ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಸತಾಯಿಸಿದ ಕಾರು ಚಾಲಕನ ಬಂಧನ

Thursday, January 20th, 2022
Monish

ಮಂಗಳೂರು : ನಗರದಿಂದ ಭಟ್ಕಳಕ್ಕೆ ಗಂಭೀರ ಸ್ಥಿತಿಯಲ್ಲಿದ್ದ ರೋಗಿಯನ್ನು ಕರೆದೊಯ್ಯುತ್ತಿದ್ದ ಆ್ಯಂಬುಲೆನ್ಸ್ ಗೆ ದಾರಿಬಿಟ್ಟು ಕೊಡದೆ ಅಡ್ಡಾದಿಡ್ಡಿಯಾಗಿ ಕಾರು ಚಲಾಯಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ಮೋನಿಶ್ ಎಂದು ಗುರುತಿಸಲಾಗಿದೆ. ಮಂಗಳೂರು ಉತ್ತರ ಸಂಚಾರಿ ಠಾಣೆಯಲ್ಲಿ ಯು ಎಸ್ 279 ಐಪಿಸಿ ಮತ್ತು 184 ಐಎಂವಿ ಆಕ್ಟ್ ಪ್ರಕಾರ ಪ್ರಕರಣ ದಾಖಲಾಗಿದೆ. ಇದೇ ಕಾರಿನ ಚಾಲಕನು ಉಡುಪಿಯಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್‌ಗೆಕಿರುಕುಳ ನೀಡಿದ್ದಾನೆ ಎಂಬ ಆರೋಪವೂ ವ್ಯಕ್ತವಾಗಿದೆ. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ರೋಗಿಯನ್ನು ಬುಧವಾರ […]

ಎಲೆಕ್ಟ್ರಿಕಲ್ ಡೆಕೋರೇಟರ್ ಬೈಕ್ ಸ್ಕಿಡ್ ಆಗಿ ಮೃತ್ಯು

Thursday, January 20th, 2022
Sachin

ಮಂಗಳೂರು : ನೇತ್ರಾವತಿ ಸೇತುವೆ ಮೇಲೆ ಬೈಕ್ ಸ್ಕಿಡ್ ಆಗಿ ಗಂಭೀರವಾಗಿ ಗಾಯಗೊಂಡಿದ್ದ ಯುವಕನೋರ್ವ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ ಘಟನೆ ಜ. 20 ರ ಗುರುವಾರ ನಡೆದಿದೆ. ಅಪಘಾತದ ಸ್ಥಳದಲ್ಲಿ ದೊರೆತ ಪಾನ್ ಕಾರ್ಡ್‌ ಆಧಾರದ ಮೇಲೆ ಪೊಲೀಸರು ಮೃತರನ್ನು ಸಚಿನ್ ಕೆ ಎಂ (32) ಎಂದು ಗುರುತಿಸಲಾಗಿದೆ. ಉರ್ವದಲ್ಲಿ ಎಲೆಕ್ಟ್ರಿಕಲ್ ಡೆಕೋರೇಟರಾಗಿ ಕೆಲಸ ಮಾಡುತ್ತಿದ್ದ ಅವರ ಬೈಕ್ ರಾತ್ರಿ 11.45ರ ಸುಮಾರಿಗೆ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ಸ್ಕಿಡ್ ಆಗಿ ಗಂಭೀರ ಗಾಯಗೊಂಡಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, […]

