ನರೇಂದ್ರ ಮೋದಿಯವರ ಗೆಲುವಿಗೆ ಒಂದು ದಿನ ಹೇರ್ ಕಟ್ಟಿಂಗ್ ಫ್ರೀ

Saturday, May 25th, 2019
cutting free

ಮಂಗಳೂರು :  ನರೇಂದ್ರ ಮೋದಿಯವರ ಗೆಲುವಿನ ಹರ್ಷಾಚರಣೆ ದೇಶದಾದ್ಯಂತ ವಿವಿಧ ರೀತಿಯಲ್ಲಿ ನಡೆಯುತ್ತಿದೆ. ಪುತ್ತೂರಿನ ಮೋದಿ ಅಭಿಮಾನಿಯೊಬ್ಬರು ತಮ್ಮ ಒಂದು ದಿನದ ಕೆಲಸವನ್ನೇ ಮೋದಿ ಗೆಲುವಿಗಾಗಿ ಮುಡಿಪಾಗಿಟ್ಟಿದ್ದಾರೆ. ಪುತ್ತೂರು ಸಮೀಪದ ಸಂಟ್ಯಾರುವಿನಲ್ಲಿ ಹೇರ್ ಸಲೂನ್ ನಡೆಸುತ್ತಿರುವ ಬಾಲಸುಂದರ್, ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಬೃಹತ್ ರಾಲಿ, ಸಿಹಿ ತಿಂಡಿ ಹಂಚಿ, ಪಟಾಕಿ ಸಿಡಿಸಿ ಮೋದಿ ಗೆಲುವನ್ನು ಸಂಭ್ರಮಿಸುವ ಆರ್ಥಿಕ ತಾಕತ್ತು ಬಾಲಸುದರ್ ಅವರಿಗಿಲ್ಲ. ಈ ಕಾರಣಕ್ಕಾಗಿ ಇವರು ತಮ್ಮ ದುಡಿಮೆಯ ಒಂದು ದಿನವನ್ನು ಮೋದಿ ಗೆಲುವಿಗಾಗಿ […]

ಲೆಕ್ಕ ಪರಿಶೋಧಕ ಎಸ್. ಎಸ್. ನಾಯಕ್ ರಿಗೆ ಸಮಾಜ್‌ರತ್ನ’ ಪ್ರಶಸ್ತಿ

Saturday, May 25th, 2019
ss nayak

ಉಡುಪಿ  : ಜ್ಞಾನ ಮಂದಿರ ಅಕಾಡೆಮಿ, ಬೆಂಗಳೂರು ಇದರ ಆಶ್ರಯದಲ್ಲಿಉಡುಪಿಯ ರಾಜಾಂಗಣ ಸಭಾ ಮಂಟಪದಲ್ಲಿ ನಡೆದ 8ನೇ ಅಖಿಲ ಭಾರತಕನ್ನಡ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮ್ಮೇಳನದಲ್ಲಿ ಮಂಗಳೂರಿನ ಖ್ಯಾತ ಲೆಕ್ಕ ಪರಿಶೋಧಕರಾದ ಎಸ್.ಎಸ್. ನಾಯಕ್(ಸಿ.ಎ. )ರವರಿಗೆತಮ್ಮ 30 ವರ್ಷಗಳ ಸುಧೀರ್ಘ ಸೇವೆಗಾಗಿ ಸಮಾಜ್‌ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.  ಶ್ರೀ ಶ್ರೀ ವಿದ್ಯಾಧೀಶತೀರ್ಥ ಶ್ರೀ ಪಾದರು ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಧರ್ಮದರ್ಶಿ ಹರಿಕೃಷ್ಣ ಪುನರೂರು, ಸಮ್ಮೇಳನದ ಅಧ್ಯಕ್ಷರಾದ ಶ್ರೀಮತಿ ಅಮಿತಜೆತಿನ್ ಸಿಂಡಿಕೇಟ್ ಬ್ಯಾಂಕ್ ಮಣಿಪಾಲ ವಲಯಜನರಲ್ […]

