ಮೋದಿ ನರಕಯಾತನೆ ಅನುಭವಿಸಿ ಸಾಯಬೇಕು ಎಂದ ವ್ಯಕ್ತಿ ವಿರುದ್ಧ ದೂರು

Wednesday, April 28th, 2021
modi

ಮಂಗಳೂರು  : ಪ್ರಧಾನಿ ನರೇಂದ್ರ ಮೋದಿಯವರನ್ನು ಏಕವಚನದಲ್ಲಿ ಸಂಬೋಧಿಸಿದ್ದಲ್ಲದೆ, ಅವರು ಬೀದಿಬದಿಯಲ್ಲಿ ನರಕಯಾತನೆ ಅನುಭವಿಸಿ ಸಾಯುವಂತಾಗಲು ಎಲ್ಲರು ಪ್ರಾರ್ಥಿಸಬೇಕು ಎಂದು ಫೇಸ್‌ ಬುಕ್‌ನಲ್ಲಿ ಮನವಿ ಮಾಡಿದ ಲುಕ್ಮನ್‌ ಅಡ್ಯಾರ್‌ ಎಂಬಾತ ನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿದೆ. ರಂಝಾನ್‌ ತಿಂಗಳ ಈ ಸಮಯದಲ್ಲಿ ಫೇಸ್‌ಬುಕ್‌ ಸಾಮಾಜಿಕ ಜಾಲತಾಣದಲ್ಲಿ ವಿಷಬೀಜ ಬಿತ್ತುತ್ತಿದ್ದಾನೆ ಎಂದು ಆರೋಪಿಸಿ ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಬಿಜೆಪಿ ಅಲ್ಪಸಂಖ್ಯಾತ ವಿಭಾಗ ಮುಖಂಡ ಫಝಲ್‌ ಅಸೈಗೋಳಿ ಮತ್ತು ನ್ಯಾಯವಾದಿ ಅಸ್ಗರ್‌ ಅಲಿ ಎಂಬವರು ಕೊಣಾಜೆ ಠಾಣೆಗೆ ದೂರು […]

ದ.ಕ.ಜಿಲ್ಲೆಯಲ್ಲಿ ಮಂಗಳವಾರ 486 ಕೊರೋನ ಪಾಸಿಟಿವ್ ಪ್ರಕರಣಗಳು, ಮೂವರು ಬಲಿ

Wednesday, April 28th, 2021
Corona

ಮಂಗಳೂರು : ದ.ಕ.ಜಿಲ್ಲೆಯಲ್ಲಿ ಮಂಗಳವಾರ 486 ಕೊರೋನ ಪಾಸಿಟಿವ್ ಪ್ರಕರಣಗಳು ಕಂಡು ಬಂದಿದ್ದು, ಇದರೊಂದಿಗೆ 42,065 ಪಾಸಿಟಿವ್ ಪ್ರಕರಣಗಳು ಕಂಡು ಬಂದಂತಾಗಿದೆ. ಮಂಗಳವಾರ 225 ಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳುವುದರೊಂದಿಗೆ ಈವರೆಗೆ 37,024 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದಾರೆ. ಮಂಗಳವಾರ  ಕೊರೋನಕ್ಕೆ ಮೂವರು ಬಲಿಯಾಗಿದ್ದಾರೆ. ಇದರಲ್ಲಿ ಮಂಗಳೂರಿನ ಇಬ್ಬರು ಮತ್ತು ಸುಳ್ಯ ತಾಲೂಕಿನ ಒಬ್ಬರು ಸೇರಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 751ಕ್ಕೇರಿದೆ. ಕೇರಳದ ಮಲಪ್ಪುರಂ ನಿವಾಸಿ ಗರ್ಭಿಣಿ ವೈದ್ಯೆರೊಬ್ಬರು ಚಿಕಿತ್ಸೆಗಾಗಿ ಮಂಗಳೂರಿನ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ14 ದಿನಗಳ ಲಾಕ್‌ಡೌನ್-ಕರ್ಫ್ಯೂನಲ್ಲಿ ಜನ ಹೇಗಿರಬೇಕು ಇಲ್ಲಿದೆ ನೋಡಿ ವಿವಿರ !

