ಐಪಿಎಲ್​ನಿಂದ ಹೊರಬಿದ್ದ ಜೋಫ್ರಾ ಆರ್ಚರ್

Friday, February 7th, 2020
vegi

ಲಂಡನ್ : ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಬಲ ಮೊಣಕೈ ನೋವಿನಿಂದಾಗಿ ಮುಂಬರುವ ಐಪಿಎಲ್ನಿಂದ ಹೊರಬಿದ್ದಿದ್ದಾರೆ. ಇದರಿಂದ ಟೂರ್ನಿಯ ಆರಂಭಕ್ಕೂ ಮುನ್ನವೇ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಭಾರಿ ಹಿನ್ನಡೆಯುಂಟಾಗಿದೆ. ಜೋಫ್ರಾ ಆರ್ಚರ್ ಗಾಯದಿಂದಾಗಿ ಮುಂದಿನ ಮೂರು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದು, ಮುಂಬರುವ ಶ್ರೀಲಂಕಾ ಪ್ರವಾಸದಿಂದಲೂ ಹೊರಗುಳಿಯಲಿದ್ದಾರೆ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ (ಇಸಿಬಿ) ತಿಳಿಸಿದೆ. ಬಾರ್ಬಡೋಸ್ ಮೂಲದ 24 ವರ್ಷದ ಆರ್ಚರ್ ಕಳೆದ ಡಿಸೆಂಬರ್ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ […]

ಬಾಲ್ ಬ್ಯಾಡ್ಮಿಂಟನ್‌ ಚ್ಯಾಂಪಿಯನ್‌ಷಿಪ್ : ಮಂಗಳೂರು ವಿವಿ ಸತತ 8ನೇ ಬಾರಿ ಸೆಮಿಪೈನಲ್ ಲೀಗ್ ಹಂತಕ್ಕೆ

Saturday, February 1st, 2020
vidyagiri

ವಿದ್ಯಾಗಿರಿ : ಅಖಿಲ ಭಾರತ ಅಂತರ್ ವಿವಿ ಬಾಲ್ ಬ್ಯಾಡ್ಮಿಂಟನ್ ಚ್ಯಾಂಪಿಯನ್‌ಷಿಪ್‌ನಲ್ಲಿ ಮಂಗಳೂರು ವಿವಿಯ ಪುರುಷರ ತಂಡ ಸತತ 8ನೇ ಬಾರಿಗೆ ಸೆಮಿ ಪೈನಲ್‌ಲೀಗ್ ಹಂತಕ್ಕೆ ಅರ್ಹತೆಯನ್ನು ಪಡೆದಿದೆ. ಮಂಗಳೂರು ವಿವಿಯ ಜತೆಗೆ ವಿಶಾಖಪಟ್ಟಣಂನ ಆಂಧ್ರ ವಿವಿ, ಚೆನ್ನೈನ ಯುನಿವರ್ಸಿಟಿ ಆಫ್ ಮದ್ರಾಸ್, ತಮಿಳುನಾಡಿನ ಎಸ್.ಆರ್.ಎಮ್‌ಯುನಿವರ್ಸಿಟಿ ಆಫ್ ಸೈನ್ಸ್ ಆಂಡ್ ಟೆಕ್ನಾಲಜಿ ಸೆಮಿಪೈನಲ್ ಲೀಗ್ ಹಂತಕ್ಕೆ ಅರ್ಹತೆ ಪಡೆದ ಇತರ ತಂಡಗಳು. ಮೂರನೇ ದಿನ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಮಂಗಳೂರು ವಿವಿಯು ಭಾರತಿದಾಸನ್ ವಿವಿಯನ್ನು 35-25, […]

ಕರಾವಳಿ ಕಾಲೇಜಿನ ಯೂಸುಫ್ ಹಫೀಝ್‌ಗೆ ರಾಷ್ಟ್ರ ಮಟ್ಟದ ಟ್ವೆಕಾಂಡೋ ಚಾಂಪಿಯನ್‌ಶಿಪ್‌ನಲ್ಲಿ 4 ಚಿನ್ನದ ಪದಕ ಮತ್ತು 2 ಬೆಳ್ಳಿ ಪದಕ

