ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಬಾಧಿತ ಪ್ರದೇಶಗಳಿಗೆ ಮುಖ್ಯಮಂತ್ರಿ ಬಸವರಾಜ ಎಸ್ ಬೊಮ್ಮಾಯಿ ಭೇಟಿ

Thursday, July 29th, 2021
Bommai

ಅಂಕೋಲಾ : ಮುಖ್ಯಮಂತ್ರಿ ಬಸವರಾಜ.ಎಸ್. ಬೊಮ್ಮಾಯಿ ಅವರು ಉತ್ತರ ಕನ್ನಡ ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಿದರು. ಜುಲೈ 23 ರಂದು ಜಿಲ್ಲೆಯಲ್ಲಿ ಧಾರಕಾರ ಮಳೆಯಾದ ಪರಿಣಾಮ ಪ್ರವಾಹ ಪರಿಸ್ಥಿತಿ ಎದುರಾಗಿತ್ತು ಕಾಳಿ, ಗಂಗಾವಳಿ, ಅಘನಾಶಿನಿ ಸೇರಿದಂತೆ ನದಿಗಳು ಉಕ್ಕಿ ಹರಿದ ಪರಿಣಾಮ ಹಲವಾರು ಮನೆಗಳು .ಹಾನಿಗೊಳಗಾಗಿರುವುದಲ್ಲದೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. ತಾಲ್ಲೂಕು ಆಸ್ಪತ್ರೆಯಲ್ಲಿ ಆಂಬುಲೆನ್ಸ್ ಗಳನ್ನು ಉದ್ಘಾಟಿಸಿದ ಮುಖ್ಯಮಂತ್ರಿಗಳು, ನೆರೆ ಪರಿಹಾರ ವೀಕ್ಷಣೆಗೆ ತೆರಳಿ ಮೊದಲಿಗೆ ಗುಡ್ಡ ಕುಸಿತದಿಂದ ಹಾನಿಗೊಳಗಾದ ಕಳಚೆ ಗ್ರಾಮವನ್ನು ಪರಿಶೀಲಿಸಿದರು. […]

ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದು, ಸ್ಥಳದಲ್ಲೇ ಸಾವು

Thursday, July 29th, 2021
Mudipu-Accident

ಕೊಣಾಜೆ: ಮುಡಿಪು ಬಳಿ ಸ್ಕೂಟರ್ ಹಾಗೂ ಬೈಕ್ ನಡುವೆ ಢಿಕ್ಕಿ ಸಂಭವಿಸಿ ರಸ್ತೆಗೆ ಬಿದ್ದ ಬೈಕ್ ಸವಾರನ ಮೇಲೆ ಬಸ್ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಮೃತನನ್ನು ಉಪ್ಪಳ ಮೂಲದ ಜೌಹಾರ್ (20) ಎಂದು ಗುರುತಿಸಲಾಗಿದೆ. ಈತ ವಿದ್ಯಾರ್ಥಿಯಾಗಿದ್ದು, ಮುಡಿಪು ಸಮೀಪದ ಸಂಬಂಧಿಕರ ಮನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಈತ ಬಾಳೆಪುಣಿ ಕಡೆಯಿಂದ ಮುಡಿಪು ಕಡೆಗೆ ಹೋಗುತ್ತಿದ್ದ ವೇಳೆ ಮುಡಿಪು ಪೆಟ್ರೋಲ್ ಪಂಪು ಬಳಿ ಅಪಘಾತ ಸಂಭವಿಸಿದೆ. ಸ್ಕೂಟರ್ ಹಾಗೂ ಬೈಕ್ […]

