ವಿದ್ಯುತಾಘಾತ : ವೆನ್ಲಾಕ್ ಆಸ್ಪತ್ರೆಯಲ್ಲಿ ಯುವಕ ಸಾವು

Monday, March 8th, 2021
Wenlock Canteen

ಮಂಗಳೂರು : ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಶಾರ್ಟ್ ಸರ್ಕ್ಯೂಟ್ ನಿಂದ ಯುವಕನೋರ್ವ ಮೃತಪಟ್ಟ ಘಟನೆ ನಡೆದಿದೆ. ಕೋಟೆಕಾರ್ ಬೀರಿ ನಿವಾಸಿ ಅನೀಶ್ (20) ಮೃತ ಯುವಕ. ಕ್ಯಾಂಟೀನ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗ ಶಾರ್ಕ್ ಸರ್ಕ್ಯೂಟ್ ಸಂಭವಿಸಿ ದುರ್ಘಟನೆ ನಡೆದಿದೆ. ಮೃತ ಯುವಕನು ಕೆಪಿಟಿ ಕಾಲೇಜಿನಲ್ಲಿ ಓದುತ್ತಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾಟ ತೆಗೆಸುವುದಾಗಿ ನಂಬಿಸಿ ಚಿನ್ನಾಭರಣ- ನಗದು ದೋಚಿಕೊಂಡು ಹೋದ ಮಹಿಳಾ ಜ್ಯೋತಿಷಿ

Friday, March 5th, 2021
Jyotishya

ಉಡುಪಿ : ಮಾಟ ಮಂತ್ರ ಮಾಡಿದ್ದಾರೆ ಎಂದು ನಂಬಿಸಿ ಜೋತಿಷ್ಯ ಹೇಳುವುದಾಗಿ ಮನೆಗೆ ಬಂದ ಮಹಿಳೆಯೊಬ್ಬರು, ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಹೋಗಿರುವ ಘಟನೆ ಶುಕ್ರವಾರ ಬೆಳಗ್ಗೆ ನಿಟ್ಟೂರು ರಾಜೀವನಗರ ಎಂಬಲ್ಲಿ ನಡೆದಿದೆ. ರಾಜೀವನಗರದ ಲಕ್ಷ್ಮಿ(55) ಎಂಬವರ ಮನೆಗೆ ಸುಮಾರು 30 ವರ್ಷದ ಪ್ರಾಯದ ಅಪರಿಚಿತ ಮಹಿಳೆಯೊಬ್ಬರು ಬಂದು ಜೋತಿಷ್ಯ ಹೇಳುವುದಾಗಿ ನಂಬಿಸಿದರು. ‘ನಿಮ್ಮ ಮನೆಯಲ್ಲಿ ಯಾರೊ ಮಾಟ ಮಂತ್ರ ಮಾಡಿದ್ದಾರೆ, ಕಣ್ಣು ದೃಷ್ಟಿ ಆಗಿದೆ, ಲಕ್ಷ್ಮಿ ಪೂಜೆ ಮಾಡಿಸುತ್ತೇನೆ’ ಎಂದು ಹೇಳಿದ ಆಕೆ, […]

ಮಂಗಳೂರು : ಸ್ಕೂಟರ್ ಅಡ್ಡಗಟ್ಟಿ ಸರಕಾರಿ ಬಸ್ ಚಾಲಕನಿಗೆ ತಲವಾರಿನಿಂದ ತಿವಿದು ಕೊಲೆ ಯತ್ನ

Friday, March 5th, 2021
Shohif

ಮಂಗಳೂರು : ಸ್ಕೂಟರ್ ಅಡ್ಡವಿಟ್ಟು ಸರಕಾರಿ ಬಸ್ ಚಾಲಕನಿಗೆ ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ಶುಕ್ರವಾರ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಕಂಕನಾಡಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಅಡ್ಯಾರ್ ಕಣ್ಣೂರಿನ ಕುಂಡಾಲದ  ಆರೋಪಿ ಸೊಹೀಫ್ (19) ತಂದೆ ಅಬ್ದುಲ್ ಶರೀಪ್ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯು ಕೃತ್ಯಕ್ಕೆ ಬಳದಸಿದ್ದ ಸ್ಕೂಟರನ್ನು ವಶಪಡಿಸಲಾಗಿದೆ. ಪುತ್ತೂರು ಡಿಪೋ ಕೆಎಸ್ಸಾರ್ಟಿಸಿ ಬಸ್ ಚಾಲಕನಾಗಿದ್ದ ರಾಜು ಗಜಕೋಶ ಅವರನ್ನು ತಡೆದ ಆರೋಪಿಯು ಹಲ್ಲೆಗೈದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ. ಮಂಗಳೂರು ಕಡೆಗೆ ಬಸ್ […]

