ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ ಉದ್ಘಾಟನೆ

Monday, October 4th, 2010
ಧರ್ಮಸ್ಥಳದಲ್ಲಿ ಭಜನೋತ್ಸವ ಸಮಾರಂಭ

ಧರ್ಮಸ್ಥಳ : ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಜನೋತ್ಸವ ಸಮಾರಂಭವನ್ನು ಧರ್ಮಸ್ಥಳದಲ್ಲಿ ಭಾನುವಾರ ಉದ್ಘಾಟಿಸಿದರು. ಖ್ಯಾತ ಸಂಗೀತ ನಿರ್ದೇಶಕರಾದ ಹಂಸಲೇಖ, ಹೇಮಾವತಿ ವಿ. ಹೆಗ್ಗಡೆಯವರು, ಮಾಣಿಲದ ಮೋಹನದಾಸ ಸ್ವಾಮೀಜಿ ರಾಜ್ಯ ಸರಕಾರ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್, ಚಲನಚಿತ್ರ ನಟ ಟೆನಿಸ್ ಕೃಷ್ಣ, ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು. ಭಕುತ ಜನ ಮುಂದೆ, ನೀನವರ ಹಿಂದೆ, ಇಂದಿನ ವಾರ ಶುಭವಾರ, ಇಂದಿನ ದಿನವೇ ಶುಭ ದಿನವು ಧರ್ಮಸ್ಥಳಾಧೀಶ ಶರಣಂ, ಜಗದೀಶ, […]

ನಗರದ ರಾಜರಾಜೇಶ್ವರಿ ಮೆಡಿಕಲ್ ಕಾಲೇಜಿನ ವೈದ್ಯರ ಸಾಧನೆ : ಮಹಿಳೆಯ ಹೊಟ್ಟೆಯಲ್ಲಿದ್ದ 4 ಕೆ.ಜಿ. ಗುಲ್ಮಕ್ಕೆ ಶಸ್ತ್ರಚಿಕಿತ್ಸೆ

Friday, September 24th, 2010
ಮಹಿಳೆಯ ಹೊಟ್ಟೆಯಲ್ಲಿದ 4 ಕೆ.ಜಿ. ಗುಲ್ಮ

ಬೆಂಗಳೂರು: ಮಹಿಳೆಯೊಬ್ಬರ ಹೊಟ್ಟೆಯಲ್ಲಿ 4 ಕೆ.ಜಿ. ಗಾತ್ರಕ್ಕೆ ಬೆಳೆದಿದ್ದ ಗುಲ್ಮವನ್ನು (ಸ್ಪ್ಲೀನ್) ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕುವಲ್ಲಿ ನಗರದ ರಾಜರಾಜೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯರು ಸಫಲರಾಗಿದ್ದಾರೆ. 40 ವರ್ಷ ಪ್ರಾಯದ ಈ ಮಹಿಳೆ ತೀವ್ರ ಹೊಟ್ಟೆನೋವು ಮತ್ತು ಹಸಿವೆಯೇ ಇಲ್ಲದಿರುವಿಕೆಯ ಸ್ಥಿತಿಯೊಂದಿಗೆ ಆಸ್ಪತ್ರೆಗೆ ಬಂದಿದ್ದರು. ಮೊದಲಿಗೆ ವೈದ್ಯರು ಇದು ತೀವ್ರ ಮಲೇರಿಯಾ ಪ್ರಕರಣ ಎಂದು ಭಾವಿಸಿದ್ದರು. ಆದರೆ ಬಳಿಕ ಇದು ಗುಲ್ಮದ ಹಾನಿಕರ ಗೆಡ್ಡೆ ಎಂಬುದು ಗೊತ್ತಾಯಿತು. ಇದೊಂದು ಅಪರೂಪದ ಪ್ರಕರಣವಾಗಿದ್ದು, ನಾನ್-ಹೊಡ್ಜ್ಕಿಮ್ಸ್ ಲಿಂಫೋಮಾ […]

