ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಕೋವಿಡ್ ಗೆ ಬಲಿ

Friday, May 14th, 2021
vijaya Rao

ಮಂಗಳೂರು : ‌ ಸಂಜೆವಾಣಿ ಮಂಗಳೂರಿನ ಬ್ರಾಂಚ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ. ವಿಜಯ್ ರಾವ್ ಗುರುವಾರ ರಾತ್ರಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ವಿಜಯ್ ರಾವ್ (56) ಕೋವಿಡ್ ಸೋಂಕು ದೃಢಪಟ್ಟ ಹಿನ್ನೆಲೆ ಅವರು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು ಉಸಿರಾಟದ ತೀವ್ರ ಸಮಸ್ಯೆಯಿಂದ ನಿನ್ನೆ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಮೂಲತಃ ಕಾರ್ಕಳ ಬೈಲೂರು ನಿವಾಸಿ ಯಾಗಿರುವರ ಇವರು ಮಂಗಳೂರಿನ ಎಕ್ಕೂರು ಸಮೀಪ ನೆಲೆಸಿದ್ದರು. ಮೊದಲಿಗೆ ನೇತ್ರಾವತಿ ವಾರ್ತಾ ಪತ್ರಿಕೆಯಲ್ಲಿ ಮಾರ್ಕೆಟಿಂಗ್ ಹುದ್ದೆಯಲ್ಲಿದ್ದ ಇವರು ಹಲವು ವರ್ಷಗಳ ಕಾಲ ಸಂಜೆವಾಣಿ  ಪತ್ರಿಕೆಯಲ್ಲಿ […]

ಅಕ್ಷಯ ತದಿಗೆ ಹೇಗೆ ಶ್ರೇಷ್ಠವಾದುದು ಎಂಬುದಕ್ಕೆ ಕೆಲವೊಂದು ಘಟನೆಗಳು ಇಲ್ಲಿವೆ ನೋಡಿ !

Friday, May 14th, 2021
Akshya-tadige

ವೈಶಾಖ ಮಾಸದ ಶುಕ್ಲಪಕ್ಷದ ತದಿಗೆಯನ್ನು ಅಕ್ಷಯತದಿಗೆ ಎಂದು ಆಚರಿಸಲಾಗುತ್ತಿದೆ. ಅಕ್ಷಯ ಎಂದರೆ ಕ್ಷಯಿಸದೆ, ವೃದ್ಧಿಯಾಗುವುದು ಎಂದು ಅರ್ಥ. ಈ ದಿನ ಸೂರ್ಯ–ಚಂದ್ರರು ತಮ್ಮ ಗರಿಷ್ಠಮಟ್ಟದ ಕಾಂತಿಯನ್ನು ಹೊಂದಿರುವುದರಿಂದ ಈ ದಿನವಿಡೀ ಯಾವುದೇ ಶುಭ ಕಾರ್ಯಕ್ಕೆ ಮಂಗಳಕರವಾದುದು. ಜ್ಯೋತಿಷ್ಯ ಶಾಸ್ತ್ರದಲ್ಲಿ ಚೈತ್ರ ಶುದ್ಧ ಪಾಡ್ಯ,(ಯುಗಾದಿ,) ವೈಶಾಖ ಶುದ್ಧ ತದಿಗೆ (ಅಕ್ಷಯ ತದಿಗೆ). ಆಶ್ವಯುಜ ಶುದ್ಧ ದಶಮಿ, (ವಿಜಯ ದಶಮಿ) ಇವು ಮೂರು ಪೂರ್ಣ ಪಂಚಾಂಗ ಶುದ್ಧ ಇರುವ ಮುಹೂರ್ತದ ದಿನಗಳು. ಕಾರ್ತೀಕ ಶುದ್ಧ ಪಾಡ್ಯ ಅರ್ಧ ಶುದ್ಧಿ ಇರುವ […]