Tuesday, April 27th, 2021
DC

ಮಂಗಳೂರು : ರಾಜ್ಯಾದ್ಯಂತ ಏಪ್ರಿಲ್ 27 ರಿಂದ ಬೆಳಗ್ಗೆ 10 ರಿಂದ ಮರುದಿನ  ಮುಂಜಾನೆ 6 ಗಂಟೆಯವರೆಗೆ ಪ್ರತಿದಿನ 20 ಗಂಟೆ ಲಾಕ್‌ಡೌನ್-ಕರ್ಫ್ಯೂ ವಿಧಿಸಲಾಗಿದೆ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರವರೆಗೆ ಅವಕಾಶ ಕಲ್ಪಿಸಲಾಗಿದೆ. ತುರ್ತು ಆರೋಗ್ಯ ಸೇವೆ, ಮದುವೆ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಮತ್ತು ಪರೀಕ್ಷೆಗಳಲ್ಲಿ ಹಾಜರಾಗಲು ಪೂರಕ ದಾಖಲೆಪತ್ರಗಳೊಂದಿಗೆ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ದ.ಕ.ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14 ದಿನಗಳ ಕಾಲ ಕರ್ಪ್ಯೂ […]

ಉಳ್ಳಾಲ : ಸೋಮೇಶ್ವರ ದೇವಸ್ಥಾನದಲ್ಲಿ ಕೊರೊನಾ ನಿಯಮ ಉಲ್ಲಂಘಿಸಿ ಪಾಲ್ಗೊಂಡ ಸಾವಿರಾರು ಭಕ್ತರು

Tuesday, April 27th, 2021
Someshwara

ಮಂಗಳೂರು : ಉಳ್ಳಾಲದ ಸೋಮೇಶ್ವರ ದೇವಸ್ಥಾನದಲ್ಲಿ ಏಪ್ರಿಲ್ 26 ರ ರಾತ್ರಿ  ಬ್ರಹ್ಮಕಲಶೋತ್ಸವ ದ ರಥೋತ್ಸವದಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಮಾಸ್ಕ್ ಧರಿಸದೇ ಜನರು ಗುಂಪಾಗಿ ಸೇರಿದ ಘಟನೆ ನಡೆದಿದೆ. ಈ  ವೇಳೆ  ಸಹಾಯಕ ಆಯುಕ್ತ(ಎಸಿ) ಮದನ್ ಮೋಹನ್ ದೇವಾಲಯದ ಆವರಣದ ಮೇಲೆ ದಾಳಿ ನಡೆಸಿ ನೆರೆದಿದ್ದ ಜನರನ್ನು ವಾಪಸ್ ಕಳುಹಿಸಿದ್ದಾರೆ. ಈ ದೇವಾಲಯವು ಕೊರೊನಾ ಮಾರ್ಗಸೂಚಿಯನ್ನು ಉಲ್ಲಂಘಿಸಿ ದೇವಸ್ಥಾನಕ್ಕೆ ನೂತನ ರಥ ಮತ್ತು ಹೊರೆ ಕಾಣಿಕೆ ಮೆರವಣಿಗೆ ನಡೆಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾಸ್ಕ್ ಧರಿಸದೇ ಅಂತರ ಕಾಯ್ದುಕೊಳ್ಳದೇ […]

ಆಕ್ಸಿಜನ್ ಕೊರತೆಯನ್ನು ನೀಗಿಸಲು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಪ್ಲಾಂಟ್

Monday, April 26th, 2021
Mangalore DC

ಮಂಗಳೂರು : ಆಕ್ಸಿಜನ್ ಕೊರತೆಯನ್ನು ನೀಗಿಸಲು  ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಪ್ಲಾಂಟ್ ನಿರ್ಮಿಸಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ. ಜಿಲ್ಲೆಯ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಕೊರತೆ ಹಾಗೂ ಸಕಾಲದಲ್ಲಿ ಆಕ್ಸಿಜನ್ ಪೂರೈಕೆಗೆ ಸಂಬಂಧಿಸಿ ದ.ಕ. ಜಿಲ್ಲಾಧಿಕಾರಿಯ ಕಚೇರಿಯಲ್ಲಿ ಸೋಮವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ದೊಡ್ಡ ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದಿಸಲು ವೆನ್ಲಾಕ್ ಆಸ್ಪತ್ರೆಯಲ್ಲಿ ಹೊಸದಾಗಿ ಆಕ್ಸಿಜನ್ ಪ್ಲಾಂಟ್ ನಿರ್ಮಾಣದ ಬಗ್ಗೆ ಯೋಜನೆ ರೂಪಿಸಲಾಗಿದೆ. ಮುಂದಿನ 50 […]

ಮಂಗಳೂರು : ಕೈದಿಗಳ ಹೊಡೆದಾಟದಲ್ಲಿ ಬಳಸಿದ್ದ ಮಾರಕ ಆಯುಧಗಳು ಯಾವುದು ಗೊತ್ತಾ ?

