ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟಕ್ಕೆ ಚಾಲನೆ

Monday, March 15th, 2021
Gunashree

ಬಂಟ್ವಾಳ : ಶಿಸ್ತುಬದ್ಧ ಕ್ರೀಡೆಯಲ್ಲಿ ಮಾನವೀಯ ಗುಣಗಳನ್ನು ಮೈಗೂಡಿಸಿಕೊಂಡಾಗ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಪ್ರತಿಮ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಈಚೆಗೆ ಅಸ್ಸಾಂ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಜಾವಲಿನ್ ಎಸೆತ ಪಂದ್ಯಾಟದಲ್ಲಿ ಇಲ್ಲಿನ ವಿದ್ಯಾಥರ್ಿನಿ ರಮ್ಯಶ್ರೀ ಜೈನ್ ಚಿನ್ನದ ಪದಕ ಗಳಿಸಿರುವುದು ಇದಕ್ಕೆ ಸೂಕ್ತ ಉದಾಹರಣೆ ಆಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ತುಂಗಪ್ಪ ಬಂಗೇರ ಹೇಳಿದರು. ಇಲ್ಲಿನ ಸಿದ್ಧಕಟ್ಟೆ ಗುಣಶ್ರೀ ಪದವಿಪೂರ್ವ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಂದ್ಯಾಟ ಉದ್ಘಾಟಿಸಿ […]

ಹಿರಿಯ ಕಲ್ಲಂಗಡಿ ಕೃಷಿಕ, ಶತಾಯುಷಿ ಕೆ.ಸೇಸು ಸಪಲ್ಯ ನಿಧನ

Monday, March 15th, 2021
Sesu Sapalya

ಬಂಟ್ವಾಳ: ಇಲ್ಲಿನ ಕರಿಯಂಗಳ ಗ್ರಾಮದ ಪೊಳಲಿ ಸಮೀಪದ ಕಂಚೇಶ್ವರ ನಿವಾಸಿ, ಹಿರಿಯ ಕಲ್ಲಂಗಡಿ ಕೃಷಿಕ ಶತಾಯುಷಿ ಕೆ.ಸೇಸು ಸಪಲ್ಯ (102) ಇವರು ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪತ್ನಿ, ಪಾಣೆಮಂಗಳೂರು ಸುಮಂಗಲಾ ಕ್ರೆಡಿಟ್ ಸೊಸೈಟಿ ಮಾಜಿ ಅಧ್ಯಕ್ಷ ಎಸ್.ಎ. ವಿಶ್ವನಾಥ್ ಬಿ.ಸಿ.ರೋಡು ಸಹಿತ ಮೂವರು ಪುತ್ರರು ಮತ್ತು ಏಳು ಮಂದಿ ಪುತ್ರಿಯರು ಇದ್ದಾರೆ. ಮೃತರು ಪ್ರಗತಿಪರ ಕೃಷಿಕರಾಗಿ, ತರಕಾರಿ ಮತ್ತು ಕಲ್ಲಂಗಡಿ ಕೃಷಿ ಜೊತೆಗೆ ಜಾನಪದ ಕ್ರೀಡೆ ಕಂಬಳ ಪ್ರೇಮಿಯಾಗಿ, ಪೊಳಲಿ ವಲಯ ಗಾಣಿಗ […]

ತಂದೆಯ ಶವಸಂಸ್ಕಾರಕ್ಕೆಂದು ಹೂವು ತರಲು ತೆರಳಿದ್ದ ಮಗ ಮತ್ತು ಸಂಬಂಧಿ ಸಾವು

Monday, March 15th, 2021
Sirasi Accident

ಶಿರಸಿ  : ಬಸ್ಸು ಹಾಗೂ ದ್ವಿಚಕ್ರ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನದ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿರುವ ಈ ಘಟನೆ ಶಿರಸಿ ನಗರದ ಎಸ್‍ಬಿಐ ಸರ್ಕಲ್ ಬಳಿ ಸಂಭವಿಸಿದೆ. ತಂದೆಯ ಶವಸಂಸ್ಕಾರಕ್ಕೆಂದು ಹೂವು ತರಲು ತೆರಳಿದ್ದ ಮಗ ಮತ್ತು ಇನ್ನೊಬ್ಬ ಸಂಬಂಧಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮೃತರನ್ನು ಶಿರಸಿಯ ಗಣೇಶ ನಗರದ ನಿವಾಸಿಗಳಾದ ರವಿಚಂದ್ರ ವಡ್ಡರ್ (34), ಸುನೀಲ ಇಂದೂರ (26) ಎಂದು ಗುರುತಿಸಲಾಗಿದೆ. ರವಿಚಂದ್ರ ತಂದೆ ಹನುಮಂತಪ್ಪ ಇಂದು ಮೃತಪಟ್ಟಿದ್ದು, ಅವರ ಶವಸಂಸ್ಕಾರಕ್ಕೆ ಹೂ ತರಲು […]

ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನ ಮೇಲೆ ತಲವಾರು, ಮರದ ಸೋಂಟೆಯಿಂದ ಮಾರಣಾಂತಿಕ ಹಲ್ಲೆ

Monday, March 15th, 2021
Anil Poojary

ಕಾರ್ಕಳ : ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗಳ ದಳ ಕಾರ್ಯಕರ್ತರ ತಂಡದ ನಡುವೆ ತಲವಾರು ದಾಳಿ ನಡೆದಿದ್ದು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತನನ್ನು ಮರಣಾತಿಕ ಹಲ್ಲೆ ನಡೆಸಿ  ಕೊಲೆಗೆ ಯತ್ನಿಸಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಾ.14ರಂದು ರಾತ್ರಿ 10:30ರ ಸುಮಾರಿಗೆ ನಿಟ್ಟೆ ಪರಪ್ಪಾಡಿ ನಿವಾಸಿ ಅನಿಲ್ ಪೂಜಾರಿ(29) ಎಂಬವರ ಮೇಲೆ ಪರಪ್ಪಾಡಿ ಎಂಬಲ್ಲಿ ಆರೋಪಿಗಳಾದ ಬಜರಂಗದಳ ಕಾರ್ಯಕರ್ತರೆನ್ನಲಾದ ಸುನೀಲ್, ಸುಧೀರ್, ಪ್ರಸಾದ್, ಶರತ್, ಜಗದೀಶ್ ಪೂಜಾರಿ ಎಂಬವರು ಅನಿಲ್ ಮೇಲೆ ತಲವಾರು ದಾಳಿ ನಡೆಸಿದ್ದಾರೆಂದು  ಆರೋಪಿಸಲಾಗಿದೆ. […]

ಕಾರು ಗ್ಯಾರೇಜ್ ನಲ್ಲಿ ಬೆಂಕಿ, ಸುಟ್ಟು ಕರಕಲಾದ ಕಾರುಗಳು

Monday, March 15th, 2021
Car Garage

ವಿಟ್ಲ : ನಗರ ಹೊರವಲಯದ ಚಂದಳಿಕೆ ಎಂಬಲ್ಲಿ ಗ್ಯಾರೇಜ್ ವೊಂದು ಸಂಪೂರ್ಣವಾಗಿ ಸುಟ್ಟು ಕರಕಲಾದ ಘಟನೆ ಸೋಮವಾರ ಬೆಳಗ್ಗೆ ಸಂಭವಿಸಿದೆ. ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಯಿಂದ ಗ್ಯಾರೇಜ್ ಭಾಗಶಃ ಸುಟ್ಟು ಕರಕಲಾಗಿತ್ತು. ಗ್ಯಾರೇಜ್ ಒಳಗಡೆ ರಿಪೇರಿಗೆಂದು ಇರಿಸಲಾಗಿದ್ದ ಕೆಲವೊಂದು ಕಾರುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ. ತಕ್ಷಣ ಪುತ್ತೂರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿದ್ದರೂ ಅವರು ಸ್ಥಳಕ್ಕಾಗಮಿಸುವಷ್ಟರಲ್ಲಿ ಗ್ಯಾರೇಜ್ ಭಾಗಶಃ ಸುಟ್ಟು ಸುಟ್ಟು  ಹೋಗಿದೆ. ಕಾರು ಗ್ಯಾರೇಜ್  ಚಂದಳಿಕೆ ಹರೀಶ್ ಎಂಬವರದ್ದಾಗಿದೆ.  ಗ್ಯಾರೇಜ್ ಒಳಗಡೆ 10ಕ್ಕಿಂತಲೂ ಅಧಿಕ ವಾಹನಗಳಿದ್ದವು. ಬೆಂಕಿ ಕಾಣಿಸಿಕೊಂಡ ಕೂಡಲೇ […]

