ಶಾರದಾ ಆಯುರ್ವೇದ ಆಸ್ಪತ್ರೆಯ ‘ಸಂಪೂರ್ಣ’ ಲೈಂಗಿಕ ಆರೋಗ್ಯ ಮತ್ತು ಫರ್ಟಿಲಿಟಿ ಕೇಂದ್ರ ಲೋಕಾರ್ಪಣೆ

Sunday, February 14th, 2021
sharadha

ತಲಪಾಡಿ : ಶಾರದಾ ಆಯುರ್ವೇದ ಆಸ್ಪತ್ರೆಯಲ್ಲಿ ಲೈಂಗಿಕ ಆರೋಗ್ಯ ಮತ್ತು ಸಂತಾನಶಕ್ತಿ ವಿಭಾಗ ‘ಸಂಪೂರ್ಣ’ವನ್ನು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಿ. ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು. ಈ ಕೇಂದ್ರದಲ್ಲಿ ನುರಿತ ಸ್ತ್ರೀ ಹಾಗೂ ಪುರುಷ ತಜ್ಞ ಆಯುರ್ವೇದ ವೈದ್ಯರ ಸೇವೆ ಲಭ್ಯವಿರಲಿದೆ. ಪುರುಷ ಹಾಗೂ ಸ್ತ್ರೀಯರ ವಿವಾಹ ಪೂರ್ವ ಲೈಂಗಿಕ ಸಮಾಲೋಚನೆ, ಗರ್ಭಧಾರಣೆಗೆ ಅವಶ್ಯಕವಾದ ದೈಹಿಕ, ಮಾನಸಿಕ ಮತ್ತು ಸಾಂಸಾರಿಕ ವಾತಾವರಣ ಹಾಗೂ ಲೈಂಗಿಕ ವಿಜ್ಞಾನದ ವೈದ್ಯಕೀಯ ಮಾಹಿತಿಯನ್ನು ಸಮಾಲೋಚನೆಯ ಮೂಲಕ ಪಡೆಯಬಹುದು. ಪುರುಷರಲ್ಲಿ […]

ಇಂದು ಸಂಜೆ  ಆನ್‌ಲೈನ್‌ದಲ್ಲಿ ‘ಸನಾತನ ಪ್ರಭಾತ’ದ 22 ನೇ ವರ್ಧಂತ್ಯುತ್ಸವ

Saturday, February 13th, 2021
sanathana Prabhata

ಮಂಗಳೂರು  : ಕಳೆದ 22 ವರ್ಷಗಳಿಂದ ಹಿಂದೂಗಳಿಗೆ ಧರ್ಮಶಿಕ್ಷಣ, ರಾಷ್ಟ್ರ ಹಾಗೂ ಧರ್ಮದ ರಕ್ಷಣೆಗಾಗಿ ಪ್ರಬೋಧನೆ ಮಾಡುತ್ತಿರುವ ಕನ್ನಡ ವಾರ ಪತ್ರಿಕೆ ಸನಾತನ ಪ್ರಭಾತದ 22 ನೇ ವರ್ಧಂತ್ಯುತ್ಸವವು ಶನಿವಾರ ಅಂದರೆ ಫೆಬ್ರವರಿ 13 ಕ್ಕೆ ಆನ್‌ಲೈನ್‌ನಲ್ಲಿ ಇರಲಿದೆ. ತಾವೆಲ್ಲರೂ ತಪ್ಪದೇ ಭಾಗವಹಿಸಬೇಕೆಂದು ಕರೆ ನೀಡುತ್ತಿದ್ದೇವೆ. ಕಾರ್ಯಕ್ರಮದ ವಿವರ : ದಿನಾಂಕ :13 ಫೆಬ್ರವರಿ, ಶನಿವಾರ ಸಂಜೆ 6.00 ರಿಂದ. ಮುಖ್ಯ ವಕ್ತಾರರು :- ೧. ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ, ಕರಿಜೆ ಮಠ, ದ.ಕ. ಜಿಲ್ಲೆ. […]

