ಮುಂದಿನ ಶೈಕ್ಷಣಿಕ ಸಾಲಿನಿಂದ ನೀಟ್ ಮಾದರಿಯಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ : ಡಾ.ಸಿ.ಎನ್.ಅಶ್ವತ್ಥನಾರಾಯಣ

Thursday, January 30th, 2020
Ashwath-Narayan

ಬೆಂಗಳೂರು : ಕೆಇಎ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯನ್ನು ಮುಂದಿನ ಶೈಕ್ಷಣಿಕ ಸಾಲಿನಿಂದ ನೀಟ್ ಮಾದರಿಯಲ್ಲಿ ನಡೆಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಉನ್ನತ ಶಿಕ್ಷಣ ಪರಿಷತ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಸಿಇಟಿ ಪರೀಕ್ಷೆಯನ್ನು 2 ದಿನ ನಡೆಸುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಈ ಹಿನ್ನೆಲೆಯಲ್ಲಿ 2020-21ನೇ ಶೈಕ್ಷಣಿಕ ಸಾಲಿನಿಂದ ಸಿಇಟಿ ಪರೀಕ್ಷೆಯನ್ನು ನೀಟ್ ಮಾದರಿ ನಡೆಸಲಿದ್ದೇವೆ. ಬೆಳಗ್ಗೆ ಮತ್ತು ಮಧ್ಯಾಹ್ನ ಒಂದೇ ದಿನ ಪರೀಕ್ಷೆ ಪೂರ್ಣಗೊಳ್ಳಲಿದೆ. ಇದಕ್ಕಾಗಿ […]

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ಅಗತ್ಯ : ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅಭಿಪ್ರಾಯ

Thursday, January 16th, 2020
hagga-jaggata

ಮಡಿಕೇರಿ : ಪೊನ್ನೋಲತಂಡ ಕುಟುಂಬದ ಆಶ್ರಯದಲ್ಲಿ ಏಪ್ರಿಲ್ ತಿಂಗಳ ಮೂರನೇ ವಾರದಲ್ಲಿ ಕಕ್ಕಬೆಯಲ್ಲಿ ನಡೆಯಲಿರುವ ಪ್ರಥಮ ವರ್ಷದ ಕೊಡವ ಕೌಟುಂಬಿಕ ಹಗ್ಗಜಗ್ಗಾಟ ಹಬ್ಬ-2020 ರ ಲಾಂಛನವನ್ನು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಅನಾವರಣಗೊಳಿಸಿದರು. ನಗರದ ಪತ್ರಿಕಾ ಭನದಲ್ಲಿ ನಡೆದ ಲಾಂಛನ ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನದ ಅಗತ್ಯವಿದೆ ಎಂದರು. ಕೊಡವ ಕುಟುಂಬಗಳು ಕೌಟುಂಬಿಕ ಹಾಕಿ ಉತ್ಸವವನ್ನು ನಡೆಸುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆದಿದ್ದವು. ಇದೀಗ […]

