ನಿಮ್ಮ ಪತಿ ನಿಮ್ಮ ಮಾತು ಕೇಳುತ್ತಿಲ್ಲವೇ? ಇಲ್ಲಿದೆ ಪರಿಹಾರ

Tuesday, November 26th, 2019
arali-mara

ದಾಂಪತ್ಯ ಜೀವನದಲ್ಲಿ ಗಂಡ-ಹೆಂಡತಿ ತಮ್ಮ ಜೀವನವನ್ನು ಸುಭಿಕ್ಷೆಯಾಗಿಟ್ಟುಕೊಳ್ಳಲು ಪ್ರತಿದಿನ ತಮ್ಮದೆಯಾದ ಚಟುವಟಿಕೆಯಲ್ಲಿ ನಿರತರಾಗಿರುತ್ತಾರೆ. ಪತಿಯ ಪ್ರೇಮಕ್ಕೆ ಪತ್ನಿ ಹಾತೊರೆಯುವುದು ಸಹಜ ಆದರೆ ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪತಿ ನಿಮ್ಮ ಇಚ್ಛೆ ಅರಿಯದೆ ತದ್ವಿರುದ್ಧವಾಗಿ ನಡೆಯುತ್ತಿರಬಹುದು ಮತ್ತು ಪರರ ಮಾತುಗಳನ್ನು ಕೇಳಿ ಜೀವನ ದುಸ್ತರ ಮಾಡಿಕೊಳ್ಳಬಹುದು ಇಂತಹ ವಿಷಯಗಳು ತಮಗೆ ಆಘಾತ ಹಾಗೂ ಅತ್ಯಂತ ದುಃಖ ತರಿಸುತ್ತದೆ. ದಾಂಪತ್ಯ ಜೀವನದಲ್ಲಿ ಪ್ರೇಮದಿಂದ ಇರಲು ಸದಾ ಬಯಸುವುದು ಸಹಜ ಇಂತಹ ಸಮಸ್ಯೆ ಕುಟುಂಬದಲ್ಲಿ ಭುಗಿಲೆದ್ದಾಗ ದಾರಿಕಾಣದೆ ಖಿನ್ನತೆ ಅನುಭವಿಸುವಿರಿ. ಚಿಂತಿಸದಿರಿ […]

ಭಕ್ತರಿಗೆ ಚಾಟಿಯೇಟು ನೀಡುವ ಚಾಮುಂಡಿ ದೈವದ ವಿರುದ್ಧ ದೂರು ದಾಖಲು

Tuesday, November 26th, 2019
chamundi daiva

ಕಾಸರಗೋಡು : ಕೇರಳ ರಾಜ್ಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಣೆಯಿಂದ  ಕೇರಳದ ಕಾಸರಗೋಡು ಜಿಲ್ಲೆಯ ಕಾಞಂಗಾಡ್ ನ ಮೂವಲಂಕುಳಿ ಚಾಮುಂಡಿ ದೈವವೂ ಭಕ್ತಾಧಿಗಳಿಗೆ ಚಾಟಿಯೇಟು ನೀಡಿರುವ ಕುರಿತು ಪ್ರಕರಣ ದಾಖಲಿಸಿದೆ . ಈ ಘಟನೆ ಕುರಿತಂತೆ ವರದಿಯನ್ನು 30 ದಿನಗಳೊಳಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಇಲಾಖೆಗೆ ಸೂಚಿಸಿದೆ ಎಂದು ತಿಳಿದುಬಂದಿದೆ. ಮೂವಲಾಂಕುಳಿ ಚಾಮುಂಡಿ ದೈವದ ಕೋಲ ಎಂದರೆ ತೆಯ್ಯಂ ಆಗುವಾಗ ಜನರನ್ನು ಓಡಿಸಿ ಹೊಡೆಯುವ ಸಂಪ್ರದಾಯವಿದೆ. ಈ ದೈವದ ಹೊಡೆತ ತಿನ್ನುವ ಹರಕೆ ಕೂಡಾ ಇದೆ […]

ಸೋಲು ಗೆಲುವಿಗಿಂತ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ : ವೀಣಾ ಅಚ್ಚಯ್ಯ 

