ಮೆಗಾ  ಫೈಟ್‌’ ಕಾರ್ಯಕ್ರಮದ ಚಿತ್ರೀಕರಣ ಸಂದರ್ಭದಲ್ಲಿ ಲಘು ಲಾಠಿ ಪ್ರಹಾರ

Friday, March 28th, 2014
Mega Fight

ಮಂಗಳೂರು : ಸುವರ್ಣ ವಾಹಿನಿಯ `ಮೆಗಾ  ಫೈಟ್‌’ ಕಾರ್ಯಕ್ರಮದ ಚಿತ್ರೀಕರಣ ಸಂದರ್ಭದಲ್ಲಿ  ನಗರದ ನೆಹರು ಮೈದಾನಿನಲ್ಲಿ ಗುರುವಾರ ಸಂಜೆ  ಎರಡು ತಂಡಗಳೊಳಗೆ ಘರ್ಷಣೆ ಸಂಭವಿಸಿ ಪರಸ್ಪರ ವಾಗ್ವಾದ ಮತ್ತು ಘರ್ಷಣೆಗೆ ಕಾರಣವಾಗಿ ಚಿತ್ರೀಕರಣವು ಗೊಂದಲದಲ್ಲಿ ಮುಕ್ತಾಯಗೊಂಡಿತು. ಲೋಕ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಸುವರ್ಣ ವಾಹಿನಿಯ ‘ಮೆಗಾ  ಫೈಟ್‌’ ಕಾರ್ಯಕ್ರಮದ ಚಿತ್ರೀಕರಣವನ್ನು ಸಂಜೆ 4 .30 ಕ್ಕೆ ‘ ಆರಂಭಸಿತ್ತು. ಈ ಸಂದರ್ಭದಲ್ಲಿ ಸಭೆಯಲ್ಲಿದ್ದ ಎಸ್.ಡಿ.ಪಿ. ಐ ಕಾರ್ಯಕರ್ತನೋರ್ವ  ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರಿಗೆ ಕಲ್ಲಡ್ಕ ಪ್ರಭಾಕರ ಭಟ್‌  ಅವರನ್ನು […]

ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಪಿಸಿಪಿಐಆರ್‌ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇನೆ : ಪೂಜಾರಿ

Friday, March 28th, 2014
ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಪಿಸಿಪಿಐಆರ್‌ ಯೋಜನೆಯನ್ನು ಅನುಷ್ಠಾನಗೊಳಿಸುತ್ತೇನೆ : ಪೂಜಾರಿ

ಮಂಗಳೂರು : ಕಾಂಗ್ರೆಸ್‌ ಚುನಾವಣಾ ಪ್ರಚಾರ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಬಿ. ಜನಾರ್ದನ ಪೂಜಾರಿ ಜನರಿಗೆ ಬೇಡವಾದ ಪಿಸಿಪಿಐಆರ್‌ (ಪೆಟ್ರೋಕೆಮಿಕಲ್‌ ಆ್ಯಂಡ್‌ ಪೆಟ್ರೋ ಇನ್ವೆಸ್ಟ್‌ಮೆಂಟ್‌ ರೀಜನ್‌) ಅನುಷ್ಠಾನಗೊಳಿಸಲು ಹೋಗುವುದಿಲ್ಲ ಎಂದು ಹೇಳಿದರು. ನಾನು ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ, ಜನತೆ ಬಯಸಿದರೆ ಪಿಸಿಪಿಐಆರ್‌ ಯೋಜನೆಯನ್ನು ಅನುಷ್ಠಾನಗೊಳಿಸುವುದಾಗಿ ಹೇಳಿದ್ದೆ. ಆದರೆ ಈ ಯೋಜನೆ ನಮ್ಮ ಜಿಲ್ಲೆಗೆ ಬೇಡ ಎಂದು ನಾಗರಿಕ ಸಮಿತಿಯವರು ಹೇಳಿದ್ದಾರೆ. ಜನರಿಗೆ ಬೇಡವಾದ ಯೋಜನೆಗಳು ಪೂಜಾರಿಗೂ ಬೇಡ. […]

