ಸಲಿಂಗಕಾಮಿಗಳಿಗೆ ಇತರ ನಾಗರಿಕರಂತೆ ಸಮಾನ ಹಕ್ಕು : ಸುಪ್ರಿಂಕೋರ್ಟ್

Thursday, September 6th, 2018
transgender

ಬೆಂಗಳೂರು:  ನಿಸರ್ಗ ವಿರುದ್ಧವಾದ ಲೈಂಗಿಕ ಸಂಬಂಧ ಅಪರಾಧ’ ಎನ್ನುವ ಐಪಿಸಿ ಸೆಕ್ಷನ್ 377ರ ಅನ್ವಯ ಅಪರಾಧಿಗಳಿಗೆ ದಂಡ, ಜೈಲು ಶಿಕ್ಷೆ ವಿಧಿಸಲು ಅವಕಾಶ ಕಲ್ಪಿಸಿತ್ತು. ಈ ಕಾನೂನನ್ನು ಪೊಲೀಸರು ಎಲ್‌ಜಿಬಿಟಿ ಸಮುದಾಯದ ಶೋಷಣೆಗೆ ಬಳಸುತ್ತಿದ್ದಾರೆ ಎಂಬ ಆರೋಪಗಳು ವ್ಯಾಪಕವಾಗಿದ್ದವು. 2009ರಲ್ಲಿ ದೆಹಲಿ ಹೈಕೋರ್ಟ್‌ ಸಲಿಂಗ ಕಾಮ ಅಪರಾಧವಲ್ಲ ಎಂದಿತ್ತು. 2013ರಲ್ಲಿ ಈ ತೀರ್ಪನ್ನು ಸುಪ್ರೀಂಕೋರ್ಟ್ ವಜಾ ಮಾಡಿತ್ತು. ನಿರ್ಬಂಧ ಹಿಂಪಡೆಯುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ಅದೇ ವರ್ಷ ಡಿಸೆಂಬರ್ ತಿಂಗಳಲ್ಲಿ ಮನವಿ ಮಾಡಿತ್ತು. ಈ ಮನವಿಯನ್ನು […]

ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪ..ಚಂದನ್ ಶೆಟ್ಟಿಗೆ ಬಿಗ್ ರಿಲೀಫ್!

Tuesday, September 4th, 2018
chandan-shetty

ಬೆಂಗಳೂರು: ತಮ್ಮ ಹಾಡಿನಿಂದ ಮಾದಕ ವಸ್ತುಗಳ ಸೇವನೆ ಪ್ರಚೋದನೆ ನೀಡಿದ ಆರೋಪದಡಿ ಬಿಗ್ ಬಾಸ್ ಖ್ಯಾತಿಯ ಚಂದನ್ ಶೆಟ್ಟಿಯನ್ನ ಸಿಸಿಬಿ ವಿಚಾರಣೆ ನಡೆಸಿತ್ತು. ಕೊನೆಗೂ ಈ ಪ್ರಕರಣದಲ್ಲಿ ರ್ಯಾಪರ್ ಚಂದನ್ ಶೆಟ್ಟಿ ನಿರಳಾಗಿದ್ದಾರೆ. ಚಂದನ್ಗೆ ಸಿಸಿಬಿ ಕಳುಹಿಸಿದ ಪತ್ರ ಈನಾಡುಗೆ ಲಭ್ಯವಾಗಿದೆ. ಇನ್ನು ಯಾವುದೇ ವಿಚಾರಣೆ ಅಗತ್ಯವಿಲ್ಲವೆಂದು ಸಿಸಿಬಿ ಘಟಕ ಸ್ಪಷ್ಟಪಡಿಸಿ ಪತ್ರ ಕಳಹಿಸಿದೆ. ಮಹಿಳೆ ಮತ್ತು ಮಾದಕ ದ್ರವ್ಯ ದಳ ತನಿಖಾಧಿಕಾರಿ ಬಿ.ಎಸ್ ಮೋಹನ್ ಕುಮಾರ್ ಅವರು ಚಂದನ್ ಗೆ ಪತ್ರ ರವಾನಿಸಿದ್ದಾರೆ. ನಿಮ್ಮ ಹೇಳಿಕೆಯನ್ನ […]