ಸಾರ್ವಜನಿಕ ರಂಗದ 2 ಬ್ಯಾಂಕ್, ವಿಮಾ ಕಂಪೆನಿ ಖಾಸಗೀಕರಣ- ಬ್ಯಾಂಕ್ ನೌಕರರ ಮುಷ್ಕರ

Monday, March 15th, 2021
Bank Employees

ಮಂಗಳೂರು : 2021ರ ಕೇಂದ್ರ ಬಜೆಟ್‌ನಲ್ಲಿ ಸಾರ್ವಜನಿಕ ರಂಗದ 2 ಬ್ಯಾಂಕ್ ಮತ್ತು ಒಂದು ವಿಮಾ ಕಂಪೆನಿಯನ್ನು ಖಾಸಗೀಕರಣಗೊಳಿಸಲು ಘೋಷಿಸಿರುವುದನ್ನು ಖಂಡಿಸಿ ಸಂಯುಕ್ತ ಬ್ಯಾಂಕ್ ಒಕ್ಕೂಟಗಳ ವೇದಿಕೆ ನೀಡಿರುವ ಕರೆಯಂತೆ ದ.ಕ. ಜಿಲ್ಲೆಯಲ್ಲಿ ಬ್ಯಾಂಕ್ ನೌಕರರು ಸೋಮವಾರ ಬೆಳಗ್ಗೆಯಿಂದಲೇ ಮುಷ್ಕರ ಆರಂಭಿಸಿದ್ದಾರೆ. ಮಂಗಳೂರು ನಗರದ ಸಹಿತ ಜಿಲ್ಲೆಯ ವಿವಿಧೆಡೆ ಸುಮಾರು 2 ಸಾವಿರಕ್ಕೂ ಅಧಿಕ ಬ್ಯಾಂಕ್ ನೌಕರರು ಇಂದಿನ ಮುಷ್ಕರದಲ್ಲಿ ಪಾಲ್ಗೊಂಡಿದ್ದು, ಮಂಗಳವಾರವೂ ಮುಷ್ಕರ ನಡೆಸಲಿದ್ದಾರೆ. ಸೋಮವಾರ ಕೆನರಾ ಬ್ಯಾಂಕ್‌ನ ನಗರದ ಬಲ್ಮಠ ವೃತ್ತದ ಬಳಿ ಪ್ರತಿಭಟನೆ […]

ಕೇರಳ ವಿಧಾನಸಭಾ ಚುನಾವಣೆ : ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಮಂಜೇಶ್ವರ ಹಾಗೂ ಕೊನ್ನಿ ಕ್ಷೇತ್ರದಿಂದ ಕಣಕ್ಕೆ

Sunday, March 14th, 2021
K Surendran

ಕಾಸರಗೋಡು : ಕೇರಳ ವಿಧಾನಸಭಾ ಚುನಾವಣೆಗೆ ಬಿಜೆಪಿ ರವಿವಾರ 112 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದು ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ರನ್ನು ಮಂಜೇಶ್ವರ ಹಾಗೂ ಕೊನ್ನಿ ಕ್ಷೇತ್ರದಿಂದ ಕಣಕ್ಕಿಳಿಸಿದೆ. ಮೆಟ್ರೋಮ್ಯಾನ್ ಖ್ಯಾತಿಯ ಇ.ಶ್ರೀಧರನ್ ಪಾಲಕ್ಕಾಡ್ ನಿಂದ ಸ್ಪರ್ಧಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಸಿಂಗ್, ಕೇರಳ ಬಿಜೆಪಿ 115 ಸೀಟುಗಳಲ್ಲಿ ಸ್ಪರ್ಧಿಸಲಿದೆ. ಉಳಿದ 25 ಸ್ಥಾನಗಳನ್ನು ಮಿತ್ರಪಕ್ಷಗಳಿಗೆ ಬಿಟ್ಟುಕೊಟ್ಟಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಕಾಸರಗೋಡಿನ ಮಂಜೇಶ್ವರ ಹಾಗೂ ಪಟ್ಟಣಂತಿಟ್ಟದ ಕೊನ್ನಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂದು […]