ಜಯಪ್ರಕಾಶ್‌ ಹೆಗ್ಡೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ

Thursday, March 27th, 2014
Jayaprakash Hegde

ಉಡುಪಿ : ಉಡುಪಿ -ಚಿಕ್ಕಮಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಸಂಸದ ಜಯಪ್ರಕಾಶ್‌ ಹೆಗ್ಡೆ ಬುಧವಾರ ನಾಮಪತ್ರ ಸಲ್ಲಿಸಿದರು. ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್‌ ಅವರಿಗೆ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಕಾಂಗ್ರೆಸ್‌ ನಾಯಕರಾದ ಕೇಂದ್ರ ಸಚಿವ ಆಸ್ಕರ್‌ ಫೆರ್ನಾಂಡಿಸ್‌, ಸಚಿವ ವಿನಯ್‌ ಕುಮಾರ್‌ ಸೊರಕೆ, ಮೋಟಮ್ಮ, ಮತ್ತಿತರ ಮುಖಂಡರು ಜತೆಯಲ್ಲಿದ್ದರು.

ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಕೆ

Thursday, March 27th, 2014
Shoba Karandlaje

ಉಡುಪಿ : ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಬುಧವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು. ಜಿಲ್ಲಾಧಿಕಾರಿ ಡಾ. ಮುದ್ದು ಮೋಹನ್‌ ಅವರಿಗೆ ಮಣಿಪಾಲದಲ್ಲಿರುವ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದರು. ಬಿಜೆಪಿಯ ಕಾರ್ಕಳ ಶಾಸಕರಾದ ಸುನಿಲ್‌ ಕುಮಾರ್‌,ಚಿಕ್ಕಮಗಳೂರು ಶಾಸಕ ಸಿಟಿ ರವಿ , ತರಿಕೆರೆಯ ಮಾಜಿ ಶಾಸಕ ಸುರೇಶ್‌ , ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಉಪಸ್ಥಿತರಿದ್ದರು.

ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಕೆ

Thursday, March 27th, 2014
Poojary

ಮಂಗಳೂರು: ನಾಮಪತ್ರ ಸಲ್ಲಿಸಲು ಕೊನೆಯದಿನವಾದ ಬುಧವಾರ ಮಂಗಳೂರು ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಯಾಗಿ ಜನಾರ್ದನ ಪೂಜಾರಿ ನಾಮಪತ್ರ ಸಲ್ಲಿಸಿದರು. ಆರೋಗ್ಯ ಸಚಿವ ಯು ಟಿ ಖಾದರ್‌ ,ಜಿಲ್ಲಾಉಸ್ತುವಾರಿ ಹಾಗೂ ಅರಣ್ಯ ಸಚಿವ ರಮನಾಥ್‌ ರೈ, ಶಾಸಕ ಜೆ. ಆರ್‌ .ಲೋಬೋ, ಮತ್ತು ಮುಖಂಡ ಪಿ ವಿ ಮೋಹನ್‌ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ನಾಮಪತ್ರ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿಮ ಪೂಜಾರಿ ಅವರು, ಜನತೆ ಕೊಮುವಾದಿಗಳನ್ನು ತಿರಸ್ಕರಿಸುವುದು ಖಂಡಿತ ಎಂದರು. ಕಾಂಗ್ರೆಸ್ ಮಾಡಿದ ಅಭಿವ್ರುದ್ದಿ ಕೆಲಸಗಳೇ ನನಗೆ ಗೆಲುವು […]

