ಶಿವಮೊಗ್ಗ : ಮಳೆಗೆ ಮನೆ ಗೋಡೆ ಕುಸಿತದಿಂದ ವೃದ್ಧ ಸಾವು

Saturday, October 26th, 2019
bhadravati

ಶಿವಮೊಗ್ಗ : ಜಿಲ್ಲೆಯಲ್ಲಿ ಮಳೆ ಆರ್ಭಟ ಮುಂದುವರೆದಿದ್ದು, ಮಳೆಯಿಂದಾಗಿ ಮನೆಯ ಗೋಡೆ ಕುಸಿದು ವೃದ್ಧರೊಬ್ಬರು ಸಾವನ್ನಪ್ಪಿರುವ ಘಟನೆ ಭದ್ರಾವತಿ ತಾಲೂಕಿನ ಅರಬಿಳಚಿ ಗ್ರಾಮದಲ್ಲಿ ನಡೆದಿದೆ. ಲಕ್ಷ್ಮಣಪ್ಪ (67) ಮೃತಪಟ್ಟ ವೃದ್ಧ. ರಾತ್ರಿ ಇಡೀ ಧಾರಾಕಾರ ಮಳೆ ಸುರಿದಿದ್ದು, ಲಕ್ಷ್ಮಣಪ್ಪ, ಮನೆಯಲ್ಲಿ ಮಲಗಿದ್ದ ವೇಳೆ ಬೆಳಗಿನ ಜಾವ ಗೋಡೆ ಕುಸಿದು ಇವರ ಮೇಲೆ ಬಿದ್ದಿದೆ. ಪರಿಣಾಮ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ ಹಾಗೂ ಭದ್ರಾವತಿ […]

ಉತ್ತಮ ಪ್ರಜೆಗಳಾಗಿ ನಿಮ್ಮ ಜವಾಬ್ದಾರಿಗಳನ್ನು ತಿಳಿದುಕೊಳ್ಳಿ, ಈ ದೇಶದ ಧ್ವಜ ಧಾರಕರಾಗಿರಿ : ಡಾ.ಪಿ.ಎಸ್. ಹರ್ಷ

Saturday, October 26th, 2019
harsha

ಮಂಗಳೂರು  : ಎಂ.ಎಸ್‌.ಎನ್‌.ಎಂ ಬೆಸೆಂಟ್ ಇನ್ಸ್ಟಿಟ್ಯೂಟ್ ಆಫ್ ಪಿಜಿ ಸ್ಟಡೀಸ್‌ನ ಮಣೇಲ್ ಶ್ರೀನಿವಾಸ್ ನಾಯಕ್ ಜ್ಞಾನ ಸರಣಿಯ ಇತ್ತೀಚಿನ ಉಪನ್ಯಾಸ ಅಕ್ಟೋಬರ್ 25.2019 ರಂದ ನಡೆಯಿತು. ಹಿರಿಯ ಐಪಿಎಸ್ ಅಧಿಕಾರಿ ಡಾ.ಪಿ.ಎಸ್. ಹರ್ಷ, ಪೊಲೀಸ್ ಆಯುಕ್ತರು, ಮಂಗಳೂರು, ಅವರು “ಶಾಂತಿಯುತ ಸಮಾಜವನ್ನು ಅಭಿವೃದ್ಧಿಪಡಿಸುವಲ್ಲಿ, ಪೊಲೀಸರಿಗೆ ಸಹಾಯ ಮಾಡುವಲ್ಲಿ, ವಿದ್ಯಾರ್ಥಿಗಳ ಪಾತ್ರ ಮತ್ತು ಜವಾಬ್ದಾರಿಗಳು” ಎಂಬ ವಿಷಯದ ಕುರಿತು ಮಾತನಾಡಿದರು. ನಗರದ ಬೊಂದೆಲ್‌ನಲ್ಲಿರುವ ಎಂಎಸ್‌ಎನ್‌ಎಂ ಬೆಸೆಂಟ್ ಕ್ಯಾಂಪಸ್‌ನ ’ಸ್ವರ್ಣ ಅಕಾಡೆಮಿ ಹಾಲ್’ನಲ್ಲಿ ಮಧ್ಯಾಹ್ನ 3.00 ಕ್ಕೆ ಆಯೋಜಿಸಲಾದ ಈ […]

