ಸೈಡ್ ಕೊಡಲಿಲ್ಲ ಎಂದು ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿದ ಬೈಕ್ ಸವಾರ

Tuesday, January 19th, 2021
Petrol attack

ಮಂಗಳೂರು :  ಸೈಡ್ ಕೊಡುವ ವಿಚಾರವಾಗಿ ನಗರದ ಪಡೀಲ್ ಫೈಸಲ್ ನಗರ ಎಂಬಲ್ಲಿ ಬೈಕ್ ಸವಾರನೊಬ್ಬ ಬಸ್ ಚಾಲಕನ ಮೇಲೆ ಪೆಟ್ರೋಲ್ ಎರಚಿ ಪರಾರಿಯಾಗಿರುವ ಘಟನೆ ನಡೆದಿದೆ. ಕಂಕನಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಸ್ ಚಾಲಕ ಹಾಗೂ ಬೈಕ್ ಸವಾರನ ನಡುವೆ ಘರ್ಷಣೆ ನಡೆದಿದೆ. ವಾಹನಗಳಿಗೆ ಸೈಡ್ ಕೊಡುವ ವಿಚಾರವಾಗಿ ಘರ್ಷಣೆ ನಡೆದಿದೆ ಎನ್ನಲಾಗಿದೆ. ಈ ಬಗ್ಗೆ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ಅಗ್ನಿ ಅನಾಹುತ ಸಂಭವಿಸಿಲ್ಲ ಎಂಬುವುದಾಗಿ ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ […]

ಬಂಟ್ವಾಳ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ, ಉಗ್ರರೊಂದಿಗೆ ಸಂಪರ್ಕ ಶಂಕೆ

Tuesday, January 19th, 2021
satalite phone

ಮಂಗಳೂರು : ನಿಷೇಧಿತ ಸ್ಯಾಟಲೈಟ್ ಫೋನ್ ಕರಾವಳಿಯ ಜಿಲ್ಲೆಗಳಲ್ಲಿ ಕಾರ್ಯಪ್ರವೃತ್ತವಾಗಿರುವುದು ಬೆಳಕಿಗೆ  ಬಂದಿದೆ.  ಇದರಿಂದಾಗಿ ಉಗ್ರರ ಚಟುವಟಿಕೆ ಆರಂಭವಾಗಿದೆ ಎನ್ನಲಾಗುತ್ತಿದ್ದು. ಕರಾವಳಿಯ ದಟ್ಟಾರಣ್ಯ ಪ್ರದೇಶಗಳಲ್ಲಿ ಮತ್ತೆ ಸ್ಯಾಟ್ ಲೈಟ್ ಫೋನ್ ಆಕ್ಟಿವ್ ಆಗಿದೆ. ಕಳೆದ 10 ದಿನಗಳಲ್ಲಿ 3 ಬಾರಿ ಸ್ಯಾಟಲೈಟ್ ಫೋನ್ ಆಕ್ಟಿವ್ ಆದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ, ಉಡುಪಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಡು ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಲೊಕೇಷನ್ ಟ್ರೇಸ್ ಮಾಡಲಾಗಿದೆ. ದ.ಕ ಜಿಲ್ಲೆಯ ಬಂಟ್ವಾಳ ಪ್ರದೇಶದಲ್ಲಿ ಸ್ಯಾಟಲೈಟ್ ಫೋನ್ ಬಳಕೆಯಾಗಿರುವ […]

ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ ಸ್ಥಳಾಂತರ, ಜಿಲ್ಲೆಗೆ ಮಾಡಿದ ಮೋಸ

