ನದಿಯಲ್ಲಿ ಈಜಲು ಹೋದ ಒಂದೇ ಕುಟುಂಬದ ಇಬ್ಬರು ವಿದ್ಯಾರ್ಥಿಗಳು ಮೃತ್ಯು

Wednesday, April 14th, 2021
Reji

ಕಾಸರಗೋಡು : ನದಿಯಲ್ಲಿ ಈಜಲು ಹೋದ ಇಬ್ಬರು ವಿದ್ಯಾರ್ಥಿಗಳು ಮೃತಪಟ್ಟ ಘಟನೆ ಎಪ್ರಿಲ್‌ 14ರ ಬುಧವಾರ ಮಧ್ಯಾಹ್ನ ವೆಸ್ಟ್ ಎಳೇರಿ ಸಮೀಪದ ಪರಪ್ಪಚ್ಚಾಲ್ ಎಂಬಲ್ಲಿ ನಡೆದಿದೆ. ಕಾವುಂದಳ ದ ರೆಜಿ ಅವರ ಪುತ್ರ ಆಲ್ಬಿನ್ (15) ಹಾಗೂ ಸಹೋದರ ಥಾಮಸ್ ಅವರ ಪುತ್ರ ಬ್ಲಾಸನ್ ಥಾಮಸ್ (20) ಮೃತಪಟ್ಟವರು. ಮೃತಪಟ್ಟವರು ಒಂದೇ ಕುಟುಂಬದವರಾಗಿದ್ದು ಆಲ್ಬಿನ್ ವಾರಕ್ಕೋಡ್ ಶಾಲೆಯ 10ನೇ ತರಗತಿ ಹಾಗೂ ಥಾಮಸ್ ಮಂಗಳೂರಿನ ಡಾ.ಎಂ.ವಿ.ಶೆಟ್ಟಿ ನರ್ಸಿಂಗ್ ಕಾಲೇಜಿನ ಬಿಎಸ್‌ಸಿ ನರ್ಸಿಂಗ್ ವಿದ್ಯಾರ್ಥಿಯಾಗಿದ್ದನು. ಇಬ್ಬರು ಸಮೀಪದ ಚೈತ್ರ ವಾಹಿನಿ ಹೊಳೆಗೆ […]

ಶಾಸಕ ಯು.ಟಿ.ಖಾದರ್ ಸಂಚರಿಸುತ್ತಿದ್ದ ಕಾರು ಅಪಘಾತ, ಖಾದರ್ ಹಾಗೂ ಕಾರು ಚಾಲಕನಿಗೆ ಗಾಯ

Wednesday, April 14th, 2021
UT Khader

ಮಂಗಳೂರು : ಮಾಜಿ ಸಚಿವ, ಶಾಸಕ ಯು.ಟಿ.ಖಾದರ್ ಅವರು ಸಂಚರಿಸುತ್ತಿದ್ದ ಕಾರು  ಬುಧವಾರ ಬೆಳಗ್ಗೆ 8:45ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ ದಾವಣಗೆರೆ ಸಮೀಪದ ಒಲಾಲ್ ಕ್ರಾಸ್ ಎಂಬಲ್ಲಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಖಾದರ್ ಅವರು ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾರೆ. ಕಾರು ಚಾಲಕ ಕೂಡಾ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಬೆಳಗಾವಿ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರ ಪ್ರಚಾರಕ್ಕಾಗಿ ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣಿಸುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ದಾವಣಗೆರೆ-ಆನಗೋಡು ಮಧ್ಯೆ ರಾಷ್ಟ್ರೀಯ ಹೆದ್ದಾರಿ 4ರ ಒಲಾಲ್ ಕ್ರಾಸ್ ಬಳಿ ಖಾದರ್ […]