ಹಣಕ್ಕಾಗಿ ಕಂದಮ್ಮಗಳನ್ನು ಮಾರುವ ವ್ಯಕ್ತಿಯ ಬಂಧನ

Friday, March 5th, 2021
Rayan

ಮಂಗಳೂರು : ಕಾನೂನು ಬಾಹಿರವಾಗಿ 3-4 ತಿಂಗಳ ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ಹಾಗೂ ಇಬ್ಬರು ಮಹಿಳೆಯರನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಮೂಲ್ಕಿ ನಿವಾಸಿ ರಾಯನ್‌ (30) ಎಂದು ಗುರುತಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪೊಲೀಸ್‌ ಕಮಿಷನರ್‌‌‌ ಎನ್‌.ಶಶಿಕುಮಾರ್‌ ಅವರು ಗಂಡು ಮಗುವಿಗೆ 6 ಲಕ್ಷ, ಹೆಣ್ಣು ಮಗುವಿಗೆ 4 ಲಕ್ಷ. ರೂ.ಗಳಾಗಿದ್ದು, 1.5 ಲಕ್ಷ. ರೂ.ಗಳನ್ನು ಮುಂಗಡ ಪಾವತಿಯನ್ನು ಒಂದು ತಿಂಗಳೊಳಗೆ ತಲುಪಿಸಲಾಗುತ್ತದೆ. ವಿಚಾರಣೆಯ ಸಂದರ್ಭ ಕಾರ್ಕಳದ ಕವಿತಾ ಎಂಬಾಕೆ […]

ಮುಕ್ಕದ ಶ್ರೀನಿವಾಸ ಕಾಲೇಜಿನಲ್ಲಿ ರ‍್ಯಾಗಿಂಗ್, ಪ್ರಾಶುಂಪಾಲರಿಗೆ ನಾಲ್ವರು ವಿದ್ಯಾರ್ಥಿಗಳಿಂದ ಹಲ್ಲೆ

Friday, March 5th, 2021
Raging

ಮಂಗಳೂರು : ಸುರತ್ಕಲ್ ಮುಕ್ಕದ ಶ್ರೀನಿವಾಸ ಕಾಲೇಜಿನಲ್ಲಿ ಕಿರಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡುತ್ತಿರುವ ಬಗ್ಗೆ ಪ್ರಶ್ನಿಸಿದ ಪ್ರಾಶುಂಪಾಲರಿಗೆ ನಾಲ್ವರು ವಿದ್ಯಾರ್ಥಿಗಳು ಹಲ್ಲೆ ಮಾಡಿದ ಘಟನೆ ನಡೆದಿದೆ. ಕಾಲೇಜು ಪ್ರಾಶುಂಪಾಲರು ಈ ಬಗ್ಗೆ ದೂರು ದಾಖಲಿಸಿದ್ದು, ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಾದ ಮಹಮ್ಮದ್‌ ಬಾಝಿಲ್‌, ಸಂಭ್ರಮ್‌ ಆಳ್ವ, ಸಮೀಲ್‌, ಅಶ್ವಿನ್‌ ಎಸ್‌. ಜಾನ್ಸನ್‌ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ ಮಾ.3ರ ಬುಧವಾರ ಕಾಲೇಜಿನಲ್ಲಿ ರ‍್ಯಾಗಿಂಗ್ ನಡೆಸಿರುವ ಬಗ್ಗೆ ಕಿರಿಯ ವಿದ್ಯಾರ್ಥಿಗಳು ಪ್ರಾಶುಂಪಾಲರ ಗಮನಕ್ಕೆ ತಂದಿದ್ದಾರೆ. ಈ ಹಿನ್ನಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳನ್ನು ಕರೆದ […]

ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ವಂಚಿಸಿದವನಿಗೆ ಬೆಲ್ಟ್ ನಿಂದ ಹಲ್ಲೆ