ಯಕ್ಷಗಾನ ಕಲಾವಿದ ಬೈಕ್ ಅಪಘಾತದಲ್ಲಿ ಮೃತ್ಯು

Thursday, January 20th, 2022
Vamana Devadiga

ಮೂಡುಬಿದಿರೆ: ಓಮ್ನಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹಿರಿಯಡ್ಕ ಮೇಳದ ಯಕ್ಷಗಾನ ಕಲಾವಿದ ಮೃತಪಟ್ಟಿದ್ದಾರೆ. ಗೋಳಿತ್ಯಾರು ಬೆಳ್ತಂಗಡಿ ತಾಲೂಕು ವೇಣೂರು ಸಮೀಪದ ವಾಮನ ಕುಮಾರ್ ಅವರಿಗೆ 47 ವರ್ಷ ವಯಸ್ಸಾಗಿತ್ತು. ಬಡಗು ತಿಟ್ಟಿನ ಯಕ್ಷಗಾನ ಮೇಳ  (ಹಿರಿಯಡ್ಕ ಮೇಳ)ದಲ್ಲಿ ಹಾಗೂ ಚಿಕ್ಕಮೇಳದಲ್ಲಿ ಯಕ್ಷ ಕಲಾವಿದರಾಗಿದ್ದರು. ಕುಂದಾಪುರದ ಕೊಂಕಿ‌ ಎಂಬಲ್ಲಿ ಯಕ್ಷಗಾನ ಮುಗಿಸಿ ಬೈಕ್ನಲ್ಲಿ ಬರುವಾಗ ಮೂಡುಬಿದಿರೆ ಗಂಟಾಲಕಟ್ಟೆ ಸಮೀಪ  ಅಪಘಾತಕ್ಕೀಡಾಗಿ ಮೃತಪಟ್ಟಿದ್ದಾರೆ.    

ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ -ಗುರು ದೇವಾನಂದ ಸ್ವಾಮಿ, ಶ್ರೀ ಗುರುದೇವದತ್ತ ಸಂಸ್ಥಾನಮ್ ಓಡಿಯೂರು

Thursday, January 20th, 2022
Kalikamba-Brahmmakalasha

ಮಂಗಳೂರು : ತಾಳ್ಮೆ ಸಹನೆಗೆ ಇನ್ನೊಂದು ಹೆಸರು ವಿಶ್ವಕರ್ಮ ಸಮಾಜ, ವಿಶ್ವಕರ್ಮ ಬ್ರಾಹ್ಮಣ ಸಮಾಜ ಇಲ್ಲದೆ ಸಮಾಜವೇ ಇಲ್ಲ ಸಮಾಜದ ವಿವಿಧ ಸ್ತರಗಳಲ್ಲಿ ವಿಶ್ವಕರ್ಮರ ಕೊಡುಗೆ ಅನನ್ಯ ವಾದುದು. ಕ್ಷೇತ್ರದ ಮೊಕ್ತೇಸರರು ಬೆನ್ನು ಮೂಳೆಯಂತೆ ಆಡಳಿತವನ್ನು ಎಲ್ಲರ ಸಹಕಾರದಿಂದ ನಡೆಸಿದಲ್ಲಿ ಕ್ಷೇತ್ರ ಅಭಿವೃದ್ಧಿ ಪರಿಪೂರ್ಣತೆ ಕಾಣುವಂತಾಗುತ್ತದೆ, ದತ್ತಾತ್ರೇಯನಿಗೂ ಕಾಳಿಕಾಂಬೆಯ ಕ್ಷೇತ್ರಕ್ಕೂ ಅವಿನಾಭವ ಸಂಬಂಧವಿದೆ, ಧರ್ಮ ಶ್ರದ್ದೆಯಿಂದ ನಮ್ಮ ಸಂಸ್ಕಾರ ರೂಪುಗೊಳ್ಳುತ್ತದೆ ಇದಕ್ಕಾಗಿ ವೇದಿಕೆಗಳು ಸಿದ್ದವಾಗಬೇಕು ಎಂದು ಶ್ರೀ ಕಾಳಿಕಾಂಬಾ ರಂಗ ಮಂಟಪದಲ್ಲಿ ಜನವರಿ 19ರಂದು ಬ್ರಹ್ಮಕಲಶೋತ್ಸವ ಸಮಾರಂಭದ ಸಲುವಾಗಿ […]

ಮನೆಯಿಂದ ಹೋದ ಯುವತಿ ನಾಪತ್ತೆ

Wednesday, January 19th, 2022
chandana

ಉಡುಪಿ :  ಮನೆಯಿಂದ ಹೋದ ಯುವತಿ ವಾಪಸು ಬಾರದೆ ನಾಪತ್ತೆಯಾದ ಪ್ರಕರಣ ಕುಂದಾಪುರ ತಾಲೂಕು ಉಳ್ತೂರು ಗ್ರಾಮದ ಕಳ್ಳಿಗುಡ್ಡೆಯಲ್ಲಿ ವರದಿಯಾಗಿದೆ. ಚಂದನಾ (19) ಎಂಬ ಯುವತಿಯು ಜನವರಿ 11ರಂದು  ಮನೆಯಿಂದ ಹೋದಾಕೆ ಮರಳಿ ಬಂದಿಲ್ಲ ಎಂದು ದೂರು ನೀಡಿದ್ದಾರೆ. 5 ಅಡಿ ಎತ್ತರ, ಸಾಧರಣ ಮೈಕಟ್ಟು, ಬಿಳಿ ಮೈ ಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕೋಟ ಪೊಲೀಸ್ ಠಾಣೆ ದೂ.ಸಂಖ್ಯೆ : 0820-2564155, ಮೊ. ನಂಬರ್ :9480805454, ನಗರ ಪೊಲೀಸ್ ವೃತ್ತ ನಿರೀಕ್ಷಕರ ಕಛೇರಿ […]

