ಎತ್ತಿನಹೊಳೆ ಯೋಜನೆ ಜಾರಿಯಿಂದ ಪಶ್ಚಿಮ ಘಟ್ಟಕ್ಕೆ ಅಪಾರ ಹಾನಿಯಾಗುವ ಸಾಧ್ಯತೆ: ವಿಸ್ತೃತ ಅಧ್ಯಯನ ನಡೆಸಲು ಸೂಚನೆ

Friday, November 18th, 2016
NRSS

ಮಂಗಳೂರು: ಎತ್ತಿನಹೊಳೆ ಯೋಜನೆ ಜಾರಿಯಿಂದ ಪಶ್ಚಿಮ ಘಟ್ಟಕ್ಕೆ ಅಪಾರ ಹಾನಿಯಾಗುವ ಸಾಧ್ಯತೆಯಿದೆ. ಆದ್ದರಿಂದ ಪಶ್ಚಿಮಘಟ್ಟದ ಧಾರಣಾ ಸಾಮರ್ಥ್ಯ ನಿರ್ಧರಿಸಲು ವಿಸ್ತೃತ ಅಧ್ಯಯನ ನಡೆಸಬೇಕೆಂದು ದೆಹಲಿಯ ಹಸಿರು ಪೀಠ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಸೂಚಿಸಿದೆ. ನ.11ರಂದು ಹಸಿರು ಪೀಠದಲ್ಲಿ ಎತ್ತಿನಹೊಳೆ ಯೋಜನೆ ವಿಚಾರಣೆ ಕುರಿತಂತೆ ನೇತ್ರಾವತಿ ರಕ್ಷಣಾ ಸಂಯುಕ್ತ ಸಮಿತಿಯ ದೂರಿನ ವಿಚಾರಣೆ ನಡೆಸಿ ಈ ನಿರ್ದೇಶನವನ್ನು ನೀಡಿದೆ ಎಂದು ಸಮಿತಿಯ ಸಂಚಾಲಕ, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ ನಿನ್ನೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಿತಿ […]

ಆಸ್ಪತ್ರೆಗಳ ವರ್ತನೆಯನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರ ಪ್ರತಿಭಟನೆ

Friday, November 18th, 2016
DYFI

ಮಂಗಳೂರು: 500, 1000 ರೂ. ಮುಖಬೆಲೆಯ ನೋಟು ನಿಷೇಧದಿಂದ ಜನಸಾಮಾನ್ಯರು ತೊಂದರೆ ಅನುಭವಿಸುತ್ತಿದ್ದಾರೆ. ಆಸ್ಪತ್ರೆಗಳಲ್ಲಿ ನವೆಂಬರ್ 24ರವರೆಗೆ ಎಲ್ಲಾ ಮುಖಬೆಲೆಯ ನೋಟ್‌ಗಳನ್ನು ತೆಗೆದುಕೊಳ್ಳಲು ಆರೋಗ್ಯ ಇಲಾಖೆಯ ಸೂಚನೆಯಿದ್ದರೂ, ಆಸ್ಪತ್ರೆಗಳು ಮಾತ್ರ ಈ ಸೂಚನೆಗೆ ಕ್ಯಾರೇ ಅನ್ನುತ್ತಿಲ್ಲ. ಇದರಿಂದ ರೋಗಿಗಳು ಗುಣಮುಖರಾದರೂ ಆಸ್ಪತ್ರೆಯಲ್ಲಿಯೇ ಬಂಧಿಗಳಾಗುವಂತಾಗಿದೆ. ಆಸ್ಪತ್ರೆಗಳ ಈ ವರ್ತನೆಯನ್ನು ಖಂಡಿಸಿ ಡಿವೈಎಫ್ಐ ಕಾರ್ಯಕರ್ತರು ನಗರದ ಕೊಲಾಸೊ ಆಸ್ಪತ್ರೆಯ ಮುಂದೆ ನಿನ್ನೆ ಪ್ರತಿಭಟನೆ ನಡೆಸಿದರು. ಈಗಾಗಲೇ 13ಕ್ಕೂ ಹೆಚ್ಚು ಮಂದಿ ರೋಗಿಗಳು ಗುಣಮುಖರಾಗದೆ ಈ ಆಸ್ಪತ್ರೆಗಳಲ್ಲೇ ಉಳಿದಿದ್ದರು. ದುಡ್ಡು ಕೊಡುತ್ತೇವೆ […]

