ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗೋ ಪೂಜೆ

Saturday, November 10th, 2018
congress

ಮಂಗಳೂರು: ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ವತಿಯಿಂದ ಕದ್ರಿ ಅಳ್ವಾರೀಸ್ ರಸ್ತೆಯಲ್ಲಿರುವ ದುರ್ಗಾ ಮಹಲ್ ನಲ್ಲಿ ಗೋ ಪೂಜೆಯನ್ನು ನಡೆಸಲಾಯಿತು. ಈ ಸಂದರ್ಭದಲ್ಲಿ ಮಂಗಳೂರು ನಗರ ಬ್ಲಾಕ್ ಮಹಿಳಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಶಾಂತಲಾ ಗಟ್ಟಿಯವರು ದೀಪಾವಳಿಯ ವಿಶೇಷತೆ ಹಾಗೂ ಗೋ ಪೂಜೆಯ ಮಹತ್ವವನ್ನು ತಿಳಿಸಿದರು. ಈ ಗೋ ಪೂಜೆಯನ್ನು ಮಾಜಿ ಶಾಸಕರಾದ ಶ್ರೀ ಜೆ. ಆರ್. ಲೋಬೊ ರವರ ಮಾರ್ಗದರ್ಶನದ ಮೇರೆಗೆ ನಡೆಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬ್ಲಾಕ್ ಅಧ್ಯಕ್ಷರಾದ ವಿಶ್ವಾಸ್ ಕುಮಾರ್ […]

ಟಿಪ್ಪು ಸುಲ್ತಾನ್​ ನಂತರ ಈ ರಾಜ್ಯವನ್ನು ಆಳಿದ ಮತಾಂಧ ಯಾರೆಂದು ಹೇಳಿದರೆ ಅದು ಸಿದ್ದರಾಮಯ್ಯ: ನಳಿನ್​ ಕುಮಾರ್ ವ್ಯಂಗ್ಯ

Saturday, November 10th, 2018
Tippu-protest-4

ಮಂಗಳೂರು: ರಾಜ್ಯದ ಸಿಎಂ ಕುಮಾರಸ್ವಾಮಿ‌ ಬಹಳ ಬುದ್ಧಿವಂತರು. ಸಿದ್ದರಾಮಯ್ಯ ಟಿಪ್ಪು ಜಯಂತಿಯನ್ನು ಆಚರಿಸುತ್ತಿದ್ದರು ಎಂಬ ಕಾರಣಕ್ಕೆ ತಾವು ಅಚರಿಸುತ್ತಿರುವುದಾಗಿ ಹೇಳಿದರು. ಕಾಂಗ್ರೆಸ್ನವರ ಋಣದಲ್ಲಿದ್ದಾರೆ ಎಂಬ ಕಾರಣಕ್ಕೆ ಅದನ್ನು ಮುಂದುವರಿಸಿದ್ದಾರೆ ಸಂಸದ ನಳಿನ್ ಕುಮಾರ್ ಕಟೀಲು ಕಿಡಿಕಾರಿದ್ದಾರೆ. ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ವಿರುದ್ಧ ದ.ಕ.ಜಿಲ್ಲಾ ಬಿಜೆಪಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದರು. ಸಿಎಂ ಟಿಪ್ಪು ಜಯಂತಿ ಕಾರ್ಯಕ್ರಮದಿಂದ ಅಂತರ ಕಾಯ್ದುಕೊಂಡು ಆಚೆಯೂ ಅಲ್ಲ, ಈಚೆಯೂ ಅಲ್ಲ ಅನ್ನುವಂತಾಗಿದೆ. ಅಲ್ಲದೆ, ಇದೇ […]

ಅಕ್ರಮ ಗಾಂಜಾ ಸಾಗಾಟ: ಮೂವರು ಆರೋಪಿಗಳ ಬಂಧನ

Saturday, November 10th, 2018
police-office

ಮಂಗಳೂರು: ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ನಗರದ ಉರ್ವ ಠಾಣಾ ವ್ಯಾಪ್ತಿಯ ಕೋಡಿಕಲ್ ಕ್ರಾಸ್ ಬಳಿ ರೌಡಿನಿಗ್ರಹ ದಳದ ಪೊಲೀಸರು ಬಂಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿ ಗ್ರಾಮದ ಕರೆಪ್ಪ ಲಕ್ಷ್ಮಣ ಸುಣದೋಳಿ (50), ಬಿಜಾಪುರ ಜಿಲ್ಲೆಯ ಕೋಲಾರ ಕುರುಬರ ದಿನ್ನಿ ಗ್ರಾಮದ ಗಂಗೆಪ್ಪ ಮಾದೆರ (39), ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕಾನಸಗೇರಿ ಗ್ರಾಮದ ಸಿದ್ದರಾಯಪ್ಪ ಕೂರಿ ಹೋಲಿ (36) ಬಂಧಿತ ಆರೋಪಿಗಳು. ಬಂಧಿತರಿಂದ 7.100 ಕೆ.ಜಿ. ಗಾಂಜಾ, 3 ಮೊಬೈಲ್ […]

