ಹಿಲ್ ಸೆಂಟರ್ ಕಚೇರಿಯ ಕಳ್ಳತನ ಪ್ರಕರಣ: ಇಬ್ಬರ ಬಂಧನ

Tuesday, February 7th, 2017
Mangalore

ಮಂಗಳೂರು: ನಗರದ ಹಿಲ್ ಸೆಂಟರ್ ಕಚೇರಿಯ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಕನಾಡಿ ಪೋಲಿಸರು ಇಬ್ಬರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಅಸ್ಸಾಂ ರಾಜ್ಯದ ರಂಜನ್ ಕಲಿಟಾ (22) ಮತ್ತು ಶಿವಶಂಕರ್ ದಾಸ ಅಲಿಯಾಸ್ ಅಶೋಕ್ ಕಬೀರ್ (23) ಎಂದು ಗುರುತಿಸಲಾಗಿದೆ. ಬಂಧಿತರಿಂದ ಪೋಲಿಸರು ಕಳವು ಮಾಡಿದ ನಾಲ್ಕು ಲ್ಯಾಪ್ ಟಾಪ್, ಐದು ಐಪಾಡ್, ಒಂದು ಕ್ಯಾಮರಾ, ಒಂದು ವಾಚ್ ಸೇರಿದಂತೆ ರು.2,87,500 ಮೊತ್ತದ ಮಾಲನ್ನು ವಶಪಡಿಸಿಕೊಂಡಿದ್ದಾರೆ ಫೆಬ್ರವರಿ 6ರ ಸಂಜೆ ಆರೋಪಿಗಳಾದ ರಜನಿ ಕ್ಯಾಲಿಟಾ ಮತ್ತು ಶಿವಶಂಕರ್ ಕಳುವಾದ […]

ಬೈಕ್‌ಗೆ ಟಿಪ್ಪರ್ ಡಿಕ್ಕಿಹೊಡೆದು ಸಂತ ಅಲೋಶಿಯಸ್ ಕಾಲೇಜಿನ ಎಂಬಿಎ ವಿದ್ಯಾರ್ಥಿ ಸಾವು

Tuesday, February 7th, 2017
ullal

ಮಂಗಳೂರು:ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ ಕೊಲ್ಯ ಬೈಪಾಸ್ ಸಮೀಪ ಬೈಕ್‌ಗೆ ಟಿಪ್ಪರ್ ಡಿಕ್ಕಿಹೊಡೆದ ಪರಿಣಾಮ ಬೈಕ್‌ ಸವಾರನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತಪಟ್ಟಿರುವ ಬೈಕ್ ಸವಾರನನ್ನು ಕುಂದಾಪುರದ ಮೂಲದ ಫರ್ಮಿ ಕ್ರಾಸ್ತ (23) ಎಂದು ಗುರುತಿಸಲಾಗಿದೆ. ಈತ ಕೋಟೆಕಾರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಎಂಬಿಎ ವ್ಯಾಸಾಂಗ ಮಾಡುತ್ತಿದ್ದ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆಯಿಂದ ಟೋಲ್ ಸಂಗ್ರಹಕ್ಕೆ ವಿರೋಧ

Tuesday, February 7th, 2017
Tolgate

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66 ನಂತೂರು-ತಲಪಾಡಿ ಚತುಷ್ಪಥ ಅಗಲೀಕರಣ ಯೋಜನೆಯಲ್ಲಿ ರಸ್ತೆ ಕಾಮಗಾರಿ ಇನ್ನೂ ಪೂರ್ಣಗೊಳ್ಳದಿದ್ದರೂ ಟೋಲ್ ಶುಲ್ಕ ಸಂಗ್ರಹಕ್ಕೆ ಮಾತ್ರ ಮುಂದಾಗಿದ್ದು, ಸಾರ್ವಜನಿಕರು ಸಮರ್ಪಕವಾದ ರಸ್ತೆಯ ಪ್ರಯೋಜನ ಪಡೆಯದಿದ್ದರೂ ಟೋಲ್ ಸಂಗ್ರಹಿಸುವುದನ್ನು ಕರ್ನಾಟಕ ಗಡಿನಾಡು ರಕ್ಷಣಾ ವೇದಿಕೆ ವಿರೋಧಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಸಿದ್ದಿಕ್ ತಲಪಾಡಿ, ತಲಪಾಡಿ ವ್ಯಾಪ್ತಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಇಕ್ಕೆಲಗಳಲ್ಲಿ ಸಾರ್ವಜನಿಕರು, ವಾಹನಗಳು, ತಳ್ಳುಗಾಡಿ, ಜಾನುವಾರು ಸಂಚರಿಸಲು ಸಮರ್ಪಕ ಸರ್ವಿಸ್ ರಸ್ತೆ ನಿರ್ಮಾಣವಾಗಬೇಕು. ಮಳೆ ನೀರು ಹರಿದು ಹೋಗಲು ರಸ್ತೆಯ ಇಕ್ಕೆಲಗಳಲ್ಲಿಯೂ […]

