ಮಂಗಳೂರು : ಬೋರ್‌ವೆಲ್ ಕೊಳವೆಗೆ ಬಿದ್ದ ಮಕ್ಕಳನ್ನು ರಕ್ಷಿಸಲು ಬಂದಿದೆ ರೋಬೋಟ್

Friday, June 7th, 2019
Robot

ಮಂಗಳೂರು : ಬೇಸಿಗೆಯಲ್ಲಿ ನೀರಿನ ಕೊರತೆ ನಿರ್ಮಾಣವಾಗುತ್ತಿದ್ದಂತೆ ಬೋರ್‌ವೆಲ್ ಕೊರೆಸುವುದು ಸರ್ವೇಸಾಮಾನ್ಯ. ಇಂದು ಬೇಕಾಬಿಟ್ಟಿ ಕೊಳವೆಬಾವಿ ಕೊರೆಸುವುದಕ್ಕೆ ತಡೆ ಒಡ್ಡುವ ಕಾನೂನುಗಳಿದ್ದರೂ ಅಧಿಕಾರಿಗಳ ಕಣ್ಣುತಪ್ಪಿಸಿ ಅಲ್ಲಲ್ಲಿ ಕೊಳವೆಬಾವಿ ತೋಡಿಸುತ್ತಾರೆ. ಕೆಲವಾರು ಬಾರಿ ದುರದೃಷ್ಟವಶಾತ್ ಕೊರೆಸಿದ ಬೋರ್‌ವೆಲ್‌ನಲ್ಲಿ ನೀರು ದೊರೆಯುವುದಿಲ್ಲ. ಈ ಸಮಯದಲ್ಲಿ ಆ ಬೋರ್‌ವೆಲ್ ಮುಚ್ಚುವ ಯಾವುದೇ ಕೆಲಸಕ್ಕೆ ಮಾಲೀಕರು ತೊಡಗುವುದಿಲ್ಲ. ಇಂತಹ ಕೊಳವೆಬಾವಿಗಳಿಗೆ ಸಣ್ಣಮಕ್ಕಳು ಬಲಿಯಾಗುವುದನ್ನು ನಾವು ಮಾಧ್ಯಮಗಳಲ್ಲಿ ಕೇಳಿದ್ದೇವೆ. ಇಂತಹ ಸಂದರ್ಭದಲ್ಲಿ ಈ ಮಕ್ಕಳನ್ನು ರಕ್ಷಿಸುವ ಸರಿಯಾದ ಸಾಧನಗಳು ಇರದೆ ಪರದಾಡುವಂತಾಗುತ್ತದೆ. ಈ ಸಮಸ್ಯೆಯನ್ನು ಮನಗಂಡ […]

ನೂತನ ಕುಲಪತಿಗೆ ಪುಸ್ತಕ ನೀಡಿ ಶುಭಕೋರಿದ ಎಬಿವಿಪಿ

Friday, June 7th, 2019
ABVP

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯದ ನೂತನ ಕುಲಪತಿಗಳಾಗಿ ನೇಮಕಗೊಂಡ ಪ್ರೊ|| ಪಿ.ಎಸ್ ಯಡಪಡಿತ್ತಾಯ ಅವರಿಗೆ ಮಂಗಳೂರು ಎಬಿವಿಪಿ ನಗರ ಘಟಕದ ವತಿಯಿಂದ ಪುಸ್ತಕ ನೀಡಿ ಶುಭಕೋರಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ವ್ಯಾಪ್ತಿಯಲ್ಲಿ ಒಳ್ಳೆಯ ಶೈಕ್ಷಣಿಕ ವಾತಾವರಣ ನಿರ್ಮಾಣಮಾಡಲು ಸಹಕರಿಸಲಾಗುವುದು ಎಂದು ತಿಳಿಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ಎಬಿವಿಪಿ ಜಿಲ್ಲಾ ಸಂಚಾಲಕರಾದ ಆಶಿಶ್ ಅಜ್ಜಿಬೆಟ್ಟು, ರಾಜ್ಯ ವೃತ್ತಿಶಿಕ್ಷಣ ಸಹಸಂಚಾಲಕರಾದ ಸಂದೇಶ್ ರೈ ಮಜಕ್ಕಾರ್, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹರ್ಷಿತ್, ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಕಾರ್ಯದರ್ಶಿಯಾದ ಅಭಿಲಾಷ್ ಮತ್ತಿತರರು […]