ಮಂಗಳೂರು ವಿಶ್ವವಿದ್ಯಾನಿಲಯ ಪರೀಕ್ಷೆಗಳು ನಿಗದಿಪಡಿಸಿದ ವೇಳಾಪಟ್ಟಿಯಂತೆ ನಡೆಯಲಿದೆ

Wednesday, April 14th, 2021
exam

ಮಂಗಳೂರು : ಮಂಗಳೂರು ವಿಶ್ವವಿದ್ಯಾನಿಲಯವು ದಿನಾಂಕ 15.04.2021ರಿಂದ ನಿಗದಿಪಡಿಸಿರುವ ಪರೀಕ್ಷೆಗಳು ಈ ಹಿಂದೆ ಪ್ರಕಟಿಸಿದ ವೇಳಾಪಟ್ಟಿಯಂತೆ ನಡೆಯಲಿದ್ದು, ಯಾವುದೇ ಬಲಾವಣೆ ಇರುವುದಿಲ್ಲ, ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಪರೀಕ್ಷೆ ಬರೆಯಲು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ರಿಜಿಸ್ಟ್ರಾರ್ (ಮೌಲ್ಯಮಾಪನ) ಮಂಗಳೂರು ವಿಶ್ವವಿದ್ಯಾಲಯ, ಮಂಗಳಗಂಗೋತ್ರಿ, ಮಂಗಳೂರು -574199. ದೂರವಾಣಿಗಳು: +918242287327: ಫ್ಯಾಕ್ಸ್: + 918242287452 / + 918242287367 / + 918242287424

ಮಂಗಳೂರು ಬೋಟ್ ದುರಂತ : ಮೂವರು ಸಾವು, ಒಂಬತ್ತು ಮಂದಿ ನಾಪತ್ತೆ

Tuesday, April 13th, 2021
ship

ಮಂಗಳೂರು: ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ಮೃತಪಟ್ಟ ಮೂವರು ಮೀನುಗಾರರ ಮೃತದೇಹವನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ವರ್ಗ ಮಂಗಳವಾರ ಪತ್ತೆ ಹಚ್ಚಿದ್ದು,  ಮಾಣಕ್ಯದಾಸ್ ಮತ್ತು ಅಲೆಗ್ಸಾಂಡರ್ ಎಂಬವರ ಗುರುತು ಹಿಡಿಯಲಾಗಿದ್ದು, ಇನ್ನೊಬ್ಬರ ಹೆಸರು ತಿಳಿದು ಬಂದಿಲ್ಲ. ಸುರತ್ಕಲ್ ಲೈಟ್ ಹೌಸ್‌ನಿಂದ 42 ನಾಟಿಕಲ್ ಮೈಲ್ ದೂರದ ಸಮುದ್ರದಲ್ಲಿ ಈ ದುರ್ಘಟನೆಯಲ್ಲಿ ಇಬ್ಬರನ್ನು ರಕ್ಷಿಸಲಾಗಿದ್ದು, ಇತರ ಒಂಭತ್ತು ಮಂದಿ ಕಾಣೆಯಾಗಿದ್ದಾರೆ. ಅವರಿಗಾಗಿ ಕೋಸ್ಟ್‌ಗಾರ್ಡ್‌ನವರು ಶೋಧಕಾರ್ಯ ಮುಂದುವರಿಸಿದ್ದಾರೆ. ರಕ್ಷಿಸಲ್ಪಟ್ಟ ಇಬ್ಬರು ಮತ್ತು ಮೂವರ ಮೃತದೇಹವನ್ನು ಕಡಲ ಕಿನಾರೆಗೆ ತಂದು […]

ಅರುಣ್ ಉಳ್ಳಾಲ್ ‌ರವರ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ಕ್ಕೆ ಡಾಕ್ಟರೇಟ್

Tuesday, April 13th, 2021
Arun Ullal

ಉಳ್ಳಾಲ : ಮಂಗಳೂರು ವಿಶ್ವವಿದ್ಯಾಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯ ಸಂಶೋಧಕ ಅರುಣ್ ಉಳ್ಳಾಲ್ ‌ರವರು ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗಪ್ಪ ಗೌಡ ಆರ್. ಇವರ ಮಾರ್ಗದರ್ಶನದಲ್ಲಿ ಸಲ್ಲಿಸಿದ ‘ಭಗವತಿ ಆರಾಧನೆ- ಸಾಂಸ್ಕೃತಿಕ ಅಧ್ಯಯನ’ ಎಂಬ ಪಿಹೆಚ್ ಡಿ. ಮಹಾಪ್ರಬಂಧಕ್ಕೆ ವಿಶ್ವವಿದ್ಯಾಲಯವು ಉನ್ನತ ‘ಡಾಕ್ಟರೇಟ್’ ಪದವಿ ನೀಡಿ ಗೌರವಿಸಿದೆ. ತೊಕ್ಕೊಟ್ಟಿನ ನಿವೃತ್ತ ಬಿಎಸ್ಎನ್ಎಲ್ ಉದ್ಯೋಗಿ ನಾಗೇಶ್ ತೊಕ್ಕೊಟ್ಟು ಮತ್ತು ದಿವ್ಯಾ ನಾಗೇಶ್ ದಂಪತಿಗಳ ಪುತ್ರರಾಗಿರುವ ಇವರು ಸದ್ಯ ಮಂಗಳೂರಿನ ಕೆನರಾ ಕಾಲೇಜಿನಲ್ಲಿ ಕನ್ನಡ ವಿಭಾಗದ ಉಪನ್ಯಾಸಕರಾಗಿ […]