ಲೋಕಾಯುಕ್ತದಿಂದ ಸಾರ್ವಜನಿಕ ಸಭೆ: ನ್ಯಾ. ವಿಶ್ವನಾಥ ಶೆಟ್ಟಿ

Monday, February 6th, 2017
lokayukta

ಮ0ಗಳೂರು : ಸರಕಾರದ ಸೇವೆಗಳಲ್ಲಿ ವಿಳಂಭ ಸೇರಿದಂತೆ ನಾಗರೀಕರಿಗೆ ಪಾರದರ್ಶಕವಾಗಿ ಸೌಲಭ್ಯಗಳು ದೊರಕುವ ನಿಟ್ಟಿನಲ್ಲಿ ಸಾರ್ವಜನಿಕರ ಅಹವಾಲು ಮತ್ತು ದೂರುಗಳನ್ನು ಆಲಿಸಲು ಲೋಕಾಯುಕ್ತ ಸಂಸ್ಥೆಯಿಂದ ಸಾರ್ವಜನಿಕ ಸಭೆಗಳನ್ನು ಏರ್ಪಡಿಸಲಾಗುವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ತಿಳಿಸಿದ್ದಾರೆ. ಅವರು ಸೋಮವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು. ಆಡಳಿತದಲ್ಲಿ ಪಾರದರ್ಶಕತೆ ಅತಿ ಪ್ರಾಮುಖ್ಯವಾಗಿದೆ. ಸರಕಾರಿ ಯೋಜನೆಗಳು ನಾಗರೀಕರಿಗೆ ವೇಗವಾಗಿ ತಲುಪುವುದಿಲ್ಲ ಎಂಬ ದೂರು ಸಾರ್ವತ್ರಿಕವಾಗಿದೆ. ಜನರ ಒಳಿತಿಗಾಗಿ ನಾವು […]

ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರಕ್ಕೆ ಮಂಗಳೂರಿಗೆ ಆಗಮನ

Monday, February 6th, 2017
Crisgel

ಮಂಗಳೂರು: ವಿಂಡೀಸ್ ಕ್ರಿಕೆಟರ್ ಕ್ರಿಸ್ ಗೇಲ್ ಸ್ಮ್ರಿನ್ ಆಫ್ ಬ್ರಾಂಡ್ ಪ್ರಚಾರಕ್ಕೆ ಮಂಗಳೂರಿಗೆ ಆಗಮಿಸಿದ್ದು, ನೂಕು ನುಗ್ಗಲಿನ ನಡುವೆಯೂ ರೋಡ್‌ ಶೋ ನಡೆಸಿದರು. ಮಂಗಳೂರಿಗೆ ಆಗಮಿಸಿದ ಸ್ಫೋಟಕ ಬ್ಯಾಟ್ಸ್‌‌ಮನ್ ಕ್ರೀಸ್‌ಗೇಲ್‌ರನ್ನು ವೈನ್ ಗೇಟ್ ಆಡಳಿತ ಮಂಡಳಿ ಸಾಂಪ್ರದಾಯಿಕವಾಗಿ ಸ್ವಾಗತಿಸಿದರು. ಈ ಸ್ಟಾರ್ ಆಟಗಾರನನ್ನು ವೀಕ್ಷಿಸಲು ಕರಾವಳಿ ಭಾಗದ ಅಭಿಮಾನಿಗಳ ದಂಡು ಅಪಾರ ಸಂಖ್ಯೆಯಲ್ಲಿ ನೆರೆದಿದ್ದರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ನಿರಾಶೆ ಮೂಡಿಸದ ಕ್ರೀಸ್‌ಗೇಲ್‌ ನೂಕುನುಗ್ಗಲಿನ ನಡುವೆಯೂ ಮಂಗಳೂರಲ್ಲಿ ರೋಡ್ ಷೋ ನಡೆಸಿದರು. ನಂತರ ಕ್ರೀಸ್‌ಗೇಲ್‌ […]

