ವೆನ್ ಲಾಕ್ ಆಸ್ಪತ್ರೆಯಲ್ಲಿ ಕೋವಿಡ್ 19 ಬಗ್ಗೆ ಮಾಹಿತಿ ನೀಡಲು ಅಲ್ಲಲ್ಲಿ ಹೆಲ್ಪ್ ಡೆಸ್ಕ್

Tuesday, March 24th, 2020
helpdesk

ಮಂಗಳೂರು : ವೆನ್‍ಲಾಕ್ ಆಸ್ಪತ್ರೆಯಲ್ಲಿ ಕೋವಿಡ್-19 ಸಂಶಾಯಾಸ್ಪದ ಪ್ರಕರಣಗಳಿಗೆ 8 ವಿಶೇಷ ಪ್ರತ್ಯೇಕ ಕೊಠಡಿಗಳನ್ನು ಕಾದಿರಿಸಲಾಗಿದೆ. ಸಂಶಯಾಸ್ಪದ ಪ್ರಕರಣಗಳು ಬಂದರೆ, ಅಂತಹ ರೋಗಿಗಳನ್ನು ಈ ಕೊಠಡಿಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಬ್ಬೊಬ್ಬರನ್ನು ಒಂದೊಂದು ಕೊಠಡಿಗೆ ಕಾದಿರಿಸಿ ದಾಖಲಿಸಲಾಗುತ್ತಿದೆ. ಅವರ ಗಂಟಲುದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುತ್ತಿದೆ. ಪರೀಕ್ಷೆ ನೆಗೆಟಿವ್ ಬಂದರೆ ಅವರಿಗೆ 14 ದಿನಗಳ ನಿಗಾವಣೆಯಲ್ಲಿರಲು ಸೂಚನೆ ನೀಡಿ ಮನೆಗೆ ಕಳುಹಿಸಲಾಗುತ್ತಿದೆ. ಪೊಸಿಟಿವ್ ಬಂದರೆ, ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗದರ್ಶಿಯಂತೆ ಚಿಕಿತ್ಸೆ ಕೊಡಲಾಗುತ್ತದೆ. ಇದಕ್ಕಾಗಿ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ, […]

ಪತ್ರಕರ್ತರು ಒಳ್ಳೆಯ ವಿಷಯಗಳನ್ನು ಮಾತ್ರ ಸಮಾಜಕ್ಕೆ ನೀಡಿ : ಡಾ. ವೀರೇಂದ್ರ ಹೆಗ್ಗಡೆ ಕರೆ

Saturday, March 7th, 2020
veerendra-heggade

ಮಂಗಳೂರು : ಇಂದು ಜನರು ಪತ್ರಿಕೆಗಳನ್ನು ಓದುವ ಜತೆಗೆ ವಿಷಯಗಳ ಸೂಕ್ಷ್ಮತೆಗಳನ್ನು ತಿಳಿದು ವಿಮರ್ಶಿಸುವ ಪ್ರಜ್ಞಾವಂತಿಕೆ ಬೆಳೆಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರು ವರದಿಗಳನ್ನು ಬರೆಯುವಾಗ ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಆತಿಥ್ಯದಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಪತ್ರಕರ್ತರ 35ನೇ ರಾಜ್ಯ ಸಮ್ಮೇಳನದ ಉದ್ಘಾಟನಾ ಸಮಾರಮಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಾಧ್ಯಮಗಳು ಇಂದು ಗೋವಿನಂತಾಗಬೇಕು. ಗೋವು ಏನೇ ತಿಂದರೂ ಅದನ್ನು […]

