ಕುಖ್ಯಾತ ರೌಡಿ ವಾಮಂಜೂರು ರೋಹಿಯ ಮಗನ ಹತ್ಯೆ

Tuesday, July 25th, 2017
Pawan Shetty

ಮಂಗಳೂರು  :  ಕುಖ್ಯಾತ ರೌಡಿ ವಾಮಂಜೂರು ರೋಹಿಯ ಮಗ ಪವನ್ ಕುಮಾರ್ ಶೆಟ್ಟಿ (23) ಎಂಬವರನ್ನು ವಾಮಂಜೂರು ಸಮೀಪದ ಕುಕ್ಕಿ ಪಲ್ಕೆ ಎಂಬಲ್ಲಿ ಕೊಚ್ಚಿ ಕೊಲೆಮಾಡಿದ ಘಟನೆ  ಮಂಗಳವಾರ ಬೆಳಗ್ಗಿನ ಜಾವ ನಡೆದಿದೆ. ಮೂರು ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಪವನ್ ಇತ್ತೀಚೆಗೆ ಜೈಲಿನಿಂದ ಹೊರಬಂದಿದ್ದ.  ಮಂಗಳವಾರ ಬೆಳಗ್ಗೆ ಸುಮಾರು 2.30 ರ ವೇಳೆಗೆ ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಮಾಡಿ ಪರಾರಿಯಾಗಿದ್ದಾರೆ. 2009 ಪವನ್ ತಂದೆ ವಾಮಂಜೂರು ರೋಹಿ ಹತ್ಯೆಯಾಗಿತ್ತು. ಆದರೆ ಪವನ್ ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಹತ್ತು ಮಂದಿಯ ಪರಿಚಿತರ ತಂಡವೇ ಗಾಂಜಾ ಸೇವೆನೆ ಮಾಡಿ, ಕ್ಷುಲ್ಲಕ […]

ಮಂಗಳೂರು: ಹಿಂದೂ ಧರ್ಮಕ್ಕೆ ಮರಳಿದ ಕ್ರಿಶ್ಟಿಯನ್ ಕುಟುಂಬ

Tuesday, July 25th, 2017
Convert

ಮಂಗಳೂರು: ಹಿಂದೂ ಧರ್ಮದಿಂದ ಕ್ರಿಶ್ಟಿಯನ್ ಧರ್ಮಕ್ಕೆ ಮತಾಂತರಗೊಂಡಿದ್ದ ಕುಟುಂಬವೊಂದು ಸ್ವ ಇಚ್ಛೆಯಿಂದ ಮಾತೃ ಧರ್ಮಕ್ಕೆ ಮರಳಿದೆ. ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಧಾರ್ಮಿಕ ವಿಧಿ-ವಿಧಾನಗಳ ಮೂಲಕ ಅವರನ್ನು ಹಿಂದೂ ಧರ್ಮಕ್ಕೆ ಸ್ವಾಗತಿಸಿದ್ದಾರೆ. 40 ವರ್ಷಗಳ ಹಿಂದೆ ಮಂಗಳೂರಿನ ಪದವಿನಂಗಡಿಯ ಅರುಣ್ ಮೊಂತೆರೊ (46) ಹಾಗೂ ಕುಟುಂಬ ಹಿಂದೂ ಧರ್ಮಕ್ಕೆ ಮರಳಿದವರು. ಅವರ ಕುಟುಂಬ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು. ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಮೇಲೂ ಹಿಂದೂ ಧರ್ಮದ ಬಗ್ಗೆಯೇ ಆಸಕ್ತಿ ವಹಿಸಿದ್ದರು. ಆ ಧರ್ಮದಲ್ಲಿದ್ದಾಗಲೂ ದೇವಸ್ಥಾನಗಳಿಗೆ ಭೇಟಿ […]