ಅಂಬ್ಲಮೊಗರು ಗ್ರಾಮ ಪಂಚಾಯತ್ ಗ್ರಾಮ ಸಹಾಯಕ ನೇಣು ಬಿಗಿದು ಆತ್ಮಹತ್ಯೆ

Thursday, July 29th, 2021
Nithin-Shetty

ಮಂಗಳೂರು : ಅಂಬ್ಲಮೊಗರು ಗ್ರಾಮ ಪಂಚಾಯತ್ ನ ಗ್ರಾಮ ಸಹಾಯಕ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆಗೈದ ಘಟನೆ ಜು.29 ರ ಬೆಳಗ್ಗೆ ನಡೆದಿದೆ. ಅಂಬ್ಲಮೊಗರು ಪಡ್ಯಾರ ಮನೆ ಗುತ್ತಿನ ನಿತಿನ್ ಶೆಟ್ಟಿ (34) ಆತ್ಮಹತ್ಯೆಗೈದವರು. ಇಂದು ಬೆಳಗ್ಗೆ ಪತ್ನಿಯನ್ನು ವಾಹನದಲ್ಲಿ ಕುತ್ತಾರಿನ ವರೆಗೆ ಕೆಲಸಕ್ಕೆ ಬಿಟ್ಟು ಬಂದಿದ್ದರು. ಬಳಿಕ ಮನೆಯಲ್ಲಿ ಕೃತ್ಯವೆಸಗಿದ್ದಾರೆ. ಮನೆಯಲ್ಲಿದ್ದ ತಾಯಿ ರೂಮಿನೊಳಗೆ ತೆರಳಿದಾಗ ಆತ್ಮಹತ್ಯೆಗೈದ ವಿಚಾರ ಬೆಳಕಿಗೆ ಬಂದಿದೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ‌. ಅಂಬ್ಲಮೊಗರು ಪಂಚಾಯಿತಿನಲ್ಲಿ ನಿತಿನ್ ಅವರ ಚಿಕ್ಕಪ್ಪ […]

ಚೆಂಡುಕಳ – ಗದ್ದೆಗಿಳಿದು ಪತ್ರಕರ್ತರ ಸಾಮೂಹಿಕ ಭತ್ತ ನಾಟಿ

Thursday, July 29th, 2021
Nati

ಮಂಗಳೂರು : ನಶಿಸುತ್ತಿರುವ ಭತ್ತದ ಕೃಷಿಯ ಸಂರಕ್ಷಣೆ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಭತ್ತದ ಕೃಷಿಕರೊಂದಿಗೆ ಪತ್ರಕರ್ತರ ಸಾಮೂಹಿಕ ಭತ್ತದ ನಾಟಿ ಕಾರ್ಯಕ್ರಮವನ್ನು ವಿಟ್ಲ ತಾಲೂಕಿನ ಅಳಿಕೆ ಗ್ರಾಮದ ಮಿತ್ತಳಿಕೆಯ (ಚೆಂಡುಕಳ) ಗದ್ದೆಯಲ್ಲಿ ಜು.29 ರಂದು ಗುರುವಾರ ಹಮ್ಮಿಕೊಳ್ಳಲಾಗಿತ್ತು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಂಯುಕ್ತ ಆಶ್ರಯದ ಈ ಚಟುವಟಿಕೆಯಲ್ಲಿ ಪತ್ರಕರ್ತರು ಭತ್ತವನ್ನು ನಾಟಿ ಮಾಡಿದರು.

ನಟಿ ವಿನ್ನಿ ಫರ್ನಾಂಡಿಸ್‌ ಗೆ ಹೃದಯಾಘಾತ

Thursday, July 29th, 2021
Vinni - Fernandes

ಮಂಗಳೂರು : ಕನ್ನಡ, ತುಳು, ಕೊಂಕಣಿ ಭಾಷೆಯ ಸಿನಿಮಾ, ನಾಟಕ, ಧಾರಾವಾಹಿಗಳಲ್ಲಿ ನಟಿಸಿ ಖ್ಯಾತಿ ಪಡೆದಿದ್ದ ನಟಿ ವಿನ್ನಿ ಫರ್ನಾಂಡಿಸ್‌ (63) ಗುರುವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿನ್ನಿ ಕೊಂಕಣಿ ನಾಟಕಗಳಲ್ಲಿನ ಪಾತ್ರಗಳೊಂದಿಗೆ ನಟನಾ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ನಂತರ ತುಳು ಮತ್ತು ಕನ್ನಡ ನಾಟಕಗಳಲ್ಲೂ ಅಭಿನಯಿಸಿದ್ದರು. ಹಾಸ್ಯ, ಸಾಮಾಜಿಕ ಪಾತ್ರಗಳಲ್ಲಿ ಹೆಚ್ಚು ಪ್ರಸಿದ್ಧಿಯಾಗಿದ್ದರು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನೂ ಪಡೆದಿದ್ದರು. ಪತಿ ವಿನ್ಸೆಂಟ್‌, ಮಕ್ಕಳಾದ ಪ್ರತಾಪ್‌, ಬಬಿತಾ ಅವರನ್ನು ಅಗಲಿದ್ದಾರೆ.    

ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬೈಕ್ ಇಟ್ಟು, ನಾಪತ್ತೆಯಾದ ಯುವಕ

Thursday, July 29th, 2021
Bike

ಬಂಟ್ವಾಳ : ಮೊಬೈಲ್ ಆನ್ಲೈನ್ ಗೇಮ್ ಮೂಲಕ ಸಾಕಷ್ಟು ಹಣ ಕಳೆದುಕೊಂಡಿದ್ದು ವ್ಯಕ್ತಿಯೊಬ್ಬ ಪಾಣೆಮಂಗಳೂರು ಹೊಸ ಸೇತುವೆಯಲ್ಲಿ ಬುಧವಾರ ಮಧ್ಯ ರಾತ್ರಿ ಬೈಕ್ ಚಾಲನೆಯಲ್ಲಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ. ಬೆಂಗಳೂರು ದಾಸರಹಳ್ಳಿ ನಿವಾಸಿ ಸತ್ಯವೇಲು (29) ನಾಪತ್ತೆಯಾದ ಯುವಕ. ಆತ ಬೆಂಗಳೂರು ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಎಂದು ಪೊಲೀಸರಿಗೆ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ.  ಬೈಕ್ ಪೊಲೀಸರ ವಶದಲ್ಲಿದ್ದು ಆತನಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಈತ ಸುಮಾರು 15 ದಿನಗಳ ಹಿಂದೆ ಇದೇ ರೀತಿ ನದಿಗೆ ಹಾರುವುದಕ್ಕೆ ಬೆಂಗಳೂರಿನಿಂದ […]

ಸಿದ್ಧಕಟ್ಟೆ: ಪತ್ರಿಕಾ ದಿನಾಚರಣೆ, ಸನ್ಮಾನ

Wednesday, July 28th, 2021
Rotary-Club

ಬಂಟ್ವಾಳ: ಇಲ್ಲಿನ ಸಿದ್ಧಕಟ್ಟೆ ಫಲ್ಗುಣಿ ರೋಟರಿ ಕ್ಲಬ್ ವತಿಯಿಂದ ಬುಧವಾರ ಏರ್ಪಡಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಪತ್ರಕರ್ತ ಮೋಹನ್ ಕೆ.ಶ್ರೀಯಾನ್ ಇವರನ್ನು ಸನ್ಮಾನಿಸಿ ಗೌರವಿಸಿದರು. ರೋಟರಿ ಕ್ಲಬ್ಬಿನ ಅಧ್ಯಕ್ಷ ಮೈಕೆಲ್ ಡಿಕೋಸ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಗಣೇಶ ಶೆಟ್ಟಿ, ಶಿಕ್ಷಕ ರಾಜೇಶ ನೆಲ್ಯಾಡಿ ಶುಭ ಹಾರೈಸಿದರು. ನಿವೃತ್ತ ಕೃಷಿ ಅಧಿಕಾರಿ ನಾರಾಯಣ ನಾಯ್ಕ್ ಮತ್ತಿತರರು ಇದ್ದರು. ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹರೀಶ ಆಚಾರ್ಯ ರಾಯಿ ಸ್ವಾಗತಿಸಿ, ವಂದಿಸಿದರು.

ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ, ಪೊಲೀಸರಿಗೆ ದೂರು

Wednesday, July 28th, 2021
Transgender

ಮಂಗಳೂರು: ನಗರದಲ್ಲಿ ಮಂಗಳಮುಖಿಯರ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದೆ. ಮಂಗಳೂರು ಮೂಲದ ಮಂಗಳಮುಖಿಯರು ಮತ್ತು ಹೊರಜಿಲ್ಲೆಗಳಿಂದ ಮಂಗಳೂರಿಗೆ ಬಂದವರ ನಡುವೆ ಹೊಡೆದಾಟ ನಡೆದಿದೆ. ಪಣಂಬೂರು ಠಾಣೆಯಲ್ಲಿ ಎರಡು ತಂಡಗಳಿಂದ ದೂರು, ಪ್ರತಿದೂರು ದಾಖಲಾಗಿದೆ. ನಗರದ ಬೈಕಂಪಾಡಿಯ ರೈಲ್ವೆ ಗೇಟ್ ಸಮೀಪ ಎರಡು ಗುಂಪಿನ ನಡುವೆ ಘರ್ಷಣೆ ನಡೆದು ಒಂದು ಗುಂಪು ಪಣಂಬೂರು ಠಾಣೆಯಲ್ಲಿ ದೂರು ನೀಡಿತ್ತು. ಇದೀಗ ಮತ್ತೊಂದು ಗುಂಪಿನವರು ಸಹ ದೂರು ನೀಡಿದ್ದಾರೆ. ಮಂಗಳೂರು ಮೂಲದ ಮಂಗಳಮುಖಿಯರು ಹೊರಜಿಲ್ಲೆಯಿಂದ ಬಂದಿರುವ ಮಂಗಳಮುಖಿಯರಿಗೆ ನಗರದಿಂದ ತೆರಳಬೇಕು ಎಂದು […]

ಅಪ್ರಾಪ್ತ ವಯಸ್ಸಿನ ಬಾಲಕಿಯ ಜೊತೆ ಚಾಟ್ ಮಾಡಿದ ಹೆಡ್‌ಕಾನ್‌ಸ್ಟೇಬಲ್ ಬಂಧನ

Wednesday, July 28th, 2021
N Shashikumar

ಮಂಗಳೂರು : ಠಾಣೆಗೆ ದೂರು ಕೊಡಲು ಬಂದ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೊಬೈಲ್ ನಂಬರ್ ಪಡೆದು  ಆಕೆಯ ಜತೆ ಮೊಬೈಲ್ ಫೋನ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳ ಕಲ್ಯಾಣ ಸಮಿತಿ ಮೂಲಕ ನೀಡಲಾದ ದೂರಿನ ಮೇರೆಗೆ ಮಂಗಳೂರು ನಗರ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ನಗರದ ಪೊಲೀಸ್ ಠಾಣೆ ಪ್ರಕರಣವೊಂದಕ್ಕೆ ಸಂಬಂಧಿಸಿ ಪೋಷಕರ ಜತೆ ದೂರು ನೀಡಲು ಬಂದಿದ್ದ ಬಾಲಕಿಯಿಂದ ಮೊಬೈಲ್ ಸಂಖ್ಯೆಯನ್ನು ಪಡೆದ ಠಾಣೆಯ ಹೆಡ್‌ಕಾನ್‌ಸ್ಟೇಬಲ್ […]

ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಜುಲೈ 15, 2021 ಸಂಚಿಕೆ ಓದಿ

Wednesday, July 28th, 2021
July 15,2021Front

ಇಲ್ಲಿ ಕ್ಲಿಕ್ ಮಾಡಿ  ಮಂಗಳೂರು : ಮೆಗಾ ಮೀಡಿಯಾ ನ್ಯೂಸ್ ಕನ್ನಡ ಪಾಕ್ಷಿಕ ಪತ್ರಿಕೆ ಜುಲೈ 15  2021ರ ಸಂಚಿಕೆ ಆನ್ ಲೈನ್ ನಲ್ಲೂ ಲಭ್ಯ. ಪತ್ರಿಕೆಯನ್ನು ಓದಲು ಮೇಲಿನ ಲಿಂಕನ್ನು ಬಳಸಿ. *ಮುಖ್ಯಾಂಶಗಳು* 🔴 ವರ್ಷದ ಮೊದಲೇ ತುಕ್ಕು ಹಿಡಿಯಲಾರಂಭಿಸಿದ ನೇತ್ರಾವತಿ ಸೇತುವೆ ತಡೆ ಬೇಲಿ 🔴 ದೈವದ ಪಾತ್ರಿ ಮತ್ತು ಗಡಿ ಹಿಡಿದವರನ್ನು ಹೊರತುಪಡಿಸಿ ಇತರರು ದೈವದ ಕಡ್ಸಲೆಯನ್ನು ಹಿಡಿಯುವಂತಿಲ್ಲ. 🔴 ಪತಿ ರಾಮಕೃಷ್ಣನಿಗೆ ಇದ್ದ ಅಕ್ರಮ ಸಂಬಂಧವೇ ವಿಶಾಲ ಗಾಣಿಗ ಹತ್ಯೆಗೆ ಕಾರಣ 🔴 […]