ಕೊಳವೆ ಬಾವಿಗೆ ಬಿದ್ದ ಎರಡು ವರ್ಷದ ಬಾಲಕ

Saturday, October 26th, 2019
kolave-baavi

ಚೆನ್ನೈ : 2 ವರ್ಷದ ಬಾಲಕನೊಬ್ಬ ಕೊಳವೆಬಾವಿಗೆ ಬಿದ್ದಿರುವ ಘಟನೆ ತಮಿಳುನಾಡಿನ ತಿರಚ್ಚಿ ಜಿಲ್ಲೆಯ ನಡುಕಟ್ಟುಪಟ್ಟಿಯಲ್ಲಿ ನಡೆದಿದೆ. ಬಾಲಕನನ್ನು ಸುಜಿತ್ ವಿಲ್ಸನ್ ಎಂದು ಗುರುತಿಸಲಾಗಿದೆ. ಈತ 25 ಅಡಿ ಆಳಕ್ಕೆ ಬಿದ್ದಿದ್ದಾನೆ. ಶುಕ್ರವಾರ ಸಂಜೆ 5.30ರ ಸುಮಾರಿಗೆ ಮನೆ ಮುಂದೆ ಆಟವಾಡುತ್ತಿದ್ದಾಗ 7 ವರ್ಷದ ಹಿಂದೆ ತೆರೆದಿದ್ದ ಬೋರ್‍ವೆಲ್‍ಗೆ ಸುಜಿತ್ ವಿಲ್ಸನ್ ಬಿದ್ದಿದ್ದಾನೆ. ಬಾಲಕ ಕೊಳವೆ ಬಾವಿಗೆ ಬಿದ್ದಿರುವ ವಿಚಾರ ತಿಳಿಯುತ್ತಿದ್ದಂತೆಯೇ ರಕ್ಷಣಾ ತಂಡ, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸುತ್ತಿದೆ. ವೈದ್ಯರ ತಂಡ […]

ಸುರತ್ಕಲ್ : ಟೋಲ್ ಗುತ್ತಿಗೆ ನವೀಕರಿಸದಿರಲು ಹೋರಾಟ ಸಮಿತಿ ಆಗ್ರಹ

Saturday, October 26th, 2019
jayakumar

ಸುರತ್ಕಲ್ : ತಾತ್ಕಾಲಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಿರುವ ಸುರತ್ಕಲ್(ಮುಕ್ಕ) ಅಕ್ರಮ ಟೋಲ್ ಕೇಂದ್ರದಲ್ಲಿ ಟೋಲ್ ಸಂಗ್ರಹದ ಗುತ್ತಿಗೆ ನವೆಂಬರ್ ಹದಿನೈದಕ್ಕೆ ಮುಕ್ತಾಯಗೊಳ್ಳುತ್ತದೆ. ಯಾವುದೇ ಕಾರಣಕ್ಕೂ ಟೋಲ್ ಗುತ್ತಿಗೆಯನ್ನು ನವೀಕರಿಸದೆ, ಹೆದ್ದಾರಿ ಪ್ರಾಧಿಕಾರ ತೆಗೆದು ಕೊಂಡ ತೀರ್ಮಾನದಂತೆ ಟೋಲ್ ಕೇಂದ್ರವನ್ನು ಅಲ್ಲಿಂದ ತೆರವುಗೊಳಿಸಬೇಕು, ಹಾಗೂ ಹೆದ್ದಾರಿ ಗುಂಡಿಗಳಿಂದ ಅಪಾಯಕಾರಿ ಸ್ಥಿತಿಗೆ ತಲುಪಿರುವ ಸುರತ್ಕಲ್, ನಂತೂರು ಹೆದ್ದಾರಿಯನ್ನು ತಕ್ಷಣ ದುರಸ್ತಿಗೊಳಿಸಬೇಕು, ದುರ್ಬಲಗೊಂಡು ಸಂಚಾರಕ್ಕೆ ಅಯೋಗ್ಯಗೊಂಡಿರುವ ಕೂಳೂರು ಸೇತುವೆಗೆ ಪರ್ಯಾಯವಾಗಿ ಹೊಸ ಸೇತುವೆಯನ್ನು ನಿರ್ಮಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ […]