‘ಬಾರಿಸು ಕನ್ನಡ ಡಿಂಡಿಮ’ ಖ್ಯಾತಿಯ ಚಿದಾನಂದ ಕಾಮತ್ ನಿಧನ

Monday, July 24th, 2017
chidananda Kamath

ಪುತ್ತೂರು :  ‘ಬಾರಿಸು ಕನ್ನಡ ಡಿಂಡಿಮ’ ಖ್ಯಾತಿಯ ಚಿದಾನಂದ ಕಾಮತ್ ಕಾಸರಗೋಡು(61) ಸೋಮವಾರ ಬೆಳಗ್ಗೆ ಪರ್ಲಡ್ಕದಲ್ಲಿರುವ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಬಾರಿಸು ಕನ್ನಡ ಡಿಂಡಿಮ’ ಎಂಬ ತಂಡವನ್ನು ಕಟ್ಟಿಕೊಂಡು 350ಕ್ಕೂ ಹೆಚ್ಚಿನ ಕಡೆಗಳಲ್ಲಿ ರಂಗ ಪ್ರದರ್ಶನವನ್ನು ನೀಡಿ ಹೆಸುರವಾಸಿಯಾಗಿದ್ದರು. ಈ ಕಾರ್ಯಕ್ರಮವು ಅವರಿಗೆ ಅಪಾರ ಜನಪ್ರಿಯತೆಯನ್ನ ತಂದುಕೊಡುವ ಮೂಲಕ ಪುತ್ತೂರಿನಾದ್ಯಂತ ಮನೆಮಾತಾಗಿತ್ತು. ಕಾರ್ಮಿಕ ಇಲಾಖೆಯ ಸಿಬ್ಬಂದಿಯಾಗಿದ್ದ ಅವರು ಕಳೆದ ವರ್ಷವಷ್ಟೇ ನಿವೃತ್ತರಾಗಿದ್ದರು. 500ಕ್ಕೂ ಅಧಿಕ ನಾಟಕಗಳಲ್ಲಿ ಅಭಿನಯಿಸಿರುವ ಕಾಮತ್, 36 ವರ್ಷಗಳ ಹಿಂದೆ ಸಿನಿಮಾರಂಗ ಪ್ರವೇಶ ಮಾಡಿದರು. 1980ರಲ್ಲಿ […]

ಮೂಡುಬಿದಿರೆ: ಪೊಲೀಸ್ ಕಾನ್‍ಸ್ಟೇಬಲ್ ಪರೀಕ್ಷೆ

Monday, July 24th, 2017
police Constable

ಮೂಡುಬಿದಿರೆ: ಕರ್ನಾಟಕ ರಾಜ್ಯ ಪೊಲೀಸ್ ಕಾನ್‍ಸ್ಟೇಬಲ್(ಸಿವಿಲ್) ಲಿಖಿತ ಪರೀಕ್ಷೆಯನ್ನು ವಿದ್ಯಾಗಿರಿಯ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಪ್ರೌಢಶಾಲಾ ಕ್ಯಾಂಪಸ್‍ನಲ್ಲಿ ಭಾನುವಾರ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದ 5,705 ಮಂದಿ ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡರು. ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್ ಸುರೇಶ್, ಕ್ರೈಂ ಹಾಗೂ ಸಂಚಾರಿ ವಿಭಾಗದ ಡಿಸಿಪಿ ಹನುಮಂತರಾಯ, ಎಸಿಪಿ ರಾಜೆಂದ್ರ ಡಿ.ಎಸ್, ಮೂಡುಬಿದಿರೆ ಇನ್ಸ್‍ಪೆಕ್ಟರ್ ರಾಮಚಂದ್ರ ನಾಯಕ್, ಎಸ್‍ಐ ದೇಜಪ್ಪ ಸಹಿತ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನಲ್ಲಿ ಪೊಲೀಸ್ ಸಿಬ್ಬಂದಿಗಳು ಹಗೂ ಆಳ್ವಾಸ್‍ನ ಸಿಬ್ಬಂದಿಗಳು ಪರೀಕ್ಷೆ […]