ಕೊಡಗು ಸಭೆಯಲ್ಲಿ ಪ್ರವಾದಿ ನಿಂದನೆ  ನವೆಂಬರ್ 16 ರಂದು ಮಂಗಳೂರಲ್ಲಿ ಪ್ರತಿಭಟನೆ

Saturday, November 10th, 2018
asraf k

ಮಂಗಳೂರು  : ಇತ್ತೀಚೆಗೆ ಕೊಡಗುವಿನ ಗೋಣಿ ಕೊಪ್ಪಲುವಿನಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ವಿಚಾರ ಸಂಕಿರಣ ಕಾರ್ಯಕ್ರಮ ಒಂದರಲ್ಲಿ ಸಂತೋಷ ತಮ್ಮಯ್ಯ ಎಂಬ ಅಂಕಣಕಾರರೊಬ್ಬರು ಪ್ರವಾದಿ ಮಹಮ್ಮದ್ ರವರ ಜೀವನವನ್ನು ಪ್ರಸ್ತಾವಿಸಿ ಪ್ರವಾದಿವರ್ಯರು ಧಾರ್ಮಿಕ ಭಯೋತ್ಪಾದನೆಗೆ ಉತ್ತೇಜಿಸಿರುವುದಾಗಿ ಅವಹೇಳನಕಾರಿ ಹೇಳಿಕೆ ನೀಡಿ ಮತೀಯ ಉದ್ವಿಗ್ನತೆ ಸೃಷ್ಟಿಸಿ ಕೋಮುಗಲಭೆಯನ್ನುಂಟು ಮಾಡುವ ಹೀನ ಕೃತ್ಯವನ್ನು ಮುಸ್ಲಿಮ್ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ ಮತ್ತು ಕೃತ್ಯಕ್ಕೆ ಕಾರಣವಾದ ವ್ಯಕ್ತಿಯನ್ನು ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ದ.ಕ ಜಿಲ್ಲಾ ಮುಸ್ಲಿಮ್ ಸಂಘಟನೆಗಳ ಒಕ್ಕೂಟ, […]

ಹಿಂದೂಗಳ ಹತ್ಯೆ ಮಾಡಿದ ಮತಾಂಧ ಟಿಪ್ಪುವಿನ ಜಯಂತಿ ರದ್ದುಗೊಳಿಸಿ !

Friday, November 9th, 2018
Tippu

ಮಂಗಳೂರು : ಒಂದು ವೇಳೆ ಟಿಪ್ಪ್ಪು ಜಯಂತಿ ಹೀಗೆಯೇ ಮುಂದುವರಿದರೆ, ನಾಳೆ ಅಕ್ಬರ, ಬಾಬರ, ಅಫಜಲಖಾನ ಇವರ ಜಯಂತಿಗಳೂ ಪ್ರಾರಂಭವಾಗಿ ಭಾರತವು ಇಸ್ಲಾಮೀಕರಣವಾಗಲು ಆರಂಭವಾಗಬಹುದು ! ಕಳೆದ ಕೆಲವು ವರ್ಷಗಳಿಂದ ರಾಜ್ಯದಲ್ಲಿ ಟಿಪ್ಪು ಸುಲ್ತಾನನ ಜಯಂತಿಯನ್ನು ಆರಿಸಲಾಗುತ್ತಿದೆ. ಈಗ ಇದೇ ಟಿಪ್ಪುವಿನ ಜಯಂತಿ ಕೇವಲ ಕರ್ನಾಟಕದಲ್ಲಿಯಷ್ಟೇ ಅಲ್ಲ, ದೇಶದ ಅನೇಕ ರಾಜ್ಯಗಳಲ್ಲಿ ಪ್ರಾರಂಭವಾಗಿವೆ. ಯಾರು ಮೂಲ ಹಿಂದೂ ಹೆಸರಿರುವ ಮೈಸೂರನ್ನು ಬದಲಾಯಿಸಿ ಇಸ್ಲಾಮಿ ರಾಜ್ಯವೆಂದು ಟಿಪ್ಪು ಘೋಷಿಸಿದನೋ, ರಾಜ್ಯದ ಎಲ್ಲ ಕಾಫೀರರನ್ನು (ಮುಸಲ್ಮಾನೇತರರನ್ನು) ಮತಾಂತರಗೊಳಿಸಿ ಮುಸಲ್ಮಾನರನ್ನಾಗಿ ಮಾಡುತ್ತೇನೆಂದು ಪ್ರತಿಜ್ಞೆ […]