ಕರ್ನಾಟಕ ಬಜೆಟ್ 2020 : ಇಂದು ರಾಜ್ಯ ಬಜೆಟ್ ಮಂಡನೆ

Thursday, March 5th, 2020
budjet

ಬೆಂಗಳೂರು : ಇದುವರೆಗೂ ಆರು ಬಜೆಟ್ಗಳನ್ನು ಮಂಡನೆ ಮಾಡಿರುವ ಬಿ.ಎಸ್.ಯಡಿಯೂರಪ್ಪ ಅವರು ಇಂದು ಏಳನೇ ಆಯವ್ಯಯ ಮಂಡಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ಮುಖ್ಯಮಂತ್ರಿ ಬಿಎಸ್ವೈ ಸದನದಲ್ಲಿ ಬಜೆಟ್ ಪ್ರತಿ ಓದಲಿದ್ದಾರೆ. ಈ ಬಾರಿ ಬಜೆಟ್ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಆರ್ಥಿಕ ಸಂಕಷ್ಟ, ರಾಜ್ಯ ಸರ್ಕಾರ ಮೇಲಿನ ಸಾಲ, ಕೇಂದ್ರದ ಜಿಎಸ್ಟಿ ಪರಿಹಾರ ಸಕಾಲಕ್ಕೆ ಬಾರದಿರುವುದು.. ಈ ಎಲ್ಲಾ ಸಂಕಷ್ಟಗಳ ನಡುವೆ ಬಿಎಸ್ವೈ ಬಹುನಿರೀಕ್ಷೆಯ ಬಜೆಟ್ ಮಂಡಿಸಲಿದ್ದಾರೆ. ಬಿಎಸ್ವೈ ಅವರ ಹಿಂದಿನ ಆರು […]

ಗಮ್‌ನೊಂದಿಗೆ ಬೆರೆಸಿ ಪೇಸ್ಟ್ ರೂಪದಲ್ಲಿ ಚಿನ್ನ ಸಾಗಾಟ ಓರ್ವ ವಶಕ್ಕೆ

Wednesday, February 12th, 2020
gold--paste

ಮಂಗಳೂರು  :  ಗುದದ್ವಾರದ ಮೂಲಕ ಪೇಸ್ಟ್ ರೂಪದ ಚಿನ್ನವನ್ನುಅಕ್ರಮ ಸಾಗಾಟ ಮಾಡುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು ಒಬ್ಬನನ್ನು ವಶಪಡಿಸಿಕೊಂಡ ಘಟನೆ ಮಂಗಳವಾರ ನಡೆದಿದೆ. ಸೈಫುದ್ದೀನ್ ತೆಕ್ಕಿಲ್ ಪಝೆವಳಪ್ಪಿಲ್ ಕಾಸರಗೋಡು (23) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 25.57 ಲಕ್ಷ ರೂ. ವೌಲ್ಯದ 633 ಗ್ರಾಂ ಚಿನ್ನ ವಶಪಡಿಸಲಾಗಿದೆ. ಈತ ದುಬೈನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಜಾನೆ 4:45ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ. ಈತನ ಚಲನವಲನದ ಕುರಿತು ಸಂಶಯಗೊಂಡ ಅಧಿಕಾರಿಗಳು ಮೆಟಲ್ ಡಿಟೆಕ್ಟರ್ ಮೂಲಕ ಪರಿಶೀಲಿಸಿದಾಗ ಚಿನ್ನ […]

ಅಬ್ದುಲ್ ಶಕೀಲ್ ದೇರಳಕಟ್ಟೆ ಮತ್ತು ಶ್ರೀಮತಿ ಸಂಸದ್ ಕುಂಜತ್ತಬೈಲ್ ಇವರಿಗೆ ಗೌರವ ಡಾಕ್ಟರೇಟ್ ಪ್ರದಾನ

Monday, February 3rd, 2020
doctarate

ಥೈಲ್ಯಾಂಡ್ : ಯುನಿವರ್ಸಿಟಿ ಆಫ್ ಡಿಶ್ಟಂನ್ಸ್ ಲಾರ್ನಿಂಗ್ ಎಜ್ಯುಕೇಶನ್ ಆರ್ಜೇಂಟೈನಾ ಪ್ರಸಿದ್ಧಿಯ ಸೈಂಟ್ ಪಾವ್ಲ್’ಸ್ ಇಂಟರ್ನೇಶನಲ್ ಯುನಿವರ್ಸಿಟಿ (ಎಸ್ಪಿಐಯು) ಶೈಕ್ಷಣಿಕ ಸಂಸ್ಥೆಯು ವಾರ್ಷಿಕ ಅಂತರಾಷ್ಟ್ರೀಯ ಘಟಿಕೋತ್ಸವ ಸಮಾರಂಭ ಇಂದಿಲ್ಲಿ ಶನಿವಾರ ಸಂಜೆ ಥೈಲ್ಯಾಂಡ್ ರಾಷ್ಟ್ರದ ಸಿಲೋಮ್ ಇಲ್ಲಿನ ಹೊಟೇಲ್ ಹಾಲೀಡೇ ಇನ್ನ್ ಸಿಲೊಮ್ ಇದರ ಕ್ರಿಸ್ಟಲ್ ಬಾಲ್ರೂಂನ ಸಭಾಗೃಹದಲ್ಲಿ ಮಾಜಿ ವಿದೇಶಗಳ ಭಾರತೀಯ ರಾಯಭಾರಿ ಡಾ. ವಿ.ಬಿ ಸೋನಿ ಅಧ್ಯಕ್ಷತೆಯಲ್ಲಿ ನೆರವೇರಿತು. ಘಟಿಕೋತ್ಸವದಲ್ಲಿ ಪಿ.ಎನ್ ಅಕಾಡೆಮಿ ಥೈಲ್ಯಾಂಡ್ ಇದರ ಮುಖ್ಯಸ್ಥ ಪಾವ್ಲ್ ಪಿ.ಸ್ರಿನರೂಲಾ ಮುಖ್ಯ ಅತಿಥಿಯಾಗಿ ಮತ್ತು […]