ಐವನ್ ಡಿ ಸೋಜ ಆಪ್ತ ಕಾರ್ಯದರ್ಶಿ ಶಿವರಾಮ ನಾಯ್ಕ್ ಆಕ್ರಮ ಸಂಬಂಧ , ಪತ್ನಿ ಆತ್ಮಹತ್ಯೆ

Saturday, July 22nd, 2017
Shivaram Naik

ಮಂಗಳೂರು : ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಆಪ್ತ ಕಾರ್ಯದರ್ಶಿ ಶಿವರಾಮ ನಾಯ್ಕ್ ಪತ್ನಿ ವೀಣಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಟ್ಕಳದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಶಿವರಾಮ ನಾಯ್ಕ್ ಅವರಿಗೆ ಬೇರೆ ಹುಡುಗಿಯೊಂದಿಗೆ ಅಕ್ರಮ ಸಂಬಂಧವಿರುವುದೇ ಈ ಆತ್ಮಹತ್ಯೆಗೆ ಕಾರಣ ಎನ್ನಲಾಗಿದ್ದು. ಈ ವಿಷಯದಲ್ಲಿ ವೀಣಾ ಪತಿ ಶಿವರಾಮ್ ಜೊತೆ ಜಗಳ ಆಡಿದ್ದು, ಇಪ್ಪತೈದು ದಿನದ ಹಿಂದೆ ಭಟ್ಕಳದಲ್ಲಿರುವ ತನ್ನ ತವರು ಮನೆಗೆ ಹೋಗಿದ್ದರು. ಶುಕ್ರವಾರ ರಾತ್ರಿ ಶಿವರಾಮ್ ವೀಣಾ ಅವರಿಗೆ ದೂರವಾಣಿಕರೆ […]

ಮಹಿಳೆಗೆ ಡಿಕ್ಕಿ ಹೊಡೆದ ಅಭಯಚಂದ್ರ ಜೈನ್ ಕಾರು, ಬಜ್ಪೆ ಪೊಲೀಸ್ ಠಾಣೆಯಲ್ಲಿ ದೂರು

Saturday, July 22nd, 2017
Abhayachandra

ಮಂಗಳೂರು : ಶಾಸಕ ಅಭಯಚಂದ್ರ ಜೈನ್ ಅವರು ಇದ್ದ ಕಾರು ಪಾದಚಾರಿ ಮಹಿಳೆಯೊಬ್ಬರಿಗೆ ಢಿಕ್ಕಿ ಹೊಡೆದು ಚಿಕಿತ್ಸೆ ನೀಡದೆ ಹೊರಟು ಹೋದ ಘಟನೆ  ಬಗ್ಗೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಶುಕ್ರವಾರ ದಾಖಲಾಗಿದೆ. ಜೈನಾಬಿ(48) ಎಂಬ ಮಹಿಳೆ ಶುಕ್ರವಾರ ಸಂಜೆ ಬಜ್ಪೆ ಸಮೀಪದ ಕಿನ್ನಿಪದವು ಮುಖ್ಯರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಶಾಸಕ ಅಭಯಚಂದ್ರ ಜೈನ್ ಅವರಿದ್ದ ಇನ್ನೋವಾ ಕಾರು ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ಈ ವೇಳೆ ರಸ್ತೆಗೆ ಬಿದ್ದ ಜೈನಾಬಿಯವರನ್ನು ಚಿಕಿತ್ಸೆಗೆ ಕರೆದೊಯ್ಯದೆ ಶಾಸಕರು ಕಡೆಗಣಿಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ. ಜೈನಾಬಿ […]