ಮಹಿಳೆ ಸ್ನಾನ ಮಾಡುತ್ತಿದ್ದ ದೃಶ್ಯ ಮೊಬೈಲ್ ವೀಡಿಯೋ ಮಾಡಿದ ಆರೋಪಿ ಬಂಧನ

Saturday, February 13th, 2021
muneer

ಮಂಗಳೂರು  : ಮಹಿಳೆ ಸ್ನಾನ ಮಾಡುತ್ತಿದ್ದ  ದೃಶ್ಯ  ಮೊಬೈಲ್ ಮೂಲಕ ವೀಡಿಯೋ ನಡೆಸಿದ್ದ ಆರೋಪಿಯನ್ನು ಉಳ್ಳಾಲದ ಪೊಲೀಸರ ತಂಡ ಶುಕ್ರವಾರ ಬಂಧಿಸಿದೆ. ಮದನಿನಗರ ನಿವಾಸಿ ಅಬ್ದುಲ್ ಮುನೀರ್ (40) ಬಂಧಿತ ಆರೋಪಿ. ಅಸೌಖ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂಬಂಧಿಕರ ಜೊತೆಗಿದ್ದ ಮಹಿಳೆ ಸ್ನಾನ ಮಾಡಲು ತೆರಳಿದ್ದ ಸಂದರ್ಭ ಆರೋಪಿ ಮುನೀರ್ ಮೊಬೈಲ್ ಮೂಲಕ ಸ್ನಾನದ ದೃಶ್ಯವನ್ನು ಸೆರೆಹಿಡಿದಿದ್ದ. ಇದನ್ನು ಗಮನಿಸಿದ ಮಹಿಳೆ ಕೂಡಲೇ ಹೊರಬಂದಾಗ, ಆರೋಪಿ ಮುನೀರ್ ತಲೆಮರೆಸಿಕೊಂಡಿದ್ದನು. ಈ ಕುರಿತು ಮಹಿಳೆ ಜ.20 ರಂದು […]

ರೆಂಜಿಲಾಡಿಯಲ್ಲಿ ಪತಿ, ಪತ್ನಿ ಮೇಲೆ ಚಿರತೆ ದಾಳಿ

Friday, February 12th, 2021
chita

ಕಡಬ : ಕುಟ್ರುಪ್ಪಾಡಿ ಗ್ರಾಮದ ರೆಂಜಿಲಾಡಿ ಎಂಬಲ್ಲಿ ಚಿರತೆ ದಾಳಿಯಿಂದ ಪತಿ, ಪತ್ನಿ ಗಾಯಗೊಂಡ ಘಟನೆ ಕಡಬ ತಾಲೂಕಿನ  ಶುಕ್ರವಾರ ಬೆಳಗಿನ ಜಾವ ನಡೆದಿದೆ. ರೆಂಜಿಲಾಡಿಯ ಹೇರ ನಿವಾಸಿಗಳಾದ ಚಂದ್ರಶೇಖರ್ ಕಾಮತ್ ಹಾಗೂ ಅವರ ಪತ್ನಿ ಸೌಮ್ಯಾ ಕಾಮತ್ ಎಂಬವರು ಗಾಯಗೊಂಡಿದ್ದಾರೆ. ಇವರಿಬ್ಬರು ತೋಟದಲ್ಲಿ ಸ್ಪಿಂಕ್ಲರ್ ಬದಲಾಯಿಸಲೆಂದು ಶುಕ್ರವಾರ ಮುಂಜಾವ 1:304 ಸುಮಾರಿಗೆ ತೆರಳಿದ್ದ ವೇಳೆ ಚಿರತೆ ದಾಳಿ ನಡೆಸಿದೆಯೆನ್ನಲಾಗಿದೆ. ಚಿರತೆ ಮೊದಲು ಚಂದ್ರಶೇಖರ್ ಅವರ ಮೇಲೆ ದಾಳಿ ನಡೆಸಿದೆ. ಈ ವೇಳೆ ಅವರ ರಕ್ಷಣೆಗೆ ಧಾವಿಸಿದ ಸೌಮ್ಯಾರ […]

ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ ಜಗದೀಶ್ ಅಧಿಕಾರಿ

Thursday, February 11th, 2021
jagadeesha Adhikari

ಪುತ್ತೂರು: ತನನ್ನ ಮಾತಿನಲ್ಲಿ ತಪ್ಪಾಗಿದೆ ಎಂಬುವುದು ನನಗೆ ಅರಿವಾಗಿದೆ. ತನ್ನ ತಪ್ಪನ್ನು ಮನ್ನಿಸುವಂತಹ ಅನುಗ್ರಹವನ್ನು ಕರುಣಿಸಬೇಕೆಂದು ಬಿಜೆಪಿ ಮುಖಂಡ ಜಗದೀಶ್ ಅಧಿಕಾರಿ ಅವರು ಕೋಟಿ-ಚೆನ್ನಯ್ಯರ ಪಡುಮಲೆ ಮೂಲ ಕ್ಷೇತ್ರದಲ್ಲಿ ತಪ್ಪು ಕಾಣಿಕೆ ಹಾಕಿ ಕ್ಷಮೆಯಾಚಿಸಿದ್ದಾರೆ. ಪಡುಮಲೆಯಲ್ಲಿರುವ ಕೋಟಿ ಚೆನ್ನಯ್ಯರ ಮೂಲಕ್ಷೇತ್ರದಲ್ಲಿ ದೇಯಿ ಬೈದೆತಿ ಅವರ ಸಮಾಧಿ ಸ್ಥಳದಲ್ಲಿ ಕೈ ಕಾಣಿಕೆ ಒಪ್ಪಿಸಿ, ಕುವೆತೋಟದಲ್ಲಿ ಸುವರ್ಣಕೇದಗೆ ದೇಯಿ ಬೈದೆತಿಗೆ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ತನ್ನ ಹೇಳಿಕೆಯಿಂದ ಬಿಲ್ಲವ ಸಮುದಾಯಕ್ಕೆ ನೋವಾಗಿದೆ. ಈ ಹಿನ್ನೆಲೆಯಲ್ಲಿ ತಾನು ಪಡುಮಲೆಯ ಮೂಲಕ್ಷೇತ್ರಕ್ಕೆ ಬಂದು ಕ್ಷಮೆಯಾಚನೆ […]