ಶ್ರೀಕೃಷ್ಣ ಮಠದ ಸುವರ್ಣ ಗೋಪುರಕ್ಕೆ 1008 ಕಲಶಗಳ ಅಭಿಷೇಕ

Friday, June 7th, 2019
Udupi-math gopur

ಉಡುಪಿ: ಶ್ರೀಕೃಷ್ಣ ಮಠದ ಸುವರ್ಣ ಗೋಪುರದ ಸಮರ್ಪಣೋತ್ಸವದ ಅಂಗವಾಗಿ ಗುರುವಾರ ಮೂರು ಸ್ವರ್ಣ ಶಿಖರಗಳ ಪ್ರತಿಷ್ಠೆ, 1008 ಕಲಶಗಳ ಅಭಿಷೇಕ ನಡೆಯಿತು. ಸ್ವರ್ಣ ಗೋಪುರಕ್ಕೆ ಅಟ್ಟಳಿಗೆ ಕಟ್ಟಿ ಅಲ್ಲಿ ನಿಂತು ವಿವಿಧ ಮಠಾಧೀಶರು ಮೂರೂ ಶಿಖರಗಳಿಗೆ ಅಭಿಷೇಕ ಮಾಡಿದರು. ಪರ್ಯಾಯ ಶ್ರೀ ಪಲಿಮಾರು ಮಠದ ಹಿರಿಯ, ಕಿರಿಯ, ಶ್ರೀ ಪೇಜಾವರ ಮಠದ ಹಿರಿಯ, ಕಿರಿಯ, ಶ್ರೀ ಅದಮಾರು ಮಠದ ಹಿರಿಯ, ಕಿರಿಯ, ಶ್ರೀ ಕೃಷ್ಣಾಪುರ, ಶ್ರೀ ಕಾಣಿಯೂರು, ಶ್ರೀ ಸೋದೆ ಮಠಾಧೀಶರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಗೋಶಾಲೆ ಎದುರು […]

ನಟಿ ಸುಮನ್‌ ರಂಗನಾಥ್‌ಗೆ ಕೊಡಗು ಮೂಲದ ಉದ್ಯಮಿ ಜೊತೆ ಮದುವೆ

Friday, June 7th, 2019
suman

ಮಡಿಕೇರಿ  : ಬಹುಭಾಷಾ ನಟಿ ಸುಮನ್‌ ರಂಗನಾಥನ್ ಅವರು ಹೊಸ ಬಾಳಿಗೆ ಕಾಲಿರಿಸಿದ್ದು, ಕೊಡಗು ಮೂಲದ ಉದ್ಯಮಿ ಸಜನ್‌ ಅವರನ್ನು ಸೋಮವಾರ ಸದ್ದಿಲ್ಲದೆ ಸರಳವಾಗಿ ವಿವಾಹವಾಗಿದ್ದಾರೆ. ಕೇವಲ ಕುಟುಂಬ ಸದಸ್ಯರು ಮತ್ತು ತೀರಾ ಆಪ್ತರಿಗೆ ಮಾತ್ರ ಮದುವೆಗೆ ಕರೆಯಲಾಗಿತ್ತು. ರಿಜಿಸ್ಟರ್‌ ಮದುವೆಯಾಗುವ ಮೂಲಕ ನಾವಿಬ್ಬರು ಸರಳ ಜೀವನ ಶೈಲಿ ಇಷ್ಟಪಡುವವರು ಎಂದು ಸುಮನ್‌ ಹೇಳಿದ್ದಾರೆ. ಅಂದಹಾಗೆ 8 ತಿಂಗಳ ಹಿಂದಷ್ಟೆ ಸುಮನ್‌ಗೆ ಸಜನ್‌ ಪರಿಚಯವಾಗಿದ್ದು, ಪ್ರೀತಿ ಮುಂದುವರಿದು ಕುಟುಂಬದವರ ಅನುಮತಿಯ ಮೇರೆಗೆ ಇಬ್ಬರು ಜಂಟಿಯಾಗಲು ನಿರ್ಧರಿಸಿದ್ದಾರೆ. 44 […]