Saturday, February 1st, 2020
hafeez

ಮಂಗಳೂರು : ನಗರದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಕಾಲೇಜಿನ ಪಾಲಿಟೆಕ್ನಿಕ್ ಡಿಪ್ಲೋಮಾ ಇನ್ ಅರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಯೂಸುಫ್ ಹಫೀಝ್ ಇವರು ಬೆಂಗಳೂರಿನ ರಾಜಾಜಿ ನಗರದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರ ಮಟ್ಟದ 3ನೇ ವಿಫಾ ಕಪ್ ಟ್ವೆಕಾಂಡೋ ಚಾಂಪಿಯನ್‌ಶಿಪ್‌ನ 47 ಕೆ.ಜಿ ಜ್ಯೂನಿಯರ್ ವಿಭಾಗದ ಕ್ಯೋರೋಗಿ ವಿಭಾಗದಲ್ಲಿ ಚಿನ್ನ ಮತ್ತು ಪೂಮ್ಸೆ ವಿಭಾಗದಲ್ಲಿ ಬೆಳ್ಳಿಯ ಪದಕ ಹಾಗೂ ಮಲ್ಲೇಶ್ವರಂನಲ್ಲಿ ನಡೆದ ರಾಜ್ಯ ಮಟ್ಟದ ಸೌತ್ ಝೋನ್ ಟ್ವೆಕಾಂಡೋ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನ ಮತ್ತು ಬೆಳ್ಳಿ […]

ಪ್ರಶಸ್ತಿ ಸುತ್ತಿಗೇರಿದ ಆಸ್ಟ್ರೇಲಿಯಾದ ಡೊಮಿನಿಕ್ ಥೀಮ್ : ನಾಳೆ ನೊವಾಕ್ ಜೋಕೊವಿಕ್ ವಿರುದ್ಧ ಫೈನಲ್ ಹಣಾಹಣಿ

Saturday, February 1st, 2020
ashtrelia

ಮೆಲ್ಬೋರ್ನ್ : ಆಸ್ಟ್ರೇಲಿಯಾದ ಡೊಮಿನಿಕ್ ಥೀಮ್ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಫೈನಲ್ಗೇರಿದ್ದು, ಹಾಲಿ ಚಾಂಪಿಯನ್ ನೊವಾಕ್ ಜೋಕೊವಿಕ್ ವಿರುದ್ಧ ಭಾನುವಾರ ಪ್ರಶಸ್ತಿ ಹೋರಾಟ ನಡೆಸಲಿದ್ದಾರೆ. ರಾಡ್ ಲೆವರ್ ಅರೆನಾದಲ್ಲಿ ಶುಕ್ರವಾರ ನಡೆದ ಯುವ ಆಟಗಾರರ ನಡುವಿನ ಸೆಮಿಫೈನಲ್ ಪಂದ್ಯದಲ್ಲಿ 5ನೇ ಶ್ರೇಯಾಂಕಿತ ಥೀಮ್ 3-6, 6-4, 7-6 (7-3), 7-6 (7-4) ಸೆಟ್ಗಳಿಂದ 7ನೇ ಶ್ರೇಯಾಂಕಿತ ಜರ್ಮನಿಯ ಅಲೆಕ್ಸಾಂಡರ್ ಜ್ವೆರೇವ್ ವಿರುದ್ಧ ಗೆಲುವು ದಾಖಲಿಸಿದರು. 3 […]

ಆಳ್ವಾಸ್ ಸಾರಥ್ಯ|ಕ್ರೀಡೆಗೆ ಬೌದ್ಧಿಕ, ಮಾನಸಿಕ, ದೈಹಿಕ ಸಮಸ್ಥಿತಿ ಮುಖ್ಯ : ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್.ಎಸ್.ಪುಟ್ಟರಾಜು

Wednesday, January 29th, 2020
badmitan

ಮೂಡಬಿದಿರೆ : ಕ್ರೀಡಾಪಟು ಸ್ಪರ್ಧೆಗೆ ಇಳಿಯುವುದಕ್ಕಿಂತ ಮೊದಲು ಕ್ರೀಡಾ ಮನೋಧರ್ಮವನ್ನು ಹೊಂದಿದವನಾಗಿರಬೇಕು. ಕ್ರೀಡಾ ಸ್ಫೂರ್ತಿಯಿಂದ ಕ್ರೀಡೆಯಲ್ಲಿ ಸೋಲು ಗೆಲುವನ್ನು ಸ್ವೀಕರಿಸಬೇಕೆಂದು ಕರ್ನಾಟಕ ಬಾಲ್ ಬ್ಯಾಡ್ಮಿಂಟನ್ ತಂಡದ ಮಾಜಿ ಆಟಗಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಎಮ್. ಎಸ್. ಪುಟ್ಟರಾಜು ಹೇಳಿದರು. ಆಳ್ವಾಸ್ ಕಾಲೇಜಿನ ಕ್ರೀಡಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಮತ್ತು ಆಳ್ವಾಸ್ ಕಾಲೇಜಿನ ಜಂಟಿ ಆಶ್ರಯದಲ್ಲಿ ನಡೆದ ಅಖಿಲ ಭಾರತ ವಿಶ್ವವಿದ್ಯಾಲಯ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯು ವೈಯಕ್ತಿಕ ಪರಿಶ್ರಮ ಕಲೆ. ಪ್ರತಿಯೊಂದು ಸೋಲಿನಲ್ಲಿಯೂ […]

