ಮೇ 18.ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ ಪ್ರಧಾನ

Wednesday, May 15th, 2013
Beary Academy Awards

ಮಂಗಳೂರು : ಬ್ಯಾರಿ ಭಾಷೆ, ಕಲೆ, ಸಾಹಿತ್ಯ ಮೊದಲಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ  ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ವತಿಯಿಂದ ನೀಡಲಾಗುವ ಬ್ಯಾರಿ ಸಾಹಿತ್ಯ ಅಕಾಡಮಿ ಪ್ರಶಸ್ತಿ  ಪ್ರಧಾನ ಸಮಾರಂಭವು ಮೇ 18 ರಂದು ನಗರದ ಪುರಭವನದಲ್ಲಿ ನಡೆಯಲಿರುವುದಾಗಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ್ ತಿಳಿಸಿದರು. 2012 ನೇ ಸಾಲಿನ ಗೌರವ ಪ್ರಶಸ್ತಿಗೆ ಬ್ಯಾರಿ ಭಾಷೆ, ಕಲೆ ಹಾಗೂ ಸಾಹಿತ್ಯ ಕ್ಷೇತ್ರದಲ್ಲಿ ಅಲ್ಜಾಜ್ ವಿ.ಎ. ಇಸ್ಮಾಯಿಲ್ ಮದನಿ, ಮುಹಮ್ಮದ್ ಬಡ್ಡೂರು […]

ಕಾಸರಗೋಡು : ಟಾಟಾ ಸುಮೋದ ಮೂಲಕ ಸಾಗಿಸುತ್ತಿದ್ದ ಗಾಂಜಾ ವಶ, ಇಬ್ಬರ ಸೆರೆ

Wednesday, May 15th, 2013
Ganja seize Kasargod

ಕಾಸರಗೋಡು : ಟಾಟಾ ಸುಮೋದ ಮೇಲ್ಬಾಗದಲ್ಲಿ ವಿಶೇಷ ರಂದ್ರ ನಿರ್ಮಿಸಿ ಆ ಮೂಲಕ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 52 ಕೆ.ಜಿ ಗಾಂಜಾ ಸಹಿತ ಇಬ್ಬರನ್ನು ನಗರ ಠಾಣಾ ಸರ್ಕಲ್ ಇನ್ಸ್ ಪೆಕ್ಟರ್ ಕೆ.ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ. ಕೋಟಯಂ ನಿವಾಸಿ ಕೆ.ಎ. ನವಾಝ್ (32), ನೀಲೇಶ್ವರ ಕುನ್ನುಂಗೈಯ ಸಿ.ಎಚ್.ಸಲೀಂ(32) ಬಂಧಿತ ಆರೋಪಿಗಳಾಗಿದ್ದಾರೆ. ಕಾಸರಗೋಡು ಡಿವೈಎಸ್ಪಿ  ಮೋಹನ್ ಚಂದ್ರನ್ ನಾಯರ್ ಗೆ ಲಭಿಸಿದ ಮಾಹಿತಿಯಂತೆ ಕಾರ್ಯಾಚರಣೆ ನಡೆಸಿದ ಪೊಲೀಸರು ರಾಷ್ಟ್ರೀಯ ಹೆದ್ದಾರಿ ಬೇವಿಂಜೆ ಬಳಿ […]

ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

Wednesday, May 15th, 2013
ಡಾ.ಜಿ.ಎಸ್. ವೃದ್ದಾಶ್ರಮದ ವತಿಯಿಂದ ಮೂವರು ಗಣ್ಯರಿಗೆ ಅಭಯಶ್ರೀ ಪ್ರಶಸ್ತಿ