ಮಲ್ಪೆ: ಫರಂಗಿ ಪೇಟೆಯ ಯುವಕನ ಮೇಲೆ ಮುಸುಕುಧಾರಿಗಳಿಂದ ಹಲ್ಲೆ

Friday, June 7th, 2019
Riyaz

ಮಲ್ಪೆ: ಮೀನು ವ್ಯಾಪಾರದ ಉದ್ದೇಶದಿಂದ ಉಡುಪಿಯ ಮಲ್ಪೆ ಬಂದರಿಗೆ ಬಂದಿದ್ದ ಫರಂಗಿ ಪೇಟೆಯ ಯುವಕನ ಮೇಲೆ ಅಪರಿಚಿತ ಮುಸುಕುಧಾರಿಗಳು ದಾಳಿ ನಡೆಸಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ. ದಾಳಿಗೊಳಗಾದ ಯುವಕನನ್ನು ಬಂಟ್ವಾಳದ ಫರಂಗಿ ಪೇಟೆ ನಿವಾಸಿ ರಿಯಾಝ್ (32) ವರ್ಷ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ರಿಯಾಜ್ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶುಕ್ರವಾರ ಮುಂಜಾನೆ 4.30ರ ಸುಮಾರಿಗೆ ರಿಯಾಜ್ ಸ್ನೇಹಿತರೊಂದಿಗೆ ತನ್ನ ಮೀನಿನ ವಾಹನದಲ್ಲಿ ಮಲ್ಪೆಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಹಿಂಬಾಲಿಸಿಕೊಂಡು ವಾಹನದಲ್ಲಿ […]

ರಾಜ್ಯ ಸರಕಾರದ ಆದೇಶದಂತೆ ಮುಜರಾಯಿ ದೇವಸ್ಥಾನಗಳಲ್ಲಿ ಮಳೆಗಾಗಿ ವಿಶೇಷ ಪೂಜೆ

Friday, June 7th, 2019
Kadri Temple

ಮಂಗಳೂರು : ರಾಜ್ಯ ಸರಕಾರದ ನಿರ್ದೇಶದಂತೆ ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆಯ ವ್ಯಾಪ್ತಿಗೊಳಪಟ್ಟ ಪ್ರಮುಖ ದೇವಸ್ಥಾನಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಪರ್ಜನ್ಯ ಹೋಮ ಮತ್ತು ವಿಶೇಷ ಪೂಜೆ ಗುರುವಾರ ನಡೆಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಜರಾಯಿ ಇಲಾಖೆ ವ್ಯಾಪ್ತಿಗೊಳಪಟ್ಟ ಒಟ್ಟು 491 ಮತ್ತು ಉಡುಪಿ ಜಿಲ್ಲೆಯಲ್ಲಿ 802 ದೇವಸ್ಥಾನಗಳಿವೆ. ಈ ಪೈಕಿ ಬಹುತೇಕ ದೇವಸ್ಥಾನಗಳಲ್ಲಿ ಪರ್ಜನ್ಯ ಹೋಮ ನಡೆದಿದ್ದು, ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆಯೂ ಜರಗಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಮಂಗಳೂರಿನ ಕದ್ರಿ ಶ್ರೀ ಮಂಜುನಾಥ […]