ಮುಸ್ಲಿಂ ವ್ಯಾಪಾರಿಯಿಂದ ಮೋದಿ ಗೆಲುವಿಗೆ ಎಂಟು ಕೆ.ಜಿ. ಚಾಕಲೇಟ್‌ ವಿತರಣೆ

Friday, May 24th, 2019
Mohammed

ಕುಂದಾಪುರ : ಮೋದಿ ಅಭಿಮಾನಿ ವಕ್ವಾಡಿಯ ಗುಜರಿ ವ್ಯಾಪಾರಿ ಮುಹಮ್ಮದ್ ಸಾರ್ವಜನಿಕರಿಗೆ ಸುಮಾರು ಎಂಟು ಕೆ.ಜಿ. ಚಾಕಲೇಟ್‌ನ್ನು ವಿತರಣೆ ಮಾಡಿದ್ದಾರೆ. ಸ್ಥಳೀಯರಿಂದ ವಕ್ವಾಡಿಯ ಮೋದಿ ಎಂದೇ ಕರೆಯಲ್ಪಡುವ ಮುಹಮ್ಮದ್, ಕಳೆದ ಬಾರಿ ಮೋದಿ ಗೆಲುವು ಸಾಧಿಸಿದಾಗ ಸುಮಾರು ಐದು ಕೆ.ಜಿ.ಯಷ್ಟು ಚಾಕಲೇಟನ್ನು ವಿತರಿಸಿದ್ದಾರೆ. ಅನಾರೋಗ್ಯ ಪೀಡಿತರಾಗಿರುವ ಮುಹಮ್ಮದ್ ಮೋದಿ ಅಭಿಮಾನ ಮೆರೆದಿದ್ದಾರೆ.

ಮರು ಮೌಲ್ಯಮಾಪನ: ಆಳ್ವಾಸ್‍ನ ಸುಜ್ಞಾನ್ ಆರ್. ಶೆಟ್ಟಿ ರಾಜ್ಯಕ್ಕೆ ಪ್ರಥಮ

Friday, May 24th, 2019
Alvas

ಮೂಡುಬಿದಿರೆ: ಎಸ್‍ಎಸ್‍ಎಲ್‍ಸಿ ಮರು ಮೌಲ್ಯಮಾಪನದಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಅವರು 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನವನ್ನು ಗಳಿಸಿದ್ದಾರೆಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾದಾಗ ಅದರಲ್ಲಿ ಆಳ್ವಾಸ್‍ನ ಸುಜ್ಞಾನ್ ಆರ್.ಶೆಟ್ಟಿ ಕನ್ನಡ ಮತ್ತು ಇಂಗ್ಲೀಷ್ ವಿಷಯಗಳಲ್ಲಿ ತಲಾ ಒಂದೊಂದು ಅಂಕ ಕಡಿಮೆ ಬಂದಿತ್ತು. ಒಟ್ಟು 623 ಅಂಕಗಳನ್ನು ಗಳಿಸಿ 2ನೇ ರ್ಯಾಂಕನ್ನು ಪಡೆದುಕೊಂಡಿದ್ದರು. ತಾನು ಎಲ್ಲಾ ಪ್ರಶ್ನೆಗಳಿಗೂ ಸರಿಯಾದ ಉತ್ತರವನ್ನು ನೀಡಿದ್ದೇನೆ ತನಗೆ […]

ನಳಿನ್ ಕುಮಾರ್ ಕಟೀಲ್‌ ಗೆಲುವಿಗೆ ಮುಸ್ಲಿಮ್ ಒಕ್ಕೂಟ ಅಭಿನಂದನೆ

Friday, May 24th, 2019
Nalin

ಮಂಗಳೂರು : 2019ನೇ ಸಾರ್ವತ್ರಿಕ ಲೋಕಸಭೆಗೆ ದಕ್ಷಿಣ ಕನ್ನಡ ಕ್ಷೇತ್ರದಿಂದ ಸ್ಪರ್ಧಿಸಿ ವಿಜಯಿಯಾದ ಶ್ರೀ ನಳಿನ್ ಕುಮಾರ್ ಕಟೀಲ್‌ರವರಿಗೆ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ ಅಭಿನಂದನೆ ವ್ಯಕ್ತಪಡಿಸಿದೆ. ನಳಿನ್ ಕುಮಾರ್ ಕಟೀಲ್‌ರವರು ಅವರ ಸಂಸದೀಯ ಅವಧಿಯಲ್ಲಿ ಜಿಲ್ಲೆಯ ಅಭಿವೃದ್ದಿಗೆ ಶ್ರಮಿಸಲಿ ಎಂದು ಹಾರೈಸಿದ್ದಾರೆ,