Tuesday, January 19th, 2021
muneerKatialla

ಮಂಗಳೂರು : ನಗರ ಹೊರವಲಯದ ಬಡಗ ಎಕ್ಕಾರಿನಲ್ಲಿ ನಿರ್ಮಾಣಗೊಳ್ಳಬೇಕಿದ್ದ ಕ್ಷಿಪ್ರ ಕಾರ್ಯಾಚರಣೆ ಪಡೆ (ಆರ್ ಎಎಫ್) ಘಟಕ ಯಾರ ಅರಿವಿಗೂ ಬಾರದಂತೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಗೆ ಸ್ಥಳಾಂತರಿಸಿ  ಶಿಲಾನ್ಯಾಸ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಹಿಂದೆ ಕರಾವಳಿಯ ಬ್ಯಾಂಕುಗಳು ಉತ್ತರ ಭಾರತದ ಬ್ಯಾಂಕುಗಳೊಂದಿಗೆ ವಿಲೀನ, ಮಂಗಳೂರು ವಿಮಾನ ನಿಲ್ದಾಣ ಅದಾನಿ ಕಂಪೆನಿಗೆ ಹಸ್ತಾಂತರ, ಇದೀಗ ಕ್ಷಿಪ್ರ ಕಾರ್ಯಾಚರಣೆ ಪಡೆಯ ಘಟಕ ಸ್ಥಳಾಂತರ ಸಂಸದ ನಳಿನ್ ಕುಮಾರ್ ಕಟೀಲ್ ವೈಫಲ್ಯ ಎಂದು ಮುನೀರ್‌ ಕಾಟಿಪಳ್ಳ ಆರೋಪಿಸಿದ್ದಾರೆ. ಈ ವೈಫಲ್ಯದ ಜವಾಬ್ದಾರಿಯನ್ನು […]

ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ, ಗರ್ಭಪಾತ ಮಾಡಿಸಿದ ಯುವಕ

Tuesday, January 19th, 2021
Rakshith

ಸುಬ್ರಹ್ಮಣ್ಯ: ಫೇಸ್‌ಬುಕ್ ಮೂಲಕ ಪರಿಚಯವಾಗಿ ಯುವತಿಯನ್ನು ಮದುವೆಯಾಗುವುದಾಗಿ  ನಂಬಿಸಿ  ದೈಹಿಕ ಸಂಪರ್ಕ ಬೆಳೆಸಿ ಗರ್ಭಪಾತ ಮಾಡಿಸಿ ದ್ದಾನೆಂದು ಯುವತಿ ದೂರು ನೀಡಿದ್ದಾಳೆ. ಕಡಬ ತಾಲೂಕಿನ ಸುಬ್ರಹ್ಮಣ್ಯದ ರಕ್ಷಿತ್ ಎಂಬಾತ  ಮದುವೆಯಾಗುವ ಭರವಸೆ ನೀಡಿ ತನ್ನನ್ನು ದೈಹಿಕವಾಗಿ ಬಳಸಿಕೊಂಡಿದ್ದಾನೆ ಎಂದು ಆಕೆ ಹೇಳಿದ್ದು, ಗರ್ಭಪಾತ ಸಹ ಮಾಡಿಸಿದ್ದಾನೆ ಎಂದು ತಿಳಿಸಿದ್ದಾನೆ. ಆದರೆ ಇದೀಗ ಮದುವೆಯಾಗಲು ನಿರಾಕರಿಸಿ ವಂಚನೆ ಮಾಡುತ್ತಿದ್ದಾನೆಂದು ತುಮಕೂರಿನ ವಸಂತಾ ಎಂಬ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಯುವತಿ ನೀಡಿರುವ ದೂರಿನ ಆಧಾರದ ಮೇರೆಗೆ ಕ್ರಮ ಕೈಗೊಂಡ […]

ಸುತ್ತಿಗೆಯಿಂದ ಹೊಡೆದು ತಂದೆಯನ್ನು ಸಾಯಿಸಿದ ಮಗ

Monday, January 18th, 2021
sridhar

ಬೆಳ್ತಂಗಡಿ : ಮಗನೊಬ್ಬ ತನ್ನ ತಂದೆಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ ಘಟನೆ ಬೆಳ್ತಂಗಡಿತಾಲ್ಲೂಕಿನ ಗರ್ದಾಡಿ ಗ್ರಾಮದ ಮುಂಡ್ಯೊಟ್ಟು ಎಂಬಲ್ಲಿ ಜನವರಿ 18 ರ ಸೋಮವಾರ ನಡೆದಿದೆ. ಮೃತರನ್ನು ಶ್ರೀಧರ್ ಎಂದು ಗುರುತಿಸಲಾಗಿದೆ, ಅವರ ಮಗ ಹರೀಶ್ ಈ ಕೊಲೆ ಮಾಡಿದ ಆರೋಪಿ.ಮೃತ ರಿಗೆ ಇಬ್ಬರು ಗಂಡು ಮತ್ತು ಒಬ್ಬರು ಮಗಳು ಇದ್ದಾರೆ. ಕೌಟುಂಬಿಕ ವಿವಾದವೇ ಕೊಲೆಗೆ ಕಾರಣವಾಗಿದೆ ಎನ್ನಲಾಗಿದೆ. ಈ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.

“ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ತುಳು, ಕನ್ನಡ ಭಕ್ತಿಗೀತೆ ಬಿಡುಗಡೆ

Monday, January 18th, 2021
kanadabolpu

ಮಂಜೇಶ್ವರ : ಇತಿಹಾಸ ಪ್ರಸಿದ್ಧವಾದ ದೇಲಂಪಾಡಿ ಶ್ರೀಮಹಾಲಿಂಗೇಶ್ವರ ಕ್ಷೇತ್ರದ ಧನು ಪೂಜಾ ಸಮಾರೋಪದ ಮಕರ ಸಂಕ್ರಮಣದಂದು “ಕಾನದ ಬೊಲ್ಪು ಶ್ರೀ ಮಹಾಲಿಂಗೇಶ್ವರ” ಎಂಬ ತುಳು, ಕನ್ನಡ ಭಕ್ತಿಗೀತೆ  ಬಿಡುಗಡೆಗೊಂಡಿತು. ತುಳುನಾಡ ತುಡರ್ ಕ್ರಿಯೇಷನ್ ಅರ್ಪಿಸಿದ ಎ.ಡಿ.ಕೊರಗಪ್ಪ ಹಾಗೂ ಕಾರ್ತಿಕ್ ಲಾಲ್ ಭಾಗ್ ಸಾಹಿತ್ಯ ರಚಿಸಿ  ಡಿ.ಪ್ರವೀಣ್ ಕುಮಾರ್  ನಿರ್ದೇಶಿಸಿದ ಈ ಗೀತೆಯನ್ನ  ಯೂಟ್ಯೂಬ್ ನ ಕೀಲಿಮಣೆಯನ್ನ ಅದುಮುವ ಮೂಲಕ ಕ್ಷೇತ್ರದ ತಂತ್ರಿವರೇಣ್ಯರಾದ ಬ್ರಹ್ಮ ಶ್ರೀ ಗಣೇಶ ತಂತ್ರಿ ಬಿಡುಗಡೆಗೊಳಿಸಿದರು. ಈ ವೇಳೆ ಕ್ಷೇತ್ರದ ಆಡಳಿತ ಸಮಿತಿಯ ಪಧಾಧಿಕಾರಿಗಳು, […]

ನಿಯಮ ಉಲ್ಲಂಘಿಸಿ ಡ್ರೋನ್ ಬಳಸಿದರೆ ಕಾನೂನು ಕ್ರಮ : ಪೊಲೀಸ್ ಕಮಿಷನರ್

Monday, January 18th, 2021
Drone

ಮಂಗಳೂರು : ಮದುವೆ, ವಿಐಪಿ ಕಾರ್ಯಕ್ರಮ ಸೇರಿದಂತೆ ಯಾವುದೇ ಖಾಸಗಿ ಕಾರ್ಯಕ್ರಮಗಳಲ್ಲಿ ಡಿಜಿಸಿಎ ನಿಯಮ ಉಲ್ಲಂಘಿಸಿ ಡ್ರೋನ್ ಬಳಕೆಯಾಗುತ್ತಿದ್ದಲ್ಲಿ ಅವುಗಳನ್ನು ವಶಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ಪೊಲೀಸ್ ಕಮಿಷನರ್ ಎನ್. ಶಶಿಕುಮಾರ್ ಎಚ್ಚರಿಕೆ ನೀಡಿದ್ದಾರೆ. ನಗರದಲ್ಲಿ ಅವ್ಯಾಹತವಾಗಿ ಡ್ರೋನ್‌ಗಳನ್ನು ಬಳಕೆ ಮಾಡುತ್ತಿರುವುದು ಕಂಡುಬಂದಿದೆ.  ಡ್ರೋನ್ ಬಳಸಲು ಮುಂದಾಗುವವರು ಅಥವಾ ಡ್ರೋನ್ ಹೊಂದಿರುವವರು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು ಅವರು ಸುದ್ದಿಗೋಷ್ಠಿಯಲ್ಲಿಂದು ಹೇಳಿದರು.