ಬಿಜೆಪಿ ಶಾಸಕ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ನವೆಂಬರ್ 10 ರಂದು ಉಡುಪಿಯಲ್ಲಿ ಟಿಪ್ಪು ಜಯಂತಿ ಆಚರಣೆ

Wednesday, November 7th, 2018
Raghupathi

ಉಡುಪಿ : ದಕ್ಷಿಣ ಕನ್ನಡದಲ್ಲಿ ಶಾಸಕರು ಟಿಪ್ಪು ಜಯಂತಿಗೆ ವಿರೋಧ ವ್ಯಕ್ತ ಪಡಿಸುತ್ತಿದ್ದರೂ ಉಡುಪಿಯಲ್ಲಿ ಮಾತ್ರ ಬಿಜೆಪಿ ಶಾಸಕರ ಅಧ್ಯಕ್ಷತೆಯಲ್ಲಿಯೇ ಟಿಪ್ಪು ಜಯಂತಿ ಆಚರಣೆ ನಡೆಯಲಿದೆ. ಉಡುಪಿಯಲ್ಲಿ ನವೆಂಬರ್ 10 ರಂದು  ಶಾಸಕ ರಘುಪತಿ ಭಟ್ ಅಧ್ಯಕ್ಷತೆಯಲ್ಲಿ ಟಿಪ್ಪು ಜಯಂತಿ ನಡೆಯಲಿದೆ. ಟಿಪ್ಪು ಜಯಂತಿಯ ಬಗ್ಗೆ ತೀವೃ ವಿರೋಧ ವ್ಯಕ್ತ ಪಡಿಸುತ್ತಿರುವ ಬಿಜೆಪಿಯ ಸಂಸದೆ ಶೋಭಾ ಕರಂದ್ಲಾಜೆ ಮುಖ್ಯ ಅತಿಥಿಯಾಗಿದ್ದಾರೆ. ಅವರ ಜೊತೆ ಬಿಜೆಪಿ ಶಾಸಕ ರಾದ  ಕುಂದಾಪುರ ವಿಧಾನ ಸಭಾ ಕ್ಷೇತ್ರದ ಹಾಲಾಡಿ ಶ್ರೀನಿವಾಸ ಶೆಟ್ಟಿ, […]

ಚೈತ್ರಾಗೆ ಜಾಮೀನು ಮಂಜೂರು, ನಿಮ್ಮ ನಾಟಕ ಎಲ್ಲ ಬೇಡ ಎಂದ ನ್ಯಾಯಾಧೀಶ

Wednesday, November 7th, 2018
chaitra

ಸುಳ್ಯ: ಸೋಮವಾರ ಬೆಳಗ್ಗೆ ಕೋರ್ಟಿಗೆ ಹಾಜರಾದ ಚೈತ್ರಾ ಅವರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಾಧೀಶರು ಚೈತ್ರಾಳ ಆರೋಗ್ಯ ವಿಚಾರಿಸಿದರು. ಈ ವೇಳೆ ಆಕೆಗೆ ಬುದ್ಧಿವಾದ ಹೇಳಿದ ನ್ಯಾಯಾಧೀಶರು, “ನಿಮ್ಮ ನಾಟಕ ಎಲ್ಲ ಬೇಡ. ಉತ್ತರ ಕನ್ನಡದ ನಾಟಕ ಯಕ್ಷಗಾನ, ತಾಳಮದ್ದಳೆ ಎಲ್ಲವನ್ನು ನಾನು ಕಂಡಿದ್ದೇನೆ. ನ್ಯಾಯಾ ಲಯಕ್ಕೆ ಹಾಜರಾಗುವ ಮೊದಲ ದಿನ ಆರೋಗ್ಯವಾಗಿಯೇ ಇದ್ದ ನಿಮಗೆ ತತ್‌ಕ್ಷಣ ಏನಾಯಿತು? ನಿಯತ್ತಿನಿಂದ ಜಾಮೀನು ಪಡೆಯಲು ಪ್ರಯತ್ನಿಸಿ. ಬದಲಿ ಸುಳ್ಳು ಹೇಳಿ ಆಸ್ಪತ್ರೆ ಸೇರಿಕೊಂಡು ತಪ್ಪಿಸಿಕೊಳ್ಳಬೇಡಿ’ ಎಂದರು. ಕುಕ್ಕೆ ಸುಬ್ರಹ್ಮಣ್ಯದ ಕಾಶಿಕಟ್ಟೆ ಬಳಿ […]

ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಗಳು ಕುಕ್ಕೆ ದೇವಸ್ಥಾನದ ಹೆಸರು ಬಳಸುವಂತಿಲ್ಲ