ಮಂಗಳೂರು : ವೃದ್ಧರ ಹಾಗು ದೀನ ದಲಿತರ ಆಶ್ರಯಧಾಮವಾಗಿರುವ, ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಡಾ.ಗಿರಿಧರ್ ರಾವ್ ಸಂಜೀವಿ ಬಾಯಿ ವೃದ್ದಾಶ್ರಮದ ವತಿಯಿಂದ ಸಮಾಜಕ್ಕೆ ತಮ್ಮದೇ ಆದ ವಿಶಿಷ್ಟ ಕೊಡುಗೆಗಳನ್ನು ನೀಡಿರುವ ಅಭಯ ಆಶ್ರಯದ ಸಂಸ್ಥಾಪಕ ದಿ.ಬೇಕಲ್  ಲಿಂಗಪ್ಪಯ್ಯ, ನಿವೃತ್ತ ಲೋಕಾಯುಕ್ತ ಎನ್. ಸಂತೋಷ್ ಹೆಗ್ಡೆ ಮತ್ತು ಮಣಿಪಾಲ ವಿಶ್ವವಿದ್ಯಾನಿಲಯದ ಕುಲಪತಿ ಡಾ. ರಾಮ್ ದಾಸ್ ಪೈ ಈ ಮೂವರಿಗೆ ಅಭಯ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಡಾ.ಜಿ.ಎಸ್. ವೃದ್ದಾಶ್ರಮದ ಸಂಚಾಲಕ ಶ್ರೀನಾಥ್ ಹೆಗ್ಡೆ  ತಿಳಿಸಿದರು. ಮಂಗಳವಾರ ವೃದ್ದಾಶ್ರಮದಲ್ಲಿ […]

ಕಾಂಗ್ರೆಸ್ ತನ್ನ ಆಡಳಿತಾವಧಿಯಲಿ ಜನೋಪಯೋಗಿ ಕಾರ್ಯಗಳ ಮೂಲಕ ಉತ್ತಮ ಆಡಳಿತವನ್ನು ನೀಡಲಿದೆ : ಇಬ್ರಾಹಿಂ ಕೋಡಿಜಾಲ್

Tuesday, May 14th, 2013
Ibrahim Kodijal

ಮಂಗಳೂರು : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಸಿದ್ದರಾಮಯ್ಯನವರು ಉತ್ತಮ ಆಡಳಿತವನ್ನು ನೀಡಲಿದ್ದು, ಕರ್ನಾಟಕ ರಾಜ್ಯವನ್ನು ಪ್ರಗತಿ ಪಥದತ್ತ ಕೊಂಡೊಯ್ಯಲಿದ್ದಾರೆ ಎಂದು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಹೇಳಿದರು. ಅವರು ಮಂಗಳವಾರ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ಏರ್ಪಡಿಸಲಾದ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಪ್ರಾರಂಭದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಮತ್ತು ಇತ್ತೀಚಿಗೆ ನಡೆದ ವಿಧಾನಸಭಾ ಚುನವಣೆಗಳಲ್ಲಿ ಭ್ರಷ್ಟಾಚಾರದಿಂದ ಕೂಡಿದ್ದ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿದ ಮತದಾರ ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತವನ್ನು ನೀಡುವ […]

ಕುದ್ರೋಳಿ ಕ್ಷೇತ್ರಕ್ಕೆ ಭೇಟಿ ನೀಡಿದ ನಟ ಶಿವರಾಜ್ ಕುಮಾರ್

Tuesday, May 14th, 2013
Shivraj Kumar

ಮಂಗಳೂರು : ಅಕ್ಷಯ ತದಿಗೆ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ರವರು ಕುಂಟುಂಬ ಸಮೇತ ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಭೇಟಿ ನೀಡಿದರು. ಖಾಸಗಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ  ನಗರಕ್ಕೆ ಆಗಮಿಸಿದ್ದ ಅವರ ಜೊತೆಯಲ್ಲಿ ಪತ್ನಿ ಗೀತಾ, ಹಿರಿಯ ನಟ ಚಂದ್ರಶೇಖರ್, ಗುರುದತ್ ಹಾಗು ಇತರರು ಆಗಮಿಸಿದ್ದರು. ಶ್ರೀ ಕ್ಷೇತ್ರದ ಪರವಾಗಿ ಶ್ರೀ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಮ್ ರವರು ಶಿವರಾಜ್ ಕುಮಾರ್ […]