ಮಂಗಳೂರು : ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್ ವೆಲ್ ಫ್ಲೈಓವರ್ ಇಂದು ಉದ್ಘಾಟನೆ

Friday, January 31st, 2020
fly-over

ಮಂಗಳೂರು : ದಶಕದ ಕಾಮಗಾರಿಯ ಇತಿಹಾಸ ಹೊಂದಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಪಂಪ್ ವೆಲ್ ಫ್ಲೈಓವರ್ ಕೊನೆಗೂ ಇಂದು ಉದ್ಘಾಟನೆಗೊಂಡಿತು. ಸಚಿವ ಶ್ರೀನಿವಾಸ ಪೂಜಾರಿ ಅವರು ಬೆಳಗ್ಗೆ ಫ್ಲೈಓವರನ್ನು ಉದ್ಘಾಟನೆ ಮಾಡಿದ್ದು, ಇಂದಿನಿಂದ ರಸ್ತೆ ಸಾರ್ವಜನಿಕ ವಾಹನಗಳಿಗೆ ಮುಕ್ತವಾಗಿದೆ. 2010ರಲ್ಲಿ ನವಯುವ ಕಂಪನಿ ಗುತ್ತಿಗೆ ಪಡೆದು ಆರಂಭಿಸಿದ್ದ 600 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ 2013ಕ್ಕೆ ಮುಕ್ತಾಯಗೊಳ್ಳಬೇಕಿತ್ತು. ಆದರೆ ಕಾಮಗಾರಿ 10 ವರ್ಷವಾದರೂ ಪೂರ್ಣಗೊಳ್ಳದೇ ಹತ್ತಾರು ಡೆಡ್‍ಲೈನ್‍ಗಳನ್ನು ಕಂಡಿದ್ದು, ನಿಧಾನಗತಿ ಕಾಮಗಾರಿಯಿಂದ ಫ್ಲೈ ಓವರ್ ಭಾರೀ ಸುದ್ದಿಯಾಗಿತ್ತು. […]

ಶ್ರೀ ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಪವಿತ್ರ ಬ್ರಹ್ಮಕಲಶಾಭಿಷೇಕದ ವೈಭವ

Friday, January 31st, 2020
kateel

ಮಂಗಳೂರು : ಭಕ್ತರ ಇಷ್ಟಾರ್ಥ ಗಳನ್ನು ಕರುಣಿಸುವ ಮಹಾಮಾತೆ, ನಂದಿನಿ ನದಿಯ ಮಡಿಲಲ್ಲಿ ಪವಡಿಸಿದ ಸಾವಿರ ಸೀಮೆಯ ಆದಿಮಾಯೆ, ಭ್ರಾಮರಿ ಅವತಾರಿಣಿ ಶ್ರೀ ದುರ್ಗಾಪರಮೇಶ್ವರಿಗೆ ಗುರುವಾರ ಪರಮ ಪವಿತ್ರ ಬ್ರಹ್ಮ ಕಲಶೋತ್ಸವ ವೈಭವದಿಂದ ನೆರವೇರಿತು. ಈ ಪುಣ್ಯ ಸಂಭ್ರಮವನ್ನು ಸಹಸ್ರಾರು ಭಕ್ತರು ಕಣ್ತುಂಬಿ ಕೊಂಡು ಭಕ್ತಿಭಾವದಿಂದ ಪುನೀತರಾದರು. ಸೂರ್ಯೋದಯಕ್ಕೆ ಮುನ್ನವೇ ವೈದಿಕ ವಿಧಿ ವಿಧಾನಗಳು ಆರಂಭವಾದವು. ಹಲವು ಭಕ್ತರು ನೇರವಾಗಿ ವೀಕ್ಷಿಸಿದರೆ, ಲಕ್ಷಾಂತರ ಮಂದಿ ಕ್ಷೇತ್ರದ ವ್ಯಾಪ್ತಿಯಲ್ಲಿ ಅಳವಡಿಸಿದ್ದ ಎಲ್‌ಇಡಿ ಪರದೆ ಮತ್ತು ಸ್ಥಳೀಯ ವಾಹಿನಿಗಳ ನೇರಪ್ರಸಾರದ […]