ಗೋ ರಕ್ಷಣೆಗೆ ಪೇಜಾವರ ಶ್ರೀಗಳ ಕೊಡುಗೆ ಅನನ್ಯ: ನರೇಂದ್ರ ಮೋದಿ

Monday, February 6th, 2017
video-conference

ಉಡುಪಿ: ಕರ್ನಾಟಕ ಮಧ್ವಾಚಾರ್ಯರಿಗೆ ಜನ್ಮಕೊಟ್ಟ ಪುಣ್ಯಭೂಮಿ. ದೇಶದ ನೈತಿಕ ಉದ್ಧಾರಕ್ಕಾಗಿ ಮಧ್ವರು ಜನ್ಮ ತಾಳಿದರು. ಮಧ್ವರ ಭಕ್ತಿ ಆಂದೋಲನ ನೆನೆದರೆ ಹೆಮ್ಮೆಯಾಗುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಜಗದ್ಗುರು ಮಧ್ವಾಚಾರ್ಯರ ಸಪ್ತ ಶತಮಾನೋತ್ಸವ ಅಂಗವಾಗಿ ಪ್ರಧಾನಿ ಮೋದಿ ಇಂದು ಭಾಷಣ ಮಾಡಿದರು. ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ಮಧ್ವಾಚಾರ್ಯರ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದ ಮೋದಿ, ಮಧ್ವಾಚಾರ್ಯರ ಗುಣಗಾನ ಮಾಡಿದರು. ಅಲ್ಲದೇ ದೇಶದ ಧಾರ್ಮಿಕ ಪರಂಪರೆಯ ಬಗ್ಗೆಯೂ ಮೋದಿ […]

ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ನಾಪತ್ತೆ

Monday, February 6th, 2017
Shanthi-priya-D'Souza

ಮಂಗಳೂರು: ತನ್ನ ಸಹೋದರನ ಮನೆಯಲ್ಲಿದ್ದ ವಿವಾಹಿತೆಯೋರ್ವಳು ಪುಚ್ಚಮೊಗರಿನಿಂದ ಕಾಣೆಯಾದ ಬಗ್ಗೆ ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪುಚ್ಚಮೊಗ್ರು ಗ್ರಾಮದ ರೇಂಜರ್ ಕೋಡಿ ಎಂಬಲ್ಲಿಯ ಅರುಣ್ ಡಿಸೋಜಾ ಎಂಬವರ ಸಹೋದರಿ ಶಾಂತಿ ಪ್ರಿಯಾ ಡಿಸೋಜಾ (28) ನಾಪತ್ತೆ ಆಗಿರುವವಳು. ಸಹೋದರನ ಮನೆಯಲ್ಲಿದ್ದ ಇವರು ಜ. 26ರಂದು ಕಾಣೆಯಾಗಿದ್ದು, ಅಂಗಡಿಗೆಂದು ತೆರಳಿದ್ದ ಅರುಣ್ ಅವರು ವಾಪಾಸು ಬಂದಾಗ ಮನೆಯಲ್ಲಿರಲಿಲ್ಲ. ಶಾಂತಿ ಪ್ರಿಯಾ ಡಿಸೋಜಾ ಅವರನ್ನು 7 ತಿಂಗಳ ಹಿಂದೆ ಸಾಣೂರು ಅಲ್ವಿನ್ ಎಂಬವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಕಾಣೆಯಾಗಿರುವ […]

