ಅಂತಾರಾಷ್ಟ್ರೀಯ ಮಟ್ಟದಿಂದಲೂ ಸ್ಪಂದನೆ ಪಡೆದ ಕಲ್ಕೂರ ಪ್ರತಿಷ್ಠಾನದ ಕೃಷ್ಣ ವೇಷ ಸ್ಪರ್ಧೆ

Tuesday, August 31st, 2021
Kalkura-Krishna

ಮಂಗಳೂರು :  ಅಸ್ಸಾಂ, ರಾಜಸ್ಥಾನ, ದೆಹಲಿ, ಚೆನ್ನೈ, ಆಂದ್ರ ಪ್ರದೇಶ, ತೆಲಂಗಾಣ, ಕೇರಳ, ಮುಂಬಯಿ ಹೀಗೆ ವಿವಿಧ ರಾಜ್ಯಗಳಿಂದಲೂ ಕರ್ನಾಟಕದಾದ್ಯಂತದಿಂದಲೂ ಮಾತ್ರವಲ್ಲ ಅಮೆರಿಕಾ, ಕೆನಡಾ, ಆಸ್ಟ್ರೇಲಿಯಾ, ಬೆಹರಿನ್ ದುಬೈ, ಸಿಂಗಾಪುರ ಹೀಗೆ ಅನೇಕ ದೇಶಗಳಿಂದಲೂ ಸುಮಾರು 7 ರಿಂದ 8 ಸಾವಿರ ಸ್ಪರ್ಧಿಗಳು ಈ ಬಾರಿ ಅತ್ಯುತ್ಸಾಹದಿಂದ ಕಲ್ಕೂರ ಪ್ರತಿಷ್ಠಾನ ಏರ್ಪಡಿಸಿದ್ದ ರಾಷ್ಟ್ರೀಯ ಮಕ್ಕಳ ಉತ್ಸವ ‘ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ’ ಪಾಲ್ಗೊಳ್ಳುವ ಮೂಲಕ ಅಂತರಾಷ್ಟ್ರೀಯ ಉತ್ಸವವಾಗಿ ಮಾರ್ಪಾಡುಗೊಂಡಿತು. ಸ್ಪರ್ಧೆ ಮುಗಿದ ಬಳಿಕವೂ ಇನ್ನೂ ಕೂಡ online ನಲ್ಲಿ ಸ್ಪರ್ಧಿಗಳ ವಿಡಿಯೋ […]

ಉಳ್ಳಾಲ : ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿದ ದುಷ್ಕರ್ಮಿಗಳು

Sunday, August 29th, 2021
buffalo

ಉಳ್ಳಾಲ : ತೋಟಕ್ಕೆ ಬಂದ ಕೋಣದ ಕತ್ತು ಕೊಯ್ದು ಹತ್ಯೆ ನಡೆಸಿರುವ ಅಮಾನವೀಯ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೊಲ್ಯ ಬಳಿಯ ಬಲ್ಯ ಎಂಬಲ್ಲಿ ರವಿವಾರ ಸಂಜೆ ನಡೆದಿದೆ. ಹಿಂದೂ ಸಂಘಟನೆ ಕಾರ್ಯಕರ್ತರು ತೋಟದ ಮಾಲೀಕನೇ ಕೋಣವನ್ನು ಬೇರೆಯವರ ಮೂಲಕ ಹತ್ಯೆ ನಡೆಸಿರುವುದಾಗಿ ಆರೋಪಿಸಿದ್ದಾರೆ. ಬಲ್ಯ ಎಂಬಲ್ಲಿರುವ ಜಯರಾಮ ಶೆಟ್ಟಿ ಎಂಬವರ ತೋಟದ ಬಳಿ ಕೃತ್ಯ ನಡೆದಿದೆ. ಕೋಣದ ಕುತ್ತಿಗೆಯನ್ನು ಹರಿತವಾದ ಆಯುಧದಿಂದ ಕಡಿದ ಸ್ಥಿತಿಯಲ್ಲಿದ್ದು, ರಕ್ತಸ್ರಾವ ಆಗಿ ಕೋಣ ಸತ್ತು ಬಿದ್ದಿದೆ. ಈ ಬಗ್ಗೆ ಸ್ಥಳೀಯರು […]

ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ‌ ಮಾಧ್ಯಮ‌ ವಿಭಾಗದ ವತಿಯಿಂದ ಮನ್ ಕೀ ಬಾತ್, ರಕ್ಷಾ ಬಂಧನ

Sunday, August 29th, 2021
Rajessh Naik

ಬಂಟ್ವಾಳ: ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ಎನ್ನಲು ಹೆಮ್ಮೆ ಪಡುವ ಕಾಲ ಇದಾಗಿದ್ದು, ಇದರ ಹಿಂದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಹಾಗೂ ಪಕ್ಷವನ್ನು ಕಟ್ಟಿ ಬೆಳೆಸಿದವರ ತ್ಯಾಗ ಬಲಿದಾನದ ಶ್ರಮ ಇದೆ ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ‌ ಮಾಧ್ಯಮ‌ ವಿಭಾಗದ ವತಿಯಿಂದ ಮನ್ ಕೀ ಬಾತ್, ರಕ್ಷಾ ಬಂಧನ ಹಾಗೂ ಎಸ್.ಸಿ.ಕಾಲೋನಿ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ, ಆನಂದ ಪಿಲಿಚಂಡಿಗುಡ್ಡೆ ಯವರ ಮನೆಯಂಗಳದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು […]

ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ : ಮಹಮ್ಮದ್ ಬಡ್ಡೂರು

Sunday, August 29th, 2021
Badooru

ಮಂಗಳೂರು  : ‘ಕ್ರಾಂತಿ ನಮ್ಮಿಂದಲೇ ಆರಂಭವಾಗಬೇಕು.ಆಗ ಅದಕ್ಕಿಂದು ಮೌಲ್ಯ ಬರುತ್ತದೆ. ಸಾಹಿತಿಗಳಿಗೆ ತಮ್ಮ ಕಾವ್ಯವನ್ನು ಹೊರ ಹಾಕುವ ತುಡಿತ ಇದ್ದರೆ ಸಾಲದು ಸಾಹಿತ್ಯದ ಮೂಲ ಆಯಾಮಗಳನ್ನು ಕಲಿಯುವ ಮಿಡಿತಗಳೂ ಇರಬೇಕು. ಕ್ರಾಂತಿ ಎಂಬುದು ಅವ್ಯವಸ್ಥೆಯ ವಿರುದ್ಧವೇ ಹೊರತು ವ್ಯವಸ್ಥೆಯ ವಿರುದ್ಧವಲ್ಲ. ಮಾನವೀಯ ಮೌಲ್ಯ ಇರುವ, ಸಾಮಾಜಿಕ ಕಳಕಳಿಯಿರುವ ಎಲ್ಲಾ ಸಾಹಿತ್ಯಗಳಲ್ಲೂ ಕ್ರಾಂತಿಯ ಕಿಡಿ ಇದ್ದೇ ಇದೆ’ ಎಂದು ಹಿರಿಯ ಪಂಚಭಾಷಾ ಕವಿ ಮಹಮ್ಮದ್ ಬಡ್ಡೂರು ಅವರು ಹೇಳಿದರು. ಅವರು ಮಂಗಳೂರು ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಇವರು […]

ಆಪತ್ಕಾಲದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸುವುದು ?

Saturday, August 28th, 2021
Astami

ಮಂಗಳೂರು  : ಪ್ರತಿ ವರ್ಷ ಭಾರತ ಮಾತ್ರವಲ್ಲ ವಿಶ್ವದಾದ್ಯಂತ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಈ ವರ್ಷ ಕೋರೋನಾ ಮಹಾಮಾರಿಯಿಂದ ಬಂದೆರಗಿರುವ ಆಪತ್ಕಾಲದಲ್ಲಿ ಒಟ್ಟಿಗೆ ಸೇರುವುದು ಸಮಂಜಸವಲ್ಲ. ಆದುದರಿಂದ ನಾವೆಲ್ಲರೂ ನಮ್ಮ ಮನೆಯಲ್ಲೇ ಇದ್ದು ಭಕ್ತಿ ಭಾವದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಹೇಗೆ ಆಚರಿಸಬಹುದು ಎಂದು ನೋಡೋಣ. 1. ಶ್ರೀಕೃಷ್ಣನಿಗೆ ಯಾವ ಸಮಯದಲ್ಲಿ ಪೂಜೆ ಮಾಡಬೇಡು ? ಶ್ರೀಕೃಷ್ಣನ ಜನ್ಮವು ಮಧ್ಯರಾತ್ರಿ 12 ಗಂಟೆಗೆ ಆಯಿತು. ಆದುದರಿಂದ ಅದಕ್ಕಿಂತ ಮೊದಲೇ ಪೂಜೆಯ ತಯಾರಿಯನ್ನು ಮಾಡಿಟ್ಟುಕೊಳ್ಳಿ. ರಾತ್ರಿ […]

ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರಶಸ್ತಿ ಪ್ರದಾನ

Saturday, August 28th, 2021
Asia One

ಉಜಿರೆ: “ಏಷ್ಯಾ ವನ್” ಜಾಗತಿಕ ಪತ್ರಿಕೆಯು ಏಷ್ಯಾ ಖಂಡದ ಸಾಮಾಜಿಕ ನಾಯಕರನ್ನು ಗುರುತಿಸುವುದರೊಂದಿಗೆ ತನ್ನ 14ನೇ ಆವೃತ್ತಿಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ದಿನಾಂಕ: 27-08-2021 ಶುಕ್ರವಾರದಂದು ಆನ್‌ಲೈನ್ ಮೂಲಕ ಆಯೋಜಿಸಲಾಯಿತು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಿ. ವೀರೇಂದ್ರ ಹೆಗ್ಗಡೆಯವರಿಗೆ ಪ್ರತಿಷ್ಠಿತ “ಏಷ್ಯಾ ಖಂಡದ ಶ್ರೇಷ್ಠ ನಾಯಕರು” ಎಂಬ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರಿಂಜ ದೇವಸ್ಥಾನಕ್ಕೆ ಫೋಟೋ ತೆಗೆಯಲು ಬಂದ ಅನ್ಯಕೋಮಿನ ವಿದ್ಯಾರ್ಥಿಗಳ ಜೋಡಿ

Friday, August 27th, 2021
Karinja

ಮಂಗಳೂರು : ಕಾರಿಂಜ ದೇವಸ್ಥಾನಕ್ಕೆ ಫೋಟೋ ತೆಗೆಯಲು  ಬಂದ ವಿದ್ಯಾರ್ಥಿಗಳ ಜೋಡಿಯನ್ನು ತಡೆದು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ. ಮಂಗಳೂರಿನ ಖಾಸಗಿ ಮೆಡಿಕಲ್ ಕಾಲೇಜಿನಲ್ಲಿ ಅಂತಿಮ ವರ್ಷದ ಪ್ಯಾರಾ ಮೆಡಿಕಲ್ ವ್ಯಾಸಂಗ ಮಾಡುತ್ತಿರುವ ಮೂವರು ವಿದ್ಯಾರ್ಥಿನಿಯರು, ಮೂವರು ವಿದ್ಯಾರ್ಥಿಗಳು ಗುರುವಾರ ಸಂಜೆ ಕಾರಿಂಜ ದೇವಸ್ಥಾನಕ್ಕೆ ಬಂದಿದ್ದರು. ವಿದ್ಯಾರ್ಥಿಗಳು ದೇವಸ್ಥಾನದ ಪರಿಸದಲ್ಲಿ ಫೋಟೋ ತೆಗೆದು ಮನೆಗೆ ವಾಪಸ್ ತೆರಳುತ್ತಿದ್ದ ಸಂದರ್ಭದಲ್ಲಿ 5 ಮಂದಿ ಇದ್ದ ಸಂಘ ಪರಿವಾರದ ಕಾರ್ಯಕರ್ತರು ತಡೆದು ನಿಲ್ಲಿಸಿ ಪ್ರಶ್ನಿಸಿದ್ದರು. ಹಿಂದೂ ಮತ್ತು ಮುಸ್ಲಿಮ್ ಧರ್ಮಕ್ಕೆ […]