ಸುರತ್ಕಲ್ ಟೋಲ್ ಗೇಟ್ ಶೀಘ್ರದಲ್ಲೇ ತೆರವು

Thursday, February 11th, 2021
tollgate

ಮಂಗಳೂರು : ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಶ್ರೀ.ನಳಿನ್ ಕುಮಾರ್ ಕಟೀಲ್ ಇವರ ನೇತೃತ್ವದಲ್ಲಿ ಇಂದು ರಾಜ್ಯದ ಸಂಸದರ ಸಭೆ ಮಾನ್ಯ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ಶ್ರೀ. ನಿತಿನ್ ಗಡ್ಕರಿಯವರ ನಿವಾಸದಲ್ಲಿ ನಡೆಯಿತು. ಸಭೆಯಲ್ಲಿ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ರಾಜ್ಯದ ಹಲವಾರು ವಿಷಯಗಳನ್ನು ಚರ್ಚಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಮುಖ್ಯವಾಗಿ ಸುರತ್ಕಲ್ ಟೋಲ್ ಗೇಟ್ ರದ್ದುಪಡಿಸುವುದರ ಬಗ್ಗೆ ಶೀಘ್ರದಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳ ವಿಶೇಷ ಸಭೆ ಕರೆಯಲು ಆದೇಶಿಸಿದರು. ರಾಷ್ಟ್ರೀಯ ಹೆದ್ದಾರಿ 169 […]

ತುಳು ಚಿತ್ರ ನಿರ್ದೇಶಕನಿಗೆ ಕನ್ನಡ ನಟಿಯಿಂದ ಮೋಸ

Thursday, February 11th, 2021
veerendra Shetty

ಮಂಗಳೂರು : ತುಳು ಚಿತ್ರ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಇವರಿಗೆ ನೀಡಿದ 40 ಲಕ್ಷ ರೂ. ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಪದ್ಮಜಾ ರಾವ್‌ಗೆ ಮಂಗಳೂರಿನ ಜೆಎಂಎಫ್‌ಸಿ ಐದನೇ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರಂಟ್ ನೀಡಿದೆ. ವೀರೇಂದ್ರ ಶೆಟ್ಟಿ ಕಾವೂರು ಕನ್ನಡದ ಚಿತ್ರರಂಗದ ನಟಿ ಪದ್ಮಾಜಾ ರಾವ್ ವಿರುದ್ಧ ಮಂಗಳೂರಿನ ಕೋರ್ಟ್‌ನಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. ಎರಡು ವರ್ಷಗಳ ಹಿಂದೆ ಪದ್ಮಜಾ ರಾವ್, ‘ಚಾಲಿಪೋಲಿಲು’ ಚಿತ್ರದಲ್ಲಿ ನಟಿಸುತ್ತಿದ್ದಾಗ, ಆ ಸಿನೆಮಾದ […]

ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ ಪತ್ರಕರ್ತ ಬಿ.ಎನ್. ಅಶೋಕ್ ಶೆಟ್ಟಿಗೆ ರಾಜ್ಯ ಪ್ರಶಸ್ತಿ