ಮಳೆ ಹಾನಿ ಸಂತ್ರಸ್ತರ ಕಡೆಗಣನೆ : ಮಹಿಳಾ ಜೆಡಿಎಸ್ ಪ್ರತಿಭಟನೆ

Saturday, October 26th, 2019
kodagu

ಮಡಿಕೇರಿ : ಕೇಂದ್ರ ಹಾಗೂ ರಾಜ್ಯ ಸರಕಾರ ಕೊಡಗಿನ ನೆರೆ ಸಂತ್ರಸ್ತರನ್ನು ಕಡೆಗಣಿಸುತ್ತಿದೆ ಎಂದು ಆರೋಪಿಸಿ ಕೊಡಗು ಜಿಲ್ಲಾ ಜಾತ್ಯಾತೀತ ಜನತಾದಳದ ಮಹಿಳಾ ಘಟಕ ನಗರದಲ್ಲಿ ಪ್ರತಿಭಟನೆ ನಡೆಸಿತು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದ ಜೆಡಿಎಸ್ ಮಹಿಳಾ ಘಟಕದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಂದರ್ಭ ಮಾತನಾಡಿದ ಮಹಿಳಾ ಘಟಕದ ಜಿಲ್ಲಾಧ್ಯಕ್ಷರಾದ ಶಾಂತಿ ಅಪ್ಪಚ್ಚು, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿ ವಿಕೋಪದಿಂದ ಜನ ತತ್ತರಿಸಿ ಹೋಗಿದ್ದಾರೆ. ಸಂತ್ರಸ್ತರು […]

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಭೇಟಿ ನೀಡಿದ ಜೆ.ಸಿ.ಮಾಧುಸ್ವಾಮಿ

Saturday, October 26th, 2019
madhu-swamy

ಬೆಳ್ತಂಗಡಿ : ಬೆಳ್ತಂಗಡಿ ತಾಲೂಕಿನ ನೆರೆ ಹಾವಳಿಯಿಂದ ಹಾನಿಗೀಡಾದ ಪ್ರದೇಶಕ್ಕೆ ಶನಿವಾರ ಭೇಟಿ ನೀಡುವ ಮುನ್ನ ರಾಜ್ಯ ಸರಕಾರದ ಕಾನೂನು, ಸಂಸದೀಯ ವ್ಯವಹಾರ ಮತ್ತು ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವರಾದ ಜೆ.ಸಿ.ಮಾಧುಸ್ವಾಮಿ ಅವರು ಇಂದು ಬೆಳಿಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ದರ್ಶನ ಪಡೆದರು. ಈ ವೇಳೆ ಶಾಸಕ ಹರೀಶ್ ಪೂಂಜ ಮತ್ತಿರರು ಇದ್ದರು. ಬಳಿಕ ನೆರೆ ಹಾವಳಿಯಿಂದ ಹಾನಿಗೀಡಾದ ಕುಕ್ಕಾವು ಸೇತುವೆ ಪ್ರದೇಶಕ್ಕೆ ಅಧಿಕಾರಿಗಳ ತಂಡದೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು.  

ಹವಾಮಾನ ಇಲಾಖೆ : ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ

Saturday, October 26th, 2019
meenugarike

ಮಂಗಳೂರು : ಅರಬಿ ಸಮುದ್ರ ಮತ್ತು ಲಕ್ಷದ್ವೀಪದಲ್ಲಿ ವಾಯುಭಾರ ಕುಸಿತ ಚಂಡಮಾರುತವಾಗಿ ಪರಿವರ್ತನೆಯಾದ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಮೀನುಗಾರರನ್ನು ಸಮುದ್ರಕ್ಕಿಳಿಯದಂತೆ ಎಚ್ಚರಿಸಿದೆ. ಹವಾಮಾನ ವೈಪರೀತ್ಯದಿಂದಾಗಿ ಮೀನುಗಾರಿಕಾ ಕ್ಷೇತ್ರ ತತ್ತರಿಸಿದೆ. ಮೀನುಗಾರಿಕೆಯ ರಜೆಯ ಅವಧಿ ಮುಗಿದು ಋತು ಆರಂಭವಾದಗಿನಿಂದಲೂ ಚಂಡಮಾರುತ, ಮೀನಿನ ಅಲಭ್ಯತೆ ಯಿಂದಾಗಿ ಕರಾವಳಿಯ ಮೀನುಗಾರಿಕೆಗೆ ತೊಂದರೆಯಾಗುತ್ತಿದ್ದು, ಪರ್ಸಿನ್‌, ಯಾಂತ್ರೀಕೃತ ಬೋಟುಗಳು ನಷ್ಟವನ್ನು ಅನುಭವಿಸುತ್ತಿದೆ. ಇದೀಗ ಚಂಡಮಾರುತದಿ ಂದಾಗಿ ರೆಡ್‌ ಅಲರ್ಟ್‌ ಘೋಷಿಸಿರುವುದು ಮೀನುಗಾರಿಕೆಗೆ ಮತ್ತಷ್ಟು ಹೊಡೆತ ನೀಡಿದೆ. ಇದೀಗ ಮತ್ತೆ ಚಂಡಮಾರುತ ಹಿನ್ನೆಲೆಯಲ್ಲಿ ಮೀನುಗಾರಿಕೆಗೆ ತೆರಳದಂತೆ […]