ಮುಂದಿನ ವರ್ಷದೊಳಗೆ ಕನಕನ ಗುಡಿ ಸ್ಥಾಪಿಸಲಾಗುವುದು: ಪೇಜಾವರ ಶ್ರೀ

Friday, November 18th, 2016
kanaka-sadhbhavana

ಉಡುಪಿ: ಉಡುಪಿಯ ಕೃಷ್ಣ ಗಾನ ಪ್ರಿಯ. ದಾಸ ಶ್ರೇಷ್ಠರೆನಿಸಿಕೊಂಡ ಕನಕದಾಸರಿಗೆ ಒಲಿದು ಕಿಂಡಿಯ ಮೂಲಕ ದರ್ಶನ ನೀಡಿದ ಶ್ರೀ ಕೃಷ್ಣ. ಕಾಗಿನೆಲೆಯಾದಿ ಕೇಶವ ಎಂಬ ನಾಮದಿಂದ ತನ್ನ ಕೀರ್ತನೆಗಳನ್ನು ಮುಗಿಸುತ್ತಿದ್ದ ಕನಕದಾಸರಿಗೆ ಉಡುಪಿಯ ಕೃಷ್ಣ ಬಲು ಅಚ್ಚುಮೆಚ್ಚು. ಹೀಗಾಗಿ ಕೃಷ್ಣನೂರಿನಲ್ಲಿ ಕನಕದಾಸರ 529ನೇ ಜಯಂತಿಯನ್ನು ಇನ್ನೂ ಅದ್ದೂರಿಯ ಜೊತೆ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ಕನಕ ಜಯಂತಿಯ ಅಂಗವಾಗಿ ನಗರದ ಜೋಡು ಕಟ್ಟೆಯಿಂದ ರಥಬೀದಿಯವರೆಗೆ ಕನಕ ಜ್ಯೋತಿಯ ಮೆರವಣಿಗೆ ನಡೆಸಲಾಯಿತು. ಸಹಸ್ರಾರು ಸಂಖ್ಯೆಯಲ್ಲಿ ಕನಕದಾಸರ ಅಭಿಮಾನಿಗಳು ಕನಕ ಪೂಜೆಯಲ್ಲಿ […]

ಬೃಹತ್ ಗಾತ್ರದ ಗೇಟ್‌ ಮೈಮೇಲೆ ಬಿದ್ದು ಸಿಐಎಸ್ಎಫ್ ಯೋಧ ಸಾವು

Thursday, November 17th, 2016
Gate

ಮಂಗಳೂರು: ದೊಡ್ಡ ಗೇಟೊಂದು ಮೈಮೇಲೆ ಬಿದ್ದು ಸಿಐಎಸ್ಎಫ್ ಯೋಧ ಮೃತಪಟ್ಟಿರುವ ಘಟನೆ ಪಣಂಬೂರಿನ ನವಮಂಗಳೂರು ಬಂದರಿನಲ್ಲಿ ಬೆಳಗ್ಗೆ ನಡೆದಿದೆ. ಪುತ್ತೂರು ಮೂಲದ ಈಶ್ವರ ನಾಯಕ್ (54) ಮೃತಪಟ್ಟವರು. ನವಮಂಗಳೂರು ಬಂದರಿನ ಪ್ರವೇಶ ದ್ವಾರದ ಬಳಿ ಅಳವಡಿಸಲಾದ ಬೃಹತ್ ಗಾತ್ರದ ಗೇಟ್‌ನ್ನು ತನ್ನ ಪಾಳಿ ಮುಗಿದ ಬಳಿಕ ಮುಚ್ಚಲು ಹೋದ ಈಶ್ವರ ನಾಯಕ್ ಮೇಲೆ ಬಿದ್ದಿದೆ. ಈ ಗೇಟ್‌ ತುಂಬಾ ಹಳೆಯದಾಗಿದ್ದು, ತುಕ್ಕು ಹಿಡಿದಿತ್ತು. ಹೀಗಾಗಿ ಗೇಟ್‌ ಹಾಕಲು ಹೋದಾಗ ಮುರಿದು ಬಿದ್ದಿದೆ ಎನ್ನಲಾಗಿದೆ. ಈ ಸಂಬಂಧ ಪಣಂಬೂರು […]