Monday, April 26th, 2021
jail clash

ಮಂಗಳೂರು :   ಜಿಲ್ಲಾ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಗಳ ಹೊಡೆದಾಟದಲ್ಲಿ ಬಳಸಿದ್ದ ಮಾರಕ ಆಯುಧಗಳನ್ನು ಕೇಳಿದರೆ ನೀವು ಬೆಚ್ಚಿ ಬೀಳಬಹುದು.  ಪ್ರಕರಣದ ನಂತರ  20 ಮಂದಿ ಯನ್ನು ಬೇರೆ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ಜೈಲಿನಲ್ಲಿ ಸಹಚರರು ಹಾಗೂ ಜೈಲು ಸಿಬ್ಬಂದಿ ಮೇಲಿನ ಹಲ್ಲೆಗೆ ಸಂಬಂಧಿಸಿ ಐದು ಪ್ರಕರಣಗಳು ದಾಖಲಾಗಿದೆ ಎಂದು ಜೈಲ್ ಸುಪರಿಂಟೆಂಡ್ ಮಾಹಿತಿ ನೀಡಿದ್ದಾರೆ. ಪ್ರಕರಣದ ಓರ್ವ ಆರೋಪಿ ಸಮೀರ್ ಎಂಬಾತನ ಮೇಲೆ 10ಕ್ಕೂ ಅಧಿಕ ಪ್ರಕರಣಗಳಿದ್ದು, ಅನ್ಸಾರ್ ಮೇಲೂ ಹಲವು ಪ್ರಕರಣಗಳಿವೆ. ಈ ಆರೋಪಿಗಳು ಜೈಲಿನಲ್ಲಿ ಹೊಡೆದಾಟಕ್ಕೆ  ಕ್ಯಾರಂ […]

ಕರಾವಳಿಯಲ್ಲಿ ಮೊದಲ ಬಾರಿಗೆ ಸಿಕ್ಕಿದ ಬೆಲೆ ಬಾಳುವ ಗ್ರೇ ಆ್ಯಂಬರ್

Monday, April 26th, 2021
Grey Amber

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರ ಕಡಲ ತೀರದಲ್ಲಿ ಸಿಕ್ಕಿದ ಗಟ್ಟಿಯಾದ ವಸ್ತುವಿನ ತುಂಡು ಸಮುದ್ರ ಜೀವಶಾಸ್ತ್ರ ತಜ್ಞರನ್ನು ಪರಿಶೀಲಿಸಿದ್ದು.  ಅದನ್ನು ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇದು  ವೀರ್ಯ ತಿಮಿಂಗಿಲ ವಾಂತಿ ಮಾಡಿದ ವಸ್ತು ಎಂದು ಭಾವಿಸಲಾಗಿದೆ. ಈ ವಸ್ತುವನ್ನು ಬೂದು ಬಣ್ಣದ ಶಿಲಾರಾಳ ಪಳೆಯುಳಿಕೆ, ಗ್ರೇ ಆ್ಯಂಬರ್ (Grey Amber) ಎಂದು ಹೇಳಲಾಗುತ್ತಿದೆ. ಮುರುಡೇಶ್ವರ ಕಡಲ ತೀರದಲ್ಲಿ ಮೀನುಗಾರರೊಬ್ಬರಿಗೆ ತೀವ್ರ ವಾಸನೆ ಬಂದು ಹೋಗಿ ನೋಡಿದಾಗ ಈ ವಸ್ತು ಸಿಕ್ಕಿತು. ಇದೊಂದು ಅಪರೂಪದ ವಸ್ತುವೆಂದು ಅವರಿಗೆ […]

ಬಾಣಂತಿ ಮಹಿಳೆಯೊಬ್ಬರನ್ನು ರಸ್ತೆಯಲ್ಲಿ ಗಮನಿಸಿದ ಪೊಲೀಸರ ಮಾನವೀಯತೆ ನೋಡಿ ?