Thursday, March 4th, 2021
Jeetu Shetty

ಮಂಗಳೂರು: ಫೇಸ್ ಬುಕ್ ಮೂಲಕ ಪರಿಚಯ ಮಾಡಿಸಿಕೊಂಡು ತಾಲೂಕು ಕಚೇರಿಯಲ್ಲಿ ಕೆಲಸ ದೊರಕಿಸಿಕೊಡುವುದಾಗಿ ಹೇಳಿ ಮಹಿಳೆಯರ ಸಹಿತ ಹಲವು ಮಂದಿಗೆ ವಂಚನೆಗೈದ ಆರೋಪಿಗೆ ಕೆಲವು ವ್ಯಕ್ತಿಗಳು  ಬೆಲ್ಟ್ ನಿಂದ ಮತ್ತು ಗುಂಪಾಗಿ ಸೇರಿ ಹಲ್ಲೆ ನಡೆಸಿರುವ ಘಟನೆ ಮುಲ್ಕಿ ಸಮೀಪ ನಡೆದಿದೆ. ಪುನರೂರು ಎಂಬಲ್ಲಿನ ಜೀತು ಶೆಟ್ಟಿ ಅಲಿಯಾಸ್ ಅಜಯ್ ಶೆಟ್ಟಿ ಎಂಬಾತ, ತನಗೆ ಶಾಸಕ ಡಾ.ವೈ.ಭರತ್ ಶೆಟ್ಟಿಯವರ ಪರಿಚಯ ಇದೆ ಎಂದು ಏಳೆಂಟು ಮಂದಿಗೆ ನಂಬಿಸಿದ್ದಾನೆ. ಎಫ್ಬಿ ಮುಖಾಂತರ ಅವರನ್ನು ಪರಿಚಯಿಸಿಕೊಂಡು ತಾಲೂಕು ಆಫೀಸ್ ನಲ್ಲಿ ಕೆಲಸ ದೊರಕಿಸುವ ಭರವಸೆ ನೀಡಿದ್ದಾನೆ. […]

ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಗೆ ಮಣ್ಣು ಕುಸಿದು ಇಬ್ಬರು ಕಾರ್ಮಿಕರ ಸಾವು

Thursday, March 4th, 2021
Chicken Farm

ಪುತ್ತೂರು: ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಇಳಿದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿರುವ ಘಟನೆ ಪಾಣಾಜೆ ಗ್ರಾಮದ‌ ಕೋಟೆ ರಸ್ತೆಯ ಕೆಮಾಜೆ ಎಂಬಲ್ಲಿ ನಡೆದಿದೆ. ಜೆಸಿಬಿಯಲ್ಲಿ ಮಣ್ಣು ಅಗೆಯುವ ಸಂದರ್ಭ ಭೂ ಕುಸಿತದಿಂದ ಇಬ್ಬರು ಕಾರ್ಮಿಕರು ಮಣ್ಣಿನಡಿ ಸಿಲುಕಿದ್ದಾರೆ ಎನ್ನಲಾಗಿದೆ. ಕಾರ್ಮಿಕರನ್ನು ಪಾಣಾಜೆ ಗ್ರಾಮದ ಪಾರ್ಪಳದವರು ಎಂದು ತಿಳಿದುಬಂದಿದೆ. ಕಡಮ್ಮಾಜೆ ಹಾಜಿ ಅಬ್ದುಲ್ಲಾ ಎಂಬುವವರಿಗೆ ಸೇರಿದ ಕೋಳಿ ತ್ಯಾಜ್ಯ ಹಾಕುತ್ತಿದ್ದ ಗುಂಡಿಯ ಪೈಪ್ ಸರಿಪಡಿಸಲು ಇಳಿದಿರುವ ವೇಳೆ ಪೈಪ್ ಮುರಿದು ಬಿದ್ದು ಇಬ್ಬರು ಕಾರ್ಮಿಕರು ಹೊಂಡಕ್ಕೆ ಬಿದ್ದಿದ್ದಾರೆ. ಇದೇ […]

ಅನಾಥಾಶ್ರಮಕ್ಕೆ ದೇಣಿಗೆ ನೀಡಲು ಹೊರಟ ಮಹಿಳೆ ನಿಗೂಢ ನಾಪತ್ತೆ !