ಕಾರ್ಕಳದಲ್ಲಿ 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಪತ್ತೆ

Thursday, March 27th, 2014
Explosive

ಕಾರ್ಕಳ : ಒಟ್ಟು ರೂ. 1 ಕೋಟಿಗೂ ಹೆಚ್ಚು ಮೌಲ್ಯದ ಬೃಹತ್ ಪ್ರಮಾಣದ ಅಕ್ರಮ ಸ್ಫೋಟಕ ಕಾರ್ಕಳ ತಾಲ್ಲೂಕಿನ ಮೂರು ಕಡೆ ಮಂಗಳವಾರ ಪತ್ತೆಯಾಗಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಖಚಿತ ಮಾಹಿತಿ ಮೇರೆಗೆ ಎಎಸ್‍ಪಿ ಅಣ್ಣಾಮಲೈ ನೇತೃತ್ವದ ಪೊಲೀಸ್ ಸಿಬ್ಬಂದಿ ಏಕಕಾಲಕ್ಕೆ ತಾಲ್ಲೂಕಿನ ನಕ್ರೆ ಗ್ರಾಮದ ವರ್ಣಬೆಟ್ಟು, ಪಟ್ಟಣದ ಸಮೀಪವಿರುವ ಕೋಟಿ ಚೆನ್ನಯ ಥೀಂ ಪಾರ್ಕ್ ಸಮೀಪದ ಗಂಧದ ಬಟ್ಟಿ ಎಂಬಲ್ಲಿನ ತೋಟದಲ್ಲಿ ಹಾಗೂ ತೆಳ್ಳಾರು ಸಮೀಪದ ದುರ್ಗಾ ಗ್ರಾಮದಲ್ಲಿ ನಡೆಸಿದ ದಾಳಿಯಲ್ಲಿ ಇವು ದೊರೆತಿವೆ. […]

ಪಿಎ ಕಾಲೇಜಿನಲ್ಲಿ ಕಲ್ಲುತೂರಾಟ ಲಾಠಿಚಾರ್ಜ್

Friday, March 21st, 2014
pa collage

ಮಂಗಳೂರು : ಪಿಎ ಕಾಲೇಜಿನಲ್ಲಿ ಕಳೆದ ಐದಾರು ದಿನಗಳಿಂದ ನಡೆದಿದ್ದ ವಿದ್ಯಾರ್ಥಿಗಳ ಪ್ರತಿಭಟನೆ ಗುರುವಾರ ತಾರಕಕ್ಕೇರಿತ್ತು. ವಿದ್ಯಾರ್ಥಿಗಳ ಬೇಡಿಕೆಗೆ ಮಣಿದ ಕಾಲೇಜು ಆಡಳಿತ ಮಂಡಳಿ ಕೊನೆಗೆ ಪೊಲೀಸರನ್ನು ಕರೆಸಿಕೊಂಡು ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಚ್ ಮಾಡಿಸಿದ ಪ್ರಸಂಗ ನಡೆಯಿತು. ಮಾ.15ರಿಂದ ಕಾಲೇಜಿನ ಮೂಲ ಸೌಕರ್ಯ ಕೊರತೆ, ಕಳಪೆ ಆಹಾರ ನೀಡಿಕೆ, ಬೌದ್ಧಿಕ ಗುಣಮಟ್ಟದ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಿರತರಾಗಿದ್ದಾರೆ. ಗುರುವಾರ ಪಾಠ ಪ್ರವಚನಗಳನ್ನು ಬಹಿಷ್ಕರಿಸಿದ ವಿದ್ಯಾರ್ಥಿಗಳು ಕಾಲೇಜಿನ ಮುಂದೆ ಪ್ರತಿಭಟನೆ ನಿರತರಾಗಿದ್ದರು. ಮಾ.19ರೊಳಗೆ ಸೂಕ್ತ ವ್ಯವಸ್ಥೆ […]

ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ವತಿಯಿಂದ ಹಕ್ಕೊತ್ತಾಯ ಸಮಾವೇಶ

Wednesday, March 19th, 2014
Hakkottaya

ಮಂಗಳೂರು : ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ ಆಶ್ರಯದಲ್ಲಿ ನಗರದ ಎನ್‌ಜಿಒ ಹಾಲ್‌ನಲ್ಲಿ ಮತದಾರರ ಜಾಗೃತಿ ಮತ್ತು ಜನರ ಪ್ರಣಾಳಿಕೆ ಆಗ್ರಹದ ಅಂಗವಾಗಿ ಮಂಗಳವಾರ ಹಕ್ಕೊತ್ತಾಯ ಸಮಾವೇಶ ನಡೆಯಿತು. ಸ್ವದೇಶೀ ಜಾಗರಣ ಮಂಚ್‌ನ ರಾಷ್ಟ್ರೀಯ ಸಹಸಂಚಾಲಕ ಹಾಗೂ ಆರ್ಥಿಕ ತಜ್ಞ ಪ್ರೊ| ಬಿ.ಎಂ. ಕುಮಾರಸ್ವಾಮಿ ಮಾತನಾಡಿ ಅನ್ನ ಭಾಗ್ಯ, ಕ್ಷೀರ ಭಾಗ್ಯ ಸೇರಿದಂತೆ ಹಲವಾರು ಭಾಗ್ಯದ ಯೋಜನೆ ಆರಂಭಿಸಿರುವ ಸರಕಾರ, ‘ಉದ್ಯೋಗ ಭಾಗ್ಯ’ ನೀಡುವ ಮೂಲಕ ಜನರನ್ನು ಗಟ್ಟಿಗೊಳಿಸಿ ಎಂದು ಹೇಳಿದರು. ಕೇಂದ್ರದವರು 3 ರೂ.ಗೆ ಅಕ್ಕಿ […]