ಜನವರಿಯಲ್ಲಿ ರಸ್ತೆಗೆ ಇಳಿಯಲಿರುವ ಪೆಟ್ರೋಲ್ ರಹಿತ ಬಜಾಜ್ ಸ್ಕೂಟರ್ ಗಳು

Tuesday, January 14th, 2020
scooter

ಮುಂಬೈ : ಸ್ಕೂಟರ್ ಎಂದರೆ ‘ಚೇತಕ್‌’ ಎನ್ನುವಷ್ಟು ಭಾರತೀಯರಲ್ಲಿ ಮನೆ ಮಾತಾಗಿದ್ದ ಬಜಾಜ್‌ ಆಟೊದ ಸ್ಕೂಟರ್‌ ಈಗ ಎಲೆಕ್ಟ್ರಿಕ್‌ ರೂಪದಲ್ಲಿ ಬಿಡುಗಡೆಯಾಗಿದೆ. ಸಂಕ್ರಾಂತಿ ದಿನದಿಂದ ಬುಕ್ಕಿಂಗ್‌ ಅವಕಾಶ ಕಲ್ಪಿಸಲಾಗಿದೆ. ವೇಗದ ಬೈಕ್‌ಗಳ ಜಮಾನದಲ್ಲಿ ಮರೆಗೆ ಸರಿದಿದ್ದ ‘ಚೇತಕ್‌’ ಬ್ರ್ಯಾಂಡ್‌ ಈಗ ವಿದ್ಯುತ್‌ ಚಾಲಿತ ಸ್ಕೂಟರ್ ಆಗಿ ಮಾರುಕಟ್ಟೆ ಪ್ರವೇಶಿಸಿದೆ. ಜನವರಿ 15ರಿಂದ ಸ್ಕೂಟರ್‌ ಬುಕ್ಕಿಂಗ್‌ ಮಾಡಬಹುದಾಗಿದ್ದು, ಆರಂಭಿಕ ಬೆಲೆ1 ಲಕ್ಷ ನಿಗದಿಯಾಗಿದೆ. ಫೆಬ್ರುವರಿ ಅಂತ್ಯಕ್ಕೆ ಗ್ರಾಹಕರಿಗೆ ಹೊಸ ಚೇತಕ್‌ ಸಿಗಲಿದೆ. ಆರಂಭಿಕವಾಗಿ ಬೆಂಗಳೂರು ಮತ್ತು ಪುಣೆಯಲ್ಲಿ ಎಲೆಕ್ಟ್ರಿಕ್‌ […]

ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣ

Tuesday, January 14th, 2020
peraje

ಮಡಿಕೇರಿ : ತೋಟಗಾರಿಕೆ ಇಲಾಖೆ ಜಿಲ್ಲಾ ಪಂಚಾಯತ್, ಮಡಿಕೇರಿ ಮತು ಪೆರಾಜೆ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘ ನಿ ಪೆರಾಜೆ, ಇದರ ಜಂಟಿ ಆಶ್ರಯದಲ್ಲಿ ಗೇರು, ಕಾಳುಮೆಣಸು ಮತ್ತು ತೆಂಗು ಬೇಸಾಯದ ಬಗ್ಗೆ ತರಬೇತಿ ಕಾರ್ಯಕ್ರಮ ಮತ್ತು ವಿಚಾರ ಸಂಕಿರಣವು ದಿನಾಂಕ 13.01.2020 ಸೋಮವಾರದಂದು, ಪೆರಾಜೆ ಪ್ರಾ.ಕೃ.ಪ.ಸ.ಸಂಘದ ಸಹಕಾರ ಸಧನದಲ್ಲಿ ಪೂರ್ವಾಹ್ನ 10.00 ಗಂಟೆಗೆ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು ಮತ್ತು ತಾಲೂಕು ಪಂಚಾಯತ್ ಸದಸ್ಯರಾದ ಶ್ರೀ ನಾಗೇಶ್ ಕುಂದಲ್ಪಾಡಿಯವರು ವಹಿಸಿದ್ದರು. ಪೆರಾಜೆ ಗ್ರಾಮಪಂಚಾಯತ್ ಅಧ್ಯಕ್ಷರಾದ […]

ವಾಹನಗಳಿಗೆ ವಿಮೆ : ಈ ಐನಾತಿ ಮಾಡುತಿದ್ದುದೇನು ಗೊತ್ತಾ ?