Wednesday, March 3rd, 2021
Hinaj

ಉಳ್ಳಾಲ : ವಿದೇಶದಿಂದ ಬಂದ ಗರ್ಭಿಣಿ ಮಹಿಳೆಯೊಬ್ಬರು ಕಲ್ಲಾಪುವಿನಲ್ಲಿರುವ ಅನಾಥಾಶ್ರಮ ಶಾಲೆಗೆ ದೇಣಿಗೆ ಹಣವನ್ನು ನೀಡಲು ಹೋಗಿ ನಿಗೂಢ ರೀತಿಯಲ್ಲಿ ನಾಪತ್ತೆಯಾಗಿದ್ದಾರೆ. ಮಾರ್ಚ್ 2 ರ ಮಂಗಳವಾರ ಉಳ್ಳಾಲ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಲಾಪು ಎಂಬಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಾಪತ್ತೆಯಾದ ಗರ್ಭಿಣಿಯನ್ನು ಸೋಮೇಶ್ವರ ಒಂಬತ್ತುಕೆರೆ ನಿವಾಸಿ ಇಬ್ರಾಹಿಂ ಎಂಬವರ ಪತ್ನಿ ಹಿನಾಜ್(25) ಎಂದು ಗುರುತಿಸಲಾಗಿದೆ. ಹಿನಾಜ್ ಪತಿಯೊಂದಿಗೆ ವಿದೇಶದಲ್ಲಿದ್ದರು ಮತ್ತು ಕೆಲವು ವಾರಗಳ ಹಿಂದೆ ತಮ್ಮ ತವರೂರಿಗೆ ಮರಳಿದ್ದರು. ಪ್ರತಿಜ್ಞೆಯನ್ನು ಪೂರೈಸಲು ಹಣವನ್ನು ಹಸ್ತಾಂತರಿಸಲು […]

ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ಚಾಲನೆ !

Wednesday, March 3rd, 2021
Sanathana

ಮಂಗಳೂರು :  “ದೇವಸ್ಥಾನ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ” ವತಿಯಿಂದ ದೇವಸ್ಥಾನಗಳ ರಕ್ಷಣಾ ಅಭಿಯಾನಕ್ಕೆ ದಿನಾಂಕ 3 ಮಾರ್ಚ್, ಬುಧವಾರದಂದು ಮಂಗಳೂರಿನಲ್ಲಿ ಚಾಲನೆ ನೀಡಿ, ಅಭಿಯಾನದ ಮುಂದಿನ ದಿಶೆಯನ್ನು ನಿರ್ಧಾರ ಮಾಡಲು, ದೇವಸ್ಥಾನಗಳ ಸದ್ಯದ ಸ್ಥಿತಿಗತಿಗಳ ಬಗ್ಗೆ ದೇವಸ್ಥಾನ ರಕ್ಷಣಾ ಅಭಿಯಾನವನ್ನು ಪ್ರಾರಂಭ ಮಾಡಲು. ಸದಸ್ಯರ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ. ರಮಾನಂದ ಗೌಡ, ಮಹಾಸಂಘದ ಮಹಾರಾಷ್ಟ್ರ ರಾಜ್ಯದ ವಕ್ತಾರರಾದ ಶ್ರೀ. ಸುನಿಲ್ ಘನವಟ್, ಮಹಾಸಂಘದ ಕರ್ನಾಟಕ ರಾಜ್ಯ ವಕ್ತಾರರಾದ […]

ಮುಡಿಪುವಿನಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣ : ಅಲೋಕ್‌ ಮೋಹನ್‌

Tuesday, March 2nd, 2021
Alok Mohan

ಮಂಗಳೂರು: ಬಂಟ್ವಾಳ ತಾಲೂಕಿನ ಮುಡಿಪುವಿನಲ್ಲಿ ನಿರ್ಮಿಸಲಾಗುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದ ಕಾಮಗಾರಿ ಎರಡು ವರ್ಷದಲ್ಲಿ ಪೂರ್ಣವಾಗಲಿದೆ ಎಂದು ಬಂದೀಖಾನೆ ಡಿಜಿಪಿ ಅಲೋಕ್‌ ಮೋಹನ್‌ ಹೇಳಿದರು. ಮಂಗಳವಾರ ನಗರದ ಪೊಲೀಸ್ ಕಮಿಷನರ್ ಕಚೇರಿಯಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಂಟ್ವಾಳದಲ್ಲಿ ನಿರ್ಮಿಸುತ್ತಿರುವ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಸುರಕ್ಷತೆಯ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದರು. ಈಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹ ಚಿಕ್ಕದಾಗಿದ್ದು, ಸುಮಾರು 300 ಕೈದಿಗಳನ್ನು ಇರಿಸಬಹುದಾಗಿದೆ. ವಿಚಾರಣಾಧೀನ ಕೈದಿಗಳನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿದೆ ಎಂದರು. […]