ಯಕ್ಷಗಾನ ಕಲಾವಿದರ ಸಂಕಷ್ಟಗಳಿಗೆ ಸ್ಪಂದಿಸುವುದು ಶ್ಲಾಘನೀಯ: ಈಶ್ವರ ಭಟ್

Wednesday, December 19th, 2018
mahaganati

ಮೂಡುಬಿದಿರೆ: ಕಲೆಯನ್ನು ಧರ್ಮ ಪ್ರಸಾರ ಸಾಧನವಾಗಿ ಮುನ್ನಡೆಸುತ್ತ ಬರುತ್ತಿರುವವರು ಯಕ್ಷಗಾನ ಕಲಾವಿದರು. ಅವರ ಸಂಕಷ್ಟಗಳಿಗೆ ಸ್ಪಂದಿಸುವ, ಸಾಧಕರನ್ನು ಗೌರವಿಸುವ ಸಹೃದಯತೆಯಿಂದ ಕೆಲಸ ಮಾಡುತ್ತಿರುವ ಪಟ್ಲ ಫೌಂಡೇಶನ್‌ ನಿಜಕ್ಕೂ ಕಲೆಯ ಉಳಿವು ಮತ್ತು ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ, ಆಡಳಿತ ಮೊಕ್ತೇಸರ ವೇ|ಮೂ| ಈಶ್ವರ ಭಟ್‌ ಹೇಳಿದರು. ಫೌಂಡೇಶನ್‌ನ ಸ್ಥಾಪಕಾಧ್ಯಕ್ಷ, ಭಾಗವತ ಪಟ್ಲ ಸತೀಶ್‌ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಮೂಡುಬಿದಿರೆ ಅಲಂಗಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೋಮವಾರ […]

ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿ ಪಲ್ಟಿ: ಕ್ಲೀನರ್​ ಸಾವು

Tuesday, December 18th, 2018
tanker

ಮಂಗಳೂರು: ಮರದ ತುಂಡುಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಟ್ರಾಫಿಕ್ ಪೊಲೀಸ್ ನಿಲ್ಲಿಸಲು ಹೋದಾಗ ಲಾರಿ ಪಲ್ಟಿಯಾಗಿ ಲಾರಿಯಲ್ಲಿದ್ದ ಕ್ಲೀನರ್ ಸಾವಿಗೀಡಾದ ಘಟನೆ ಮಂಗಳೂರಿನ ಹೊರವಲಯದ ತೊಕ್ಕೊಟ್ಟು ಜಂಕ್ಷನ್ನಲ್ಲಿ ನಡೆದಿದೆ. ಟ್ರಾಫಿಕ್ ಪೊಲೀಸ್ ಲಾರಿಯನ್ನು ನಿಲ್ಲಿಸಲು ಸೂಚನೆ ನೀಡಿದಾಗ ಲಾರಿ ಚಾಲಕ ಲಾರಿಯನ್ನು ಬದಿಗೆ ತಂದು ನಿಲ್ಲಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹಾಸಲಾದ ಕಾಂಕ್ರೀಟ್ ಸ್ಲಾಬ್ ಮೇಲೆ ಲಾರಿ ನಿಂತ ಪರಿಣಾಮ ಸ್ಲಾಬ್ ತುಂಡಾಗಿ ಲಾರಿ ಪಲ್ಟಿಯಾಗಿದೆ. ಲಾರಿ ಪಲ್ಟಿಯಾಗುವ ಸಂದರ್ಭದಲ್ಲಿ ಅದೇ ಬದಿಯಲ್ಲಿದ್ದ ಕ್ಲೀನರ್ ಗಂಭೀರವಾಗಿ ಗಾಯಗೊಂಡಿದ್ದನು. […]