Friday, November 15th, 2019
veena achayya

ಮಡಿಕೇರಿ  : ವಿದ್ಯಾರ್ಥಿಗಳು ಕ್ರೀಡೆ ಹಾಗೂ ವಿವಿಧ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವುದು ಮುಖ್ಯ. ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ಸ್ಪರ್ಧೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ವಿಕಸನಕ್ಕೆ ಸಹಕಾರಿಯಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯ ಅಭಿಪ್ರಾಯಪಟ್ಟಿದ್ದಾರೆ. ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ, ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸರ್ಕಾರಿ ಪದವಿ ಪೂರ್ವ ಕಾಲೇಜು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಾಂಸ್ಕೃತಿಕ […]

ಮೊಸಳೆ ಬಾಯಿಂದ ತಂಗಿಯನ್ನು ಕಾಪಾಡಿದ 15 ವರ್ಷದ ಅಣ್ಣ

Friday, November 15th, 2019
hashim

ಮನಿಲಾ : ಇನ್ನೇನು ದಡ  ಸೇರಬೇಕು ಅನ್ನುವಷ್ಟರಲ್ಲಿ  14 ಅಡಿ ಉದ್ದದ ಮೊಸಳೆಯೊಂದು ಬಾಲಕಿಯ ಕಾಲನ್ನು ಹಿಡಿದು ಬಿಟ್ಟಿತು.  ಇದನ್ನು ಗಮನಿಸಿದ  ಅಣ್ಣ ತಂಗಿಯನ್ನು ಕಾಪಾಡಿರುವ ಘಟನೆ ಫಿಲಿಪೈನ್ಸ್ ನ ಪಲವಾನ್‍ನಲ್ಲಿ ನಡೆದಿದೆ. 12 ವರ್ಷದ ತಂಗಿ ಹೈನಾ ಲಿಸಾ ಜೋಸ್ ಹಬಿಯನ್ನು ಧೈರ್ಯಶಾಲಿಯಾದ 15 ವರ್ಷದ ಹಾಶಿಮ್ ಮೊಸಳೆಯ ಬಾಯಿಂದ ಕಾಪಾಡಿದ್ದಾನೆ. ಹಾಶಿಮ್ ಮತ್ತು ಹೈನಾ ಮನೆಗೆ ಹೋಗುತ್ತಿರುವಾಗ ಈ ಘಟನೆ ನಡೆದಿದ್ದು, ಮನೆಗೆ ತೆರಳಲು ಬಿದಿರಿನ ಪಟ್ಟಿಯ ಮೇಲೆ ನದಿ ದಾಟುತ್ತಿದ್ದಾಗ ಮೊಸಳೆ ಹೈನಾಳ […]

ಮನೆಗೆ ತೆರಳಿ ಪೂಜೆ ಮಾಡಿದ ಅರ್ಚಕನಿಗೆ ಬ್ಲಾಕ್‌ ಮೇಲ್‌ ಮಾಡಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ ಐನಾತಿಗಳು

Thursday, November 14th, 2019
Purohith

ಮೈಸೂರು ; ಅರ್ಚಕ ವೃತ್ತಿ ನಡೆಸಿಕೊಂಡಿರುವ ವ್ಯಕ್ತಿಯೊಬ್ಬರಿಗೆ ಮೂವರು ಐನಾತಿಗಳು ಸೇರಿ ಬ್ಲಾಕ್‌ ಮೇಲ್‌ ಮಾಡಿ ಬರೋಬ್ಬರಿ 20 ಲಕ್ಷ ರೂಪಾಯಿ ವಸೂಲಿ ಮಾಡಿದ ಘಟನೆ ವರದಿ ಆಗಿದೆ. ಪೋಲೀಸರು ಆರೋಪಿಗಳ ಹೆಡೆಮುರಿ ಕಟ್ಟಿ 13.77 ಲಕ್ಷ ರೂಪಾಯಿಗಳನ್ನು ವಸೂಲಿ ಮಾಡಿದ್ದಾರೆ. ನಡೆದಿದ್ದೇನು ಗೊತ್ತಾ ? ಕೊಳ್ಳೇಗಾಲದಲ್ಲಿ ಆಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕರಾಗಿರುವ ರಾಘವನ್‌ ಭಕ್ತರ ಕೋರಿಕೆಯ ಮೇರೆಗೆ ವಿವಿಧ ಊರುಗಳಿಗೆ ತೆರಳಿ ಪೂಜಾ , ಹವನ ,ಹೋಮ ಕಾರ್ಯ ನಡೆಸಿಕೊಡುತಿದ್ದರು. ಅದರಂತೆ ಆರು ತಿಂಗಳ […]