ಅಪಘಾತಕ್ಕೊಳಗಾಗಿದ್ದ ಎಎಸ್‌ಐ ನಾರಾಯಣ ನಾಯ್ಕ್ ವಿಧಿವಶ

Sunday, March 14th, 2021
Narayan nayak

ಮಂಗಳೂರು : ಪಾಂಡೇಶ್ವರ ಸಂಚಾರ ಪಶ್ಚಿಮ ಠಾಣಾ ಎಎಸ್‌ಐ ನಾರಾಯಣ ನಾಯ್ಕ್ ಎರಡು ವರ್ಷದ ಹಿಂದೆ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 14 ರವಿವಾರ ಮೃತಪಟ್ಟಿದ್ದಾರೆ. 2018 ಅಕ್ಟೋಬರ್ 10ರಂದು ಹೈವೇ ಪ್ಯಾಟ್ರೋಲಿಂಗ್ ವೇಳೆ ಮೇರಿಹಿಲ್ ಬಳಿ ರಸ್ತೆ ಅಪಘಾತಕ್ಕೆ ಒಳಗಾಗಿ  ತೀವ್ರ ಗಾಯಗೊಂಡು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ಚಿಕಿತ್ಸೆಯಲ್ಲಿದ್ದ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಇಬ್ಬರು ಹೆಣ್ಮಕ್ಕಳನ್ನು ಅಗಲಿದ್ದಾರೆ. ಮಂಗಳೂರು ಪೊಲೀಸ್ ಆಯುಕ್ತರ  ನೇತೃತ್ವದಲ್ಲಿ ಮಂಗಳೂರು ಸಿಎಆರ್ ಮೈದಾನದಲ್ಲಿ ಪಾರ್ಥಿವ ಶರೀರಕ್ಕೆ […]

ಏ. 2ರಂದು ‘ಪ್ರಥಮ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ’ ಆಮಂತ್ರಣ ಪತ್ರಿಕೆ ಬಿಡುಗಡೆ

Sunday, March 14th, 2021
Poovari

ಪುತ್ತೂರು : ಒಡಿಯೂರು ಶ್ರೀಗಳ ಜನ್ಮ ಷಡ್ಯಬ್ಧ ಸಂಭ್ರಮದ ಪ್ರಯುಕ್ತ ಪೂವರಿ ಪತ್ರಿಕಾ ಬಳಗ ಆಶ್ರಯದಲ್ಲಿ, ಷಡ್ಯಬ್ಧ ಪುತ್ತೂರು ತಾಲೂಕು ಸಮಿತಿ ಸಹಯೋಗದಲ್ಲಿ ತುಳುನಾಡಿನಲ್ಲಿ ಪ್ರಥಮ ಬಾರಿಗೆ ನಡೆಯಲಿರುವ ರಾಷ್ಟ್ರೀಯ ತುಳು ಪತ್ರಿಕಾ ಸಮ್ಮಿಲನ’ದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ನಡೆಯಿತು. ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ಕೆ. ವೆಂಕಟೇಶ ಸುಬ್ರಹ್ಮಣ್ಯ ಭಟ್ ಪ್ರಾರ್ಥನೆ ಸಲ್ಲಿಸಿದ ಬಳಿಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಆಮಂತ್ರಣ ಪತ್ರಿಕೆ […]

ಟ್ಯಾಂಕರ್ ಪಲ್ಟಿ : ಬಾಟಲ್, ಕ್ಯಾನ್, ಬಕೆಟ್​ಗಳಲ್ಲಿ ಪುಕ್ಸಟ್ಟೆ ಡೀಸೆಲ್ ತುಂಬಿಸಿ ಕೊಂಡ ಜನ

Saturday, March 13th, 2021
Tanker

ಉಪ್ಪಿನಂಗಡಿ:  ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿದ್ದ  ಡೀಸೆಲ್ ತುಂಬಿದ್ದ ಟ್ಯಾಂಕರ್ ಮಗುಚಿ ಬಿದ್ದು ಡೀಸೆಲ್ ಸೋರಿಕೆಯಾದ ಘಟನೆ ಶನಿವಾರ  ಉಪ್ಪಿನಂಗಡಿ ಸಮೀಪದ ಬೊಳ್ಳಾರು ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಡೀಸೆಲ್ ಟ್ಯಾಂಕರ್ ಚಾಲಕ ಮಹೇಶ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಟ್ಯಾಂಕರ್ ಮಂಗಳೂರಿನಿಂದ ಕೋಲಾರ ಕಡೆಗೆ ಹೋಗುತ್ತಿತ್ತು, ಟ್ಯಾಂಕರ್ ರಸ್ತೆಗೆ ಅಡ್ಡಲಾಗಿ ಮಗುಚಿ ಬಿದ್ದಿದ್ದರಿಂದ ಸ್ವಲ್ಪ ಸಮಯ ಸಂಚಾರಕ್ಕೆ ಅಡ್ಡಿಯಾಗಿತ್ತು. ಟ್ಯಾಂಕರ್ ಮಗುಚಿ ಬಿದ್ದ ಸಮಯದಲ್ಲಿ ಸ್ಥಳೀಯರು ಹಾಗೂ ಇತರೆ ವಾಹನ ಚಾಲಕರು ಬಾಟಲ್, ಕ್ಯಾನ್, ಬಕೆಟ್ಗಳಲ್ಲಿ ಡೀಸೆಲ್ ತುಂಬಿಸಲು […]