ರೈತರ ಸಾಲಮನ್ನಾ ಮಾಡಲು ಛತ್ತೀಸ್​ಗಢ ಸಿಎಂ ನಿರ್ಧಾರ: ರೈತರಿಗೆ ಈ ಮೂಲಕ ಭರವಸೆ

Tuesday, December 18th, 2018
chatisgarh

ಛತ್ತೀಸ್ಗಢ: ನಿನ್ನೆಯಷ್ಟೆ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಭೂಪೇಶ್ ಬಘೇಲ್ ಅವರು ರೈತರ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅಧಿಕಾರಿ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಮಧ್ಯಪ್ರದೇಶದ ರೈತರ ಸಾಲಮನ್ನಾ ಕಡತಗಳಿಗೆ ಸಹಿ ಹಾಕಿದ ಕಮಲ್ನಾಥ್ರ ಹಾದಿಯನ್ನೇ ಹಿಡಿದ ಬಘೇಲಾ ರೈತರಿಗೆ ಈ ಮೂಲಕ ಭರವಸೆ ತುಂಬಿದ್ದಾರೆ. ಸಿಎಂ ಆದ ಕೆಲ ಗಂಟೆಗಳಲ್ಲಿಯೇ ಮೂರು ಪ್ರಮುಖ ಘೋಷಣೆಗಳನ್ನು ಮಾಡಿದ ಬಘೇಲ್, ರೈತರ ಸಾಲಮನ್ನಾ, ಮೆಕ್ಕೆ ಜೋಳಕ್ಕೆ ಬೆಂಬಲ ಬೆಲೆ ಹಾಗೂ 2013 ರ ಝಿರಂ ಘಾಟಿ ಮಾವೋ […]

ಸಾಳ್ವಾಡಿ ದೇಗುಲ ದುರಂತ: ಏರುತ್ತಲೇ ಇದೆ ಸಾವಿನ ಸಂಖ್ಯೆ: 15 ಮಂದಿ ಮೃತ

Tuesday, December 18th, 2018
salwadi

ಚಾಮರಾಜನಗರ: ಸಾಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ಪ್ರಸಾದ ಸೇವಿಸಿ ಸಾವಿಗೀಡಾದವರ ಸಂಖ್ಯೆ ಏರುತ್ತಲೇ ಇದೆ. ಇಂದು ಮತ್ತೋರ್ವ ಮಹಿಳೆ ಮೃತಪಟ್ಟಿದ್ದು, ಸತ್ತವರ ಸಂಖ್ಯೆ 15ಕ್ಕೆ ಏರಿದೆ. ದೇಗುಲದಲ್ಲಿ ಪ್ರಸಾದ ಸೇವನೆಯಿಂದ ಅಸ್ಪಸ್ಥಗೊಂಡಿದ್ದ ದುಂಡಮ್ಮ ಎಂಬುವರು ಇಂದು ಕಾವೇರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಇವರು ಮಲೆಮಾದೇಶ್ವರಬೆಟ್ಟದ ಸಾಲೂರು ಮಠದ ರಸ್ತೆಯ ನಿವಾಸಿಯಾದ ನಾಗರಾಜ್ ಎಂಬುವರ ಪತ್ನಿ ಎಂದು ತಿಳಿದುಬಂದಿದೆ. ಆಸ್ಪತ್ರೆಗೆ ದಾಖಲಾದವರಲ್ಲಿ ಮೃತಪಟ್ಟವರ ಸಂಖ್ಯೆ ಹೆಚ್ಚುತ್ತಿದೆ. ಈ ಹಿಂದೆಯೂ ಅಪೋಲೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದ ಸಾಲಮ್ಮ(35) ಹಾಗೂ ಎಂ ಜಿ ದೊಡ್ಡಿಯ […]

ಇಂದು ಐಪಿಎಲ್​ ಹರಾಜು…ಈ ಆಟಗಾರರ ಮೇಲಿದೆ ಫ್ರಾಂಚೈಸಿಗಳ ಕಣ್ಣು..!