ಸಿದ್ದರಾಮಯ್ಯರಿಗೆ ಹೆಚ್ಚು ಅಧಿಕಾರ ಕೊಡುವುದೇ ತಪ್ಪು : ಜನಾರ್ದನ ಪೂಜಾರಿ ಆರೋಪ

Tuesday, November 5th, 2019
Janardhan-Poojary

ಮಂಗಳೂರು : ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷಕ್ಕೆ ಶನಿ, ಅವರು ಪಕ್ಷವನ್ನು ಮುಗಿಸಿಯೇ ಹೋಗುವುದು. ಅವರಿಗೆ ಹೆಚ್ಚು ಅಧಿಕಾರ ಕೊಡುವುದೇ ತಪ್ಪು, ಹೈಕಮಾಂಡ್ ಮಾಡುತ್ತಿದೆ ಎಂದು ಹಿರಿಯ ಕಾಂಗ್ರೆಸ್ ಮುಖಂಡ ಜನಾರ್ದನ ಪೂಜಾರಿ ಆರೋಪಿಸಿದ್ದಾರೆ. ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹೇಳಿಕೆ ಬಗ್ಗೆ ತನ್ನ ವಿರುದ್ಧ ದೂರು ನೀಡಲಿ, ಪಕ್ಷದಿಂದ ತೆಗೆದು ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮನಪಾ ಚುನಾವಣೆಯ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆ ಬಿಡುಗಡೆನ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ಕರೆದರೂ ನಾನು ಹೋಗುವುದಿಲ್ಲ. ಅವರು ಏನು […]

ಪಾಣೆಮಂಗಳೂರು ಗ್ರಾಮದ ಅಕ್ರಮ ಮನೆಗಳ ತೆರವು

Saturday, September 14th, 2019
pane-mangaluru

ಬಂಟ್ವಾಳ : ಪಾಣೆಮಂಗಳೂರು ಗ್ರಾಮದ ನೇತ್ರಾವತಿ ನದಿ ತೀರದಲ್ಲಿ ಹಲವು ವರ್ಷಗಳಿಂದ ಅಕ್ರಮವಾಗಿ ಕಟ್ಟಲಾಗಿದ್ದ ಸುಣ್ಣದಗೂಡು ಕಟ್ಟಡವನ್ನು ತಾಲೂಕು ಆಡಳಿತ, ಪುರಸಭಾಡಳಿತ ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ತೆರವುಗೊಳಿಸಿದೆ. ಪೊಲೀಸ್ ಬಂದೋಬಸ್ತ್ ನೊಂದಿಗೆ ಮಂಗಳೂರು ಸಹಾಯಕ ಕಮೀಷನರ್ ರವಿಚಂದ್ರ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಹಾಗೂ ಪುರಸಭಾ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಮೊದಲಾದ ಅಧಿಕಾರಿಗಳು ಭಾಗವಹಿಸಿದ್ದರು. ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಡಿ.ಟಿ.ನಾಗರಾಜ್, ಪಿಎಸ್ಐ ಚಂದ್ರಶೇಖರ್    