ಧರ್ಮಸ್ಥಳದಲ್ಲಿ ನೇತ್ರಾವತಿ ಸ್ನಾನ ಘಟ್ಟದಲ್ಲಿ ಸ್ವಚ್ಛತಾ ಅಭಿಯಾನ

Friday, May 24th, 2019
dharmasthala

  ಉಜಿರೆ: ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವಿ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್ ಮಾರ್ಗದರ್ಶನದಲ್ಲಿ ಶುಕ್ರವಾರ ದೇವಸ್ಥಾನದ ನೌಕರರು, ವಾಹನ ಚಾಲಕರು ಮತ್ತು ಮಾಲಕರು, ಊರಿನವರು, ಗ್ರಾಮ ಪಂಚಾಯಿತಿ, ಕೆ.ಎಸ್.ಆರ್.ಟಿ.ಸಿ. ಹಾಗೂ ವಿವಿಧ ಸಂಘಟನೆಗಳ ಜನರು ನೇತ್ರಾವತಿ ನದಿ ಮತ್ತು ಸ್ನಾನ ಘಟ್ಟದಲ್ಲಿ ಬೆಳಿಗ್ಗೆ ಗಂಟೆ 6.30 ರಿಂದ 9 ರ ವರೆಗೆ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದರು. ನದಿಯಲ್ಲಿ ಪ್ರವಾಸಿಗರು ಬಿಸಾಡಿದ ಬಟ್ಟೆ, ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯಗಳನ್ನು ಸಂಗ್ರಹಿಸಿ ಲಾರಿಗಳಲ್ಲಿ […]

ಉಡುಪಿ : ಶೋಭಾ ಕರಂದ್ಲಾಜೆ 3,49,599 ಮತಗಳ ಅಂತರದಿಂದ ಗೆಲುವು

Thursday, May 23rd, 2019
Shobha

ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಎರಡನೇ ಬಾರಿಗೆ ಭರ್ಜರಿ ಗೆಲುವು ಸಾಧಿಸಿದ್ದಾರೆ. ಅವರ ಪ್ರತಿಸ್ಪರ್ಧಿ ಪ್ರಮೋದ್ ಮಧ್ವರಾಜ್ ಅವರನ್ನು 3,49,599 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಕ್ಷದ ಟಿಕೆಟ್ ಹಂಚುವ ಮೊದಲೇ ಸ್ವಪಕ್ಷೀಯದವರಿಂದಲೇ ಗೋ ಬ್ಯಾಕ್ ಶೋಭಾ ಎಂಬ ಅಭಿಯಾನ ಆರಂಭಿಸಿ ತೀವ್ರ ಮುಖಭಂಗ ಅನುಭವಿಸಿದ್ದ ಶೋಭಾ ಇದೀಗ ಮೋದಿ ಅಲೆಯಲ್ಲಿ ಮತ್ತೆ ಗೆದ್ದು ವಿಜಯದ ನಗುಬೀರಿದ್ದಾರೆ. ಮೋದಿ ಅಲೆ ಮುಂದೆ ಕಾಂಗ್ರೆಸ್‌ – ಜೆಡಿಎಸ್ ನ ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್ ಸೋಲನ್ನಪ್ಪಿದ್ದಾರೆ. ಶೋಭಾ […]