Tuesday, December 18th, 2018
premier-legue

ಜೈಪುರ: ಐಪಿಎಲ್ ಆರಂಭಕ್ಕೆ ಇನ್ನು ಕೆಲ ತಿಂಗಳು ಬಾಕಿ ಇರುವಂತೆ ಚಟುವಟಿಕೆಗಳು ಜೋರಾಗಿ ನಡೆಯುತ್ತಿದ್ದು, ಇಂದು ಜೈಪುರದಲ್ಲಿ ಆಟಗಾರರ ಹರಾಜು ಪ್ರಕ್ರಿಯೆ ನಡೆಯಲಿದೆ. ಈಗಾಗಲೇ ತಂಡದಲ್ಲಿ ಹಲವು ಆಟಗಾರರನ್ನು ಉಳಿಸಿಕೊಂಡಿರುವ ಫ್ರಾಂಚೈಸಿಗಳು ಇಂದಿನ ಹರಾಜಿನಲ್ಲಿ ಬಲಿಷ್ಠ ಆಟಗಾರರನ್ನು ಖರೀದಿ ಮಾಡಲು ಪ್ಲಾನ್ ಮಾಡಿವೆ. ವೆಸ್ಟ್ ಇಂಡೀಸ್ ತಂಡದ ಯುವ ಆಟಗಾರ ಶಿಮ್ರೋನ್ ಹೇಟ್ಮಯರ್ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ದೊಡ್ಡ ಮೊತ್ತಕ್ಕೆ ಬಿಕರಿಯಾಗುವ ಸಾಧ್ಯತೆ ಇದೆ. ಕೆಲ ತಿಂಗಳ ಹಿಂದೆ ಭಾರತ ಪ್ರವಾಸ ಕೈಗೊಂಡಿದ್ದ ವಿಂಡೀಸ್ ತಂಡದಲ್ಲಿ […]

ಹೆಣ್ಣು ಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ: ಪ್ರಸಾದ ಆಸ್ರಣ್ಣ

Tuesday, December 18th, 2018
kadri-temple

ಮಂಗಳೂರು: ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ಯಕ್ಷಗಾನ ಕ್ಷೇತ್ರ ವಿಸ್ತಾರವಾಗುತ್ತದೆ ಎಂದು ಶ್ರೀಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ಕಮಲಾ ದೇವಿಪ್ರಸಾದ ಅಸ್ರಣ್ಣ ಹೇಳಿದರು. ಕದ್ರಿ ರಾಜಾಂಗಣದಲ್ಲಿ ನಡೆದ ಬಾಲ ಯಕ್ಷಕೂಟ ದಶಮ ಸಂಭ್ರಮದ ಸಮಾರೋಪ ಸಮಾರಂಭದಲ್ಲಿ ಆಶೀವರ್ಚನ ನೀಡಿದರು. ಯಕ್ಷ ಗಾನ ಗಂಡು ಕಲೆ ಎಂದು ಹೇಳುತ್ತಾರೆ ಆದರೆ ಹೆಣ್ಣುಮಕ್ಕಳಿಗೆ ಯಕ್ಷಗಾನ ಕಲಿಸುವುದರಿಂದ ತಾಯಂದಿರು ತಮ್ಮ ಮಕ್ಕಳಿಗೆ ಯಕ್ಷಗಾನ ಕಲಿಯುತ್ತಾರೆ. ಹೀಗೆ ಯಕ್ಷಗಾನ ವ್ಯಾಪ್ತಿ ಹಿರಿದಾಗುತ್ತದೆ ಎಂದರು. ಅನೇಕ ಭಾರತೀಯ ಕಲೆಗಳನ್ನು ನೋಡಿದ್ದೇನೆ. ಯಕ್ಷಗಾನದಷ್ಟು ಸಂತೋಷವನ್ನು, ಸಂಭ್ರಮವನ್ನು ನೀಡುವ […]

ಕುಡಿದ ಮತ್ತಿನಲ್ಲಿ ಬೋಟಿನಲ್ಲಿ ಜಗಳ: ಸ್ನೇಹಿತನನ್ನು ಕೊಲೆ ಮಾಡಿ ಆರೋಪಿ ಪರಾರಿ..!

