ಕಾಸರಗೋಡು : ಭಾರೀ ಮಳೆಗೆ ಶಾಲಾ ಕಲೋತ್ಸವ ಚಪ್ಪರ ಕುಸಿತ

Friday, October 25th, 2019
kadalotsava

ಕಾಸರಗೋಡು : ಕಾಸರಗೋಡು ಉಪಜಿಲ್ಲಾ ಶಾಲಾ ಕಲೋತ್ಸವ ನಡೆಯುತ್ತಿರುವ ಬೇಡಗ ಗ್ರಾಮ ಪಂಚಾಯತ್‌ನ ಕೊಳತ್ತೂರು ಶಾಲೆಯಲ್ಲಿ ಹಾಕಲಾಗಿದ್ದ ಚಪ್ಪರ ಮಳೆ ಗಾಳಿಗೆ ಕುಸಿದು ಬಿದ್ದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಕಲೋತ್ಸವ ವೀಕ್ಷಿಸುತಿದ್ದ ಸುಮಾರು 2,000 ಮಂದಿ ವಿದ್ಯಾರ್ಥಿಗಳು ಚಪ್ಪರದೊಳಗಿದ್ದರು. ಚಪ್ಪರ ಕುಸಿಯುತ್ತಿರುವುದನ್ನು ಕಂಡ ವಿದ್ಯಾರ್ಥಿಗಳು ಚಪ್ಪರದಿಂದ ಹೊರಗೆ ಓಡಿದ್ದರಿಂದ ಯಾವುದೇ ಅಪಾಯ ಉಂಟಾಗಿಲ್ಲ. ಅಧ್ಯಾಪಕರೋರ್ವರಿಗೆ ಸಣ್ಣಪುಟ್ಟ ಗಾಯವಾಗಿದೆ. ಚಪ್ಪರ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಅ.25 ಮತ್ತು 26ರಂದು ನಡೆಯಲಿದ್ದ ಎಲ್ಲ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ.  

ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಕಾರು : ಒಂದೇ ಕುಟುಂಬದ ಮೂವರ ಸಾವು

Friday, October 25th, 2019
mudugere

ಮೂಡಿಗೆರೆ : ಸೇತುವೆ ಮೇಲೆ ಚಲಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದ ಪರಿಣಾಮ ಬೆಂಗಳೂರಿನ ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೆಬ್ಬಾಳದ ಯಶೋಧ (81) ಪ್ರಕಾಶ್(61) ಹಾಗೂ ಅನಿರುದ್ಧ್ (24)ಮೃತಪಟ್ಟವರು. ಇಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡವರನ್ನು ಚಿಕಿತ್ಸೆಗೆ ದಾಖಲಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿಯ ನೀರುಗಂಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಯಶೋಧ ಕುಟುಂಬದವರು ಚಿಕ್ಕಮಗಳೂರು ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದರು. ಕೊಟ್ಟಿಗೆಹಾರ ರಸ್ತೆಯಲ್ಲಿ ಕಾರು ಸಂಚರಿಸುತ್ತಿದ್ದ ವೇಳೆ ನೀರುಗಂಡಿ ಗ್ರಾಮದ ಬಳಿ ಚಾಲಕನ […]

ಭಾರೀ ಮಳೆಗೆ ರಸ್ತೆ ಕುಸಿತದಿಂದ ಹಿಂದಿನ ಶತಮಾನದ ಬಾವಿ ಪ್ರತ್ಯಕ್ಷ

Friday, October 25th, 2019
puratana-bhavi

ಮಂಗಳೂರು : ಮಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಕುಸಿತ ಆಗಿ ಶತಮಾನದ ಹಿಂದಿನ ಬಾವಿ ಪ್ರತ್ಯಕ್ಷವಾದ ಘಟನೆ ನಡೆದಿದೆ. ಮಂಗಳೂರಿನ ಬೋಳಾರದಲ್ಲಿರುವ ಲೀವೆಲ್ ಸರ್ಕಲ್ನಲ್ಲಿ ಈ ಘಟನೆ ನಡೆದಿದೆ. ದಶಕಗಳ ಹಿಂದೆ ಇಲ್ಲಿ ಬಾವಿಯನ್ನು ಮುಚ್ಚಲಾಗಿತ್ತು.ಅದರ ‌ಮೇಲೆ ಇದ್ದ ರಸ್ತೆ ನಿನ್ನೆ ಕುಸಿದು ಈ ಬಾವಿ ಪ್ರತ್ಯಕ್ಷವಾಗಿದೆ. ಈ ಬಾವಿ ಶತಮಾನಗಳ ಹಿಂದಿನದಾಗಿದ್ದು ಲೀ ಎಂಬವರು ಇದನ್ನು ನಿರ್ಮಿಸಿದ್ದರು. ಆ ಕಾರಣಕ್ಕಾಗಿ ಆ ಪ್ರದೇಶಕ್ಕೆ ಲೀವೆಲ್ ಎಂದು ಹೆಸರು ಬಂದಿತ್ತು. ಬಾವಿ ಬಾಯ್ದೆರೆದ ಕಾರಣ ಸಂಚಾರಕ್ಕೆ […]

ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಇವರಿಂದ ಮಂದಾರ ಸಂತ್ರಸ್ತರಿಗೆ 4ಲಕ್ಷ ರೂ. ಚೆಕ್ ವಿತರಣೆ

Friday, October 25th, 2019
pacchanady

ಮಂಗಳೂರು :ಎಕ್ಸ್‌ಪರ್ಟ್‌ ಎಜ್ಯುಕೇಶನಲ್‌ ಆಂಡ್‌ ಚಾರಿಟೇಬಲ್ ಫೌಂಡೇಶನ್‌ ಮಂಗಳೂರು ಇವರಿಂದ ಮಂದಾರದ ಸಂತ್ರಸ್ತರಿಗೆ ಒಟ್ಟು ಮೊತ್ತ 4,00,000 ರೂಪಾಯಿ ಚೆಕ್ ವಿತರಿಸಿದರು. ಆಗಸ್ಟ್ ತಿಂಗಳಿನಲ್ಲಿ ಸುರಿದ ಬಾರೀ ಮಳೆಗೆ ಪಚ್ಚನಾಡಿ ಡಂಪಿಂಗ್‌ ಯಾರ್ಡ್‌ನಿಂದ ತ್ಯಾಜ್ಯರಾಶಿಯು ಕುಡುಪು ಸಮೀಪದ ಮಂದಾರ ಪ್ರದೇಶಕ್ಕೆಪ್ರವಾಹ  ರೀತಿಯಲ್ಲಿ ಹರಿದಿತ್ತು. ಆಗ ಮಂದಾರ ಪ್ರದೇಶ ವ್ಯಾಪಿಯಲ್ಲಿ ಹರಡಿದ ವಸ್ತು ಸ್ಥಿತಿಯನ್ನು ಗಮನಿಸಿ ತಕ್ಷಣವೇನಾವು ಸಾಮಾಜಿಕವಾದ ಬದ್ಧತೆಯಿಂದ ಸಂಸ್ಥೆಯ ಉಪನ್ಯಾಸಕರನ್ನು ಸ್ಥಳಕ್ಕೆಕಳುಹಿಸಿ ಗ್ರಾಮಸ್ಥರನ್ನು ಭೇಟಿ ಮಾಡಿ ಆತ್ಮಸ್ಥೈರ್ಯವನ್ನು ತುಂಬಿದ್ದೆವು.ಅಷ್ಟೇ ಅಲ್ಲದೇ ಮುಂದಿನ ದಿನಗಳಲ್ಲಿ ನಮ್ಮ ಕೈಲಾಗುವ […]

ಉಡುಪಿ : ಭಾರೀ ಮಳೆ, ಗಾಳಿಯಿಂದಾಗಿ ಇಬ್ಬರು ಸಾವು

Friday, October 25th, 2019
udupi

ಉಡುಪಿ : ಉಡುಪಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಭಾರೀ ಮಳೆ ಸುರಿಯುತಿದ್ದು, ಮಳೆ-ಗಾಳಿಯಿಂದಾಗಿ ಗುರುವಾರ ಸಂಜೆಯ ಬಳಿಕ ಎರಡು ಜೀವಗಳು ಬಲಿಯಾಗಿವೆ. ಮೊದಲ ಘಟನೆಯಲ್ಲಿ ಕಾಪು ತಾಲೂಕಿನ ಕುರ್ಕಾಲು ಗ್ರಾಪಂ ವ್ಯಾಪ್ತಿಯ ಕುಂಜಾರುಗಿರಿಯ ಚಂದ್ರಶೇಖರ ಎಂಬವರ ಪತ್ನಿ ಸುಲೋಚನಾ (42) ನಿನ್ನೆ ಸಂಜೆ ವೇಳೆ ಶಂಖತೀರ್ಥ ಎಂಬಲ್ಲಿ ತುಂಬಿದ ತೋಡೊಂದನ್ನು ದಾಟುವಾಗ ಅಕಸ್ಮಿಕವಾಗಿ ಕಾಲುಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಅಪರಾಹ್ನ 3:30ರ ಸುಮಾರಿಗೆ ಹುಲ್ಲು ತರಲೆಂದು ಗದ್ದೆಗೆ ತೆರಳಿದ್ದ ಅವರು 5:30 ಆದರೂ ಮನೆಗೆ […]