ಕೆಸಿಸಿ ಕಪ್ 2018 ಉದ್ಘಾಟನೆಗೆ ಸಿಎಂಗೆ ಸುದೀಪ್ ಆಹ್ವಾನ

Tuesday, September 4th, 2018
sudeep

ಬೆಂಗಳೂರು: ಕೆಸಿಸಿ ಕಪ್ 2018 ಉದ್ಘಾಟನೆಗೆ ಆಗಮಿಸುವಂತೆ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ನಟ ಕಿಚ್ಚ ಸುದೀಪ್ ಆಹ್ವಾನ ನೀಡಿದ್ದಾರೆ. ಕೆಸಿಸಿ ಎರಡನೇ ಲೀಗ್ ಇದೇ ತಿಂಗಳು 8 ಮತ್ತು 9 ರಂದು ಎರಡು ದಿನಗಳ ಕಾಲ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ದಿನ ಮಧ್ಯಾಹ್ನ 12 ಗಂಟೆಗೆ ಪಂದ್ಯಗಳ ಉದ್ಘಾಟನೆ ನಡೆಯಲಿದೆ. ಈ ಸಮಾರಂಭಕ್ಕೆ ಆಗಮಿಸುವಂತೆ ಸಿಎಂಗೆ ಆಹ್ವಾನಿಸಲಾಗಿದೆ. ಇನ್ನು ಮೊನ್ನೆಯಷ್ಟೆ ವಿಧಾನಸೌಧದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿಯಾಗಿದ್ದ ಸುದೀಪ್, ಅವರಿಗೂ ಕೂಡ ಕೆಸಿಸಿ […]

ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಿ: ಸಂಯುಕ್ತ ಹೊರ್ನಾಡ್

Saturday, September 1st, 2018
sayunkta-hornad

ಬೆಂಗಳೂರು: ಬೆಂಗಳೂರಿನ ಬೀದಿಗಳಲ್ಲಿ ಆಸರೆ ಇಲ್ಲದೇ ನರಳುತ್ತಿರುವ ಪ್ರಾಣಿಗಳನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕೆಂದು ನಟಿ ಸಂಯುಕ್ತ ಹೊರ್ನಾಡ್ ಹೇಳಿದರು. ಮಹಾತ್ಮ ಗಾಂಧಿ ರಸ್ತೆಯ ಛಾಯಾ ಕಲಾ ಮಂದಿರದಲ್ಲಿ ನಮ್ಮ ಪ್ರಾಣಿಗಳ ಸಂರಕ್ಷಣಾ ಚಾರಿಟೇಬಲ್ ಟ್ರಸ್ಟ್ ಏರ್ಪಡಿಸಿದ್ದ ಎಂಪ್ಯಾಶನ್ ಕೃತಿ ಬಿಡುಗಡೆ ಮತ್ತು ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಗರದ ಬೀದಿಗಳಲ್ಲಿ ಸಂರಕ್ಷಿಸಲಾದ ನಾಯಿಗಳನ್ನು ಕಲಾ ಕುಂಚದಲ್ಲಿ ಚಿತ್ರಿಸಿದ ಛಾಯಾಚಿತ್ರಗಳನ್ನು ಇಲ್ಲಿ ಅನಾವರಣ ಮಾಡಲಾಗಿತ್ತು. ಸಾಮಾಜಿಕ ಮಾಧ್ಯಮಗಳು ಸಹ ಇಂತಹ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಿ […]

ಸ್ಥಳೀಯ ಸಂಸ್ಥೆ ಚುನಾವಣೆ – ಆಗಸ್ಟ್ 29 ರಿಂದ ಮದ್ಯ ಮಾರಾಟ ನಿಷೇಧ

Monday, August 27th, 2018
Shashikanth Senthil

ಮಂಗಳೂರು : ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಾರ್ವತ್ರಿಕ ಚುನಾವಣೆ-2018 ನಡೆಸುವ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ನಿಷ್ಪಕ್ಷಪಾತದಿಂದ ಕೂಡಿದ ಶಾಂತಿಯುತ ವಾತಾವರಣದಲ್ಲಿ ಮತದಾನವು ನಡೆಯುವುದನ್ನು ಖಾತರಿಪಡಿಸುವ ದೃಷ್ಟಿಯಿಂದ ಅವರು ಪುತ್ತೂರು ನಗರಸಭೆ, ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ವ್ಯಾಪ್ತಿಯಲ್ಲಿ ಆಗಸ್ಟ್ 29 ಸಾಯಂಕಾಲ 6 ಗಂಟೆಯಿಂದ ಆಗಸ್ಟ್ 31 ಸಂಜೆ 6 ಗಂಟೆವರೆಗೆ ಮದ್ಯ ಮುಕ್ತ ದಿನಗಳೆಂದು ಘೋಷಿಸಲಾಗಿದೆ. ಮತ ಎಣಿಕೆಯ ಸಲುವಾಗಿ ಸೆಪ್ಟಂಬರ್ 3 ರಂದು ಬೆಳಿಗ್ಗೆ 6 […]