Thursday, February 11th, 2021
Ashok Shetty

ಮಂಗಳೂರು:   ವಿಕಲಚೇತನರ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆಗಾಗಿ “ವಿಶ್ವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ದಿನಾಚರಣೆ” ಸಮಾರಂಭದಲ್ಲಿ ಪತ್ರಕರ್ತ ಡಾ| ಅಶೋಕ್ ಶೆಟ್ಟಿ ಬಿ.ಎನ್. ಅವರಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಫೆಬ್ರವರಿ 11 , ಗುರುವಾರ ರಾಜ್ಯ ಪ್ರಶಸ್ತಿ (ವೈಯಕ್ತಿಕ ಪ್ರಶಸ್ತಿ)  ನೀಡಿ ಗೌರವಿಸಲಾಗಿದೆ. ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಶಶಿಕಲಾ ಜೊಲ್ಲೆ ರಾಜ್ಯದಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರ ಕಲ್ಯಾಣಕ್ಕಾಗಿ 2021-22ನೇ ಸಾಲಿನ ಆಯವ್ಯಯದಲ್ಲಿ ಸುಮಾರು 500 ಕೋಟಿ ರೂ.ಅನುದಾನಕ್ಕೆ ಮನವಿ ಮಾಡಲಾಗಿದೆ ಎಂದಿದ್ದಾರೆ. […]

ದಕ್ಷಿಣ ಕನ್ನಡ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ 120 ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

Thursday, February 11th, 2021
ದಕ್ಷಿಣ ಕನ್ನಡ ಜಿಲ್ಲೆಯ ಐವರು ಪೊಲೀಸ್ ಅಧಿಕಾರಿಗಳು ಸೇರಿದಂತೆ 120 ಪೊಲೀಸರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ

ಮಂಗಳೂರು  : ದಕ್ಷಿಣ ಕನ್ನಡ ಜಿಲ್ಲೆಯ ಡಿಟಿ ನಾಗರಾಜ್ ಬಂಟ್ವಾಳ ವೃತ್ತ (ಸಿಪಿಐ), ಕಬ್ಬಾಳ್ ರಾಜ್ ಉಳ್ಳಾಲ್ ಪೊಲೀಸ್ ಠಾಣೆ (ಪಿಎಸೈ), ಪುರುಷೋತ್ತಮ ಎ, ಸಿಐಡಿ ಪೊಲೀಸ್ ಅರಣ್ಯ ಘಟಕ ಮಂಗಳೂರು, ವೆಂಕಟೇಶ್ ನಾಯಕ್ (ಸಿಹೆಚ್ ಸಿ) ಬೆಳ್ತಂಗಡಿ ವೃತ್ತ ಸೇರಿದಂತೆ 120 ವಿವಿಧ ವರ್ಗದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು 2019ನೇ ಸಾಲಿನ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ವಿಧಾನಸೌಧದ ಬ್ಯಾಂಕ್ವೆಂಟ್ ಹಾಲ್‍ನಲ್ಲಿ ಸೋಮವಾರ  ಪೊಲೀಸ್ ಇಲಾಖೆಯಿಂದ ಏರ್ಪಡಿಸಿದ್ದ ಸಮಾರಂಭದಲ್ಲಿ 2019ರ ಮುಖ್ಯಮಂತ್ರಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿಗಳು […]

ಬಾಲಕಿಯನ್ನು ಅತ್ಯಾಚಾರಗೈದು ಮೊಬೈಲ್ ನಲ್ಲಿ ನಗ್ನ ಫೋಟೋ ತೆಗೆದು ಬೆದರಿಕೆ : ಪ್ರಕರಣ ದಾಖಲು

Thursday, February 11th, 2021
Child Rape

ಬಂಟ್ವಾಳ : ಬೋಳಂತೂರು ಗ್ರಾಮದ  ಬಾಲಕಿಯೊಬ್ಬಳನ್ನು ಅತ್ಯಾಚಾರಗೈದು ಬಳಿಕ ಮೊಬೈಲ್ ನಲ್ಲಿ ಆಕೆಯ ನಗ್ನ ಫೋಟೋಗಳನ್ನು ತೆಗೆದು ಬೆದರಿಕೆ ಹಾಕಿರುವ ಆರೋಪದಲ್ಲಿ ಇಬ್ಬರು ಯುವಕರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಬಂಟ್ವಾಳ ತಾಲೂಕಿನ ಬೋಳಂತೂರು ಗ್ರಾಮದ ಅಬೂಬಕರ್‌ ಸಿದ್ದೀಕ್‌ ಮತ್ತು ಚಪ್ಪಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ‌ ಬೋಳಂತೂರು ಗ್ರಾಮದ ಬಾಲಕಿಯನ್ನು ಆಕೆಯ ನೆರೆಮನೆಯವನಾದ ಆರೋಪಿ ಅಬೂಬಕರ್‌ ಸಿದ್ದೀಕ್ ಮತ್ತು ಆತನ ಸ್ನೇಹಿತ ಚಪ್ಪಿ ಪುಸಲಾಯಿಸಿ ಜ.25ರಂದು ಅತ್ಯಾಚಾರ ಎಸಗಿದ್ದಾರೆ ಎಂದು […]