ಅಸೈಗೋಳಿ ಕೇಂದ್ರ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ

Monday, February 6th, 2017
queen Veerarani Abbakka

ಮಂಗಳೂರು: ಸ್ಪರ್ಧೆಗಳಲ್ಲಿ ಭಾಗವಹಿಸುವ ಮೂಲಕ ವೀರರಾಣಿ ಅಬ್ಬಕ್ಕ ಸ್ಮರಣೆಯ ಉತ್ಸವವನ್ನು ಯಶಸ್ವಿಗೊಳಿಸಬೇಕೆಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿದರು. ಕರ್ನಾಟಕ ಸರ್ಕಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಅಸೈಗೋಳಿ ಕೇಂದ್ರ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ-2017ನ್ನು ಉದ್ಘಾಟಿಸಿ ಮಾತನಾಡಿದರು. ಏಕಲವ್ಯ ಪ್ರಶಸ್ತಿ ವಿಜೇತ ಅಂತಾರಾಷ್ಟ್ರೀಯ ಕ್ರೀಡಾಪಟು ಅಕ್ಷತಾ ಪೂಜಾರಿ ಮಾತನಾಡಿ, ರಾಣಿ ಅಬ್ಬಕ್ಕಳ ಸ್ಮರಣೆಯಂತಹ ಕಾರ್ಯಕ್ರಮದಲ್ಲಿ ಪ್ರತಿಭೆಗಳನ್ನು ಪ್ರದರ್ಶಿಸುವ ಅವಕಾಶ ಶ್ಲಾಘನೀಯ. ಸೋಲು, ಗೆಲುವು ಚಿಂತಿಸದೆ ನೈಜ […]

ಬೀದಿಗೊಂದು ಸರಿಯಾದ ರಸ್ತೆ ಮಾಡಿಕೊಡುವಂತೆ ವೃದ್ಧೆಯ ಮನವಿ

Saturday, February 4th, 2017
Pranavi

ಮಂಗಳೂರು: ಸೊಂಟದಿಂದ ಕೆಳಗೆ ಶರೀರದಲ್ಲಿ ಬಲ ಕುಂದಿ ನಡೆದಾಡಲೂ ಕಷ್ಟವಾದರೂ ಇಂದಿಗೂ ಯಾರಿಗೂ ಅವಲಂಬಿತರಾದವರಲ್ಲ ಈ ಅಜ್ಜಿ. ಪುತ್ತೂರು ನಗರದ ಬಪ್ಪಳಿಗೆ ಬೈಪಾಸ್ ವೃತ್ತ ಸಮೀಪದ ನಿವಾಸಿಯಾದ 65 ವರ್ಷದ ಬಿ.ಪ್ರಣವಿ ಸರಿಯಾದ ರಸ್ತೆಯೊಂದಿದ್ದರೆ ಎಂತಹ ಕೆಲಸವನ್ನಾದರೂ ಮಾಡಬಲ್ಲೆ. ಎಲ್ಲಿ ಬೇಕಾದರೂ ಹೋಗಬಲ್ಲೆ ಎಂಬ ಧೈರ್ಯವಂತೆ. ಆದರೆ, ಆ ಬೀದಿಗೆ ಸರಿಯಾದ ರಸ್ತೆಯಿಲ್ಲದಿರುವುದೇ ಅವರ ಆತ್ಮವಿಶ್ವಾಸವನ್ನು ಕುಗ್ಗಿಸುತ್ತಿದೆ. ಅವಿವಾಹಿತರಾಗಿರುವ ಪ್ರಣವಿ ತಂದೆ, ತಾಯಿಯ ಮರಣಾ ನಂತರ ಏಕಾಂಗಿಯಾಗಿದರು. ಕಳೆದ 20 ವರ್ಷಗಳಿಂದ ಮನೆಯೊಳಗೆ ನಾಲ್ಕು ಚಕ್ರದ ಗಾಡಿಯ […]

ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರ ಬಂಧನ

Saturday, February 4th, 2017
Barke

ಮಂಗಳೂರು: ಕಳ್ಳತನ ಮಾಡಿ ದ್ವಿಚಕ್ರ ವಾಹನವನ್ನು ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರನ್ನು ಬರ್ಕೆ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನ ಗದಗ ತಾಲೂಕು ಶಿರಹಟ್ಟಿಯ ಸುರೇಶ ಭಜಂತ್ರಿ (21) ಮತ್ತು ಫಕಿರೇಶ ಈಳಿಗೇರ (23) ಎಂದು ಗುರುತಿಸಲಾಗಿದೆ. ಆರೋಪಿಗಳಿಂದ ಹೀರೋ ಫ್ಯಾಶನ್ ಪ್ರೋ ಬೈಕನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಬಿಜೈನ ಕೆಎಸ್‌‌‌ಆರ್‌‌ಟಿಸಿ ಬಸ್ ಸ್ಟಾಂಡ್ ಸಮೀಪ ವಾಹನ ಮಾರಾಟಕ್ಕೆ ಯತ್ನಿಸುತ್ತಿದ್ದ ಖಚಿತ ಸುಳಿವಿನ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಲೆತ್ನಿಸಿದರು. ಈ ಸಂದರ್ಭ ಇವರನ್ನು ವಶಕ್ಕೆ […]