ಸೈಕಲ್ ಬಿಟ್ಟು ಕೈ ಹಿಡಿದ ಸಿ.ಪಿ ಯೋಗೀಶ್ವರ್

Wednesday, March 19th, 2014
Yogeshwar

ಬೆಂಗಳೂರು : ಸಿ..ಪಿ ಯೋಗೀಶ್ವರ್ ಅವರು ಮತ್ತೊಮ್ಮೆ ಪಕ್ಷಾಂತರ ಮಾಡಿದ್ದಾರೆ. ಸಮಾಜವಾದಿ ಪಕ್ಷದ ಏಕೈಕ ಶಾಸಕ ಮಂಗಳವಾರದಂದು ಕೆಪಿಸಿಸಿ ಕಚೇರಿಗೆ ತೆರಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಕೊಂಡಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಶಾಸಕ ಸಿ.ಪಿ ಯೋಗೀಶ್ವರ್ ಅವರು ಸಮಾಜವಾದಿ ಪಕ್ಷ ತೊರೆದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಚಿವ ಡಿ.ಕೆ ಶಿವಕುಮಾರ್, ಮುಂತಾದ ನಾಯಕರು ಉಪಸ್ಥಿತರಿದ್ದರು. ಕಳೆದ ಆಗಸ್ಟಿನಲ್ಲಿ ಚನ್ನಪಟ್ಟಣದಲ್ಲಿ ನಡೆದಿದ್ದ ಸಮಾಜವಾದಿ ಪಕ್ಷದ ಬೆಂಬಲಿಗರ ಸಭೆಯಲ್ಲಿ […]

ಮಂಗನಕಾಯಿಲೆ ನಿಯಂತ್ರಣಕ್ಕೆ ಕ್ರಮ : ಸಚಿವ ಯು.ಟಿ.ಖಾದರ್

Tuesday, March 18th, 2014
ut khader

ಶಿವಮೊಗ್ಗ : ಇತ್ತೀಚೆಗೆ ರಾಜ್ಯದ ನಾಲ್ಕಾರು ಜಿಲ್ಲೆಗಳಲ್ಲಿ ಕಂಡುಬಂದಿರುವ ಮಂಗನಕಾಯಿಲೆ ನಿಯಂತ್ರಣಕ್ಕೆ ಅಗತ್ಯಕ್ರಮ ಕೈಗೊಳ್ಳಲಾಗುವುದೆಂದು ಆರೋಗ್ಯ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಸೋಮವಾರ ತೀರ್ಥಹಳ್ಳಿಯ ತಾಲೂಕು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಮಾಧ್ಯಮಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು. ಈ ಕಾಯಿಲೆಯ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬೆಂಗಳೂರಿನಲ್ಲಿ ರಾಜ್ಯ ಮಟ್ಟದ ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ ಎಂದರು. ವಿಶೇಷವಾಗಿ ಈ ಕಾಯಿಲೆಯು ಅರಣ್ಯಗಳಲ್ಲಿ ವಾಸಿಸುವ ವನವಾಸಿಗಳಲ್ಲೇ ಕಂಡುಬರುತ್ತಿರುವುದರಿಂದ ಮಲೆನಾಡಿನ ಅರಣ್ಯ ಪ್ರದೇಶಗಳಲ್ಲಿವಾಸಿಸುವ ಹಾಗೂ ಕಾಯಿಲೆ ಪೀಡಿತರಿಗೆ […]