‘ಪನೊಡಾ ಬೊಡ್ಚಾ’ ತುಳು ಚಿತ್ರ ಕರಾವಳಿಯಾದ್ಯಂತ ನಾಳೆ ತೆರೆಗೆ

Thursday, November 17th, 2016
Panoda Bodcha

ಮಂಗಳೂರು: ವೃದ್ಧಿ ಸಿನಿ ಕ್ರಿಯೇಷನ್ಸ್ ಲಾಂಛನದಡಿ ವಿನಯ ನಾಯಕ್ ಪಚ್ಚಾಜೆ ಮತ್ತು ಸುನಿತಾ ವಿನಯ ನಾಯಕ್ ಅವರ ನಿರ್ಮಾಣದ ತುಳು ಚಿತ್ರ ‘ಪನೊಡಾ ಬೊಡ್ಚಾ..!’ ನಾಳೆ (ನ. 18 ರಂದು) ಕರಾವಳಿಯಾದ್ಯಂತ ತೆರೆ ಕಾಣಲಿದೆ. ಮುತ್ತಪ್ಪ ರೈ ಅವರ ಸಹಕಾರದೊಂದಿಗೆ ಚಿತ್ರ ನಿರ್ಮಾಣವಾಗಿದ್ದು, ಅವರ ರಾಮಕುಂಜದ ಒಡ್ಯಮೆ ಎಸ್ಟೇಟ್‌ ಮತ್ತು ಬಂಟ್ವಾಳ, ಬಿ.ಸಿ. ರೋಡ್ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಶುಕ್ರವಾರ ಮಂಗಳೂರಿನ ಮೂರು ಚಿತ್ರಮಂದಿರ, ಸುರತ್ಕಲ್, ಉಡುಪಿ, ಮಣಿಪಾಲ, ಕಾರ್ಕಳ, ಮೂಡಬಿದಿರೆ, ಬೆಳ್ತಂಗಡಿ, ಪುತ್ತೂರು ಮತ್ತು […]

ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Thursday, November 17th, 2016
Muhammad

ಮಂಗಳೂರು: ಕೊಣಾಜೆ ಠಾಣೆ ವ್ಯಾಪ್ತಿಯ ಹರೇಕಳ ಗ್ರಾಮದ ನ್ಯೂಪಡ್ಪು ಎಂಬಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯೋರ್ವನನ್ನು ಕೊಣಾಜೆ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮಂಜನಾಡಿ ಮಸೀದಿ ಸಮೀಪದ ನಿವಾಸಿ ಮಹಮ್ಮದ್(40) ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿಯಿಂದ 250 ಗ್ರಾಂ ತೂಕದ ಗಾಂಜಾ ಮತ್ತು ಗಾಂಜಾವನ್ನು ಅಡಗಿಸಿಟ್ಟಿದ್ದ ಸ್ಕೂಟರ್‌ನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಯನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿ

Thursday, November 17th, 2016
Puttur compound

ಪುತ್ತೂರು: ನಗರದ ಟ್ರಾಫಿಕ್ ಪೊಲೀಸ್ ಠಾಣೆ ಬಳಿಯ ಕಾಂಪೌಂಡ್ ಕುಸಿದು ಹಲವು ಬೈಕ್‍ಗಳಿಗೆ ಹಾನಿಯಾಗಿದೆ. ಬುಧವಾರ ಸಂಜೆ ವೇಳೆಗೆ ಇದ್ದಕ್ಕಿದ್ದಂತೆ ಕಾಂಪೌಂಡ್ ಕುಸಿತವಾಗಿದೆ. ಕಳೆದ ಕೆಲವು ದಿನಗಳಿಂದ ಇಲ್ಲಿನ ಪೈಪ್‌ಗೆ ಹಾನಿಯಾದ ಕಾರಣದಿಂದ ನೀರು ಸೋರಿಕೆಯಾಗುತ್ತಿತ್ತು.ಇದರಿಂದ ಕಾಂಪೌಂಡ್ ತಳಭಾಗ ಸಡಿಲವಾಗಿ ಗೋಡೆ ಕುಸಿದಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಕಾಂಪೌಂಡ್ ಕುಸಿತದಿಂದ ಕಾಂಪೌಂಡ್ ಪಕ್ಕ ಪಾರ್ಕ್ ಮಾಡಿದ್ದ ಬೈಕ್‍ಗಳು ಹಾಗೂ ಇತರ ವಾಹನಗಳಿಗೆ ಹಾನಿಯಾಗಿದೆ.

ಮೂತ್ರ ಪಿಂಡ ವೈಫ‌ಲ್ಯದಿಂದ ವಿದೇಶಾಂಗ ಇಲಾಖಾ ಸಚಿವೆ ಸುಷ್ಮಾ ಸ್ವರಾಜ್‌ ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು

Wednesday, November 16th, 2016
sushma-swaraj

ಹೊಸದಿಲ್ಲಿ : ಮೂತ್ರ ಪಿಂಡ ವೈಫ‌ಲ್ಯದಿಂದ ವಿದೇಶಾಂಗ ಇಲಾಖಾ ಸಚಿವೆ ಸುಷ್ಮಾ ಸ್ವರಾಜ್‌ ಅವರಿಗೆ ತೀವ್ರ ಅನಾರೋಗ್ಯ ಕಾಣಿಸಿಕೊಂಡಿದ್ದು, ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಡಯಾಲಿಸಿಸ್‌ ಚಿಕಿತ್ಸೆ ಮುಂದುವರೆಸಿದ್ದು, ಅವರಿಗೆ ಕೆಲ ದಿನಗಳ ಕಾಲ ಚಿಕಿತ್ಸೆ ಮುಂದುವರಿಯಲಿದೆ. ಈ ಬಗ್ಗೆ ಸುಷ್ಮಾ ಸ್ವರಾಜ್‌ ಟ್ವೀಟ್‌ ಮಾಡಿದ್ದು ‘ನಾನು ಮೂತ್ರಪಿಂಡ ವೈಫ‌ಲ್ಯದಿಂದ ಬಳಲುತ್ತಿದ್ದು ಏಮ್ಸ್‌ಗೆ ದಾಖಲಾಗಿದ್ದು ,ಡಯಾಲಿಸಿಸ್‌ ನಡೆಸಲಾಗುತ್ತಿದೆ.ಕಿಡ್ನಿ ಕಸಿ ಮಾಡುವ ಕುರಿತು ವೈದ್ಯರು ಪರೀಕ್ಷೆಗಳನ್ನು ನಡೆಸುತ್ತಿದ್ದಾರೆ. ದೇವ ಕೃಷ್ಣ […]

ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ

Wednesday, November 16th, 2016
Note-solution

ಮಂಗಳೂರು: ಬ್ಯಾಂಕ್‌ನಲ್ಲಿ 500 ರೂ., 1,000 ರೂ. ನೋಟು ವಿನಿಮಯ ಸಂದರ್ಭ ಎದುರಾಗುವ ಚಿಲ್ಲರೆ ಸಮಸ್ಯೆ ಪರಿಹಾರಕ್ಕೆ ಪ್ರತಿಷ್ಠಿತ ಬ್ಯಾಂಕೊಂದರ ದೇರೇಬೈಲು ಶಾಖೆ ಮ್ಯಾನೇಜರ್‌ ತೋರಿಸಿರುವ ಸ್ಪಂದನೆ ಸಾರ್ವತ್ರಿಕ ಪ್ರಶಂಸೆಗೆ ಪಾತ್ರವಾಗಿದೆ. ಬ್ಯಾಂಕ್‌ಗೆ ಹಿರಿಯ ನಾಗರಿಕರೋರ್ವರು ಹಳೆ ನೋಟು ವಿನಿಮಯಕ್ಕೆ ಬಂದಿದ್ದರು. ಚಿಲ್ಲರೆ ಸಮಸ್ಯೆಯಿಂದ 2,000 ರೂ. ಹೊಸ ನೋಟು ನೀಡುವುದು ಅನಿವಾರ್ಯವಾಯಿತು. ಇದನ್ನು ಚಿಲ್ಲರೆ ಮಾಡಲು ಸಮಸ್ಯೆಯಾಗುತ್ತಿದ್ದೆ ಎಂದು ಮ್ಯಾನೇಜರ್‌ ಅವರಲ್ಲಿ ತೋಡಿಕೊಂಡಾಗ ತನ್ನಲ್ಲಿದ್ದ ವೈಯಕ್ತಿಕ ಚಿಲ್ಲರೆ ಹಣವನ್ನು ಅವರಿಗೆ ನೀಡಿದರು. ಇದೇ ರೀತಿ ಸಮಸ್ಯೆ […]

ದೇಶದಲ್ಲಿ ನಿರ್ಮಾಣವಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಗೆ ಮೋದಿಯೇ ಕಾರಣ, ಅವರೇ ಜನತೆಗೆ ಉತ್ತರ ನೀಡಲಿ: ಪೂಜಾರಿ

Wednesday, November 16th, 2016
janardana-poojary

ಮಂಗಳೂರು: ಸದ್ಯ ದೇಶದಲ್ಲಿ ನಿರ್ಮಾಣವಾಗಿರುವ ಆರ್ಥಿಕ ತುರ್ತು ಪರಿಸ್ಥಿತಿಯಂತಹ ವಾತಾವರಣಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಕಾರಣ. ಈ ಪರಿಸ್ಥಿತಿಗೆ ವಾಸ್ತವ ಕಾರಣ ಏನು ಎಂಬುದನ್ನು ಅವರೇ ಜನತೆಗೆ ಉತ್ತರ ನೀಡಲಿ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಜನಾರ್ದನ ಪೂಜಾರಿ ಹೇಳಿದರು. ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಪ್ಪುಹಣ ತಡೆಯಲು ದೇಶದ ಆದಾಯ ತೆರಿಗೆ ಕಾನೂನು ಇದೆ. ಸೆಕ್ಷನ್‌‌ 276 ‘ಎ’ ಮತ್ತು 276 ‘ಬಿ’ಯಲ್ಲಿ ದೇಶದಲ್ಲಿ ಕಪ್ಪುಹಣ ನಿಯಂತ್ರಿಸಲು ಯಾವ ಕ್ರಮ ಕೈಗೊಳ್ಳಬಹುದು ಎನ್ನುವ […]