ಅತ್ತಾವರದ ಪ್ಲ್ಯಾಟ್ ನಲ್ಲಿ ನರ್ಸಿಂಗ್ ವಿದಾರ್ಥಿನಿ ಆತ್ಮಹತ್ಯೆ

Saturday, October 26th, 2019
Anupama

ಮಂಗಳೂರು : ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನ ಶ್ರೀ ದೇವಿ ಅಪಾರ್ಟ್‌ಮೆಂಟಿನ ಎರಡನೇ ಮಹಡಿಯ ರೂಂ ಒಂದರಲ್ಲಿ ವಿದಾರ್ಥಿನಿಯ ಮೃತದೇಹ ಪತ್ತೆಯಾಗಿದೆ. ಶುಕ್ರವಾರ ರಾತ್ರಿ ಸುಮಾರು 11ರ ವೇಳೆಗೆ ವಿದ್ಯಾರ್ಥಿನಿ ವಾಸವಿರುವ ರೂಂ ಬಾಗಿಲನ್ನು ತೆರೆದುನೋಡಿದಾಗ ವಿದ್ಯಾರ್ಥಿನಿ ಮೃತದೇಹ ಪ್ಯಾನಿಗೆ ನೇಣುಹಾಕಿದ ಸ್ಥಿತಿಯಲ್ಲಿಕಂಡುಬಂದಿತ್ತು. ಮೃತಪಟ್ಟ ಯುವತಿಯನ್ನು ಕೇರಳ ಮೂಲದ ಅನುಪಮಾ 23ವ. ಎಂದು ಗುರುತಿಸಲಾಗಿದೆ. ಯುವತಿಯ ತಾಯಿ ವಿದೇಶದಲ್ಲಿದ್ದು ಅನುಪಮಾ ಫಾದರ್ ಮುಲ್ಲರ‍್ಸ್ ನಲ್ಲಿ ನರ್ಸಿಂಗ್ ಕಲಿಯುತ್ತಿದ್ದಳು. ಅತ್ತಾವರ ಮಂಜುಶೆಟ್ಟಿ ಕಾಂಪೌಂಡಿನ ಶ್ರೀ ದೇವಿ ಅಪಾರ್ಟ್‌ಮೆಂಟಿನಲ್ಲಿ ಕಳೆದ ಒಂದು […]

ಕೊಡಗು ಜಿ.ಪಂ.ನೂತನ ಭವನ ಉದ್ಘಾಟನೆ

Friday, October 25th, 2019
kodagu jilla panchayath

ಮಡಿಕೇರಿ : ನಗರದ ಹೊರ ವಲಯದಲ್ಲಿ 25ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಿರುವ ಜಿಲ್ಲಾ ಪಂಚಾಯಿತಿ ನೂತನ ಭವನವನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಸೋಮಣ್ಣ ಅವರು ರಾಜ್ಯ ಹಾಗೂ ಜಿಲ್ಲೆಯಲ್ಲಿ ನೆರೆಯಿಂದಾಗಿ ಕೃಷಿ ಸೇರಿದಂತೆ ಇತರೆ ಬೆಳೆ ನಷ್ಟವಾಗಿದ್ದು, ಬೆಳೆ ಪರಿಹಾರವನ್ನು ಎಂಟು ಹತ್ತು ದಿನದಲ್ಲಿ ಸರ್ಕಾರ ಬಿಡುಗಡೆ ಮಾಡಲಿದೆ ಎಂದು ಅವರು ತಿಳಿಸಿದರು. ಕಳೆದ ಬಾರಿ […]

ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಕೆ : ಮಡಿಕೇರಿಯಲ್ಲಿ ಸಚಿವ ಈಶ್ವರಪ್ಪ ಟೀಕೆ

Friday, October 25th, 2019
eswarappa

ಮಡಿಕೇರಿ  : ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರುಗಳು ಖುರ್ಚಿ ಕಳೆದುಕೊಂಡು ನಿದ್ದೆಯಲ್ಲೂ ಖುರ್ಚಿಗಾಗಿ ಚಡಪಡಿಸುತ್ತಿದ್ದಾರೆ. ಹೀಗಾಗಿ ರಾಜ್ಯ ಬಿಜೆಪಿ ಸರಕಾರದ ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರದ ಆಡಳಿತದಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆ ಕುರಿತು ಅವರು ಸ್ಪಷ್ಟಪಡಿಸಿದರು. ಮಡಿಕೇರಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಈಶ್ವರಪ್ಪ, ಬಿಜೆಪಿಯ ಎಲ್ಲಾ ಸಚಿವರು ತಮ್ಮ ಹುದ್ದೆಯನ್ನು ಸ್ವತಂತ್ರವಾಗಿ […]