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಪ್ರಮಾಣವಚನ ಸ್ವೀಕಾರ

Monday, May 13th, 2013
Siddaramaiah

ಬೆಂಗಳೂರು : ಅಕ್ಷಯ ತೃತೀಯ ಮತ್ತು ಬಸವ ಜಯಂತಿಯ ವಿಶೇಷ ದಿನವಾದ ಸೋಮವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ   ಕರ್ನಾಟಕ ರಾಜ್ಯದ 28 ನೇ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ನವರು ಅಧಿಕಾರ ಸ್ವೀಕರಿಸಿದರು. ಸಹಸ್ರಾರು ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಹಂಸರಾಜ ಭಾರದ್ವಾಜ್‌ ರವರು ಸಿದ್ದರಾಮಯ್ಯನವರಿಗೆ ಪ್ರತಿಜ್ಗ್ನಾ ವಿಧಿ ಬೋಧಿಸಿದರು. ಭಯ, ಪಕ್ಷಪಾತ, ಯಾವುದೇ ದ್ವೇಷವಿಲ್ಲದೆ, ರಾಜ್ಯದ ಜನರಿಗೆ ಸಂವಿಧಾನಬದ್ದವಾಗಿ ಹಾಗು ಕಾನೂನಿಗೆ ಅನುಸಾರವಾಗಿ ಆಡಳಿತ ನೀಡುತ್ತೇನೆ ಎಂದು ಸತ್ಯದ ಹೆಸರಿನಲ್ಲಿ ಸಿದ್ದರಾಮಯ್ಯನವರು ಪ್ರಮಾಣವಚನ […]

ಚಪ್ಪಲಿ ಗೋದಾಮಿನಲ್ಲಿ ಆಕಸ್ಮಿಕ ಅಗ್ನಿ ಅವಘಡ ಲಕ್ಷಾಂತರ ರೂಪಾಯಿ ನಷ್ಟ

Monday, May 13th, 2013
Fire mishap footwear shop

ಕುಂದಾಪುರ : ಕುಂದಾಪುರ ಶಾಸ್ತ್ರಿ ಸರ್ಕಲ್ ಸಮೀಪದ ವೈಶಾಲಿ ಕಾಂಪ್ಲೆಕ್ಸ್ ನ ಕೊನೆಯ ಮಹಡಿಯಲ್ಲಿರುವ ಪಾದುಕಾಲಯ ಎಂಬ ಚಪ್ಪಲಿ ಅಂಗಡಿಯೊಂದರ ಚಪ್ಪಲಿ ದಾಸ್ತಾನು ಗೋದಾಮಿನಲ್ಲಿ ಸಂಭವಿಸಿದ ಆಕಸ್ಮಿಕ ಅಗ್ನಿ ದುರಂತದಿಂದಾಗಿ ಲಕ್ಷಾಂತರ ಮೌಲ್ಯದ ಚಪ್ಪಲಿ ಸುಟ್ಟು ಭಸ್ಮವಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಬೆಳಗ್ಗೆ ಸುಮಾರು 8.30 ರ ವೇಳೆಗೆ ಗೋದಾಮಿನಲ್ಲಿ ಸಣ್ಣಪ್ರಮಾಣ ದಲ್ಲಿ ಕಾಣಿಸಿಕೊಂಡ ಬೆಂಕಿ ಕೆಲವೇ ಗಂಟೆಯಲ್ಲಿ ಗೋದಾಮಿನ ತುಂಬಾ ಆವರಿಸಿತು. ವಿಷಯವನ್ನರಿತು ಸ್ಥಳಕ್ಕಾಗಮಿಸಿದ  ಕುಂದಾಪುರ ಅಗ್ನಿಶಾಮಕ ದಳದ ಸಿಬ್ಬಂದಿಗಳು ಬೆಂಕಿ ನಂದಿಸಲು ಪ್ರಯತ್ನಿಸಿದರಾದರು, […]

ಕುಂದಾಪುರ : ವಾಹನ ಡಿಕ್ಕಿ ವ್ಯಕ್ತಿ ಸ್ಥಳದಲ್ಲೇ ಮೃತ್ಯು

Monday, May 13th, 2013
Kushal Shetty

ಕುಂದಾಪುರ :  ಕುಂದಾಪುರ ತೆಕ್ಕಟೆ ಕಣ್ಣುಕ್ಕೇರಿ ಸಮೀಪ ವೇಗವಾಗಿ ಬಂದ ವಾಹನವೊಂದು ರಸ್ತೆ ಬದಿಯಲ್ಲಿ ನಿಂತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೆ ಮೃತಪಟ್ಟ ಘಟನೆ ರವಿವಾರ ಸಂಜೆ ಸಂಭವಿಸಿದೆ. ಮೃತ ವ್ಯಕ್ತಿ ಮಂದಾರ್ಚಿ ನಿವಾಸಿ ಕುಶಾಲ್ ಶೆಟ್ಟಿ (47). ಮೃತ ವ್ಯಕ್ತಿ ಕುಶಾಲ್ ಶೆಟ್ಟಿ ಯವರು ಉಡುಪಿಯಲ್ಲಿ ಹೊಟೇಲ್ ಉದ್ಯಮ ಮಾಡಿಕೊಂಡಿದ್ದರು. ಸಂಬಂಧಿಕರ ಶುಭ ಸಮಾರಂಭಕ್ಕೆ ಆಗಮಿಸಿದ್ದ ಕುಶಾಲ್ ಶೆಟ್ಟಿಯವರು ಬೇರೊಬ್ಬರ ನಿರೀಕ್ಷೆಯಲ್ಲಿ ರಸ್ತೆ ಬದಿಯಲ್ಲಿ ಕಾಯುತ್ತಿದ್ದ ವೇಳೆ ಕುಂದಾಪುರದಿಂದ ಬಂದ ಅಪರಿಚಿತ ವಾಹನವೊಂದು […]