Tuesday, January 14th, 2020
yashodarapura

ಮೈಸೂರು : ವಾಹನಗಳನ್ನು ಹೊಂದಿರುವ ಪ್ರತಿಯೊಬ್ಬರೂ ವಿಮೆ ಮಾಡಿಸಲು ಇಚ್ಚಿಸುತ್ತಾರೆ. ಏಕೆಂದರೆ ಅಪಘಾತವಾದಾಗ ನಷ್ಟ ಸಂಭವಿಸದಿರಲಿ ಎಂಬ ಕಾರಣಕ್ಕಾಗಿ .ಅಲ್ಲದೆ ಕಾನೂನಿನ ಪ್ರಕಾರ ಇದು ಕಡ್ಡಾಯವೂ ಕೂಡ. ಆದರೆ ಇಲ್ಲೊಬ್ಬ ಐನಾತಿಯು ವಾಹನಗಳಿಗೆ ಮಾಲೀಕರು ನೀಡಿದ ವಿಮೆ ಹಣವನ್ನು ಲಪಟಾಯಿಸಲು ನಕಲಿ ವಿಮೆ ರಸೀತಿ ನೀಡುತಿದ್ದುದು ಬಯಲಾಗಿದ್ದು ಇವನನ್ನು ಪೋಲೀಸರು ಹೆಡೆಮುರಿ ಕಟ್ಟಿದ್ದಾರೆ. ಹುಣಸೂರು ತಾಲೂಕಿನ ಯಾಶೋಧರಪುರದ ಶಿವರಾಜ್ ಎಂಬುವರು ತಮ್ಮ ಸ್ವಿಫ್ಟ್‌ ಕಾರಿಗೆ ಆರೋಪಿ ಮಹಮದ್‌ ವಿಕಾರ್‌ ನ ಇನ್ಷೂರೆನ್ಸ್‌ ಜೋನ್‌ ಅಂಗಡಿಯಲ್ಲಿ 15 ಸಾವಿರ […]

ಉಸ್ತುವಾರಿ ಸಚಿವರಿಂದ ಕರಾವಳಿ ಉತ್ಸವದ ಮೆರವಣಿಗೆ ಉದ್ಘಾಟನೆ

Friday, January 10th, 2020
KaravaliUthsava

ಮಂಗಳೂರು : ಕರಾವಳಿ ಉತ್ಸವ ಮೈದಾನದಲ್ಲಿ ಜನವರಿ ಹತ್ತರಿಂದ ಇಪ್ಪತ್ತರವರೆಗೆ ನಡೆಯುವ ಕರಾವಳಿ ಉತ್ಸವದ ಸಾಂಸ್ಕತಿಕ ಮೆರವಣಿಗೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ನೆಹರೂ ಮೈದಾನದಲ್ಲಿ ಗುರುವಾರ ಉದ್ಘಾಟಿಸಿದರು. ಮಂಗಳೂರಿನಲ್ಲಿ ನಡೆಯುವ ಕರಾವಳಿ ಉತ್ಸವ ರಾಜ್ಯ ಹೆಮ್ಮೆ ಪಡುವಂತಹ ಕಾರ್ಯಕ್ರಮ ಎಂದು ಅವರು ಹೇಳಿದರು. ಪಣಂಬೂರು ಬೀಚ್‍ ಉತ್ಸವ, ಸಾಂಸ್ಕತಿಕ ಉತ್ಸವಗಳು ಕರಾವಳಿಯ ಸಾಂಸ್ಕತಿಯನ್ನು ಬಿಂಬಿಸುವ ಉತ್ಸವ ಎಂದು ಅವರು ಬಣ್ಣಿಸಿದರು. ಸಾಂಸ್ಕತಿಕ ಮೆರವಣಿಗೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ಕಲಾ ತಂಡಗಳ ವೈವಿಧ್ಯಮಯ ಕಲಾ […]

ಪ್ರತಿಭಟನೆಯನ್ನು ಶಾಸಕರು ನಿರ್ಲಕ್ಷಿಸಿದ್ದಾರೆ : ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಟೀಕೆ

Thursday, January 9th, 2020
ಪ್ರತಿಭಟನೆಯನ್ನು ಶಾಸಕರು ನಿರ್ಲಕ್ಷಿಸಿದ್ದಾರೆ : ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ಟೀಕೆ