ಎಂ.ಎಂ.ಕಲಬುರ್ಗಿ ಹತ್ಯೆಗೆ ತರಬೇತಿ ಪಡೆದದ್ದು ಮಂಗಳೂರಿನಲ್ಲಿ

Friday, June 7th, 2019
mm-kalburgi

ಮಂಗಳೂರು  : ಪತ್ರಕರ್ತೆ ಗೌರಿ ಲಂಕೇಶ್ ಮತ್ತು ಸಂಶೋಧಕ ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ಮಂಗಳೂರಿಗೆ ಭೇಟಿ ನೀಡಲಿದ್ದಾರೆ. ಕಲಬುರ್ಗಿ ಅವರನ್ನು ಹತ್ಯೆ ಮಾಡಲು ಮಂಗಳೂರಿನಲ್ಲಿ ತರಬೇತಿ ನೀಡಲಾಗಿತ್ತು ಎಂಬ ಮಹತ್ವದ ಮಾಹಿತಿಯೊಂದು ಈಗ ಸಿಕ್ಕಿದೆ. ಎಂ.ಎಂ.ಕಲಬುರ್ಗಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಅಧಿಕಾರಿಗಳು ಪ್ರವೀಣ್ ಪ್ರಕಾಶ್ ಚತುರ್ (27) ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಎಸ್‌ಐಟಿ ವಶದಲ್ಲಿರುವ ಆರೋಪಿಯಿಂದ ಹಲವು ಮಹತ್ವದ ಮಾಹಿತಿಗಳನ್ನು ಸಂಗ್ರಹಿಸಲಾಗಿದೆ. ಗೌರಿ ಲಂಕೇಶ್ ಹತ್ಯೆಗೆ ಬೆಳಗಾವಿಯಲ್ಲಿ ಮತ್ತು ಎಂ.ಎಂ.ಕಲಬುರ್ಗಿ […]

ಮರದ ಕಾರ್ಖಾನೆ ಕಟ್ಟಡದಿಂದ ಬಿದ್ದು ವ್ಯಕ್ತಿ ಸಾವು

Thursday, June 6th, 2019
Sanjeeva-Kulal

ಮಂಗಳೂರು : ಅಶೋಕನಗರದ ಇಂಡಿಯನ್ ವುಡ್ ಆಂಡ್ ವುಡ್ ಪ್ರಾಡಕ್ಟ್ಸ್ ಕಾರ್ಖಾನೆ ಕಟ್ಟಡದಿಂದ ಬಿದ್ದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಗುರುವಾರ ನಡೆದಿದೆ. ಮಂಗಳೂರಿನ ಹೊರವಲಯದ ಕುಂಪಲ ಚಿತ್ರಾಂಜಲಿ ನಗರ ನಿವಾಸಿ ಸಂಜೀವ ಕುಲಾಲ್(53) ಮೃತಪಟ್ಟ ದುರ್ದೈವಿ. ಕಾರ್ಖಾನೆಯಲ್ಲಿ ಹಲವು ವರ್ಷಗಳಿಂದ ಮೆಕ್ಯಾನಿಕ್ ಆಗಿ ದುಡಿಯುತ್ತಿದ್ದ ಸಂಜೀವ ಕುಲಾಲ್ ಅವರು ಸಾಮಾಜಿಕ ಸೇವೆಗಳಲ್ಲಿ ತೊಡಗಿಸಿಕೊಂಡಿದ್ದರು. ಅಲ್ಲದೆ, ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಭಜನಾ ಸಂಚಾಲಕರಾಗಿದ್ದರು ಎನ್ನಲಾಗಿದೆ. ಘಟನೆಯ ಕುರಿತಂತೆ ಉರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರೆಸಿದ್ದಾರೆ.