ಕೋವಿಡ್‌ನಿಂದ ಶ್ರೀನಿವಾಸ ಕಾಲೇಜಿನ ಉಪನ್ಯಾಸಕ ನಿಧನ

Thursday, May 13th, 2021
Deepakraj

ಪುತ್ತೂರು:  ಕೆಮ್ಮಿಂಜೆ ಗ್ರಾಮದ ಬೆದ್ರಾಳ ನಿವಾಸಿ, ಮಂಗಳೂರಿನ ಶ್ರೀನಿವಾಸ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದೀಪಕ್‌ರಾಜ್ (32) ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೋವಿಡ್‌ ತಗುಲಿ ಅಸ್ಪತ್ರೆಗೆ ದಾಖಲಾಗಿದ್ದ ಅವರು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಅವರಿಗೆ ಪತ್ನಿ, ಪುತ್ರಿ, ತಂದೆ, ತಾಯಿ ಹಾಗೂ ಸಹೋದರನನ್ನು  ಅಗಲಿದ್ದಾರೆ.

ಶೀರೂರು ಮೂಲಮಠದಲ್ಲಿ ಸಂನ್ಯಾಸ ದೀಕ್ಷೆ ಸ್ವೀಕರಿಸಿದ ಮಠದ ನೂತನ ಉತ್ತರಾಧಿಕಾರಿ

Thursday, May 13th, 2021
Anirudha

ಉಡುಪಿ: ಶೀರೂರು ಮಠದ ನೂತನ ಉತ್ತರಾಧಿಕಾರಿಯಾಗಲಿರುವ  ಅನಿರುದ್ಧ ಸರಳತ್ತಾಯರು ಸನ್ಯಾಸ ದೀಕ್ಷೆಯನ್ನು ಗುರುವಾರ ಶೀರೂರು ಮೂಲಮಠದಲ್ಲಿ ಸ್ವೀಕರಿಸಿದರು. ಸನ್ಯಾಸ ದೀಕ್ಷೆ ಅಂಗವಾಗಿ ಶಾಕಲ ಹೋಮ, ವಿರಜಾ ಹೋಮ ಪ್ರೈಷೋಚ್ಚಾರಣೆ ಮೊದಲಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಿತು. ಅನಂತರ ಸೋದೆ ವಾದಿರಾಜ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ನೂತನ ಯತಿಗಳಿಗೆ ಸಂನ್ಯಾಸ ಅಂಗವಾದ ಕಲಶಾಭಿಷೇಕವನ್ನು ನೆರವೇರಿಸಿ ಪ್ರಣವ ಮಂತ್ರೋಪದೇಶವನ್ನು ನೀಡಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಆದೇಶ

Thursday, May 13th, 2021
Rajendra

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ವಾರಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಆದೇಶ ನೀಡಿದ್ದಾರೆ. ಕೊರೋನಾ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಲಾಗಿದ್ದು, ಈಗಾಗಲೇ ಸರಕಾರ ಹೊರಡಿಸಿರುವ ಮೇ 10ರಿಂದ ಮೇ 24ರ ತನಕದ ಲಾಕ್ ಡೌನ್ ಮುಂದುವರೆಯಲಿದೆ. ಆ ಮಾರ್ಗಸೂಚಿಯೇ ಮುಂದುವರೆಯಲಿದೆ. ಅದನ್ನು ಹೊರತು ಪಡಿಸಿ ಉಳಿದಂತೆ ಯಾವುದೇ ಪ್ರತ್ಯೇಕ ವಾರಾಂತ್ಯ ಕರ್ಫ್ಯೂ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ಹಾಗೂ ರವಿವಾರದಂದು ಬೆಳಗ್ಗೆ 9 […]