ಮಡಿಕೇರಿ : ಕೇಂದ್ರದ ಪೌರತ್ವ ಕಾಯ್ದೆ ವಿರುದ್ಧ ಕೊಡಗು ಜಿಲ್ಲೆಯಲ್ಲೂ ಕಾಂಗ್ರೆಸ್ ಸೇರಿದಂತೆ ವಿವಿಧ ಸಂಘಟನೆಗಳು, ಸಮಾನ ಮನಸ್ಕ ರಾಜಕೀಯ ಪಕ್ಷಗಳು ಹಾಗೂ ಸಾರ್ವಜನಿಕರು ಬೃಹತ್ ಪ್ರತಿಭಟನೆಗಳು ನಡೆಸಿದ್ದಾರೆ. ಆದರೆ ಕೊಡಗಿನಲ್ಲಿ ಕಾಯ್ದೆ ವಿರುದ್ಧ ದೊಡ್ಡ ಮಟ್ಟದ ವಿರೋಧ ವ್ಯಕ್ತವಾಗಿಲ್ಲವೆಂದು ದಕ್ಷಿಣ ಕೊಡಗಿನ ಶ್ರೀಮಂಗಲದಲ್ಲಿ ಪೌರತ್ವ ಕಾಯ್ದೆ ಜಾಗೃತಿ ಕಾರ್ಯಕ್ರಮದಲ್ಲಿ ಶಾಸಕ ಕೆ.ಜಿ.ಬೋಪಯ್ಯ ಅವರು ನೀಡಿರುವ ಹೇಳಿಕೆ ಖಂಡನೀಯವೆಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಟಿ.ಈ.ಸುರೇಶ್ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ನೇತೃತ್ವದ ಸರ್ಕಾರ ನಿರಂತರವಾಗಿ […]

ಜಯ ಶ್ರೀ ಕೃಷ್ಣ ಪರಿಸರ ಪ್ರೇಮಿ ಸಮಿತಿಯಿಂದ ಪೇಜಾವರ ಶ್ರೀಯವರಿಗೆ ನುಡಿ ನಮನ

Monday, January 6th, 2020
mumbay

ಮುಂಬಯಿ : ವಿಶ್ವಕ್ಕೆ ಮಾರ್ಗದರ್ಶಕರಾಗಿ, ಸರ್ವಶ್ರೇಷ್ಠ ಸ್ವಾಮೀಜಿಯವರೆಂದಿನಿಸಿದ ಶ್ರೀ ಪೇಜಾವರ ಮಠಾಧೀಶರಾದ ಪೂಜ್ಯ ಶ್ರೀ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ಶ್ರದ್ದಾಂಜಲಿ ಸಭೆಯನ್ನು ಜ. 3 ರಂದು ಸಂಜೆ ಅಂಧೇರಿ ಪೂರ್ವದ ಮರೋಲ್ – ಮರೋಶಿ ರೋಡ್ ನಲ್ಲಿರುವ ಮಾಂಗಲ್ಯ ಕಟ್ಟಡದಲ್ಲಿನ ಸಿ-502ರಲ್ಲಿ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ವತಿಯಿಂದ ನಡೆಸಲಾಯಿತು. ಶ್ರೀ ವಿಶ್ವೇಶತೀರ್ಥ ಸ್ವಾಮೀಜಿಯವರಗೆ ನುಡಿನಮನ ಸಲ್ಲಿಸುತ್ತಾ ಜಯಶ್ರೀಕೃಷ್ಣ ಪರಿಸರ ಪ್ರೇಮಿ ಸಮಿತಿಯ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ತೋನ್ಸೆ ಜಯಕೃಷ್ಣ ಎ. ಶೆಟ್ಟಿಯವರು ಮಾತನಾಡುತ್ತಾ ಶ್ರೀ ಶ್ರೀ […]