ಸಮುದ್ರದಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವು, ಜೊತೆಗಿದ್ದವರು ಅಪಾಯದಿಂದ ಪಾರು

Tuesday, April 13th, 2021
baburaj

ಕಾಸರಗೋಡು : ಮೀನುಗಾರಿಕೆಗೆ ತೆರೆಳಿದ್ದ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟ ದಾರುಣ ಘಟನೆ ಏ.13ರ ಮಂಗಳವಾರ ಮುಂಜಾನೆ ಕಾಸರಗೋಡು ಸಮುದ್ರದಲ್ಲಿ ನಡೆದಿದೆ. ಮೃತಪಟ್ಟವರನ್ನು ಅಡ್ಕತ್ತಬೈಲ್ ಶ್ರೀ ಕುರುಂಭಾ ಕ್ಷೇತ್ರ ಸಮೀಪದ ಬಾಬು ರಾಜ್ ( 40) ಎಂದು ಗುರುತಿಸಲಾಗಿದೆ. ಬಾಬು ರಾಜ್ , ಕೃಷ್ಣ , ಸುಜಿ ಮತ್ತು ಬಾಬು ಎಂಬವರು ಭಾಗ್ಯಲಕ್ಷ್ಮಿ ಎಂಬ ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದರು. ಮುಂಜಾನೆ ಮೂರು ಗಂಟೆ ಸುಮಾರಿಗೆ ಘಟನೆ ನಡೆದಿದೆ. ಬೋಟು ಆಳಿವೆ ಬಾಗಿಲು ತಲಪುತ್ತಿದ್ದಂತೆ ಭಾರೀ ಗಾಳಿ , […]

ತೊಕ್ಕೊಟ್ಟು ಕೊರಗಜ್ಜನ ಕೋಲದಲ್ಲಿ ಕಲ್ಲೆಸೆದು ಗಲಭೆ ಸೃಷ್ಟಿಸಲು ಯತ್ನ, ಓರ್ವನ ಬಂಧನ

Tuesday, April 13th, 2021
Hafiz

ಮಂಗಳೂರು  : ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದ ಪಕ್ಕದ ಕಟ್ಟಡದ ಮೇಲಿಂದ ಕಲ್ಲೆಸೆದು ಗಲಭೆ ಸೃಷ್ಟಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಉಳ್ಳಾಲ ಪೊಲೀಸರು ಓರ್ವನನ್ನು ಬಂಧಿಸಿದ್ದಾರೆ. ಪೊಲೀಸರೊಂದಿಗೆ ಸ್ಥಳೀಯರು ಸೇರಿ ಆರೋಪಿ ಮಹಮ್ಮದ್ ಹಫೀಝ್  ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಡಿ ನಿವಾಸಿ ಮಹಮ್ಮದ್ ಹಫೀಝ್ ತೊಕ್ಕೊಟ್ಟು ಜಂಕ್ಷನ್ ಬಳಿ ಕೊರಗಜ್ಜನ ಕೋಲ ನಡೆಯುತ್ತಿದ್ದು ಅಲ್ಲೇ ಇರುವ ವಾಣಿಜ್ಯ ಸಂಕೀರ್ಣ ದ ಮೇಲಿನಿಂದ ಕಲ್ಲೆಸೆದಿದ್ದು ಈ ಸಂದರ್ಭದಲ್ಲಿ‌ಪೊಲೀಸರು ಮತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜನರು ಆರೋಪಿಯನ್ಬು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. […]