Tuesday, December 18th, 2018
murder

ಉಡುಪಿ: ಕುಡಿದ ಮತ್ತಿನಲ್ಲಿ ಸ್ನೇಹಿತರಿಬ್ಬರು ಜಗಳ ಮಾಡಿಕೊಂಡು,ಒಬ್ಬನನ್ನು ಕೊಲೆ ಮಾಡಿದ ಘಟನೆ ಮಲ್ಪೆ ಬಂದರಿನ ಬೋಟಿನ ಒಳಗೆ ನಡೆದಿದೆ. ಮೀನುಗಾರಿಕೆಗೆ ತೆರಳಿದ್ದ ಬೋಟ್‌ ರಿಪೇರಿಗೆ ಎಂದು ದಡಕ್ಕೆ ಬಂದಿತ್ತು. ಬೋಟಿನಲ್ಲಿದ್ದವರೆಲ್ಲಾ ಮನೆಗೆ ತೆರಳಿದ್ದರು.ಕೊಪ್ಪಳದ ಮಾರುತಿ ಮತ್ತು ಒರಿಸ್ಸದ ಪ್ರೀತಮ್ ಎಂಬವರು ಬೋಟಿನಲ್ಲಿ ಉಳಿದುಕೊಂಡಿದ್ದರು.ರಾತ್ರಿಯಲ್ಲಿ ಮಾರುತಿ ಮತ್ತು ಪ್ರೀತಮ್ ಬೋಟಿನ ಒಳಗೆ ಪಾರ್ಟಿ ಮಾಡಿದ್ದಾರೆ. ಕುಡಿದ ಮತ್ತಿನಲ್ಲಿ ಜಗಳ ಮಾಡಿಕೊಂಡು,ಮಾರುತಿ ಆಯುಧದಿಂದ ಪ್ರೀತಮ್ ಮೇಲೆ ಹಲ್ಲೆ ನಡೆಸಿದ್ದಾನೆ,ರಕ್ತದ ಮಡುವಿನಲ್ಲಿ ಪ್ರೀತಮ್ ಸಾವನ್ನಪ್ಪಿದ್ದಾನೆ.ನಂತರ ಆರೋಪಿ ಮಾರುತಿ ಪರಾರಿಯಾಗಿದ್ದಾನೆ. ಮಲ್ಪೆ ಪೊಲೀಸ್ […]

ಚರ್ಚ್ ನಾಶ ಮಾಡಿದ ಟಿಪ್ಪು ಜಯಂತಿಗೆ ಹೋಗದಂತೆ ದೇವರು ತಡೆದರು: ಪ್ರಮೋದ್ ಮಧ್ವರಾಜ್

Tuesday, December 18th, 2018
pramod

ಉಡುಪಿ: ಚರ್ಚ್ ನಾಶ ಮಾಡಿದ್ದಂತಹ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸದಂತೆ ದೇವರೇ ನನ್ನನ್ನು ತಡೆದರು’ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಮಾಡಿದ ಭಾಷಣ ದ ವಿಡಿಯೋ ವೈರಲ್ ಆಗಿದ್ದು ಸದ್ಯ ವಿವಾದಕ್ಕೆ ಕಾರಣವಾಗಿದೆ. ಡಿ.10ರಂದು ಬ್ರಹ್ಮಾವರ ಪೇತ್ರಿಯ ಸೇಂಟ್ ಪೀಟರ್ಸ್ ಚರ್ಚ್‌ನ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಇದೀಗಾ ವೈರಲ್ ಆಗಿದ್ದು ತೀವ್ರ ಚರ್ಚೆಗೆ ಕಾರಣವಾಗಿದೆ. ‘ವಿರೋಧವಿದ್ದರೂ ಕೂಡ ರಾಜ್ಯ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿರುವುದು ಸರಿಯೋ ತಪ್ಪೋ ಗೊತ್ತಿಲ್ಲ. ಆದರೆ […]