ಹಿಂಸಾತ್ಮಕ ಘಟನೆ ಕೈ ಮೀರಿದ್ದೇ ಇಬ್ಬರ ಮೃತ್ಯುವಿಗೆ ಕಾರಣ : ಸಿ.ಎಂ

Saturday, December 21st, 2019
Yediyurappa

ಮಂಗಳೂರು : ಗುರುವಾರ ನಡೆದ  ಹಿಂಸಾತ್ಮಕ ಘಟನೆಯ ವೇಳೆ ಗುಂಪೊಂದು ಕಾನೂನು ಕೈಗೆತ್ತಿಕೊಂಡು ನಗರದ ನೆಲ್ಲಿಕಾಯಿ ರಸ್ತೆ, ರಾವ್ ಅಂಡ್ ರಾವ್ ಸರ್ಕಲ್, ಬಂದರು ಉತ್ತರ ಠಾಣೆ,  ಅಝೀಝುದ್ದೀನ್ ರಸ್ತೆ, ಜೆಎಂ ರಸ್ತೆ, ಬಿಬಿ ಅಲಾಬಿ ರಸ್ತೆ ಮೊದಲಾದೆಡೆ ಸಾರ್ವಜನಿಕ ಆಸ್ತಿಯನ್ನು ಪುಡಿ ಗೈದಿದ್ದು ಅಲ್ಲದೆ ಕರ್ತವ್ಯ ನಿರತ ಪೋಲೀಸರ ಮೇಲೆ ಮಾರಕ ಅಸ್ತ್ರಗಳಿಂದ ಹಲ್ಲೆ, ಪೊಲೀಸ್ ಠಾಣೆಗೆ ಬೆಂಕಿ ಹಚ್ಚಲು ಮುಂದಾದ ಘಟನೆಗಳಿಂದ ಇಬ್ಬರು ಬಲಿಯಾಗಿದ್ದಾರೆ ಎಂದು  ಸಿ.ಎಂ ಬಿ.ಎಸ್ ಯುಡಿಯೂರಪ್ಪ ಸ್ಪಷ್ಟ ಪಡಿಸಿದ್ದಾರೆ. ಈ ಘಟನೆಯಲ್ಲಿ ಬಲಿಯಾಗಿರುವ  ಇಬ್ಬರ ಕುಟುಂಬಕ್ಕೆ ಕಾನೂನು […]

ಮೂಡುಬಿದಿರೆ : ಖಾಸಗಿ ಬಸ್ ಪಲ್ಟಿ-18ಮಂದಿಗೆ ಗಾಯ

Friday, December 6th, 2019
Bus

ಮೂಡುಬಿದಿರೆ : ಚಾಲಕನ ಅಜಾಗರೂಕತೆಯಿಂದ ಖಾಸಗಿ ಬಸ್ಸೊಂದು ಪಲ್ಟಿಯಾದ ಘಟನೆ ಗುರುವಾರ ಸಂಜೆ ಆಲಂಗಾರು ಸಮೀಪ ನಡೆದಿದ್ದು 18 ಮಂದಿಗೆ ಗಾಯಗಳಾಗಿವೆ. ಕೊಲ್ಲೂರಿನಿಂದ ಮಂಗಳೂರು ಕಡೆಗೆ ಅತೀ ವೇಗದಿಂದ ಬರುತ್ತಿದ್ದ ಬಸ್ಸು ಆಲಂಗಾರು ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ ಈ ಸಂದರ್ಭ ಮೂಡುಬಿದಿರೆ ಗಾಂಧಿನಗರದ ಸುಮಾ ಎಂಬವರಿಗೆ ತೀವ್ರ ತರಹದ ಗಾಯಗಳಾಗಿದ್ದು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದ ಗಾಯಗೊಂಡಿರುವ ಪ್ರಯಾಣಿಕರನ್ನು ಪೊಲೀಸ್ ನಿರೀಕ್ಷಕ ದಿನೇಶ್ ಕುಮಾರ್, ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಸಾರ್ವಜನಿಕರು ಆಸ್ಪತ್ರೆಗೆ […]