ಎಸ್ ಅಂಗಾರ ರವರಿಗೆ ಈ ಬಾರಿಯೂ ತಪ್ಪಿದ ಸಚಿವ ಸ್ಥಾನ

Tuesday, August 20th, 2019
S-angaara

ಮಂಗಳೂರು : ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟದಲ್ಲಿ ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆಗೆ ಮಂತ್ರಿಗಿರಿ ಪಟ್ಟ ದಕ್ಕದಿರುವುದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಬಿಜೆಪಿಗೆ 7 ಶಾಸಕರನ್ನು ಕೊಟ್ಟರೂ ಜಿಲ್ಲೆಗೆ ಮಂತ್ರಿ ಭಾಗ್ಯ ಸಿಕ್ಕಿಲ್ಲ. ನೂತನ ಸಚಿವ ಸಂಪುಟ ಪಟ್ಟಿಯಲ್ಲಿ ಕೊನೆ ಕ್ಷಣದವರೆಗೆ ಸುಳ್ಯ ಶಾಸಕ ಎಸ್.ಅಂಗಾರ ಅವರು ಹೆಸರು ಕಾಣಿಸಿಕೊಂಡಿತ್ತು. ಸಚಿವ ಸ್ಥಾನ ದೊರಕುವ ನಿರೀಕ್ಷೆಯಲ್ಲಿ ಅಂಗಾರ ನಿನ್ನೆ ರಾತ್ರಿಯೇ ಕುಟುಂಬದೊಂದಿಗೆ ಬೆಂಗಳೂರಿಗೆ ತೆರಳಿದ್ದರು. […]

ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ಕರಾವಳಿಗೆ ಮೂರು ಸಚಿವ ಸ್ಥಾನ

Tuesday, July 30th, 2019
bsy

ಮಂಗಳೂರು: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರು ಸಚಿವ ಸಂಪುಟದಲ್ಲಿ ಕರಾವಳಿಗೆ ಎರಡು ಸಚಿವ ಸ್ಥಾನ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆ ಲಭ್ಯವಾಗುವ ಸಾಧ್ಯತೆ  ಇದೆ ಎಂದು ಹೇಳಲಾಗಿದೆ. ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಶಾಸಕ ಅಂಗಾರ , ಉಡುಪಿಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಸುನಿಲ್‌ ಕುಮಾರ್‌ ಅವರ ಹೆಸರು ಮುಂಚೂಣಿಯಲ್ಲಿವೆ.  ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಬಳಿ ಚರ್ಚಿಸಿದ ಬಳಿಕ ಅಂತಿಮಗೊಳಿಸಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿಯ ಅಗ್ರಪಂಕ್ತಿಯ ನಾಯಕರಿಗೆ, ಪ್ರಾದೇಶಿಕ ಮತ್ತು […]

ಬಂಟ್ವಾಳದ ಎಸ್.ವಿ.ಎಸ್. ಸಂಘದಲ್ಲಿ ಬಹುಕೋಟಿ ಲೂಟಿ; ವೆಂಕಟರಮಣನ ಹೆಸರಲ್ಲಿ ಮತ್ತೊಂದು ನಾಮ

Thursday, June 13th, 2019
svs college

ಬಂಟ್ವಾಳ : ಇದು ವ್ಯಾಪಾರಕ್ಕೆ ಹೆಸರುವಾಸಿ. ಇಲ್ಲಿ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಸಂಘ ಸ್ಥಾಪಿಸಿ ಅದರಡಿಯಲ್ಲಿ ಪ್ರಾಥಮಿಕ, ಮಾದ್ಯಮಿಕ ಮತ್ತು ಹೈಸ್ಕೂಲು ಹಾಗು ಕಾಲೇಜುಗಳನ್ನು ಹಲವು ವರ್ಷಗಳ ಹಿಂದೆ ತೆರೆಯಲಾಯಿತು. ಕಳೆದ ಐದು ದಶಕಗಳಲ್ಲಿ ಈ ಸಂಸ್ಥೆಗಳಲ್ಲಿ ಸಾವಿರಾರು ಮಂದಿ ಕಲಿತು ಜೀವನದಲ್ಲಿ ಮುಂದೆ ಬಂದಿದ್ದಾರೆ. ಆದರೆ ಕಳೆದ ಐದು ವರ್ಷಗಳಿಂದ ಈ ವಿದ್ಯಾ ಸಂಸ್ಥೆಗಳ ಮಾತೃ ಸಂಸ್ಥೆಯಾದ ಶ್ರೀ ವೆಂಕಟರಮಣ ಸ್ವಾಮೀ ವಿದ್ಯಾವರ್ಧಕ ಅವ್ಯವಹಾರಗಳಲ್ಲಿ ಮುಳುಗಿ ನಾರತೊಡಗಿದೆ. ಬಂಟ್ವಾಳದ ಸಜ್ಜನರು ಕಟ್ಟಿದ ಈ ಸಂಸ್ಥೆಗೆ […]