ಕರ್ನಾಟಕದ ಕಾವೇರಿ ನದಿಗೆ ವಾಜಪೇಯಿ ಚಿತಾಭಸ್ಮವನ್ನು ವಿಸರ್ಜಿಸಿದ ಯಡಿಯೂರಪ್ಪ

Thursday, August 23rd, 2018
Vajapeyee

ಮಂಡ್ಯ : ಮಾಜಿ ಪ್ರಧಾನಿ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯು ಅವರ ಚಿತಾಭಸ್ಮವನ್ನು ಶ್ರೀರಂಗಪಟ್ಟಣದ ಪಶ್ಚಿಮವಾಹಿನಿಯ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅನಂತಕುಮಾರ್, ಆರ್. ಅಶೋಕ್ ಇನ್ನೂ ಮೊದಲಾದವರು ಗುರುವಾರ ಶ್ರೀರಂಗಪಟ್ಟಣದಲ್ಲಿನ ಕಾವೇರಿ ತೀರದಲ್ಲಿ ನೆರೆದಿದ್ದು ಸಕಲ ಪೂಜಾ ಕೈಂಕರ್ಯ ನೆರವೇರಿಸಿದ್ದಾರೆ. ಶ್ರೀರಂಗಪಟ್ಟಣ ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ಮುಂದಾಳತ್ವದಲ್ಲಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಇದಕ್ಕೆ ಮುನ್ನ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಚಿತಾಭಸ್ಮವಿದ್ದ ಕಳಶದ ಮೆರವಣಿಗೆ ನಡೆದಿದೆ. ಮಾರ್ಗದ ನಡುವೆ ನಿಡಘಟ್ಟ, ಮದ್ದೂರು, […]

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪಂಚಭೂತಗಳಲ್ಲಿ ಲೀನ

Friday, August 17th, 2018
Vajapayee

ನವದೆಹಲಿ : ಭಾರತ ರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಯಮುನಾ ನದಿಯ ದಡದಲ್ಲಿ ಶುಕ್ರವಾರ ಸಂಜೆ 4.55 ಕ್ಕೆ  ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಕಲ ಸರ್ಕಾರಿ ಗೌರವಾಧಾರಗಳೊಂದಿಗೆ ಪಂಚಭೂತಗಳಲ್ಲಿ ಲೀನರಾದರು. ಹಿಂದೂ ಬ್ರಾಹ್ಮಣ ಸಂಪ್ರದಾಯದಂತೆ ಪುರೋಹಿತರು ಹಾಗೂ ಕುಟುಂಬ ಸದಸ್ಯರು ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ನೆರವೇರಿಸಿದರು. 21 ಬಾರಿ ಕುಶಾಲ ತೋಪು ಸಿಡಿತ ಹಾಗೂ ಅಟಲ್ ಬಿಹಾರಿ ವಾಜಪೇಯಿ ಕೀ ಜೈ ಘೋಷಣೆ ನಡುವೆ ವಾಜಪೇಯಿ ಅವರ ದತ್ತುಪುತ್ರಿ ನಮಿತಾ ಭಟ್ಟಾಚಾರ್ಯ ಚಿತೆಗೆ ಅಗ್ನಿ ಸ್ಪರ್ಶ […]

‘ಐ ಜಸ್ಟ್ ಕಾಂಟ್ ಫಾರ್ಗೆಟ್ ಮಂಗಳೂರು’ ಎಂದಿದ್ದರು ಅಟಲ್ ಬಿಹಾರಿ ವಾಜಪೇಯಿ!