ತೊಕ್ಕೊಟ್ಟು : ವಿದ್ಯುತ್ ಆಘಾತಕ್ಕೆ ಯುವಕ ಮೃತ್ಯು

Friday, October 25th, 2019
Wilson-Fernandes

ಮಂಗಳೂರು : ವಿದ್ಯುತ್ ಆಘಾತಕ್ಕೆ ಯುವಕನೋರ್ವ ಮೃತಪಟ್ಟ ಘಟನೆ ತೊಕ್ಕೊಟ್ಟವಿನ ಕಲ್ಲಾಪು ಬಳಿ ಅ. 25 ರ ಶುಕ್ರವಾರ ಬೆಳಗ್ಗೆ ನಡೆದಿದೆ. ಮೃತ ಯುವಕನನ್ನು ಅಬ್ರಹಾಂ ಅವರ ಪುತ್ರ ವಿಲ್ಸನ್ ಫೆರ್ನಾಂಡಿಸ್ (26) ಎಂದು ಗುರುತಿಸಲಾಗಿದೆ. ಸಹೋದರ ನೆಲ್ಸನ್ ಫೆರ್ನಾಂಡಿಸ್ ನೊಂದಿಗೆ ವಿಲ್ಸನ್ ಅವರು ಕಲ್ಲಾಪು ಬಳಿ ನೆಲ್ಸನ್ ಆಟೋ ಎಲೆಕ್ಟ್ರಿಕಲ್ ವರ್ಕ್ಸ್ ಎನ್ನುವ ಅಂಗಡಿ ನಡೆಸುತ್ತಿದ್ದು, ಇಂದು ಕೆಲಸಗಾರನೊಂದಿಗೆ ಮಹಡಿ ಏರಿ ಅಂಗಡಿಯ ಬೋರ್ಡ್ ದುರಸ್ತಿಗೆ ಮುಂದಾದಾಗ ಇಬ್ಬರಿಗೂ ಶಾಕ್ ತಗುಲಿದೆ. ತಕ್ಷಣ ಇಬ್ಬರನ್ನು ಸ್ಥಳೀಯ […]

ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಗೆ ಬಹುಮತ, ಸಿಎಂ ಹುದ್ದೆಗೆ ಸೇನೆ ಪಟ್ಟು

Friday, October 25th, 2019
shivasene

ಮುಂಬೈ : ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿ ಬಹುಮತ ಪಡೆದುಕೊಂಡು ರಾಜ್ಯದಲ್ಲಿ ಅಧಿಕಾರ ಉಳಿಸಿಕೊಂಡಿದ್ದರೂ ನಿರೀಕ್ಷಿಸಿದಷ್ಟು ಪ್ರಚಂಡ ಬಹುಮತ ಸಿಕ್ಕಿಲ್ಲ. ಸರಳ ಬಹುಮತಕ್ಕಿಂತ ತುಸು ಹೆಚ್ಚಿನ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಕಾಂಗ್ರೆಸ್ ಮತ್ತು ಎನ್ಸಿಪಿ ಮೈತ್ರಿ ಸೋಲು ಕಂಡಿದ್ದರೂ, ಎರಡೂ ಪಕ್ಷಗಳು ಕಳೆದ ಚುನಾವಣೆಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಇದು ಆಡಳಿತಾರೂಢ ಬಿಜೆಪಿ, ಶಿವಸೇನೆಗೆ ಎಚ್ಚರಿಕೆ ಗಂಟೆಯಾಗಿದೆ. ಪತ್ರಿಕೆ ಮುದ್ರಣಕ್ಕೆ ಹೋಗುವ ವೇಳೆ, ಬಿಜೆಪಿ 100 ಕ್ಷೇತ್ರಗಳಲ್ಲಿ ಜಯಶಾಲಿಯಾಗಿದ್ದು, 5ರಲ್ಲಿ ಮುನ್ನಡೆಯಲ್ಲಿದೆ. ಶಿವಸೇನೆ 56 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. […]

ಹೊಸ ಯೋಜನೆ, ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಬಜೆಟಿನಲ್ಲಿ ಹಣ ಸಾಕಾಗಲ್ಲ : ಅಶ್ವತ್ಥ್ ನಾರಾಯಣ