ಮಂಗಳೂರಿನಲ್ಲಿ 29 ಗರ್ಭಿಣಿಯರಲ್ಲಿ ಮತ್ತು ಎರಡು ನವಜಾತ ಶಿಶುಗಳಲ್ಲಿ ಕೊರೊನಾ ಸೋಂಕು

Thursday, May 13th, 2021
corona

ಮಂಗಳೂರು :  ಮಂಗಳೂರಿನ ಸರ್ಕಾರಿ ಲೇಡಿ ಗೋಶನ್ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದಲ್ಲಿ ಕೊರೊನಾ ಸೋಂಕು  25 ಗರ್ಭಿಣಿಯರಲ್ಲಿ ಮತ್ತು ಹೊಸ ತಾಯಂದಿರಲ್ಲಿ ಕಾಣಿಸಿಕೊಂಡಿದ್ದು ಅವರಿಗಾಗಿ ಹೆಚ್ಚುವರಿ 14 ಹಾಸಿಗೆಗಳ ವಾರ್ಡ್ ನ್ನು ಮೀಸಲಿರಿಸಲಾಗಿದೆ. ಈ ರೋಗಿಗಳ ಆರೋಗ್ಯದ ಮೇಲ್ವಿಚಾರಣೆಗಾಗಿ ವಾಟ್ಸಾಪ್ ಗ್ರೂಪ್ ರಚಿಸಲಾಗಿದ್ದು ತಾಲೂಕು ಮತ್ತು ಜಿಲ್ಲಾ ಆರೋಗ್ಯ ಅಧಿಕಾರಿಗಳು ಕಿರಿಯ ಆರೋಗ್ಯ ಸಹಾಯಕರ ಮೂಲಕ ಈ ರೋಗಿಗಳನ್ನು ಪರಿಶೀಲಿಸಲಾಗುತ್ತದೆ . ಎರಡು ನವಜಾತ ಶಿಶುಗಳಿಗೆ ಸೋಂಕು ದೃಢಪಟ್ಟಿದೆ ಎಂದು ಲೇಡಿ ಗೊಸ್ಚೆನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾ […]

ದ.ಕ. ಜಿಲ್ಲೆ 1077 ಮಂದಿಗೆ ಕೊರೋನ ಸೋಂಕು ದೃಢ, 2 ಸಾವು, ಉಡುಪಿ 919 ಪ್ರಕರಣಗಳು, 6 ಸಾವು

Wednesday, May 12th, 2021
Corona Virus

ಮಂಗಳೂರು : ದ.ಕ. ಜಿಲ್ಲೆಯಲ್ಲಿ ಬುಧವಾರ 1077 ಮಂದಿಗೆ ಕೊರೋನ ಸೋಂಕು ದೃಢಪಟ್ಟಿವೆ. 1,030 ಮಂದಿ ಕೊರೋನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಬುಧವಾರ ಮತ್ತೆ 2 ಮಂದಿ ಕೋವಿಡ್‌ಗೆ ಬಲಿಯಾಗಿದ್ದು. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 797ಕ್ಕೇರಿದೆ. ಜಿಲ್ಲೆಯಲ್ಲಿ ಈವರಗೆ 7,90,958 ಮಂದಿಯ ದ್ರವ ಪರೀಕ್ಷೆ ಮಾಡಲಾಗಿದೆ. ಆ ಪೈಕಿ 7,31,415 ಮಂದಿಯ ವರದಿ ನೆಗೆಟಿವ್ ಬಂದಿದೆ. ಅಲ್ಲದೆ 59,543 ಮಂದಿ ಕೊರೋನ ಸೋಂಕಿಗೊಳಗಾಗಿದ್ದಾರೆ. ಈ ಪೈಕಿ 46,073 ಮಂದಿ ಗುಣಮುಖರಾಗಿದ್ದಾರೆ. ಸದ್ಯ […]