ಆಟೋ ರಿಕ್ಷಾ – ಕಾರಿನ ನಡುವೆ ಅಪಘಾತ, ಆಟೋ ಚಾಲಕ ಸಾವು

Friday, August 27th, 2021
Manila

ಬಂಟ್ವಾಳ : ಆಟೋ ರಿಕ್ಷಾ ಮತ್ತು ಕಾರಿನ ನಡುವೆ ಸಂಭವಿಸಿದ ಅಪಘಾತದಲ್ಲಿ ಆಟೋ ಚಾಲಕ ಮೃತಪಟ್ಟಿರುವ ಘಟನೆ ವಿಟ್ಲ ಪುಣಚ ಗ್ರಾಮದ ಮಾಣಿಲ ಎಂಬಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಇಲ್ಲಿನ ಪರಿಯಾಲ್ತಡ್ಕ ನಿವಾಸಿ ಅಶ್ರಫ್ ಅಪಘಾತದಲ್ಲಿ ಮೃತಪಟ್ಟ ರಿಕ್ಷಾ ಚಾಲಕ. ಗಂಭೀರ ಗಾಯಗೊಂಡಿದ್ದ ಅಶ್ರಫ್ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಎರಡು ವಾಹನಗಳ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ್ದು ಅಪಘಾತದ ತೀವ್ರತೆಗೆ ಆಟೋ ರಿಕ್ಷಾ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು ಕಾರು ರಸ್ತೆ […]

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ

Friday, August 27th, 2021
ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಆಗಸ್ಟ್ 15, 2021 ಈಗ ಮಾರುಕಟ್ಟೆಯಲ್ಲಿ ಲಭ್ಯ  *ಮುಖ್ಯಾಂಶಗಳು* 🔴 ಉಳ್ಳಾಲದಲ್ಲಿ ಉಗ್ರರಿಗೆ ಬೆಂಬಲ ನೀಡುವ ಚಟುವಟಿಕೆಗಳು ಹಿಂದೆಯೂ ನಡೆದಿತ್ತು 🔴 ಸ್ನೇಹಿತನ ಸಕ್ಸಸ್ ಪಾಲುದಾರನ ಕಣ್ಣು ಕುಕ್ಕಿತ್ತು, ಅದಕ್ಕಾಗಿ ಭೀಕರ ಕೊಲೆ ನಡೆಯಿತು 🔴 ವಿಶಾಲ ಗಾಣಿಗ ಕೊಲೆಯ ಇನ್ನೋರ್ವ ಆರೋಪಿ ಇದುವರೆಗೆ ಪೊಲೀಸರಿಗೆ ಸಿಗಲಿಲ್ಲ.. 🔴 ತಾಲಿಬಾನಿಗಳ ಕೈಗೆ ಅಫ್ಘಾನಿಸ್ತಾನ ಆಡಳಿತ ಸಿಕ್ಕರೆ, ಮುಂದೆ ಜಗತ್ತಿಗೆ ಭಯ

ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭ

Thursday, August 26th, 2021
ksrtc-bus

ಮಂಗಳೂರು :  ಮಂಗಳೂರು-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಸಂಚಾರ ಆರಂಭಿಸಿದ ಹಿನ್ನಲೆಯಲ್ಲಿ ಮೊಂಟೆಪದವು ನಾಗರಿಕರು ವಿಜಯೋತ್ಸವ ಆಚರಿಸಿ ಸಂಭ್ರಮಿಸಿದರು. ಮಂಗಳೂರಿನಿಂದ ನಾಟೆಕಲ್-ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಸರಕಾರಿ ಬಸ್ ಒದಗಿಸುವಂತೆ ಸುಮಾರು 10 ವರ್ಷಗಳಿಂದ ಈ ಭಾಗದ ಜನರು ಒತ್ತಾಯಿಸುತ್ತಾ ಬಂದಿದ್ದರಲ್ಲದೆ, ಇಲ್ಲಿನ ಸಂಘ ಸಂಸ್ಥೆಗಳು ಹಲವು ಬಾರಿ ಹೋರಾಟವನ್ನೂ ನಡೆಸಿತ್ತು. ಸಂಬಂಧಪಟ್ಟವರಿಗೆ ಮನವಿಯನ್ನೂ ಸಲ್ಲಿಸಿತ್ತು. 10 ವರ್ಷದ ಹೋರಾಟದ ಫಲವಾಗಿ ಸರಕಾರಿ ಬಸ್ ಓಡಾಟ ಆರಂಭಿಸಿದ ಹಿನ್ನೆಲೆಯಲ್ಲಿ ನಾಗರಿಕರು ಸಂಭ್ರಮಿಸಿದರು.