‘ಮಾರ್ಚ್ 22’ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ

Saturday, July 22nd, 2017
March_22

ಮಂಗಳೂರು : ಆಕ್ಮೆ ( ACME)ಮೂವೀಸ್ ಇಂಟರ್ ನ್ಯಾಷನಲ್ ಸಂಸ್ಥೆಯ ಬ್ಯಾನರಿನಡಿಯಲ್ಲಿ ಮಂಗಳೂರು ಮೂಲದ ದುಬೈಯ ಖ್ಯಾತ ಉದ್ಯಮಿ ಹರೀಶ್ ಶೇರಿಗಾರ್ ಹಾಗು ಅವರ ಧರ್ಮ ಪತ್ನಿ ಶರ್ಮಿಳಾ ಶೇರಿಗಾರ್ ನಿರ್ಮಿಸಿರುವ, ಹಿರಿಯ ನಿರ್ದೇಶಕ ಕೂಡ್ಲು ರಾಮಕೃಷ್ಣ ನಿರ್ದೇಶನದ ಬಹು ನಿರೀಕ್ಷಿತ ‘ಮಾರ್ಚ್ 22’ ಸಿನೆಮಾದ ಧ್ವನಿಸುರುಳಿ (ಆಡಿಯೋ) ಬಿಡುಗಡೆ ಸಮಾರಂಭ ಗುರುವಾರ ನಗರದ ಪಂಪ್ವೆಲ್’ನ ಫಾದರ್ ಮುಲ್ಲರ್ ಕನ್ವೆನ್ಷನ್ ಸೆಂಟರಿನಲ್ಲಿ ಬಹಳ ಅದ್ದೂರಿಯಾಗಿ ನಡೆಯಿತು. ಇದೆ ಸಂದರ್ಭದಲ್ಲಿ ಸಿನೆಮಾದ ಹಾಡುಗಳ ಟೀಸರ್’ನ್ನು ಬಹುಭಾಷ ನಟ ಆಶಿಶ್ […]

ತುಳು ಧಾರಾವಾಹಿ ನಿರ್ಮಾಪಕ ಪ್ರವೀಣ್ ಕುಮಾರ್ ಆತ್ಮಹತ್ಯೆ

Saturday, July 22nd, 2017
Praveen B

ಉಳ್ಳಾಲ : ತುಳು ಧಾರಾವಾಹಿ ನಿರ್ಮಾಪಕ ಪ್ರವೀಣ್ ಕುಮಾರ್ ಬಿ(51) ಎಂಬವರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ತಡರಾತ್ರಿ ಕುಂಪಲ ಮೂರುಕಟ್ಟೆ ಎಂಬಲ್ಲಿ ನಡೆದಿದೆ. ಪ್ರವೀಣ್ ಅವರು ಬುಧವಾರ ತಡರಾತ್ರಿ ಮೂರುಕಟ್ಟೆಯ ತನ್ನ ಮನೆಯಲ್ಲಿ ಪತ್ನಿ ಮತ್ತು ಮೂವರು ಮಕ್ಕಳು ಇರುವಾಗಲೇ ಕೋಣೆಯೊಳಗೆ ಬಾಗಿಲು ಹಾಕಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಹಳ ಹೊತ್ತಾದರೂ ಪ್ರವೀಣ್ ಅವರು ಕೋಣೆಯಿಂದ ವಾಪಾಸಾಗದೇ ಇದ್ದಾಗ ಅನುಮಾನಗೊಂಡು ಮನೆಮಂದಿ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿರುವುದು ತಿಳಿದು […]