Wednesday, November 7th, 2018
Kukke Subrahmanya

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಹೆಸರು, ದೇವರ ಚಿತ್ರ, ಉತ್ಸವ ಮೂರ್ತಿ, ರಥೋತ್ಸವ, ಪ್ರವೇಶಗೋಪುರ, ಎಂಬ್ಲೆಮ್‌ ಹಾಗೂ ಕ್ಷೇತ್ರದ ಹೆಸರನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀಗಳು, ಅವರ ಟ್ರಸ್ಟ್‌ ಗಳು ಅಥವಾ ಸಂಬಂಧಿಕರು ಎಲ್ಲೂ ಬಳಸದಂತೆ ಸುಳ್ಯ ಜೆಎಂಎಫ್ ನ್ಯಾಯಾಲಯ ತಾತ್ಕಾಲಿಕ ಅದೇಶ ನೀಡಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸುಬ್ರಹ್ಮಣ್ಯ ದೇವಸ್ಥಾನವು ರಾಜ್ಯ ಸರಕಾರದ ಅಧೀನಕ್ಕೆ ಒಳಪಟ್ಟಿದ್ದು, ಧಾರ್ಮಿಕ ದತ್ತಿ ಕಾಯಿದೆ […]

ಮರಳುಗಾರಿಕೆಗೆ ಅಧಿಕ ದರ ವಸೂಲಿ ಮಾಡಿದರೆ ಕಂಟ್ರೋಲ್ ರೂಂಗೆ ದೂರು ಸಲ್ಲಿಸಬಹುದು

Wednesday, November 7th, 2018
Sand Act

ಮಂಗಳೂರು : ದ.ಕ.ಜಿಲ್ಲೆಯಲ್ಲಿ ನಾನ್ ಸಿಆರ್‌ಝಡ್ ಪ್ರದೇಶದಲ್ಲಿ ಮರಳುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಮರಳಿನ ದರ ನಿಗದಿಗೆ ಕಂಟ್ರೋಲ್ ರೂಂ ಸ್ಥಾಪಿಸಲಾಗುವುದು. ಅಧಿಕ ದರ ವಸೂಲಿ ಮಾಡಿದರೆ ಈ ಕಂಟ್ರೋಲ್ ರೂಂಗೆ ದೂರು ಸಲ್ಲಿಸಬಹುದಾಗಿದೆ ಎಂದು ದ.ಕ.ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ದ.ಕ.ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು ಸಿಆರ್‌ಝಡ್ ವ್ಯಾಪ್ತಿಯ 76 ಕಡೆ ಮರಳುಗಾರಿಕೆಗೆ ದಕ್ಕೆಗಳನ್ನು ಗುರುತಿಸಲಾಗಿದೆ. ಆದರೆ, ಅಲ್ಲಿನ ಮರಳು ಬಳಕೆಗೆ ಹೆಚ್ಚು ಸೂಕ್ತವಲ್ಲದ ಕಾರಣ ನಾನ್ ಸಿಆರ್‌ಝಡ್ […]

ದೀಪಾವಳಿ ಆಚರಣೆ ನಮ್ಮಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಿ – ಎಸ್. ಗಣೇಶ್ ರಾವ್

Wednesday, November 7th, 2018
Karavali-college

ಮಂಗಳೂರು : ದೀಪದ ಬೆಳಕಿನೊಂದಿಗೆ ಜ್ಞಾನ, ಅಭಿವೃದ್ಧಿ, ಏಕತೆ, ತ್ಯಾಗ, ಶಿಕ್ಷಣ, ಧೈರ್ಯ ಹೀಗೆ ಹಲವಾರು ಗುಣಾತ್ಮಕ ಅಂಶಗಳ ಪ್ರತೀಕವೇ ದೀಪಾವಳಿ. ಕತ್ತಲನ್ನು ಓಡಿಸುವ ದೀಪ ಮನೆಮನಗಳಲ್ಲಿ ಸಂತಸವನ್ನು ಮೂಡಿಸುತ್ತದೆ. ದೀಪಾವಳಿ ಆಚರಣೆ ನಮ್ಮಲ್ಲಿ ಧನಾತ್ಮಕ ಬದಲಾವಣೆಯನ್ನು ತರಲಿ ಎಂದು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಜಿ. ಆರ್ ಎಜ್ಯುಕೇಶನ್ ಟ್ರಸ್ಟ್ (ರಿ)ನ ಸ್ಥಾಪಕಾಧ್ಯಕ್ಷರಾದ ಎಸ್. ಗಣೇಶ್ ರಾವ್ ರವರು ನಗರದ ಕೋಟ್ಟಾರ ಚೌಕಿ ಸಮೀಪದ ಪ್ರತಿಷ್ಠಿತ ಕರಾವಳಿ ಕಾಲೇಜು ಆವರಣದಲ್ಲಿ ಆಚರಿಸಲಾದ ದೀಪಾವಳಿ ಆಚರಣೆಯನ್ನು […]