಯಾಧಿಕಾರಿಗಳಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಮೃತ ಪಕ್ಷಿಯ ಕಳೆಬರವನ್ನು ತೆಗೆದುಕೊಂಡು ಬೆಂಗಳೂರಿನ ಅನಿಮಲ್ ಹೆಲ್ತ್ ಆ್ಯಂಡ್ ವೆಟರ್ನರಿ ಬಯೋಲಾಜಿಕಲ್ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. […]

ಹಾತೂರಿನಲ್ಲಿ ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಮಹಿಳೆ ಸಾವು

Wednesday, November 13th, 2019
KSRTC

ಮಡಿಕೇರಿ : ಕೆಎಸ್ ಆರ್ ಟಿಸಿ ಬಸ್ ಡಿಕ್ಕಿಯಾಗಿ ಪಾದಾಚಾರಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಹಾತೂರು ಮುಖ್ಯ ರಸ್ತೆಯಲ್ಲಿ ನಡೆದಿದೆ. ಸ್ಥಳೀಯ ನಿವಾಸಿ ಕೊಂಗೇಪಂಡ ಅಯ್ಯಣ್ಣ ಅವರ ಪತ್ನಿ ತಂಗಮ್ಮ (57) ಎಂಬುವವರೇ ಮೃತ ದುರ್ದೈವಿ. ಬಸ್ ಡಿಕ್ಕಿಯಾದ ಪರಿಣಾಮ ತಂಗಮ್ಮ ಸ್ಥಳದಲ್ಲೆ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ಅಜಾಗರೂಕತೆಯೇ ಘಟನೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಚಾಲಕನ ವಿರುದ್ಧ ಕ್ರಮ ಕೈಗೊಂಡಿದ್ದಾರೆ.  

ಕಲಬುರಗಿ : ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣ; ಐವರು ಆರೋಪಿಗಳ ಬಂಧನ

Wednesday, November 13th, 2019
Kalaburagi

ಕಲಬುರಗಿ : ಶಿವಲಿಂಗ ಭಾವಿಕಟ್ಟಿ ಕೊಲೆ ಪ್ರಕರಣದಲ್ಲಿ ಭಾಗಿಯಾದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾರಿಗೆ ಕಾರಿನ ಮೂಲಕ ಡಿಕ್ಕಿ ಹೊಡೆಸಿ ಸಿನಿಮಿಯ ರೀತಿಯಲ್ಲಿ ನವೆಂಬರ್ 4 ರಂದು ಹಡಗಿಲ್ ಬಳಿ ಶಿವಲಿಂಗ ಭಾವಿಕಟ್ಟಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರವಾಗಿ ಕೊಲೆಗೈಯಲಾಗಿತ್ತು. ಹಳೆ ವೈಷಮ್ಯದ ಹಿನ್ನೆಲೆ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿತ್ತು. ಇನ್ನು ತಲೆಮರೆಸಿಕೊಂಡಿರುವ ಮತ್ತಷ್ಟು ಆರೋಪಿಗಳ ಬಂಧನಕ್ಕೆ ಜಾಲ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರವಿ ಹೊಸಮನಿ, ರಾಜಕುಮಾರ ಮಯೂರ, ರೋಹಿತ್ ಹೊಸಮನಿ, ಲೋಹಿತ್ […]

ಅನರ್ಹರಿಗೆ ಅನ್ಯಾಯವಾಗಲು ಬಿಡಲ್ಲ, ಎಲ್ಲರಿಗೂ ಟಿಕೆಟ್ ಸಿಗುತ್ತೆ : ಕಂದಾಯ ಸಚಿವ ಆರ್.ಅಶೋಕ್

Wednesday, November 13th, 2019
R-Ashok

ಬೆಂಗಳೂರು : ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ಅನರ್ಹರು ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಬಿಜೆಪಿ ನಾಯಕರು ಸಹ ಇದಕ್ಕೆ ಪೂರಕವಾದ ಹೇಳಿಕೆಯನ್ನು ನೀಡುತ್ತಿದ್ದಾರೆ. ಈ ಕುರಿತು ಕಂದಾಯ ಸಚಿವ ಆರ್.ಅಶೋಕ್ ಪ್ರತಿಕ್ರಿಯಿಸಿ, ಅನರ್ಹ ಶಾಸಕರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುತ್ತದೆ ಎಂದು ಭರವಸೆ ನೀಡಿದ್ದಾರೆ. ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಿಂದ ನಿರಾಳರಾಗಿದ್ದೇವೆ. ಅನರ್ಹರಿಗೆ ಅನ್ಯಾಯವಾಗಲು ನಾವು ಬಿಡುವುದಿಲ್ಲ. ಎಲ್ಲರಿಗೂ ಟಿಕೆಟ್ ನೀಡಲಾಗುವುದು. ಮತ್ತೆ ಶಾಸಕರಾಗಿ […]

ಅನರ್ಹ ಶಾಸಕರಿಗೆ‌ ಟಿಕೆಟ್ ನೀಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚೆ : ನಳಿನ್ ಕುಮಾರ್​ ಕಟೀಲ್

Wednesday, November 13th, 2019
Nalin-Kumar

ಬೆಂಗಳೂರು : ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಬಿಜೆಪಿ ಸ್ವಾಗತಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ಅನರ್ಹ ಶಾಸಕರಿಗೆ‌ ಟಿಕೆಟ್ ನೀಡುವ ಕುರಿತು ಕೋರ್ ಕಮಿಟಿ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ. ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದ 17 ಶಾಸಕರ ಅನರ್ಹತೆಯ ವಿವಾದ ನ್ಯಾಯಾಲಯದ ಮುಂದೆ ಇತ್ತು. ಮಾಜಿ ಸಭಾಧ್ಯಕ್ಷರ ತೀರ್ಮಾನವನ್ನ ನ್ಯಾಯಾಲಯ ಎತ್ತಿ‌ಹಿಡಿದಿದೆ. ಜೊತೆಗೆ ಬರುವ ಚುನಾವಣೆಯಲ್ಲಿ ಸ್ಪರ್ಧೆಗೂ ಅವಕಾಶ ಕೊಟ್ಟಿದೆ. ನ್ಯಾಯಾಲಯದ […]