ಮಂದಿರ, ಮಸೀದಿ, ದರ್ಗಾಗಳಲ್ಲಿ ಶರತ್ ಹಂತಕರ ಬಂಧನಕ್ಕಾಗಿ ಸಚಿವ ರಮಾನಾಥ್ ರೈ ವಿಶೇಷ ಪೂಜೆ

Saturday, July 22nd, 2017
Rai Prayer

ಮಂಗಳೂರು : ಶರತ್ ಮಡಿವಾಳ ಹತ್ಯೆಯಾಗಿ ಇಂದಿಗೆ ಹದಿನೈದು ದಿನಗಳಾಗಿವೆ. ಬಿಜೆಪಿ ಕಾರ್ಯಕರ್ತರು ರಾಜ್ಯಾದ್ಯಂತ ಹಂತಕರ ಬಂಧನಕ್ಕಾಗಿ ಪ್ರತಿಭಟನೆ ನಡೆಸಿದ್ದರು. ಹಾಗೆಯೇ  ಶುಕ್ರವಾರ ಸಚಿವ ರಮಾನಾಥ್ ರೈ ವಿಶೇಷ ಪೂಜೆ ಸಲ್ಲಿಸಿದರು. ಆರ್‌‌ಎಸ್‌ಎಸ್‌ ಕಾರ್ಯಕರ್ತ ಶರತ್ ಮಡಿವಾಳ ಹತ್ಯೆ ಆರೋಪಿಗಳು ಶೀಘ್ರವೇ ಬಂಧನವಾಗಲಿ ಎಂದು ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಅವರು ಈ ಸಂದರ್ಭ ದೇವರಲ್ಲಿ ಪ್ರಾರ್ಥನೆ ಮಾಡಿಕೊಂಡರು. “ಶರತ್ ಮಡಿವಾಳ ಕೊಲೆ ಆರೋಪಿಗಳಿಗೆ  ಕಠಿಣ ಶಿಕ್ಷೆಯಾಗಬೇಕು. ಇದರ ಹಿಂದಿರುವ ಪಿತೂರಿದಾರರ ಬಂಧನವಾಗಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ […]

ವೆನ್ಲಾಕ್ ಆಸ್ಪತ್ರೆಯ ಪೈಪ್‌ಲೈನ್ ಒಡೆದು ತ್ಯಾಜ್ಯಗಳು ಹೊರಗೆ

Friday, July 21st, 2017
pipiline

ಮಂಗಳೂರು : ನಗರದ ಸರಕಾರಿ ಆಸ್ಪತ್ರೆಯಾಗಿರುವ ವೆನ್ಲಾಕ್ ಬಳಿ ಕಳೆದ ಕೆಲವು ದಿನಗಳಿಂದ ಪೈಪ್‌ಲೈನ್ ಒಡೆದು ಆಸ್ಪತ್ಯೆ ತ್ಯಾಜ್ಯಗಳು ಹೊರಬರುತ್ತಿದ್ದರೂ ಅದನ್ನು ದುರಸ್ತಿ ಮಾಡುವಲ್ಲಿ ಮಂಗಳೂರು ಮಹಾನಗರ ಪಾಲಿಕೆಯು ನಿರ್ಲಕ್ಷ ತೋರಿದೆ. ನಗರದ ಹಂಪನಕಟ್ಟೆ ಸಿಗ್ನಲ್‌ನಿಂದ ವೆನ್ಲಾಕ್ ಆಸ್ಪತ್ರೆಯ ಹಿಂಬದಿಯಿಂದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕಿಸುವ ಈ ರಸ್ತೆಯ ಬದಿ ತೆರೆದ ಚರಂಡಿ ಇದ್ದು, ಈ ಚರಂಡಿಯ ಒಳಗಿನಿಂದ ಆಸ್ಪತ್ರೆ ತಾಜ್ಯಗಳು ಹಾದುಹೋಗಲು ಪೈಪ್‌ಲೈನ್‌ನನ್ನು ಅಳವಡಿಸಲಾಗಿದೆ. ಆದರೆ, ಈ ಪೈಪ್‌ಲೈನ್ ಒಡೆದಿರುವುದರಿಂದ ಆಸ್ಪತ್ರೆಯ ತ್ಯಾಜ್ಯಗಳು ಚರಂಡಿಯನ್ನು ಸೇರುತ್ತಿವೆ. ಇದರಿಂದಾಗಿ […]