ʼನವಿಲುಗರಿʼ ಕವನ ಸಂಕಲನ ಬಿಡುಗಡೆ

Wednesday, January 19th, 2022
Navilu-Gari

ಮಂಗಳೂರು: ಜೀವನ ಎದುರಿಸಲು ಸೃಜನಶೀಲತೆ ಅಗತ್ಯ. ಕಾವ್ಯವೆಂಬ ಸೃಜನಶೀಲ ಹವ್ಯಾಸ ಕಷ್ಟಗಳಿಂದ ಹೊರಬಂದು ನಮ್ಮನ್ನು ನಾವೇ ಸಾಂತ್ವನಪಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು. ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಬುಧವಾರ ಡಾ. ಭಾರತಿ ಪಿಲಾರ್ ಅವರ ʼನವಿಲುಗರಿʼ ಕವನ ಸಂಕಲನ ಬಿಡುಗಡೆ ಮಾಡಿ ಮಾತನಾಡಿದ ಅವರು, ಕವನ ಸಂಕಲನದ 40 ಕವನಗಳು ಓದುಗನನ್ನು ಚಿಂತನೆಗೆ ಹಚ್ಚುತ್ತವೆ. ಭಾವನೆಗಳ ಹೊಯ್ದಾಟ, ಕಟು ವಾಸ್ತವ ನಮ್ಮನ್ನು ನಾವು ಮರೆಯುವಂತೆ […]

ವೆಂಕಟರಮಣ ದೇವಸ್ಥಾನದ ನೂತನ ಬ್ರಹ್ಮರಥ ವೀಕ್ಷಿಸಿದ ಕಾಶೀ ಮಠಾಧೀಶರು

Wednesday, January 19th, 2022
venkataramana-ratha

ಮಂಗಳೂರು : ಇತಿಹಾಸ ಪ್ರಸಿದ್ಧ ಮಂಗಳೂರು ರಥೋತ್ಸವ ಹಾಗೂ ವೆಂಕಟರಮಣ ದೇವಸ್ಥಾನದ ಪುನಃ ಪ್ರತಿಷ್ಠಾ ದಶಮಾನೋತ್ಸವ ಮತ್ತು ಶ್ರೀ ದೇವರ ನೂತನವಾಗಿ ನಿರ್ಮಾಣಗೊಂಡ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ ಪ್ರಯುಕ್ತ ಶ್ರೀ ಸಂಸ್ಥಾನ ಕಾಶೀ ಮಠಾಧಿಪತಿಗಳಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರು ನಗರದ ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಳಕ್ಕೆ ಇಂದು ಬೆಳಿಗ್ಗೆ ಆಗಮಿಸಿದ್ದು ಶ್ರೀಗಳವರಿಗೆ ಸಮಾಜಭಾಂದವರಿಂದ ಭವ್ಯ ಪೂರ್ಣ ಕುಂಭ ಸ್ವಾಗತ ನೀಡಲಾಯಿತು. ಶ್ರೀ ದೇವರ ದರ್ಶನ ಬಳಿಕ ಸಂಸ್ಥಾನದ ದೇವರ ನೈರ್ಮಲ್ಯ ವಿಸರ್ಜನಾ ಪೂಜೆ ಬಳಿಕ ಶ್ರೀ […]