Friday, October 25th, 2019
ashwath-narayan

ಮಂಗಳೂರು : 40 ಸಾವಿರ ಕೋಟಿ ಸಾಲ ಮನ್ನಾಕ್ಕಾಗಿ ಹಣ ತೊಡಗಿಸಬೇಕಿದೆ. ಹಿಂದಿನ ಸರಕಾರ ಕೇವಲ 15 ಸಾವಿರ ಕೋಟಿಯಷ್ಟೇ ಕೊಟ್ಟಿದೆ ಈ ಬಾರಿ ನೆರೆಯೂ ಬಂದಿರುವುದರಿಂದ ಹಣ ಹೊಂದಿಸಬೇಕಾಗಿದೆ. ಹೀಗಾಗಿ ಹೊಸ ಯೋಜನೆ, ಅಭಿವೃದ್ದಿ ಕಾಮಗಾರಿ ಕೈಗೊಳ್ಳಲು ಈ ಬಜೆಟಿನಲ್ಲಿ ಹಣ ಸಾಕಾಗಲ್ಲ ಎಂದು ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಎಂದು ಹೇಳಿದರು. ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಅವರು ಮಂಗಳೂರಿನಲ್ಲಿ ಶುಕ್ರವಾರದಂದು ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರಿಸುತ್ತಾ ಸರಕಾರದ ಬಳಿ ದುಡ್ಡಿಲ್ಲ ಎಂಬ ಸಚಿವ ಸಿಸಿ […]

ಕರಾವಳಿ ಕಾವಲು ಪೊಲೀಸ್ ಬಲವರ್ಧನೆಗೆ ಸರ್ಕಾರದ ಕ್ರಮ : ಬಸವರಾಜ ಬೊಮ್ಮಾಯಿ ಹೇಳಿಕೆ

Friday, October 25th, 2019
basavaraj

ಬಂಟ್ವಾಳ : ಕರಾವಳಿ ಕಾವಲು ಪೊಲೀಸ್ ಪಡೆ ಬಲವರ್ಧನೆಗೊಳಿಸಿ, ತೀರ ಪ್ರದೇಶ ಸುರಕ್ಷತೆಗೆ ಗರಿಷ್ಠ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇದಕ್ಕಾಗಿ ಭದ್ರತಾ ಪಡೆಗೆ ಅಗತ್ಯ ಹೆಚ್ಚುವರಿ ಸೌಲಭ್ಯಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ ಚುನಾವಣೆ ಘೋಷಣೆಯಾಗಿರುವುದರಿಂದ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಗೃಹಸಚಿವರು ಗುರುವಾರ ಬೆಳಗ್ಗೆ ಪಶ್ಚಿಮ ವಲಯ ಪೊಲೀಸ್ ಅಧಿಕಾರಿಗಳ ಸಭೆಯನ್ನು ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ನಡೆಸಿದರು. ಪಶ್ಚಿಮ ವಲಯದ ಐಜಿಪಿ ಅರುಣ್ ಚಕ್ರವರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ […]

ಬಂಟ ಕಲಾವೀಳ್ಯ ಸ್ಪರ್ಧೆ : ಬಂಟರ ಭಾವೈಕ್ಯದ ಸಂಗಮವಾಗಿ ಮೂಡಿ ಬರಲಿ; ಅಜಿತ್ ಕುಮಾರ್ ರೈ

Friday, October 25th, 2019
bunts

ಮಂಗಳೂರು : ಗುರುಪುರ ಬಂಟರ ಮಾತೃ ಸಂಘದ ಆಶ್ರಯದಲ್ಲಿ ಡಿ. 29ರಂದು ನಡೆಯುವ ಬಂಟ ಕಲಾವೀಳ್ಯ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಮಾಜಕ್ಕೆ ಉತ್ತಮ ಸಂದೇಶ ದೊರೆಯಲಿದೆ. ಸ್ಪರ್ಧೆಯಲ್ಲಿ ವಿವಿಧತೆ ಇದ್ದಾಗ ಮನರಂಜನೆ ಇರುತ್ತದೆ. ಹೀಗಾಗಿ ಸ್ಫರ್ಧೆಯು ಬಂಟರ ಭಾವೈಕ್ಯದ ಸಂಗಮವಾಗಿ ಮೂಡಿ ಬರಲಿ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್‌ಕುಮಾರ್ ರೈ ಮಾಲಾಡಿ ತಿಳಿಸಿದರು. ಬಂಟ್ಸ್ ಹಾಸ್ಟೆಲ್‌ನಲ್ಲಿರುವ ಅಮೃತೋತ್ಸವ ಕಟ್ಟಡದಲ್ಲಿ ರಾಷ್ಟ್ರೀಯ ಬಂಟ ಕಲಾವಿದರ ಸ್ಪರ್ಧಾ ಸಮ್ಮಿಲನ ಬಂಟ ಕಲಾವೀಳ್ಯ 2019 ಸಾಂಸ್ಕೃತಿಕ ಕಾರ್ಯಕ್ರಮದ […]