ವಿಜಯ್​​​ ಮಲ್ಯ ಸಾಲ ಮರುಪಾವತಿ ಕೇಸ್​​​​​​​​​​​​​​​​​​​: ವಿಚಾರಣೆ ಮುಂದೂಡಿದ ಹೈಕೋರ್ಟ್​

Tuesday, December 18th, 2018
vijay-malya

ಬೆಂಗಳೂರು: ಬಹುಕೋಟಿ ವಂಚನೆ ಆರೋಪ ಎದುರಿಸುತ್ತಿರುವ ಉದ್ಯಮಿ ವಿಜಯ್ ಮಲ್ಯ ಸಾಲದ ಮರುಪಾವತಿ ವಿಚಾರಣೆಯನ್ನು ಹೈಕೋರ್ಟ್ ಡಿಸೆಂಬರ್ 20ಕ್ಕೆ ಮುಂದೂಡಿದೆ. ಈ ಹಿಂದೆ ಇದೇ ಪ್ರಕರಣ ಹೈಕೋರ್ಟ್ನಲ್ಲಿ ವಿಚಾರಣೆಗೆ ಬಂದಿತ್ತು. ‘ವಿಜಯ್ ಮಲ್ಯಗೂ ಯುಎಸ್ಎಲ್ಗೂ ಸಂಬಂಧವಿಲ್ಲ. ಹೀಗಾಗಿ, ಐಡಿಬಿಐ ಸಾಲದಿಂದ ಯುಎಸ್ಎಲ್ ಮುಕ್ತಗೊಳಿಸಿ, ವಿಜಯ್ ಮಲ್ಯ ಕೇವಲ ಶೇ. 2 ರಷ್ಟು ಷೇರು ಹೊಂದಿದ್ದಾರೆ. ಯುಎಸ್ಎಲ್ ಪ್ರತ್ಯೇಕ ಕಂಪನಿ ಎಂದು ವಕೀಲ/ಕಾಂಗ್ರೆಸ್ ಮುಖಂಡ ಪಿ. ಚಿದಂಬರಂ ವಾದ ಮಂಡಿಸಿದ್ದರು. ಪಿ.ಚಿದಂಬರಂ ಅವರ ವಾದ ಒಪ್ಪದ ಐಡಿಬಿಐ ವಕೀಲರು, […]

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಿರುವುದು ಅಸ್ಪೃಶ್ಯತೆ: ಇಂದಿರಾ ಜೈಸಿಂಗ್​

Tuesday, December 18th, 2018
mangaluru

ಮಂಗಳೂರು: ಶಬರಿಮಲೆಯಲ್ಲಿ ಮಹಿಳೆಯರನ್ನು‌ ಸಂಪ್ರದಾಯದ ಹೆಸರಿನಲ್ಲಿ ಪ್ರವೇಶ ನಿಷೇಧ ಮಾಡಿರುವುದು ಒಂದು ರೀತಿಯ ಅಸ್ಪೃಶ್ಯತೆ ಎಂದು ಸರ್ವೋಚ್ಚ ನ್ಯಾಯಾಲಯದ ಹಿರಿಯ ಮಹಿಳಾ ನ್ಯಾಯವಾದಿ ಮತ್ತು ಭಾರತದ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಇಂದಿರಾ ಜೈಸಿಂಗ್ ಹೇಳಿದರು. ನಗರದ ಹಂಪನಕಟ್ಟೆಯಲ್ಲಿನ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಮಂಟಪದಲ್ಲಿ ಏರ್ಪಡಿಸಿದ್ದ ಬಿ.ವಿ.ಕಕ್ಕಿಲ್ಲಾಯ ಪ್ರೇರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಲಿಂಗ ಸಮಾನತೆ ವಿಷಯದ ಬಗ್ಗೆ ಅವರು ಮಾತನಾಡಿದರು. ನೇಪಾಳದಲ್ಲಿ ಹಿಂದೆ ಋತುಚಕ್ರದ ಸಂದರ್ಭ ಹೆಂಗಸರನ್ನು ದೇವಸ್ಥಾನ ಮಾತ್ರ ಅಲ್ಲ, […]