Friday, August 17th, 2018
mangalore

ಮಂಗಳೂರು: ದೇಶ ಕಂಡ ಅಪ್ರತಿಮ ಜನನಾಯಕರ ಪೈಕಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಇನ್ನಿಲ್ಲ. ಜೀವನದುದ್ದಕ್ಕೂ ಮಾತುಗಾರಿಕೆ, ಕವನಗಳ ಮೂಲಕ ಪನ್ನೀರಿನ ವಾತಾವರಣವನ್ನು ಸೃಷ್ಟಿಸುತ್ತಿದ್ದ ವಾಜಪೇಯಿ ಅವರನ್ನು ಅಜಾತಶತ್ರು ಎಂದೇ ಗುರುತಿಸಲಾಗುತ್ತಿದೆ. ಲೋಕ ಜ್ಞಾನದ ಮೂಲಕ ದೇಶ ಹಾಗೂ ದೇಶವಾಸಿಗಳಿಗೆ ದಾರ್ಶನಿಕ ದೃಷ್ಟಿಯನ್ನು ಒದಗಿಸುತ್ತಿದ್ದ ನೇತಾರ ಈಗ ಕೇವಲ ನೆನಪು ಮಾತ್ರ. ಅಟಲ್ ಅವರಿಗೂ ಮಂಗಳೂರಿಗೂ ಅವಿನಾಭಾವ ಸಂಬಂಧವಿದೆ. ಮಂಗಳೂರು ಎಂದೊಡನೆ ಪುಳಕಿತರಾಗುತ್ತಿದ್ದರು ವಾಜಪೇಯಿ. ಅಂದಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ವಾಜಪೇಯಿ ಅವರಿಗೆ […]

ಭಾರತದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಸ್ತಂಗತ

Thursday, August 16th, 2018
Vajapeyi

ನವದೆಹಲಿ: ಫೋಖ್ರಾನ್ ಅಣ್ವಸ್ತ್ರ ಪರೀಕ್ಷೆ ನಡೆಸಿ ಜಗತ್ತಿಗೆ ಭಾರತದ ಸಾಮರ್ಥ್ಯವನ್ನು ತೋರಿಸಿಕೊಟ್ಟ ಭಾರತೀಯ ರಾಜಕಾರಣದ ಅಜಾತಶತ್ರು, ಶ್ರೇಷ್ಠ ವಾಗ್ಮಿ, ದಾರ್ಶನಿಕ ಅಟಲ್ ಬಿಹಾರಿ ವಾಜಪೇಯಿ ಅವರು ವಿಧಿವಶರಾಗಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಸಂಜೆ 5.05 ಗಂಟೆಗೆ ಅವರು ವಿಧಿವಶರಾಗಿದ್ದಾರೆ ಎಂದು ಏಮ್ಸ್ ವೈದ್ಯರು ಸ್ಪಷ್ಟಪಡಿಸಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 93 ವರ್ಷದ ವಾಜಪೇಯಿ 2009ರಲ್ಲಿ ಪಾರ್ಶ್ವವಾಯುಗೆ ತುತ್ತಾಗಿದ್ದರು. ಬಳಿಕ ಅವರ ಒಂದೇ ಕಿಡ್ನಿ ಕಾರ್ಯನಿಹಿಸುತ್ತಿತ್ತು. ಕಳೆದ ಒಂಬತ್ತು […]

ದ್ರಾವಿಡ ಸಂಪ್ರದಾಯದಂತೆ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅಂತ್ಯ ಸಂಸ್ಕಾರ

Wednesday, August 8th, 2018
Karunanidhi-funeral

ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ಹಾಗೂ ಡಿಎಂಕೆ ಮುಖ್ಯಸ್ಥ ಮುತ್ತುವೇಲ್ ಕರುಣಾನಿಧಿ ಅವರ ಅಂತ್ಯಕ್ರಿಯೆಯನ್ನು ಸಕಲ ಸರ್ಕಾರಿ ಗೌರವದೊಂದಿಗೆ ಬುಧವಾರ ಮರೀನಾ ಬೀಚ್ ನಲ್ಲಿ ನೆರವೇರಿಸಲಾಯಿತು. ಸೋಲರಿಯದ ಸರದಾರನೆಂದೆ ಖ್ಯಾತಿ ಪಡೆದಿದ್ದ ಮುತ್ತುವೇಲ್ ಅವರ ಲಕ್ಷಾಂತರ ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕನಿಗೆ ಕಣ್ಣೀರ ವಿದಾಯ ಹೇಳಿದರು. ಸಂಜೆ ಮರೀನಾ ಬೀಚ್ ನಲ್ಲಿರುವ ಡಿಎಂಕೆ ಸಂಸ್ಥಾಪಕ ಹಾಗೂ ಅವರ ರಾಜಕೀಯ ಗುರು ಅಣ್ಣಾ ದೊರೈ ಅವರ ಅಣ್ಣ ಸ್ಮಾರಕದ ಬಳಿ ದ್ರಾವಿಡ ಸಂಪ್ರದಾಯದಂತೆ ಕರುಣಾನಿಧಿ ಅವರ ಅಂತ್ಯ ಸಂಸ್ಕಾರ ನಡೆಯಿತು. ಅಂತ್ಯಸಂಸ್ಕಾರದಲ್ಲಿ […]