ಕಾಸರಗೋಡು ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ಗೆಲುವು

Thursday, May 23rd, 2019
Rajmohan Unnithan

ಕಾಸರಗೋಡು :  ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು40,438 ಮತಗಳ ಅಂತರದಿಂದ ಸೋಲಿಸಿದರು. ಸಿಪಿಎಂನ ಭದ್ರ ಕೋಟೆಯಾದ ಕಾಸರಗೋಡು ಮೂರು ದಶಕದ ಬಳಿಕ ಕಾಸರಗೋಡು ಲೋಕಸಭಾ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ತಮ್ಮ ಪ್ರತಿಸ್ಪರ್ಧಿ ಸಿಪಿಎಂನ ಕೆ.ಪಿ ಸತೀಶ್ಚಂದ್ರನ್ ರನ್ನು ಸೋಲಿಸಿದರು. ಕಾಂಗ್ರೆಸ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿ ತ್ತಾನ್ ಸಿಪಿಎಂನ ಕೆ. ಪಿ ಸತೀಷ್ಚಂದ್ರನ್ ವಿರುದ್ಧ ಸುಮಾರು 41, 648 ಅಂತರದಿಂದ ಗೆಲುವು ಸಾದಿಸಿದರು. […]

ಹಿಂದಿನ ದಾಖಲೆಯನ್ನು ಮುರಿದು ಹ್ಯಾಟ್ರಿಕ್ ಗೆಲುವು ಸಾಧಿಸಿದ ನಳಿನ್ ಕುಮಾರ್ ಕಟೀಲ್

Thursday, May 23rd, 2019
Nalin

ಮಂಗಳೂರು : ದ.ಕ. ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ 2,74,621 ಮತಗಳ ಅಂತರದಿಂದ  ಗೆಲುವು ಸಾಧಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ  4,99,664 ಮತಗಳ ಮೂಲಕ ತೃಪ್ತಿ ಪಡಬೇಕಾಯಿತು.  ನಳಿನ್ ಕುಮಾರ್ ಕಟೀಲ್ ಪಡೆದ ಮತಗಳು 7,74,285. ಈಗಾಗಲೆ ಎರಡು ಬಾರಿ ಜಯ ಗಳಿಸಿದ್ದ ನಳಿನ್‌ರನ್ನು ಸೋಲಿಸಲು ಕಾಂಗ್ರೆಸ್ ಸಮರ್ಥ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ ಎಂದು ಬಿಂಬಿಸಲಾಗಿತ್ತು. ಆದರೆ, ಫಲಿತಾಂಶ ಅನಿರೀಕ್ಷಿತ ತಿರುವು ಪಡೆದಿದೆ. ಕಳೆದ ಬಾರಿ 1,43,709 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದ ನಳಿನ್ ಈ ಬಾರಿ ತನ್ನ ಹಿಂದಿನ […]

ಉಡುಪಿ ಚಿಕ್ಕಮಗಳೂರು – ಶೋಭಾ ಕರಂದ್ಲಾಜೆಗೆ 1,18,339 ಸಾವಿರ ಮತಗಳ ಮುನ್ನಡೆ

Thursday, May 23rd, 2019
Shobha

ಉಡುಪಿ : ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಲೋಕಸಭೆ ಚುನಾವಣೆಯಲ್ಲಿ ಪ್ರಮೋದ್ ಮಧ್ವರಾಜ್ ವಿರುದ್ಧ ಶೋಭಾ ಕರಂದ್ಲಾಜೆಗೆ  1,18,339 ಸಾವಿರ ಮತಗಳ  ಅಂತರದಿಂದ ಮುನ್ನಡೆ  ಯಲ್ಲಿದ್ದಾರೆ  .  ಶೋಭಾ ಕರಂದ್ಲಾಜೆಗೆ 234451 ಮತಗಳು . ಪ್ರಮೋದ್ ಮಧ್ವರಾಜ್ಗೆ 116112 ಮತಗಳು. Karnataka-Udupi Chikmagalur Results O.S.N. Candidate Party EVM Votes Postal Votes Total Votes % of Votes 1 SHOBHA KARANDLAJE BJP 234451 0 234451 63.08 2 MAGGALAMAKKI GANESHA IND 1265 0 1265 […]