‘ಸುಬ್ರಹ್ಮಣ್ಯ ಕ್ಷೇತ್ರದ ತ್ಯಾಜ್ಯ ಕುಮಾರಧಾರ ನದಿಗೆ, ಕ್ರಮ ಕೈಗೊಳ್ಳದಿದ್ದರೆ ಹೋರಾಟ’

Thursday, June 6th, 2019
kss-college

ಮಂಗಳೂರು : ಸುಬ್ರಹ್ಮಣ್ಯ ಕ್ಷೇತ್ರದ ಕೆ.ಎಸ್‌.ಎಸ್ ಕಾಲೇಜಿನ ಬಳಿ ಕ್ಷೇತ್ರದ ತ್ಯಾಜ್ಯ ನೀರು ಸಂಸ್ಕರಣೆಗೆ ಶುದ್ಧೀಕರಣ ಘಟಕ ನಿರ್ಮಾಣವಾಗಿದ್ದರೂ, ಕೊಳಚೆ ನೀರು ಮಾತ್ರ ಕುಮಾರಧಾರ ನದಿಗೆ ಹರಿದು ಕಲುಷಿತಗೊಳ್ಳುತ್ತಿದೆ. ಈ ಬಗ್ಗೆ ಆಡಳಿತ ಮಂಡಳಿಯ ಗಮನ ತರಲಾಗಿದ್ದು, ಇದೀಗ ಜಿಲ್ಲಾಡಳಿತಕ್ಕೂ ಮನವಿ ಸಲ್ಲಿಸಲಾಗುತ್ತಿದೆ. ತಿಂಗಳೊಳಗೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಕ್ಷೇತ್ರದ ಎದುರು ಹೋರಾಟ ನಡೆಸಲಾಗುವುದು ಎಂದು ನೀತಿ ತಂಡ ಹೇಳಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್, ಈ ಬಗ್ಗೆ ಇಂದು ಜಿಲ್ಲಾಧಿಕಾರಿಗೆ […]

ಡಾಲರ್ ಇರುವ ಪೆಟ್ಟಿಗೆ ಆಸೆಯಿಂದ 13,62,800 ರೂ. ಕಳ್ಕೊಂಡ ಸುರತ್ಕಲ್ ನಿವಾಸಿ

Thursday, June 6th, 2019
doller box

ಮಂಗಳೂರು : ಡಾಲರ್ ಕೊಡಿಸುವ ಆಮಿಷವೊಡ್ಡಿ ಸುರತ್ಕಲ್ ನಿವಾಸಿಯೊಬ್ಬರಿಗೆ ಬರೋಬ್ಬರಿ 13,62,800 ರೂ. ವಂಚಿಸಿದ ಬಗ್ಗೆ ದೂರು ದಾಖಲಾಗಿದೆ. ಸುರತ್ಕಲ್ ನಿವಾಸಿಗೆ ಜನವರಿ ತಿಂಗಳ ಮೊದಲನೇ ವಾರದಲ್ಲಿ ಫೇಸ್ ಬುಕ್‌ನಲ್ಲಿ ಜೈನ್ ಪೂಜಾರಿ ಎಂಬ ವ್ಯಕ್ತಿಯಿಂದ ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸಹಜವಾಗಿ ಅದನ್ನು ಅವರು ಅಕ್ಸೆಪ್ಟ್ ಮಾಡಿದ್ದಾರೆ. ಆ ನಂತರ ದಿನಗಳಲ್ಲಿ ಜೈನ್ ಪೂಜಾರಿ ಹಾಗೂ ಇತರ ವ್ಯಕ್ತಿಗಳು ಇವರ ಮೊಬೈಲ್‌ಗೆ ಬೇರೆ ಬೇರೆ ಸಂಖ್ಯೆಯ ಮೊಬೈಲ್ ಕಂಪನಿಗಳಿಂದ ಕರೆ ಮಾಡಿ ವಂಚಿಸುವ ಪ್ರಯತ್ನ ಮಾಡಿದ್ದಾರೆ. ನಿಮ್ಮ […]