ಅಯೋಧ್ಯ ವಿವಾದದ ತೀರ್ಪು ಮುಂದಕ್ಕೆ : ಜಿಲ್ಲಾಡಳಿತ ಹೊರಡಿಸಿರುವ ಆದೇಶ ರದ್ದು

Thursday, September 23rd, 2010
ಅಯೋಧ್ಯೆ

ಮಂಗಳೂರು : ರಾಮ ಜನ್ಮಭೂಮಿ- ಬಾಬ್ರಿ ಮಸೀದಿ ವಿವಾದದ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ತಡೆಹಿಡಿದ ಹಿನ್ನಲೆಯಲ್ಲಿ ಶುಕ್ರವಾರ ಪ್ರಕಟವಾಗಬೇಕಿದ್ದ ತೀರ್ಪು ಸೆಪ್ಟೆಂಬರ್ 28 ಕ್ಕೆ ಮುಂದೂಡಲಾಗಿದೆ. ರಮೇಶ್ ಚಂದ್ರ ತ್ರಿಪಾಠಿ ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಹಿನ್ನಲೆಯಲ್ಲಿ ಅಲಹಾಬಾದ್ ಹೈಕೋರ್ಟಿನ ಲಕ್ನೋ ವಿಶೇಷ ಪೀಠವು ಶುಕ್ರವಾರ ಅಪರಾಹ್ನ ಪ್ರಕಟಿಸ ಬೇಕಿದ್ದ ತೀರ್ಪನ್ನು ಮುಂದೂಡಿದೆ. ತ್ರಿಪಾಠಿಯ  ಅರ್ಜಿಯನ್ನು ಮತ್ತೊಂದು ಪೀಠವು ವಿಚಾರಣೆ ನಡೆಸಲಿದ್ದು.  ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ನ್ಯಾಯಾಲಯ ಮುಂದೂಡಿ, ಆ ತನಕ ಅಲಹಾಬಾದ್ ಹೈಕೋರ್ಟ್ ತೀರ್ಪು […]

ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

Saturday, August 21st, 2010
ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್

ಮಂಗಳೂರು : 14ನೇ ಏಷಿಯನ್ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದ ಶರಣ್ಯ ಮಹೇಶ್ ಕುರಿತು ಇಂದು ಬೆಳಗ್ಗೆ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಗಿತ್ತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಡಾ||ಜೆಸ್ಸಿ ಮರಿಯಾ ಡಿ ಸೋಜಾ, ಮಂಗಳೂರು ರೋಲರ್ ಸ್ಕೇಟಿಂಗ್ ಕ್ಲಬ್ ಸದಸ್ಯೆಯಾದ ಶರಣ್ಯ ಮಹೇಶ್ ಜುಲೈ 19 ರಿಂದ 25 ರವರೆಗೆ ಚೈನೀಸ್ ತೈಪೇ ಯಲ್ಲಿ ನಡೆದ 14ನೇ ಏಷಿಯನ್ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧಾಕೂಟದಲ್ಲಿ 15 ಕ್ಕಿಂತಲೂ ಹೆಚ್ಚು ದೇಶಗಳು ಭಾಗವಹಿಸಿದ್ದವು. […]

ಇಕೋಲಾರ್ಟ್ 2010 ಪ್ರದರ್ಶನ

Saturday, August 21st, 2010
ಇಕೋಲಾರ್ಟ್ 2010 ಪ್ರದರ್ಶನ

ಮಂಗಳೂರು : ಇಕೋಲಾರ್ಟ್-2010, ಪ್ರಕೃತಿ ಹಾಗೂ ಜಾಗತಿಕ ತಾಪಮಾನ ಬದಲಾವಣೆಯ ಕುರಿತು ಚಿತ್ರಕಲಾ ಪ್ರದರ್ಶನ ಮತ್ತು ಸಿನಿಮಾ ಪ್ರದರ್ಶನವು ಮಂಗಳೂರು ವಿಶ್ವವಿದ್ಯಾನಿಲಯ, ಎನ್.ಜಿ ಪಾವಂಜಿ ಚೇರ್ ಇನ್ ಫೈನ್ ಆರ್ಟ್ಸ್, ಬ್ರಿಟೀಷ್ ಕೌನ್ಸಿಲ್, ಚೆನೈ ಅಸೋಸಿಯೇಶನ್ ಆಫ್ ಬ್ರಿಟೀಷ್ ಸ್ಕಾಲರ್ಸ್ ಆರ್ಟಿಸ್ಟ್ ಕಂಬೈನ್ ಸಯನ್ಸ್ ಪೋರಮ್, ವಿಶ್ವವಿದ್ಯಾನಿಲಯ ಕಾಲೇಜಿನ ಸಹಬಾಗಿತ್ವದಲ್ಲಿ ಶುಕ್ರವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿತು. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಟಿ.ಸಿ ಶಿವಶಂಕರ ಮೂರ್ತಿಯವರು, ಕಂಚದಲ್ಲಿ ಚಿತ್ರ ಬಿಡಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. […]