ಹೊಸ ವರುಷದ ಹರುಷ ತಂದ ಯುಗಾದಿ

Tuesday, April 13th, 2021
ugadi

ಹಿಂದೂ ಧರ್ಮದ ಪ್ರಕಾರ ಚೈತ್ರ ಮಾಸದಿಂದ ಹೊಸವರ್ಷ ಆರಂಭವಾಗುತ್ತದೆ ಚೈತ್ರಮಾಸದ ಮೊದಲ ದಿನವೇ ಯುಗಾದಿ. ಯುಗಾದಿ ಪದದ ಉತ್ಪತ್ತಿಯು ಯುಗ+ಆದಿ ಇಂದ ಆಗಿದ್ದು ಹೊಸ ವರ್ಷದ ಆರಂಭ ಎಂಬ ಅರ್ಥ ನೀಡುತ್ತದೆ. ಯುಗಾದಿ ಹಬ್ಬವು ಚೈತ್ರಮಾಸದ ಶುಕ್ಲಪಕ್ಷದ ಪಾಡ್ಯದಂದು ಬರುತ್ತದೆ, ಯುಗಾದಿಯನ್ನು ಚಂದ್ರಮಾನ ಮತ್ತು ಸೌರಮಾನ ಹೀಗೆ ಎರಡು ಬಗೆಯಲ್ಲಿ ಆಚರಿಸುವ ಪದ್ಧತಿ ಇದೆ. ಚಂದ್ರನ ಚಲನೆಯನ್ನು ಗುರುತಿಸಿ ಮಾಡುವ ಪದ್ಧತಿಗೆ ಚಂದ್ರಮಾನ ಯುಗಾದಿಯನ್ನುವರು ಹಾಗೂ ಸೂರ್ಯ ಮೇಷ ರಾಶಿಗೆ ಬಂದಾಗ ಸೌರಮಾನ ಯುಗಾದಿ ಆಚರಿಸುವರು, ದಕ್ಷಿಣ […]

ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟುಗೆ ಮಂಗಳೂರಿನಲ್ಲಿ ಅದ್ಧೂರಿ ಸ್ವಾಗತ

Saturday, April 10th, 2021
Ravindra Shetty

ಮಂಗಳೂರು: ಕರ್ನಾಟಕವನ್ನು ಡೇರೆ ಮುಕ್ತ ಮಾಡಲು ಅಡಿಗಲ್ಲು ಹಾಕುತ್ತೇನೆ ಎಂದು ಕರ್ನಾಟಕ ಅಲೆಮಾರಿ‌ ಹಾಗೂ ಅರೆ ಅಲೆಮಾರಿ ನಿಗಮದ ಅಧ್ಯಕ್ಷ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ಅಧಿಕಾರ ಸ್ವೀಕರಿಸಿದ ಬಳಿಕ ಮಂಗಳೂರಿಗೆ ಪ್ರಥಮ ಬಾರಿಗೆ ಬಂದ ಆಗಮಿಸಿದ್ದು, ಅವರಿಗೆ ದ  ಅವರಿಗೆ ಪಕ್ಷದ ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ಅಲೆಮಾರಿ‌ ನಿಗಮವು ಕಳೆದ ಬಾರಿ ಆರಂಭವಾಗಿದ್ದು, ಸಿಎಂ ಯಡಿಯೂರಪ್ಪನವರು ನನ್ನನ್ನು ಈ ನಿಗಮದ ಪ್ರಥಮ ಅಧ್ಯಕ್ಷನನ್ನಾಗಿ ಆಯ್ಕೆ […]

ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೊರೋನಾ ಸೋಂಕು ದೃಢ

Saturday, April 10th, 2021
kota

ಉಡುಪಿ : ಕೇರಳ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಊರಿಗೆ ಬಂದಿದ್ದ ರಾಜ್ಯ ಮುಜರಾಯಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಕೋವಿಡ್-19 ಸೋಂಕು ತಗಲಿರುವುದು ದೃಢಪಟ್ಟಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವರು, ಕೋವಿಡ್-19 ಪಾಸಿಟಿವ್ ಕಾರಣಕ್ಕೆ ನಾನು ಆಸ್ಪತ್ರೆಗೆ ದಾಖಲಾಗಿದ್ದು, ಅನಿವಾರ್ಯವಾದರೆ ದೂರವಾಣಿ ಮೂಲಕ ಸಂಪರ್ಕಿಸಬಹುದು. ಒಂದೆರಡು ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಕೋವಿಡ್-19 ಟೆಸ್ಟ್ ಮಾಡಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ. […]