Monday, April 26th, 2021
Police

ಮಂಗಳೂರು : ಆರ್ಕುಳ ಪೊಲೀಸ್ ಚೆಕ್ ಪೋಸ್ಟ್‌‌ನಲ್ಲಿ ಕಾರು ಕೆಟ್ಟುಹೋಗಿ ಪರದಾಡುತ್ತಿರುವ ಬಾಣಂತಿ ಮಹಿಳೆಯೊಬ್ಬರನ್ನು ಗಮನಿಸಿದ ಪೊಲೀಸರು   ಇಲಾಖೆ ವಾಹನದಲ್ಲಿ ಆಸ್ಪತ್ರೆಗೆ ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. ಮಹಿಳೆಯು ಹೆರಿಗೆಗೆಂದು ವಿಟ್ಲದಿಂದ ಮಂಗಳೂರಿಗೆ ಹೋಗುತ್ತಿದ್ದ ವೇಳೆ ಆರ್ಕುಳ ಪೊಲೀಸ್ ಚೆಕ್ ಪೋಸ್ಟ್ ಬಳಿ ಅವರ ಕಾರು ಕೆಟ್ಟು ಹೋಗಿದ್ದು, ಈ ವೇಳೆ ಸ್ಥಳಕ್ಕೆ ಧಾವಿಸಿದ ಎಎಸ್ಐ ಹರೀಶ್ ಮತ್ತು ವಿಜಯ್‌ಕುಮಾರ್ ವಿ. ಅವರು ತಮ್ಮ ಇಲಾಖೆ ವಾಹನದಲ್ಲಿಯೇ ಗರ್ಭಿಣಿಯನ್ನು ಆಸ್ಪತ್ರೆಗೆ ತಲುಪಿಸಿದ್ದಾರೆ. ಹರೀಶ್ ಅವರು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಎಎಸ್ಐ ಮತ್ತು […]

ವೀಕೆಂಡ್‌ ಕರ್ಫ್ಯೂ ನಡುವೆಯೇ ವಿವಾಹ : ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹಕ್ಕೆ ಪೊಲೀಸರ ಬೆಂಬಲ

Sunday, April 25th, 2021
Tungappa Bangera

ಬೆಳ್ತಂಗಡಿ :  ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲಾ ಮುಖಂಡ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯ ತುಂಗಪ್ಪ ಬಂಗೇರ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರ ಘೋಷಿಸಿದ ವೀಕೆಂಡ್‌ ಕರ್ಫ್ಯೂ ಮತ್ತು ಇತರ ಕೊರೊನಾ ನಿಯಮಗಳನ್ನು ಉಲ್ಲಂಘಿಸಿ ಪುಂಜಾಲಕಟ್ಟೆಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ಏಪ್ರಿಲ್ 25 ರ ಭಾನುವಾರ ಆಯೋಜಿಸಲಾಗಿದೆ. ಪುಂಜಾಲಕಟ್ಟೆಯ ಪೊಲೀಸ್‌ ಠಾಣೆಯ ಸಮೀಪದಲ್ಲೇ ಇನ್ನು ಈ ಕಾರ್ಯಕ್ರಮ ನಡೆಸಲಾಗಿದೆ. ನೂರಾರು ಜನರು ಸೇರಿ ಕೊರೊನಾ ಉಲ್ಲಂಘನೆ ಯಾಗುತ್ತಿದ್ದರೂ ಕೂಡಾ ಪೊಲೀಸರು ಮಧ್ಯಪ್ರವೇಶ ಮಾಡಿಲ್ಲ. ಸಾಮಾನ್ಯ ಜನರ ವಿರುದ್ದ ಪ್ರಕರಣ […]

ದ.ಕ.ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿಯನ್ನು ಪಕ್ಷದಿಂದ 6 ವರ್ಷ ಉಚ್ಚಾಟಿಸಿದ್ಯಾಕೆ ?

Sunday, April 25th, 2021
Rajesh Balekallu

ವಿಟ್ಲ:  ದ.ಕ.ಜಿಲ್ಲಾ ಕಾಂಗ್ರೆಸ್‌ ಸಮಿತಿ ಪ್ರಧಾನ ಕಾರ್ಯದರ್ಶಿ ಮತ್ತು ಮಾಣಿಲ ಗ್ರಾಮ ಪಂಚಾಯತ್‌ ಕಾಂಗ್ರೆಸ್‌ ಬೆಂಬಲಿತ ಮಾಜಿ ಅಧ್ಯಕ್ಷ, ಹಾಲಿ ಉಪಾಧ್ಯಕ್ಷ ರಾಜೇಶ್‌ ಕುಮಾರ್‌ ಬಾಳೆಕಲ್ಲುಅವರನ್ನು ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆ ಎಂಬ ಆರೋಪದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಉಚ್ಚಾಟಿಸಲಾಗಿದೆ. ಕೆಲ ಸಮಯದಿಂದ ರಾಜೇಶ ಬಾಳೆಕಲ್ಲು ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಾ ಬಂದಿದ್ದು, ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವಿಟ್ಲ ಹಾಗೂ ಕಾರ್ಯಕರ್ತರು ದೂರಿಕೊಂಡಿದ್ದರು. ಇತ್ತೀಚಿಗೆ ನಡೆದ ಗ್ರಾಮ ಪಂಚಾಯತ್‌ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಪ್ರಚಾರ ಮಾಡಿರುವುದಾಗಿಯೂ ಹಾಗೂ […]