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ಆಯ್ಕೆ ಹಿನ್ನಲೆಯಲ್ಲಿ ದ.ಕ.ಜಿಲ್ಲಾ ಕಾಂಗ್ರೆಸ್ ನಿಂದ ಸಂಭ್ರಮಾಚರಣೆ

Saturday, May 11th, 2013
DK celebration victory

ಮಂಗಳೂರು : ಸಿದ್ದರಾಮಯ್ಯನವರು ಕರ್ನಾಟಕ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆಯಾದ ಹಿನ್ನಲೆಯಲ್ಲಿ ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರು ಸಿಹಿತಿಂಡಿ ವಿತರಿಸಿ, ಪಟಾಕಿ ಸಿಡಿಸುವ ಮೂಲಕ ಸಂಭ್ರಮಾಚರಿಸಿದರು. ಬಿಜೆಪಿ ಯ ಆಡಳಿತದಿಂದ ಬೇಸತ್ತ ಜನ ಈ ಚುನಾವಣೆಯಲ್ಲಿ ಕಾಂಗ್ರೆಸ್ ನ್ನು ಗೆಲ್ಲಿಸುವ ಮೂಲಕ ಮತ್ತೊಮ್ಮೆ  ರಾಜ್ಯ ರಾಜಕೀಯದಲ್ಲಿ ಅಭಿವೃದ್ದಿಯ ಶಕೆ ಆರಂಭವಾಗುವಂತೆ ಮಾಡಿದ್ದಾರೆ ಎಂದು ಅಶ್ರಫ್ ಹೇಳಿದರು. ಕೆಪಿಸಿಸಿ ಕಾರ್ಯದರ್ಶಿ ಎಂ.ಎ.ಗಪೂರ್ ಮಾತನಾಡಿ, ಹಿಂದುಳಿದ ವರ್ಗದ […]

ಉಚ್ಚಿಲ: ದುಷ್ಕರ್ಮಿ ಗಳಿಂದ ದನ ಕಳ್ಳತನ, ಧಾರ್ಮಿಕ ಸಾಮರಸ್ಯಕ್ಕೆ ಧಕ್ಕೆ ತರುವ ಪ್ರಯತ್ನ

Friday, May 10th, 2013
Cattle theft uchil

ಮಂಗಳೂರು : ಉಚ್ಚಿಲ ಸೇತುವೆ ಬಳಿಯ ನಿವಾಸಿ ಗಣೇಶ್ ವಾಸುದೇವ ಮಯ್ಯ ಎಂಬುವವರ ಮನೆಯಿಂದ ದನ ಮತ್ತು ಕರುವನ್ನು ಕದ್ದೊಯ್ದು ಬಳಿಕ ದನದ ಕಾಲನ್ನು ದುಷ್ಕರ್ಮಿಗಳು ಮನೆಯ ಎದುರಿನ ತುಳಸಿಕಟ್ಟೆ ಬಳಿ ಇರಿಸಿದ ಘಟನೆ ನಡೆದಿದೆ. ಗಣೇಶ್‌ ವಾಸುದೇವ ಮಯ್ಯ ರ ಮನೆಯ ಹಟ್ಟಿಯ ಹೊರಗೆ ಕಟ್ಟಿದ್ದ ಹಸು ಮತ್ತು ಕರುವನ್ನು ದುಷ್ಕರ್ಮಿಗಳು  ಕಳವು ಗೈದು ಬಳಿಕ ಅದೇ ಮನೆಯ ತುಳಸಿಕಟ್ಟೆಯ ಬಳಿ ದನದ ಕಾಲೊಂದನ್ನು ಇರಿಸಿದ್ದಾರೆ. ಬೆಳಗ್ಗೆ ಹಾಲು ಕರೆಯಲು ಗಣೇಶ್ ರವರ ಪತ್ನಿ ಹೊರಗೆ […]