ರೋಜರ್ ಫೆಡರರ್ ಗ್ರೇಟ್ ಎಸ್ಕೇಪ್ : ಉಪಾಂತ್ಯಕ್ಕೇರಿದ ಸ್ವಿಸ್​ ದಿಗ್ಗಜ

Wednesday, January 29th, 2020
Rozar

ಮೆಲ್ಬೋರ್ನ್ : ಏಳನೇ ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಜಯಿಸುವ ಹಂಬಲದಲ್ಲಿರುವ ಸ್ವಿಸ್ ದಿಗ್ಗಜ ರೋಜರ್ ಫೆಡರರ್ ಏಳು ಬಾರಿ ಮ್ಯಾಚ್ ಪಾಯಿಂಟ್ ರಕ್ಷಿಸಿಕೊಂಡು ರೋಚಕ ಗೆಲುವು ದಾಖಲಿಸುವ ಮೂಲಕ ಸೆಮಿಫೈನಲ್ಗೇರಿದ್ದು, ಹಾಲಿ ಚಾಂಪಿಯನ್ ಸೆರ್ಬಿಯಾದ ತಾರೆ ನೊವಾಕ್ ಜೋಕೊವಿಕ್ ಸವಾಲು ಎದುರಿಸಲು ಸಜ್ಜಾಗಿದ್ದಾರೆ. ಮಹಿಳಾ ಸಿಂಗಲ್ಸ್ ವಿಭಾಗದಲ್ಲಿ ಆತಿಥೇಯರ ಆಶಾಕಿರಣವಾಗಿರುವ ವಿಶ್ವ ನಂ.1 ಆಟಗಾರ್ತಿ ಆಶ್ಲೆಗ್ ಬಾರ್ಟಿ ಮತ್ತು ಅಮೆರಿಕದ ಯುವ ಆಟಗಾರ್ತಿ ಸೋಫಿಯಾ ಕೆನಿನ್ ಉಪಾಂತ್ಯಕ್ಕೇರಿದ್ದಾರೆ. 38 ವರ್ಷದ ಫೆಡರರ್, ರಾಡ್ ಲೆವರ್ ಅರೆನಾದಲ್ಲಿ […]

ಅಮೆಚೂರು ಕಬಡ್ಡಿ ಅಸೋಸಿಯೇಶನ್‌ ನಲ್ಲಿ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆಗೆ ಪ್ರಥಮ ಬಹುಮಾನ

Tuesday, January 21st, 2020
kabaddi

ಮಂಗಳೂರು : ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಶನ್ ರಿ. ಮಂಗಳೂರು ಹಾಗೂ ಮಂಗಳೂರು ತಾಲೂಕು ಗ್ರಾಮಾಂತರ ಅಮೆಚೂರು ಕಬಡ್ಡಿ ಅಸೋಸಿಯೇಶನ್‌ನ ಸಹಭಾಗಿತ್ವದೊಂದಿಗೆ ಟೀಂರ‍್ಯಾಪರ‍್ಸ್ ಕುಂಪಲ ಹಮ್ಮಿಕೊಂಡಿದ್ದ ದ.ಕ. ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾಟದಲ್ಲಿ ಶ್ರೀ ವಿದ್ಯಾಂಜನೇಯ ವ್ಯಾಯಾಮ ಶಾಲೆ, ಉಳ್ಳಾಲ ತಂಡವು ಪ್ರಥಮ ಬಹುಮಾನದ ಟ್ರೋಫಿ ಹಾಗೂ ನಗದು ರೂ 12,000ವನ್ನು ಗೆದ್ದುಕೊಂಡಿದೆ. ಕಾಪಿಕಾಡ್‌ನ ಉಮಾಮಹೇಶ್ವರಿ ತಂಡ ದ್ವಿತೀಯ ಸ್ಥಾನಿಯಾಗಿದ್ದು ಟ್ರೋಫಿ ಹಾಗೂ ರೂ. 7,000 ನಗದನ್ನು ಗಳಿಸಿಕೊಂಡಿದೆ. ಶ್ರೀ ವಿದ್ಯಾಂಜನೇಯ ತಂಡದ […]

ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶ

Thursday, January 16th, 2020
charulatha

ನವದೆಹಲಿ : 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದಿದ್ದ ಪುರುಷರ ಕ್ರಿಕೆಟ್ ವಿಶ್ವಕಪ್ ವೇಳೆ ಸಾಕಷ್ಟು ಸುದ್ದಿ ಮಾಡಿದ್ದ ಟೀಂ ಇಂಡಿಯಾ ಹಿರಿಯ ಅಭಿಮಾನಿ ಚಾರುಲತಾ ಪಟೇಲ್ ವಿಧಿವಶರಾಗಿದ್ದಾರೆ. 87 ವರ್ಷದ ಚಾರುಲತಾ ಪಟೇಲ್ ಅವರು ವಿಶ್ವಕಪ್ ಪಂದ್ಯದ ವೇಳೆ ಭಾರಿ ಜನಪ್ರೀಯತೆ ಪಡೆದಿದ್ದ ಸೂಪರ್ ಫ್ಯಾನ್ ಅಜ್ಜಿ ಜನವರಿ 13ರಂದು ಮೃತರಾಗಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಪ್ರಕಟಿಸಿದೆ. ವಿಶ್ವಕಪ್ ನಲ್ಲಿ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಪಂದ್ಯ ವೀಕ್ಷಣೆಗೆ ಮೈದಾನಕ್ಕೆ ಆಗಮಿಸಿದ್ದ ಅಜ್ಜಿ […]

ಹೊಸ ಹುಮ್ಮಸ್ಸಿನಲ್ಲಿ ಪಿವಿ ಸಿಂಧು, ಸೈನಾ ನೆಹ್ವಾಲ್

Tuesday, January 7th, 2020
sindhu-and-saina

ಕೌಲಾಲಂಪುರ : ಹೊಸ ವರ್ಷದ ಮೊದಲ ಸವಾಲಿಗೆ ಸಜ್ಜಾಗಿರುವ ಹಾಲಿ ವಿಶ್ವ ಚಾಂಪಿಯನ್ ಪಿವಿ ಸಿಂಧು, ಅನುಭವಿ ಷಟ್ಲರ್ ಸೈನಾ ನೆಹ್ವಾಲ್ ಶುಭಾರಂಭದ ನಿರೀಕ್ಷೆಯೊಂದಿಗೆ ಮಂಗಳವಾರ ದಿಂದ ಮಲೇಷ್ಯಾ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಕಳೆದ ವರ್ಷ ಸ್ವಿಜರ್ಲೆಂಡ್ನ ಬಸೆಲ್ ನಲ್ಲಿ ವಿಶ್ವ ಚಾಂಪಿಯನ್ ಪಟ್ಟಕ್ಕೇರಿ ಐತಿಹಾಸಿಕ ಸಾಧನೆ ಮೆರೆದರೂ ಬಳಿಕ ಸತತ ಸೋಲುಗಳಿಂದ ಕಂಗೆಟ್ಟಿರುವ ಸಿಂಧು ಗೆಲುವಿನ ಹಾದಿಗೆ ಮರಳುವ ಹಂಬಲದಲ್ಲಿದ್ದಾರೆ. ಗಾಯದ ಸಮಸ್ಯೆ ಯಿಂದಾಗಿ ಕಳೆದ ನವೆಂಬರ್ನಲ್ಲಿ ಸಯ್ಯದ್ ಮೋದಿ ಇಂಟರ್ನ್ಯಾಷನಲ್ […]

ಮೂಡುಬಿದಿರೆ : 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ಷಿಪ್

Monday, January 6th, 2020
moodbidri

ಮೂಡುಬಿದಿರೆ : 2೦ಕಿಮೀ. ನಡಿಗೆಯಲ್ಲಿ ಕೂಟ ದಾಖಲೆ ನಿರ್ಮಿಸಿದ್ದ ಮಂಗಳೂರು ವಿವಿಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ನರೇಂದ್ರ ಪ್ರತಾಪ್ ನಾಲ್ಕನೇ ದಿನ 5 ಸಾವಿರ ಮೀ. ಓಟದಲ್ಲಿಯೂ ಕೂಟ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿನ ಸ್ವರಾಜ್ಯ ಮೈದಾನದಲ್ಲಿ ನಡೆಯುತ್ತಿರುವ 80ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ ಚಾಂಪಿಯನ್‌ನ ನಾಲ್ಕನೇ ದಿನವಾದ ಭಾನುವಾರ ಪುರುಷರ ವಿಭಾಗದ 5 ಸಾವಿರ ಮೀಟರ್(5ಕಿ.ಮೀ.) ಓಟವನ್ನು 14ನಿಮಿಷ 17.77ಸೆಕೆಂಡ್ ನಲ್ಲಿ ಕ್ರಮಿಸಿದ ನರೇಂದ್ರ ಪ್ರತಾಪ್ ಸಿಂಗ್, ಪಂಜಾಬಿ ವಿವಿಯ ಸುರೇಶ್ ಕುಮಾರ್ (14 […]