ಇಬ್ಬರು ಯುವತಿಯರನ್ನಿಟ್ಟು ಕೊಂಡು ಪುರುಷರನ್ನು ಮನೆಗೆ ಆಹ್ವಾನಿಸಿ ದೋಚುತ್ತಿದ್ದ ತಂಡದ ಬಂಧನ

Monday, January 18th, 2021
Honeytrap

ಮಂಗಳೂರು : ಇಬ್ಬರು ಯುವತಿಯರನ್ನಿಟ್ಟು ಕೊಂಡು ಸಾಮಾಜಿಕ ಜಾಲತಾಣದ ಮೂಲಕ ಪರಿಚಯ ಮಾಡಿಕೊಂಡು ಸ್ನೇಹ ಬೆಳೆಸಿ ಮನೆಗೆ ಆಹ್ವಾನಿಸಿ ಬ್ಲಾಕ್‌ಮೇಲ್ ಮಾಡಿ ಹಣ ದೋಚುತ್ತಿದ್ದ ಹನಿಟ್ರಾಪ್ ಜಾಲವೊಂದನ್ನು ಸುರತ್ಕಲ್ ಪೊಲೀಸರು ಬೇಧಿಸಿದ್ದಾರೆ. ಜಾಲದ ಆರೋಪಿಗಳಾದ ರೇಶ್ಮಾ ಯಾನೆ ನೀಮಾ (32), ಇಕ್ಲಾಬ್ ಮುಹಮ್ಮದ್ ಯಾನೆ ಇಕ್ಬಾಲ್(35), ಝೀನ್ ಯಾನೆ ಝೀನತ್ ಮುಬೀನ್(28), ನಾಸಿಫ್ ಯಾನೆ ಅಬ್ದುಲ್ ಖಾದರ್ ನಾಝಿಫ್(34) ಎಂಬವರು ಬಂಧಿತರು. ಇನ್ನೂ ನಾಲ್ಕೈದು ಆರೋಪಿಗಳು ಈ ಜಾಲದಲ್ಲಿರುವ ಅನುಮಾನವಿದೆ. ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಮಂಗಳೂರು […]

ತುಳುನಾಡ ರಕ್ಷಣಾ ವೇದಿಕೆಗೆ ಮಂಗಳೂರು ನಗರ ನೂತನ ಸಮಿತಿ ರಚನೆ

Monday, January 18th, 2021
TRV commitee

ಮಂಗಳೂರು  : ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ನಗರದ ನೂತನ ಸಮಿತಿ ಯ ಪದಾಧಿಕಾರಿಗಳ ಆಯ್ಕೆ ಯ ಚುನಾವಣಾ ಪ್ರಕ್ರಿಯೆ ದಿನಾಂಕ 17-01-2021 ರಂದು ಅದಿತ್ಯವಾರ ಬೆಳಗ್ಗೆ 10:30 ಗಂಟೆಗೆ ಸರಿಯಾಗಿ ಸ್ಟೇಟ್ಸ್ ಬ್ಯಾಂಕ್ ಬಳಿ ಇರುವ ತುಳುನಾಡ ರಕ್ಷಣಾ ವೇದಿಕೆ ಯ ಕೇಂದ್ರ ಕಚೇರಿಯಲ್ಲಿ ನಡೆಯಿತು. 2021-23 ಸಾಲಿನ ನೂತನ ಪದಾಧಿಕಾರಿಗಳಾಗಿ ಅಧ್ಯಕ್ಷರಾಗಿ ರಮೇಶ್ ಪೂಜಾರಿ ಶೀರೂರು, ಉಪಾಧ್ಯಕ್ಷರಾಗಿ ಜೋಸೆಫ್ ಲೋಬೋ ಉರ್ವ , ಮುನೀರ್ ಮುಕ್ಕಚೇರಿ, ಪ್ರ.ಕಾರ್ಯದರ್ಶಿಯಾಗಿ ಫಾರೂಕ್ ಗೋಲ್ಡ್ ನ್, ಜೊತೆ ಕಾರ್ಯದರ್ಶಿಯಾಗಿ […]

ಸಚಿವರುಗಳಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಂಗಾರ ಧರ್ಮಸ್ಥಳ ಭೇಟಿ

Sunday, January 17th, 2021
S Angara

ಉಜಿರೆ : ಸಚಿವರುಗಳಾದ ಜೆ.ಸಿ. ಮಾಧುಸ್ವಾಮಿ ಮತ್ತು ಅಂಗಾರ ಶನಿವಾರ ಧರ್ಮಸ್ಥಳಕ್ಕೆ ಬಂದು ದೇವರ ದರ್ಶನ ಮಾಡಿ ಸೇವೆ ಸಲ್ಲಿಸಿದರು. ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಹೆಗ್ಗಡೆಯವರು ಉಭಯ ಸಚಿವರಿಗೂ ಶುಭ ಹಾರೈಸಿ ಗೌರವಿಸಿದರು. ಶಾಸಕ ಹರೀಶ್ ಪೂಂಜ ಮತ್ತು ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಉಪಸ್ಥಿತರಿದ್ದರು.