ಮುಂದಿನ ಶೈಕ್ಷಣಿಕ ಸಾಲಿನಿಂದ ನೀಟ್ ಮಾದರಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ : ಡಾ.ಸಿ.ಎನ್.ಅಶ್ವತ್ಥನಾರಾಯಣ

Thursday, January 30th, 2020
Ashwath-Narayan

ಬೆಂಗಳೂರು : ಕೆಇಎ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ನೀಟ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಉನ್ನತ ಶಿಕ್ಷಣ ಪರಿಷತ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಿಇಟಿ ಪರೀಕ್ಷೆಯನ್ನು 2 ದಿನ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನಿಂದ ಸಿಇಟಿ ಪರೀಕ್ಷೆಯನ್ನು ನೀಟ್ ಮಾದರಿ ನಡೆಸಲಿದ್ದೇವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೇ ದಿನ ಪರೀಕ್ಷೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ […]

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಅಗತ್ಯ : ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಭಿಪ್ರಾಯ

Thursday, January 16th, 2020
hagga-jaggata

ಮಡಿಕೇರಿ : ಪೊನ್ನೋಲತಂಡ ಕುಟುಂಬದ ಆಶ್ರಯದಲ್ಲಿ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಕಕ್ಕಬೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಹಬ್ಬ-2020 ರ ಲಾಂಛನವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅನಾವರಣಗೊಳಿಸಿದರು. ನಗರದ ಪತ್ರಿಕಾ ಭನದಲ್ಲಿ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನದ ಅಗತ್ಯವಿದೆ ಎಂದರು. ಕೊಡವ ಕುಟುಂಬಗಳು ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದವು. ಇದೀಗ […]

ಜನವರಿಯಲ್ಲಿ ರಸ್ತೆಗೆ ಇಳಿಯಲಿರುವ ಪೆಟ್ರೋಲ್ ರಹಿತ ಬಜಾಜ್ ಸ್ಕೂಟರ್ ಗಳು

Tuesday, January 14th, 2020
scooter

ಮುಂಬೈ : ಸ್ಕೂಟರ್ ಎಂದರೆ ‘ಚೇತಕ್‌’ ಎನ್ನುವಷ್ಟು ಭಾರತೀಯರಲ್ಲಿ ಮನೆ ಮಾತಾಗಿದ್ದ ಬಜಾಜ್‌ ಆಟೊದ ಸ್ಕೂಟರ್‌ ಈಗ ಎಲೆಕ್ಟ್ರಿಕ್‌ ರೂಪದಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ದಿನದಿಂದ ಬುಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ. ವೇಗದ ಬೈಕ್‌ಗಳ ಜಮಾನದಲ್ಲಿ ಮರೆಗೆ ಸರಿದಿದ್ದ ‘ಚೇತಕ್‌’ ಬ್ರ್ಯಾಂಡ್‌ ಈಗ ವಿದ್ಯುತ್‌ ಚಾಲಿತ ಸ್ಕೂಟರ್ ಆಗಿ ಮಾರುಕಟ್ಟೆ ಪ್ರವೇಶಿಸಿದೆ. ಜನವರಿ 15ರಿಂದ ಸ್ಕೂಟರ್‌ ಬುಕ್ಕಿಂಗ್‌ ಮಾಡಬಹುದಾಗಿದ್ದು, ಆರಂಭಿಕ ಬೆಲೆ1 ಲಕ್ಷ ನಿಗದಿಯಾಗಿದೆ. ಫೆಬ್ರುವರಿ ಅಂತ್ಯಕ್ಕೆ ಗ್ರಾಹಕರಿಗೆ ಹೊಸ ಚೇತಕ್‌ ಸಿಗಲಿದೆ. ಆರಂಭಿಕವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಎಲೆಕ್ಟ್ರಿಕ್‌ […]