ಪರಿಶೀಲನೆ ಬಳಿಕ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ತೀರ್ಮಾನ

Wednesday, January 19th, 2022
Nalin Kumar Kateel

ಮಂಗಳೂರು : ರಸ್ತೆ ಕಾಮಗಾರಿಗಾಗಿ ಶಿರಾಡಿಘಾಟ್ ವಾಹನ ಸಂಚಾರ ನಿಷೇಧ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರ ಮಾಡಿರುವ ಪ್ರಸ್ತಾವನೆ ಬಗ್ಗೆ ತಕ್ಷಣ ನಿರ್ಣಯ ಕೈಗೊಳ್ಳುವಂತಿಲ್ಲ. ದ.ಕ.ಜಿಲ್ಲಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ತೀರ್ಮಾನ ಕೈಗೊಳ್ಳಬೇಕೆಂದು ಸಂಸದ ನಳಿನ್‌ಕುಮಾರ್ ಕಟೀಲ್ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ. ಘಾಟ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿದರೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಬಹುದೆಂದು ರಾಷ್ಟ್ರೀಯ ಹೆದ್ದಾರಿ  ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸಲು ಶಿರಾಡಿಘಾಟ್ ಪ್ರಮುಖ ಸಂಪರ್ಕ ರಸ್ತೆಯಾಗಿದ್ದು, ಆರು […]

ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ತಳ್ಳಿ ಹಾಕಿದ ಯುವ ಕಾಂಗ್ರೆಸ್ ಕಾರ್ಯಕರ್ತರು

Tuesday, January 18th, 2022
Ramanatha Rai

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ  ಮಾಜಿ ಸಚಿವ ಬಿ.ರಮಾನಾಥ ರೈ ಹಾಗು ಯುವ ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ ನಡೆದು, ರೈ ಅವರನ್ನು ತಳ್ಳುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ ಘಟನೆ ಮಂಗಳವಾರ ನಡೆಯಿತು. ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಾರಾಯಣ ಗುರುಗಳ ಟ್ಯಾಬ್ಲೋ ಪ್ರದರ್ಶನಕ್ಕೆ ಕೇಂದ್ರ ಸರ್ಕಾರ ಅವಕಾಶ ನಿರಾಕರಿಸಿರುವುದನ್ನು ವಿರೋಧಿಸಿ ಯುವ ಕಾಂಗ್ರೆಸ್ ಕಾಲ್ನಡಿಗೆ ಜಾಥಾ ಹಮ್ಮಿಕೊಂಡಿತ್ತು. ಏಕಾಏಕಿ ನಿರ್ಧಾರ ಕೈಗೊಂಡು ಜಾಥಾ ನಡೆಸಿದ ವಿಚಾರದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಅಸಮಾಧಾನ ವ್ಯಕ್ತಪಡಿಸಿದರು. ಆಗ ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ […]

ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಚತುರ್ಥಪರ್ಯಾಯದ ಸಂಭ್ರಮ

Tuesday, January 18th, 2022
Paryaya

ಉಡುಪಿ:  ಉಡುಪಿ ಶ್ರೀ ಕೃಷ್ಣ ಮಠದ ಶ್ರೀ ಕೃಷ್ಣಾಪುರ ಮಠದ ವಿದ್ಯಾಸಾಗರತೀರ್ಥ ಶ್ರೀಪಾದರು  ತನ್ನ ಚತುರ್ಥಪರ್ಯಾಯದ ಗದ್ದುಗೆಯನ್ನೇರಿದರು. ಉಡುಪಿ ಶ್ರೀಕೃಷ್ಣ ಮಠದ ಪೂಜಾಧಿಕಾರ ಹಸ್ತಾಂತರ ಸಮಾರಂಭದಲ್ಲಿ, ಪ್ರಸ್ತುತ ಪರ್ಯಾಯ ಪೀಠಾಧಿಪತಿಗಳಾದ ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ, ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಸ್ವಾಮೀಜಿಗೆ ಪೊಡವಿಗೊಡೆಯ ಶ್ರೀಕೃಷ್ಣನ ಪೂಜಾಧಿಕಾರವನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಿದರು. 2 ವರ್ಷಕ್ಕೊಮ್ಮೆ ನಡೆಯುವ ಈ ಸಮಾರಂಭದಲ್ಲಿ ಮಂಗಳವಾರ  ನಸುಕಿನ ಜಾವ 5.25ಕ್ಕೆ ಶ್ರೀಕೃಷ್ಣಮಠ ಪ್ರವೇಶ ಮಾಡಿ ದೇವರ ದರ್ಶನ ಪಡೆದ ಶ್ರೀಗಳಿಗೆ ಪರ್ಯಾಯ ಅದಮಾರು ಮಠದ ಶ್ರೀ […]