ಎಕ್ಸಲೆಂಟ್ ಮೂಡಬಿದಿರೆ: ಅಧ್ಯಕ್ಷರಿಗೆ ಶಿಕ್ಷಣ ರತ್ನ ಪ್ರಶಸ್ತಿ

Wednesday, May 12th, 2021
Yuvaraj Jain

ಮೂಡಬಿದಿರೆ: ಜಿನಗಾನ ಸುಧಾ ಬಳಗ ಮತ್ತು ಶ್ರುತಸ್ಕಂಧ (ಕನ್ನಡ ಕಾವ್ಯ) ಬಳಗ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರುತಗಾನ ವೈಭವ ಕೃತಿ ಲೋಕಾರ್ಪಣಾ ಕಾರ್ಯಕ್ರಮದ ಶುಭ ಸಂದರ್ಭದಲ್ಲಿ ವಿಧ್ಯಾರ್ಥಿಗಳಿಗೆ ಲೌಕಿಕ ಶಿಕ್ಷಣದ ಜೊತೆಗೆ ಶ್ರದ್ಧೆ, ಶಿಸ್ತು, ಸಹಬಾಳ್ವೆಯನ್ನು ಭೋಧಿಸುತ್ತಿರುವ ನಾಡಿನ ಖ್ಯಾತ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಮೂಡಬಿದಿರೆಯ ಸಂಸ್ಥಾಪಕಾಧ್ಯಕ್ಷರಾದ ಯುವರಾಜ ಜೈನ್ ಇವರ ಸಾಧನೆಯನ್ನು ಗುರುತಿಸಿ ‘ಶಿಕ್ಷಣ ರತ್ನ’ ಎಂಬ ಅಭಿದಾನವನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಮೂಡಬಿದಿರೆ ಮಹಾಕ್ಷೇತ್ರದ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಭಟ್ಟಾರಕ ಡಾ| ಚಾರುಕೀರ್ತಿ […]

ದನದ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿಯ ಬಂಧನ

Wednesday, May 12th, 2021
calf

ಕಾಪು : ಅಬ್ಬು ಮಹಮ್ಮದ್ ಎಂಬ ವ್ಯಕ್ತಿ ಮೂಳೂರು ಗ್ರಾಮದ ಸುನ್ನಿ ಸೆಂಟರ್ ಸಮೀಪ ಅಕ್ರಮ‌‌ ಕಸಾಯಿಖಾನೆ ಮಾಡಿಕೊಂಡು ಪರಿಸರದ ದನದ ಕರುಗಳನ್ನು ಪಿಕ್ ಅಪ್ ವಾಹನದಲ್ಲಿ ಕದ್ದು ತಂದು ಮಾಂಸ ಮಾಡುತ್ತಿದ್ದ ವೇಳೆ  ದಾಳಿ ನಡೆಸಿದ ಕಾಪು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ದಾಳಿ ವೇಳೆ ಮೂವರು ಪರಾರಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ , ಮಹಮ್ಮದ್ ಅಜರುದ್ದೀನ್, ನವಾಜ್, ಮಹಮ್ಮದ್ ಹನೀಫ್ ಯಾನೆ ಆಸ್ಪಕ್ , ಮಹಮ್ಮದ್ ಇಸ್ಮಾಯಿಲ್, ಉಮ್ಮರಬ್ಬ ಎಂದು ಗುರುತಿಸಲಾಗಿದೆ. ಪರಾರಿಯಾದವರನ್ನು ಇಸ್ಮಾಯಿಲ್ , ರಪೀಕ್ , […]

ಸುರತ್ಕಲ್ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಭೇಟಿ

Wednesday, May 12th, 2021
Bharath Shetty

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಸುರತ್ಕಲ್ ಪ್ರಾಥಮಿಕ ಆರೋಗ್ಯ , ಕುಳಾಯಿ ಆರೋಗ್ಯ ಕೇಂದ್ರಕ್ಕೆ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಭೇಟಿ ನೀಡಿದರು. ಅಲ್ಲಿ ನಾಗರಿಕರಿಗೆ ಲಸಿಕಾ ಕೇಂದ್ರದ ವ್ಯವಸ್ಥೆ, ಕೊರೋನ ರೋಗಿಗಳ ಚಿಕಿತ್ಸೆಯ ಸೌಲಭ್ಯಗಳನ್ನು ಅವರು ಪರಿಶೀಲಿಸಿದರು. ಶಾಸಕರೊಂದಿಗೆ ಪಾಲಿಕೆ ಕಮೀಷನರ್ ಅಕ್ಷಯ್ ಶ್ರೀಧರ್, ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೊರೇಟರ್ ಗಳು, ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ವೈದ್ಯರಿಗೆ ನೆರವಾಗಲು ನೋಡಲ್ ಅಧಿಕಾರಿಗಳು ಹಾಗೂ ಟಾಸ್ಕ್ ಫೋರ್ಸ್ ಇದ್ದು ಕಡ್ಡಾಯವಾಗಿ […]